Tel: 7676775624 | Mail: info@yellowandred.in

Language: EN KAN

    Follow us :


ಕೋಮಾಗೆ ತೆರಳಿರುವ ಕುಶಲಕರ್ಮಿ ತರಬೇತಿ ಸಂಸ್ಥೆ

Posted date: 18 Feb, 2019

Powered by:     Yellow and Red

ಕೋಮಾಗೆ ತೆರಳಿರುವ ಕುಶಲಕರ್ಮಿ ತರಬೇತಿ ಸಂಸ್ಥೆ

ಗತಕಾಲದ ತರಬೇತಿ ಸಂಸ್ಥೆಗೆ ಒಂದೇ ಹುದ್ದೆ

ತಾಲ್ಲೂಕಿನ ಹಲವಾರು ಇಲಾಖೆಗಳ ಪೈಕಿ *ಕೈಗಾರಿಕೆ ಮತ್ತು ವಾಣಿಜ್ಯ* ಇಲಾಖೆಯೂ ಒಂದು, ನಗರದ ಹೃದಯ ಭಾಗದಲ್ಲಿ ಬ್ರಿಟಿಷರ ಕಾಲದ ಬಂಗಲೆಯಲ್ಲಿ ಗತವೈಭವ ಸಾರಬೇಕಾಗಿದ್ದ ಈ ಇಲಾಖೆ ಇಂದು ನೇಪಥ್ಯಕ್ಕೆ ಸರಿದು ಭೂತಬಂಗಲೆಯಾಗಿ ಪರಿವರ್ತಿತವಾಗಿರುವುದಲ್ಲದೆ ಡಿ ಗ್ರೂಪ್ ನ ಏಕವ್ಯಕ್ತಿಯ ಉಸ್ತುವಾರಿಯಲ್ಲಿ ಸಾಗುತ್ತಿದೆ. ಪ್ರಭಾರ ವಿಸ್ರರಣಾಧಿಕಾರಿಯಾಗಿ (ಮೂರು ತಾಲ್ಲೂಕಿಗೆ ಒಬ್ಬರೇ) ಪ್ರಕಾಶ್ ಎಂಬುವವರು ಆಗೊಮ್ಮೆ ಈಗೊಮ್ಮೆ ಬಂದು ಭೇಟಿ ನೀಡಿ ಹೋಗುತ್ತಿರುವುದು ಇಲಾಖೆ ಮತ್ತು ಸರ್ಕಾರದ ನಿರಾಸಕ್ತಿಯನ್ನು ತೋರಿಸುತ್ತದೆ.


ಅಂದಿನ ರಾಷ್ಟ್ರೀಯ ಹೆದ್ದಾರಿಗೆ ಸಮೀಪ

ಸ್ವಾತಂತ್ರ್ಯ ಪೂರ್ವ ಅಂದರೆ ೧೯೧೨ ರಲ್ಲಿ ಅಂದಿನ ಮೈಸೂರು ಮದ್ರಾಸ್ ಮುಖ್ಯ ರಸ್ತೆಯಾಗಿದ್ದ ಇಂದಿನ ಮಹಾತ್ಮ ಗಾಂಧಿ (ಎಂಜಿ) ರಸ್ತೆಯಲ್ಲಿ ಅಂದಾಜು ಮುಕ್ಕಾಲು ಎಕರೆ ಪ್ರದೇಶದಲ್ಲಿ ಬ್ರಿಟಿಷ್ ಕಾಲದ ಬಂಗಲೆಯಲ್ಲಿ ಪ್ರಾರಂಭವಾದ *ಕುಶಲಕರ್ಮಿ ತರಬೇತಿ ಸಂಸ್ಥೆ*ಯು ಅಂದಿನ ಕಾಲಕ್ಕೆ ತಾಲ್ಲೂಕು ಹೊರತು ಪಡಿಸಿ ಅನೇಕ ಜಿಲ್ಲೆಯ ಜನರು ಬಂದು ಇಲ್ಲಿನ ತರಬೇತಿ ಶಾಲೆಯನ್ನು ವಸ್ತುಪ್ರದರ್ಶನ ದ ರೀತಿಯಲ್ಲಿ ನೋಡಿ ಹೋಗುತ್ತಿದ್ದರು ಎಂದು ವಯೋವೃದ್ದರು ನೆನಪು ಮಾಡಿಕೊಳ್ಳುತ್ತಾರೆ.


ಬೊಂಬೆ, ಚಗರೆ, ಇಂಜಿನಿಯರಿಂಗ್, ಆಟೋಮೊಬೈಲ್

ಕರಕುಶಲ ತರಬೇತಿ ಗೆಂದೆ ಸೃಷ್ಟಿಯಾದ ಈ ಸಂಸ್ಥೆಯು ಮೊದಲ ಪ್ರಾಶಸ್ತ್ಯವನ್ನು ಬೊಂಬೆಗಳ ತಯಾರಿಸುವ ಗ್ರಾಮೀಣ ಭಾಗದ ಜನರಿಗೆ ತರಬೇತಿ ನೀಡಲು ಆರಂಭಿಸಿತು, ಜೊತೆ ಜೊತೆಯಲ್ಲಿಯೇ ಮರದ ಕೆಲಸ, ಚಗರೆ ಉದ್ಯಮ, ಜನರಲ್ ಇಂಜಿನಿಯರಿಂಗ್, ಆಟೋಮೊಬೈಲ್, ತರಬೇತಿಯನ್ನು ನೀಡುತ್ತಾ ಬಂದಿತ್ತಾದರೂ ತಂತ್ರಜ್ಞಾನ ಮುಂದುವರಿದಂತೆಲ್ಲಾ ಕುಶಲಕರ್ಮಿಗಳ ಅವಶ್ಯಕತೆ ಕಡಿಮೆಯಾಯಿತು, ತರಬೇತಿ ಪಡೆಯುವ ವಿದ್ಯಾರ್ಥಿಗಳು ಸಹ ಕಡಿಮೆಯಾಗುವುದರ ಜೊತೆಗೆ ನಿವೃತ್ತರಾದ ಸಿಬ್ಬಂದಿಗಳ  ಜಾಗಕ್ಕೆ ಮರು ಆಯ್ಕೆ ಮಾಡಿಕೊಳ್ಳದಿರುವುದು ಕಾರಣ ಎಂದು ಹೇಳುತ್ತಾರೆ.


ಜಿಲ್ಲಾ ಪಂಚಾಯತ್ ಸದಸ್ಯರು ಹೇಳಿದೋರಿಗೆ

ಜಿಲ್ಲಾ ಪಂಚಾಯತ್ ಕಾರ್ಯಕ್ರಮಗಳಲ್ಲಿ ತಾಲ್ಲೂಕಿನ ಅನುಭವವಿರುವ ಗ್ರಾಮೀಣ ಮಹಿಳೆಯರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಸನುಕೂಲವಾಗುವಂತೆ ಉಚಿತವಾಗಿ ಹೊಲಿಗೆ ಯಂತ್ರಗಳನ್ನು ನೀಡುತ್ತಾರದರೂ ಅವುಗಳು ಜಿಲ್ಲಾ ಪಂಚಾಯತ್ ಸದಸ್ಯರು ಗಳು ಸೂಚಿಸುವವರಿಗೆ ಮಾತ್ರ ದೊರಕುತ್ತವಯೇ ವಿನಹ ಎಲ್ಲಾ ಬಡವರಿಗಲ್ಲ ಎಂಬುದು ವೇದ್ಯವಾಗುತ್ತದೆ.


ಉಪಕರಣಗಳ ಕಿಟ್

ಕಸುಬು ಆಧಾರಿತ ಕುಶಲಕರ್ಮಿಗಳಾದ ಬಡಗಿ, ಗಾರೆ, ದೋಭಿ, ಕ್ಷೌರಿಕ, ಕಮ್ಮಾರಿಕೆ, ಮತ್ತು ಕಲ್ಲುಕುಟಿಕೆ ಕೆಲಸಗಾರರು ಕಸುಬನ್ನು ಅಭಿವೃದ್ಧಿ ಪಡಿಸಿಕೊಳ್ಳಲು ಸಂಬಂಧಿಸಿದ ಸುಧಾರಿತ ಉಪಕರಣಗಳ ಕಿಟ್ ನೀಡಲಾಗುತ್ತಿದೆ.


ಸಣ್ ಕೈಗಾರಿಕಾ ಸಾಲದ ಬಡ್ಡಿ

ಹಣಕಾಸು ಸಂಸ್ಥೆಗಳಿಂದ ಗರಿಷ್ಠ ೫,೦೦,೦೦೦ ರೂಪಾಯಿಗಳವರೆಗೆ ಸಾಲ ಪಡೆದ ಅತಿ ಸಣ್ಣ ಕೈಗಾರಿಕಾ ಘಟಕಗಳಿಗೆ ಶೇಕಡಾ ೭ ರ ಮೇಲ್ಪಟ್ಟ ಬಡ್ಡಿಯನ್ನು ಗರಿಷ್ಠ ಶೇಕಡಾ ೫ ರಷ್ಟು ಬಡ್ಡಿ ಹಣವನ್ನು ಸಹ ಸಹಾಯಧನವನ್ನಾಗಿ ನೀಡುತ್ತದೆ.


ರಾಜ್ಯ ಸರ್ಕಾರವು ಸಹ ಗರಿಷ್ಠ ೧೦,೦೦೦,೦೦ ರೂಪಾಯಿಗಳು, ಕೇಂದ್ರ ಸರ್ಕಾರವು ಗರಿಷ್ಠ ೨೫,೦೦೦,೦೦ ಯೋಜನಾ ವೆಚ್ಚದ ಕೈಗಾರಿಕಾ ಸೇವಾ ಘಟಕಗಳನ್ನು  ಬ್ಯಾಂಕ್ ಸಾಲದ ನೆರವಿನೊಂದಿಗೆ ಸ್ಥಾಪಿಸಲು ಉದ್ದೇಶಿಸುವವರಿಗೆ ಸಾಲ ಸೌಲಭ್ಯ ನೀಡುತ್ತದೆ.


ಉಚಿತ ಹೊಲಿಗೆ ಯಂತ್ರಗಳು ಮತ್ತು ಇನ್ನಿತರ ಕಿಟ್


ಕೋಡಂಬಳ್ಳಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಕಳೆದ ಸಾಲಿನಲ್ಲಿ ಹನ್ನೊಂದು ಮಂದಿಗೆ ಉಚಿತ ಹೊಲಿಗೆ ಯಂತ್ರಗಳು, ಇಬ್ಬರಿಗೆ ಇಸ್ತ್ರಿ ಪೆಟ್ಟಿಗೆ, ಏಳು ಮಂದಿಗೆ ಗಾರೆ ಕೆಲಸದ ಉಪಕರಣಗಳ ಕಿಟ್ ಕೊಟ್ಟಿದ್ದಾರೆ


ಅಕ್ಕೂರು ಜಿಲ್ಲಾ ಪಂಚಾಯತ್ ನಲ್ಲಿ ಹನ್ನೊಂದು ಮಂದಿಗೆ ಹೊಲಿಗೆ ಯಂತ್ರಗಳು, ಒಂದು ಇಸ್ತ್ರಿ ಪೆಟ್ಟಿಗೆ, ನಾಲ್ಕು ಗಾರೆ ಕೆಲಸದವರಿಗೆ ಕೊಟ್ಟರೆ, ನಾಲ್ಕು ಮಂದಿ ಮರಗೆಲಸದ  ವರಿಗೆ ಉಚಿತ ಕಿಟ್ ಗಳನ್ನು ನೀಡಲಾಗಿದೆ.


ಹೊಂಗನೂರು ಜಿಲ್ಲಾ ಪಂಚಾಯ್ತಿಯ‌ ಹನ್ನೊಂದು ಜನರಿಗೆ  ಜನರಿಗೆ ಉಚಿತ ಹೊಲಿಗೆ ಯಂತ್ರಗಳನ್ನು, ಕ್ಷೌರಿಕ ರಿಗೆ ಒಂದು, ಇಸ್ತ್ರಿ ಪೆಟ್ಟಿಗೆ ಮೂರು, ಒಬ್ಬ ‌ಮರಗೆಲಸ ಮತ್ತು ನಾಲ್ಕು ಮಂದಿ ಗಾರೆ‌ಕೆಲಸದವರಿಗೆ ಸುಧಾರಿತ ಕಿಟ್ ಗಳನ್ನು ವಿತರಿಸಲಾಗಿದೆ.


ಬೇವೂರು ಪಂಚಾಯತ್ ವ್ಯಾಪ್ತಿಯಲ್ಲಿ ಹನ್ನೊಂದು ಮಂದಿಗೆ ಉಚಿತ ಹೊಲಿಗೆ ಯಂತ್ರಗಳನ್ನು ಸದಸ್ಯರ ಆದೇಶದಂತೆ ನೀಡಲಾಗಿದೆ.ಒಟ್ಟಾರೆ ೫೫ ಹೊಲಿಗೆ ಯಂತ್ರಗಳು ೪೫ ಉಪಕರಣಗಳನ್ನು ನೀಡಲಾಗಿದೆ.


ಬ್ಯಾಂಕುಗಳಿಗೆ ಜಮೆಯಾದ ಬಡ್ಡಿ

ಎಲ್ಲಾ ಬ್ಯಾಂಕುಗಳಿಂದ ಕೈಗಾರಿಕಾ ಸಾಲ ಪಡೆದವರಿಗೆ ಶೇಕಡಾ ೭ ರ ಮೇಲ್ಪಟ್ಟ ಬಡ್ಡಿಗೆ ಶೇಕಡಾ ೫ ರಷ್ಟು ಒಟ್ಟಾರೆ ೯೨,೩೪೦ ರೂಪಾಯಿಗಳ ಸಹಾಯಧನವನ್ನು ಬ್ಯಾಂಕುಗಳಿಗೆ ಜಮೆ ಮಾಡಲಾಗಿದೆ.

ಹೆಚ್ ಮೊಗೇನಹಳ್ಳಿಯ ಮಂಜುಳಾ, ಹನುಮಾಪುರದೊಡ್ಡಿಯ ಹೇಮಲತಾ, ಅರಳಾಳುಸಂದ್ರ ದ ನಾಗರಾಜು, ರಾಮು, ಮುತ್ತುರಾಜು ಮತ್ತು ಸ್ವಾಮಿ, ಬಿ ವಿ ಹಳ್ಳಿಯ ಸುಮಿತ್ರ, ಸೋಮನಾಥಪುರದ ಶ್ರೀಧರ್, ವಿರೂಪಾಕ್ಷಿಪುರದ ಪ್ರಮೀಳಾ ಹಾಗೂ ರಾಂಪುರ ಗ್ರಾಮದ ಶಿವರಾಜು ಬಡ್ಡಿ ಸಹಾಯಧನವನ್ನು ಪಡೆದಿದ್ದಾರೆ.


ಹೊಸದಾಗಿ ಬಂದಿರುವವು ಧೂಳು ಹಿಡಿಯುತ್ತಿವೆ

ಮೊದಲೇ ಹಾಳಾಗುತ್ತಿರುವ ಕಟ್ಟಡದಲ್ಲಿ ಅನೇಕ ಹೊಲಿಗೆ ಯಂತ್ರಗಳು, ಹೊಸದಾಗಿ ಬಂದಿರುವ ಕುರ್ಚಿಗಳು ತುಕ್ಕು ಹಿಡಿಯುತ್ತಿವೆ, ಎರಡು ದಶಕಗಳ ಹಿಂದೆ ಇದ್ದಷ್ಟು ಉಪಕರಣಗಳು ಅಲ್ಲಿಲ್ಲ, ಇರುವ ಉಪಕರಣಗಳೆಲ್ಲವೂ ತುಕ್ಕು ಹಿಡಿಯುತ್ತಿವೆ.


ಸಬೂಬು ಹೇಳಿಕೆ

ಬಿಡದಿ ಇಂಡಸ್ಟ್ರಿಯಲ್ ಅಸೋಸಿಯೇಷನ್ ರವರು ಬಂದು ನೋಡಿಹೋಗಿದ್ದಾರೆ, ಉನ್ನತ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಮುಂದುವರೆಸುತ್ತೇವೆ ಎಂದು ಹೇಳುತ್ತಾರಾದರೂ ಇದಕ್ಕೆ ಸ್ಥಳೀಯವಾಗಿ ಯಾವುದೇ ದಾಖಲೆಯಾಗಲಿ, ಸಭೆ ನಡೆದಿರುವುದರ ಮಾಹಿತಿಯಾಗಲಿ ಇಲ್ಲ.


ತರಬೇತಿ ಆರಂಭಿಸಲಿ ಇಲ್ಲವೆಂದರೆ ಸರ್ಕಾರಿ ಕಛೇರಿ ತೆರೆಯಿರಿ

ಸರ್ಕಾರ ಮತ್ತು ಅಧಿಕಾರಿಗಳು ಕುಂಟುನೆಪ ಹೇಳುವುದನ್ನು ಬಿಟ್ಟು ಈ ಸೀಮೆಗೆ ಬೇಕಾದ ತಂತ್ರಜ್ಞಾನವನ್ನು ತಂದು ಉನ್ನತೀಕರಿಸಿ, ಬೊಂಬೆ, ರೇಷ್ಮೆ ಮತ್ತು ರೈತೋಪಯೋಗಿ ತರಬೇತಿ ಗೆ ಮೊದಲ ಆದ್ಯತೆ ನೀಡಲಿ, ಇಲ್ಲವಾದರೆ ಇಡೀ ಕಟ್ಟಡವನ್ನು ನವೀಕರಣಗೊಳಿಸಿ ಬಾಡಿಗೆ ಕಟ್ಟಡದಲ್ಲಿರುವ ಅನೇಕ ಇಲಾಖೆಗಳನ್ನು ಕಾನೂನಾತ್ಮಕವಾಗಿ ಬದಲಾಯಿಸಿಕೊಂಡು ಇಲ್ಲಿ ಕಾರ್ಯನಿರ್ವಹಿಸುವಂತೆ ಮಾಡಿದರೆ ಬ್ರಿಟಿಷ್‌ ಕಾಲದ ಈ ಕಟ್ಟಡಕ್ಕೆ ಮೆರುಗು ಬರುವುದರ ಜೊತೆಗೆ ತಾಲ್ಲೂಕಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೂ ಒಳ್ಳೆಯ ಹೆಸರು ಬರುವುದರಲ್ಲಿ ಅನುಮಾನವೇ ಇಲ್ಲ.


ಗೋ ರಾ ಶ್ರೀನಿವಾಸ...

ಮೊ:9845856139.


ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ
ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ

ರಾಮನಗರ/ಚನ್ನಪಟ್ಟಣ: (ವಿಮರ್ಶಾತ್ಮಕ ಲೇಖನ)

ನಗರದ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಪ್ರವರ ಹವ್ಯಾಸಿ ನಾಟಕ ತಂಡವು ನಡೆಸಿಕೊಟ್ಟ ಪೂರ್ಣ ಚ

ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.
ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.

ಚನ್ನಪಟ್ಟಣ :  ಚನ್ನಪಟ್ಟಣದಲ್ಲಿ ಮಹಿಳೆಯರೇ ಪೌರಾಣಿಕ ನಾಟಕವನ್ನು ಅಭ್ಯಾಸ ಮಾಡಿ ಬಯಲು ಮಂದಿರದಲ್ಲಿ ಪ್ರಸ್ತುತ ಪಡಿಸುತ್ತಿರುವುದು ವಿಶೇಷವಾಗಿದೆ. ಪೌರಾಣಿಕ

ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು
ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು

ಚನ್ನಪಟ್ಟಣ: ನಗರದ ಶ್ರೀ ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ಇದೇ ಮಾರ್ಚ್ ತಿಂಗಳ ಹತ್ತನೇ ತಾರಿಖಿನ ಭಾನುವಾರ ಮಧ್ಯಾಹ್ನ ತಾಲೂಕಿನಲ್ಲಿ ಇದೇ ಪ್ರಪ್ರಥ

ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್
ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್

ರಾಮನಗರ: ಶೂದ್ರರನ್ನು ವರ್ಣ ನೀತಿಯಿಂದಲೆ ವೈದಿಕರು ಆಳಿದರು. ಇಂದಿಗೂ ಸಹ ವೈದಿಕರು ರಾಮನನ್ನು ನಮ್ಮ ಮೇಲೆ ಹೇರುವ ಮೂಲಕ ಮತ್ತೆ ಪೂರ್ವಕಾಲಕ್ಕೆ ಕರೆದು

ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ

ರಾಮನಗರ, ಫೆ. 16  ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಫೆ.16ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆನಡೆದ ಉಪ ಚುನ

ವೈಜ್ಞಾನಿಕ ಮನೋವೃತ್ತಿ:ಸಾಂವಿಧಾನಿಕ ಕರ್ತವ್ಯ ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ

ರಾಮನಗರ; ಮಾನವ ಹಕ್ಕುಗಳನ್ನು ಯಾರೂ ಕೊಡುವುದಿಲ್ಲ, ವ್ಯಕ್ತಿಗಳಿಗೆ ಅವುಗಳಿಗೆ ಜನ್ಮತಃ ದಕ್ಕಿರುತ್ತವೆ. ಅವುಗಳನ್ನು ಯಾರೂ ಕೊಡುವುದಿಲ್ಲವಾದ್ದರಿ

ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ
ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ

ರಾಮನಗರ: ರಾಜ್ಯ ವಿಧಾನ ಸಭೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದ್ದು,  ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಇಂದು ಮಸ್ಟರಿಂಗ್ ಕಾರ್ಯ ಮುಗಿದು, ಮತಗಟ್ಟೆ ಸ

ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು
ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು

ರಾಮನಗರ: ಚನ್ನಪಟ್ಟಣ: ವೈದ್ಯ ಸಿಬ್ಬಂದಿಯಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ತಿಂಗಳು 20 ದಿನಗಳ ಗಂಡು ಶಿಶುವೊಂದು ಪ್ರಾಣ ಕಳೆದುಕೊ

ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್
ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್

ರಾಮನಗರ, ಫೆ. 12:   ನಾವು ರಾಮನಗರ ಜಿಲ್ಲೆಯವರಲ್ಲಾ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಗ್ರೇಟ್ ಬೆಂಗಳೂರು ಜಿಲ್ಲೆ ಮಾಡುವ ಬಗ್ಗೆ ಲೋಕಸಭಾ ಚ

ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್
ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್


ರಾಮನಗರ : ಫೆ 10 ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಕೇವಲ ಹಿಂದುತ್ವವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಭಾರತದ

Top Stories »  


Top ↑