Tel: 7676775624 | Mail: info@yellowandred.in

Language: EN KAN

    Follow us :


ರಾಜ್ಯದ ರೈತರ ಸಮಸ್ಯೆಗಳನ್ನು ನಿವಾರಿಸಲು ಮುಖ್ಯಮಂತ್ರಿಯವರಿಗೊಂದು ಬಹಿರಂಗ ಮನವಿ ಪತ್ರ ಸಿ ಪುಟ್ಟಸ್ವಾಮಿ

Posted date: 16 Jun, 2019

Powered by:     Yellow and Red

ರಾಜ್ಯದ ರೈತರ ಸಮಸ್ಯೆಗಳನ್ನು ನಿವಾರಿಸಲು ಮುಖ್ಯಮಂತ್ರಿಯವರಿಗೊಂದು ಬಹಿರಂಗ ಮನವಿ ಪತ್ರ ಸಿ ಪುಟ್ಟಸ್ವಾಮಿ

ರಾಮನಗರ ಜಿಲ್ಲೆ ಸೇರಿದಂತೆ ಕರ್ನಾಟಕದ ಎಲ್ಲಾ ಜಿಲ್ಲೆಗಳ ರೈತರು ಸಂಕಷ್ಟದಲ್ಲಿದ್ದು ಅವರೆಲ್ಲರಿಗೂ ವೈಜ್ಞಾನಿಕವಾಗಿ ಮತ್ತು ಕಾನೂನಾತ್ಮಕವಾಗಿ ರಕ್ಷಣೆ ಒದಗಿಸಲು ಹಾಗೂ ರಸ್ತೆಗಳು, ಕಟ್ಟಡಗಳ ಕಳಪೆ ಕಾಮಗಾರಿಗಳನ್ನು ತಡೆಯಲು, ಅವುಗಳ ಗುಣಮಟ್ಟ ಕಾಪಾಡಲು ಅಧಿಕಾರಿಗಳಿಗೆ ಸೂಚಿಸುವಂತೆ *ಮುಖ್ಯಮಂತ್ರಿಗಳಿಗೊಂದು ಮನವಿ* ಎಂಬ ಬಹಿರಂಗ ಪತ್ರವೊಂದನ್ನು ರಾಮನಗರದ ಎಪಿಎಂಸಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸುವ ಮೂಲಕ ಹಿರಿಯ ರೈತ ಮುಖಂಡ ಸಿ ಪುಟ್ಟಸ್ವಾಮಿ ಬಿಡುಗಡೆ ಮಾಡಿದರು.


ಅವರು ಬಿಡುಗಡೆ ಮಾಡಿದ ಮನವಿ ಪತ್ರವನ್ನು ಯಥಾವತ್ತಾಗಿ ನೀಡಿದ್ದೇವೆ


೧. ರಾಜ್ಯದಾದ್ಯಂತ ತಾಲ್ಲೂಕು ಮಟ್ಟದ ಭೂಮಂಜೂರಾತಿ ಸಮಿತಿಗಳನ್ನು ತಕ್ಷಣ ರಚನೆ ಮಾಡಿ, ನಮೂನೆ-೫೭ರ ಭೂಹೀನ ಹಾಗೂ ಸಣ್ಣ-ಅತಿಸಣ್ಣ ರೈತರ ಹಾಗೂ ಬಹಳ ಹಿಂದಿನಿಂದ ನೆನೆಗುದಿಗೆ ಬಿದ್ದಿರುವ ಅಕ್ರಮ-ಸಕ್ರಮ ನಮೂನೆ ೫೦ ಮತ್ತು ೫೩ರ ಅಕ್ರಮ ಸಾಗುವಳಿ ಅರ್ಜಿಗಳನ್ನು ಕಾಲಮಿತಿಯಲ್ಲಿ ಇತ್ಯರ್ಥ ಪಡಿಸುವುದರ ಮುಖಾಂತರ ಅರ್ಹ ಸಾಗುವಳಿದಾರರಿಗೆ ಹಕ್ಕುದಾರಿಕೆ ನೀಡಬೇಕಾಗಿದೆ.


೨. ಬಹಳ ವರ್ಷಗಳ ವಿಳಂಬ ಧೋರಣೆಯಿಂದಾಗಿ ಮಾಜಿ ಸೈನಿಕರಿಗೆ ಕೃಷಿ ಭೂ ಮಂಜೂರಾತಿ ವಿಳಂಬವಾಗಿದ್ದು, ಸದರಿ ಬಾಕಿ ಫಲಾನುಭವಿಗಳ  ಭೂಮಿ ಹಕ್ಕನ್ನು ಮಾಜಿ ಸೈನಿಕರ ಕುಟುಂಬಕ್ಕೆ, ತಾಲ್ಲೂಕು ಭೂಮಂಜೂರಾತಿ ಸಮಿತಿಗಳ ಮುಖಾಂತರವೇ ವಿತರಣೆ ಮಾಡಲು ಕ್ರಮ ಕೈಗೊಂಡರೆ ನಿವೃತ್ತ ಸೈನಿಕರಿಗೆ  ಗೌರವ ನೀಡಿದಂತಾಗುತ್ತದೆ.


೩. ವನ್ಯ ಜೀವಿಗಳ ಅದರಲ್ಲೂ ಆನೆ, ಹಂದಿ, ಜಿಂಕೆ, ನವಿಲು ಮುಂತಾದ ಕಾಡುಪ್ರಾಣಿಗಳಿಂದಾಗುತ್ತಿರುವ ನಿರಂತರ ಹಾವಳಿಯನ್ನು ಪದೇ ಪದೇ ರೈತರಿಗಾಗುತ್ತಿರುವ ಬೆಳೆಹಾನಿ ಮತ್ತು ಫಸಲು ಭರಿತ ವೃಕ್ಷಗಳ ಹಾನಿಯನ್ನು ಶಾಶ್ವತವಾಗಿ ತಡೆಗಟ್ಟಲು ರೈಲ್ವೆ ಬ್ಯಾರಿಕೇಡ್ ಮುಂತಾದ ವೈಜ್ಞಾನಿಕ ಪರಿಹಾರ ಕ್ರಮಗಳನ್ನು ಹಾಗೂ ನಷ್ಠವನ್ನು ವೈಜ್ಞಾನಿಕ ಮಾನದಂಡದ ಮುಖಾಂತರ ಲೆಕ್ಕಹಾಕಿ, ಗರಿಷ್ಠ ಒಂದು ತಿಂಗಳೊಳಗೆ ನಷ್ಠ ಅನುಭವಿಸಿದ ರೈತರಿಗೆ ತಲುಪಿಸಲು ತ್ವರಿತ ಕ್ರಮ ಕೈಗೊಳ್ಳಬೇಕಾಗಿದೆ.


೪. ಮಾವು, ಎಳನೀರು, ನೀರಾ ಸಂಸ್ಕರಣ ಘಟಕಗಳ ಸ್ಥಾಪನೆ ಕೇವಲ ಬಜೆಟ್ ಭಾಷಣಕ್ಕೆ ಸೀಮಿತವಾಗಿದ್ದು, ಅನುಷ್ಠಾನಕ್ಕೆ ಈಗಲಾದರೂ ಕಾಯಕಲ್ಪ ನೀಡಬೇಕಾಗಿದೆ.


೫. ನೀರಾವರಿ ಯೋಜನಾ ವ್ಯಾಪ್ತಿಯಲ್ಲಿ ಬರುವ ಕೆರೆ, ಕಟ್ಟೆಗಳಿಗೆ ನೀರು ತುಂಬಿಸುವಲ್ಲಿ ನಿಗದಿತ ಮಾನದಂಡ ರೂಪಿಸಿ, ಪಾರದರ್ಶಕವಾಗಿ ಕೆರೆಯ ನೀರಿನ ಶೇಖರಣಾ ಪ್ರಮಾಣಕ್ಕನು-ಗುಣವಾಗಿ, ನೀರು ತುಂಬಿಸುವ ವೇಳಾಪಟ್ಟಿ ಮುಖಾಂತರ ಗೊಂದಲಗಳಿಗೆ ಪ್ರಭಾವಿಗಳ ಒತ್ತಡಕ್ಕೆ ಹಾಗೂ ತಾರತಮ್ಯಕ್ಕೆ ಅವಕಾಶವಾಗದಂತೆ ನೀರು ತುಂಬಿಸುವ ಸೂತ್ರ ಜಾರಿಗೊಳಿಸಬೇಕು.


ಏಕೆಂದರೆ ತಮ್ಮ ಕ್ಷೇತ್ರದಲ್ಲೇ ಕೆಲವು ಕೆರೆಗಳಿಗೆ ಯೋಜನೆ ಚಾಲ್ತಿಗೆ ಬಂದ ತರುವಾಯ ೩-೪ ಭಾರಿ ತುಂಬಿಸಿದ್ದು, ಇದೇ ಯೋಜನೆಯ ವ್ಯಾಪ್ತಿಯ ಹಲವಾರು ಕೆರೆಗಳಿಗೆ ಒಮ್ಮೆಯೂ ನೀರು ತುಂಬಿಲ್ಲ.  ಪೈಪುಲೈನು ಇದ್ದಾಗ್ಯು ನೀರು ಬಿಡುತ್ತಿಲ್ಲ, ಅದರಲ್ಲೂ ತಾಲ್ಲೂಕಿನ ಗಡಿಭಾಗದ ಕೆರೆಗಳು ಇಂತಹ ಉದ್ದೇಶಿತ ವಂಚನೆಗಳಿಗೆ ಒಳಗಾಗಿದ್ದು, ಆ ಭಾಗದ ಹಳ್ಳಿಗರಿಗೆ ಮಲತಾಯಿ ಧೋರಣೆ ಎದುರಾಗಿದೆ. 


೬. ೨೦೧೨-೧೩ರಿಂದ ನೆನೆಗುದಿಗೆ ಬಿದ್ದಿರುವ ಸಿ೨  ಏತಬಿಂದು ನೀರಾವರಿ ಯೋಜನೆ ಅವಿವೇಕಿ ಅಧಿಕಾರಿಗಳ ಬೇಜವಾಬ್ದಾರಿಯಿಂದ ಆರು ಬಾರಿ ಟೆಂಡರ್ ಮುಂದೂಡಿದೆ ಎಂದರೆ ಏನೋ ರಹಸ್ಯ ಅಡಗಿದೆ.  


೭. ರಸ್ತೆ ಕಟ್ಟಡ ಕಾಮಗಾರಿಗಳ ಸಂದರ್ಭದಲ್ಲಿ ಗುಣ ನಿಯಂತ್ರಣ ಇಲಾಖೆ ಅಧಿಕಾರಿಗಳು ಹಾಜರಿರದೆ, ಕಾಟಾಚಾರದ ಹಾಗೂ ಕಳಪೆ ಕಾಮಗಾರಿಗಳು ವ್ಯಾಪಕವಾಗಿ ನಡೆಯುತ್ತಿದ್ದು, ಅನುಮೋದಿತ ಅಂದಾಜುಪಟ್ಟಿ ಹಾಗೂ ಕಾರ್ಯಕ್ಷಮತೆ ಒಂದಕ್ಕೊಂದು ಪೂರಕವಾಗಿದ್ದು  ಗುಣಮಟ್ಟವನ್ನು ದೃಢಪಡಿಸಬೇಕಿದೆ.


೮. ಈಗಲ್ ಟನ್ (ಮೆ|| ಚಾಮುಂಡೇಶ್ವರಿ ಬಿಲ್ ಟೆಕ್ ಕಂ ) ಪ್ರಕರಣ ದಶಕಗಳಿಂದ ಎರಡು-ಮೂರು ಮುಖಗಳೊಡನೆ ನರಳುತ್ತಿದೆ. ಸಹಸ್ರಾರು ಕೋಟಿ ರೂ.ಗಳ ಬೆಲೆಬಾಳುವ ಇಲ್ಲಿನ ಸಾರ್ವಜನಿಕ ಭೂಮಿ ಮತ್ತು ಅದರ ಕಿಮ್ಮತ್ತನ್ನು ರಾಜಕೀಯ ಪಕ್ಷಗಳ ಅಡ್ಡೆ ಮತ್ತು ಆಡೊಂಬಲದ ಕಾರಣಕ್ಕೆ ಬಲಿಯಾಗದಂತೆ ತಡೆದು ಈಗಲ್ ಟನ್ ಆಕ್ರಮಿತ ಭೂಮಿಯ ಸಹಸ್ರಾರು ಕೋಟಿ ಹಣವನ್ನು ಬಡ್ಡಿ ಸಮೇತ ವಸೂಲಿ ಮಾಡಬೇಕು.


೯. ಕೃಷಿ ಯಾಂತ್ರೀಕರಣಗಳ ಗುಣಮಟ್ಟ ಕಳಪೆಯಾಗಿದ್ದು, ಚೀನಾ ಬ್ರಾಂಡಿಗೆ ಸ್ಥಳೀಯ ಪದನಾಮ-ಲೇಬಲ್ ಅಂಟಿಸಿ ನಕಲಿ ಬ್ರಾಂಡ್ ಸೃಷ್ಟಿಸಿ ದುಬಾರಿ ಬೆಲೆ ನಿಗದಿಪಡಿಸಿದ ಕಾರಣ ರೈತರ ಪಾಲು ದುಬಾರಿಯಾಗಿದ್ದು, ಯೋಜನೆ ಮುಖಾಂತರ ತೂರುತ್ತಿವೆ.  ಅಪಾರ ಪ್ರಮಾಣದ ವಂಚನೆಯ ಜಾಲವೇ ನಿರ್ಮಾಣವಾಗಿದ್ದು, ಸಮಗ್ರ ತನಿಖೆಗೆ ಆದೇಶವಾಗಬೇಕಿದೆ.

 

೧೦. ಹವಾಮಾನ ಆಧಾರಿತ ಬೆಳೆಪದ್ದತಿ ಅನುಷ್ಠಾನದ ಬಗ್ಗೆ ಶೀಘ್ರವಾಗಿ ಕ್ರಮ ಕೈಗೊಳ್ಳಬೇಕಾಗಿದೆ.


೧೧.ಅಧಿಕ ಉಷ್ಣಾಂಶ ಹಾಗೂ ಹವಾಮಾನ ವೈಪರೀತ್ಯ ಸಂಗಡ ರೇಷ್ಮೆ ಬೆಳೆಗಾರರು, ಧಾರಣೆ ಸಿಗದೆ ಹೈರಾಣಾಗಿದ್ದಾರೆ.  “ರೇಷ್ಮೆ ಇಳುವರಿ ಆಧಾರಿತ ವೈಜ್ಞಾನಿಕ ಮಾನದಂಡ ಸೂತ್ರವನ್ನು (ರೆಂಡಿಟ್ಟಾ ಮಾದರಿ) ಅಳವಡಿಸಿ ಗೂಡು ಖರೀದಿಸಲು ಮತ್ತು ರೇಷ್ಮೆ ಮಾಫಿಯಾ ನಿಗ್ರಹ ಮಾಡಲು ಅಗತ್ಯ ಕ್ರಮಕೈಗೊಂಡು ಬೆಳೆಗಾರರನ್ನು ಮತ್ತು ರೀಲರ್‌ಗಳನ್ನು ರಕ್ಷಿಸಬೇಕಾಗಿದೆ.


೧೨. ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ನಡೆಯತ್ತಿರುವ ಕಮೀಷನ್ ಎಂಬ ಕರಾಳ ದಂಧೆಗೆ ಹಾಗೂ ಅಧಿಕೃತ ಕನಿಷ್ಠ ಖರೀದಿ ಬೆಲೆಗಿಂತ ಕಡಿಮೆ ದರದಲ್ಲಿ ರೈತರ ಉತ್ಪನ್ನಗಳು ಖರೀದಿಯಾಗದಂತೆ ಸೂಕ್ತ ವಿಧಿ-ವಿಧಾನಗಳನ್ನು ರೂಪಿಸಬೇಕಾಗಿದೆ.


೧೩. ಮೂಲಭೂತವಾಗಿ ರೈತರ ಎಲ್ಲಾ ಬೆಳೆಗಳಿಗೂ “ಕಾನೂನು ಬದ್ದ ಸ್ಥಾನ-ಮಾನ ಸಾಧ್ಯವಾಗಿಸುವುದರ ಮುಖಾಂತರ ರೈತರ ಋಣ ತೀರಿಸುವ ಸಂಕಲ್ಪಕ್ಕೆ ಮುಂದಾಗಿ ಇಡೀ ರಾಷ್ಟ್ರದಲ್ಲೇ ಮಾದರಿಯಾಗಬೇಕಾಗಿದೆ.


೧೪. ಕಾಡು ಪ್ರಾಣಿಗಳು ನಾಡಿಗೆ ಬರುವುದೇ ಮೇವು ಮತ್ತು ನೀರಿಗಾಗಿ, ಕಾಡಿನಲ್ಲಿರುವ ಕೆರೆ-ಕಟ್ಡೆಗಳನ್ನು ಪುನಶ್ಚೇತನಗೊಳಿಸಿ, ಮಳೆಗಾಲದಲ್ಲಿ ನೀರು ಹಿಡಿದಿಡಲು ಬೇಸಿಗೆ ಕಾಲದಲ್ಲಿ ಆ ಕೆರೆಗಳಿಗೆ ನೀರು ತುಂಬಿಸಲು ಒಂದು ಕೊಳವೆ ಬಾವಿ ಕೊರೆಸಿ ವಿದ್ಯುತ್ ಸಂಪರ್ಕ ಇಲ್ಲದ ಸ್ಥಳಕ್ಕೆ ಸೋಲಾರ್ ಸಿಸ್ಟಂ ಅಳವಡಿಸಿದರೆ ಪ್ರಾಣಿಗಳು ನಾಡಿನೊಳಗೆ ಬರುವುದನ್ನು ತಪ್ಪಿಸಬಹುದು.


ರೈತರಿಗೆ, ಕಾಡುಪ್ರಾಣಿಗಳಿಗೆ ಮತ್ತು ನಾಡಿಗೆ ಒಳಿತಾಗುವ ಇಂತಹ ಕಾರ್ಯಗಳಿಗೆ ಮಾನ್ಯ ಮುಖ್ಯಮಂತ್ರಿಗಳು ಮನ್ನಣೆ ನೀಡಬೇಕೆಂದು ಅವರು ಇದೇ ವೇಳೆ ಮನವಿ ಮಾಡಿದರು.


ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಜಾನಪದ ಪರಿಷತ್ತು ತಾಲ್ಲೂಕು ಅಧ್ಯಕ್ಷ ಗೋ ರಾ ಶ್ರೀನಿವಾಸ, ಹಿರಿಯ ರೈತ ಮುಖಂಡರುಗಳಾದ ವಿಠಲೇನಹಳ್ಳಿ ಹೊಂಬಾಳೇಗೌಡ, ಎಂ ಪುಟ್ಟಸ್ವಾಮಿ ಮತ್ತು ನಂಜಪ್ಪ ಹಾಜರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ
ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ

ರಾಮನಗರ/ಚನ್ನಪಟ್ಟಣ: (ವಿಮರ್ಶಾತ್ಮಕ ಲೇಖನ)

ನಗರದ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಪ್ರವರ ಹವ್ಯಾಸಿ ನಾಟಕ ತಂಡವು ನಡೆಸಿಕೊಟ್ಟ ಪೂರ್ಣ ಚ

ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.
ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.

ಚನ್ನಪಟ್ಟಣ :  ಚನ್ನಪಟ್ಟಣದಲ್ಲಿ ಮಹಿಳೆಯರೇ ಪೌರಾಣಿಕ ನಾಟಕವನ್ನು ಅಭ್ಯಾಸ ಮಾಡಿ ಬಯಲು ಮಂದಿರದಲ್ಲಿ ಪ್ರಸ್ತುತ ಪಡಿಸುತ್ತಿರುವುದು ವಿಶೇಷವಾಗಿದೆ. ಪೌರಾಣಿಕ

ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು
ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು

ಚನ್ನಪಟ್ಟಣ: ನಗರದ ಶ್ರೀ ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ಇದೇ ಮಾರ್ಚ್ ತಿಂಗಳ ಹತ್ತನೇ ತಾರಿಖಿನ ಭಾನುವಾರ ಮಧ್ಯಾಹ್ನ ತಾಲೂಕಿನಲ್ಲಿ ಇದೇ ಪ್ರಪ್ರಥ

ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್
ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್

ರಾಮನಗರ: ಶೂದ್ರರನ್ನು ವರ್ಣ ನೀತಿಯಿಂದಲೆ ವೈದಿಕರು ಆಳಿದರು. ಇಂದಿಗೂ ಸಹ ವೈದಿಕರು ರಾಮನನ್ನು ನಮ್ಮ ಮೇಲೆ ಹೇರುವ ಮೂಲಕ ಮತ್ತೆ ಪೂರ್ವಕಾಲಕ್ಕೆ ಕರೆದು

ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ

ರಾಮನಗರ, ಫೆ. 16  ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಫೆ.16ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆನಡೆದ ಉಪ ಚುನ

ವೈಜ್ಞಾನಿಕ ಮನೋವೃತ್ತಿ:ಸಾಂವಿಧಾನಿಕ ಕರ್ತವ್ಯ ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ

ರಾಮನಗರ; ಮಾನವ ಹಕ್ಕುಗಳನ್ನು ಯಾರೂ ಕೊಡುವುದಿಲ್ಲ, ವ್ಯಕ್ತಿಗಳಿಗೆ ಅವುಗಳಿಗೆ ಜನ್ಮತಃ ದಕ್ಕಿರುತ್ತವೆ. ಅವುಗಳನ್ನು ಯಾರೂ ಕೊಡುವುದಿಲ್ಲವಾದ್ದರಿ

ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ
ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ

ರಾಮನಗರ: ರಾಜ್ಯ ವಿಧಾನ ಸಭೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದ್ದು,  ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಇಂದು ಮಸ್ಟರಿಂಗ್ ಕಾರ್ಯ ಮುಗಿದು, ಮತಗಟ್ಟೆ ಸ

ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು
ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು

ರಾಮನಗರ: ಚನ್ನಪಟ್ಟಣ: ವೈದ್ಯ ಸಿಬ್ಬಂದಿಯಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ತಿಂಗಳು 20 ದಿನಗಳ ಗಂಡು ಶಿಶುವೊಂದು ಪ್ರಾಣ ಕಳೆದುಕೊ

ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್
ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್

ರಾಮನಗರ, ಫೆ. 12:   ನಾವು ರಾಮನಗರ ಜಿಲ್ಲೆಯವರಲ್ಲಾ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಗ್ರೇಟ್ ಬೆಂಗಳೂರು ಜಿಲ್ಲೆ ಮಾಡುವ ಬಗ್ಗೆ ಲೋಕಸಭಾ ಚ

ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್
ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್


ರಾಮನಗರ : ಫೆ 10 ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಕೇವಲ ಹಿಂದುತ್ವವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಭಾರತದ

Top Stories »  


Top ↑