Tel: 7676775624 | Mail: info@yellowandred.in

Language: EN KAN

    Follow us :


ತಾಳೆಯೋಲೆ ೨೭೦: ಸ್ವರ್ಗವು ಎಂತಹ‌ ಗುಣವನ್ನು ಸೂಚಿಸುತ್ತದೆ

Posted date: 01 Jul, 2020

Powered by:     Yellow and Red

ತಾಳೆಯೋಲೆ ೨೭೦: ಸ್ವರ್ಗವು ಎಂತಹ‌ ಗುಣವನ್ನು ಸೂಚಿಸುತ್ತದೆ

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ


*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*


ಸ್ವರ್ಗವು ಎಂತಹ‌ ಗುಣವನ್ನು ಸೂಚಿಸುತ್ತದೆ


ಸ್ವರ್ಗವು ಸದ್ಗುಣಗಳನ್ನು ಸೂಚಿಸುವುದು. ನಂಬಿಕೆಯ ಪ್ರಕಾರ, ಭೂಮಿಯ ಮೇಲೆ ವ್ಯಕ್ತಿಯೊಬ್ಬನು ತನ್ನ ಜೀವಂತ ಕಾಲದಲ್ಲಿ ಒಳ್ಳೆಯ ಕೆಲಸಗಳನ್ನು ಮಾಡಿದರೆ ಆತನು ಭೌತಿಕ ದೇಹವನ್ನು ಬಿಟ್ಟ ನಂತರ ಸ್ವರ್ಗ ಲೋಕಕ್ಕೆ ಹೋಗುವನು. ಭೂಮಿಯ ಮೇಲೆ ಜೀವನದಲ್ಲಿ ಪ್ರತಿ ಸುಖದಲ್ಲಿಯೂ ದು:ಖವು ಮಿಶ್ರಿತವಾಗಿರುವುದು. ಅಂತಹ ಸುಖಗಳನ್ನು ಹೊಂದುವುದಕ್ಕೂ ಸಹ ಗಗನ ಕುಸುಮವಾಗಿಯೇ ಇರುವುದು. ಎಷ್ಟು ಮಾತ್ರವೂ ದು:ಖ ಮಿಶ್ರಿತವಲ್ಲದ ಪ್ರತಿ ಕ್ಷಣವೂ ಸುಖಮಯವು ಹಾಗೂ ಆನಂದಮಯವೂ ಆದ ಸ್ವರ್ಗ ಸುಖವು ಇರುವುದೆಂಬ ನಂಬಿಕೆ.


ಎಷ್ಟು ಮಾತ್ರವೂ ಆನಂದವಿಲ್ಲದೆ ಪ್ರತಿಕ್ಷಣವೂ ಕಷ್ಟದಾಯಕವಾಗಿ ಇರುವ ಜೀವನವು ನರಕದಲ್ಲಿ ಇರುವುದು. ಸ್ವರ್ಗಕ್ಕೆ ಪೂರ್ತಿ ವಿರುದ್ದ ಪದವು ನರಕವಾಗಿರುವುದು. ಭೂಮಿಯ ಮೇಲಿನ ಜೀವನದಲ್ಲಿ ಸ್ವರ್ಗ ನರಕಗಳಂತಹವು ಸಾಮಾನ್ಯವಾಗಿರುವವು. ಆದರ್ಶಪ್ರಾಯವಾದ ಜೀವನವನ್ನು ಜೀವಿಸುವವರು ಮರಣಾ ನಂತರ ಸ್ವರ್ಗಕ್ಕೆ ಹೋಗುವರೆಂಬ ಸಿದ್ದಾಂತವು. ವ್ಯಕ್ತಿಯೊಬ್ಬನನ್ನು ಒಳ್ಳೆಯ ಕೆಲಸಗಳನ್ನು ಮಾಡುವಂತೆ ಪ್ರೇರೇಪಿಸುತ್ತದೆ. ಅನೈತಿಕವಾದ ಜೀವನವನ್ನು ಭೂಮಿಯ ಮೇಲೆ ಜೀವಿಸಿದವರು ಮರಣಾನಂತರ ನರಕಕ್ಕೆ ಹೋಗುವರು. ಪುರಾಣಗಳಲ್ಲಿ ಸ್ವರ್ಗ ನರಕಗಳ‌ ಬಗ್ಗೆ ಅನೇಕ ಕಥೆಗಳು ಇರುವವು.


"ಸ್ವರ್ಗ" ಎನ್ನುವ ಭಾವನೆ ಮಾನವರನ್ನು ಧಾರ್ಮಿಕರನ್ನಾಗಿ ಮಾಡುವುದು. ಮಾನವರು ಉತ್ತಮ ಗುಣ ಲಕ್ಷಣವನ್ನು ಹೊಂದಿ ಆದರ್ಶ ಜೀವನವನ್ನು ಮಾಡಿ, ಮೋಕ್ಷಾರ್ಹರಾಗುವರು. ಆದ್ದರಿಂದ ಸರ್ವರೂ ಸ್ವರ್ಗಾನಂದವನ್ನು ಜೀವಿತಾಂತವೂ ಹೊಂದುವುದಕ್ಕಾಗಿ ಈಗಿನಿಂದಲೇ ‌ಬುನಾದಿಯನ್ನು ಹಾಕಿಕೊಳ್ಳಬೇಕು. "ಯಾರು ಮಾಡಿದ ಕರ್ಮವನ್ನು ಅವರು ಅನುಭವಿಸದೆ ಎಂದಿಗೂ ತಪ್ಪದು" ಎನ್ನುವ ವಿಷಯವು ಪೂರ್ತಿ ನಿಜವಾದುದೆಂದು ಅನುಭವದಲ್ಲಿ ಸರ್ವರೂ ಅಂಗೀಕರಿಸುವರು.


*ಸಂಗ್ರಹ ಮತ್ತು ಪ್ರಚಾರ;*

*ಗೋ ರಾ ಶ್ರೀನಿವಾಸ...*

*ಮೊ:9845856139.*

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑