Tel: 7676775624 | Mail: info@yellowandred.in

Language: EN KAN

    Follow us :


ನಗರಸಭೆ ಆಡಳಿತಾಧಿಕಾರಿಗಳ ವಿರುದ್ದ ಕಿಡಿಕಾರಿದ ಸದಸ್ಯರು

Posted date: 16 Jun, 2023

Powered by:     Yellow and Red

ನಗರಸಭೆ ಆಡಳಿತಾಧಿಕಾರಿಗಳ ವಿರುದ್ದ ಕಿಡಿಕಾರಿದ ಸದಸ್ಯರು

ಚನ್ನಪಟ್ಟಣ: ನಗರಸಭಾ ಆಡಳಿತಾಧಿಕಾರಿಗಳ ವಿರುದ್ದ ಪಕ್ಷ ಬೇಧ  ಮರೆತು ಆಡಳಿತ ಮತ್ತು ವಿರೋಧ ಪಕ್ಷದವರ ಸದಸ್ಯರು ಒಗ್ಗೂಡಿ ಅಧಿಕಾರಿಗಳಿಗೆ ಚುರುಕು ಮುಟ್ಟಿಸಿದ ಘಟನೆ ನಗರಸಭಾ ಸಾಮಾನ್ಯ ಸಭೆಯಲ್ಲಿ ಜರುಗಿತು.


ಗುರುವಾರ ನಗರಸಭಾ ಕಚೇರಿಯಲ್ಲಿ ಕರೆಯಲಾಗಿದ್ದ ಸಾಮಾನ್ಯ ಸಭೆಯಲ್ಲಿ ಪಕ್ಷಬೇಧ ಮರೆತು ಸದಸ್ಯರೆಲ್ಲಾ ಪೌರಾಯುಕ್ತರು ಸೇರಿದಂತೆ ಅಧಿಕಾರಿ ವರ್ಗವನ್ನು ತರಾಟೆಗೆ ತೆಗೆದುಕೊಂಡು ಕಾಟಾಚಾರಕ್ಕೆ ಸಭೆ ಕರೆಯುವ ಬದಲು ನಿಮ್ಮಿಷ್ಟ ಬಂದ ರೀತಿ ಕಾರ್ಯ ನಿರ್ವಹಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದರು.


ಸಭೆ ಪ್ರಾರಂಭವಾಗುತ್ತಿದ್ದಂತೆ ನಗರಸಭಾ ಸದಸ್ಯ ವಾಸೀಲ್ ಆಲಿಖಾನ್ ನಾವು ಗೆದ್ದು ಎರಡು ವರ್ಷವಾಗುತ್ತಿದ್ದು, ಎರಡನೇ ಬಾರಿ ಸಭೆ ನಡೆಸುತಿದ್ದೀರಾ, ನಾವೂ ಸಹ ನೀವೂ ನೀಡುವ ಟೀ ಬಿಸ್ಕೆಟ್‍ಗೆ ಬಂದು ಹೋಗುವದಕ್ಕಷ್ಟೆ ಸಭೆ ಸೀಮಿತವಾಗಿದ್ದು ಸಭೆಯಲ್ಲಿ ಚರ್ಚಿಸಿದ ಯಾವೂಂದು ವಿಷಯಗಳು ಜಾರಿಯಾಗುವುದಿಲ್ಲ, ಅಧಿಕಾರಿಗಳು ನಮಗೆ ಕವಡೆಕಾಸಿನ ಕಿಮ್ಮತ್ತು ನೀಡುವುದಿಲ್ಲ, ಇಂತಹ ಸನ್ನಿವೇಶದಲ್ಲಿ ಯಾವ ಕಾರಣಕ್ಕೆ ಸಭೆಗೆ ಬರಬೇಕೆಂದು ಆಸಹಾಯಕತೆ ವ್ಯಕ್ತಪಡಿಸಿದರು.


ಇದಕ್ಕೆ ಉತ್ತರಿಸಲು ಪೌರಾಯುಕ್ತ ಪುಟ್ಟಸ್ವಾಮಿ ಮುಂದಾದ ವೇಳೆ ಅವರ ವಿರುದ್ದ ಸಹ ಹರಿಹಾಯ್ದ ವಾಸಿಲ್ ನೀವೆ ದಾರಿ ತಪ್ಪಿರುವಾಗ ನಿಮ್ಮ ಅಧಿಕಾರಿ ವರ್ಗ ಯಾವ ರೀತಿ ಕೆಲಸ ಮಾಡುತ್ತದೆ ಹೇಳಿ, ಮೊದಲು ನೀವು ಸರಿಯಾದರೆ, ಅಧಿಕಾರಿ ವರ್ಗ ತಾನಾಗೇ ಸರಿಹೋಗುತ್ತೆ ಎಂದು ಪೌರಾಯುಕ್ತರ ವಿರುದ್ದ ಗರಂ ಆದರು.


*ಕಳಪೆ ಕಾಮಗಾರಿ ಆರೋಪ:*

ಆಡಳಿತ ಪಕ್ಷದ ಸದಸ್ಯ ಶ್ರೀನಿವಾಸಮೂರ್ತಿ ಮಾತನಾಡಿ ನಗರದಲ್ಲಿ ನಗರಸಭಾ ಅನುದಾನ ಹಾಗೂ ನಗರೋತ್ಥಾನ ಮತ್ತು ವಿಶೇಷ ಅನುದಾನದಡಿಯಲ್ಲಿ ಕೈಗೊಂಡಿರುವ ಕಾಮಗಾರಿಗಳು ಬಹುತೇಕ ಕೆಲಸಗಳು ಸಂಪೂರ್ಣ ಕಳಪೆಯಾಗಿದ್ದು, ಈ ಬಗ್ಗೆ ಅಧಿಕಾರಿಗಳಿಗೆ ದೂರು ನೀಡಿ ಬಿಲ್ ಮಾಡದಂತೆ ಮನವಿ ಮಾಡಿದರೂ ಏನು ಪ್ರಯೋಜನವಾಗಿಲ್ಲ. ನಮ್ಮ ದೂರಿಗೆ ಕ್ಯಾರೆ ಎನ್ನದೆ ಕಾಮಗಾರಿ ಪೂರ್ಣಗೊಳಿಸದ ಗುತ್ತಿಗೆದಾರನಿಗೆ ಬಿಲ್ ಮಾಡಿದ್ದು, ಬಾಕಿಯುಳಿದ ಕೆಲಸ ಮಾಡುವರು ಯಾರು, ಇದಕ್ಕೆ ಉತ್ತರಿಸುವವರು ಯಾರೆಂದು ಅಧಿಕಾರಿ ವಿರುದ್ದ ಹರಿಹಾಯ್ದರು.


ಇದಕ್ಕೆ ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರು ಸಹ ದನಿಗೊಡಿಸಿ, ತಮ್ಮ ವಾರ್ಡ್‍ಗಳಲ್ಲೂ ಇದೇ ರೀತಿ ಯಾಗಿದ್ದು, ಈ ಬಗ್ಗೆ ಅಧ್ಯಕ್ಷರು ಮತ್ತು ಪೌರಾಯುಕ್ತರು ಸ್ಥಳ ಪರಿಶೀಲನೆ ನಡೆಸಿ ಕಾಮಗಾರಿ ಪೂರ್ಣಗೊಳ್ಳುವವರೆಗೂ ಬಿಲ್‍ಪಾಸ್ ಮಾಡದಂತೆ, ಕಳಪೆ ಕೆಲಸ ಮಾಡಿದ ಗುತ್ತಿಗೆದಾರನ ವಿರುದ್ದ ಕ್ರಮ ಕೈಗೊಳ್ಳುವಂತೆ ಆಗ್ರಹಪಡಿಸಿದರು.


*ಸಮಸ್ಯೆಗಳ ಕಾರುಬಾರು:*

ನಗರಸಭೆಯಲ್ಲಿ ಒಂದಲ್ಲಾ ಎರಡಲ್ಲಾ ಹತ್ತಾರು ಸಮಸ್ಯೆಗಳಿದ್ದು, ಯಾವೊಂದು ಸಮಸ್ಯೆ ಸಹ ಇಲ್ಲಿಯವರೆಗೂ ಬಗೆಹರಿದ ಉದಾಹರಣೆ ಇಲ್ಲವಾಗಿದ್ದು, ಅಧಿಕಾರಿ ವರ್ಗ ಸೇರಿದಂತೆ ನಾವೆಲ್ಲಾ ಕೇವಲ ಕಾಟಾಚಾರದ ಸಭೆಯನ್ನಷ್ಟೇ ಮಾಡುತ್ತಿರುವುದಾಗಿ ಸರ್ವ ಸದಸ್ಯರು ನಗರಸಭಾ ಆಡಳಿತ ವೈಖರಿ ವಿರುದ್ದ ತಿರುಗಿಬಿದ್ದರು.


ನಗರದಲ್ಲಿ ಯುಜಿಡಿ ಸಮಸ್ಯೆ ಮೀತಿಮೀರಿದ್ದು, ಅದರಿಂದಾಗುತ್ತಿರುವ ದುಷ್ಪರಿಣಾಮಗಳು ಯಾರ ಅರಿವಿಗೂ ಬರುತ್ತಿಲ್ಲ, ಕಸದ ಸಮಸ್ಯೆ ಬಗ್ಗೆ ಮಾತನಾಡುವಂತೆಯೇ ಇಲ್ಲಾ, ಇನ್ನೂ ನೀರಿನ ಸಮಸ್ಯೆ ಬಗ್ಗೆ ಮಾತನಾಡೋಣವೆಂದರೆ ನಾವೂ ಕರೆಯುವ ಯಾವ ಸಭೆಗೂ ವಾಟರ್ ಬೋರ್ಡ್‍ನವರು ಬರುವುದೆ ಇಲ್ಲಾ, ಇವುಗಳನ್ನೆಲ್ಲಾ ನೋಡಿದರೆ ಯಾವ ಪುರುಸಾರ್ಥಕ್ಕೆ ನಾವೂಗಳು ನಗರಸಭಾ ಸದಸ್ಯರಾಗಿದ್ದೇವೆ ಎಂದು ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳುವಂತಾಗಿದ್ದು, ನಮ್ಮ ಹಿತ ಕಾಯಬೇಕಾದ ಅಧ್ಯಕ್ಷರು, ಪೌರಾಯುಕ್ತರು ಸಹ ಕೋಲೆ ಬಸವನ ತರ ಎಲ್ಲದಕ್ಕೂ ತಲೆ ಆಡಿಸುವುದು ಬಿಟ್ಟರೇ ಬೇರೆನೂ ಮಾಡುತ್ತಿಲ್ಲವೆಂದು ಆಸಹಾಯಕತೆ ವ್ಯಕ್ತಪಡಿಸಿದರು.


*ಪುಟ್‍ಪಾತ್ ಸಮಸ್ಯೆ, ಸಿಬ್ಬಂದಿ ಕೊರತೆ ಪರಿಹರಿಸಿ:*

ನಗರದಲ್ಲಿನ ಪ್ರಮುಖ ರಸ್ತೆಗಳಲ್ಲಿ ಪುಟ್‍ಪಾತ್ ಅತಿಕ್ರಮಣ ವಾಗಿರುವುದರಿಂದ, ಬೀದಿ ವ್ಯಾಪಾರಿಗಳು ವ್ಯಾಪಾರಕ್ಕೆ ಪುಟ್‍ಪಾತ್ ಅನ್ನೇ ಆಕ್ರಮಿಸಿಕೊಂಡಿರುವ ಕಾರಣ ಪಾದಾಚಾರಿಗಳಿಗೆ, ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಈ ಬಗ್ಗೆ ಹಲವು ಸಭೆಗಳಲ್ಲಿ ಪ್ರಸ್ತಾಪವಾದರೂ ಸಮಸ್ಯೆ ಬಗೆಹರಿದಿಲ್ಲ, ದಯಮಾಡಿ ಅಧ್ಯಕ್ಷರು ಮತ್ತು ಪೌರಾಯುಕ್ತರು ಪೊಲೀಸ್ ಇಲಾಖೆಯ ಸಹಕಾರದಲ್ಲಿ ಪುಟ್‍ಪಾತ್ ತೆರವಿಗೆ ಮುಂದಾಗುವಂತೆ ಒಕ್ಕೊರಲಿನಲ್ಲಿ ಮನವಿ ಮಾಡಿಕೊಂಡರು.


ಇದರೊಟ್ಟಿಗೆ ನಗರಸಭೆಯಲ್ಲಿ ಸಿಬ್ಬಂದಿಗಳ ಕೊರತೆ ಜಾಸ್ತಿಯಿದೆ, ಇದರಿಂದ ದೈನಂದಿನ ಕೆಲಸಕಾರ್ಯಗಳ ನಿರ್ವಹಣೆಗೆ ಸಾಕಷ್ಟು ತೊಂದರೆಯಾಗುತ್ತಿದ್ದು, ಈ ಬಗ್ಗೆ ಜಿಲ್ಲೆಯವರೇ ಆದ ಡಿಸಿಎಂ ರವರನ್ನು ಭೇಟಿ ಮಾಡಿ ಸಮಸ್ಯೆ ಬಗೆಹರಿಸಲು ಮುಂದಾಗುವಂತೆ ಒಮ್ಮತದ ನಿರ್ಧಾರಕ್ಕೆ ಬರಲಾಯಿತು.


*ಸದಸ್ಯರಿಗೆ ಗೌರವ ನೀಡಿ:*

ಅಧಿಕಾರಿಗಳಾಗಲಿ, ಸಿಬ್ಬಂದಿ ವರ್ಗದವರಾಗಲಿ ನಗರಸಭಾ ಸದಸ್ಯರಿಗೆ ಗೌರವ ನೀಡುತ್ತಿಲ್ಲ, ವಾರ್ಡ್‍ನಲ್ಲಿ ಕೆಲಸ ಮಾಡುವ ಗುತ್ತಿಗೆದಾರರು ಸಹ ನಮ್ಮನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ, ಇಷ್ಟಬಂದ ರೀತಿಯಲ್ಲಿ ಕಾರ್ಯ ನಿರ್ವಹಿಸುವುದು ನಮ್ಮ ಗೌರವಕ್ಕೆ ಧಕ್ಕೆ ತರಲಿದ್ದು, ದಯಮಾಡಿ ಪೌರಾಯುಕ್ತರು ಈ ವಿಚಾರದಲ್ಲಿ ಎಲ್ಲರಿಗೂ ಸ್ಪಷ್ಟ ಸೂಚನೆ ನೀಡಿ ನಮ್ಮ ಹಕ್ಕು ಭಾದ್ಯತೆಗಳನ್ನು ಕಾಪಾಡಬೇಕೆಂದರು.


ಉಳಿದಂತೆ ಅಧ್ಯಕ್ಷರ ಅಪ್ಪಣೆ ಮೇರೆಗೆ ಎಸ್‍ಎಫ್‍ಸಿ ಅನುದಾನ, ಮಳಿಗೆ ಹರಾಜು, 15 ನೇ ಹಣಕಾಸು ಕ್ರೀಯಾ ಯೋಜನೆ ತಯಾರಿ, ಆಸ್ತಿಗಳ ಸೃಜನೆ ಸೇರಿ ಹಲವು ವಿಚಾರಗಳನ್ನು ಸಭೆಯಲ್ಲಿ ಚರ್ಚಿಸಲಾಯಿತು.

ಸಭೆಯಲ್ಲಿ ಅಧ್ಯಕ್ಷರಾದ ಪಿ.ಪ್ರಶಾಂತ್, ಪೌರಾಯುಕ್ತ ಪುಟ್ಟಸ್ವಾಮಿ, ಉಪಾಧ್ಯಕ್ಷರಾದ ಹಸೀನಾ ಪರ್ಹಿನ್ ಸೇರಿದಂತೆ ಸದಸ್ಯರಗಳು, ಅಧಿಕಾರಿ ವರ್ಗದವರು, ಸಿಬ್ಬಂದಿಗಳು ಹಾಜರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in sports »

ಅಭಿವೃದ್ಧಿಗೆ ಸುರಕ್ಷತೆ ಮತ್ತು ಸುಸ್ಥಿರತೆ ಅಗತ್ಯ: ಜಿಲ್ಲಾಧಿಕಾರಿ
ಅಭಿವೃದ್ಧಿಗೆ ಸುರಕ್ಷತೆ ಮತ್ತು ಸುಸ್ಥಿರತೆ ಅಗತ್ಯ: ಜಿಲ್ಲಾಧಿಕಾರಿ

ರಾಮನಗರ: ಸುರಕ್ಷತೆ ಮತ್ತು ಸುಸ್ಥಿರತೆ ಎಲ್ಲರ ಆದ್ಯತೆಯಾಗಬೇಕು. ರಸ್ತೆ ಸುರಕ್ಷೆಯ ಬಗ್ಗೆ ಸಮಾಜವನ್ನು ಜಾಗೃತಗೊಳಿಸಲು ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ಡಾ

ಮಾರುತಿ ಸ್ಪೋರ್ಟ್ಸ್ ಅಂಡ್ ರಿಕ್ರಿಯೇಷನ್ ಕ್ಲಬ್ ಮೇಲೆ ಪೋಲಿಸರ ದಾಳಿ, ೨೯ಮಂದಿಯ ಮೇಲೆ ಎಫ್ಐಆರ್, ೧,೧೦,೧೦೦₹ ಡಿವಿಆರ್, ರಿಜಿಸ್ಟರ್ ವಶಕ್ಕೆ
ಮಾರುತಿ ಸ್ಪೋರ್ಟ್ಸ್ ಅಂಡ್ ರಿಕ್ರಿಯೇಷನ್ ಕ್ಲಬ್ ಮೇಲೆ ಪೋಲಿಸರ ದಾಳಿ, ೨೯ಮಂದಿಯ ಮೇಲೆ ಎಫ್ಐಆರ್, ೧,೧೦,೧೦೦₹ ಡಿವಿಆರ್, ರಿಜಿಸ್ಟರ್ ವಶಕ್ಕೆ

ಚನ್ನಪಟ್ಟಣ: ನಗರದ ಹೊರವಲಯದಲ್ಲಿನ ಸಾತನೂರು ಮುಖ್ಯ ರಸ್ತೆಯ ಕಲ್ಪವೃಕ್ಷ ಹೋಟೆಲ್ ಹಿಂಭಾಗವಿರುವ ಮಾರುತಿ ಸ್ಪೋರ್ಟ್ಸ್ ಅಂಡ್ ರಿಕ್ರಿಯೇಷನ್ ಕ್ಲಬ್ ಮೇಲೆ ಗ್ರ

ಜೂನ್ 19ರಂದು ಚನ್ನಪಟ್ಟಣದಲ್ಲಿ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿ
ಜೂನ್ 19ರಂದು ಚನ್ನಪಟ್ಟಣದಲ್ಲಿ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿ

ಚನ್ನಪಟ್ಟಣ: ಕದಂಬ ಸೈನ್ಯ ಹಾಗೂ ರಾಮನಗರ ಜಿಲ್ಲಾ ಕುಸ್ತಿ ಸಂಘದ ಸಂಯುಕ್ತಾಶ್ರಯದಲ್ಲಿ ಜೂ. 19ರ ಭಾನುವಾರ ನಗರದ ಬಾಲಕರ ಪದವಿಪೂರ್ವ ಕಾಲೇಜು ಆವರಣ

ರಾಷ್ಟ್ರೀಯ ಕ್ರೀಡಾಕೂಟದಲ್ಲಿ 33 ಪದಕ ಪಡೆದ ವಿದ್ಯಾರ್ಥಿಗಳು
ರಾಷ್ಟ್ರೀಯ ಕ್ರೀಡಾಕೂಟದಲ್ಲಿ 33 ಪದಕ ಪಡೆದ ವಿದ್ಯಾರ್ಥಿಗಳು

ಡೆಹ್ರಾಡೂನ್ ನಲ್ಲಿ ಅಕ್ಟೋಬರ್ 3 ರಿಂದ 05 ರವರೆಗೆ

ಜರುಗಿದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ರಾಜ್ಯದಿಂದ ಭಾಗವಹಿಸಿದ್ದ ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನ ಅಡ್ಡ್ವಂಚರ್ ಅಕಾಡೆಮಿಯ ಕ್

ಕ್ರೀಡೆ ಮೈಮನಸ್ಸನ್ನು ಸದೃಢಗೊಳಿಸುತ್ತದೆ. ಜಿಲ್ಲಾಧಿಕಾರಿ ಡಾ ರಾಕೇಶ್ ಕುಮಾರ್.
ಕ್ರೀಡೆ ಮೈಮನಸ್ಸನ್ನು ಸದೃಢಗೊಳಿಸುತ್ತದೆ. ಜಿಲ್ಲಾಧಿಕಾರಿ ಡಾ ರಾಕೇಶ್ ಕುಮಾರ್.

ನಮ್ಮ ಕೆಲಸದ ಒತ್ತಡದ ನಡುವೆ, ಕ್ರೀಡೆ ನಮ್ಮ ಮೈಮನಕ್ಕೆ ಉತ್ಸಾಹ ಒದಗಿ ಸಬಲ್ಲದು. ದಿನನಿತ್ಯದ ಜಂಜಾಟಗಳಲ್ಲಿ ಬಳಲುವ ನಾವು ಕನಿಷ್ಠ ತಿಂಗಳಿಗೆ ಎರಡು ಬಾರಿಯಾದರೂ ಇಂತಹ ಕ್ರೀಡೆಗಳಲ್ಲಿ ಭಾಗವಹಿಸಿದರೆ, ರೋ

ನಗದು ಪುರಸ್ಕಾರದ ಅರ್ಜಿ ಸ್ವೀಕರಿಸುವ ಅವಧಿ ವಿಸ್ತರಣೆ
ನಗದು ಪುರಸ್ಕಾರದ ಅರ್ಜಿ ಸ್ವೀಕರಿಸುವ ಅವಧಿ ವಿಸ್ತರಣೆ

ರಾಮನಗರ:ಮೇ/೨೮/೨೦/ಗುರುವಾರ. ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಪದಕ ವಿಜೇತರಾದ ಜಿಲ್ಲೆಯ ಕ್ರೀಡಾಪಟುಗಳಿಗೆ ೨೦೧೮/೧೯

ಜಿಲ್ಲಾ ಲೇಖಕರ ವೇದಿಕೆ ವತಿಯಿಂದ ರೂಬಿಕ್ ಕ್ಯೂಬ್ ಸ್ಪರ್ಧೆಯಲ್ಲಿ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನಗಳಿಸಿರುವ ಎಸ್. ವಿಶ್ವವಿಧಾತ ಅವರಿಗೆ ಸನ್ಮಾನ
ಜಿಲ್ಲಾ ಲೇಖಕರ ವೇದಿಕೆ ವತಿಯಿಂದ ರೂಬಿಕ್ ಕ್ಯೂಬ್ ಸ್ಪರ್ಧೆಯಲ್ಲಿ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನಗಳಿಸಿರುವ ಎಸ್. ವಿಶ್ವವಿಧಾತ ಅವರಿಗೆ ಸನ್ಮಾನ

ರಾಮನಗರ : ಇತ್ತೀಚಿನ ದಿನಗಳಲ್ಲಿ ಭಾರತವು ವಿಶ್ವಗುರು ಸ್ಥಾನ ಪಡೆಯುವತ್ತ ಹೆಜ್ಜೆ ಇಡುತ್ತಿದೆ ಎಂದು ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಜಿಲ್ಲಾ ಸಮಿತಿಯ ಕಾರ್ಯದರ್ಶಿ ಕೆ.ಆರ್. ವಿನುತ ಹೇಳಿದರು.

ಯೆಲ್ಲೊ ಅಂಡ್ ರೆಡ್ ಫೌಂಡೇಷನ್ಸ್ ಆಯೋಜಿಸಿದ್ದ ರಾಮನಗರ ಮ್ಯಾರಥಾನ್ ಯಶಸ್ಸು
ಯೆಲ್ಲೊ ಅಂಡ್ ರೆಡ್ ಫೌಂಡೇಷನ್ಸ್ ಆಯೋಜಿಸಿದ್ದ ರಾಮನಗರ ಮ್ಯಾರಥಾನ್ ಯಶಸ್ಸು

ರಾಮನಗರ : ಫೆಬ್ರವರಿ 02, ಯೆಲ್ಲೋ ಅಂಡ್ ರೆಡ್ ಫೌಂಡೇಷನ್ಸ್ ವತಿಯಿಂದ ಇದೇ ಫೆಬ್ರವರ

ಕೆಲಸದ ಬಗ್ಗೆ ಹೆಚ್ಚು ಒತ್ತು ನೀಡಲು ಕ್ರೀಡೆ ಸಹಕಾರಿ ನ್ಯಾಯಮೂರ್ತಿ ನಟರಾಜ್
ಕೆಲಸದ ಬಗ್ಗೆ ಹೆಚ್ಚು ಒತ್ತು ನೀಡಲು ಕ್ರೀಡೆ ಸಹಕಾರಿ ನ್ಯಾಯಮೂರ್ತಿ ನಟರಾಜ್

ಚನ್ನಪಟ್ಟಣ: ಬೆಳಿಗ್ಗೆ ಯಿಂದ ಸಂಜೆಯವರೆಗೆ ಒಂದೇ ಕಡೆ ಕುಳಿತು ಕೆಲಸ ಮಾಡುವ ಸರ್ಕಾರಿ ನೌಕರರು ಕ್ರಿಯಾಶೀಲರಾಗಲು ಕ್ರೀಡೆ ಸಹಕಾರಿಯಾಗಿದ್ದು ಕನಿಷ

ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿ ಸೋತ ಟೀಂ ಭಾರತ
ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿ ಸೋತ ಟೀಂ ಭಾರತ

ಲೀಡ್ಸ್(ಇಂಗ್ಲೆಂಡ್): ಟೀಂ ಇಂಡಿಯಾ ಹಾಗೂ ಇಂಗ್ಲೆಂಡ್ ನಡುವಿನ ಮೂರನೇ ಹಾಗೂ ನಿರ್ಣಾಯಕ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ 8 ವಿಕೆಟ್ ಗಳಿಂದ ಜಯ ಗಳಿಸಿದ್ದು ಸರಣಿ ಕೈವಶ ಮಾಡಿಕೊಂಡಿದೆ. 

ಟಾಸ್ ಸೋತು

Top Stories »  


Top ↑