Tel: 7676775624 | Mail: info@yellowandred.in

Language: EN KAN

    Follow us :


ತಾಳೆಯೋಲೆ ೧೭೨: ಧೂತ ಲಕ್ಷಣ ಫಲಿತವು ಯಾವ ವಿಷಯವನ್ನು ಸೂಚಿಸುತ್ತದೆ

Posted date: 03 Jul, 2020

Powered by:     Yellow and Red

ತಾಳೆಯೋಲೆ ೧೭೨: ಧೂತ ಲಕ್ಷಣ ಫಲಿತವು ಯಾವ ವಿಷಯವನ್ನು ಸೂಚಿಸುತ್ತದೆ

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ


*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*


ಧೂತ ಲಕ್ಷಣ ಫಲಿತವು ಯಾವ ವಿಷಯವನ್ನು ಸೂಚಿಸುತ್ತದೆ


ಧೂತನ (ಬಂದವನ) ಲಕ್ಷಣವನ್ನು ಪರಿಶೀಲಿಸಿ, ಹಾವಿನ ಕಡಿತದಿಂದ ಚಿಕಿತ್ಸೆಗಾಗಿ ಬಂದವನು ಬದುಕುವನೆ ಇಲ್ಲದೆ ಮರಣಿಸುವನೆ ಎಂದು ನಿರ್ಧರಿಸುವುದು ಜ್ಯೋತಿಷ್ಯ ಸಂಬಂಧವಾದ ಶಕುನವಾಗಿರುವುದು. ಹಾವಿನ ಕಡಿತಕ್ಕೆ ವೈದ್ಯವನ್ನು ಮಾಡುವವರು ಈ ಶಕುನವನ್ನು ಪರಿಶೀಲಿಸುವರು. ಒಬ್ಬ ವ್ಯಕ್ತಿಗೆ ವೈದ್ಯವು ನಡೆಯುತ್ತಿರುವಾಗ ಯಾರಾದರೂ ವೈದ್ಯವನ್ನು ಪಡೆಯುತ್ತಿರುವಾಗ ವ್ಯಕ್ತಿಗಾಗಿ ಬಂದರೆ, ಆ ವ್ಯಕ್ತಿ ಬಂದ ಸಮಯ, ಆತನು ತೆಗೆದುಕೊಂಡು ಬಂದ ವಾರ್ತೆ, ಇಲ್ಲವೇ ಆತನು ತಿಳಿದುಕೊಳ್ಳಬೇಕಾದ ವಿಷಯವನ್ನು ಆಧರಿಸಿ, ಹಾವಿನ ಕಡಿತಕ್ಕೆ ವೈದ್ಯವನ್ನು ಪಡೆಯುತ್ತಿರುವವನಿಗೆ ಒಳ್ಳೆಯದಾಗುವುದೇ ಇಲ್ಲವೇ ಹಾನಿಗೆ ಗುರಿ ಆಗುವನೇ ಎಂದು ವೈದ್ಯನು ಊಹಿಸುವನು.


ವೈದ್ಯವನ್ನು ಹೊಂದುತ್ತಿರುವ ವ್ಯಕ್ತಿಯ ಕ್ಷೇಮವನ್ನು ತಿಳಿದುಕೊಳ್ಳಲು ಬಂದ ವ್ಯಕ್ತಿಯ ರೀತಿ, ಕಾಲ ಮುಂತಾದವನ್ನು ವೈದ್ಯನು ಈ ಶಕುನ ದಲ್ಲಿ ಗಮನಿಸುವನು. ಬಂದ ವ್ಯಕ್ತಿ ಆತನ ಮೊದಲ ವಾಕ್ಯವನ್ನು ಹಾವು ಕಡಿದವನ ಹೆಸರು ಹಿಡಿದು ಸಂಭೋದಿಸಿದ ವಾಕ್ಯವನ್ನು ಮಧ್ಯದಲ್ಲಿ ನಿಲ್ಲಿಸಿದರೆ, ಆತನ ಕೈಯಲ್ಲಿ ಲೋಹದ ಕಡ್ಡಿಯಾಗಲಿ, ಹಗ್ಗ ಇಲ್ಲವೇ ಹುಲ್ಲು ಇದ್ದರೂ ಓಡೋಡಿ ಬಂದರೂ, ಬಣ್ಣದ ರುಮಾಲನ್ನು ತಲೆಗೆ ಸುತ್ತಿದ್ದರೂ, ಕೇವಲ ಧೋತಿಯನ್ನು ಉಟ್ಟಿದ್ದರೂ, ವೈದ್ಯವನ್ನು ಪಡೆಯುತ್ತಿರುವವನು ನಿಸ್ಸಂದೇಹವಾಗಿಯೂ ಮರಣಿಸುವನೆಂದು ವೈದ್ಯನು ನಂಬುತ್ತಿದ್ದನು.


ಬಂದವನು ಮತ್ತೊಬ್ಬರೊಂದಿಗೆ ಬಂದಿದ್ದರೆ, ಸಂದೇಹಾತ್ಮಕವಾಗಿ ಮಾತನಾಡಿದರೂ, ಆತನು ಬಂದಾಗ ವೈದ್ಯನ ಮನೆಯಲ್ಲಿ ದೀಪ ಉರಿಯುತ್ತಿದ್ದರೂ, ಮೇಯುತ್ತಿರುವ ಹಸು ಅಲ್ಲಿ ಕಾಣಿಸಿದರೂ ಇಲ್ಲವೇ ಸ್ನಾನಾ ನಂತರ ಒದ್ದೆ ಬಟ್ಟೆಗಳಲ್ಲಿ, ಬರುತ್ತಿರುವ ಸ್ತ್ರೀಯನ್ನು ನೋಡಿದರೂ, ವೈದ್ಯವನ್ನು ಹೊಂದುವವನು ತಪ್ಪದೇ ಜೀವಿಸುವನೆಂದು ನಂಬಿಕೆ. ಇಂತಹ ಶಕುನಗಳು ಅನೇಕ ಬಾರಿ ನಿಜವೆಂದು ನಿರೂಪಿತವಾಗಿದೆ.


*ಸಂಗ್ರಹ ಮತ್ತು ಪ್ರಚಾರ;*

*ಗೋ ರಾ ಶ್ರೀನಿವಾಸ...*

*ಮೊ:9845856139.*

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑