Tel: 7676775624 | Mail: info@yellowandred.in

Language: EN KAN

    Follow us :


ಮಕ್ಕಳ ಸಾಹಿತ್ಯ ಪ್ರತಿಭೆ ಮೊಬೈಲ್ ನಿಂದ ಕಮರಿಹೋಗುತ್ತಿದೆ ಸರ್ವಾಧ್ಯಕ್ಷ ಆನಂದ್

Posted date: 14 Feb, 2019

Powered by:     Yellow and Red

ಮಕ್ಕಳ ಸಾಹಿತ್ಯ ಪ್ರತಿಭೆ ಮೊಬೈಲ್ ನಿಂದ ಕಮರಿಹೋಗುತ್ತಿದೆ ಸರ್ವಾಧ್ಯಕ್ಷ ಆನಂದ್

ಗೋಷ್ಠಿ ೦೧


ಇಂದಿನ ಮಕ್ಕಳ ಸಾಹಿತ್ಯ ಪ್ರತಿಭೆ ತಂತ್ರಜ್ಞಾನದ ಬಳಕೆಗಳಾದ ಮೊಬೈಲ್, ಟಿವಿ ಮತ್ತು ಕಂಪ್ಯೂಟರ್ ನಿಂದ ಕಮರಿಹೋಗುತ್ತಿದೆ ಎಂದು ರತ್ನಾತನಯಾನಂದ ಕಾವ್ಯನಾಮದಿಂದ ಪ್ರಖ್ಯಾತರಾದ ಬಾಲಕವಿ ಕುಮಾರ ಎ ಎಂ ಆನಂದ ವಿಷಾದ ವ್ಯಕ್ತಪಡಿಸಿದರು.

ಅವರು ಇಂದು ಆದಿಚುಂಚನಗಿರಿ ಶಾಖಾ ಮಠದ ಅಂಧರ ಶಾಲೆಯ ಸಭಾಂಗಣದಲ್ಲಿ ಏರ್ಪಡಿಸಿದ್ದ ರಾಮನಗರ ಜಿಲ್ಲಾ ಮಕ್ಕಳ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರ ಭಾಷಣದಲ್ಲಿ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದರು.


ನಮ್ಮ ಕನ್ನಡ ಭಾಷೆಗೆ ಎರಡೂವರೆ ಸಾವಿರ ವರ್ಷಗಳ ಇತಿಹಾಸವಿದೆ, ಪಂಪ, ರನ್ನ, ಪೊನ್ನ, ಕಾಳಿದಾಸ, ಕುವೆಂಪು, ಕಾರಂತ, ಬೇಂದ್ರೆ, ಮಾಸ್ತಿಯವರಂತಹ ಅನೇಕ ಸಾಹಿತಿಗಳು ಈ ನಾಡಿನ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ.

ಕುವೆಂಪು ರವರು ತಮ್ಮ ಬಾಲ್ಯದಲ್ಲಿ ಸಾಹಿತ್ಯ ರಚನೆಯಲ್ಲಿ ತೊಡಗಿದ್ದಾಗ ಹಲವಾರು ಮಂದಿ ಅವನೊಬ್ಬ ಹುಚ್ಚ ಎಂದು ಜರಿದರಂತೆ, ಮಾಡುವ ಕೆಲಸ ಬಿಟ್ಟು ಅದೇನೋ ಗೀಚುತ್ತಿದ್ದಾನೆ ಎಂದು ಹಲವಾರು ಮಂದಿ ತೆಗಳಿದರಂತೆ, ಆದರೂ ಅವರು ತಮ್ಮ ಸಾಹಿತ್ಯ ಕೃಷಿಯನ್ನು ಮುಂದುವರೆಸಿದ್ದರಿಂದ ಯುಗದ ಕವಿಯಾಗಿ, ಜಗದ ಕವಿಯಾಗಿ, ವಿಶ್ವಮಾನವನಾಗಿ, ರಾಷ್ಟ್ರಕವಿಯಾಗಿ ಜ್ಞಾನಪೀಠ ಪ್ರಶಸ್ತಿಯನ್ನು ಪಡೆದರು.

ಇಂದು ನನಗೂ ಸಹ ಅನೇಕ ಮಂದಿ ಇದರಿಂದ ಹೊಟ್ಟೆ ತುಂಬುವುದಿಲ್ಲ, ಬೇರೆ ಏನಾದರೂ ಮಾಡು ಎಂದೇ ಕಾಲೆಳೆಯುತ್ತಿದ್ದಾರೆ, ಆದರೂ ನಾನು ನನಗೆ ದಕ್ಕಿದ ಕಾವ್ಯ ಲೋಕವನ್ನು ಅಪ್ಪಿಕೊಂಡಿದ್ದೇನೆ ಎಂದರು.


ನಮ್ಮ ರಾಮನಗರ ಜಿಲ್ಲೆ ಸಾಂಸ್ಕೃತಿಕವಾಗಿ ಅತ್ಯದ್ಭುತ ಜಿಲ್ಲೆ, ರೇಷ್ಮೆ ನಗರಿಯಾಗಿ ರಾಮನಗರ, ಬೊಂಬೆಗಳ ನಾಡಾಗಿ ಚನ್ನಪಟ್ಟಣ, ಗ್ರಾನೈಟ್ ಗೆ ಹೆಸರಾದ ಕನಕಪುರ, ಬೆಟ್ಟ ಗುಡ್ಡಗಳಿಗೆ ಹೆಸರುವಾಸಿಯಾದ ಮಾಗಡಿ ಹೀಗೆ ಪೌರಾಣಿಕ ಮತ್ತು ಐತಿಹಾಸಿಕವಾಗಿ ಶ್ರೀಮಂತ ವಾದ ಮಾಗಡಿ ಕೆಂಪೇಗೌಡರು, ರಾಜರತ್ನಂ, ದೇ ಜವರೇಗೌಡ, ಪ್ರೊಫೆಸರ್ ವೆಂಕಟಗಿರಿಗೌಡ, ವಿ ವೆಂಕಟಪ್ಪ, ಪೂಜ್ಯ ಕರಿಯಪ್ಪ, ಕೆಂಗಲ್ ಹನುಮಂತಯ್ಯ, ಬಾಲಗಂಗಾಧರನಾಥ ಸ್ವಾಮೀಜಿ, ಶಿವಕುಮಾರ ಸ್ವಾಮೀಜಿ ಮುಂತಾದವರ ಕೊಡುಗೆ ಬಹಳಷ್ಟಿದೆ, ಇಂತಹ ಮಹಾನುಭಾವರನ್ನು ಪಡೆದ ನಾವೇ ಧನ್ಯರು.

ಇವರೆಲ್ಲರ ಆಶೀರ್ವಾದಗಳೊಂದಿಗೆ ಭವಿಷ್ಯದ ಸಾಹಿತಿಗಳಾಗಿ ನೀವೆಲ್ಲರೂ ಉತ್ತುಂಗಕ್ಕೇರಬೇಕು ಎಂದು ತನ್ನದೇ ವಯಸ್ಸಿನ ಮಕ್ಕಳಿಗೆ ಕರೆ ನೀಡಿದರು.


ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸಿ ಎನ್ ಅಶೋಕ್ ರವರು ಮಾತನಾಡಿ ಮಕ್ಕಳ ಸಾಹಿತ್ಯದ ಬಗ್ಗೆ ಶ್ರೀ ಮಠದ ಕಾಳಜಿ ಮೆಚ್ಚುವಂತದ್ದು, ಸರ್ಕಾರ ಮಾಡಬೇಕಾದ ಕೆಲಸವನ್ನು ಶ್ರೀ ಮಠಮಾಡುತ್ತಿದೆ, ಈ ರೀತಿಯ ಮಕ್ಕಳ ಸಾಹಿತ್ಯ ಸಮ್ಮೇಳನಗಳು ಗ್ರಾಮೀಣ ಪ್ರದೇಶಗಳಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆಯುವಂತಾಗಲೂ ಶ್ರೀ ಮಠದ ವತಿಯಿಂದ ಮಾತ್ರ ಸಾಧ್ಯ ಎಂದರು.


ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಇನ್ನೋರ್ವ ಬಾಲಕವಿ ರಾಜೇಶ್ ಮಕ್ಕಳ ಸಾಹಿತ್ಯ ಪ್ರತಿಭೆಯನ್ನು ಗುರುತಿಸಲು ರಾಜ್ಯದಲ್ಲಿಯೇ ಪ್ರಥಮವಾಗಿ ನಮ್ಮ ಜಿಲ್ಲೆಯಲ್ಲಿ ಮಕ್ಕಳ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಿರುವುದು ನಮ್ಮೆಲ್ಲರ ಸುದೈವ, ಅನೇಕ ಪ್ರತಿಭಾವಂತ ಮಕ್ಕಳ ಸಾಹಿತ್ಯ ರಚನೆ ಮನದಲ್ಲೇ ಮುರುಟಿಹೋಗುತ್ತಿದೆ, ಅದು ಬೆಳಕಿಗೆ ಬರಲು ಈ ರೀತಿಯ ಸಮ್ಮೇಳನಗಳು ಅತ್ಯವಶ್ಯಕ ಎಂದರು.


ಬಿಜಿಎಸ್ ಸಂಸ್ಥೆಯ ಮಕ್ಕಳ ಬ್ಯಾಂಡ್ ಸೆಟ್, ಹಾಗೂ ಕನ್ನಡ ಸಂಸ್ಕೃತಿ ಇಲಾಖೆಯ ಕಲಾವಿದರಿಂದ ಡೊಳ್ಳುಕುಣಿತ, ಪೂಜಾಕುಣಿತದ ಕಲಾತಂಡಗಳೊಂದಿಗೆ ಬೆಳ್ಳಿರಥದಲ್ಲಿ ಎಲ್ಲಾ ಅಧ್ಯಕ್ಷರನ್ನು ಕೂರಿಸಿ ಮೆರವಣಿಗೆ ಮೂಲಕ ಸಭಾಂಗಣಕ್ಕೆ ಕರೆತರಲಾಯಿತು.


ಪ್ರಥಮ ಗೋಷ್ಠಿಯ ವೇದಿಕೆಯಲ್ಲಿ ಶ್ರೀ ಶ್ರೀ ಅನ್ನದಾನೇಶ್ವರನಾಥ ಸ್ವಾಮೀಜಿ, ಮೆರವಣಿಗೆಗೆ ಚಾಲನೆ ನೀಡಿದ ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಂ ರಾಜು, ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯ ಡಾ ಎ ಟಿ ಶಿವರಾಮು, ಶ್ರೀ ಆದಿಚುಂಚನಗಿರಿ ಮಾಸಿಕ ಪತ್ರಿಕೆಯ ಸಂಪಾದಕರಾದ ವಿ ಎನ್ ಗೌಡ, ಮಕ್ಕಳ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಿ ಸಿ ರಾಮಚಂದ್ರ, ಡಾ ಎಂ ಭೈರೇಗೌಡ, ನಂ ಶಿವಲಿಂಗಯ್ಯ, ಪಿ ಶಿವರಾಮು, ಕಾಳೇಗೌಡ, ಹಾಜರಿದ್ದರು.


ಗೋಷ್ಠಿ ೦೨


ಬರೆದುದೆಲ್ಲವೂ ಕವನವಲ್ಲ

ಮಧ್ಯಾಹ್ನ ೦೨:೩೦ ಕ್ಕೆ ಪ್ರಾರಂಭವಾದ ಎರಡನೇ ಗೋಷ್ಠಿಯು ಮಕ್ಕಳ ಸಾಹಿತ್ಯಾಭಿರುಚಿಯನ್ನು ತನ್ನದೇ ಭಾಷೆಯಲ್ಲಿ ತಮ್ಮ ವಯಸ್ಸಿನ ಮಕ್ಕಳಿಗೆ ಹಾಗೂ ಹಿರಿಯರಿಗೆ ಉಣಬಡಿಸುವ ಮೂಲಕ ತಮ್ಮ ಸಾಹಿತ್ಯ ಪ್ರತಿಭೆಯನ್ನು ಪ್ರಚುರಪಡಿಸಿದರು.


ಕವಿಗೋಷ್ಠಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಾಲ ಕವಯತ್ರಿ *ಎಸ್ ಮಧುಶ್ರೀ* ಬರೆದುದೆಲ್ಲವೂ ಕವಿತೆಯಾಗುವುದಿಲ್ಲ, ಕವಿತೆ ಬರೆಯಲು ಒಂದು ನಿರ್ದಿಷ್ಟ ವಸ್ತು, ಸಂಗತಿ ಇರಬೇಕು, ಅದರ ತಿರುಳನ್ನು ಅರಿತು ಆಸ್ವಾದಿಸಿ, ಅನುಭವಿಸಿ ಬರೆದರೆ ಮಾತ್ರ ಅದು ಕವಿತೆಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.


ನಾಲ್ಕು ತಾಲ್ಲೂಕಿನ ಇಪ್ಪತೈದಕ್ಕೂ ಹೆಚ್ಚು ಮಕ್ಕಳು ಕವಿಗೋಷ್ಠಿಯಲ್ಲಿ ಭಾಗವಹಿಸಿ ವಿವಿಧ ರೀತಿಯ ಕವನಗಳನ್ನು ವಾಚಿಸಿ ನೆರೆದಿದ್ದ ಹಿರಿಯರಿಂದ ಶಹಭಾಶ್ ಗಿಟ್ಟಿಸಿ ಪ್ರಶಂಸೆಗೆ ಪಾತ್ರರಾದರು.


ವೇದಿಕೆಯಲ್ಲಿ ಶ್ರೀ ಶ್ರೀ ಅನ್ನದಾನೇಶ್ವರನಾಥ ಸ್ವಾಮೀಜಿ, ಸರ್ವಾಧ್ಯಕ್ಷ ಎ ಎಂ ಆನಂದ, ಕವಯತ್ರಿ ಶೈಲಾಶ್ರೀನಿವಾಸ, ಸಾಮಾಜಿಕ ಹೋರಾಟಗಾರ್ತಿ ಕೆ ಆರ್ ಸೌಮ್ಯಾ, ಹೆಚ್ ಸಿ ಚಂದ್ರಶೇಖರ ಉಪಸ್ಥಿತರಿದ್ದರು.


ಗೋಷ್ಠಿ ೦೩


 ಓದದೆ ಬಂದು ಪಾಠಮಾಡುವ ಶಿಕ್ಷಕ, ಪಾಠ ಮಾಡಿದ ನಂತರವೂ ಓದದ ವಿದ್ಯಾರ್ಥಿ ಇಬ್ಬರೂ ನಿಷ್ಪ್ರಯೋಜಕರು

ವಿಚಾರಗೋಷ್ಠಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಮತ್ತೋರ್ವ ಬಾಲಕವಿ *ಜಿ ಉದಯಕುಮಾರ್* ಓದಿಕೊಳ್ಳದೆ ಶಾಲೆಗೆ ಬಂದು ಮಕ್ಕಳಿಗೆ ಪಾಠ ಹೇಳುವ ಶಿಕ್ಷಕ ಮತ್ತು ಪಾಠ ಮಾಡಿದ ನಂತರವೂ ಮತ್ತೊಮ್ಮೆ ಓದದೆ ಇರುವ ವಿದ್ಯಾರ್ಥಿ ಇಬ್ಬರೂ ನಿಷ್ಪ್ರಯೋಜಕರು ಎಂದು ಮಾರ್ಮಿಕವಾಗಿ ನುಡಿದು ಶಿಕ್ಷಕರು ಮತ್ತು ಮಕ್ಕಳಿಗೆ ನೀತಿಪಾಠ ಹೇಳಿದರು.


ಕುವೆಂಪುರವರ ವಿಚಾರ ಸಾಹಿತ್ಯವನ್ನು ನಿರರ್ಗಳವಾಗಿ ಒರೆಗೆ ಹಚ್ಚಿದ ಉದಯಕುಮಾರ್ ಇಂದು ನಮಗೆ ಕೇವಲ ಔಪಚಾರಿಕ ವಿಚಾರಗಳು ಬೇಡ, ವೈಚಾರಿಕತೆ ತುಂಬಿದ ಸಾಹಿತ್ಯ ಬೇಕಾಗಿದೆ, ಈ ನಿಟ್ಟಿನಲ್ಲಿ ಇಂದಿನ ಮಕ್ಕಳು ತೊಡಗಿಸಿಕೊಳ್ಳಬೇಕೆಂದು ಕರೆನೀಡಿದರು.


ನಾಲ್ಕು ತಾಲ್ಲೂಕಿನ ಮೂವತೈದಕ್ಕೂ ಹೆಚ್ಚು ಮಕ್ಕಳು ಅನೇಕ ವಿಷಯಗಳನ್ನು ಮಂಡಿಸುವುದರ ಮೂಲಕ ವೇದಿಕೆಯ ಗಣ್ಯರನ್ನು ಚಕಿತಗೊಳಿಸಿ ಪ್ರಶಂಸೆಗೆ ಪಾತ್ರರಾದರು.


ವೇದಿಕೆಯಲ್ಲಿ ಸ್ವಾಮೀಜಿ, ಸರ್ವಾಧ್ಯಕ್ಷ ಸೇರಿದಂತೆ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಗಂಗಮಾರೇಗೌಡ, ಚನ್ನಪಟ್ಟಣ ಕ್ಷೇತ್ರ ಶಿಕ್ಷಣಾಧಿಕಾರಿ ಆರ್ ಎಸ್ ಸೀತಾರಾಮು, ದೊಡ್ಡಬಾಣಗೆರೆ ಮಾರಣ್ಣ, ಹೆಚ್ ಎಂ ನಾಗರಾಜೇಗೌಡ, ಹಿರಿಯ ರೈತ ಮುಖಂಡ ಸಿ ಪುಟ್ಟಸ್ವಾಮಿ, ಗೋ ರಾ ಶ್ರೀನಿವಾಸ, ಸಿ ಸಿ ರಾಮಲಿಂಗೇಶ್ವರ, ಉಪನ್ಯಾಸಕ ಕಬ್ಬಾಳೇಗೌಡ, ದೊಡ್ಡ ಈರೇಗೌಡ, ಜಿ ಎಸ್ ಚಂದುಕುಮಾರ್, ಚಂದ್ರಶೇಖರ ಉಪಸ್ಥಿತರಿದ್ದರು.


ಸಮಾರೋಪ ಸಮಾರಂಭದಲ್ಲಿ ಎಲ್ಲಾ ಗೋಷ್ಠಿಯ ಅಧ್ಯಕ್ಷರು, ಭಾಗವಹಿಸಿದ ಬಾಲ ಪ್ರತಿಭೆಗಳು, ಗಣ್ಯರು ಮತ್ತು ಮಕ್ಕಳ ಸಾಹಿತ್ಯ ಸಮ್ಮೇಳನದ ಜಿಲ್ಲಾ ಮತ್ತು ತಾಲ್ಲೂಕು ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.

ಇದೇ ವೇಳೆ ಅನೇಕ ಗಣ್ಯರು ಮಕ್ಕಳ ಸಾಹಿತ್ಯದ ಬಗ್ಗೆ ಮಾತನಾಡಿದರು, ಶ್ರೀ ಶ್ರೀ ಅನ್ನದಾನೇಶ್ವರನಾಥ ಸ್ವಾಮೀಜಿ ಆಶೀರ್ವಚನ ನೀಡಿದರು.


ಗೋ ರಾ ಶ್ರೀನಿವಾಸ...

ಮೊ:೯೮೪೫೮೫೬೧೩೯.

(9845856139).


ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ
ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ

ರಾಮನಗರ/ಚನ್ನಪಟ್ಟಣ: (ವಿಮರ್ಶಾತ್ಮಕ ಲೇಖನ)

ನಗರದ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಪ್ರವರ ಹವ್ಯಾಸಿ ನಾಟಕ ತಂಡವು ನಡೆಸಿಕೊಟ್ಟ ಪೂರ್ಣ ಚ

ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.
ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.

ಚನ್ನಪಟ್ಟಣ :  ಚನ್ನಪಟ್ಟಣದಲ್ಲಿ ಮಹಿಳೆಯರೇ ಪೌರಾಣಿಕ ನಾಟಕವನ್ನು ಅಭ್ಯಾಸ ಮಾಡಿ ಬಯಲು ಮಂದಿರದಲ್ಲಿ ಪ್ರಸ್ತುತ ಪಡಿಸುತ್ತಿರುವುದು ವಿಶೇಷವಾಗಿದೆ. ಪೌರಾಣಿಕ

ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು
ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು

ಚನ್ನಪಟ್ಟಣ: ನಗರದ ಶ್ರೀ ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ಇದೇ ಮಾರ್ಚ್ ತಿಂಗಳ ಹತ್ತನೇ ತಾರಿಖಿನ ಭಾನುವಾರ ಮಧ್ಯಾಹ್ನ ತಾಲೂಕಿನಲ್ಲಿ ಇದೇ ಪ್ರಪ್ರಥ

ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್
ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್

ರಾಮನಗರ: ಶೂದ್ರರನ್ನು ವರ್ಣ ನೀತಿಯಿಂದಲೆ ವೈದಿಕರು ಆಳಿದರು. ಇಂದಿಗೂ ಸಹ ವೈದಿಕರು ರಾಮನನ್ನು ನಮ್ಮ ಮೇಲೆ ಹೇರುವ ಮೂಲಕ ಮತ್ತೆ ಪೂರ್ವಕಾಲಕ್ಕೆ ಕರೆದು

ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ

ರಾಮನಗರ, ಫೆ. 16  ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಫೆ.16ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆನಡೆದ ಉಪ ಚುನ

ವೈಜ್ಞಾನಿಕ ಮನೋವೃತ್ತಿ:ಸಾಂವಿಧಾನಿಕ ಕರ್ತವ್ಯ ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ

ರಾಮನಗರ; ಮಾನವ ಹಕ್ಕುಗಳನ್ನು ಯಾರೂ ಕೊಡುವುದಿಲ್ಲ, ವ್ಯಕ್ತಿಗಳಿಗೆ ಅವುಗಳಿಗೆ ಜನ್ಮತಃ ದಕ್ಕಿರುತ್ತವೆ. ಅವುಗಳನ್ನು ಯಾರೂ ಕೊಡುವುದಿಲ್ಲವಾದ್ದರಿ

ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ
ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ

ರಾಮನಗರ: ರಾಜ್ಯ ವಿಧಾನ ಸಭೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದ್ದು,  ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಇಂದು ಮಸ್ಟರಿಂಗ್ ಕಾರ್ಯ ಮುಗಿದು, ಮತಗಟ್ಟೆ ಸ

ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು
ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು

ರಾಮನಗರ: ಚನ್ನಪಟ್ಟಣ: ವೈದ್ಯ ಸಿಬ್ಬಂದಿಯಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ತಿಂಗಳು 20 ದಿನಗಳ ಗಂಡು ಶಿಶುವೊಂದು ಪ್ರಾಣ ಕಳೆದುಕೊ

ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್
ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್

ರಾಮನಗರ, ಫೆ. 12:   ನಾವು ರಾಮನಗರ ಜಿಲ್ಲೆಯವರಲ್ಲಾ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಗ್ರೇಟ್ ಬೆಂಗಳೂರು ಜಿಲ್ಲೆ ಮಾಡುವ ಬಗ್ಗೆ ಲೋಕಸಭಾ ಚ

ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್
ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್


ರಾಮನಗರ : ಫೆ 10 ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಕೇವಲ ಹಿಂದುತ್ವವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಭಾರತದ

Top Stories »  


Top ↑