Tel: 7676775624 | Mail: info@yellowandred.in

Language: EN KAN

    Follow us :


ಅಕ್ಷರ ದಾಸೋಹ ಇನ್ನೂ ಬದಲಾಗಬೇಕಾಗಿದೆ, ಆರೋಗ್ಯ ಬಲವರ್ಧನೆಯತ್ತ ಬಿಸಿಯೂಟ

Posted date: 28 Jan, 2019

Powered by:     Yellow and Red

ಅಕ್ಷರ ದಾಸೋಹ ಇನ್ನೂ ಬದಲಾಗಬೇಕಾಗಿದೆ, ಆರೋಗ್ಯ ಬಲವರ್ಧನೆಯತ್ತ ಬಿಸಿಯೂಟ

ತಾಲ್ಲೂಕಿನಲ್ಲಿ ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆ ಸೇರಿ ೨೬೯ ಶಾಲೆಗಳ ಒಟ್ಟು ೧೭,೯೦೧ ವಿದ್ಯಾರ್ಥಿಗಳಿಗೆ ಅಕ್ಷರ ದಾಸೋಹ ಯೋಜನೆಯಡಿಯಲ್ಲಿ ಮಧ್ಯಾಹ್ನದ ಬಿಸಿಯೂಟವನ್ನು ಸರ್ಕಾರ ನೀಡುತ್ತಿದೆಯಾದರೂ ಕಾಲಕ್ಕನುಗುಣವಾಗಿ ಅಭಿವೃದ್ಧಿ ಆಗದೆ ಹಳೆಯ ಪದ್ದತಿಯೇ ಮುಂದುವರಿದಿದ್ದು ಮಕ್ಕಳ ವಯಸ್ಸು, ಗಾತ್ರ, ಅಪೌಷ್ಟಿಕತೆ ಆಧರಿಸದೆ ಕೇವಲ ವಯಸ್ಸಿನನುಗುಣವಾಗಿ ಊಟ ನೀಡುತ್ತಿರುವುದು ಎಷ್ಟು ಸರಿ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.


ಬಹಳ ಉತ್ತಮವಾದ ಸಂಗತಿಯೆಂದರೆ ಬಿಸಿ ಊಟದ ವ್ಯವಸ್ಥೆಯಿಂದ ಮಕ್ಕಳಲ್ಲಿ ಸಹಭೋಜನ, ಸಮಾನತೆ, ವಿದ್ಯಾರ್ಥಿಗಳು ಸನ್ನಡತೆಯನ್ನು ರೂಪಿಸಿಕೊಳ್ಳಲು ಸಹಕಾರಿಯಾಗಿದೆ.ಮಧ್ಯಾಹ್ನ ಬಿಸಿಯೂಟ ಮಾಡುತ್ತಿರುವುದರಿಂದ ಮಾನವ ಸಂಪನ್ಮೂಲ, ದೈಹಿಕ ಮತ್ತು ಮಾನಸಿಕ ಆರೋಗ್ಯ ಸದೃಢಗೊಳ್ಳುತ್ತಿದೆ.


ಶಾಲೆಗಳು ಮತ್ತು ಮಕ್ಕಳು


ತಾಲ್ಲೂಕಿನಾದ್ಯಂತ ನಗರವೂ ಸೇರಿದಂತೆ ೨೨೭ ಸರ್ಕಾರಿ ಪ್ರಾಥಮಿಕ ಶಾಲೆಗಳು, ೨೫ ಸರ್ಕಾರಿ ಪ್ರೌಢಶಾಲೆಗಳು, ೦೪ ಅನುದಾನಿತ ಪ್ರಾಥಮಿಕ ಶಾಲೆಗಳು ಮತ್ತು ೧೩ ಅನುದಾನಿತ ಪ್ರೌಢಶಾಲೆಗಳು ಸೇರಿದಂತೆ ಒಟ್ಟು ೨೬೯ ಶಾಲೆಗಳು ಅಕ್ಷರ ದಾಸೋಹ ಯೋಜನೆಯ ಬಿಸಿಯೂಟಕ್ಕೆ ಪಾತ್ರವಾಗಿವೆ.

ಸರ್ಕಾರಿ ಶಾಲೆಗಳಲ್ಲಿ ಒಂದರಿಂದ ಐದನೇ ತರಗತಿಯವರೆಗೆ ೭,೧೫೫, ಆರರಿಂದ ಏಳನೇ ತರಗತಿಯವರೆಗೆ ೩,೬೧೨, ಎಂಟನೇ ತರಗತಿಯಲ್ಲಿ ೧,೫೮೨ ಮತ್ತು ಒಂಭತ್ತರಿಂದ ಹತ್ತನೇ ತರಗತಿಯವರೆಗೆ ೨,೮೭೨ ಮಕ್ಕಳು, ಹಾಗೂ ಕ್ರಮವಾಗಿ ಅನುದಾನಿತ ಶಾಲೆಗಳಲ್ಲಿ ೭೪೫, ೩೮೭, ೪೫೦, ೧,೦೯೮ ಮಕ್ಕಳು ಸೇರಿದಂತೆ ಒಟ್ಟು ೧೭,೯೦೧ ಮಕ್ಕಳಿದ್ದಾರೆ.



ಅಡುಗೆ ಕೊಠಡಿಗಳು ಮತ್ತು ಸಿಬ್ಬಂದಿ


ಸರ್ಕಾರಿ ಪ್ರಾಥಮಿಕ ಶಾಲೆಗಳ ಅಡುಗೆ ಕೇಂದ್ರಗಳು ೨೨೩, ಪ್ರೌಢ ೨೪, ಅನುದಾನಿತ ಕ್ರಮವಾಗಿ ೦೪ ಮತ್ತು ೧೩ ಇದ್ದು ಒಟ್ಟು ೨೬೪ ಅಡುಗೆ ಕೇಂದ್ರಗಳಿವೆ.ಕೆಲವು ಭಾಗದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಒಟ್ಟಿಗೆ ಇರುವುದರಿಂದ ಕೆಲವು ಕೇಂದ್ರಗಳು ಕಡಿಮೆ ಇವೆ.

ಸರ್ಕಾರಿ ಶಾಲೆಗಳ ಅಡುಗೆ ಸಿಬ್ಬಂದಿ ಕ್ರಮವಾಗಿ ೩೮೯, ೬೨ ಮತ್ತು ಅನುದಾನಿತ ಶಾಲೆಗಳಲ್ಲಿ ೧೫, ೩೧ ಇದ್ದು ಒಟ್ಟು ೪೯೭ ಸಿಬ್ಬಂದಿಗಳು ಕೆಲಸ ನಿರ್ವಹಿಸುತ್ತಿದ್ದಾರೆ. ಅಡುಗೆ ಸಿಬ್ಬಂದಿಗಳಿಗೆ ಅಪಘಾತ, ಅಂಗವೈಕಲ್ಯ, ಅಟಲ್ ಜೀ ಪಿಂಚಣಿ ಯೋಜನೆ ಪ್ರಧಾನಮಂತ್ರಿ ಜೀವವಿಮಾ ಮತ್ತು ಜೀವನಜ್ಯೋತಿ ಯೋಜನೆ ಸೇರಿದಂತೆ ಅನೇಕ ಸೌಲಭ್ಯಗಳನ್ನು ಒದಗಿಸಿಕೊಡುತ್ತಿದೆ.


ಎಸ್ ಡಿ ಎಂ ಸಿ ಮತ್ತು ಮುಖ್ಯ ಶಿಕ್ಷಕರು


ಬಿಸಿಯೂಟ ಮತ್ತು ಅಡುಗೆ ಸಿಬ್ಬಂದಿಗಳ ಮೇಲುಸ್ತುವಾರಿ ಸ್ಥಳೀಯ ಎಸ್ ಡಿ ಎಂ ಸಿ ಸದಸ್ಯರು ಮತ್ತು ಆಯಾ ಶಾಲೆಯ ಮುಖ್ಯೋಪಾಧ್ಯಾಯರಿಗೆ ಸಂಬಂಧಿಸಿರುತ್ತದೆಯಾದರು ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ರ ಮಾರ್ಗದರ್ಶನದಲ್ಲಿ ನಡೆಯಬೇಕು, ಅಡುಗೆ ಸಿಬ್ಬಂದಿಗಳನ್ನು ಶಾಲೆಯಲ್ಲಿನ ಮಕ್ಕಳ ಗಣತಿ ಮೇರೆಗೆ ನೇಮಿಸಿಕೊಂಡು ಮಕ್ಕಳ ಸಂಖ್ಯೆ ಕಡಿಮೆಯಾದರೆ ಒಬ್ಬ ಅಡುಗೆಯವರನ್ನು ತಾತ್ಕಾಲಿಕವಾಗಿ ತೆಗೆಯಲು ಅಥವಾ ಬೇರೆ ಶಾಲೆಯಲ್ಲಿ ಅವಶ್ಯಕತೆ ಇದ್ದರೆ ವರ್ಗಾವಣೆ ಮಾಡಲು ಅಧಿಕಾರ ಇದೆ.

ಸಿಬ್ಬಂದಿಯನ್ನು ನೇಮಿಸಿಕೊಳ್ಳಲು ಪಂಚಾಯತಿ ಅಧ್ಯಕ್ಷ, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮತ್ತು ಎಸ್ ಡಿ ಎಂ ಸಿ ಅಧ್ಯಕ್ಷ ಒಟ್ಟಿಗೆ ಸೇರಿ ಆಯ್ಕೆ ಮಾಡಿಕೊಳ್ಳಬೇಕು, ಮೊದಲ ಆದ್ಯತೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಇಲ್ಲವಾದರೆ ಮಾತ್ರ ಮೇಲ್ಜಾತಿಯ ಸಿಬ್ಬಂದಿ ಆಯ್ಕೆಮಾಡಿಕೊಳ್ಳಲು ಅವಕಾಶವಿದೆ.


ಮಕ್ಕಳ ಊಟವೂ ತೂಕದ ಲೆಕ್ಕ


ಒಂದನೇ ತರಗತಿಯಿಂದ ಏಳನೇ ತರಗತಿಯ ಮಕ್ಕಳಿಗೆ, ೧೦೦ ಗ್ರಾಂ ಅಕ್ಕಿ, ೧೦೦ ಗ್ರಾಂ ಗೋಧಿ, ೨೦ ಗ್ರಾಂ ಬೇಳೆ, ಎಂಟರಿಂದ ಹತ್ತನೇ ತರಗತಿಯ ಮಕ್ಕಳಿಗೆ ೧೫೦ ಗ್ರಾಂ ಅಕ್ಕಿ, ೧೫೦ ಗ್ರಾಂ ಗೋಧಿ ಮತ್ತು ೩೦ ಬೇಳೆ ಈ ಲೆಕ್ಕಾಚಾರದಲ್ಲಿ ಮಕ್ಕಳಿಗೆ ಊಟ ತಯಾರು ಮಾಡಲಾಗುತ್ತದೆ, ಹದಿನೆಂಟು ಮಿಲಿ ಹಾಲು ಮತ್ತು ೩೨ ಪೈಸೆಯನ್ನು ಸಕ್ಕರೆಗಾಗಿ ಖರ್ಚು ಮಾಡಿದರೆ ಇನ್ನುಳಿದ ತರಕಾರಿ ಮತ್ತು ಸಾಂಬಾರ ಪದಾರ್ಥಗಳ ಖರೀದಿಸಲು ಒಂದರಿಂದ ಏಳನೇ ತರಗತಿಯ ಮಕ್ಕಳಿಗೆ ೦೧:೩೫ ಪೈಸೆ ಮತ್ತು ಎಂಟರಿಂದ ಹತ್ತನೇ ತರಗತಿಯ ಮಕ್ಕಳಿಗೆ ೦೨:೦೧ ರೂ ಖರ್ಚು ಮಾಡಲಾಗುತ್ತದೆ. ಹದಿನೈದು ದಿನಗಳ ದಾಸ್ತಾನು ಶೇಖರಿಸಲು ಅವಕಾಶವಿದ್ದು ಸಾಲದಾದಲ್ಲಿ ಹತ್ತಿರದ ಶಾಲೆಯಲ್ಲಿ ಪತ್ರವ್ಯವಹಾರದ ಮೂಲಕ ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಮಕ್ಕಳ ದೇಹದಾರ್ಢ್ಯ ಒಂದೇ ರೀತಿ ಇರದ ಕಾರಣ ಇದು ಸರಿಯೇ ಎನ್ನುವುದು ಯಕ್ಷಪ್ರಶ್ನೆಯಾಗಿದೆ.



ಗೌರವ ಧನವೂ ಸಕಾಲಕ್ಕೆ ಸಿಗದು


ಅಡುಗೆ ಸಿಬ್ಬಂದಿಗೆ ಕೊಡುವ ಕನಿಷ್ಠ ಗೌರವ ಧನವೂ ಪ್ರತಿ ತಿಂಗಳು ಸಿಗುವುದಿಲ್ಲ, ಎರಡು ಮೂರು ತಿಂಗಳಿಗೊಮ್ಮೆ ಸಂದಾಯ ಮಾಡಲಾಗುತ್ತದೆ, ಕೆಲವು ದೊಡ್ಡ  ಮಕ್ಕಳಿಗೆ ಅಳತೆಯಲ್ಲಿ ಕೊಡುವ ಆಹಾರ ಸಾಲುತ್ತಿಲ್ಲ, ಅಕ್ರಮ ಎಲ್ಲೂ ಕಂಡುಬರದಿದ್ದರೂ ಕೆಲವು ಶಾಲೆಯಲ್ಲಿನ ಅಡುಗೆ ಸಿಬ್ಬಂದಿ, ಎಸ್ ಡಿ ಎಂ ಸಿ ಮತ್ತು ಶಾಲಾ ಶಿಕ್ಷಕರ ಹೊಂದಾಣಿಕೆ ಸರಿಯಿಲ್ಲದಿರುವುದು ಕಂಡುಬರುತ್ತಿದೆ, ಇದನ್ನು ಮೊಳಕೆಯಲ್ಲಿಯೇ ಚಿವುಟಿ ಹಾಕದಿದ್ದರೆ ಹೆಮ್ಮರವಾಗಿ ಮಕ್ಕಳ ಮೇಲೆ ದುಷ್ಪರಿಣಾಮ ಬೀರುವುದರಲ್ಲಿ ಅನುಮಾನ ಇಲ್ಲ.


ಸಹಾಯಕ ನಿರ್ದೇಶಕರ ಕೆಲಸ ಶ್ಲಾಘನೀಯ


ಸದ್ಯ ಅಕ್ಷರ ದಾಸೋಹ ದ ಸಹಾಯಕ ನಿರ್ದೇಶಕರಾಗಿ ಸೇವೆ ಸಲ್ಲಿಸತ್ತಿರುವ ಸಿದ್ದರಾಜು ರವರು ಪ್ರತಿ ಶಾಲೆಗಳಿಗೆ ದಿಢೀರ್ ಭೇಟಿ ಕೊಟ್ಟು ಪರಿಶೀಲನೆ ನಡೆಸುವುದಲ್ಲದೆ ಪ್ರತಿ ತಿಂಗಳು ಸರಿಯಾದ ಸಮಯಕ್ಕೆ ಆಹಾರ ಸರಬರಾಜು ಮಾಡುವುದರಲ್ಲಿ ಕರ್ತವ್ಯ ನಿರ್ವಹಣೆಯನ್ನು ಸಲ್ಲಿಸುತ್ತಿದ್ದು ಹಲವಾರು ಶಿಕ್ಷಕರು ಎಸ್ ಡಿ ಎಂ ಸಿ ಅಧ್ಯಕ್ಷ ಮತ್ತು ಸದಸ್ಯರು, ಅಡುಗೆ ಸಿಬ್ಬಂದಿಗಳನ್ನು ವಿಚಾರಿಸಲಾಗಿ ಉತ್ತಮ ಸ್ಪಂದನೆ ದೊರೆತ್ತಿದ್ದು ಅಭಿನಂದನಾರ್ಹರಾಗಿದ್ದಾರೆ.


ಸಿಬ್ಬಂದಿ ಕೊರತೆ ಇಲ್ಲ


ಅಕ್ಷರ ದಾಸೋಹದ ಕಛೇರಿಯಲ್ಲಿ ಸಹಾಯಕ ನಿರ್ದೇಶಕ ಸೇರಿದಂತೆ ಪ್ರಥಮ ದರ್ಜೆ ಸಹಾಯಕ ಒಂದು, ಹೊರಗುತ್ತಿಗೆ ಆಧಾರದ ಮೇಲೆ ಎರಡು ಹುದ್ದೆಗಳು ಕಾರ್ಯನಿರ್ವಹಿಸುತ್ತಿದ್ದಾರೆ.


ಗೋ ರಾ ಶ್ರೀನಿವಾಸ...

ಮೊ:9845856139.


ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ
ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ

ರಾಮನಗರ/ಚನ್ನಪಟ್ಟಣ: (ವಿಮರ್ಶಾತ್ಮಕ ಲೇಖನ)

ನಗರದ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಪ್ರವರ ಹವ್ಯಾಸಿ ನಾಟಕ ತಂಡವು ನಡೆಸಿಕೊಟ್ಟ ಪೂರ್ಣ ಚ

ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.
ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.

ಚನ್ನಪಟ್ಟಣ :  ಚನ್ನಪಟ್ಟಣದಲ್ಲಿ ಮಹಿಳೆಯರೇ ಪೌರಾಣಿಕ ನಾಟಕವನ್ನು ಅಭ್ಯಾಸ ಮಾಡಿ ಬಯಲು ಮಂದಿರದಲ್ಲಿ ಪ್ರಸ್ತುತ ಪಡಿಸುತ್ತಿರುವುದು ವಿಶೇಷವಾಗಿದೆ. ಪೌರಾಣಿಕ

ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು
ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು

ಚನ್ನಪಟ್ಟಣ: ನಗರದ ಶ್ರೀ ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ಇದೇ ಮಾರ್ಚ್ ತಿಂಗಳ ಹತ್ತನೇ ತಾರಿಖಿನ ಭಾನುವಾರ ಮಧ್ಯಾಹ್ನ ತಾಲೂಕಿನಲ್ಲಿ ಇದೇ ಪ್ರಪ್ರಥ

ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್
ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್

ರಾಮನಗರ: ಶೂದ್ರರನ್ನು ವರ್ಣ ನೀತಿಯಿಂದಲೆ ವೈದಿಕರು ಆಳಿದರು. ಇಂದಿಗೂ ಸಹ ವೈದಿಕರು ರಾಮನನ್ನು ನಮ್ಮ ಮೇಲೆ ಹೇರುವ ಮೂಲಕ ಮತ್ತೆ ಪೂರ್ವಕಾಲಕ್ಕೆ ಕರೆದು

ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ

ರಾಮನಗರ, ಫೆ. 16  ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಫೆ.16ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆನಡೆದ ಉಪ ಚುನ

ವೈಜ್ಞಾನಿಕ ಮನೋವೃತ್ತಿ:ಸಾಂವಿಧಾನಿಕ ಕರ್ತವ್ಯ ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ

ರಾಮನಗರ; ಮಾನವ ಹಕ್ಕುಗಳನ್ನು ಯಾರೂ ಕೊಡುವುದಿಲ್ಲ, ವ್ಯಕ್ತಿಗಳಿಗೆ ಅವುಗಳಿಗೆ ಜನ್ಮತಃ ದಕ್ಕಿರುತ್ತವೆ. ಅವುಗಳನ್ನು ಯಾರೂ ಕೊಡುವುದಿಲ್ಲವಾದ್ದರಿ

ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ
ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ

ರಾಮನಗರ: ರಾಜ್ಯ ವಿಧಾನ ಸಭೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದ್ದು,  ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಇಂದು ಮಸ್ಟರಿಂಗ್ ಕಾರ್ಯ ಮುಗಿದು, ಮತಗಟ್ಟೆ ಸ

ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು
ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು

ರಾಮನಗರ: ಚನ್ನಪಟ್ಟಣ: ವೈದ್ಯ ಸಿಬ್ಬಂದಿಯಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ತಿಂಗಳು 20 ದಿನಗಳ ಗಂಡು ಶಿಶುವೊಂದು ಪ್ರಾಣ ಕಳೆದುಕೊ

ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್
ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್

ರಾಮನಗರ, ಫೆ. 12:   ನಾವು ರಾಮನಗರ ಜಿಲ್ಲೆಯವರಲ್ಲಾ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಗ್ರೇಟ್ ಬೆಂಗಳೂರು ಜಿಲ್ಲೆ ಮಾಡುವ ಬಗ್ಗೆ ಲೋಕಸಭಾ ಚ

ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್
ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್


ರಾಮನಗರ : ಫೆ 10 ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಕೇವಲ ಹಿಂದುತ್ವವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಭಾರತದ

Top Stories »  


Top ↑