Tel: 7676775624 | Mail: info@yellowandred.in

Language: EN KAN

    Follow us :


ಮನಬಂದಂತೆ ನಡೆದುಕೊಳ್ಳುವ ಖಾಸಗಿ ಶಾಲೆಗಳು, ಇದ್ದಷ್ಟೇ ಸೈ ಎನ್ನುವ ಸರ್ಕಾರಿ ಶಿಕ್ಷಕರು, ಬೆಂಡಾಗುತ್ತಿರುವ ಬಿಇಓ

Posted date: 14 Jan, 2019

Powered by:     Yellow and Red

ಮನಬಂದಂತೆ ನಡೆದುಕೊಳ್ಳುವ ಖಾಸಗಿ ಶಾಲೆಗಳು, ಇದ್ದಷ್ಟೇ ಸೈ ಎನ್ನುವ ಸರ್ಕಾರಿ ಶಿಕ್ಷಕರು, ಬೆಂಡಾಗುತ್ತಿರುವ ಬಿಇಓ

ಅರಗಿಸಿಕೊಳ್ಳಲಾಗದ ವಾಸ್ತವ ಸಂಗತಿ

 ಸರ್ಕಾರಿ ಶಾಲೆಗಳಲ್ಲಿ ಮಕ್ಕಳು ಕಲಿಯಲೆಂಬ ಉದ್ದೇಶದಿಂದ ರಾಜ್ಯ ಸರ್ಕಾರವು ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸುತ್ತಾ ಬಂದರೂ ಹಲವು ಸರ್ಕಾರಿ ಶಿಕ್ಷಕರ ಉದಾಸೀನತೆಯಿಂದ, ಪೋಷಕರು ಹೊಂದಿರುವ ಖಾಸಗಿ ಶಾಲೆಗಳ ವ್ಯಾಮೋಹದಿಂದ, ಕಳಪೆ ಗುಣಮಟ್ಟದಿಂದ ನಿರ್ಮಾಣವಾಗಿರುವ ಕಟ್ಟಡಗಳ ಭಯದಿಂದ, ತಮ್ಮ ಮಕ್ಕಳು ಮತ್ತು ಮೊಮ್ಮಕ್ಕಳನ್ನು ಮಾತ್ರ ಖಾಸಗಿ ಶಾಲೆಗಳಿಗೆ ಕಳುಹಿಸಿ ಬೇರೆಯವರ ಮಕ್ಕಳನ್ನು ಮಾತ್ರ ಸರ್ಕಾರಿ ಶಾಲೆಗೆ ಸೇರಿಸಿ ಎಂಬ ವೇದಿಕೆಯಲ್ಲಿ ಭಾಷಣ ಬಿಗಿಯುವ ಬುದ್ದಿ(ಗೇಡಿ)ಜೀವಿಗಳ, ಸ್ವಾತಂತ್ರ್ಯ ದ ನೆಪವೊಡ್ಡಿ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸಿ ಬೇರೆಯವರ ಮಕ್ಕಳನ್ನು ಮಾತ್ರ ಸರ್ಕಾರಿ ಶಾಲೆಗೆ ಸೇರಿಸಿ ಎಂದು ಅಭಿಯಾನ ನಡೆಸುವ ಶಿಕ್ಷಕರು, ಸಿಬ್ಬಂದಿಗಳು ಮತ್ತು ಯಾವುದೇ ಪ್ರತಿಫಲಾಫೇಕ್ಷೆ ಬಯಸದೆ ಕನಿಷ್ಠ ಕೂಲಿಗೆ ದುಡಿಯುವ ಅನ್ನದಾತ, ಬಡ ಕೂಲಿ ಕಾರ್ಮಿಕರ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲದೆ ತಮ್ಮ ಸ್ವಾರ್ಥಕ್ಕಾಗಿ ಬಂದ್, ಮುಷ್ಕರ ಎಂದು ಬೊಬ್ಬಿರಿಯುವ ಸರ್ಕಾರಿ ಸವಲತ್ತುಗಳಿಗೆ ಹಾತೊರೆಯುವ ಎಲ್ಲಾ ಸರ್ಕಾರಿ ನೌಕರರ ಕೃಪಾಕಟಾಕ್ಷದಿಂದ ಖಾಸಗಿ ಶಾಲೆಗಳು ಕೊಬ್ಬಿದ ಉಗ್ರ ವ್ಯಾಘ್ರಗಳಾಗುತ್ತಿದ್ದರೆ ಸರ್ಕಾರಿ ಶಾಲೆಗಳು ಉಪವಾಸದಿಂದ ಬಳಲಿ ಇಂದೋ ನಾಳೆಯೋ ಪ್ರಾಣ ಬಿಡುವ ರೋಗಪೀಡಿತ ನಾಟಿ ಹಸುಗಳಂತಾಗಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿಯಾಗಿದೆ.


ಕೇಳಿದ ಮಾಹಿತಿ ನೀಡಿದ ಬಿಇಓ

ಚನ್ನಪಟ್ಟಣ ತಾಲ್ಲೂಕಿನಾದ್ಯಂತ ಇರುವ ಖಾಸಗಿ ಶಾಲೆಗಳು, ಸರ್ಕಾರಿ ಶಾಲೆಗಳು, ಕಟ್ಟಡಗಳ ಸ್ಥಿತಿಗತಿ, ಸಿಬ್ಬಂದಿಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಖಾಸಗಿ ಶಾಲೆಗಳವರ ಅಂಧ ದರ್ಬಾರ್, ಸರ್ಕಾರಿ ಶಿಕ್ಷಕರ ಜಾಣಪೆದ್ದುತನ, ಮಕ್ಕಳ ಬೆಣವಣಿಗೆ, ಶೇಕಡವಾರು ಫಲಿತಾಂಶ, ಖಾಸಗಿ ಮತ್ತು ಸರ್ಕಾರಿ ಶಾಲೆಗಳ ಪಠ್ಯಕ್ರಮ, ಇನ್ನಿತರೆ ಮಾಹಿತಿಗಳನ್ನು ಕಲೆಹಾಕಲು ಸಂಪೂರ್ಣ ಸಹಕಾರ ನೀಡಿ ಮಾಹಿತಿಯನ್ನು ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸೀತಾರಾಮು ರವರು ಅಭಿನಂದಾರ್ಹರು.


ಒಟ್ಟು ಶಾಲೆಗಳು

ಚನ್ನಪಟ್ಟಣ ತಾಲ್ಲೂಕಿನಾದ್ಯಂತ ನಗರವೂ ಸೇರಿದಂತೆ ೧೨೭ ಕಿ.ಪ್ರಾ.ಶಾಲೆ, ೯೮ ಹಿ.ಪ್ರಾ.ಶಾಲೆ, ೨೫ ಪ್ರೌಢಶಾಲೆಗಳು ಸೇರಿದಂತೆ ಒಟ್ಟು ೨೫೦ ಸರ್ಕಾರಿ ಶಾಲೆಗಳಿವೆ.

೦೪ ಹಿ.ಪ್ರಾ.ಶಾಲೆ, ೧೫ ಪ್ರೌಢಶಾಲೆಗಳು ಅನುದಾನಿತ.

೦೩ ಕಿ.ಪ್ರಾ.ಶಾಲೆ, ೩೩ ಹಿ.ಪ್ರಾ.ಶಾಲೆ ೨೪ ಪ್ರೌಢಶಾಲೆಗಳ ಅನುದಾನ ರಹಿತ ಶಾಲೆಗಳಾದರೆ ಸಮಾಜ ಕಲ್ಯಾಣ ಇಲಾಖೆಯ ೦೫ ಪ್ರೌಢಶಾಲೆಗಳು ಸೇರಿದಂತೆ ಒಟ್ಟು ೩೩೪ ಶಾಲೆಗಳಿವೆ.


ಒಟ್ಟು ವಿದ್ಯಾರ್ಥಿಗಳು ಮತ್ತು ಶಿಕ್ಷಕರು

ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗೆ ೬,೯೮೭ ಗಂಡುಮಕ್ಕಳು, ೭,೭೦೭ ಹೆಣ್ಣು ಮಕ್ಕಳು ಸರ್ಕಾರಿ ಶಾಲೆಗಳಲ್ಲಿ, ೧,೪೭೪ ಗಂಡು ಮಕ್ಕಳು ಮತ್ತು ೧,೩೯೮ ಹೆಣ್ಣು ಮಕ್ಕಳು ಅನುದಾನಿತ ಶಾಲೆಗಳಲ್ಲಿ, ೭,೦೦೯ ಗಂಡು ಮಕ್ಕಳು ಮತ್ತು ೫,೮೬೯ ಹೆಣ್ಣು ಮಕ್ಕಳು ಅನುದಾನ ರಹಿತ ಶಾಲೆಗಳಲ್ಲಿ, ಸಮಾಜ ಕಲ್ಯಾಣ ಇಲಾಖೆಯಲ್ಲಿ ಆರನೇ ತರಗತಿಯಿಂದ ಹತ್ತನೆಯ ತರಗತಿಯವರೆಗೆ ೪೨೧ ಗಂಡು ಮಕ್ಕಳು, ೪೩೫ ಹೆಣ್ಣು ಮಕ್ಕಳು ಸೇರಿದಂತೆ ೧೫,೮೯೧ ಗಂಡು ಮಕ್ಕಳು, ೧೫,೪೦೯ ಹೆಣ್ಣು ಮಕ್ಕಳು ಸೇರಿ ಒಟ್ಟು ೩೧,೩೦೦ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಒಟ್ಟಾರೆ ಖಾಸಗಿ ಶಾಲೆಗಳಿಗಿಂತಲೂ ಒಂದು ಕೈ ಸರ್ಕಾರಿ ಶಾಲೆಗಳಲ್ಲಿ ಮಕ್ಕಳು ಹೆಚ್ಚಿದ್ದಾರೆ.

ಎಲ್ಲಾ ಸರ್ಕಾರಿ ಶಾಲೆಗಳಿಗೆ ಒಟ್ಟು ೮೩೧ ಹುದ್ದೆಗಳು ಮಂಜೂರಾಗಿದ್ದು ಸದ್ಯ ೭೩೦ ಹುದ್ದೆಗಳು ಮಾತ್ರ ಭರ್ತಿಯಾಗಿದ್ದು ೧೬೧ ಹುದ್ದೆಗಳು ಖಾಲಿ ಇವೆ, ಈ ೧೬೧ ಶಿಕ್ಷಕರ ಕೊರತೆ ಮಕ್ಕಳ ಮೇಲೆ ಬೀರುತ್ತಿರುವುದು ಮುಖ್ಯಮಂತ್ರಿಗಳ ಸ್ವಕ್ಷೇತ್ರಕ್ಕೆ ಅವಮಾನವಲ್ಲವೇ ?. ಇನ್ನೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯಲ್ಲಿ ಮತ್ತು ಮಧ್ಯಾಹ್ನ ಬಿಸಿಯೂಟದ ಸಿಬ್ಬಂದಿಗಳ ಸಂಪೂರ್ಣ ಹುದ್ದೆಗಳು ಭರ್ತಿಯಾಗಿವೆ.


ಆರ್ ಟಿ ಇ (RTE) ಸ್ಪಷ್ಟನೆ

ತಾಲ್ಲೂಕಿನಾದ್ಯಂತ ಆರ್ಟಿಇಗೆ ೩೪ ಶಾಲೆಗಳು ಒಳಪಟ್ಟಿದ್ದು ಮೂಲಸೌಕರ್ಯ ಉಳ್ಳ ಶಾಲೆಗಳು ಕೇವಲ ೨೦ ಮಾತ್ರ, ಇನ್ನುಳಿದಂತೆ ೧೦ ಸಾಮಾನ್ಯ ಮತ್ತು ೦೪ ಕಳಪೆ ಗುಣಮಟ್ಟದ ಶಾಲೆಗಳಿವೆ.

ಆರ್ಟಿಇ ಕಾಯ್ದೆ ಸೆಕ್ಷನ್ ೧೨(೧) ಸಿ ಪ್ರಕಾರ ಎಲ್ಕೆಜಿ ಯಿಂದ ಎಂಟನೇ ತರಗತಿಯವರೆಗೆ ಶೇ ೨೫ ರಷ್ಟು ಮಕ್ಕಳಿಗೆ ಉಚಿತ ಪ್ರವೇಶ ನೀಡಿ ಪಠ್ಯ ಪುಸ್ತಕ, ಸಮವಸ್ತ್ರ, ಲೇಖನ ಸಾಮಾಗ್ರಿ, ಗ್ರಂಥಾಲಯ, ಮಾಹಿತಿ ತಂತ್ರಜ್ಞಾನ, ಸಹಪಠ್ಯ ಕ್ರೀಡೆಗಳಿಗೆ ಅವಕಾಶ ಕಲ್ಪಿಸಿಕೊಡಬೇಕೆಂದು ಉಲ್ಲೇಖವಿದೆ. ಸಂಬಂಧಿಸಿದ ಅಧಿಕಾರಿಗಳು ಸಹ ಕಟ್ಟುನಿಟ್ಟಾದ ಕ್ರಮ ತೆಗೆದುಕೊಳ್ಳಲು ಸೂಚಿಸಿದ್ದರೂ ಸಹ ಖಾಸಗಿ ಶಾಲೆಗಳಲ್ಲಿ ಸಂಪೂರ್ಣ ಫಲಿತಾಂಶ ಸಿಗದಿರುವುದು ಖಾಸಗಿ ಶಾಲೆಯವರ ಹಣದ ದಾಹವನ್ನು ತೋರಿಸುತ್ತದೆ.


ಸ್ಪ್ರಿಂಗ್ ಫೀಲ್ಡ್, ಹಾರಿಜ್ಹಾನ್, ದಿವ್ಯಚೇತನ ಇನ್ನಿತರ ಶಾಲೆಗಳ ಮೇಲೆ ದೂರುಗಳು

ಆರ್ಟಿಇ ಮಕ್ಕಳಿಗೆ ಹಲವಾರು ರೀತಿಯ ಶುಲ್ಕ ಕಟ್ಟಬೇಕು, ಇಲ್ಲವಾದರೆ ಬೇರೆ ಮಕ್ಕಳ ಜೊತೆಯಲ್ಲಿ ಬೆರೆಯಲು ಬಿಡುವುದಿಲ್ಲ, ಕಂಪ್ಯೂಟರ್ ಗೆ ಸೇರಿಸಿಕೊಳ್ಳುವುದಿಲ್ಲ, ಸ್ಪೋರ್ಟ್ಸ್ ಗೆ ಸೇರಿಸುವುದಿಲ್ಲ ಎಂದು ಪೋಷಕರಿಗೆ ಹೇಳಿ ಶುಲ್ಕ ಪಾವತಿಸುವಂತೆ ಪೀಡಿಸುವುದು, ಕಟ್ಟಿಸಿಕೊಳ್ಳುವ ಶುಲ್ಕ ಒಂದಾದರೆ ಕಡಿಮೆ ಶುಲ್ಕಕ್ಕೆ ರಶೀದಿ ಕೊಡುವುದು, ಹಾಗೂ ಜಿಎಸ್‌ಟಿ ಬಿಲ್ ಕೊಡದಿರುವುದು, ಸಮವಸ್ತ್ರ ಸೇರಿದಂತೆ ಎಲ್ಲಾ ಸಾಮಾಗ್ರಿಗಳನ್ನು ತಡವಾಗಿ ನೀಡುವುದು, ವಾಹನಗಳಲ್ಲಿ ಅಗತ್ಯಕ್ಕಿಂತ ಹೆಚ್ಚು ಮಕ್ಕಳನ್ನು ತುಂಬುವುದು, ಆಯಾ ಮತ್ತು ಕ್ಲೀನರ್ ಗಳು ಮಕ್ಕಳನ್ನು ಹೆದರಿಸುವುದು ಮತ್ತು ಹೊಡೆಯುವುದು, ಹೆಣ್ಣು ಮಕ್ಕಳ ಜೊತೆ ಅಸಭ್ಯವಾಗಿ ವರ್ತಿಸುವುದು ಮತ್ತು ಸಿಸಿ ಟಿವಿಗಳು ಸರಿಯಾಗಿ ಕಾರ್ಯನಿರ್ವಹಿಸದಂತೆ ತಡೆಯುವುದು ಸ್ಪ್ರಿಂಗ್ ಫೀಲ್ಡ್ ಮತ್ತು ಆಕ್ಸ್‌ಫರ್ಡ್ ಶಾಲೆಗಳು ಒಂದು ಕಡೆ ಅನುಮತಿ ಪಡೆದು ಮತ್ತೊಂದು ಕಡೆ ಶಾಲೆ ನಡೆಸುತ್ತಿರುವುದು ಸೇರಿದಂತೆ ಹಲವಾರು ರೀತಿಯ ದೂರುಗಳನ್ನು ಆಯಾಯ ಶಾಲೆಯಲ್ಲಿನ ಮಕ್ಕಳ ಪೋಷಕರಾದ ವೆಂಕಟೇಶ, ಪಿ ಜಯಕುಮಾರ್, ಎಎಸ್ ಶಿವಕುಮಾರ್, ಹೆಚ್ ಕೆ ಶಿವಪ್ಪ, ಕೆ ವೆಂಕಟೇಶ, ಆರ್ ಸುರೇಶ್, ಗುಲಾಬ್, ರಾಜುಬೊಮ್ಮಯ್ಯ, ಕಲ್ಪನ, ಎಸ್ ಪಿ ತಿಮ್ಮೇಗೌಡ ಎಂಬುವವರು ಶಿಕ್ಷಣಾಧಿಕಾರಿಗಳಿಗೆ ಲಿಖಿತ ದೂರು ನೀಡಿದ್ದಾರೆ.


ಈ ದೂರುಗಳ ಬಗ್ಗೆ ಹಾರಿಜ್ಹಾನ್ ಮತ್ತು ದಿವ್ಯಚೇತನ ಶಾಲೆಯ ವ್ಯವಸ್ಥಾಪಕರು ಮತ್ತು ಮುಖ್ಯಶಿಕ್ಷಕರು ಸ್ಪಷ್ಟನೆ ನೀಡಿ ದೂರುದಾರರನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಮ್ಮುಖದಲ್ಲಿ ಭೇಟಿ ಮಾಡಿ ಸಮಸ್ಯೆಗಳನ್ನು ಬಗೆಹರಿಸಿಕೊಂಡಿರುವುದಾಗಿ ಇನ್ನು ಮುಂದೆ ಹೀಗಾಗದಂತೆ ಎಚ್ಚರವಹಿಸುವುದಾಗಿ ತಿಳಿಸಿದರೆ, ಸ್ಪ್ರಿಂಗ್ ಫೀಲ್ಡ್ ಶಾಲೆಯ ಮುಖ್ಯ ಶಿಕ್ಷಕಿ


ಬಿಇಓ ಸ್ಪಂದನೆ ಶಾಲೆಗಳ ಸಮರ್ಥನೆ

ಪೋಷಕರ ಲಿಖಿತ ದೂರುಗಳಿಗೆ ಸ್ಪಂದಿಸಿದ ಬಿಇಓ ರವರು ಆಯಾಯ ಶಾಲೆಗಳಿಗೆ ನೋಟೀಸ್ ಜಾರಿಮಾಡಿ ವಿವರಣೆ ಕೇಳಿದ್ದು, ಇನ್ನು ಮುಂದೆ ಹೀಗಾಗದಂತೆ ಎಚ್ಚರವಹಿಸಲು ಸೂಚಿಸಲಾಗಿದೆ, ಇದೇ ರೀತಿಯ ದೂರುಗಳು ಬಂದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದೇನೆ ಎಂದರು.

ಇದೇ ದೂರುಗಳನ್ನು ಕೆಲ ಶಾಲೆಯ ಮುಖ್ಯಸ್ಥರು ಹಾಗೂ ಮುಖ್ಯ ಶಿಕ್ಷಕರನ್ನು ಕೇಳಲಾಗಿ ಬಿಇಓ ರವರಿಂದ ನೋಟೀಸ್ ಬಂದಿದ್ದು ಪೋಷಕರನ್ನು ಕರೆಸಿ ಸರಿಮಾಡಿಕೊಂಡಿದ್ದೇವೆ ಎಂದರು. ಸ್ಪ್ರಿಂಗ್ ಫೀಲ್ಡ್ ಶಾಲೆಯ ಮುಖ್ಯ ಶಿಕ್ಷಕಿ ಮೊದಲು ಉತ್ತರ ಕೊಡುವುದಾಗಿ ಹೇಳಿ ಸ್ಪಂದಿಸಿದರಾದರೂ ನಂತರ ದೂರವಾಣಿ ಕರೆಯನ್ನೂ ಸ್ವೀಕರಿಸಲಿಲ್ಲ.


ಸರ್ಕಾರಿ ಶಾಲೆಗಳ ಸ್ಥಿತಿಗತಿ

ಬಹುತೇಕ ಸರ್ಕಾರಿ ಶಾಲೆಗಳಲ್ಲಿ ಬೇಕುಗಳ ಸುರಿಮಳೆಯೇ ಹೆಚ್ಚಾಗಿದೆ, ಹಲವಾರು ಶಾಲೆಗಳು ಸೋರುತ್ತಿವೆ, ಕೆಲವು ಕಟ್ಟಡಗಳು ಯಾವಾಗ ಬಿದ್ದು ಭವಿಷ್ಯದ ಮಕ್ಕಳನ್ನು ಬಲಿತೆಗೆದುಕೊಳ್ಳುತ್ತವೆಯೋ ಗೊತ್ತಿಲ್ಲ ? ಇನ್ನೂ ಕೆಲವು ಕಟ್ಟಡಗಳಿಗೆ ಕಾಂಪೌಂಡ್ ಇಲ್ಲ, ಶಿಕ್ಷಕರ ಕೊರತೆ, ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತವೆ, ಉದಾಹರಣೆಗೆ ನಗರದ ಎರಡು ಪೆಟ್ಟಾ ಶಾಲೆಗಳಲ್ಲಿ ಒಂದು ಶಾಲೆಗೆ ಯಾವುದೇ ದಾಖಲೆ ಇಲ್ಲ, ಮತ್ತೊಂದು ಶಾಲೆಗೆ ಎಕರೆಗಟ್ಟಲೆ ಜಾಗವಿದ್ದು ಅದಕ್ಕೂ ಮೂಲ ದಾಖಲೆ ಇಲ್ಲ, ಕಾಂಪೌಂಡ್ ಗೆ ನೂರಾರು ತೂತುಗಳು ಕೆಲವು ಕಡೆ ಬಿದ್ದುಹೋಗಿದೆ, ಕಸದ ರಾಶಿಯ ಜೊತೆಗೆ ಆಟೋರಿಕ್ಷಾಗಳು ಮತ್ತು ಲಾರಿಗಳ ಆಶ್ರಯ ತಾಣವಾಗಿದೆ, ಕೆಲವು ಶಾಲೆಗಳಿಗೆ ಹೆಚ್ಚುವರಿ ಕೊಠಡಿಗಳು ಬೇಕಾಗಿವೆ, ಹಲವಾರು ಶಾಲೆಗಳಲ್ಲಿ ಆಟದ ಮೈದಾನವೂ ಇಲ್ಲಾ, ರಾಜ್ಯ ಹೆದ್ದಾರಿಯಲ್ಲಿ ಇರುವಂತಹ ಅಂಬೇಡ್ಕರ್ ನಗರದಂತ ಅನೇಕ ಶಾಲೆಗಳಿಗೆ ಕಾಂಪೌಂಡ್ ಇಲ್ಲದಿರುವುದು ಆ ಮಕ್ಕಳ ದೌರ್ಭಾಗ್ಯವೇ ಸರಿ !?.


ತಾಲ್ಲೂಕಿನಲ್ಲಿ ೮೩ ಕಟ್ಟಡಗಳನ್ನು ನೆಲಸಮಗೊಳಿಸಿ ಹೊಸದಾಗಿ ನಿರ್ಮಾಣ ಮಾಡಬೇಕು, ೧೭೫ ಕೊಠಡಿಗಳು ಹೆಚ್ಚುವರಿಯಾಗಿ ಬೇಕು, ೨೪೦ ಕಟ್ಟಡಗಳ ದುರಸ್ತಿ, ೭೭ ಶಾಲೆಗಳಿಗೆ ಕಾಂಪೌಂಡ್, ೫೬ ಶೌಚಾಲಯಗಳು, ಹೆಚ್ಚುವರಿಯಾಗಿ ೮೯ ಶೌಚಾಲಯಗಳು ಮತ್ತು ೩೨ ನೀರಿನ ಸಂಪುಗಳ ಅವಶ್ಯಕತೆ ಇದೆ.


ಖಾಸಗಿ ಶಾಲೆಗಳ ಶುಲ್ಕವಿಧಾನ (Fees Structure) ಎಂಬ ಗುಮ್ಮ

ಸುಪ್ರೀಂ ಕೋರ್ಟ್ ಆದೇಶದನ್ವಯ ಆಯಾಯ ಖಾಸಗಿ ಶಾಲೆಗಳಲ್ಲಿ ಎಲ್ಲಾ ತರಗತಿಯ ಮಕ್ಕಳಿಗೆ ಕಟ್ಟಿಸಿಕೊಳ್ಳುವ ಶುಲ್ಕದ ವಿವರಗಳನ್ನು ಶಾಲೆಯ ಮುಂಭಾಗ ಪೋಷಕರಿಗೆ ಗೊತ್ತಾಗುವಂತೆ ಅಳವಡಿಸಿಕೊಳ್ಳಲು ಕಟ್ಟುನಿಟ್ಟಿನ ಆದೇಶ ನೀಡಿದ ಹಿನ್ನೆಲೆಯಲ್ಲಿ ಶಿಕ್ಷಣಾಧಿಕಾರಿಗಳು ಶಾಲೆಗಳಿಗೆ ಶುಲ್ಕದ ವಿವರಗಳ ಪೋಟೋ ಕಳುಹಿಸಲು ಸೂಚಿಸಿದ್ದರೂ ಸಹ ಕೆಲವು ಶಾಲೆಗಳು ಇನ್ನೂ ತಲುಪಿಸಿಲ್ಲ, ಕೆಲವು ಶಾಲೆಗಳು ಕಾಟಚಾರಕ್ಕೆಂಬಂತೆ ಪೋಟೋ ತೆಗೆದು ಕಳುಹಿಸಿ ನಂತರ ಕಾಣದ ಜಾಗದಲ್ಲಿ ಇಟ್ಟಿರುವುದು ಖುದ್ದು ಭೇಟಿ ನೀಡಿದಾಗ ತಿಳಿದುಬಂತು, ಇನ್ನೂ ಕೆಲ ಶಾಲೆಗಳಲ್ಲಿ ಪೋಟೋಗಾಗಿಯೇ ಕಪ್ಪು ಹಲಗೆಯ ಮೇಲೆ, ಸಣ್ಣ ಕಾಗದಗಳಲ್ಲಿ ಬರೆದು ನೋಟೀಸ್ ಬೋಡ್೯ಗಳಲ್ಲಿ ಅಂಟಿಸಿ ಪೋಟೋ ತೆಗೆದು ಕಳುಹಿಸಿ ಪೋಷಕರು ಮತ್ತು ಸರ್ಕಾರಕ್ಕೆ ಚಳ್ಳೆಹಣ್ಣು ತಿನ್ನಿಸುತ್ತಿರುವುದಲ್ಲದೆ ಸುಪ್ರೀಂ ಕೋರ್ಟ್ ನ ಆದೇಶಕ್ಕೂ ಮನ್ನಣೆ ನೀಡದಿರುವುದು ಕಂಡುಬರುತ್ತಿದೆ.


ಹಾಸ್ಟೆಲ್ ಗಳ ಅರ್ಜಿಗಳನ್ನೇ ವಿತರಿಸದ ಖಾಸಗಿ ಶಾಲೆಗಳು

ಪ್ರತಿವರ್ಷವೂ ಐದನೇ ತರಗತಿ ಓದುತ್ತಿರುವ ಮಕ್ಕಳಿಗೆ *ನವೋದಯ, ಮೊರಾರ್ಜಿ, ಅಂಬೇಡ್ಕರ್, ರಾಣಿ ಚೆನ್ನಮ್ಮ, ಆದರ್ಶ ಹಾಗೂ ಇನ್ನಿತರ ವಸತಿಯುತ ಶಾಲೆಗಳಿಗೆ ಸಮಾಜ ಕಲ್ಯಾಣ ಇಲಾಖೆಯು ಅರ್ಜಿಗಳನ್ನು ವಿತರಿಸುತ್ತದೆಯಾದರೂ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಮತ್ತು ಶಿಕ್ಷಣಾಧಿಕಾರಿಗಳ ಕಛೇರಿಯವರು ಕಟ್ಟುನಿಟ್ಟಾಗಿ ಖಾಸಗಿ ಶಾಲೆಗಳಿಗೆ ಅರ್ಜಿಗಳನ್ನು ವಿತರಿಸದಿರುವುದರಿಂದ ಅಲ್ಲಿನ ವಿದ್ಯಾರ್ಥಿಗಳು ಹಾಸ್ಟೆಲ್ ವಂಚಿತರಾಗುತ್ತಿದ್ದಾರೆ, ಈ ವಿಷಯ ಎಲ್ಲಾ ಪೋಷಕರಿಗೂ ತಿಳಿದಿರದ ಕಾರಣ ಖಾಸಗಿ ಶಾಲೆಯವರಿಗೆ ವರದಾನವಾಗಿದೆ, ಈಗಾಗಲೇ ಅರ್ಜಿಗಳನ್ನು ಕರೆದಿದ್ದು ಈಗಲಾದರೂ ಸಂಬಂಧಿಸಿದ ಅಧಿಕಾರಿಗಳು ಸರ್ಕಾರಿ ಮತ್ತು ಖಾಸಗಿ ಶಾಲೆಯ ಮಕ್ಕಳಿಗೆ ಅರ್ಜಿ ವಿತರಿಸಿ ಮಕ್ಕಳನ್ನು ತರಬೇತುಗೊಳಿಸಲು ಮುಂದಾಗಲಿ.


ಕರ್ನಾಟಕ ಪಬ್ಲಿಕ್ ಶಾಲೆ ಎಂಬ ಉತ್ತಮ ಯೋಜನೆ

ರಾಜ್ಯ ಸರ್ಕಾರವು ಈ ವರ್ಷದಿಂದ ಜಾರಿಗೆ ಬರುವಂತೆ ಕರ್ನಾಟಕ ಪಬ್ಲಿಕ್ ಶಾಲೆ ಎಂದು ನಾಮಕರಣ ಮಾಡಿ, ಆ ಶಾಲೆಯಲ್ಲಿ ಒಂದರಿಂದ ಹನ್ನೆರಡನೇ ತರಗತಿಯವರೆಗೆ ಆ ಮಗು ಓದಲು ಅನುವುಮಾಡಿಕೊಡುತ್ತದೆ. ಈ ಶಾಲೆ ವಸತಿಯುತವಾಗಿದ್ದು ಒಂದನೇ ತರಗತಿಗೆ ದಾಖಲಾದ ಮಗು ಹನ್ನೆರಡನೇ(2nd PUC) ತರಗತಿ ಮುಗಿಸಿಕೊಂಡು ಬರಬೇಕಾಗುತ್ತದೆ, ಇಲ್ಲಿ ಪ್ರಾಥಮಿಕ, ಹಿರಿಯ ಪ್ರಾಥಮಿಕ, ಪ್ರೌಢ ಮತ್ತು ಪದವಿಪೂರ್ವ ಕಾಲೇಜುಗಳಿಗೆ ಒಬ್ಬೊಬ್ಬ ಮುಖ್ಯಶಿಕ್ಷಕರಿರುವುದಿಲ್ಲ, ಒಂದರಿಂದ ಹನ್ನೆರಡನೆಯ ತರಗತಿಯವರೆಗೂ ಒಬ್ಬರೇ ಪ್ರಾಂಶುಪಾಲರು ಇರುತ್ತಾರೆ, ಸದ್ಯ ತಾಲ್ಲೂಕಿನ ಅರಳಾಳುಸಂದ್ರ ಗ್ರಾಮದ ಶಾಲೆಯು ಈ ವರ್ಷ ಆಯ್ಕೆಯಾಗಿದ್ದು ಮಕ್ಕಳು ಒಂದೇ ಕಡೆ ವಿದ್ಯಾಭ್ಯಾಸ ಮಾಡಲು ಈ ಯೋಜನೆ ಅನುಕೂಲವಾಗಿದೆ.


ಸರ್ಕಾರಿ ಮತ್ತು ಖಾಸಗಿ ಶಾಲೆಗಳ ನಡುವೆ ಅಂತರ

ಸರ್ವಶಿಕ್ಷಣ ಅಭಿಯಾನ ಜಾರಿಗೆ ಬರುವ ಮೊದಲು ಪ್ರಾಥಮಿಕ ಶಾಲೆಗೆ ಒಂದು ಕಿಮೀ, ಹಿರಿಯ ಪ್ರಾಥಮಿಕ ಶಾಲೆಗೆ ಮೂರು ಕಿಮೀ ಹಾಗೂ ಪ್ರೌಢಶಾಲೆಗೆ ಐದು ಕಿಮೀ ಅಂತರದಲ್ಲಿ ಖಾಸಗಿ ಶಾಲೆಗಳಿಗೆ ಅನುಮತಿ ನೀಡಬೇಕೆಂಬ ನಿಯಮ ಇತ್ತು, ೨೧(೧) ಸಿ ಯ ನಂತರ ಆ ಅಳತೆಯನ್ನು ಕಡಿಮೆ ಮಾಡಿದ್ದಾರೆ ಎಂದು ಅಧಿಕಾರಿಗಳು ಹೇಳುತ್ತಾರಾದರೂ ಸ್ಪಷ್ಟನೆ ಸಿಕ್ಕಿಲ್ಲ, ಕಿಮೀ ಇರಲಿ ದಾಪುಗಾಲು ದೂರದಲ್ಲಿ ಖಾಸಗಿ ಶಾಲೆ ತೆರೆಯಲು ಅನುಮತಿ ನೀಡಿರುವುದು ಎಷ್ಟು ಸರಿ ? ಸರ್ವಶಿಕ್ಷಣ ಅಭಿಯಾನ ಬರುವ ಮುಂಚೆಯೂ ಅನುಮತಿ ನೀಡಿರುವುದು ಗೋಚರಿಸುತ್ತಿದೆ, ಕೋಟೆಯೊಂದರಲ್ಲಿಯೇ ಸರ್ಕಾರಿ ಮಾದರಿ ಪ್ರಾಥಮಿಕ ಪಾಠಶಾಲೆ ಪಕ್ಕದಲ್ಲಿ ಮಿಲೇನಿಯಂ, ಎದುರುಗಡೆ ಸನ್ ರೈಸ್ ಎಂಬ ಖಾಸಗಿ ಶಾಲೆಗಳು ಇವೆ, ನಗರದಲ್ಲಿ ಎಲ್ಲಾ ಕಡೆಯೂ ಇದೇ ಸ್ಥಿತಿ ಇದ್ದು ಸರ್ಕಾರಿ ಶಾಲೆಗಳ ಇಂದಿನ ಸ್ಥಿತಿಗೆ ಕಾನೂನು ರೂಪಿಸುವವರೇ ನೇರ ಹೊಣೆಗಾರರಾಗುತ್ತಾರೆ.


ಕ್ಷೇತ್ರ ಶಿಕ್ಷಣಾಧಿಕಾರಿ ಸೀತಾರಾಮು ಕರೆ

ಸರ್ಕಾರಿ ಶಾಲೆಗಳಲ್ಲಿ ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗೆ ಸಂಪೂರ್ಣ ಉಚಿತವಾಗಿ ವಿದ್ಯಾಭ್ಯಾಸ ನೀಡುವುದರ ಜೊತೆಗೆ ಪಠ್ಯ ಪುಸ್ತಕ, ಮಧ್ಯಾಹ್ನ ದ ಬಿಸಿಯೂಟ, ಪೌಷ್ಟಿಕ ಆಹಾರ, ಕ್ಷೀರ ಭಾಗ್ಯ, ಸೈಕಲ್, ಆರೋಗ್ಯ ತಪಾಸಣೆ, ಉತ್ತಮ ಶಿಕ್ಷಕರು, ಗುಣಮಟ್ಟದ ವಿದ್ಯೆಯಿಂದ ಶೇಕಡಾವಾರು ಫಲಿತಾಂಶ, ಹಲವಾರು ಖಾಸಗಿ ಸಂಸ್ಥೆಗಳು ನೀಡುವ ತಂತ್ರಜ್ಞಾನ ಸಲಕರಣೆಗಳು ಹಾಗೂ ಉತ್ತಮ ಶೌಚಾಲಯಗಳ ನಿರ್ಮಾಣ, ಪ್ರತಿಭಾ ಕಾರಂಜಿ, ಭಯರಹಿತ ಆಕರ್ಷಕ ಕಲಿಕೆ, ರಸಪ್ರಶ್ನೆ, ಪ್ರಬಂಧ ಹೀಗೆ ಇನ್ನೂ ಹತ್ತು ಹಲವು ಉಚಿತವಾಗಿ ದೊರಕುತ್ತವೆ, ಇಲ್ಲಿ ಮಕ್ಕಳು ಕೇವಲ ಪಠ್ಯವನ್ನಷ್ಟೇ ಅಲ್ಲದೆ ಉತ್ತಮ ಸಂಸ್ಕಾರ, ದೇಶಭಕ್ತಿಯನ್ನು ಇಲ್ಲಿ ಕಲಿಯಲು ಸಾಧ್ಯವಿದೆ, ಇಂಗ್ಲಿಷ್ ಕಲಿಕೆಯೂ ಸಹ ಇನ್ನು ಮುಂದೆ ಪ್ರಾಥಮಿಕ ಹಂತದಲ್ಲಿಯೇ ಸಿಗಲಿದೆ, ಕೇವಲ ಪ್ರತಿಷ್ಠೆಗೋಸ್ಕರ ಖಾಸಗಿ ಶಾಲೆಗೆ ಸೇರಿಸದೆ ಉತ್ತಮ ಸತ್ಪ್ರಜೆಯಾಗಲು ಸರ್ಕಾರಿ ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸಿ.

.

ಸರ್ಕಾರಿ ಸೇವೆ ದೊರೆತಿರುವುದು ನಮ್ಮೆಲ್ಲರ ಪುಣ್ಯ, ಅದರಲ್ಲೂ ಶಿಕ್ಷಕ ವೃತ್ತಿ ಒಂದು ಗೌರವಾನ್ವಿತ ಹುದ್ದೆ, ಇದನ್ನು ಮನಗಂಡು ಶಿಕ್ಷಕರು ಮಕ್ಕಳಿಗೆ ಉತ್ತಮವಾಗಿ ಬೋಧಿಸುವ ಮೂಲಕ ಅವರನ್ನು ಸಮಾಜದ ಮುನ್ನೆಲೆಗೆ ತರಬೇಕು, ತಮ್ಮ ಮಕ್ಕಳನ್ನು ಸಹ ಸರ್ಕಾರಿ ಶಾಲೆಗೆ ಸೇರಿಸುವ ಮೂಲಕ ಮಾದರಿಯಾಗಬೇಕು ಎಂದು ಶಿಕ್ಷಕರಿಗೆ ಕರೆನೀಡಿದರು.


ಶಿಕ್ಷಕರು ಮಾದರಿಯಾದರೇ ಖಾಸಗಿ ಶಾಲೆಗಳು ಮುಂದೆ - - - ??


ಬದಲಾವಣೆಯನ್ನು ಬೇರೆಯವರಲ್ಲಿ ಕಾಣುವುದಲ್ಲ, ಮೊದಲು ನಾನು ಬದಲಾಗಬೇಕು ಎಂದು ಯೋಚಿಸುವವನೇ ನಿಜವಾದ ಶಿಕ್ಷಕ, ಶೇಕಡಾ ೯೯ ರಷ್ಟು ಸರ್ಕಾರಿ ಶಾಲೆಯ ಶಿಕ್ಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸದೆ ಖಾಸಗಿ ಶಾಲೆಗಳಿಗೆ ಸೇರಿಸುವ ಗುಟ್ಟೇನು !?, ಅವರು ದಡ್ಡರೇ ? ಅವರಿಗೆ ಪಾಠ ಮಾಡಲು ಬರುವುದಿಲ್ಲವೇ ? ಅವರ ಜ್ಞಾನದ ಬಗ್ಗೆ ಅವರಿಗೆ ನಂಬಿಕೆ ಇಲ್ಲವೇ ? ಅವರು ತಾವು ಕೆಲಸ ನಿರ್ವಹಿಸುವ ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸಿಕೊಂಡರೆ ಅಥವಾ ಹತ್ತಿರದ ಸರ್ಕಾರಿ ಶಾಲೆಗೆ ಯಾಕೆ ಕಳುಹಿಸುವುದಿಲ್ಲ, ಶಿಕ್ಷಕರ ಮಕ್ಕಳು ಸರ್ಕಾರಿ ಶಾಲೆಗೆ ಹೋದರೆ ಮಿಕ್ಕ ಪೋಷಕರು ಸಹ ಅವರ ದಾರಿ ತುಳಿಯುವದರಲ್ಲಿ ಅನುಮಾನವೇ ಇಲ್ಲ, ಶಿಕ್ಷಕರಷ್ಟೇ ಅಲ್ಲದೆ ಶಿಕ್ಷಣ ಇಲಾಖೆಯ ಸಿಬ್ಬಂದಿ ಮೊದಲ್ಗೊಂಡು ಎಲ್ಲಾ ಸರ್ಕಾರಿ ನೌಕರರು ಸಹ ಅಭಿವ್ಯಕ್ತಿ ಸ್ವತಂತ್ರ, ನನ್ನಿಷ್ಟ ಎಂಬಿತ್ಯಾದಿ ಅಹಂ ಬಿಟ್ಟು ಸರ್ಕಾರಿ ಶಾಲೆಗೆ ಸೇರಿಸಿದರೆ ಇಡೀ ದೇಶದಲ್ಲೇ ಅವರ ಗೌರವ ಹೆಚ್ಚಾಗುವುದಲ್ಲದೇ ಮಾದರಿಯಾಗಿ ನಿಲ್ಲಬಹುದು.


ಇವರಿಗೆ ಸರ್ಕಾರಿ ಸವಲತ್ತುಗಳೆಲ್ಲವೂ ಬೇಕು, ಒಂದಿಲ್ಲಾ ಎಂದರು ಅದಕ್ಕೆ ಹೋರಾಟ ನಿಶ್ಚಿತ, ಇದೇ ಹೋರಾಟ ಯಾಕೆ ಸರ್ಕಾರಿ ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸಲು ಮಾಡುವುದಿಲ್ಲ, ಸರ್ಕಾರಿ ಶಾಲೆಯಲ್ಲಿ ಮಕ್ಕಳಿದ್ದರಲ್ಲವೇ ಅವರಿಗೂ ಸಂಬಳ, ತಮಗೆ ಬರಬೇಕಾದ್ದಕ್ಕಷ್ಟೇ ಹೋರಾಟ ಮಾಡುವ ಇವರು ಇಲಾಖೆಯ ಕುಂದು ಕೊರತೆಗಳ ಬಗ್ಗೆಯೂ ಹೋರಾಟ ಮಾಡಲಿ, ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸಿ ಊರತುಂಬಾ ನಿಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ ಎಂದು ಅಭಿಯಾನ ಮಾಡಲು ತಮಗೆ ನೈತಿಕ ಹಕ್ಕಿದೆಯೇ ಈ ಪ್ರಶ್ನೆಯನ್ನು ನಿಮಗೆ ನೀವೆ‌ ಕೇಳಿಕೊಂಡರೆ ಬಹುಶಃ ತಮಗೆ ಉತ್ತರ ದೊರೆಯುತ್ತದೆ, ಸರ್ಕಾರದ ಮೆಡಿಕಲ್, ಇಂಜಿನಿಯರ್ ಇನ್ನಿತರೆ ದೊಡ್ಡ ದೊಡ್ಡ ಸೀಟುಗಳು ನಿಮಗೆ ಬೇಕು, ನಂತರ ಸರ್ಕಾರಿ ಉದ್ಯೋಗವೂ ಬೇಕು ಆದರೆ ಸರ್ಕಾರಿ ಶಾಲೆಗಳು ಮಾತ್ರ ಬೇಡವೆಂದರೆ ಹೇಗೆ ? ಇದು ಆತ್ಮವಿಮರ್ಶೆ ಮಾಡಿಕೊಳ್ಳಲು ಸಕಾಲ.



ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ
ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ

ರಾಮನಗರ/ಚನ್ನಪಟ್ಟಣ: (ವಿಮರ್ಶಾತ್ಮಕ ಲೇಖನ)

ನಗರದ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಪ್ರವರ ಹವ್ಯಾಸಿ ನಾಟಕ ತಂಡವು ನಡೆಸಿಕೊಟ್ಟ ಪೂರ್ಣ ಚ

ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.
ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.

ಚನ್ನಪಟ್ಟಣ :  ಚನ್ನಪಟ್ಟಣದಲ್ಲಿ ಮಹಿಳೆಯರೇ ಪೌರಾಣಿಕ ನಾಟಕವನ್ನು ಅಭ್ಯಾಸ ಮಾಡಿ ಬಯಲು ಮಂದಿರದಲ್ಲಿ ಪ್ರಸ್ತುತ ಪಡಿಸುತ್ತಿರುವುದು ವಿಶೇಷವಾಗಿದೆ. ಪೌರಾಣಿಕ

ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು
ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು

ಚನ್ನಪಟ್ಟಣ: ನಗರದ ಶ್ರೀ ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ಇದೇ ಮಾರ್ಚ್ ತಿಂಗಳ ಹತ್ತನೇ ತಾರಿಖಿನ ಭಾನುವಾರ ಮಧ್ಯಾಹ್ನ ತಾಲೂಕಿನಲ್ಲಿ ಇದೇ ಪ್ರಪ್ರಥ

ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್
ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್

ರಾಮನಗರ: ಶೂದ್ರರನ್ನು ವರ್ಣ ನೀತಿಯಿಂದಲೆ ವೈದಿಕರು ಆಳಿದರು. ಇಂದಿಗೂ ಸಹ ವೈದಿಕರು ರಾಮನನ್ನು ನಮ್ಮ ಮೇಲೆ ಹೇರುವ ಮೂಲಕ ಮತ್ತೆ ಪೂರ್ವಕಾಲಕ್ಕೆ ಕರೆದು

ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ

ರಾಮನಗರ, ಫೆ. 16  ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಫೆ.16ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆನಡೆದ ಉಪ ಚುನ

ವೈಜ್ಞಾನಿಕ ಮನೋವೃತ್ತಿ:ಸಾಂವಿಧಾನಿಕ ಕರ್ತವ್ಯ ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ

ರಾಮನಗರ; ಮಾನವ ಹಕ್ಕುಗಳನ್ನು ಯಾರೂ ಕೊಡುವುದಿಲ್ಲ, ವ್ಯಕ್ತಿಗಳಿಗೆ ಅವುಗಳಿಗೆ ಜನ್ಮತಃ ದಕ್ಕಿರುತ್ತವೆ. ಅವುಗಳನ್ನು ಯಾರೂ ಕೊಡುವುದಿಲ್ಲವಾದ್ದರಿ

ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ
ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ

ರಾಮನಗರ: ರಾಜ್ಯ ವಿಧಾನ ಸಭೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದ್ದು,  ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಇಂದು ಮಸ್ಟರಿಂಗ್ ಕಾರ್ಯ ಮುಗಿದು, ಮತಗಟ್ಟೆ ಸ

ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು
ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು

ರಾಮನಗರ: ಚನ್ನಪಟ್ಟಣ: ವೈದ್ಯ ಸಿಬ್ಬಂದಿಯಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ತಿಂಗಳು 20 ದಿನಗಳ ಗಂಡು ಶಿಶುವೊಂದು ಪ್ರಾಣ ಕಳೆದುಕೊ

ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್
ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್

ರಾಮನಗರ, ಫೆ. 12:   ನಾವು ರಾಮನಗರ ಜಿಲ್ಲೆಯವರಲ್ಲಾ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಗ್ರೇಟ್ ಬೆಂಗಳೂರು ಜಿಲ್ಲೆ ಮಾಡುವ ಬಗ್ಗೆ ಲೋಕಸಭಾ ಚ

ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್
ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್


ರಾಮನಗರ : ಫೆ 10 ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಕೇವಲ ಹಿಂದುತ್ವವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಭಾರತದ

Top Stories »  


Top ↑