Tel: 7676775624 | Mail: info@yellowandred.in

Language: EN KAN

    Follow us :


ಮತ್ತೀಕೆರೆ ಶೆಟ್ಟಿಹಳ್ಳಿ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದ ಅಧಿಕಾರಿಗಳು

Posted date: 28 Sep, 2019

Powered by:     Yellow and Red

ಮತ್ತೀಕೆರೆ ಶೆಟ್ಟಿಹಳ್ಳಿ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದ ಅಧಿಕಾರಿಗಳು

ಚನ್ನಪಟ್ಟಣ: ತಾಲ್ಲೂಕಿನ ಬೆಂಗಳೂರು ಮೈಸೂರು ಹೆದ್ದಾರಿಯ ಬದಿಯಲ್ಲಿರುವ ಮತ್ತೀಕೆರೆ-ಶೆಟ್ಟಿಹಳ್ಳಿ ಶತಮಾನ ಕಂಡ ಸರ್ಕಾರಿ ಶಾಲೆಗೆ ಇಂದು ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲಿಸಿದರು.


ತಾಲ್ಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ರಾಮಕೃಷ್ಣ ರವರು ಮಾತನಾಡಿ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದ್ದು, ಅವರು ಲೋಕೋಪಯೋಗಿ ಇಲಾಖೆಗೆ ಪತ್ರ ಬರೆದು ನಂತರ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ ಎಂದರು.

ಮುಂದುವರೆದು ಮಾತನಾಡಿದ ಅವರು ಕಟ್ಟಡಗಳು ಗಟ್ಟಿ ಮುಟ್ಟಾಗಿದ್ದು ಕಿಟಕಿ ಬಾಗಿಲುಗಳು ಸುಸ್ಥಿತಿಯಲ್ಲಿ ಇಲ್ಲ, ಲೋಕೋಪಯೋಗಿ ಇಲಾಖೆಯ ತಂತ್ರಜ್ಞರು ವರದಿ ಕೊಟ್ಟ ನಂತರ ಕಟ್ಟಡಗಳನ್ನು ಉಳಿಸಿಕೊಂಡು ರಿಪೇರಿ ಮಾಡಿಸುವುದು ಅಥವಾ ಕಟ್ಟಡ ತೆರವುಗೊಳಿಸಿವುದೋ ಎಂಬುದನ್ನು ವರದಿಯ ನಂತರ ಕೈಗೊಳ್ಳುವುದಾಗಿ ತಿಳಿಸಿದರು.

*ಮಂಜೇಶ್ ಬಾಬು ದೂರು*
ಶತಮಾನ ಪೂರೈಸಿದ ಮತ್ತೀಕೆರೆ-ಶೆಟ್ಟಿಹಳ್ಳಿ ಸರ್ಕಾರಿ ಶಾಲೆಯ ಹಳೆಯ ಕಟ್ಟಡ (ಇಲ್ಲಿ ಮಕ್ಕಳು ಓದುತ್ತಿಲ್ಲ, ಹೊಸ ಶಾಲೆ ಬೇರೆಕಡೆ ನಿರ್ಮಾಣವಾಗಿದೆ) ವನ್ನು ದುಷ್ಕರ್ಮಿಗಳು, ಪುಂಡುಪೋಕರಿಗಳು ಅಡ್ಡೆ ಮಾಡಿಕೊಂಡಿದ್ದನ್ನು ಗಮನಿಸಿದ ತಾಲ್ಲೂಕು ಕಸಾಪ ದ ಗೌರವ ಕಾರ್ಯದರ್ಶಿ ಮಂಜೇಶ್ ಬಾಬು ರವರು ಶಿಕ್ಷಣ ಇಲಾಖೆಗೆ ಪತ್ರ ಬರೆದು ಶತಮಾನಕಂಡ ಶಾಲೆಯ ಕಟ್ಟಡವನ್ನು ಉನ್ನತೀಕರಿಸಿ ಉಪಯೋಗಿಸಿಕೊಳ್ಳುವಂತೆ ಮನವಿ‌ ಮಾಡಿದ್ದರ ಫಲವಾಗಿ ಇಂದು ಅಧಿಕಾರಿಗಳು ಭೇಟಿ ನೀಡಿದ್ದರು.

ಜಿಲ್ಲಾ ಪಂಚಾಯತಿ ಉಪ ಕಾರ್ಯನಿರ್ವಹಣಾಧಿಕಾರಿ ಮದನಮೋಹನ, ತಾಲ್ಲೂಕು ಪಂಚಾಯತಿ ಯ ಲೋಕೇಶ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶೋಭಾ, ಶಾಲೆಯ ಶಿಕ್ಷಕರು, ದೂರುದಾರ ಮಂಜೇಶ್ ಬಾಬು ಮತ್ತು ಗ್ರಾಮಸ್ಥರು ಹಾಜರಿದ್ದರು.

ಗೋ ರಾ ಶ್ರೀನಿವಾಸ...
ಮೊ:9845856139

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑