Tel: 7676775624 | Mail: info@yellowandred.in

Language: EN KAN

    Follow us :


ಹೆರಿಗೆ ಸಮಯದಲ್ಲಿ ತಾಯಿ ಸಾವು, ಬಾಲು ಆಸ್ಪತ್ರೆಯಲ್ಲಿ ದುರ್ಘಟನೆ, ಸಂಬಂಧಿಕರು ಮತ್ತು ಸಾರ್ವಜನಿಕರಿಂದ ಧರಣಿ

Posted date: 06 May, 2019

Powered by:     Yellow and Red

ಹೆರಿಗೆ ಸಮಯದಲ್ಲಿ ತಾಯಿ ಸಾವು, ಬಾಲು ಆಸ್ಪತ್ರೆಯಲ್ಲಿ ದುರ್ಘಟನೆ, ಸಂಬಂಧಿಕರು ಮತ್ತು ಸಾರ್ವಜನಿಕರಿಂದ ಧರಣಿ

ಚನ್ನಪಟ್ಟಣ: ನಗರದ ಪಾರ್ವತಿ ಟಾಕೀಸ್ ಬಳಿ ಇರುವ ಬಾಲು ಆಸ್ಪತ್ರೆ ಯಲ್ಲಿ ವೈದ್ಯರ ನಿರ್ಲಕ್ಷ್ಯ ದಿಂದ ಹೆರಿಗೆ ಸಮಯದಲ್ಲಿ ತಾಯಿ ಮೃತ ಪಟ್ಟಿದ್ದಾರೆ ಎಂದು ಸಂಬಂಧಿಕರು, ಮಳೂರು ಪಟ್ಟಣ ಗ್ರಾಮ, ಬೇವೂರು ಗ್ರಾಮ, ದೇವರಹೊಸಹಳ್ಳಿ ಗ್ರಾಮ ಮತ್ತು ಸಾರ್ವಜನಿಕರಿಂದ ಆಸ್ಪತ್ರೆ ಮುಂದೆ ಧರಣಿ ನಡೆಸಿ ನ್ಯಾಯಕ್ಕಾಗಿ ಕಣ್ಣೀರಿಟ್ಟ ದೃಶ್ಯ ನೆರೆದವರ ಮನ ಕಲಕುವಂತಿತ್ತು.


ಕಳೆದ ವರ್ಷ ಮಳೂರು ಪಟ್ಟಣ ಗ್ರಾಮದ ಯುವತಿ ದೀಕ್ಷಿತಾ (೨೨) ಎಂಬುವರನ್ನು ಬೇವೂರು ಗ್ರಾಮದ ರಾಮಕೃಷ್ಣೇಗೌಡ ಎಂಬುವವರಿಗೆ ಮದುವೆ ಮಾಡಿಕೊಡಲಾಗಿತ್ತು, ಹಲವಾರು ತಿಂಗಳಿನಿಂದಲೂ ಇದೇ ಆಸ್ಪತ್ರೆ ಯಲ್ಲಿ ಪರೀಕ್ಷಿಸುತ್ತಿದ್ದು, ಹೆರಿಗೆ ಸಮಯಕ್ಕಾಗಿ ನಿನ್ನೆ ರಾತ್ರಿ ೦೫/೦೫/೧೯ ರ ಭಾನುವಾರ ಸಂಜೆ ಆಸ್ಪತ್ರೆ ಗೆ ದಾಖಲಿಸಿದ್ದು ತಡರಾತ್ರಿ ಹನ್ನೊಂದರ ಸಮಯದಲ್ಲಿ ಸಹಜ ಹೆರಿಗೆ ಆಗಿದೆ, ಈ ಸಂದರ್ಭದಲ್ಲಿ ಕೂಸು ನೋಡುವ ಮೊದಲೇ ತಾಯಿ ಮೃತ ಪಟ್ಟಿರುವುದು, ಹೆರಿಗೆಗೆ ಅಗತ್ಯ ಕ್ರಮ ಕೈಗೊಳ್ಳದಿರುವುದರಿಂದ ಬಾಣಂತಿ ಮೃತಳಾಗಿದ್ದಾರೆ ಎಂಬುದು ಸಂಬಂಧಿಕರ ಆಕ್ರೋಶಕ್ಕೆ ಕಾರಣವಾಗಿತ್ತು.


ಆಸ್ಪತ್ರೆ ಮೇಲೆ ಇದುವರೆಗೂ ಹಲವಾರು ದೂರು ದಾಖಲು, ಅಧಿಕಾರಿಗಳಿಂದ ನಿರ್ಲಕ್ಷ್ಯ


ಬಾಲು ಆಸ್ಪತ್ರೆಯಲ್ಲಿ ಭ್ರೂಣ ಪರೀಕ್ಷೆ ಸೇರಿದಂತೆ ಗರ್ಭಿಣಿಯರು ಮತ್ತು ನವಜಾತ ಶಿಶುಗಳು ವೈದ್ಯರ ನಿರ್ಲಕ್ಷ್ಯದಿಂದ ಸಾವನ್ನಪ್ಪಿದ್ದು ಜಿಲ್ಲಾಧಿಕಾರಿ ಮತ್ತು ಸಂಬಂಧಿಸಿದ ಇಲಾಖೆಗಳಲ್ಲಿ ದೂರು ದಾಖಲಾಗಿದ್ದು ಇನ್ನೂ ಬಗೆಹರಿದಿಲ್ಲ.

ಒಟ್ಟಾರೆ ದುಡ್ಡು ಕೊಟ್ಟು ಕೊಂಡುಕೊಳ್ಳಬಹುದು ಎಂಬ ನಿರ್ಧಾರ ತಳೆಯುವುದು, ವೈದ್ಯರೇ ಎರಡನೇ ದೇವರು ಎಂಬುದನ್ನು ಸುಳ್ಳಾಗಿಸುತ್ತಿರುವುದು ವೈದ್ಯಲೋಕಕ್ಕೆ ಅಪಮಾನ.


ಸಿಎಂ ಕ್ಷೇತ್ರದಲ್ಲಿ ಹೆರಿಗೆ ತಜ್ಞರಿಲ್ಲದ ಆಸ್ಪತ್ರೆಗಳು


ನಗರದಲ್ಲಿ ಇರುವ ಬಹುತೇಕ ಎಲ್ಲಾ ನರ್ಸಿಂಗ್ ಹೋಂಗಳಲ್ಲಿ ಹೆರಿಗೆ ಮಾಡಿಸುತ್ತಾರೆ, ಅದರಲ್ಲೂ ಸಿಜೇರಿಯನ್ ಗೆ ಒತ್ತು ಕೊಡುತ್ತಾರೆ, ಆದರೆ ಬಹುತೇಕ ಆಸ್ಪತ್ರೆಗಳಲ್ಲಿ ಹೆರಿಗೆ ತಜ್ಞರೇ ಇಲ್ಲದಿರುವುದು ವಿಪರ್ಯಾಸ, ಕೆಲವು ಹಿರಿಯ ವೈದ್ಯರು ಅನುಭವದ ಆಧಾರದ ಮೇಲೆ ಹೆರಿಗೆ ಮಾಡಿಸಿದರೆ ಕೆಲವೊಮ್ಮೆ ತೀರಾ ಅಗತ್ಯ ಇದ್ದರೆ ಹೊರಗಿನಿಂದ ತಜ್ಞರನ್ನು ಕರೆಸಿಕೊಳ್ಳುತ್ತಾರೆ.

ಹೆರಿಗೆ ತಜ್ಞರಿಲ್ಲದೆ ಹೆರಿಗೆ ಮಾಡಿಸುವ ಆಸ್ಪತ್ರೆ ಯ ಮಾಲೀಕರು, ಅದಕ್ಕೆ ಪರವಾನಗಿ ಕೊಟ್ಟ ಮಹನೀಯರು ಇಬ್ಬರೂ ಸಹ ಮುಖ್ಯಮಂತ್ರಿ ಕ್ಷೇತ್ರಕ್ಕೆ ನಿಧಾನ ವಿಷವಿದ್ದಂತೆ.


ಕುಂಡ ಮತ್ತು ಗಾಜು ಪುಡಿಪುಡಿ


ಈ ವೇಳೆ ಹೆರಿಗೆ ಸಮಯದಲ್ಲಿ ರಕ್ತವೂ ಸಹ ಆಸ್ಪತ್ರೆಯಲ್ಲಿ ಲಭ್ಯವಿರಲಿಲ್ಲ, ಅವರ ತಪ್ಪನ್ನು ಮುಚ್ಚಿಕೊಳ್ಳುವುದಕ್ಕೋಷ್ಕರ ಹೃದಯ ಘಾತ ಆಗಿದೆ ಎಂದು ಸಬೂಬು ಹೇಳಿ ರಾತ್ರಿ ಹೋದ ವೈದ್ಯರು ಇಷ್ಟು ಹೊತ್ತಾದರು ಬರದಿದ್ದರಿಂದ ಆಕ್ರೋಶಗೊಂಡ ಸಂಬಧಿಗಳು ಹೂವಿನ ಕುಂಡಗಳು, ಕಿಟಕಿಯ ಗಾಜುಗಳನ್ನು ಒಡೆದು ಕೋಪ ಹೊರಹಾಕಿದರು. ಪೋಲಿಸರನ್ನು ಧಿಕ್ಕರಿಸಿದ ಮಹಿಳೆಯರು ವೈದ್ಯೆ ಶೈಲಜಾ ಕೊಠಡಿಗೆ ನುಗ್ಗಲು ಪ್ರಯತ್ನ ಮಾಡಿದರು.


ಒಂದು ಕರೆಗೆ ಓಗೊಟ್ಟು ಬಂದ ನೂರಕ್ಕೂ ಹೆಚ್ಚು ಪೋಲಿಸರು


ಕೇವಲ ಒಂದು ಪೋನ್ ಮಾಡಿದ ಆಸ್ಪತ್ರೆ ಯ ಮಾಲಿಕನಿಗೆ ನೂರಕ್ಕೂ ಕ್ಕೂ ಹೆಚ್ಚು ಪೋಲಿಸ್ ಸಿಬ್ಬಂದಿ ಕಳುಹಿಸಿ ಭದ್ರತೆ ಒದಗಿಸಿ, ಇಷ್ಟು ಸಮಯವಾದರೂ ಕಾರಣಕರ್ತ ವೈದ್ಯರನ್ನು ಸ್ಥಳಕ್ಕೆ ಕರೆಸದೆ ಇರುವುದರಿಂದ ಪೋಲಿಸರ ವಿರುದ್ಧ ಸಾರ್ವಜನಿಕರು ತಿರುಗಿಬಿದ್ದರು, ಒಬ್ಬ ಇಸ್ಪೀಟು ಆಡುವವನನ್ನು, ಸಣ್ಣ ಕಳ್ಳತನ ಮಾಡಿದವನನ್ನು ಬೀದಿಯಲ್ಲಿ ನಿಲ್ಲಿಸಿ ಮಾನ ಹರಾಜು ಹಾಕುತ್ತೀರಿ ! ಇಲ್ಲಿ ಕೊಲೆ ಮಾಡಿದ ವೈದ್ಯರ ಪರ ನಿಂತಿದ್ದೀರಿ ಎಂದು ದೂಷಿಸಿದರು.


ಹೆರಿಗೆ ವೈದ್ಯೆಯೇ ಅಲ್ಲ, ಪರವಾನಗಿ ರದ್ದು ಮಾಡಿ


ಬಾಲು ಆಸ್ಪತ್ರೆ ಯ ವೈದ್ಯೆ ಶೈಲಜಾ ಸುಬ್ಬಯ್ಯ ಚೆಟ್ಟಿ ಯವರು ಎಂಬಿಬಿಎಸ್ ವೈದ್ಯರಾಗಿದ್ದು ಹೆರಿಗೆ (ಗೈನಾಕಾಲಜಿ) ವೈದ್ಯರಾಗಿಲ್ಲದಿದ್ದರೂ ಹೇಗೆ ಹೆರಿಗೆ ಮಾಡಿಸಿದರು, ಇದಕ್ಕೆ ಪರವಾನಗಿ ನೀಡಿದ ಅಧಿಕಾರಿಗಳನ್ನು ಅಮಾನತ್ತು ಮಾಡಬೇಕು, ಜಿಲ್ಲಾಧಿಕಾರಿ, ಜಿಲ್ಲಾ ವೈದ್ಯಾಧಿಕಾರಿಗಳು ಮತ್ತು ಸಾವಿಗೆ ಕಾರಣರಾದ ವೈದ್ಯರು ಸ್ಥಳಕ್ಕೆ ಬರಬೇಕೆಂದು ಪಟ್ಟು ಹಿಡಿದರು.


ರಾಜಿ ಸಂಧಾನಕ್ಕೆ ಮುಖಂಡರ ತೆರೆಮರೆ ಕಸರತ್ತು


ಹಲವಾರು ಮುಖಂಡರು ತೆರೆಮರೆಯಲ್ಲಿ ರಾಜಿ ಮಾಡುವ ಕೆಲಸದಲ್ಲಿ ತೊಡಗಿದ್ದದ್ದು ಹೆಂಗಸರ ಸಹನೆ ಕಟ್ಟೆಯೊಡಲು ಕಾರಣವಾಗಿತ್ತು, ನಮಗೆ ಹಣ ಮುಖ್ಯವಲ್ಲ, ಈ ರೀತಿಯ ತೊಂದರೆ ಯಾವ ಹೆಣ್ಣಿಗೂ ಮತ್ತೆ ಆಗುವುದು ಬೇಡ, ಆಸ್ಪತ್ರೆಗೆ ಬೀಗ ಜಡಿದು ಶಾಶ್ವತ ಪರಿಹಾರ ಕೊಡಿಸಬೇಕೆಂದು ಪಟ್ಟು ಹಿಡಿದರು.


ಹೆಣ್ಮಕ್ಳೇ ಸ್ಟ್ರಾಂಗೂ ಗುರೂ...


ತನ್ನ ಸಂಬಂಧಿಯ ಸಾವಿನ ಸುದ್ದಿ ತಿಳಿದ ಮಹಿಳೆಯರೇ ಆಸ್ಪತ್ರೆಯಲ್ಲಿ ಹೆಚ್ಚು ಗಲಾಟೆ ಮಾಡಿ ತಮ್ಮ ಕರುಳ ನೋವನ್ನು ತೋಡಿಕೊಳ್ಳುವುದರ ಜೊತೆಗೆ ವೈದ್ಯರು ಮತ್ತು ಪೋಲೀಸರ ಮೇಲೆ ಧಿಕ್ಕಾರ ಕೂಗಿದರು, ನಂತರ ನಗರ ಪೋಲಿಸ್ ಸ್ಟೇಷನ್ ಮುಂದೆ ಹೆದ್ದಾರಿ ತಡೆದ ದಿಟ್ಟೆಯರನ್ನು ತೆರವು ಗೊಳಿಸಲು ಪೋಲಿಸರು ಹರಸಾಹಸ ಪಡಬೇಕಾಯಿತು. ಆ ನೋವಿನಲ್ಲೂ ದಿಟ್ಟತನ ಮೆರೆದ ಮಹಿಳೆಯರಿಗೆ ಸಾರ್ವಜನಿಕರು ಪ್ರಶಂಸಿಸಿದರು.


ಕೊನೆಗೂ ರಾಜಿ ಸಂಧಾನ ಯಶಸ್ವಿ !?!


ಸ್ಥಳೀಯ ಮುಖಂಡರು ಮತ್ತು ಹೋರಾಟಗಾರರು ಎನಿಸಿಕೊಂಡವರು ತೆರೆಮರೆಯಲ್ಲಿ ರಾಜಿ ಸಂಧಾನ ಮಾಡುವಲ್ಲಿ ಯಶಸ್ವಿಯಾದರೆಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ, ಒಟ್ಟಾರೆ ಮುಂದಿನ ಮತ್ತೊಂದು ಬಲಿಗಾಗಿ  ಅನುವು ಮಾಡಿಕೊಟ್ಟಂತಾಗಿದ್ದು ಸಾರ್ವಜನಿಕರ ದುರ್ದೈವ.


ಕಕಜವೇ ರಾಜ್ಯಾಧ್ಯಕ್ಷ ರಮೇಶ್ ಗೌಡ, ಜೆಡಿಎಸ್ ನಗರ ಘಟಕದ ಅಧ್ಯಕ್ಷ ರಾಂಪುರ ರಾಜಣ್ಣ, ಕೃಷ್ಣೇಗೌಡ, ಮಳೂರು ಪಟ್ಟಣ ರವಿ, ಬೇವೂರು ಯೋಗೇಶ್, ಲ್ಯಾಬ್ ಚಂದ್ರು ಹಾಗೂ ಪೋಲಿಸ್ ಅಧಿಕಾರಿಗಳಾದ ಡಿವೈಎಸ್ಪಿ ಮಲ್ಲೇಶ್, ನಗರ ಸರ್ಕಲ್ ಇನ್ಸ್‌ಪೆಕ್ಟರ್ ಸತೀಶ್, ಹೇಮಂತ್ ಕುಮಾರ್, ಶಿವಕುಮಾರ್ ಸೇರಿದಂತೆ ಅನೇಕ ಸಿಬ್ಬಂದಿ ಭಾಗವಹಿಸಿದ್ದರು.



ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ
ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ

ರಾಮನಗರ/ಚನ್ನಪಟ್ಟಣ: (ವಿಮರ್ಶಾತ್ಮಕ ಲೇಖನ)

ನಗರದ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಪ್ರವರ ಹವ್ಯಾಸಿ ನಾಟಕ ತಂಡವು ನಡೆಸಿಕೊಟ್ಟ ಪೂರ್ಣ ಚ

ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.
ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.

ಚನ್ನಪಟ್ಟಣ :  ಚನ್ನಪಟ್ಟಣದಲ್ಲಿ ಮಹಿಳೆಯರೇ ಪೌರಾಣಿಕ ನಾಟಕವನ್ನು ಅಭ್ಯಾಸ ಮಾಡಿ ಬಯಲು ಮಂದಿರದಲ್ಲಿ ಪ್ರಸ್ತುತ ಪಡಿಸುತ್ತಿರುವುದು ವಿಶೇಷವಾಗಿದೆ. ಪೌರಾಣಿಕ

ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು
ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು

ಚನ್ನಪಟ್ಟಣ: ನಗರದ ಶ್ರೀ ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ಇದೇ ಮಾರ್ಚ್ ತಿಂಗಳ ಹತ್ತನೇ ತಾರಿಖಿನ ಭಾನುವಾರ ಮಧ್ಯಾಹ್ನ ತಾಲೂಕಿನಲ್ಲಿ ಇದೇ ಪ್ರಪ್ರಥ

ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್
ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್

ರಾಮನಗರ: ಶೂದ್ರರನ್ನು ವರ್ಣ ನೀತಿಯಿಂದಲೆ ವೈದಿಕರು ಆಳಿದರು. ಇಂದಿಗೂ ಸಹ ವೈದಿಕರು ರಾಮನನ್ನು ನಮ್ಮ ಮೇಲೆ ಹೇರುವ ಮೂಲಕ ಮತ್ತೆ ಪೂರ್ವಕಾಲಕ್ಕೆ ಕರೆದು

ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ

ರಾಮನಗರ, ಫೆ. 16  ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಫೆ.16ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆನಡೆದ ಉಪ ಚುನ

ವೈಜ್ಞಾನಿಕ ಮನೋವೃತ್ತಿ:ಸಾಂವಿಧಾನಿಕ ಕರ್ತವ್ಯ ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ

ರಾಮನಗರ; ಮಾನವ ಹಕ್ಕುಗಳನ್ನು ಯಾರೂ ಕೊಡುವುದಿಲ್ಲ, ವ್ಯಕ್ತಿಗಳಿಗೆ ಅವುಗಳಿಗೆ ಜನ್ಮತಃ ದಕ್ಕಿರುತ್ತವೆ. ಅವುಗಳನ್ನು ಯಾರೂ ಕೊಡುವುದಿಲ್ಲವಾದ್ದರಿ

ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ
ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ

ರಾಮನಗರ: ರಾಜ್ಯ ವಿಧಾನ ಸಭೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದ್ದು,  ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಇಂದು ಮಸ್ಟರಿಂಗ್ ಕಾರ್ಯ ಮುಗಿದು, ಮತಗಟ್ಟೆ ಸ

ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು
ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು

ರಾಮನಗರ: ಚನ್ನಪಟ್ಟಣ: ವೈದ್ಯ ಸಿಬ್ಬಂದಿಯಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ತಿಂಗಳು 20 ದಿನಗಳ ಗಂಡು ಶಿಶುವೊಂದು ಪ್ರಾಣ ಕಳೆದುಕೊ

ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್
ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್

ರಾಮನಗರ, ಫೆ. 12:   ನಾವು ರಾಮನಗರ ಜಿಲ್ಲೆಯವರಲ್ಲಾ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಗ್ರೇಟ್ ಬೆಂಗಳೂರು ಜಿಲ್ಲೆ ಮಾಡುವ ಬಗ್ಗೆ ಲೋಕಸಭಾ ಚ

ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್
ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್


ರಾಮನಗರ : ಫೆ 10 ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಕೇವಲ ಹಿಂದುತ್ವವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಭಾರತದ

Top Stories »  


Top ↑