Tel: 7676775624 | Mail: info@yellowandred.in

Language: EN KAN

    Follow us :


ಕ್ರಿಕೆಟ್ ಬೆಟ್ಟಿಂಗ್: ತಾಲ್ಲೂಕಿನ ನಾಲ್ಕು ಮಂದಿ ಬಂಧನ. 10,98,210₹, ಕಾರು, ಟಿವಿಗಳು, ಮೊಬೈಲ್ ಗಳು, ಚೆಕ್ ಗಳು, ಎಟಿಎಂ ಕಾರ್ಡುಗಳು ವಶಕ್ಕೆ

Posted date: 12 Oct, 2021

Powered by:     Yellow and Red

ಕ್ರಿಕೆಟ್ ಬೆಟ್ಟಿಂಗ್: ತಾಲ್ಲೂಕಿನ ನಾಲ್ಕು ಮಂದಿ ಬಂಧನ. 10,98,210₹, ಕಾರು, ಟಿವಿಗಳು, ಮೊಬೈಲ್ ಗಳು, ಚೆಕ್ ಗಳು, ಎಟಿಎಂ ಕಾರ್ಡುಗಳು ವಶಕ್ಕೆ

ರಾಮನಗರ: ಚನ್ನಪಟ್ಟಣ.ಅ/12/21.

ಇತ್ತೀಚೆಗೆ ಅಗಾಧವಾಗಿ ಬೆಳೆದು, ಯುವಕರು ಹಾಳಾಗಿ, ಮನೆಮಠ ಕಳೆದುಕೊಂಡು, ಭಿಕಾರಿಗಳಾಗಿ, ಕೆಲವರು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವಾಗಿದ್ದ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಜೂಜಾಟ ಆಡು(ಸು)ತ್ತಿದ್ದ ನಾಲ್ಕು ಬುಕ್ಕಿಗಳನ್ನು ರಾಮನಗರ ದ ಸಿಇಎನ್ ಪೋಲೀಸರು ದಾಳಿ ಮಾಡಿ, ಅಪಾರ ಹಣದ ಜೊತೆಗೆ ಹಲವಾರು ತಾಂತ್ರಿಕತೆಯ ವಸ್ತುಗಳನ್ನು ವಶಕ್ಕೆ ಪಡೆದು, ನಾಲ್ಕು ಮಂದಿಯನ್ನು ಬಂಧಿಸಿ, ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿರುವುದಾಗಿ ರಾಮನಗರ ಪೋಲೀಸ್ ಅಧೀಕ್ಷಕ ಎಸ್ ಗಿರೀಶ್ ರವರು ಪತ್ರಿಕಾ ಪ್ರಕಟಣೆಯ ಮೂಲಕ ಮಾಹಿತಿ ನೀಡಿದ್ದಾರೆ.


ಚನ್ನಪಟ್ಟಣ ತಾಲ್ಲೂಕಿನ ಹೊಡಿಕೆಹೊಸಹಳ್ಳಿ ಗ್ರಾಮದ ಲೇಟ್ ಮರಿಗೌಡರ ಪುತ್ರ ಆತ್ಮಾನಂದ ಉ ಗ್ರೇನೇಜ್ ಆತ್ಮ ಎಂಬ ವ್ಯಕ್ತಿ ಮೊದಲ ಆರೋಪಿಯಾಗಿದ್ದಾನೆ. ಎ2 ಮಳೂರುಪಟ್ಟಣ ಗ್ರಾಮದ ಲೇಟ್ ಚನ್ನೇಗೌಡರ ಪುತ್ರ ಎಂ ಮನು, ಎ3 ಚನ್ನಪಟ್ಟಣ ದ ಮೂಲನಿವಾಸಿ ಹಾಲಿ ರಾಮನಗರ ದ ಅಗ್ರಹಾರ ವಾಸಿಯಾದ ಎ ಪಿ ಸೋಮಾಚಾರಿ ಪುತ್ರ ಕೃಷ್ಣಮೂರ್ತಿ ಎಸ್ ಉ ಕಿಟ್ಟಿ, ಎ4 ಸಂದೀಪ್ ಉ ಗೋಪಾಲ್ ಎಂಬ ವ್ಯಕ್ತಿ ತಲೆಮರೆಸಿಕೊಂಡಿದ್ದಾನೆ. ಎ5 ಚನ್ನಪಟ್ಟಣ ನಗರದ ಎಂ ಜಿ ರಸ್ತೆಯ ವೆಂಕಟರಮಣಸ್ವಾಮಿ ಪುತ್ರ ನಾಗಾರ್ಜುನ ಉ ನಕುಲ ಎಂಬ ವ್ಯಕ್ತಿಗಳೇ ಕ್ರಿಕೆಟ್ ದಂಧೆಯ ಕಿಂಗ್ ಫಿನ್ ಗಳಾಗಿದ್ದಾರೆ.


ದಾಳಿಯ ಸಮಯದಲ್ಲಿ ಆರೋಪಿಗಳಿಂದ 10,98,210 ರೂಪಾಯಿ ನಗದು, ಒಂದು ಹುಂಡೈ ಐ 10 ಕಾರು, 2 ಸೋನಿ ಟಿವಿಗಳು, ಸೆಟ್ ಅಪ್ ಬಾಕ್ಸ್ ಗಳು, 8 ಮೊಬೈಲ್ ಗಳು, ವಿವಿಧ ಬ್ಯಾಂಕುಗಳ ಚೆಕ್ ಪುಸ್ತಕಗಳು ಮತ್ತು ಎಟಿಎಂ ಕಾರ್ಡುಗಳು ಹಾಗೂ ಐಪಿಎಲ್ ಕ್ರಿಕೆಟ್ ದಂಧೆಗೆ ಸಂಬಂಧಿಸಿದ ಇನ್ನಿತರ ಹಲವಾರು ದಾಖಲೆಗಳನ್ನು ಆರೋಪಿಗಳಿಂದ ಅಮಾನತು ಪಡಿಸಿಕೊಳ್ಳಲಾಗಿದೆ.


ಈ ದಾಳಿಯನ್ನು ಖಚಿತ ಮಾಹಿತಿ ಮೇರೆಗೆ ರಾಮನಗರ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಎಸ್ ಗಿರೀಶ್ ರವರ ಮಾರ್ಗದರ್ಶನದಲ್ಲಿ ಸೈಬರ್, ಎಕನಾಮಿಕ್, ನಾರ್ಕೋಟಿಕ್ಸ್ (ಸಿಇಎನ್) ಪೋಲೀಸ್ ಠಾಣೆಯ ಉಪನಿರೀಕ್ಷಕ ಗೋವಿಂದ್ ಬಿ ಟಿ, ಕನಕಪುರ ಗ್ರಾಮಾಂತರ ಪೋಲೀಸ್ ಠಾಣೆಯ ಉಪನಿರೀಕ್ಷಕ ಹೇಮಂತ್ ಕುಮಾರ್, ರಾಮನಗರ ಪುರ ಠಾಣೆಯ ಉಪನಿರೀಕ್ಷಕ ಮುತ್ತುರಾಜ್, ಸಿಬ್ಬಂದಿಗಳಾದ ಅಶ್ವಥ್, ಮಾರಪ್ಪ, ಗುರುಮೂರ್ತಿ, ಮಂಜುನಾಥ ಬಾಬಾಜಿ, ನಾಗರಾಜಣ್ಣ, ಸವಿತಾ ಹೆಚ್ ಎಂ, ಸುಶೀಲಾ, ಕವಿತಾ ಕಿರಣಕುಮಾರ್, ಸಂತೋಷ ಪಾಂಡೆ, ದುಂಡಪ್ಪ ಮಾಳ್ಯಗೋಳ, ಶೇಖರ್ ರವರು ದಾಳಿ ಮಾಡುವಲ್ಲಿ ಯಶಸ್ವಿಯಾಗುದ್ದು, ಪತ್ತೆಕಾರ್ಯ ಮುಂದುವರೆದಿರುತ್ತದೆ ಎಂದು ಎಸ್ ಪಿ ಗಿರೀಶ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑