Tel: 7676775624 | Mail: info@yellowandred.in

Language: EN KAN

    Follow us :


ಪಿಯುಸಿ ಫಲಿತಾಂಶ; ಉಕ ಜಿಲ್ಲೆ ಪ್ರಥಮ, ವಿಜಯಪುರ ಕೊನೆಯ ಸ್ಥಾನ. ೨೫ ನೇ ಸ್ಥಾನಕ್ಕೆ ಕುಸಿದ ರಾಮನಗರ

Posted date: 14 Jul, 2020

Powered by:     Yellow and Red

ಪಿಯುಸಿ ಫಲಿತಾಂಶ; ಉಕ ಜಿಲ್ಲೆ ಪ್ರಥಮ, ವಿಜಯಪುರ ಕೊನೆಯ ಸ್ಥಾನ. ೨೫ ನೇ ಸ್ಥಾನಕ್ಕೆ ಕುಸಿದ ರಾಮನಗರ

ಬೆಂಗಳೂರು:ಜು/೧೪/೨೦/ಮಂಗಳವಾರ. ಬಹುನಿರೀಕ್ಷಿತ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಶೇ.೬೧.೮೦ ಫಲಿತಾಂಶ ಬಂದಿದೆ. ಇಂದು ಬೆಳಗ್ಗೆ ೧೧.೩೦ ಕ್ಕೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿದ್ದು, ಇಲಾಖೆಯ ವೆಬ್ ಸೈಟ್ ನಲ್ಲಿ ಅಧಿಕೃತ ಫಲಿತಾಂಶ ಪ್ರಕಟವಾಗಿದೆ.


ವಿದ್ಯಾರ್ಥಿಗಳು ತಮ್ಮ ಫಲಿತಾಂಶ ತಿಳಿಯಲು ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಧಿಕೃತ ವೆಬ್ ಸೈಟ್ www.karresults.nic.in ಗೆ ಭೇಟಿ ನೀಡಿ ಫಲಿತಾಂಶ ನೋಡಬಹುದು.


೧,೦೧೬ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳನ್ನು ನಡೆಸಲಾಗಿದ್ದು, ಸುಮಾರು ೭೦ ಮೌಲ್ಯಮಾಪನ ಕೇಂದ್ರಗಳಲ್ಲಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡಲಾಗಿದೆ. ಒಟ್ಟು ೬,೭೫,೨೭೭ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಈ ಪೈಕಿ ಹೊಸಬರು ೫,೫೬೨೬೭ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಇದರಲ್ಲಿ ೩,೮೪,೯೪೭ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಪುನಾರಾವರ್ತಿತ ೯೧,೦೨೫ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಇದರಲ್ಲಿ ೨೫,೬೦೨ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಶೇ. ೭೬.೦೨, ವಾಣಿಜ್ಯ ವಿಭಾಗದಲ್ಲಿ ಶೇ,೬೫.೫೨ , ಕಲಾವಿಭಾಗದಲ್ಲಿ ಶೇ. ೪೧.೨೭ ರಷ್ಟು ವಿದ್ಯಾರ್ಥಿ ಗಳು ಉತ್ತೀರ್ಣರಾಗಿದ್ದಾರೆ.


ಜಿಲ್ಲಾವಾರು ಫಲಿತಾಂಶದಲ್ಲಿ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆ ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದುಕೊಂಡಿದೆ ಈ ಎರಡು ಜಿಲ್ಲೆಗಳಲ್ಲಿ ಶೇ. ೯೦.೭೫ ರಷ್ಟು ಫಲಿತಾಂಶ ಬಂದಿದೆ. ವಿಜಯಪುರ ಜಿಲ್ಲೆ ಕೊನೆಯ ಸ್ಥಾನ ಪಡೆದುಕೊಂಡಿದೆ.


ಯಾವ ಜಿಲ್ಲೆಗೆ ಎಷ್ಟನೇ ಸ್ಥಾನ ?

ಉಡುಪಿ - ಶೇ. ೯೦.೭೧, ದಕ್ಷಿಣ ಕನ್ನಡ- ಶೇ.೯೦.೭೧, ಕೊಡಗು- ಶೇ.೮೧.೫೩, ಉತ್ತರ ಕನ್ನಡ- ಶೇ.೮೦.೯೭, ಚಿಕ್ಕ ಮಗಳೂರು- ಶೇ.೭೯.೧೧, ಬೆಂಗಳೂರು ದಕ್ಷಿಣ- ಶೇ. ೭೭.೫೬, ಬೆಂಗಳೂರು ಉತ್ತರ - ಶೇ.೭೫.೫೪, ಬಾಗಲಕೋಟೆ- ಶೇ.೭೪. ೫೯, ಚಿಕ್ಕಬಳ್ಳಾಪುರ- ಶೇ.೭೩.೭೪, ಶಿವಮೊಗ್ಗ- ಶೇ.೭೨.೧೯, ಹಾಸನ - ಶೇ.೭೦.೧೮, ಚಾಮರಾಜ ನಗರ- ಶೇ.೬೯.೨೯, ಬೆಂಗ ಳೂರು ಗ್ರಾಮಾಂತರ- ಶೇ.೬೯.೦೨, ಹಾವೇರಿ- ಶೇ.೬೮.೦೧, ಮೈಸೂರು- ಶೇ.೬೭.೯೮, ಕೋಲಾರ ಶೇ.೬೭.೪೨, ಧಾರವಾಡ- ಶೇ.೬೭ .೩೧, ಬೀದರ್ - ಶೇ.೬೪.೬೧, ದಾವಣಗೆರೆ- ಶೇ.೬೪.೦೯, ಚಿಕ್ಕೋಡಿ- ಶೇ.೬೩.೮೮, ಮಂಡ್ಯ -ಶೇ.೬೩.೮೨, ಗದಗ - ಶೇ.೬೩, ತುಮಕೂರು- ಶೇ.೬೨.೨೬. ಬಳ್ಳಾರಿ- ಶೇ.೬೨.೦೨, ರಾಮನಗರ- ಶೇ.೬೦.೯೬, ಕೊಪ್ಪಳ- ಶೇ.೬೦.೦೯, ಬೆಳಗಾವಿ- ಶೇ.೫೯.೦೭, ಯಾದಗಿರಿ- ಶೇ.೫೮.೩೮, ಕಲಬುರಗಿ- ಶೇ. ೫೮.೨೭, ಚಿತ್ರದುರ್ಗ- ಶೇ.೫೬.೦೮, ರಾಯ ಚೂರು- ಶೇ.೫೬.೨೨, ವಿಜಯಪುರ- ಶೇ.೫೪.೨೨ ಸ್ಥಾನ ಪಡೆದಿವೆ ಎಂದು ಅವರು ತಿಳಿಸಿದ್ದಾರೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑