Tel: 7676775624 | Mail: info@yellowandred.in

Language: EN KAN

    Follow us :


ಅಧಪತನದತ್ತ ರೇಷ್ಮೆ ಕೃಷಿ ತರಬೇತಿ ಸಂಸ್ಥೆ

Posted date: 18 Mar, 2019

Powered by:     Yellow and Red

ಅಧಪತನದತ್ತ ರೇಷ್ಮೆ ಕೃಷಿ ತರಬೇತಿ ಸಂಸ್ಥೆ

ರೇಷ್ಮೆ ಬಿತ್ತನೆ ಕೋಠಿ

ರೇಷ್ಮೆ ಬಿತ್ತನೆ ಎಂದರೆ ಕರಿಕಲ್ ಫಾರಂ ಎಂದೇ ಸುಪ್ರಸಿದ್ಧವಾಗಿದ್ದ ಕರ್ನಾಟಕ ಸರ್ಕಾರದ ರೇಷ್ಮೆ ಕೃಷಿ ತರಬೇತಿ ಸಂಸ್ಥೆಯು ಇಂದು ಕೇವಲ ಹೆಸರಿಗಷ್ಟೇ ಸೀಮಿತವಾಗಿದ್ದು, ಪಾಳು ಬಿದ್ದ ಕಛೇರಿಗಳು, ವಸತಿ ನಿಲಯಗಳು, ಕೇವಲ ಹಾಜರಾತಿಗಾಗಿ ಬಂದೋಗುವ ಸಿಬ್ಬಂದಿಗಳು, ಏನೋ ಒಂದಷ್ಟು ಮಾಡಿದರೆ ಸಾಕು ಎಂಬ ಮನೋಭಾವ ಉಳ್ಳ ಅಧಿಕಾರಿಗಳು, ಎಲ್ಲಾ ಸವಲತ್ತುಗಳು ಇದ್ದರೂ ಖಾಸಗಿ ಮೊಟ್ಟೆ ಮತ್ತು ಚಾಕಿ ಸಾಕಾಣಿಕೆದಾರರಿಗೆ ಒತ್ತು ಕೊಟ್ಟು ಸಂಪೂರ್ಣವಾಗಿ ಮುಚ್ಚುವ ಹಂತ ತಲುಪುತ್ತಿರುವುದು ರೇಷ್ಮೆ ನಾಡು ಎಂದೇ ಪ್ರಸಿದ್ಧವಾಗಿರುವ ರಾಮನಗರ ಜಿಲ್ಲೆಗೆ ಮಾಡಿರುವ ಅಪಮಾನವೇ ಸರಿ.


ಸ್ಥಳೀಯ ರೈತರ ದೊಡ್ಡ ಕಸುಬು

ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನಾದ್ಯಂತ ೨೧೫ ಗ್ರಾಮಗಳಲ್ಲಿ ೫೯೭೮ ರೈತರು ೪೧೯೦ ಹೆಕ್ಟೇರ್ ಪ್ರದೇಶದಲ್ಲಿ ರೇಷ್ಮೆ ಬೆಳೆಯುತ್ತಿದ್ದಾರೆ, ಪರಿಶಿಷ್ಟ ಜಾತಿಯ ೨೦೦ ಮಂದಿ, ಪರಿಶಿಷ್ಟ ಪಂಗಡದ ೦೧, ಅಲ್ಪಸಂಖ್ಯಾತರು ೧೭, ಮಹಿಳೆಯರು ೭೧೭ ಇನ್ನುಳಿದವರೆಲ್ಲರೂ ಸಾಮಾನ್ಯ ವರ್ಗಕ್ಕೆ ಸೇರಿದವರೆಂದು ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ ವಿವರಿಸುತ್ತಾರೆ.


ಮಿಶ್ರತಳಿ ಮತ್ತು ದ್ವಿತಳಿ

ಇತ್ತೀಚೆಗೆ ಮಿಶ್ರತಳಿಯ ಬೆಳೆ ಕಡಿಮೆಯಾಗುತ್ತಿದ್ದು ದ್ವಿತಳಿ ರೇಷ್ಮೆಯನ್ನು ಬೆಳೆಯುತ್ತಿದ್ದಾರೆ, ಇಲಾಖೆಯೂ ಸಹ ದ್ವಿತಳಿ ರೇಷ್ಮೆ ಬೆಳೆಗೆ ಉತ್ತೇಜನ ಕೊಡುತ್ತಿದ್ದು ದ್ವಿತಳಿ ಬೆಳೆಯಲು ಕಡಿಮೆ ಜನ ಸಾಕಾಗುತ್ತಾರೆ, ಸುಲಭ ಕೆಲಸದ ಜೊತೆಗೆ ಮಿಶ್ರತಳಿ ಗೂಡಿಗಿಂತ ಕನಿಷ್ಠ ೧೦೦ ರೂ ಹೆಚ್ಚು ಸಿಗುತ್ತದೆ.

ಹಳೆಯಕಾಲದ ಚಂದ್ರಿಕೆ ಬಳಸುವುದಕ್ಕಿಂತ ಹೊಸದಾಗಿ ಬಂದಿರುವ ಚಿಕ್ಕ ಚಿಕ್ಕ ಚಾಪೆಯಂತಹ ಪ್ಲಾಸ್ಟಿಕ್ ಚಂದ್ರಿಕೆಗಳನ್ನು ಬಳಸಿದರೆ ಕಡಿಮೆ ಜಾಗದಲ್ಲಿ ಗೂಡು ಕಟ್ಟಿಸಲು ಅನುಕೂಲವಾಗುತ್ತದೆ ಎಂದು ಚಂದ್ರಿಕೆಯ ಬಗ್ಗೆ ವಿವರಿಸಿದರು.


ಸಹಾಯಧನ

ರೇಷ್ಮೆ ಹುಳು ಸಾಕಾಣಿಕದಾರರಿಗೆ ಮನೆ ಕಟ್ಟಿಸಿಕೊಳ್ಳಲು ೧,೦೦೦ ಚದತ ಅಡಿಗೆ ೩,೦೦,೦೦೦ ರೂಪಾಯಿಗಳನ್ನು, ೬೦೦ ಚದರ ಅಡಿಗೆ ೨,೨೫,೦೦೦ ರೂಪಾಯಿಗಳ ಸಹಾಯಧನವನ್ನು ನೀಡಲಾಗುತ್ತದೆ.


ಸೇವಾಕೇಂದ್ರಗಳು ಮತ್ತು ಮುಂದಿನ ಯೋಜನೆ

ತಾಲ್ಲೂಕಿನಾದ್ಯಂತ ನಾಲ್ಕು ತಾಂತ್ರಿಕ ಸೇವಾಕೇಂದ್ರಗಳಿದ್ದು ಹೊಂಗನೂರು ೬೦, ಕೋಡಂಬಳ್ಳಿ ೪೨, ತಿಟ್ಟಮಾರನಹಳ್ಳಿ ೪೮, ಮತ್ತು ಬೇವೂರು ವ್ಯಾಪ್ತಿಯಲ್ಲಿ ೪೭ ರೇಷ್ಮೆ ಹುಳು ಸಾಕಾಣಿಕಾ ಮನೆಗಳಿದ್ದು ಹೊಸದಾಗಿ ನಿರ್ಮಿಸಲು ಸಹ ಇಲಾಖೆ ಮುಂದಾಗಿದೆ.

ಅರಣ್ಯ ಇಲಾಖೆಯ ಸಹಕಾರದೊಂದಿಗೆ ಹಸಿರು ಮನೆಗಳನ್ನು ನಿರ್ಮಿಸಿ ಹೊಸ ಪ್ಲಾಂಟೇಷನ್ ಗಳನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದೆ.


ನರೇಗಾ ಇಷ್ಟೊಂದು ಹಣ ಖರ್ಚಾಗಿದೆಯೇ ?

ನರೇಗಾ ಯೋಜನೆ ಅಡಿಯಲ್ಲಿ ಸಹ ಹಿಪ್ಪನೇರಳೆ ನಾಟಿ ಮಾಡಲು, ಎರಡನೇ ಮತ್ತು ಮೂರನೇ ವರ್ಷದ ನಿರ್ವಹಣೆ ಸೇರಿದಂತೆ ೧,೩೩,೨೯೩ ಮಾನವ ದಿನಗಳಿಗೆ ೩,೪೭,೦೦,೦೦೦ ರೂಪಾಯಿಗಳನ್ನು ವ್ಯಯಿಸಲಾಗಿದೆ. ಆದರೆ ಇಷ್ಟೊಂದು ಹಣ ರೈತರ ಪಾಲಿಗೆ ದಕ್ಕಿದೆಯೇ ಎನ್ನುವುದು ಯಕ್ಷ ಪ್ರಶ್ನೆ !?


ಉಪ ಉತ್ಪನ್ನಗಳು ಮತ್ತು ತರಬೇತಿ ಶೂನ್ಯ

ರೈತರಿಗೆ ಮತ್ತು ಚಾಕಿ ಸಾಕಾಣಿಕಾದಾರರಿಗೆ ನುರಿತ ವಿಜ್ಞಾನಿಗಳಿಂದ ತರಬೇತಿ ಕರಕುಶಲ ತರಬೇತಿ ನೀಡುತ್ತೇವೆ ಎನ್ನುತ್ತಾರೆಯೇ ವಿನಹ ಅಂತಹ ಸಾಧನೆ ಏನೂ ಏನೂ ಇಲ್ಲ, ಉಪ ಉತ್ಪನ್ನಗಳಿಗೆ ಸಂಬಂಧಿಸಿದಂತೆ ಯಾವುದೇ ಯೋಚನೆ ಮಾಡದೇ ಇರುವುದು ಇಲಾಖೆಯ ಬಹುದೊಡ್ಡ ಅಕ್ಷಮ್ಯ ಅಪರಾಧ ಎನ್ನಬಹುದು.

ರೇಷ್ಮೆ ಎಲೆಯಿಂದ ಗ್ರೀನ್ ಟೀ, ಹಣ್ಣಿನಿಂದ ಜಾಮ್, ಬಿಸ್ಕತ್ತುಗಳು, ಹಾರಗಳು, ಅಲಂಕಾರಿಕ ವಸ್ತುಗಳು, ಪಶು ಮತ್ತು ಕೋಳಿಯ ಆಹಾರ ಸೇರಿದಂತೆ ಅನೇಕ ಉಪ ಉತ್ಪನ್ನಗಳನ್ನು ಮಾಡಿದರೇ ಇಲಾಖೆ  ಉದ್ಯೋಗಗಳನ್ನು ಸೃಷ್ಟಿ ಮಾಡಿದಂತಾಗುತ್ತದೆ.


ಪರರ ಪಾಲಾಗುತ್ತಿರುವ ಇಲಾಖೆಯ ಭೂಮಿ

ಚನ್ನಪಟ್ಟಣದ ರೇಷ್ಮೆ ಇಲಾಖೆಯು ಇಗ್ಗಲೂರು ಮತ್ತು ಕಣ್ವ ಬಳಿ ಸೇರಿದಂತೆ ನೂರು ಎಕರೆಯಷ್ಟು ಭೂಮಿ ಹೊಂದಿದ್ದು ಇಲಾಖೆಯ ಆವರಣವೇ ನಲವತ್ತೈದು ಎಕರೆ ಭೂಮಿ ಇದೆಯಂತೆ, ಇಗ್ಗಲೂರು ಬಳಿ ಫಾರಂ ಹೌಸ್ ಕಛೇರಿ ಜೊತೆಗೆ ತೋಟ ಇದ್ದು ಆಜೂಬಾಜಿನನವರು ಒತ್ತುವರಿ ಮಾಡಿಕೊಂಡಿದ್ದಾರೆ, ಕಣ್ವ ಬಳಿ ಇರುವ ತೋಟದ ಕತೆಯೂ ಭಿನ್ನವಾಗಿಲ್ಲ, ಇನ್ನೂ ಇಲಾಖೆ ಇರುವ ಜಾಗದ ಸ್ವಲ್ಪ ಭಾಗ ನನಗೆ ಸೇರಬೇಕೆಂದು ಅದೇ ಇಲಾಖೆಯ ನಿವೃತ್ತ ಉದ್ಯೋಗಿಯೊಬ್ಬರು ದಾವೆ ಹೂಡಿರುವುದು ಇಲಾಖಾ ಅಧಿಕಾರಿಗಳ ಕರ್ತವ್ಯವನ್ನು ತೋರಿಸುತ್ತದೆ.


ನಿರ್ವಹಣೆ ಇಲ್ಲದೆ ಪಾಳು ಮತ್ತು ಅಕ್ರಮ

ಕೆಲವೇ ಕಛೇರಿಗಳನ್ನು ಹೊರತುಪಡಿಸಿದರೆ ಮಿಕ್ಕೆಲ್ಲಾ ಕಟ್ಟಡಗಳು ಭೂತ ಬಂಗಲೆಯಂತೆ ಪರಿವರ್ತಿತವಾಗುವಲ್ಲಿ ಸಿಬ್ಬಂದಿ ಮತ್ತು ಅಧಿಕಾರಿಗಳ ಪಾತ್ರ ಬಹುದೊಡ್ಡದು, ನಿರ್ವಹಣೆ ಇಲ್ಲದೆ, ವಾಸವಿಲ್ಲದೆ, ಕೆಲಸ ಮಾಡದೆ ಎಲ್ಲಾ ಕಟ್ಟಡಗಳು ಪಾಳು ಬಿದ್ದಿವೆ, ಅನೇಕ ಕಟ್ಟಡಗಳ ಮೇಲೆ ಮರಗಳು ಬೆಳೆದು ನಿಂತಿವೆ, ಉಪಕರಣಗಳು ತುಕ್ಕು ಹಿಡಿಯುತ್ತಿವೆ, ಕೆಲವು ವಾಸದ ಮನೆಗಳು ಸೋರುತ್ತವೆ ಎಂಬ ನೆಪ ಒಡ್ಡಿ ಆರ್ ಸಿ ಸಿ ಮನೆಯ ಮೇಲೆ ತಗಡಿನ ಶೀಟು ಹೊದಿಸಲು ೫,೦೦,೦೦೦ ರೂಪಾಯಿಗಳನ್ನು ಬಿಲ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.


ಕೋಟಿ ಖರ್ಚು ಲಕ್ಷ ಸಂಪಾದನೆ

ಸಾರಿಗೆ, ಸಂಬಳ, ಪಿಂಚಣಿ, ನಿರ್ವಹಣೆ ಮತ್ತಿತರ ಕಾರಣಕ್ಕಾಗಿ ತಿಂಗಳಿಗೆ ಒಂದು ಕೋಟಿ ರೂ ಖರ್ಚು ಬರುವ ಸಾಧ್ಯತೆಯಿದ್ದು ಇಲ್ಲಿಯ ವರಮಾನ ೧,೫೦,೦೦೦ ದಿಂದ ೨,೦೦,೦೦೦ ರೂಪಾಯಿಗಳು ಮಾತ್ರ ಅದು ಸಹ ತಿಂಗಳಿಗೆ ಮೊಟ್ಟೆ ಮಾರಾಟದ ಮೂಲಕ, ಇದು ತಾಲ್ಲೂಕಿನಲ್ಲಿರುವ ಖಾಸಗಿ ಮೊಟ್ಟೆ ಮತ್ತು ಚಾಕಿಸಾಕಾಣಿಕೆದಾರರ ಶೇಕಡಾ ಒಂದರಷ್ಟು ! ಇನ್ನೂ ರೈತನಾಗಲಿ, ಇಲಾಖೆಯಾಗಲಿ ಉದ್ದಾರವಾಗಲು ಹೇಗೆ ಸಾಧ್ಯ ?


ಕೋಟ್ಯಾಂತರ ರೂಪಾಯಿ ಖರ್ಚಾಗುವ ಈ ಇಲಾಖೆಯಲ್ಲಿ ಲಕ್ಷ ರೂಪಾಯಿ ಆದಾಯವಿಲ್ಲವೆಂದರೆ ಸಚಿವಾಲಯ ಸೇರಿದಂತೆ ಎಲ್ಲರೂ ಭಾಗಿಗಳೇ, ಟಿಪ್ಪುವಿನ ಕನಸನ್ನು ನನಸು ಮಾಡಲು, ರೈತರಿಗೆ ನೆರವಾಗುವ ಮೂಲಕ ಇಲಾಖೆ ಮಾದರಿಯಾಗಬೇಕಿತ್ತು, ಮುಖ್ಯಮಂತ್ರಿಗಳ ಕ್ಷೇತ್ರದಲ್ಲಿ ಈ ಇಲಾಖೆ ಸಂಪೂರ್ಣವಾಗಿ ಸೋತಿದೆ, ಮುಂದಾದರೂ ಮುಖ್ಯಮಂತ್ರಿಗಳು ಗಮನ ಹರಿಸಿ ಇಲಾಖೆಗೆ ಮರುಜೀವ ತುಂಬಿ ರೈತರಿಗೆ ನೆರವಾಗಲಿಸಿ ಪುಟ್ಟಸ್ವಾಮಿ ಹಿರಿಯ ರೈತ ಮುಖಂಡ


ನಾವು ಅಂದು ನಾಲ್ಕು ಹಿಡಿ ಸೊಪ್ಪು ಹಾಕಿ ಸಾವಿರ ರೂಪಾಯಿ ಸಂಪಾದಿಸಿದ್ದೇವೆ, ಇಂದು ಮಾತ್ರ ಆಧುನಿಕತೆಗೆ ಸಂಬಂಧಿಸಿದಂತೆ ಬಂಡವಾಳ ಹೂಡಿದ್ದೇವೆ, ರೇಷ್ಮೆ ಇಲಾಖೆಗೆ ಬರುವ ಅಧಿಕಾರಿಗಳಿಗೆ ರೇಷ್ಮೆಯ ಬಗ್ಗೆ ಸಂಪೂರ್ಣ ಅರಿವಿಲ್ಲದಿರುವುದು, ಆಳವಾದ ಜ್ಞಾನ ಇಲ್ಲದಿರುವುದರ ಜೊತೆಗೆ ಗಂಟೆ ಹೊಡಿ ಸಂಬಳ ತಗೋ ಅನ್ನುವುದಕ್ಕಿಂತ ಗಂಟೆ ಹೊಡೆಯದೆಯೂ ಸಂಬಳ ತಗೋಬಹುದು ಎನ್ನುವ ಅಧಿಕಾರಿಗಳಿಂದ ಇಲಾಖೆ ನಶಿಸಿ ಹೋಗುತ್ತಿದೆ















ಚಿಕ್ಕನದೊಡ್ಡಿ ಜಯರಾಮು




ನಾವು ಉತ್ತಮ ಗುಣಮಟ್ಟದ ಗೂಡು ಖರೀದಿಸಿ ಮೊಟ್ಟೆ ತಯಾರಿಸಿ ಚಾಕಿ ಕಟ್ಟುತ್ತೇವೆ, ನಮಗಿಲ್ಲಿ ಸಮಯದ ಪರಿವೆಯೇ ಇರುವುದಿಲ್ಲ, ನಾನು ದುಡಿದರಷ್ಟೇ ನನಗೆ ಆದಾಯ ಮತ್ತು ಬೆಳೆಗಾರನಿಗೆ ಉತ್ತಮ ಗುಣಮಟ್ಟದ ಚಾಕಿ ಕೊಡಲು ಸಾಧ್ಯ, ಇಲಾಖೆಯಲ್ಲಿ ಈ ಸಮಯದ ಪಾಲನೆ ಇಲ್ಲ, ಇನ್ನು ಗುಣಮಟ್ಟದ ಮಾತೆಲ್ಲಿ, ಸರ್ಕಾರವೇ ರೈತರಿಗೆ ಉತ್ತಮ ಗುಣಮಟ್ಟದ ಮೊಟ್ಟೆ ಮತ್ತು ಚಾಕಿ ಕೊಟ್ಟಿದ್ದರೆ ರೈತರು ಖಾಸಗಿಯವರ ಬಳಿ ಬರುತ್ತಿರಲಿಲ್ಲ











ಗಣೇಶ



ಇಲಾಖೆ ಅಂದಿಗೆ ಬಹಳ ಚನ್ನಾಗಿತ್ತು, ರೈತ ಮುಂದಾಗಿಯೇ ಬಂದು ನನಗೆ ಮೊಟ್ಟೆ ಬೇಕು ಎಂದು ಬರೆಸಿ ಹೋಗುತ್ತಿದ್ದ, ಇಂದಿನ ಅಧಿಕಾರಿಗಳಿಗೆ ಮಾಹಿತಿಯ ಕೊರತೆ, ನಿರಾಸಕ್ತಿಯಿಂದ ಹಾಗೂ ನಿವೃತ್ತಿ ಹೊಂದಿದ ಅಧಿಕಾರಿಗಳ ಹುದ್ದೆಗೆ ಮರು ನೇಮಕ ಮಾಡದಿರುವುದು ಸಹ ಇಲಾಖೆ ದುಸ್ಥಿತಿಗೆ ಇಳಿಯಲು ಕಾರಣವಾಗಿದೆ











ಎ ಸಿ ಚಂದ್ರು



ಬೆಳಗಿನ ಜಾವ ೩ ರಿಂದ ೪ ಗಂಟೆಗೆ ಚಿಟ್ಟೆಗಳು ಹೊರಬರುತ್ತವೆ, ಅದೇ ಸಮಯದಲ್ಲಿ ಗಂಡು ಮತ್ತು ಹೆಣ್ಣು ಚಿಟ್ಟೆಗಳನ್ನು ಗುರುತಿಸಿ ಮೊಟ್ಟೆ ಇಡಲು ಬಿಡಬೇಕು, ಇಲಾಖೆಯ ಸಿಬ್ಬಂದಿಗಳಿಂದ ಇದು ಸಾಧ್ಯವಿಲ್ಲ, ಅಲ್ಲಿ ನೂರು ಮೊಟ್ಟೆ ತಂದು ಬೆಳೆಯುವ ಗೂಡಿಗಿಂತ ನಮ್ಮಲ್ಲಿ ಕೊಂಡು ಹೋದ ರೈತ ಕನಿಷ್ಠ ಇಪ್ಪತ್ತು ಕಿಲೋ ಹೆಚ್ಚು ಬೆಳೆ ಬೆಳೆಯುತ್ತಾನೆ, ಹಾಗಾಗಿ ರೈತ ಮೊದಲ ಆದ್ಯತೆಯನ್ನು ಗುಣಮಟ್ಟಕ್ಕೆ ಕೊಡುವುದರಿಂದ ಖಾಸಗಿಯವರ ಶ್ರಮಕ್ಕೆ ಬೆಲೆ ಸಿಗುತ್ತಿದೆ.







ಕೃಷ್ಣಪ್ಪ



ಮೊಟ್ಟೆ ಮತ್ತು ಚಾಕಿ ಸಾಕಾಣಿಕೆ ಅಷ್ಟು ಸುಲಭದ ಮಾತಲ್ಲ, ನಿರ್ವಹಣೆ ಬಹಳ ಕಷ್ಟವಿದೆ, ಸ್ವಂತ ಬಂಡವಾಳದ ಜೊತೆಗೆ ನಾವೇ ಖುದ್ದು ಕೆಲಸ ಮಾಡಬೇಕು, ಬೆಳೆಗಾರರ ವಿಶ್ವಾಸಗಳಿಸಬೇಕು, ಅವರಿಗೆ ಮಾರ್ಗದರ್ಶನ ನೀಡಬೇಕು, ಬೆಳೆ ಕಡಿಮೆ ಬಂದರೆ ಹೊಣೆ ಹೊರಬೇಕು, ಮೊಟ್ಟೆ ಮತ್ತು ಚಾಕಿ ಸಂಬಂಧ ಅನೇಕ ಕಟ್ಟುನಿಟ್ಟಿನ ಕ್ರಮಕೈಗೊಂಡು ಗುಣಮಟ್ಟವನ್ನು ಕಾಪಾಡಿಕೊಳ್ಳುವುದರಿಂದ ರೈತರು ನಮ್ಮ ನಂಬಿಕೆಯ ಮೇರೆಗೆ ಬರುತ್ತಿದ್ದಾರೆ ಹಾಗಾಗಿ ಇಲಾಖೆ ಹಿಂದುಳಿಯಲು ಕಾರಣವಾಗಿದೆ











ಆತ್ಮಾನಂದ



ಇಲಾಖೆ ಬಹು ದೊಡ್ಡದಿದ್ದು ರೇಷ್ಮೆ ಬೆಳೆಯನ್ನೇ ಕಸುಬಾಗಿಸಿಕೊಂಡಿರುವ ಅನೇಕ ರೈತ ಕುಟುಂಬಗಳು ನಮ್ಮಲ್ಲಿವೆ, ಇಲಾಖೆಗೆ ಸಂಬಂಧಿಸಿದ ಜಪಾನ್ ಕಂಪೆನಿಗಳು ನಿರ್ಮಿಸಿದಂತಹ ಕಟ್ಟಡಗಳಿವೆ, ಸಂಪೂರ್ಣ ಜವಾಬ್ದಾರಿ ತೆಗೆದುಕೊಂಡು ಇಲಾಖೆಗೆ ಕಾಯಕಲ್ಪ ನೀಡುವ ಮೂಲಕ ಉಳಿಸಲು ಸರ್ಕಾರ ಮತ್ತು ಸ್ಥಳೀಯರು ಮುಂದಾಗಲೆಂದು ಹಾರೈಸೋಣ.




ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ
ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ

ರಾಮನಗರ/ಚನ್ನಪಟ್ಟಣ: (ವಿಮರ್ಶಾತ್ಮಕ ಲೇಖನ)

ನಗರದ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಪ್ರವರ ಹವ್ಯಾಸಿ ನಾಟಕ ತಂಡವು ನಡೆಸಿಕೊಟ್ಟ ಪೂರ್ಣ ಚ

ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.
ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.

ಚನ್ನಪಟ್ಟಣ :  ಚನ್ನಪಟ್ಟಣದಲ್ಲಿ ಮಹಿಳೆಯರೇ ಪೌರಾಣಿಕ ನಾಟಕವನ್ನು ಅಭ್ಯಾಸ ಮಾಡಿ ಬಯಲು ಮಂದಿರದಲ್ಲಿ ಪ್ರಸ್ತುತ ಪಡಿಸುತ್ತಿರುವುದು ವಿಶೇಷವಾಗಿದೆ. ಪೌರಾಣಿಕ

ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು
ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು

ಚನ್ನಪಟ್ಟಣ: ನಗರದ ಶ್ರೀ ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ಇದೇ ಮಾರ್ಚ್ ತಿಂಗಳ ಹತ್ತನೇ ತಾರಿಖಿನ ಭಾನುವಾರ ಮಧ್ಯಾಹ್ನ ತಾಲೂಕಿನಲ್ಲಿ ಇದೇ ಪ್ರಪ್ರಥ

ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್
ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್

ರಾಮನಗರ: ಶೂದ್ರರನ್ನು ವರ್ಣ ನೀತಿಯಿಂದಲೆ ವೈದಿಕರು ಆಳಿದರು. ಇಂದಿಗೂ ಸಹ ವೈದಿಕರು ರಾಮನನ್ನು ನಮ್ಮ ಮೇಲೆ ಹೇರುವ ಮೂಲಕ ಮತ್ತೆ ಪೂರ್ವಕಾಲಕ್ಕೆ ಕರೆದು

ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ

ರಾಮನಗರ, ಫೆ. 16  ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಫೆ.16ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆನಡೆದ ಉಪ ಚುನ

ವೈಜ್ಞಾನಿಕ ಮನೋವೃತ್ತಿ:ಸಾಂವಿಧಾನಿಕ ಕರ್ತವ್ಯ ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ

ರಾಮನಗರ; ಮಾನವ ಹಕ್ಕುಗಳನ್ನು ಯಾರೂ ಕೊಡುವುದಿಲ್ಲ, ವ್ಯಕ್ತಿಗಳಿಗೆ ಅವುಗಳಿಗೆ ಜನ್ಮತಃ ದಕ್ಕಿರುತ್ತವೆ. ಅವುಗಳನ್ನು ಯಾರೂ ಕೊಡುವುದಿಲ್ಲವಾದ್ದರಿ

ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ
ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ

ರಾಮನಗರ: ರಾಜ್ಯ ವಿಧಾನ ಸಭೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದ್ದು,  ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಇಂದು ಮಸ್ಟರಿಂಗ್ ಕಾರ್ಯ ಮುಗಿದು, ಮತಗಟ್ಟೆ ಸ

ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು
ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು

ರಾಮನಗರ: ಚನ್ನಪಟ್ಟಣ: ವೈದ್ಯ ಸಿಬ್ಬಂದಿಯಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ತಿಂಗಳು 20 ದಿನಗಳ ಗಂಡು ಶಿಶುವೊಂದು ಪ್ರಾಣ ಕಳೆದುಕೊ

ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್
ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್

ರಾಮನಗರ, ಫೆ. 12:   ನಾವು ರಾಮನಗರ ಜಿಲ್ಲೆಯವರಲ್ಲಾ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಗ್ರೇಟ್ ಬೆಂಗಳೂರು ಜಿಲ್ಲೆ ಮಾಡುವ ಬಗ್ಗೆ ಲೋಕಸಭಾ ಚ

ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್
ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್


ರಾಮನಗರ : ಫೆ 10 ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಕೇವಲ ಹಿಂದುತ್ವವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಭಾರತದ

Top Stories »  


Top ↑