Tel: 7676775624 | Mail: info@yellowandred.in

Language: EN KAN

    Follow us :


ನಕರಾತ್ಮಕ ವಿಷಯಗಳಿಂದ ದೂರವಿದ್ದು, ಸಕಾರಾತ್ಮಕ ವಿಷಯಗಳಿಗೆ ಒತ್ತು ನೀಡಿ. ಪಿಟಿಎಸ್ ನಲ್ಲಿ ಡಾ ಸಿ ಆರ್ ಚಂದ್ರಶೇಖರ್

Posted date: 12 Oct, 2021

Powered by:     Yellow and Red

ನಕರಾತ್ಮಕ ವಿಷಯಗಳಿಂದ ದೂರವಿದ್ದು, ಸಕಾರಾತ್ಮಕ ವಿಷಯಗಳಿಗೆ ಒತ್ತು ನೀಡಿ. ಪಿಟಿಎಸ್ ನಲ್ಲಿ ಡಾ ಸಿ ಆರ್ ಚಂದ್ರಶೇಖರ್

ಚನ್ನಪಟ್ಟಣ: ಅ/12/21. ಜನರಲ್ಲಿ ಆಧುನಿಕತೆ, ಆಡಂಬರ ಮತ್ತು ವೈಯುಕ್ತಿಕ ಅಭಿಲಾಷೆಗಳು ಹೆಚ್ಚಾದಂತೆ ಮಾನಸಿಕ ಖಿನ್ನತೆಗೊಳಗಾಗುತ್ತಿದ್ದು, ಅಂತಹ ವ್ಯಕ್ತಿಗಳು ದುರ್ಬಲವಾಗುವುದರ ಜೊತೆಗೆ ಮಾನಸಿಕವಾಗಿ ಖಿನ್ನತೆಗೊಳಗಾಗುತ್ತಿದ್ದಾರೆ. ನಕಾರಾತ್ಮಕ ಚಿಂತನೆಗಳನ್ನು ಬದಿಗೆ ಸರಿಸಿ ಸಕಾರಾತ್ಮಕ ಚಿಂತನೆಗಳಿಗೆ ಸ್ಪಂದಿಸಬೇಕು ಎಂದು ಖ್ಯಾತ ಮನೋವೈದ್ಯ ಡಾ ಸಿ ಆರ್ ಚಂದ್ರಶೇಖರ್ ತಿಳಿಸಿದರು.

ಅವರು ಇಂದು ತಾಲ್ಲೂಕಿನ ವಂದಾರಗುಪ್ಪೆ ಬಳಿ ಇರುವ ಪೋಲಿಸ್ ತರಬೇತಿ ಕೇಂದ್ರದಲ್ಲಿ ಪ್ರಶಿಕ್ಷಣಾರ್ಥಿಗಳಿಗೆ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ವಿಭಾಗ, ರಾಮನಗರ ಇವರ ಸಹಯೋಗದೊಂದಿಗೆ ಅಸಮಾನ ಜಗತ್ತಿನಲ್ಲಿ ಮಾನಸಿಕ ಸ್ವಾಸ್ಥ್ಯ ಎಂಬ ಘೋಷವಾಕ್ಯದಡಿಯಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು.


ಜಗತ್ತಿನಲ್ಲಿ ಲಿಂಗ, ಸಾಮರ್ಥ್ಯ, ಬಣ್ಣ, ಆರ್ಥಿಕತೆ, ಧರ್ಮ, ಮತ, ಭಾಷೆ ಹೀಗೆ ಹಲವಾರು ವಿಷಯಗಳಲ್ಲಿ ಅಸಮಾನತೆ ಕಂಡುಬರುತ್ತದೆ, ಇದರಿಂದ ಶೋಷಣೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಇದರೊಂದಿಗೆ ಖಿನ್ನತೆ, ಆತಂಕ, ಆತ್ಮಹತ್ಯೆ ಆಲೋಚನೆಗಳು ಅತಿಯಾದ ಒತ್ತಡ ಹೀಗೆ ಹಲವಾರು ಮಾನಸಿಕ ಸಮಸ್ಯೆಗಳು ಹೆಚ್ಚಾಗುತ್ತಿವೆ, ಮಾನಸಿಕ ಸಮಸ್ಯೆಗಳನ್ನು ಇತರರಲ್ಲಿ ಹಂಚಿಕೊಳ್ಳುವುದು, ಯೋಗ, ಧ್ಯಾನ, ಸಂಗೀತ ಕೇಳುವಂತಹ ಅಭ್ಯಾಸ ಮಾಡಿಕೊಳ್ಳುವುದು, ನಕರಾತ್ಮಕ ವಿಷಯಗಳಿಂದ ದೂರವಿರುವುದು ಮತ್ತು ಸಕಾರಾತ್ಮಕ ವಿಷಯಗಳಿಗೆ ಹೆಚ್ಚು ಒತ್ತು ನೀಡುವ ಮೂಲಕ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಮತ್ತು ಮನೋರೋಗ ತಜ್ಞರನ್ನು ಭೇಟಿ ಮಾಡಿ ಸಲಹೆ ಪಡೆದುಕೊಳ್ಳುವುದೇ ಉತ್ತಮ ಎಂದು ತಿಳಿಸಿದರು.


ಕಾರ್ಯಕ್ರಮಾಧಿಕಾರಿಗಳಾದ ಡಾ|| ಮಂಜುನಾಥ್, ಸಿ ರವರು, ಮಾತನಾಡಿ ಇಂದಿನ ದಿನದಲ್ಲಿ ಎಲ್ಲರೂ ಅತಿ ಹೆಚ್ಚು ಒತ್ತಡದಿಂದ ಹಲವಾರು ರೀತಿಯ ಮಾನಸಿಕ ಸಮಸ್ಯೆಗಳಿಗೆ ತುತ್ತಾಗುತ್ತಿದ್ದು, ತಮಗೆ ನಿಭಾಯಿಸಲು ಸಾಧ್ಯವಾಗದಿದ್ದಲ್ಲಿ ಯಾವುದೇ ಹಿಂಜರಿಕೆ ಇಲ್ಲದೇ ಮನೋರೋಗ ತಜ್ಞರನ್ನು ಭೇಟಿ ಮಾಡಿ, ಮಕ್ಕಳಲ್ಲಿ ಅತಿಯಾದ ಮೊಬೈಲ್ ಬಳಕೆಯಿಂದ ಉಂಟಾಗುವ ದುಷ್ಪಾರಿಣಾಮಗಳ ಬಗ್ಗೆ ತಿಳಿಹೇಳಿ ಮತ್ತು ಪೋಷಕರು ಮಕ್ಕಳ ಮಾನಸಿಕ ಸ್ಥಿತಿಯ ಮೇಲೆ ನಿಗಾವಹಿಸಿ ಈ ಮೂಲಕ ಮಕ್ಕಳಲ್ಲಿ ಉಜ್ವಲ ಭವಿಷ್ಯ ರೂಪಿಸಿ ಎಂದು ತಿಳಿಸಿದರು.

ಮನೋರೋಗ ತಜ್ಞರಾದ ಡಾ|| ಆದರ್ಶ, ಎ.ಎಂ ರವರು, ಮಾತನಾಡಿ ರಾಮನಗರ ಜಿಲ್ಲೆಯ ಜಿಲ್ಲಾ ಆಸ್ಪತ್ರೆ, ತಾಲ್ಲೂಕು ಆಸ್ಪತ್ರೆ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಮಾನಸಿಕ ಆರೋಗ್ಯ ಶಿಬಿರ ನಡೆಸಲಾಗುವುದು ಮತ್ತು ಪ್ರತಿದಿನ ಜಿಲ್ಲಾ ಆಸ್ಪತ್ರೆಯಲ್ಲಿ ಮನೋರೋಗ ತಜ್ಞರು ಲಭ್ಯವಿರುತ್ತಾರೆ. ಖಿನ್ನತೆಗೊಳಗಾದವರು ಭೇಟಿ ನೀಡಿ ತಮ್ಮ ಖಿನ್ನತೆಯನ್ನು ದೂರ ಮಾಡಿಕೊಳ್ಳವಂತೆ ಸಲಹೆ ನೀಡಿದರು.


ಕಾರ್ಯಕ್ರಮದಲ್ಲಿ ಕೆಎಸ್‍ಪಿಟಿಎಸ್ ನ ಪ್ರಾಂಶುಪಾಲರಾದ ವಿ ಶೈಲೇಂದ್ರ ರವರು, ಅಧ್ಯಕ್ಷತೆಯನ್ನು ವಹಿಸಿದ್ದರು. ಕೆಎಸ್‍ಪಿಟಿಎಸ್ ನ ಡಿವೈಎಸ್ ಪಿ ಆದ ಎಲ್ ಕೆ ರಮೇಶ್ ರವರು, ಸ್ವಾಗತ ಕೋರಿದರು. ಬೋದಕರಾದ ಸಂಪತ್ ಕುಮಾರ್ ರವರು ವಂದನಾರ್ಪಣೆ ಮಾಡಿದರು, ಎಸ್ ಎನ್ ರಮೇಶ್ ರವರು ನಿರೂಪಿಸಿದರು. ಇದೇ ಸಂದರ್ಭದಲ್ಲಿ ಕೆಎಸ್‍ಪಿಟಿಎಸ್ ನ ಪ್ರಶಿಕ್ಷಣಾರ್ಥಿಗಳೊಂದಿಗೆ ಮನೋರೋಗ ತಜ್ಞರಾದ ಡಾ|| ಸಿ ಆರ್ ಚಂದ್ರಶೇಖರ್ ರವರು ಸಂವಾದ ನಡೆಸಿದರು.


ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ|| ನಿರಂಜನ್, ಬಿ.ಎಸ್, ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿಗಳಾದ ಡಾ|| ಪದ್ಮ, ಜಿ.ಎಲ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ|| ಕಿರಣ್ ಶಂಕರ್, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿಗಳಾದ ಡಾ|| ಕುಮಾರ್, ಕೆ, ಜಿಲ್ಲಾ ತರಬೇತಿ ಕೇಂದ್ರದ ಪ್ರಾಂಶುಪಾಲೆ ಡಾ|| ಮಂಜುಳಾ ಕೆ, ಉಪಸ್ಥಿತರಿದ್ದರು. ಆರೋಗ್ಯ ಇಲಾಖೆ, ಕೆಎಸ್‍ಪಿಟಿಎಸ್  ಚನ್ನಪಟ್ಟಣದ ಸಿಬ್ಬಂದಿಗಳು ಮತ್ತು ಪ್ರಶಿಕ್ಷಣಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑