Tel: 7676775624 | Mail: info@yellowandred.in

Language: EN KAN

    Follow us :


ತಾಳೆಯೋಲೆ ೦೩ :ಧ್ಯಾನವು ಮೋಕ್ಷಕ್ಕೆ ದಾರಿಯೇ ?

Posted date: 03 Aug, 2019

Powered by:     Yellow and Red

ತಾಳೆಯೋಲೆ ೦೩ :ಧ್ಯಾನವು ಮೋಕ್ಷಕ್ಕೆ ದಾರಿಯೇ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ*


*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*


ಅಧ್ಯಾಯ ೦೩


ಜೀವನದಲ್ಲಿನ ಕಷ್ಟಗಳಿಂದ ಮತ್ತು ವೇದನೆಗಳಿಂದ ಯಾರು ವಿಮುಕ್ತಿಯನ್ನು ಬಯಸುವರೋ ಅವರು ಮೋಕ್ಷವನ್ನು ಉಂಟು ಮಾಡುವ ಧ್ಯಾನ ಸಾಧನೆಯತ್ತ ತಿರುಗುತ್ತಾರೆ. ಮನಸ್ಸನ್ನು ಹಿಡಿತದಲ್ಲಿಟ್ಟುಕೊಂಡು ನಿಶ್ಚಲವಾಗಿರುವುದರಿಂದ ಮಾನಸಿಕ ಮತ್ತು ಭೌತಿಕ ಅವಿಶ್ರಾಂತಿಯನ್ನು ತೊಲಗಿಸಬಹುದು. ಪುರಾತನ ಕಾಲದಿಂದ ನಮ್ಮ ಭಾರತೀಯರಿಗೆ  ಧ್ಯಾನದಿಂದ ಉಂಟಾಗುವ ಫಲಿತಾಂಶಗಳ ಮೇಲೆ ತಿಳುವಳಿಕೆ ಇದೆ. ಧ್ಯಾನದ ಮುಖಾಂತರ ಆತ್ಮಜ್ಞಾನ ಇದರ ಮುಖಾಂತರ ಭೌತಿಕ ಜ್ಞಾನವೂ ಸಹ ಬೆಳೆಯುತ್ತದೆ.


ಆಧುನಿಕ ಮಾನವ ಪ್ರತಿದಿನದ ಯಾಂತ್ರಿಕ ಬದುಕಿನಿಂದ ಒತ್ತಡ ಮತ್ತು ಮಾನಸಿಕ ಅಶಾಂತಿಯಿಂದ ಕೂಡಿದ್ದಾನೆ. ಈ ಸಮಸ್ಯೆಗಳಿಂದ ಅಧಿಕ ರಕ್ತದೊತ್ತಡ, ಹೃದಯ ಸಂಬಂಧವಾದ ಖಾಯಿಲೆಗಳು ಮುಂತಾದ ಖಾಯಿಲೆಗಳು ಹುಟ್ಟಿಕೊಳ್ಳುತ್ತಿವೆ. ಈ ರೀತಿಯಾದ ಅನೇಕ ಶಾರೀರಿಕ ಮತ್ತು ಮಾನಸಿಕ ಖಾಯಿಲೆಗಳನ್ನು ನಿವಾರಿಸಲು ಧ್ಯಾನವನ್ನು ಪ್ರತಿದಿನವೂ ತಪ್ಪದೇ ಮಾಡಬೇಕಾಗುತ್ತದೆ.


ಧ್ಯಾನವನ್ನು ಮಾಡುತ್ತಿರುವಾಗ ಪ್ರಾಣಶಕ್ತಿ ಶರೀರದಲ್ಲಿ ವಿವಿಧ ಕೇಂದ್ರಗಳಿಂದ ಬಿಡುಗಡೆ ಹೊಂದಿ ಶರೀರದ ಯಾವ ಭಾಗಕ್ಕೆ ಅವಶ್ಯಕತೆ ಇರುತ್ತದೋ ಆ ಭಾಗಕ್ಕೆ ಸರಬರಾಜಾಗಿ ಆಯಾ‌ ರೋಗಗಳನ್ನು ಓಡಿಸುತ್ತದೆ. ಇದು ಶರೀರದ ವ್ಯವಸ್ಥೆಯನ್ನು ಸಕ್ರಮವಾಗಿಸುತ್ತದೆ. ಗಾಢವಾದ ಧ್ಯಾನ ಸ್ಥಿತಿಯಲ್ಲಿದ್ದಾಗ ಮೆದುಳಿಗೆ ಸಂಬಂಧಿಸಿದ *ಬೀಟಾ ತರಂಗಗಳು ಮೇಲೆದ್ದು ಗಾಮ ಮತ್ತು ಡೆಲ್ಟಾ* ತರಂಗಗಳ ಸ್ಥಾನಕ್ಕೆ ಸೇರುತ್ತವೆ.


ಪ್ರಾಚೀನ ಭಾರತದ ಋಷಿಗಳು ಆಲದ ಮರದ ಕೆಳಗೆ ಕುಳಿತು ಧ್ಯಾನ ಸಾಧನೆ ಮಾಡುತ್ತಿದ್ದರು. ಈ ರೀತಿಯ ಧ್ಯಾನದ ಮುಖಾಂತರ ಶರೀರಕ್ಕೆ ಹಾನಿ ಉಂಟಾಗುವ ವ್ಯತಿರೇಕ ಶಕ್ತಿ ತರಂಗಗಳು ಹೊರಗೆ‌ ಬಿಟ್ಟು, ಶರೀರಕ್ಕೆ ಒಳ್ಳೆಯದನ್ನುಂಟು ಮಾಡುವ ಅನುಕೂಲಕರವಾದ ಶಕ್ತಿ ತರಂಗಗಳು ಶರೀರದಾದ್ಯಂತ ವ್ಯಾಪಿಸುತ್ತದೆ ಎಂದು ನಂಬಲಾಗಿದೆ.


ಸಂಗ್ರಹ ಮತ್ತು ಪ್ರಚಾರ;

ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑