ಮಾರುತಿ ಸ್ಪೋರ್ಟ್ಸ್ ಅಂಡ್ ರಿಕ್ರಿಯೇಷನ್ ಕ್ಲಬ್ ಮೇಲೆ ಪೋಲಿಸರ ದಾಳಿ, ೨೯ಮಂದಿಯ ಮೇಲೆ ಎಫ್ಐಆರ್, ೧,೧೦,೧೦೦₹ ಡಿವಿಆರ್, ರಿಜಿಸ್ಟರ್ ವಶಕ್ಕೆ

ಚನ್ನಪಟ್ಟಣ: ನಗರದ ಹೊರವಲಯದಲ್ಲಿನ ಸಾತನೂರು ಮುಖ್ಯ ರಸ್ತೆಯ ಕಲ್ಪವೃಕ್ಷ ಹೋಟೆಲ್ ಹಿಂಭಾಗವಿರುವ ಮಾರುತಿ ಸ್ಪೋರ್ಟ್ಸ್ ಅಂಡ್ ರಿಕ್ರಿಯೇಷನ್ ಕ್ಲಬ್ ಮೇಲೆ ಗ್ರಾಮಾಂತರ ಪೋಲಿಸರು ದಾಳಿ ನಡೆಸಿ ಒಂದು ಲಕ್ಷದ ಹತ್ತು ಸಾವಿರದ ನೂರು ರೂಪಾಯಿ ನಗದು, ಕ್ಲಬ್ ಸದಸ್ಯರ ರಿಜಿಸ್ಟರ್ ಮತ್ತು ಸಿಸಿ ಟಿವಿ ಯ ಡಿವಿಆರ್ ವಶಪಡಿಸಿಕೊಂಡು ಇಪ್ಪತ್ತೊಂಭತ್ತು ಮಂದಿ ಮೇಲೆ ಎಫ್ಐಆರ್ ದಾಖಲಿಸಿದ್ದಾರೆ.
ಕ್ಲಬ್ ನ ಸದಸ್ಯರಾದ ರಾಮಲಿಂಗಯ್ಯ ಬಿನ್ ಲೇ ಚಿಕ್ಜಣ್ಣಯ್ಯ ಎಂಬುವವರು ಗ್ರಾಮಾಂತರ ಪೋಲಿಸರಿಗೆ ಲಿಖಿತ ದೂರು ನೀಡಿ, ನಮ್ಮ ಕ್ಲಬ್ ನ್ನು ಕಾನೂನು ಬಾಹಿರವಾಗಿ ನಡೆಸುತ್ತಿದ್ದೇವೆ, ಇದುವರೆಗೂ ನೋಂದಣಿ ಸದಸ್ಯರ ಹಣದ ರಶೀದಿ ನೀಡಿಲ್ಲಾ, ದಿನಚರಿ ಚಂದಾ ಹಣದ ರಶೀದಿ ಕೊಡುತ್ತಿಲ್ಲ, ಸರ್ವಸದಸ್ಯರ ಸಭೆ ಕರೆದಿಲ್ಲಾ, ಯಾವ್ಯಾವ ಸದಸ್ಯರಿಂದ ಎಷ್ಟು ಹಣ ಪಡೆದಿದ್ದಾರೆ ಎಂಬ ಮಾಹಿತಿ ಇಲ್ಲ, ಬ್ಯಾಂಕ್ ನಲ್ಲಿ ಖಾತೆ ಹೊಂದಿಲ್ಲ, ಸದಸ್ಯರ ಹಣ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂಬ ಭಾವನೆ ಕಾಡುತ್ತಿದೆ, ನಾಲ್ಕೈದು ದಿನಗಳ ಕಾಲ ರಜೆ ಇರುವುದರಿಂದ ಸದಸ್ಯರಲ್ಲದಿರುವವರೂ ಸಹ ಬಂದು ಸೇರುತ್ತಾರೆ, ಇದರಿಂದ ನಮ್ಮ ಕ್ಲಬ್ ಗೆ ಕೆಟ್ಟ ಹೆಸರು ಬರುತ್ತದೆ, ಇದರಿಂದ ಕಾನೂನು ಕ್ರಮ ಕೈಗೊಳ್ಳಬೇಕೆಂದು ಲಿಖಿತ ದೂರು ನೀಡಿದ್ದಾರೆ.
ಆ ದೂರಿನ ಮೇರೆಗೆ ಗ್ರಾಮಾಂತರ ಪೋಲೀಸ್ ಠಾಣೆಯ ಆರಕ್ಷಕ ಉಪ ನಿರೀಕ್ಷಕ ಲಿಯಾಖತ್ ಉಲ್ಲಾ ಮತ್ತು ಸಿಬ್ಬಂದಿಗಳು ದಾಳಿ ನಡೆಸಿ, ಅಲ್ಲಿದ್ದ ಇಪ್ಪತ್ತೊಂಭತ್ತು ಮಂದಿ ಸದಸ್ಯರ ಮೇಲೆ ನ್ಯಾಯಾಲಯದ ಅನುಮತಿ ಪಡೆದು, ಮೊಕದ್ದಮೆ ದಾಖಲಿಸಿಕೊಂಡು, ಸದಸ್ಯರ ಬಳಿ ಇದ್ದ ಒಂದು ಲಕ್ಷದ ಹತ್ತು ಸಾವಿರದ ನೂರು ರೂಪಾಯಿಗಳ ನಗದು, ನಾಲ್ಕು ಕಟ್ಟು ಇಸ್ಪೀಟೆಲೆಗಳು, ಸಿಸಿ ಟಿವಿ ಯ ಡಿವಿಆರ್ ಜೊತೆಗೆ ಕ್ಲಬ್ ನ ಸದಸ್ಯರ ರಿಜಿಸ್ಟರ್ ಪುಸ್ತಕವನ್ನು ವಶಪಡಿಸಿಕೊಂಡು ಕಾನೂನು ಕ್ರಮ ಕೈಗೊಂಡಿದ್ದಾರೆ.
ಈ ಸಂಬಂಧ ಮಾಹಿತಿ ನೀಡಿದ ಲಿಯಾಖತ್ ಉಲ್ಲಾ ರವರು, ಸಂಘದ ಸದಸ್ಯರೊಬ್ವರು ಲಿಖಿತ ದೂರು ನೀಡಿದ್ದರು, ಈ ಕ್ಲಬ್ ಕಾನೂನು ಬಾಹಿರವಾಗಿ ನಡೆಯುತ್ತಿದೆ ಎಂದು ನಮಗೂ ಸಹ ಮಾಹಿತಿ ಇದ್ದುದರಿಂದ ಮೇಲಾಧಿಕಾರಿಗಳ ಆದೇಶದಂತೆ ದಾಳಿ ನಡೆಸಲಾಗಿದೆ, ಕಾನೂನು ಬಾಹಿರವಾಗಿ ಹಣವನ್ನು ಪಣವಾಗಿಟ್ಟು ಅಂದರ್ ಬಾಹರ್ ಇಸ್ಪೀಟು ಆಡುತ್ತಿದ್ದವರ ಮೇಲೆ ದೂರು ದಾಖಲಿಸಿಕೊಂಡು ಹಣವನ್ನು ವಶಕ್ಕೆ ಪಡೆದುಕೊಂಡಿದ್ದು, ಕ್ಲಬ್ ನ ಒಳಗೆ ಅಂದರ್ ಬಾಹರ್ ಇಸ್ಪೀಟು ಆಡುತ್ತಿದ್ದ ೨೯ ಮಂದಿ ಮೇಲೆ ಎಫ್ಐಆರ್ ದಾಖಲಿಸಿ ನೋಟೀಸ್ ಜಾರಿ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಇದೇ ಕ್ಲಬ್ ಮೇಲೆ ಇದೇ ತಿಂಗಳಲ್ಲಿ ನಡೆದ ಎರಡನೇ ದಾಳಿಯಾಗಿದ್ದು ಈ ಮೊದಲ ದಾಳಿಯಲ್ಲಿ ಪೋಲಿಸರು ಎಚ್ಚರಿಕೆ ನೀಡಿ ಬೀಗ ಹಾಕಿಸಿದ್ದರು, ಗೋವಿಂದೇಗೌಡನದೊಡ್ಡಿ ಗ್ರಾಮದಲ್ಲಿರುವ ಮತ್ತೊಂದು ಕ್ಲಬ್ ಮೇಲೂ ಸಹ ಕಳೆದ ತಿಂಗಳು ದಾಳಿ ನಡೆಸಿ ಬಾಗಿಲು ಮುಚ್ಚಿಸಿದ್ದರು. ಸಾಮಾಜಿಕ ಕಳಕಳಿಯುಳ್ಳವರೊಬ್ಬರು ಚನ್ನಪಟ್ಟಣ ನಗರ ಸೇರಿದಂತೆ ತಾಲ್ಲೂಕಿನಾದ್ಯಂತ ಇರುವ ಕೆಲವು ಕ್ಲಬ್ ಗಳಲ್ಲಿ ಕಾನೂನು ಬಾಹಿರವಾದ ಚಟುವಟಿಕೆಗಳು ನಡೆಯುತ್ತಿವೆ ಎಂದು ಐಜಿ ಯವರನ್ನು ಟ್ಯಾಗ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವುದರಿಂದ ಪೋಲಿಸರು ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ಹೆಸರೇಳಲಿಚ್ಚಿಸಿದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಗೋ ರಾ ಶ್ರೀನಿವಾಸ...
ಮೊ:9845856139.
Recent news in sports »

ಮಾರುತಿ ಸ್ಪೋರ್ಟ್ಸ್ ಅಂಡ್ ರಿಕ್ರಿಯೇಷನ್ ಕ್ಲಬ್ ಮೇಲೆ ಪೋಲಿಸರ ದಾಳಿ, ೨೯ಮಂದಿಯ ಮೇಲೆ ಎಫ್ಐಆರ್, ೧,೧೦,೧೦೦₹ ಡಿವಿಆರ್, ರಿಜಿಸ್ಟರ್ ವಶಕ್ಕೆ
ಚನ್ನಪಟ್ಟಣ: ನಗರದ ಹೊರವಲಯದಲ್ಲಿನ ಸಾತನೂರು ಮುಖ್ಯ ರಸ್ತೆಯ ಕಲ್ಪವೃಕ್ಷ ಹೋಟೆಲ್ ಹಿಂಭಾಗವಿರುವ ಮಾರುತಿ ಸ್ಪೋರ್ಟ್ಸ್ ಅಂಡ್ ರಿಕ್ರಿಯೇಷನ್ ಕ್ಲಬ್ ಮೇಲೆ ಗ್ರ

ಜೂನ್ 19ರಂದು ಚನ್ನಪಟ್ಟಣದಲ್ಲಿ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿ
ಚನ್ನಪಟ್ಟಣ: ಕದಂಬ ಸೈನ್ಯ ಹಾಗೂ ರಾಮನಗರ ಜಿಲ್ಲಾ ಕುಸ್ತಿ ಸಂಘದ ಸಂಯುಕ್ತಾಶ್ರಯದಲ್ಲಿ ಜೂ. 19ರ ಭಾನುವಾರ ನಗರದ ಬಾಲಕರ ಪದವಿಪೂರ್ವ ಕಾಲೇಜು ಆವರಣ

ರಾಷ್ಟ್ರೀಯ ಕ್ರೀಡಾಕೂಟದಲ್ಲಿ 33 ಪದಕ ಪಡೆದ ವಿದ್ಯಾರ್ಥಿಗಳು
ಡೆಹ್ರಾಡೂನ್ ನಲ್ಲಿ ಅಕ್ಟೋಬರ್ 3 ರಿಂದ 05 ರವರೆಗೆ
ಜರುಗಿದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ರಾಜ್ಯದಿಂದ ಭಾಗವಹಿಸಿದ್ದ ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನ ಅಡ್ಡ್ವಂಚರ್ ಅಕಾಡೆಮಿಯ ಕ್

ಕ್ರೀಡೆ ಮೈಮನಸ್ಸನ್ನು ಸದೃಢಗೊಳಿಸುತ್ತದೆ. ಜಿಲ್ಲಾಧಿಕಾರಿ ಡಾ ರಾಕೇಶ್ ಕುಮಾರ್.
ನಮ್ಮ ಕೆಲಸದ ಒತ್ತಡದ ನಡುವೆ, ಕ್ರೀಡೆ ನಮ್ಮ ಮೈಮನಕ್ಕೆ ಉತ್ಸಾಹ ಒದಗಿ ಸಬಲ್ಲದು. ದಿನನಿತ್ಯದ ಜಂಜಾಟಗಳಲ್ಲಿ ಬಳಲುವ ನಾವು ಕನಿಷ್ಠ ತಿಂಗಳಿಗೆ ಎರಡು ಬಾರಿಯಾದರೂ ಇಂತಹ ಕ್ರೀಡೆಗಳಲ್ಲಿ ಭಾಗವಹಿಸಿದರೆ, ರೋ

ನಗದು ಪುರಸ್ಕಾರದ ಅರ್ಜಿ ಸ್ವೀಕರಿಸುವ ಅವಧಿ ವಿಸ್ತರಣೆ
ರಾಮನಗರ:ಮೇ/೨೮/೨೦/ಗುರುವಾರ. ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಪದಕ ವಿಜೇತರಾದ ಜಿಲ್ಲೆಯ ಕ್ರೀಡಾಪಟುಗಳಿಗೆ ೨೦೧೮/೧೯

ಜಿಲ್ಲಾ ಲೇಖಕರ ವೇದಿಕೆ ವತಿಯಿಂದ ರೂಬಿಕ್ ಕ್ಯೂಬ್ ಸ್ಪರ್ಧೆಯಲ್ಲಿ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನಗಳಿಸಿರುವ ಎಸ್. ವಿಶ್ವವಿಧಾತ ಅವರಿಗೆ ಸನ್ಮಾನ
ರಾಮನಗರ : ಇತ್ತೀಚಿನ ದಿನಗಳಲ್ಲಿ ಭಾರತವು ವಿಶ್ವಗುರು ಸ್ಥಾನ ಪಡೆಯುವತ್ತ ಹೆಜ್ಜೆ ಇಡುತ್ತಿದೆ ಎಂದು ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಜಿಲ್ಲಾ ಸಮಿತಿಯ ಕಾರ್ಯದರ್ಶಿ ಕೆ.ಆರ್. ವಿನುತ ಹೇಳಿದರು.

ಯೆಲ್ಲೊ ಅಂಡ್ ರೆಡ್ ಫೌಂಡೇಷನ್ಸ್ ಆಯೋಜಿಸಿದ್ದ ರಾಮನಗರ ಮ್ಯಾರಥಾನ್ ಯಶಸ್ಸು
ರಾಮನಗರ : ಫೆಬ್ರವರಿ 02, ಯೆಲ್ಲೋ ಅಂಡ್ ರೆಡ್ ಫೌಂಡೇಷನ್ಸ್ ವತಿಯಿಂದ ಇದೇ ಫೆಬ್ರವರ

ಕೆಲಸದ ಬಗ್ಗೆ ಹೆಚ್ಚು ಒತ್ತು ನೀಡಲು ಕ್ರೀಡೆ ಸಹಕಾರಿ ನ್ಯಾಯಮೂರ್ತಿ ನಟರಾಜ್
ಚನ್ನಪಟ್ಟಣ: ಬೆಳಿಗ್ಗೆ ಯಿಂದ ಸಂಜೆಯವರೆಗೆ ಒಂದೇ ಕಡೆ ಕುಳಿತು ಕೆಲಸ ಮಾಡುವ ಸರ್ಕಾರಿ ನೌಕರರು ಕ್ರಿಯಾಶೀಲರಾಗಲು ಕ್ರೀಡೆ ಸಹಕಾರಿಯಾಗಿದ್ದು ಕನಿಷ

ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿ ಸೋತ ಟೀಂ ಭಾರತ
ಲೀಡ್ಸ್(ಇಂಗ್ಲೆಂಡ್): ಟೀಂ ಇಂಡಿಯಾ ಹಾಗೂ ಇಂಗ್ಲೆಂಡ್ ನಡುವಿನ ಮೂರನೇ ಹಾಗೂ ನಿರ್ಣಾಯಕ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ 8 ವಿಕೆಟ್ ಗಳಿಂದ ಜಯ ಗಳಿಸಿದ್ದು ಸರಣಿ ಕೈವಶ ಮಾಡಿಕೊಂಡಿದೆ.
ಟಾಸ್ ಸೋತು

ಕ್ರೊವೇಶಿಯಾ ವಿರುದ್ಧ ಗೆದ್ದ ಫ್ರಾನ್ಸ್ ಫಿಫಾ ವಿಶ್ವಕಪ್ ಚಾಂಪಿಯನ್
ಮಾಸ್ಕೋ(ರಷ್ಯಾ): ತೀವ್ರ ಕುತೂಹಲ ಮೂಡಿಸಿದ್ದ ಫಿಫಾ ವಿಶ್ವಕಪ್ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಕ್ರೊವೇಶಿಯಾ ವಿರುದ್ಧ ಗೆಲುವು ಸಾಧಿಸುವ ಮೂಲಕ ಫ್ರಾನ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಫೈನಲ್
ಪ್ರತಿಕ್ರಿಯೆಗಳು