Tel: 7676775624 | Mail: info@yellowandred.in

Language: EN KAN

    Follow us :


ತುಂಬಿ ಹರಿಯುತ್ತಿದೆ ಕಣ್ವ ನದಿ. ತೇಲುತ್ತಿವೆ ಅಪರಿಚಿತ ಶವಗಳು

Posted date: 17 Nov, 2021

Powered by:     Yellow and Red

ತುಂಬಿ ಹರಿಯುತ್ತಿದೆ ಕಣ್ವ ನದಿ. ತೇಲುತ್ತಿವೆ ಅಪರಿಚಿತ ಶವಗಳು

ಒಂದು ವಾರದಿಂದ ಎಡೆಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ರೇಷ್ಮೆನಗರಿ ಜಿಲ್ಲೆಯ ಜೀವನದಿ ಚನ್ನಪಟ್ಟಣದ ಕಣ್ವ ಜಲಾಶಯ ಉಕ್ಕಿ ಹರಿಯುತ್ತಿದೆ. ರಭಸದಿಂದ ಹರಿಯುತ್ತಿರುವ ನೀರಿನಿಂದಾಗಿ ನದಿ ದಡದಲ್ಲಿ ಹೂಳಲಾಗಿದ್ದ ಹೆಣಗಳ ಜೊತೆಗೆ ಅಪರಿಚಿತ ಶವವು ಕೊಚ್ಚಿಕೊಂಡು ಹೋಗುತ್ತಿವೆ.


*ಎರಡು ದಶಕಗಳ ನಂತರ ತುಂಬಿ ಹರಿಯುತ್ತಿರುವ ಕಣ್ವ* 

ರೇಷ್ಮೆನಗರಿ ಜಿಲ್ಲೆಯ ಜೀವನಾಡಿ ಜಲಾಶಯ ಎಂದೇ ಖ್ಯಾತಿ ಪಡೆದ ಕಣ್ವ ಜಲಾಶಯ ಎರಡು ದಶಕಗಳ ನಂತರ ಇದೇ ಪ್ರಥಮ ಬಾರಿಗೆ ತುಂಬುತ್ತಿದೆ. ಸಂಪೂರ್ಣವಾಗಿ ತುಂಬುವ ಮೊದಲೆ ಹಲವಾರು ಕೆರೆಗಳು ತುಂಬಿ ಕೋಡಿ ಬಿದ್ದಿರುವುದರಿಂದ, ಆ ನೀರು ನದಿಗೆ ಹರಿದು ಬಂದಿರುವುದರಿಂದ ತುಂಬಿ ಹರಿಯುತ್ತಿದೆ.

ನದಿ ನೀರಿನ ರಭಸಕ್ಕೆ ಜಲಾಶಯದ ಅಚ್ಚು ಕಟ್ಟು ಪ್ರದೇಶಗಳಲ್ಲಿ ಹೂಳಲಾಗಿದ್ದ ಹೆಣಗಳು‌ ನೀರಿನಲ್ಲಿ ತೇಲಿಕೊಂಡು ಬರುತ್ತಿದೆ.

ಇದರ ಜೊತೆಗೆ ಬಟ್ಟೆ ಸಮೇತ ಅಂಗಾತವಾಗಿ ಒಂದು ಅಪರಿಚಿತ ಶವವು ತೇಲಿ ಹೋಗುತ್ತಿರುವುದು ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿದೆ.


ಕಳೆದ ಒಂದು ವಾರದಿಂದಲೂ ಎಡೆ ಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಚನ್ನಪಟ್ಟಣ ಬಹುತೇಕ ಎಲ್ಲಾ ಕೆರೆಗಳು ತುಂಬಿ ಕೋಡಿ ಹೊಡೆಯುತ್ತಿವೆ. ಈ ಮಧ್ಯ ಹುಣಸನಹಳ್ಳಿ ಕೊಂಡಾಪುರ ಮಧ್ಯೆ ಹೆಣಗಳು ತೇಲಿಕೊಂಡು ಬರುತ್ತಿದೆ. ಹಲವು ಗ್ರಾಮಗಳಲ್ಲಿ  ಸ್ಮಶಾನವಿಲ್ಲದೆ ಕಣ್ವ ನದಿ ದಡದಲ್ಲಿ ಹೂಳಲಾಗಿದ್ದ ಹೆಣಗಳು ತೇಲಿಕೊಂಡು ಬರುತ್ತಿದೆ‌.


ಹತ್ತಾರು ಕೆರೆ-ಕಟ್ಟೆ, ಹಳ್ಳ- ಕೊಳ್ಳಗಳು ಬಾರಿ ಮಳೆಗೆ ಮೈದುಂಬಿ ಹರಿದಿದ್ದರಿಂದ ನೀರಿನ ಕೊರೆತಕ್ಕೆ ಹೆಣಗಳು ಮೇಲೆದ್ದು ತೇಲುತ್ತಿವೆ. ಇದರ ಜೊತೆಗೆ ತೋಟಗಳಲ್ಲಿ ಹಾಕಲಾಗಿದ್ದ ತೆಂಗಿನ ಕಾಯಿ ಕೂಡ ಹಳ್ಳಗಳ ಮೂಲಕ ನದಿಗೆ ಬಂದು ತೇಲುತ್ತಿವೆ.


ಕಣ್ವ ಜಲಾಶಯ ಸದ್ಯ 30 ಅಡಿಗಳಾಗಿದ್ದು, ಜಲಾಶಯದ ನೀರಿನ ಮಟ್ಟ 33.5 ಅಡಿ ಇದ್ದು, ಜಲಾಶಯ ತುಂಬದಿದ್ದರೂ ಹತ್ತಾರು ಕೆರೆ ತುಂಬಿ ಕೋಡಿ ಬಿದ್ದಿದ್ದರಿಂದ ವಿರುಪಾಕ್ಷಿಪುರ ಹೋಬಳಿ ಭಾಗದ ಸಾದಾರಹಳ್ಳಿ, ಹುಣಸನಹಳ್ಳಿ, ಕೊಂಡಾಪುರ, ಮಾದಾಪುರ, ಬಾಣಗಹಳ್ಳಿ, ಅಂಬಾಡಹಳ್ಳಿ, ನೆಲಮಾಕನಹಳ್ಳಿ ಸಾಮಂದಿಪುರ ಸರಹದ್ದಿನಲ್ಲಿ ಕೆರೆಗಳು ಮೈದುಂಬಿ ಹರಿಯುತ್ತಿದೆ.


ಎರಡು ದಶಕಗಳ ನಂತರ ಇದೇ ಪ್ರಥಮ ಭಾರಿಗೆ ಕಣ್ವ ಜಲಾಶಯ ತುಂಬುತ್ತಿದೆ. ಇದಲ್ಲದೆ ಜಲಾಶಯ ಅಚ್ಚು ಕಟ್ಟು ಪ್ರದೇಶಗಳಲ್ಲಿ ಗ್ರಾಮಗಳು ಎಚ್ಚರಿಕೆಯಿಂದ ಇರುವಂತೆ ತಾಲೂಕು ಆಡಳಿತ ಎಚ್ಚರಿಕೆಯನ್ನ ಕೂಡ ನೀಡಿದೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑