Tel: 7676775624 | Mail: info@yellowandred.in

Language: EN KAN

    Follow us :


ಸಮಾಜ ಕಲ್ಯಾಣ ಇಲಾಖೆಯಲ್ಲಿ ಅನೇಕ ಸವಲತ್ತುಗಳು, ಉಂಡವನೇ ಜಾಣ

Posted date: 11 Feb, 2019

Powered by:     Yellow and Red

ಸಮಾಜ ಕಲ್ಯಾಣ ಇಲಾಖೆಯಲ್ಲಿ ಅನೇಕ ಸವಲತ್ತುಗಳು, ಉಂಡವನೇ ಜಾಣ

ವರದಿಯಲ್ಲಿ ಬಹುಪಾಲು ತಲುಪಿದೆ



ಸಮಾಜ ಕಲ್ಯಾಣ ಇಲಾಖೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯಕ್ಕೆ ಹಲವಾರು ಯೋಜನೆಗಳಿದ್ದು, ಇಲಾಖೆಯ ವಾರ್ಷಿಕ ವರದಿಯಲ್ಲಿ ಎಲ್ಲಾ ಯೋಜನೆಗಳ ಹಣ  ಖರ್ಚಾಗಿದ್ದರೂ ಸಹ ಆ ಸಮುದಾಯದ ಹಲವು ಕುಟುಂಬಗಳು ಇನ್ನೂ ಹಿಂದುಳಿದಿರುವುದು ದುರದೃಷ್ಟಕರ.


ಯಾರು ಫಲಾನುಭವಿಗಳು?



ಇಲಾಖೆಯಲ್ಲಿ ಹಲವಾರು ಯೋಜನೆಗಳ ಹಣ ನೇರವಾಗಿ ಅವರ ಖಾತೆಗೆ ಜಮವಾದರೆ ಇನ್ನೂ ಕೆಲವು ಖರೀದಿಸುವ ಯಂತ್ರೋಪಕರಣಗಳು, ಕೊರೆಸುವ ಕೊಳವೆ ಬಾವಿಗಳು ಮತ್ತು ವಾಹನಗಳ ಕಂಪೆನಿಗೆ ಹೋಗುತ್ತವೆಯಾದರೂ ಖರೀದಿಸಿದವರು ಉಪಯೋಗಿಸುತ್ತಿರುವುದು ಬಹಳ ವಿರಳ.
ಇಲಾಖೆಯ ಅಧಿಕಾರಿಗಳು ಕೇವಲ ದಾಖಲೆಗಳನ್ನು ಮಾತ್ರ ಪರಿಶೀಲಿಸಿ ಹಣ ಬಿಡುಗಡೆ ಮಾಡುವ ಬದಲು ಆ ಹಣ ಅಥವಾ ವಸ್ತುಗಳನ್ನು ಅವರೇ ಉಪಯೋಗಿಸಿ ಸಮಾಜದಲ್ಲಿ ಒಂದು ಉತ್ತಮ ಸ್ಥಾನ ಮಾನ ಗಳಿಸಿಕೊಡುವತ್ತ ಗಮನ ಹರಿಸಿದರೆ ಈ ಸಮುದಾಯದ ಬಡವರು ಸಮಾಜದಲ್ಲಿ ಉನ್ನತ ಸ್ತರಕ್ಕೇರಲು, ಸ್ವಾಭಿಮಾನಿಯಾಗಿ ಬದುಕಲು ಸಾಧ್ಯವಾಗುತ್ತದೆ.


ಸಮುದಾಯದ ನಾಯಕರಿಂದಲೇ ವಂಚನೆ!?



ಮೇಲ್ವರ್ಗದ ಸಮುದಾಯದವರಿರಲಿ ಅದೇ ಸಮುದಾಯದ ನಾಯಕರು ಎನಿಸಿಕೊಂಡವರದಿಂದಲೇ ಅದೇ ಸಮುದಾಯದವರು ಮೋಸ ಹೋಗುತ್ತಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ, ಉದಾಹರಣೆಗೆ ಒಬ್ಬ ಬಡ ವ್ಯಕ್ತಿಯ ಹೆಸರಿನಲ್ಲಿ ಕಾರು ಇದೆ, ಅದಕ್ಕೆ ಮುಂಗಡ ಹಣ ಕಟ್ಟಿ, ಸಬ್ಸಿಡಿಯನ್ನು ಪಡೆದಿದ್ದಾನೆ, ಆದರೆ ಅವನ ಬಳಿ ಕಾರಿಲ್ಲ, ಕೊಳವೆಬಾವಿ ಕೊರೆಸಲು ಅನುಮತಿ ಪಡೆದುಕೊಂಡಿದ್ದಾನೆ, ಬೋರ್ ವೆಲ್ ಕೊರೆಸಿದ ದಾಖಲೆಗಳಿವೆ, ಹಣವೂ ಸಂದಾಯವಾಗಿದೆ, ದಾಖಲೆ ಒಂದು ಜಮೀನದ್ದಾದರೆ ಕೊಳವೆ ಬಾವಿ ಕೊರೆದಿರುವ ಭೂಮಿ ಬೇರೆಯದ್ದು, ಇನ್ನೂ ಕೆಲವು ಕಡೆ ಕೊಳವೆ ಬಾವಿ ಕೊರೆಯದೆ ಹಣ ಬಿಡುಗಡೆಯಾಗಿರುವ ಶಂಕೆಯೂ ಬಹಳಷ್ಟಿವೆ, ಇನ್ನುಳಿದಂತೆ ಕೃಷಿ ಸಲಕರಣೆಗಳು, ಟ್ರ್ಯಾಕ್ಟರ್, ಟ್ರಿಲ್ಲರ್ ಇತ್ಯಾದಿ ವಸ್ತುಗಳಿಗೆ ದಾಖಲೆ ಮಾತ್ರ ಆ ವ್ಯಕ್ತಿಯದಾಗಿರುತ್ತದೆ, ಫಲಾನುಭವಿ ಬೇರೆ ಯಾರೋ ಪಡೆದುಕೊಂಡಿರುತ್ತಾರೆ, ಅಧಿಕಾರಿಗಳು ಕೇವಲ ದಾಖಲೆ ನೋಡಿ ಹಣ ಬಿಡುಗಡೆ ಮಾಡದೆ ಆ ದಾಖಲಯ ಫಲಾನುಭವಿಗಳಿಗೆ ತಲುಪುವಂತೆ ಮಾಡದರೇ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರು ಆರ್ಥಿಕವಾಗಿ ಬಲಾಢ್ಯರಾಗಲು ಸಾಧ್ಯ, ಇಲ್ಲವಾದರೇ ಇನ್ನೂ ನೂರು ವರ್ಷ ಮೀಸಲಾತಿ ಕೊಟ್ಟರೂ ಸಹ ಅವರು ಆರ್ಥಿಕವಾಗಿ ಮುಂದುವರೆಯಲು ಸಾಧ್ಯವಾಗುವುದಿಲ್ಲ.


ವಿದ್ಯಾರ್ಥಿ ವೇತನ



ವಿದ್ಯಾರ್ಥಿ ವೇತನವಾಗಿ ಮೆಟ್ರಿಕ್ ನಂತರದ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಒಂದು ವರ್ಷಕ್ಕೆ ಕನಿಷ್ಠ ೮೫,೦೦೦,೦೦ ರೂಪಾಯಿಗಳು, ಮೆಟ್ರಿಕ್ ಪೂರ್ವ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ೫೦,೦೦೦,೦೦ ರೂಪಾಯಿಗಳು, ಪರಿಶಿಷ್ಟ ಜಾತಿಯ ಕಾನೂನು ಪದವೀಧರರಿಗೆ ೪,೦೦,೦೦೦ ರೂಪಾಯಿಗಳು, ಪರಿಶಿಷ್ಟ ಪಂಗಡಗಳ ವೈದ್ಯಕೀಯ/ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ೧೩,೦೦೦,೦೦ ರೂಪಾಯಿಗಳು, ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳಿಗೆ ೨,೯೮,೦೦೦ ರೂಪಾಯಿಗಳು, ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ೩,೦೦,೦೦೦ ರೂಪಾಯಿಗಳನ್ನು ನೀಡುತ್ತಿದೆ.


ವಿದ್ಯಾರ್ಥಿ ನಿಲಯದ ನಿರ್ವಹಣೆ ಮತ್ತು ಸಿಬ್ಬಂದಿ ವೇತನ



ಪರಿಶಿಷ್ಟ ಜಾತಿ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳ ನಿರ್ವಹಣೆ ಮತ್ತು ಸಿಬ್ಬಂದಿಗಳ ವೇತನಕ್ಕಾಗಿ ಒಂದು ವರ್ಷಕ್ಕೆ ೧೦,೦೦೦,೦೦ ರೂಪಾಯಿಗಳು, ೫,೫೦,೦೦೦ ರೂಪಾಯಿಗಳು, ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಗಳ ಸಿಬ್ಬಂದಿಗೆ  ೫೩,೯೮,೦೦೦ ರೂ, ದಿನಗೂಲಿ ನೌಕರರಿಗೆ ೩,೬೦,೦೦೦ ರೂ, ವಿದ್ಯಾರ್ಥಿ ನಿಲಯಗಳಿಗೆ ೭೦,೦೦೦,೦೦ ರೂಪಾಯಿಗಳನ್ನು ನೀಡಲಾಗುತ್ತಿದೆ.
*ಸಿಬ್ಬಂದಿ, ವೇತನ ಮತ್ತು ಬಾಡಿಗೆ*
ನಿರ್ದೇಶನ ಮತ್ತು ಆಡಳಿತ ಮಂಡಳಿಯಲ್ಲಿ ಒಟ್ಟು ಏಳು ಮಂದಿ ಕೆಲಸ ನಿರ್ವಹಿಸಬೇಕಾಗಿದ್ದು ಎರಡು ಹುದ್ದೆಗಳು ಖಾಲಿ ಇದ್ದು ಅವರ ವೇತನಕ್ಕಾಗಿ ೧೮,೫೦೦,೦೦ ರೂ, ಸ್ವಂತ ಕಟ್ಟಡ ಇಲ್ಲದಿರುವುದರಿಂದ ೭,೪೦೦ ರೂಪಾಯಿಗಳ ಬಾಡಿಗೆಯೂ ಸೇರಿದಂತೆ ೧೧,೦೦೦,೦೦ ರೂಪಾಯಿಗಳ ಕಛೇರಿ ವೆಚ್ಚಕ್ಕೆಂದೇ ನೀಡಲಾಗುತ್ತಿದೆ.
ಸರ್ಕಾರಿ ಕಾಲೇಜು ವಿದ್ಯಾರ್ಥಿ ನಿಲಯಗಳ ನಿರ್ವಹಣೆಗೆ ೪,೫೦,೦೦೦ ರೂ ಮತ್ತು ಸಿಬ್ಬಂದಿ ವೇತನಕ್ಕಾಗು ೯,೫೦,೦೦೦ ರೂ,
ಹಾಗೂ ಹೆಚ್ಚಿನ ಊಟ ಮತ್ತು ವಸತಿ ವೆಚ್ಚಗಳಿಗಾಗಿ ೧೦,೦೦೦,೦೦ ರೂಪಾಯಿಗಳು ಸಂದಾಯವಾಗುತ್ತಿದೆ.


ಪ ಜಾ ಮತ್ತು ಪ ಪಂಗಡದ ಅಸ್ಪೃಶ್ಯತೆ, ಅಂತರ್ಜಾತಿ ವಿವಾಹ ಸೌಕರ್ಯ, ಸಹಾಯಧನ



ಅಸ್ಪೃಶ್ಯತೆ ನಿವಾರಣೆ ಮಾಡಲು ಮತ್ತು ಅಂತರ್ಜಾತಿ ವಿವಾಹಿತ ದಂಪತಿಗಳಿಗೆ ೨೦,೦೦೦,೦೦ ರೂ, ಪರಿಶಿಷ್ಟ ಜಾತಿಯ ಕಾಲೋನಿಗಳ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ೬,೨೫,೦೦೦ ರೂ, ಕುಟುಂಬಗಳಿಗೆ ಸಹಾಯಧನವಾಗಿ ೫,೭೫,೦೦೦ ರೂಪಾಯಿಗಳು.
ಪರಿಶಿಷ್ಟ ವರ್ಗದ ಕಾಲೋನಿಗಳ ಅಭಿವೃದ್ಧಿಗೆ ೭೫,೦೦೦ ರೂ ಮತ್ತು ಕುಟುಂಬಗಳಿಗೆ ಸಹಾಯಧನವಾಗಿ ೯೯,೦೦೦ ರೂಪಾಯಿಗಳನ್ನು ನೀಡುತ್ತಿದೆ.


ಹಾಸ್ಟೆಲ್ ಗಳ ಅವ್ಯವಸ್ಥೆ



ಹಾಸ್ಟೆಲ್ ಗಳ ನಿರ್ವಹಣೆಗೆಂದೆ ಕೋಟ್ಯಂತರ ರೂ ಕೊಟ್ಟರೂ ಸಹ ಹಾಸ್ಟೆಲ್ ಗಳು ಅವ್ಯವಸ್ಥೆಯಿಂದ ಕೂಡಿವೆ, *ಕೋಡಂಬಳ್ಳಿ ಮತ್ತು ಅಕ್ಕೂರು* ಗ್ರಾಮಗಳಲ್ಲಿ ಸೋಲಾರ್ ಗಳು ಹಾಳಾಗಿ ಆರು ತಿಂಗಳಾಗಿದ್ದರೂ ಸಹ ಇನ್ನೂ ರಿಪೇರಿ ಮಾಡಿಸದಿರುವುದು ವಾರ್ಡನ್ ಮತ್ತು ಅಧಿಕಾರಿಗಳ ಹೊಣೆಗೇಡಿತನವಾಗಿದೆ, ಇನ್ನೂ ಆರು ತಿಂಗಳಿನಿಂದ ಬಿಸಿನೀರನ್ನೇ ಕಾಣದ ಮಕ್ಕಳ ಸ್ಥಿತಿ ಇವರಿಗೆ ಅರ್ಥವಾಗುವುದಿಲ್ಲವೇ ?
ಅಕ್ಕೂರು ಹಾಸ್ಟೆಲ್ ಸುತ್ತಲೂ ಕಾಂಪೌಂಡ್ ಗೆ ಹೊಂದಿಕೊಂಡಂತೆ ಸ್ಥಳೀಯರು ತಿಪ್ಪೆ ಗುಂಡಿಗಳನ್ನು ಮಾಡಿಕೊಂಡಿದ್ದು ಗಬ್ಬು ನಾರುತ್ತಿವೆ, ಇತ್ತಕಡೆ ಕಿಂಚಿತ್ತೂ ಯೋಚಿಸದೇ ಮಕ್ಕಳ ರೋಗರುಜಿನಗಳಿಗೆ ಅಧಿಕಾರಿಗಳೇ ಎಡೆಮಾಡೊಕೊಡುತ್ತಿರುವುದು ಖಂಡನಾರ್ಹ.


ರಾತ್ರಿ ವೇಳೆ ಹಾಸ್ಟೆಲ್ ನಲ್ಲಿ ಮಕ್ಜಳೇ ಇಲ್ಲ ?



ನಿನ್ನೆ ರಾತ್ರಿ ಅಕ್ಕೂರು ಹಾಸ್ಟೆಲ್ ಗೆ ಭೇಟಿ ನೀಡಿದಾಗ ಇಪ್ಪತ್ತೊಂದು ಮಕ್ಕಳ ಪೈಕಿ ಒಬ್ಬನೂ ಇಲ್ಲದಿರುವುದು ಹಾಸ್ಟೆಲ್ ನಿರ್ವಹಣೆ ಬಗ್ಗೆ ಅಧಿಕಾರಿಗಳು ತೋರುತ್ತಿರುವ ನಿಷ್ಕಾಳಜಿಯನ್ನು ತೋರಿಸುತ್ತದೆ, ಮಕ್ಕಳಿಲ್ಲದಿದ್ದರೂ ಲೆಕ್ಕವಂತೂ ಪಕ್ಕ ಇರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ, ಅಕ್ಕೂರು ಮತ್ತು ಕೋಡಂಬಳ್ಳಿ ಗ್ರಾಮಗಳಲ್ಲಿ ಕೇವಲ ಇಪ್ಪತ್ತೊಂದು ಮಕ್ಕಳಿದ್ದು ಎರಡು ಮಕ್ಕಳು ಕಡಿಮೆಯಾದರೂ ಹಾಸ್ಟೆಲ್ ಮುಚ್ಚಬಹುದಾಗಿದೆ.
ನಿರ್ವಹಣೆ ಮತ್ತು ಊಟದ ಖರ್ಚಿಗಾಗಿ ನೀಡುವ ಅನುದಾನದ ಬಗ್ಗೆ ತನಿಖೆ ನಡೆಸಿದರೆ ಅಧಿಕಾರಿಗಳ ಗೋಸುಂಬೆತನ ಬಟಾ ಬಯಲಾಗುವುದರಲ್ಲಿ ಅನುಮಾನವೇ ಇಲ್ಲ.


ಭವನಗಳ ಮಾಹಿತಿಯೇ ಅಧಿಕಾರಿಗಳಿಗೆ ಗೊತ್ತಿಲ್ಲ



ಅಂಬೇಡ್ಕರ್, ರಾಂ ಭವನ, ಸೇವಾಲಾಲ್, ಬಂಜಾರ, ಛಲವಾದಿ, ಭೋವಿ, ಮಾದಿಗರ ಭವನಗಳ ನಿರ್ಮಾಣಕ್ಕಾಗಿ ಬಿಡುಗಡೆ ಮಾಡಲಾದ ಅನುದಾನಗಳ ಬಗ್ಗೆ ಅಧಿಕಾರಿಗಳು ಮತ್ತು ಇಲಾಖಾ ಸಿಬ್ಬಂದಿಗಳಿಗೆ ನಿಖರವಾದ ಮಾಹಿತಿಯೇ ಇಲ್ಲ, 
ನಗರದ ಅಂಬೇಡ್ಕರ್ ಭವನವೂ ಸೇರಿದಂತೆ ತಾಲ್ಲೂಕಿನಲ್ಲಿ ಅರವತ್ಮೂರು ಭವನಗಳನ್ನು ನಿರ್ಮಿಸಲು ಅನುದಾನ ಬಿಡುಗಡೆಯಾಗಿದೆಯಾದರೂ, ಬಹುತೇಕ ಭವನಗಳಿಗೆ ನಿವೇಶನವಿಲ್ಲದೆ ಹಣ ಬಿಡುಗಡೆ ಮಾಡಲಾಗಿದೆ, ಪಿಡಿಓ ಗೆ ಅರ್ಜಿ ಸಲ್ಲಿಸಲಾಗಿದೆ ಎಂದು ಒಂಭತ್ತು ವರ್ಷಗಳಿಂದಲೂ ತೋರಿಸುತ್ತಿರುವುದು ಅನುಮಾನಕ್ಕೆಡೆ ಮಾಡಿಕೊಡುತ್ತದೆ.
ನಗರದ ಅಂಬೇಡ್ಕರ್ ಭವನ ೨೦೧೦ ರಿಂದಲೂ ಕೆಲಸ ನಡೆಯುತ್ತಿದ್ದರೆ, ನೀಲಕಂಠನಹಳ್ಳಿ ಯ ಭವನ ಸಮಾಜ ಕಲ್ಯಾಣ ಇಲಾಖೆ ಯ ಹೆಸರಿಲ್ಲದೆ ಬೇರೆ ಹೆಸರಿನಲ್ಲಿ ಪ್ರತಿಷ್ಠಾಪನೆಗೊಂಡಿದೆ.
ಕೋಡಿಹೊಸಹಳ್ಳಿ ಗ್ರಾಮದ ಭವನ ನಿರ್ಮಾಣವಾಗಿದ್ದರೂ ಸಹ ಇವರ ದಾಖಲೆಯಲ್ಲಿ ಕಾಮಗಾರಿ ಪ್ರಾರಂಭಿಸಬೇಕಾಗಿದೆ ಎಂದೇ ತೋರಿಸಲಾಗಿದೆ.


ಬೇಜಾವಬ್ದಾರಿಯ ಸಿಬ್ಬಂದಿ ಅರಿಯದ ಅಧಿಕಾರಿ


ಮೇಲಿನ ದಾಖಲೆಗಳನ್ನು ಕೇಳಿದರೆ ನಾನು ಹೊಸ ಅಧಿಕಾರಿ ಏನೇನೂ ಗೊತ್ತಿಲ್ಲ ಎನ್ನುವ ಸಹಾಯಕ ನಿರ್ದೇಶಕ ಕಿರಣ ರವರ ವಾದವಾದರೆ, ನಮ್ಮತ್ರ ಇರೋದೆ ಈ ದಾಖಲೆ ಬೇಕಿದ್ದರೆ ರಾಮನಗರದಲ್ಲಿ ತೆಗೆದುಕೊಳ್ಳಿ, ಎನ್ನುವ ಸಿಬ್ಬಂದಿಗಳು ಒಂದೆಡೆ, ಒಬ್ಬನೇ ವ್ಯಕ್ತಿ ಎಷ್ಟು ಜನರ ಅರ್ಜಿಗಳನ್ನು ಹಿಡಿದುಕೊಂಡು ಬಂದರೂ ಸಹಿ ಮಾಡುತ್ತೀರಾ ಎಂಬ ಪ್ರಶ್ನೆಗೆ ಹೌದು ಎಂದೆ ಹೇಳುವ ಸಿಬ್ಬಂದಿಯ ಕೊಬ್ಬಿದ ಉತ್ತರ ನಿಜಕ್ಕೂ *ಮೆಚ್ಚಲೇಬೇಕು!?*  ಇನ್ನೂ ಹಿಂದುಳಿದ ಇಲಾಖೆಯಲ್ಲಿ ಉಂಡವನೇ ಜಾಣ ಎಂಬುದರಲ್ಲಿ ಎರಡು ಮಾತಿಲ್ಲ.


ದಲ್ಲಾಳಿ ಕೆಲಸಕ್ಕೆ ಕಡಿವಾಣ ಹಾಕಿ


ಯಾವುದೇ ರೀತಿಯ ಸಹಾಯಧನವಾಗಲಿ (ಅಶಕ್ತರನ್ನು ಹೊರತುಪಡಿಸಿ) ನೇರ ಆ ವ್ಯಕ್ತಿಯೇ ತನ್ನ ದಾಖಲಾತಿಗಳನ್ನು ಖುದ್ದಾಗಿ ಸಲ್ಲಿಸಿದ ನಂತರ ಪರಿಶೀಲಿಸಿ ಮಂಜೂರು ಮಾಡಬೇಕು, ನಂತರ ಆ ಫಲಾನುಭವಿಯೇ ಅವುಗಳನ್ನು ಉಪಯೋಗಿಸುತ್ತಿದ್ದಾನೆಯೇ ಎಂಬುದನ್ನು ಸಂಬಂಧಿಸಿದ ಅಧಿಕಾರಿ ಅಥವಾ ಸಿಬ್ಬಂದಿ ಪರಿಶೀಲನೆ ಮಾಡಿದರೆ ಕಮಿಷನ್ ಗಾಗಿ ದಾಖಲೆಗಳನ್ನು ಹೊತ್ತು ತರುವ ದಲ್ಲಾಳಿಗಳು ಮತ್ತು ಯಾರದೋ ಹೆಸರಿನಲ್ಲಿ ಪಡೆದು ಮತ್ಯಾರೋ ಅನುಭವಿಸುವುದು ತಪ್ಪಿ ಸಮುದಾಯದ ನಿಜವಾದ ಬಡವ ಬಲ್ಲಿದನಾಗಲು ಸಹಕಾರಿಯಾಗುತ್ತದೆ.


(*ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರ ಕಛೇರಿಯಲ್ಲಿ ಮಾಹಿತಿ ಪಡೆಯುತ್ತಿದ್ದಾಗ ಒಬ್ಬನೇ ವ್ಯಕ್ತಿ ನಾಲ್ಕು ಮಂದಿಯ ದಾಖಲೆಗಳನ್ನು ಹಿಡಿದು ಸಹಿಗಾಗಿ ಬಂದಿದ್ದನ್ನು ಖುದ್ದಾಗಿ ನೋಡಿ ಇಂತಹ ವ್ಯಕ್ತಿಗಳ ಬಗ್ಗೆ ಜಾಗರೂಕರವಾಗಿರುವಂತೆ ತಿಳಿಸಿದ್ದೇನೆ*)
ಈ ಎಲ್ಲಾ ಮಾಹಿತಿಯ ನಂತರ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಕಿರಣ್ ರವರನ್ನು ಮಾತಿಗೆಳೆದಾಗ ನಮ್ಮ ಇಲಾಖೆಯ ಸಿಬ್ಬಂದಿಗಳಿಗೆ ಕಛೇರಿಗೆ ಬರುವ ಯಾರನ್ನು ಸತಾಯಿಸದೇ ನ್ಯಾಯಯುತವಾಗಿ ಕೆಲಸ ಮಾಡಿಕೊಡಿ ಎಂದು ನಿರ್ದೇಶನ ನೀಡಿದ್ದೇನೆ.
ಮತ್ತು ಫಲಾನುಭವಿಗಳು ನೇರವಾಗಿ ಇಲಾಖೆಗೆ ಬಂದು ಮಾಹಿತಿ ಪಡೆದು ತಮ್ಮ ದೊರಕಬೇಕಾದ ಮೂಲಭೂತ ಸೌಕರ್ಯಗಳನ್ನು ಹಾಗೂ ಸವಲತ್ತುಗಳನ್ನು ಪಡೆದುಕೊಳ್ಳಿರಿ, ಯಾವ ಮಧ್ಯವರ್ತಿಗಳಿಗೂ ಕಮಿಷನ್ ನೀಡದೆ ಎಲ್ಲವನ್ನೂ ನೀವೆ ಪಡೆದುಕೊಂಡು ಸ್ವಾಭಿಮಾನಿಯಾಗಿ ಬದುಕುವುದನ್ನು ರೂಢಿಸಿಕೊಳ್ಳಿರಿ, ಇಲಾಖೆ ಎಂದಿಗೂ ನಿಮ್ಮ ಜೊತೆ ಇರುತ್ತದೆ ಎಂದು ಕರೆನೀಡಿದರು.


ಗೋ ರಾ ಶ್ರೀನಿವಾಸ...
ಮೊ:9845856139.


ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ
ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ

ರಾಮನಗರ/ಚನ್ನಪಟ್ಟಣ: (ವಿಮರ್ಶಾತ್ಮಕ ಲೇಖನ)

ನಗರದ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಪ್ರವರ ಹವ್ಯಾಸಿ ನಾಟಕ ತಂಡವು ನಡೆಸಿಕೊಟ್ಟ ಪೂರ್ಣ ಚ

ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.
ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.

ಚನ್ನಪಟ್ಟಣ :  ಚನ್ನಪಟ್ಟಣದಲ್ಲಿ ಮಹಿಳೆಯರೇ ಪೌರಾಣಿಕ ನಾಟಕವನ್ನು ಅಭ್ಯಾಸ ಮಾಡಿ ಬಯಲು ಮಂದಿರದಲ್ಲಿ ಪ್ರಸ್ತುತ ಪಡಿಸುತ್ತಿರುವುದು ವಿಶೇಷವಾಗಿದೆ. ಪೌರಾಣಿಕ

ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು
ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು

ಚನ್ನಪಟ್ಟಣ: ನಗರದ ಶ್ರೀ ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ಇದೇ ಮಾರ್ಚ್ ತಿಂಗಳ ಹತ್ತನೇ ತಾರಿಖಿನ ಭಾನುವಾರ ಮಧ್ಯಾಹ್ನ ತಾಲೂಕಿನಲ್ಲಿ ಇದೇ ಪ್ರಪ್ರಥ

ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್
ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್

ರಾಮನಗರ: ಶೂದ್ರರನ್ನು ವರ್ಣ ನೀತಿಯಿಂದಲೆ ವೈದಿಕರು ಆಳಿದರು. ಇಂದಿಗೂ ಸಹ ವೈದಿಕರು ರಾಮನನ್ನು ನಮ್ಮ ಮೇಲೆ ಹೇರುವ ಮೂಲಕ ಮತ್ತೆ ಪೂರ್ವಕಾಲಕ್ಕೆ ಕರೆದು

ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ

ರಾಮನಗರ, ಫೆ. 16  ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಫೆ.16ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆನಡೆದ ಉಪ ಚುನ

ವೈಜ್ಞಾನಿಕ ಮನೋವೃತ್ತಿ:ಸಾಂವಿಧಾನಿಕ ಕರ್ತವ್ಯ ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ

ರಾಮನಗರ; ಮಾನವ ಹಕ್ಕುಗಳನ್ನು ಯಾರೂ ಕೊಡುವುದಿಲ್ಲ, ವ್ಯಕ್ತಿಗಳಿಗೆ ಅವುಗಳಿಗೆ ಜನ್ಮತಃ ದಕ್ಕಿರುತ್ತವೆ. ಅವುಗಳನ್ನು ಯಾರೂ ಕೊಡುವುದಿಲ್ಲವಾದ್ದರಿ

ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ
ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ

ರಾಮನಗರ: ರಾಜ್ಯ ವಿಧಾನ ಸಭೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದ್ದು,  ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಇಂದು ಮಸ್ಟರಿಂಗ್ ಕಾರ್ಯ ಮುಗಿದು, ಮತಗಟ್ಟೆ ಸ

ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು
ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು

ರಾಮನಗರ: ಚನ್ನಪಟ್ಟಣ: ವೈದ್ಯ ಸಿಬ್ಬಂದಿಯಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ತಿಂಗಳು 20 ದಿನಗಳ ಗಂಡು ಶಿಶುವೊಂದು ಪ್ರಾಣ ಕಳೆದುಕೊ

ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್
ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್

ರಾಮನಗರ, ಫೆ. 12:   ನಾವು ರಾಮನಗರ ಜಿಲ್ಲೆಯವರಲ್ಲಾ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಗ್ರೇಟ್ ಬೆಂಗಳೂರು ಜಿಲ್ಲೆ ಮಾಡುವ ಬಗ್ಗೆ ಲೋಕಸಭಾ ಚ

ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್
ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್


ರಾಮನಗರ : ಫೆ 10 ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಕೇವಲ ಹಿಂದುತ್ವವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಭಾರತದ

Top Stories »  


Top ↑