Tel: 7676775624 | Mail: info@yellowandred.in

Language: EN KAN

    Follow us :


ಶಾಸಕ ಮಂಜುನಾಥ ವಿರುದ್ಧ ತೇಜೋವಧೆ ಬೇಡ. ಪೂಜಾರಿಪಾಳ್ಯ ಕೃಷ್ಣಮೂರ್ತಿ

Posted date: 07 Oct, 2021

Powered by:     Yellow and Red

ಶಾಸಕ ಮಂಜುನಾಥ ವಿರುದ್ಧ ತೇಜೋವಧೆ ಬೇಡ. ಪೂಜಾರಿಪಾಳ್ಯ ಕೃಷ್ಣಮೂರ್ತಿ

ಮಾಗಡಿ:ಅ/07/21. ತಾಲ್ಲೂಕಿನ ಅಭಿವೃದ್ಧಿಗೆ ಸ್ಪಂದಿಸುತ್ತಿರುವ ಶಾಸಕ ಎ.ಮಂಜುನಾಥ್ ವಿರುದ್ದ ಯಾರೂ ತೇಜೋವಧೆ ಮಾಡುವುದು ಬೇಡ, ತಾಲೂಕಿನಲ್ಲಿ  ಒಳ್ಳೆಯತನದಲ್ಲಿ ಶಾಂತಿಯುತವಾಗಿ ಅಭಿವೃದ್ದಿ ಕಾರ್ಯ ನಡೆಯುತ್ತಿದೆ. ಅಂಥಹ ಕೆಸಲಸಕ್ಕೆ ವಿರೋಧ ಪಕ್ಷದವರು ಅಡ್ಡಿಪಡಿಸುವುದರಿಂದಲೂ ಅಭಿವೃದ್ಧಿ ಕುಂಠಿತವಾಗುತ್ತದೆ. ಅವರೂ ಸಹ ಶಾಸಕರ ಜೊತೆ ಕೈಜೋಡಿಸುವ ಮೂಲಕ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಕೃಷ್ಣಮೂರ್ತಿ ಸಲಹೆ ನೀಡಿದರು.

ಅವರು ಪಟ್ಟಣದ ಜೆಡಿಎಸ್ ಭವನದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.


ಸಾಮಾಜಿಕ ಜಾಲತಾಣಗಳಲ್ಲಿ  ಮಾತೆತ್ತಿದರೆ  ಶಾಸಕರು ಬಹಿರಂಗ ಚರ್ಚೆಗೆ ಬನ್ನಿ ಎಂದು ಆಹ್ವಾನಿಸುವುದು ಎಷ್ಟರ ಮಟ್ಟಿಗೆ ಸರಿ, ಶಾಸಕರಿಗೆ ಅವರದೆ ಆದ ಸ್ಥಾನಮಾನವಿದೆ, ಚರ್ಚೆಗೆ ಪತ್ರಮುಖೇನ ಅಥವಾ ಖುದ್ದಾಗಿ ಭೇಟಿ ನೀಡಿ ಆ ವೇಳೆ ಅವರು ಸಿಗದಿದ್ದರೆ ಚರ್ಚೆ ಮಾಡಬಹುದು. ಎಲ್ಲೊ ಕುಳಿತು ಬಹಿರಂಗ ಚರ್ಚೆಗೆ ಆಹ್ವಾನಿಸುವುದು ಬೇಡ, ಚುನಾವಣೆ ಬಂದಾಗ ಯಾರು ಏನೇನು ಕೆಲಸ ಮಾಡಿದ್ದಾರೆ ಎಂದು ಜನರ ಬಳಿ ತಿಳಿಸಿ ಜನರು ತಿರ್ಮಾನಿಸುತ್ತಾರೆ. ಈ ಮಧ್ಯೆ ಕಲುಷಿತ ವಾತಾವರಣ ಸೃಷ್ಟಿಸುವುದು ಬೇಡ ಎಂದು ವಿರೋಧ ಪಕ್ಷದವರ ವಿರುದ್ದ ಕಿಡಿಕಾರಿದರು.


ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ 4 ಭಾರಿ ಶಾಸಕರಾಗಿದ್ದು ರಾಜಕೀಯ ಮನೆತನದವರಾಗಿದ್ದು, ತಾಲೂಕಿನಲ್ಲಿ ಅವರದೆ ಆದಂತಹ ಗೌರವವಿದೆ, ಅವರಲ್ಲಿ ಒಳ್ಳೆಯತನವಿದ್ದು  ಅವರ ಅನುಯಾಯಿಗಳ ಮಾತನ್ನು ಕೇಳಿ ದುಡುಕುವುದು ಬೇಡ, ಹಿಂಬಾಲಕರು ಮಾಡುವ ಕೆಲಸಕ್ಕೆ  ಅವರಿಗೆ ಕೆಟ್ಟಹೆಸರು ಬರುತ್ತಿದೆ, 20 ವರ್ಷ ಶಾಸಕರಾಗಿ ಒಳ್ಳೆಯ ಕೆಲಸಮಾಡಿದ್ದಾರೆ. ಅದರೆ ಎ.ಮಂಜುನಾಥ್ ಶಾಸಕರಾಗಿ ಮೂರು ವರ್ಷ ಕಳೆದಿದ್ದು  ಅವರು ದೂರದೃಷ್ಟಿಯ  ನಿಟ್ಟಿನಲ್ಲಿ ಅಭಿವೃದ್ದಿ ಕೆಲಸ ನಡೆಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಪಿಆರ್‍ಇಡಿ ಇಲಾಖೆಯಿಂದ 38 ಕೋಟಿ, ಲೋಕೋಪಯೋಗಿ ಇಲಾಖೆಯಿಂದ 180 ಕೋಟಿ, ಕಾವೇರಿ ನೀರಾವರಿ ನಿಗಮದಿಂದ 45 ಕೋಟಿ, ಸಣ್ಣನೀರಾವರಿ ಇಲಾಖೆಯಿಂದ 131 ಕೋಟಿ, ಕೆಆರ್‍ಐಡಿಎಲ್ ನಿಂದ 15 ಕೋಟಿ, ನಿರ್ಮಿತಿ ಕೇಂದ್ರದಿಂದ 10 ಕೋಟಿ ವೆಚ್ಚದಲ್ಲಿ ಕೆಲಸಮಾಡಿಸಿದ್ದಾರೆ. ಇದರಲ್ಲಿ ಲೋಪ, ಕಳಪೆ ಕೆಲಸವಾಗಿದ್ದರೆ ವಿರೋಧ ಪಕ್ಷದವರು ಚರ್ಚೆಮಾಡಲಿ. ಆಗ ಬೇಕಾದರೆ ಟೀಕಿಸುವವರಿಗೆ ಉತ್ತರ ಕೊಡೋಣ. ಇದನ್ನು ಬಿಟ್ಟು ಸಾಮಾಜಿಕ ಜಾಲತಾಣಗಳಲ್ಲಿ ಶಾಸಕರ ವಿರುದ್ದ ಕೆಟ್ಟದಾಗಿ ನಿಂದನೆ ಮಾಡುವುದು ಸರಿಯಲ್ಲ ಎಂದು ಲೇವಡಿಮಾಡಿದರು.


ಮೂರು ವರ್ಷಗಳಿಂದ ರಾಜಕೀಯವಾಗಿ ಗಲಾಟೆ, ಗಲಭೆಗಳು ನಡೆದಿಲ್ಲ. ಮುಂದಿನ ದಿನಗಳಲ್ಲಿ ಆ ರೀತಿ ಅನುವು ಮಾಡಿಕೊಡಬಾರದು ಎಂಬ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷದ ನಾಯಕರಲ್ಲಿ, ಕಾರ್ಯಕರ್ತರಲ್ಲಿ  ಮನವಿಮಾಡುತ್ತಿದ್ದೇವೆ, ಅಭಿವೃದ್ದಿಗೆ ಕೈಜೋಡಿಸಿ ನೀವು ಸಹ ಅಭಿವೃದ್ದಿ ಕೆಲಸಮಾಡಿ ಮಾತೆತ್ತಿದರೆ  ಸಂಸದರು ಯೋಜನೆ ತಂದಿದ್ದು ಎನ್ನುತ್ತಾರೆ. ಸಂಸದರು ಗೆಲ್ಲಲು ಮೂಲ ಕಾರ್ಯಕರ್ತರು ಶಾಸಕರ ಕಡೆಯವರು.  ತಾಲೂಕಿನ ಜನತೆ ಸಂಸದರಿಗೆ  ಮತ ಹಾಕಿದ್ದಾರೆ. ಸಂಸದರು ಅಭಿವೃದ್ದಿ ಯೋಜನೆ ತರಲಿ ಎಂದು ಚೇಡಿಸಿದರು.


ಸಾಮಾಜಿಕ ಜಾಲತಾಣಗಳಲ್ಲಿ ನಿಂದಿಸುವ ಕೆಲಸ ನಿಲ್ಲಲಿ, ನಮ್ಮ ಕಾರ್ಯಕರ್ತರು ಯಾರು ಹಿಂದೆ ಬೀಳುವುದಿಲ್ಲ ಎಲ್ಲದಕ್ಕೂ ಸಿದ್ದರಿದ್ದಾರೆ, ಶಾಸಕರು ಸಹ ತಾಳ್ಮೆಯಿಂದ ಇದ್ದಾರೆ. ಆ ತಾಳ್ಮೆಗೆ ಕಾರ್ಯಕರ್ತರು ಸಹ ತಾಳ್ಮೆಯಿಂದ ಇದ್ದಾರೆ. ಈ ತಾಳ್ಮೆಯನ್ನು ವಿರೋಧ ಪಕ್ಷದ ಕಾರ್ಯಕರ್ತರು ಕೆಣಕುವುದು ಬೇಡ ಎಂದು ಕಟುವಾಗಿ ವಿರೋಧಿಗಳಿಗೆ ಚೇಡಿಸಿದರು.


ಮಾಗಡಿಗೆ ಕೈಗಾರಿಕೆ ಪ್ರದೇಶ ತರಲು ಶಾಸಕರು ಮುಂದಾಗಿದ್ದಾರೆ. ಈಗಾಗಲೇ ಸರ್ಕಾರದ ಜೊತೆ ಮಾತನಾಡಿದ್ದಾರೆ. ರೈತರನ್ನು ತುಳಿದು, ಧಮನ ಮಾಡಿ ತರುವಂತಹ ಕೆಲಸಕ್ಕೆ ನಾವು ಒಪ್ಪುವುದಿಲ್ಲ, ಕೈಗಾರಿಕೆ ಪ್ರದೇಶದಿಂದ ಅನುಕೂಲ, ಅನಾನುಕೂಲದ ಬಗ್ಗೆ ಚರ್ಚೆಮಾಡೋಣ, ಇದನ್ನು ರಾಜಕೀಯವಾಗಿ ಬಿಂಬಿಸುವುದು, ತಿರುಗಿಸುವುದು ಬೇಡ ಎಂದರು.


ತಾ.ಪಂ. ಮಾಜಿ ಸದಸ್ಯ ವೆಂಕಟೇಶ್ ಮಾತನಾಡಿ, ರಾಜ್ಯದಲ್ಲಿ ನೀರಾವರಿ ಯೋಜನೆಗಳು ರಾಜಕೀಯ ದುರುದ್ದೇಶ, ಗುತ್ತಿಗೆದಾರ, ಎಂಜಿನಿಯರುಗಳ ಅಕ್ರಮದಲ್ಲಿ ತಳ ಹಿಡಿದು ಸೊರಗಿವೆ, ಹೇಮಾವತಿ ಯೋಜನೆ ವಿಳಂಬವಾದಷ್ಟು ಯೋಜನೆಯ ವೆಚ್ಚ ಹೆಚ್ಚಾಗುತ್ತದೆ,  ರಾಜಕಾರಣಿಗಳಲ್ಲಿ ವಯಕ್ತಿಕ ದ್ವೇಷ ಎಷ್ಟೇ ಇರಲಿ ಮಾಡುವ ಕೆಲಸ ಮತಗಳಾಗಿ ಪರಿವರ್ತನೆಯಾಗಬೇಕು, 

ಇನ್ನೊಂದು ವರ್ಷದಲ್ಲಿ ಒಂದು ಲೈನ್ ಮೂಲಕ ಕೆರೆಗಳಿಗೆ ಹೇಮಾವತಿ ನೀರು ಬರುತ್ತದೆ. ಲಿಂಕ್ ಕೆನಾಲ್ ಇಲ್ಲದಿದ್ದರು ನೀರು ತರಲು ಸಾಧ್ಯ ಎಂದರು.


ಜೆಡಿಎಸ್ ಅಧ್ಯಕ್ಷ ಪೊಲೀಸ್ ರಾಮಣ್ಣ ಮಾತನಾಡಿ, ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ ಪ್ರಬುದ್ದರು, ಪುರಸಭೆ ಕಚೇರಿಯ ಶಾಸಕರ ಕೊಠಡಿಗೆ ಯಾರೋ ಹೇಳಿದ ವಿಚಾರಕ್ಕೆ ಏಕಾಏಕಿ ಗುಂಪುಗಾರಿಕೆ ಮಾಡಿಕೊಂಡು ಚರ್ಚೆಗೆ 

ಬರುವುದು ತಪ್ಪು, ಈ ವಿಚಾರದಲ್ಲಿ ಶಾಸಕರ ತಪ್ಪಿಲ್ಲ, ಎಚ್.ಡಿ.ಕುಮಾರಸ್ವಾಮಿ ಆಶೀರ್ವಾದದಿಂದ ಕ್ಷೇತ್ರ ಅಭಿವೃದ್ದಿಯಾಗಿದೆ. 

ಹೇಮಾವತಿ ನೀರು ಎಲ್ಲಿ ಬರುತ್ತದೆ ಎಂದು ಒಬ್ಬರ ಚಿಂತನೆಯಾಗಿದೆ. ಮತ್ತೊಬ್ಬರು  ಏನೆ ಹಾಗಲಿ ತಾಲೂಕಿಗೆ ನೀರು ತರುತ್ತೇನೆ ಎಂಬ  ಚಿಂತನೆಯಾಗಿದೆ. ಕೈಗಾರಿಕೆ, ಹೇಮಾವತಿ ಯೋಜನೆಗಳು ಒಬ್ಬರು ಕೈಜೋಡಿಸಿದರೆ ಸಾಧ್ಯವಿಲ್ಲ ಎಲ್ಲರೂ ಒಟ್ಟಾಗಿ ಕೈಜೋಡಿಸಿದರೆ ಸಾಧ್ಯ ಇದಕ್ಕೆ ಮಾಜಿ ಶಾಸಕರು ಕೈಜೋಡಿಸಬೇಕು. ಅಭಿವೃದ್ದಿ ವಿರೋಧ ರಾಜಕಾರಣ ಬೇಡ, ಸಾಮಾಜಿಕ ಜಾಲತಾಣಗಳಲ್ಲಿ ಸಣ್ಣ ವಿಚಾರಗಳಿಗೆ ಮಹತ್ವ ನೀಡಬಾರದು ಎಲ್ಲಾ ಕಾರ್ಯಕರ್ತರು ಸಹಕಾರ ನೀಡಲಿ, ಮಾಜಿ ಶಾಸಕರಿಗೆ ಸದ್ಬುದ್ದಿ ಕೊಡಲಿ ಎಂದರು.


ಪುರಸಭೆ ಉಪಾಧ್ಯಕ್ಷ ರೆಹಮತ್, ಸದಸ್ಯರಾದ ಎಂ.ಎನ್.ಮಂಜುನಾಥ್, ಜಯರಾಮಣ್ಣ, ಅನಿಲ್ ಕುಮಾರ, ಮಾಜಿ ಅಧ್ಯಕ್ಷ ಪಿ.ವಿ.ಸೀತಾರಾಂ, ಮಾಜಿ ಸದಸ್ಯ ರೂಪೇಶ್, ನಯಾಜ್, ಜೆಡಿಎಸ್ ಮಾಜಿ ಅಧ್ಯಕ್ಷ ಗುಡ್ಡೇಗೌಡ, ಮಹಿಳಾ ಅಧ್ಯಕ್ಷೆ ಶೈಲಜಾ, ಎಪಿಎಂಸಿ ನಿರ್ದೆಶಕ ಕೆ.ಟಿ.ಮಂಜುನಾಥ್, ಕೆಡಿಪಿ ಸದಸ್ಯ ನಾಗರಾಜು, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ತಮ್ಮಣಗೌಡ, ವಾಟರ್ ಬೋರ್ಡ್ ರಾಮಣ್ಣ ಇತರರು ಇದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

??????????????

  • ????? ???????? ??????????? ???? ??????????.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑