Tel: 7676775624 | Mail: info@yellowandred.in

Language: EN KAN

    Follow us :


ರಾಜಿ ಆಗಲಾರದ ಪ್ರಕರಣಗಳಿಗೆ ಮಾತ್ರ ನ್ಯಾಯಾಲಯಕ್ಕೆ ಬನ್ನಿ ಫಣೀಂದ್ರ

Posted date: 03 Feb, 2019

Powered by:     Yellow and Red

ರಾಜಿ ಆಗಲಾರದ ಪ್ರಕರಣಗಳಿಗೆ ಮಾತ್ರ ನ್ಯಾಯಾಲಯಕ್ಕೆ ಬನ್ನಿ ಫಣೀಂದ್ರ

ಎಲ್ಲಾ ವ್ಯಾಜ್ಯಗಳನ್ನು ನ್ಯಾಯಾಲಯಕ್ಕೆ ಹೊತ್ತು ಬರಬೇಡಿ, ಸಾಧ್ಯವಾದಷ್ಟು ಪ್ರಕರಣಗಳನ್ನು ಮನೆಯ ಹಿರಿಯ ಸದಸ್ಯರ ಮುಂದೆ, ಪಂಚಾಯತಿ ಕಟ್ಟೆಯಲ್ಲಿ ಮತ್ತೂ ಮುಂದುವರಿದರೆ ಪೋಲಿಸ್ ಠಾಣೆಯಲ್ಲಿ ಬಗೆಹರಿಸಿಕೊಳ್ಳಿ, ಅಲ್ಲಿ ರಾಜಿಸಂಧಾನ ಆಗದ ವ್ಯಾಜ್ಯಗಳನ್ನು ಮಾತ್ರ ನ್ಯಾಯಾಲಯಕ್ಕೆ ತಂದು ಬಗೆಹರಿಸಿಕೊಳ್ಳಿ ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಕೆ ಎನ್ ಫಣೀಂದ್ರ ತಿಳಿಸಿದರು.

ಅವರು ನಗರದ ನೂತನ ನ್ಯಾಯಾಲಯಗಳ ಸಂಕೀರ್ಣ ಉದ್ಘಾಟನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ನ್ಯಾಯಾಂಗ ಮತ್ತು ಕಾರ್ಯಾಂಗಗಳು ಜೋಡೆತ್ತಿನ ಬಂಡಿ ಇದ್ದಂತೆ, ಒಂದು ಎತ್ತು ಕಣಿ ಹಾಕಿದರೂ ಬಂಡಿಯಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ತೊಂದರೆ ಕಟ್ಟಿಟ್ಟ ಬುತ್ತಿ, ಇವೆರಡರ ಜೊತೆಗೆ ಶಾಸಕಾಂಗ ಮತ್ತು ಪತ್ರಿಕಾ ರಂಗವು ಸಹ ಬಹಳ ಮುಖ್ಯವಾದ ಅಂಗಗಳು, ಸಾರ್ವಜನಿಕವಾಗಿ ಎಡವದಂತೆ ಕಾಪಾಡಿಕೊಳ್ಳಬೇಕು, ವಕೀಲರು ಮತ್ತು ನ್ಯಾಯಮೂರ್ತಿಗಳು ವ್ಯಾಜ್ಯಗಳನ್ನು ಮುಂದೂಡದೆ ಶೀಘ್ರವಾಗಿ ಬಗೆಹರಿಸಿಕೊಟ್ಟರೆ ಕಕ್ಷಿದಾರರಿಗೆ ನ್ಯಾಯಾಲಯದ ಮೇಲೆ ಮತ್ತಷ್ಟು ಗೌರವ ಹೆಚ್ಚಾಗುತ್ತದೆ, ೧೩೦ ಕೋಟಿ ಜನಸಂಖ್ಯೆ ಇರುವ ದೇಶದಲ್ಲಿ ಮೂರು ಕೋಟಿ ಪ್ರಕರಣಗಳು ಬಾಕಿ ಉಳಿದಿವೆ, ಇದಕ್ಕಾಗಿ ಲೋಕ ಅದಾಲತ್ ನಂತಹ ಅನೇಕ ರಾಜಿಸಂಧಾನ ಚಾಲ್ತಿಯಲ್ಲಿದೆ ಇದನ್ನು ಕಕ್ಷಿದಾರರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕರೆನೀಡಿದರು.


ಪ್ಲೆಕ್ಸ್, ಬ್ಯಾನರ್ ತೆರವುಗೊಳಿಸಿ


ನ್ಯಾಯಾಲಯ ಸಂಕೀರ್ಣಗಳನ್ನು ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಉಚ್ಚ ನ್ಯಾಯಾಲಯದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಲ್ ನಾರಾಯಣ ಸ್ವಾಮಿ ಯವರು ನ್ಯಾಯಾಲಯ ನಮ್ಮ ಸ್ವಂತ ಮನೆಯಿದ್ದಂತೆ, ಸ್ವಚ್ಚತೆ ಕಾಪಾಡಿಕೊಳ್ಳಬೇಕು, ಬೆಂಗಳೂರಿನಲ್ಲಿ ಪ್ಲೆಕ್ಸ್, ಬ್ಯಾನರ್ ಗಳನ್ನು ಕಟ್ಟದಂತೆ ಆದೇಶ ನೀಡಲಾಗಿದೆ, ಆದರೆ ರಾಮನಗರ ಬರುತ್ತಿದ್ದಂತೆ ಎಲ್ಲೆಂದರಲ್ಲಿ ಪ್ಲೆಕ್ಸ್ ಗಳು ತುಂಬಿಹೋಗಿವೆ, ಇದಕ್ಕೆ ರಾಜಕೀಯ ಮುಖಂಡರೇ ಮುನ್ನುಡಿ ಬರೆಯಬೇಕು, ಆಗ ನಗರ ಸುಂದರವಾಗಿ ಕಾಣುತ್ತದೆ ಎಂದು ಸಭೆಯಲ್ಲಿ ಉಪಸ್ಥಿತರಿದ್ದ ಡಿಕೆ ಸಹೋದರರು ಮತ್ತು ಜಿಲ್ಲಾಧಿಕಾರಿಗೆ ಮಾರ್ಮಿಕವಾಗಿ ಹೇಳಿದರು.


ಬಾಹ್ಯ ಸೌಂದರ್ಯ ಮತ್ತು ಆಂತರಿಕ ಸೌಂದರ್ಯ

 

ಈ ವೇಳೆ ಉಪಮುಖ್ಯಮಂತ್ರಿ ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಡಾ.ಜಿ.ಪರಮೇಶ್ವರ್ ಮಾತನಾಡಿ ಕಟ್ಟಡದ ಸೌಂದರ್ಯ ಚನ್ನಾಗಿದೆ, ಅದೇರೀತಿ ಒಳಗಿನ ಕಾರ್ಯಚಟುವಟಿಕೆಗಳು ಅಷ್ಟೇ ಸೌಂದರ್ಯದಿಂದ ಕೂಡಿರಬೇಕು ಎಂದರು.

ರಾಜ್ಯದಲ್ಲಿ ೧೩೦೭ ನ್ಯಾಯಾಲಯಗಳಿದ್ದು ಶೇಕಡಾ ಅರವತ್ತರಷ್ಟು ಸ್ವಂತ ಕಟ್ಟಡ ಹೊಂದಿವೆ, ಈ ಸಾಲಿನಲ್ಲಿ ನಲವತ್ಮೂರು ಹೊಸ ಕೋಟ್೯ ಗೆ ಅನುಮತಿ ನೀಡಿದ್ದು ಹದಿಮೂರು ಕೌಟುಂಬಿಕ ನ್ಯಾಯಾಲಯಗಳು, ಮಹಿಳೆಯರು ಮತ್ತು ಮಕ್ಕಳಿಗೆ ವಿಶೇಷ ನ್ಯಾಯಾಲಯ ಮತ್ತು ಗ್ರಾಹಕ ನ್ಯಾಯಾಲಯಗಳ ಸೇರಿವೆ, ಇದುವರೆಗೂ ೧೬೧೭ ಕೋಟಿ ರೂ ವೆಚ್ಚವಾಗಿವೆ ಎಂದು ತಿಳಿಸಿದರು.


ವಿಳಂಬ ಸಲ್ಲದು


ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಹುಲುವಾಡಿ ಜಿ ರಮೇಶ್ ಮಾತನಾಡಿ ಮೂರು ವರ್ಷದ ಹಿಂದೆಯೇ ಈ ನ್ಯಾಯಾಲಯ ಉದ್ಘಾಟನೆ ಆಗಬೇಕಿತ್ತು, ಕಾರಣಾಂತರಗಳಿಂದ ತಡವಾಗಿದೆ, ನ್ಯಾಯಾಂಗ ಇಲಾಖೆ ಯಾವತ್ತೂ ತಡಮಾಡಬಾರದು, ಅದರಲ್ಲೂ ಅಭಿವೃದ್ಧಿ ಕೆಲಸಗಳಿಗೆ ತಡೆ ನೀಡುವ ಮುನ್ನ ಯೋಚಿಸಬೇಕು, ಇಂದು ಒಂದು ಲಕ್ಷ ರೂಪಾಯಿಗಳಲ್ಲಿ ಆಗುವ ಕಾಮಗಾರಿ ತಡೆಹಿಡಿದ ನಂತರ ಐದು ಲಕ್ಷ ರೂಪಾಯಿಗಳಾಗುತ್ತವೆ, ಅದಕ್ಕೆ ಅವಕಾಶ ನೀಡಬಾರದು, ಕನಿಷ್ಠ ಎರಡು ಗಂಟೆಯಾದರು ವಕೀಲರು ಸಂಬಂಧಿಸಿದ ಪುಸ್ತಕಗಳನ್ನು ಓದಿ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕೆಂದರು.


ಕೆರೆ ತುಂಬಿಸಲು ರಮೇಶ್ ರವರ ಶ್ರಮ


ರಾಮನಗರ ಜಿಲ್ಲಾ ಉಸ್ತುವಾರಿ ಹಾಗೂ ಜಲಸಂಪನ್ಮೂಲ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಡಿ.ಕೆ.ಶಿವಕುಮಾರ್ ಮಾತನಾಡಿ ಮುಖ್ಯಮಂತ್ರಿಗಳು ಇವತ್ತಿನ ಕಾರ್ಯಕ್ರಮಕ್ಕೆ ಬರಬೇಕಾಗಿತ್ತು. ಆದರೆ ಮುಂದಿನ ದಿನಗಳಲ್ಲಿ ಬಜೆಟ್ ಮಂಡನೆ ಇದೆ. ಆ ವಿಚಾರವಾಗಿ ಅವರಿಗೆ ಒತ್ತಡ ಹೆಚ್ಚಿದೆ. ಅದರಿಂದ ಅವರು ಬರಲು ಸಾಧ್ಯವಾಗಿಲ್ಲ. 


ಆದರೆ ಅದನ್ನ ಯಾರು ಬೇರೆ ರೀತಿ ಭಾವಿಸಬಾರದೆಂದು ತಿಳಿಸಿದರು. ಹಾಗೆಯೇ ಚನ್ನಪಟ್ಟಣದ ಕೆರೆಗಳ ತುಂಬಿಸುವ ಕಣ್ವ ಏತ ನೀರಾವರಿ ಯೋಜನೆ ಹಿಂದೆ ಇದೇ ತಾಲೂಕಿನ ನ್ಯಾಯಾಧೀಶರಾದ ಹುಲುವಾಡಿ ರಮೇಶ್ ಅವರ ಶ್ರಮ ಹೆಚ್ಚಿದೆ, ಆದರೆ ಇವತ್ತು ಇದು ನಮ್ಮ ಯೋಜನೆ ನಾನು ಕೆರೆ ತುಂಬಿಸಿದೆ ಅಂತಾ ಕೆಲವರು ಬೋರ್ಡ್ ಹಾಕಿಕೊಳ್ಳುತ್ತಾರೆ ಎಂದು ಹೇಳುವ ಮೂಲಕ ಕ್ಷೇತ್ರದ ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್‌ಗೆ ಪರೋಕ್ಷವಾಗಿ ಟಾಂಗ್ ನೀಡಿದರು.


*ಹೆಸರೇಳದೆ ಅಭಿನಂದನೆ*


ಇನ್ನು ಸಂಸದ ಡಿ.ಕೆ.ಸುರೇಶ್ ಕೂಡ ಯೋಗೇಶ್ವರ್‌ಗೆ ಇದೇ ವಿಚಾರವಾಗಿ ಟಾಂಗ್ ಕೊಟ್ಟರು. ಕರ್ನಾಟಕದಲ್ಲಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಜಾರಿಗೆ ಬಂದು ಚನ್ನಪಟ್ಟಣದಲ್ಲಿ ಅನುಷ್ಠಾನಗೊಂಡಿದ್ದು ಹುಲುವಾಡಿ ರಮೇಶ್‌ರವರಿಂದಲೇ, ಚನ್ನಪಟ್ಟಣಕ್ಕೆ ಕಾವೇರಿ ನೀರು ಬಂದಿದೆ ಅಂದ್ರೆ ಅದು ನೂರಕ್ಕೆ ನೂರರಷ್ಟು ಸತ್ಯ ಎಂದು ತಿಳಿಸಿದರು. ಹಾಗೇ ಈ ಕೋರ್ಟ್ ನಿರ್ಮಾಣದಲ್ಲಿ ಮಾಜಿ ಶಾಸಕರ ಶ್ರಮವೂ ಇದೇ ಎಂದು ಯೋಗೇಶ್ವರ್ ಹೆಸರೇಳದೆ ನೆನಪಿಸಿಕೊಂಡದ್ದು ಮುಂದಿನ ಲೋಕಸಭಾ ಚುನಾವಣೆಯ ರಾಜಕೀಯ ರಣತಂತ್ರಕ್ಕೆ ಸಾಕ್ಷಿಯಾಯ್ತು.


ವಕೀಲರ ಅಸಮಧಾನ


ಉದ್ಘಾಟನಾ ಹಲಗೆಯಲ್ಲಿ ಹೆಸರು ಇಲ್ಲದಿರುವುದಕ್ಕೆ ವಕೀಲರ ಸಂಘದ ಪದಾಧಿಕಾರಿಗಳು ಮತ್ತು ಇನ್ನಿತರ ವಕೀಲರ ನಡುವೆ ಮನಸ್ತಾಪ ಉಂಟಾಗಿದ್ದು ಕಂಡುಬಂದಿದ್ದು ಇದು ದೊಡ್ಡ ಮಟ್ಟದಲ್ಲಿ ಯಾವಾಗ ಬೇಕಾದರೂ ಸ್ಪೋಟಗೊಳ್ಳುವ ಮುನ್ಸೂಚನೆಯನ್ನು ಕೆಲ ವಕೀಲರು ನೀಡಿದರು.


ಮಾಧ್ಯಮದವರ ಕಣ್ತಪ್ಪಿಸಿ ಡಿಕೆಶಿ ಪಲಾಯನ


ಕಾರ್ಯಕ್ರಮ ಮುಗಿಯುವ ಮುನ್ನವೇ ವೇದಿಕೆಯಿಂದ ನಿರ್ಗಮಿಸಿದ ಸಚಿವ ಡಿ ಕೆ ಶಿವಕುಮಾರ್ ಮಾಧ್ಯಮದವರಿಗೆ ಅಲ್ಲೆ ಕೂರಿ ಎಂದು ಹೇಳಿ ತಪ್ಪಿಸಿಕೊಂಡು ಹೋಗಿದ್ದು, ಹಲವಾರು ಪ್ರಶ್ನೆಗಳನ್ನು ಕೇಳಬೇಕಿಂದಿದ್ದ ಮಾಧ್ಯಮ ಮಿತ್ರರಿಗೆ ನಿರಾಸೆ ತಂದಿತ್ತು.


ಹಾಜರಿ ಗೈರುಹಾಜರಿ


ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಮತ್ತು ಲೋಕೋಪಯೋಗಿ ಸಚಿವ ಹೆಚ್ ಡಿ ರೇವಣ್ಣ ನವರ ಗೈರುಹಾಜರಿ ಎದ್ದು ಕಾಣುತ್ತಿತ್ತು, ಕರ್ನಾಟಕ ಉಚ್ಚ ನ್ಯಾಯಾಲಯದ ವಿಲೇಖನಾಧಿಕಾರಿ ವಿ ಶ್ರೀಶಾನಂದ, ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ ಕೆ ರಾಜೇಂದ್ರ, ಲೋಕೋಪಯೋಗಿ ಇಲಾಖೆಯ ಮುಖ್ಯ ಅಭಿಯಂತರ ಬಿ ಎಲ್ ರವೀಂದ್ರ ಬಾಬು, ಕೆ ದುರುಗಪ್ಪ ಮತ್ತು ಜಿ ಡಿ ಕುಮಾರ, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಎಂ ಜಿ ಉಮಾ ಮತ್ತು ವಕೀಲರ ಸಂಘದ ಅಧ್ಯಕ್ಷ ಕೆ ಟಿ ತಿಮ್ಮೇಗೌಡ ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.


ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ
ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ

ರಾಮನಗರ/ಚನ್ನಪಟ್ಟಣ: (ವಿಮರ್ಶಾತ್ಮಕ ಲೇಖನ)

ನಗರದ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಪ್ರವರ ಹವ್ಯಾಸಿ ನಾಟಕ ತಂಡವು ನಡೆಸಿಕೊಟ್ಟ ಪೂರ್ಣ ಚ

ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.
ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.

ಚನ್ನಪಟ್ಟಣ :  ಚನ್ನಪಟ್ಟಣದಲ್ಲಿ ಮಹಿಳೆಯರೇ ಪೌರಾಣಿಕ ನಾಟಕವನ್ನು ಅಭ್ಯಾಸ ಮಾಡಿ ಬಯಲು ಮಂದಿರದಲ್ಲಿ ಪ್ರಸ್ತುತ ಪಡಿಸುತ್ತಿರುವುದು ವಿಶೇಷವಾಗಿದೆ. ಪೌರಾಣಿಕ

ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು
ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು

ಚನ್ನಪಟ್ಟಣ: ನಗರದ ಶ್ರೀ ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ಇದೇ ಮಾರ್ಚ್ ತಿಂಗಳ ಹತ್ತನೇ ತಾರಿಖಿನ ಭಾನುವಾರ ಮಧ್ಯಾಹ್ನ ತಾಲೂಕಿನಲ್ಲಿ ಇದೇ ಪ್ರಪ್ರಥ

ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್
ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್

ರಾಮನಗರ: ಶೂದ್ರರನ್ನು ವರ್ಣ ನೀತಿಯಿಂದಲೆ ವೈದಿಕರು ಆಳಿದರು. ಇಂದಿಗೂ ಸಹ ವೈದಿಕರು ರಾಮನನ್ನು ನಮ್ಮ ಮೇಲೆ ಹೇರುವ ಮೂಲಕ ಮತ್ತೆ ಪೂರ್ವಕಾಲಕ್ಕೆ ಕರೆದು

ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ

ರಾಮನಗರ, ಫೆ. 16  ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಫೆ.16ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆನಡೆದ ಉಪ ಚುನ

ವೈಜ್ಞಾನಿಕ ಮನೋವೃತ್ತಿ:ಸಾಂವಿಧಾನಿಕ ಕರ್ತವ್ಯ ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ

ರಾಮನಗರ; ಮಾನವ ಹಕ್ಕುಗಳನ್ನು ಯಾರೂ ಕೊಡುವುದಿಲ್ಲ, ವ್ಯಕ್ತಿಗಳಿಗೆ ಅವುಗಳಿಗೆ ಜನ್ಮತಃ ದಕ್ಕಿರುತ್ತವೆ. ಅವುಗಳನ್ನು ಯಾರೂ ಕೊಡುವುದಿಲ್ಲವಾದ್ದರಿ

ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ
ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ

ರಾಮನಗರ: ರಾಜ್ಯ ವಿಧಾನ ಸಭೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದ್ದು,  ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಇಂದು ಮಸ್ಟರಿಂಗ್ ಕಾರ್ಯ ಮುಗಿದು, ಮತಗಟ್ಟೆ ಸ

ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು
ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು

ರಾಮನಗರ: ಚನ್ನಪಟ್ಟಣ: ವೈದ್ಯ ಸಿಬ್ಬಂದಿಯಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ತಿಂಗಳು 20 ದಿನಗಳ ಗಂಡು ಶಿಶುವೊಂದು ಪ್ರಾಣ ಕಳೆದುಕೊ

ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್
ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್

ರಾಮನಗರ, ಫೆ. 12:   ನಾವು ರಾಮನಗರ ಜಿಲ್ಲೆಯವರಲ್ಲಾ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಗ್ರೇಟ್ ಬೆಂಗಳೂರು ಜಿಲ್ಲೆ ಮಾಡುವ ಬಗ್ಗೆ ಲೋಕಸಭಾ ಚ

ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್
ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್


ರಾಮನಗರ : ಫೆ 10 ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಕೇವಲ ಹಿಂದುತ್ವವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಭಾರತದ

Top Stories »  


Top ↑