Tel: 7676775624 | Mail: info@yellowandred.in

Language: EN KAN

    Follow us :


ಗೌಡಗೆರೆ ಚಾಮುಂಡೇಶ್ವರಿ ಮತ್ತು ಬಸವಪ್ಪನ ಪುಣ್ಯಕ್ಷೇತ್ರದಲ್ಲಿ ಅದ್ದೂರಿಯಾಗಿ ಜರುಗಿದ ಭೀಮನ ಅಮಾವಾಸ್ಯೆ

Posted date: 01 Aug, 2019

Powered by:     Yellow and Red

ಗೌಡಗೆರೆ ಚಾಮುಂಡೇಶ್ವರಿ ಮತ್ತು ಬಸವಪ್ಪನ ಪುಣ್ಯಕ್ಷೇತ್ರದಲ್ಲಿ ಅದ್ದೂರಿಯಾಗಿ ಜರುಗಿದ ಭೀಮನ ಅಮಾವಾಸ್ಯೆ

ಚನ್ನಪಟ್ಟಣ: ನಾಡದೇವತೆ ಮೈಸೂರು ಮಹರಾಜರ ಅಧಿದೇವತೆ ಬೆಟ್ಟದ ತಾಯಿ ಚಾಮುಂಡಿಯನ್ನೇ ಹೆಚ್ಚಾಗಿ ಆರಾಧಿಸುವ ದಿನಗಳ ಮಧ್ಯೆ ಭಕ್ತರ ದಂಡು ಬೊಂಬೆನಾಡು ಎಂದೇ ಸುಪ್ರಸಿದ್ಧವಾದ ಚನ್ನಪಟ್ಟಣ ದ ಗೌಡಗೆರೆ ಗ್ರಾಮದಲ್ಲಿ ನೆಲೆಸಿರುವ ತಾಯಿ ಚಾಮುಂಡಿ ಸನ್ನಿಧಿಗೂ ಹೆಚ್ಚಿನ ಸಂಖ್ಯೆಯಲ್ಲಿ ಬಂದು  ದೈವದ ರೂಪದಲ್ಲಿ ಇರುವ ಬಸವಣ್ಣನಿಗೆ ಹಾಲಿನ ಅಭಿಷೇಕ ಮಾಡಿ ಪುನೀತರಾದರು.


ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಇತಿಹಾಸ ಪ್ರಸಿದ್ದ ಗೌಡಗೆರೆ ಗ್ರಾಮದಲ್ಲಿರುವ ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಭೀಮನ ಅಮಾವ್ಯಾಸೆಯ ಪ್ರಯುಕ್ತ ವಿಶೇಷವಾಗಿ ಪೂಜೆಸಲ್ಲಿಸಲಾಯಿತು. ಬೆಳಗ್ಗೆಯಿಂದಲೂ ತಾಯಿ ದುರ್ಗೆಗೆ ವಿವಿಧ ರೀತಿಯ ಅಲಂಕಾರ, ಅಭಿಷೇಕದ ಜೊತೆಗೆ ಹೋಮಹವನಗಳನ್ನ ನೆರವೇರಿಸುವ ಮೂಲಕ ಸಕಲರಿಗೂ ಶುಭವಾಗಲೆಂದು ಪ್ರಾರ್ಥನೆ ಸಲ್ಲಿಸಲಾಯಿತು.


 ಮೊದಲಿಗೆ ದೇವರ ಬಸಪ್ಪನನ್ನ ತಾಯಿಯ ಗರ್ಭಗುಡಿಗೆ ಕರೆತಂದು ತಾಯಿಗೆ ಪೂಜೆನಡೆಸಲಾಗುತ್ತೆ, ನಂತರ ಬಂದ ಭಕ್ತಾಧಿಗಳಿಗೆ ತಾಯಿಯ ದರ್ಶನ ಮಾಡಿ ಪ್ರಾರ್ಥಿಸಲು ಅನುವು ಮಾಡಿಕೊಡುತ್ತದೆ.


ಇನ್ನು ಈ ಕ್ಷೇತ್ರದಲ್ಲಿ ಗ್ರಾಮಸ್ಥರೊಂದಿಗೆ ಬೇರೆಕಡೆಗಳಿಂದ ಬಂದಿರುವ ಮಹಿಳಾ ಭಕ್ತರು ಮಡಿಕೆಯಲ್ಲಿ ಹಾಲನ್ನು ತಂದು ತಾಯಿಗೆ ಪೂಜೆಸಲ್ಲಿಸಿದ ನಂತರ ದೇವರ ಬಸಪ್ಪನಿಗೆ ಅದೇ ಹಾಲಿನಲ್ಲಿ ಅಭಿಷೇಕ ಮಾಡುವುದು ವಿಶೇಷವಾದ ಆಚರಣೆ ಎನ್ನುತ್ತಾರೆ ದೇವಾಲಯದ ಧರ್ಮದರ್ಶಿ  ಮಲ್ಲೇಶ್ ರವರು.


 ಅಂದಹಾಗೇ  ಭೀಮನ ಅಮಾವ್ಯಾಸೆಯ ದಿನವಾದ ಇಂದು ತಾಯಿಯ ಉತ್ಸವ ಮೂರ್ತಿಯನ್ನ ರಥದಲ್ಲಿಟ್ಟು ದೇವಸ್ಥಾನದ ಸುತ್ತ ಮೆರವಣಿಗೆ ಮಾಡಲಾಗುತ್ತದೆ. ರಥದಲ್ಲಿ ಸಾಗುವ ತಾಯಿ ಚೌಡೇಶ್ವರಿ ಅಮ್ಮನವರಿಗೆ ಹಣ್ಣು, ಹೂವನ್ನ ಅರ್ಪಿಸುವ ಮೂಲಕ ಬಂದ ಭಕ್ತರು ತಮ್ಮ ಪ್ರಾರ್ಥನೆಯನ್ನ ಸಲ್ಲಿಸುತ್ತಾರೆ.


ಇನ್ನು ಪ್ರತಿವರ್ಷಕ್ಕೊಮ್ಮೆ ನಡೆಯುವ ಈ ಉತ್ಸವಕ್ಕೆ ಬೆಂಗಳೂರು, ರಾಮನಗರ, ಮಂಡ್ಯ ಮತ್ತು ಮೈಸೂರು ಸೇರಿದಂತೆ ಹಲವು ಭಾಗಗಳಿಂದ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಇನ್ನು ತಾಯಿಯ ದರ್ಶನ ಪಡೆದ ದಿನದಿಂದ ನಮಗೆಲ್ಲಾ ಒಳಿತಾಗಿದೆ ಎನ್ನುತ್ತಾರೆ ಒಳಿತುಕಂಡ ಭಕ್ತರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑