Tel: 7676775624 | Mail: info@yellowandred.in

Language: EN KAN

    Follow us :


ಗಂಡಕನದೊಡ್ಡಿ ಚೆಕ್ ಪೋಸ್ಟ್ ನಲ್ಲಿ 1,97 ಕೋಟಿ ದಾಖಲೆ ಇಲ್ಲದ ಹಣ ವಶ

Posted date: 19 Apr, 2023

Powered by:     Yellow and Red

ಗಂಡಕನದೊಡ್ಡಿ ಚೆಕ್ ಪೋಸ್ಟ್ ನಲ್ಲಿ 1,97 ಕೋಟಿ ದಾಖಲೆ ಇಲ್ಲದ ಹಣ ವಶ

ರಾಮನಗರ:ರಾಮನಗರ ವಿಧಾನಸಭಾ ವ್ಯಾಪ್ತಿಯ ಹಾರೋಹಳ್ಳಿ ಹೋಬಳಿಯ ಗಂಡಕನದೊಡ್ಡಿ ಚೆಕ್ ಪೋಸ್ಟ್ ನಲ್ಲಿ ಸೂಕ್ತ ದಾಖಲೆ ಇಲ್ಲದ 1,97,3000.00 ಹಣವನ್ನು ವಶಪಡಿಸಿಕೊಳ್ಳಲಾಗಿದೆ.


ಎಸ್ ಎಸ್ ಟಿ ತಂಡದ ಮುಖ್ಯಸ್ಥರು ವಾಹನ ತಪಾಸಣೆ ವೇಳೆ CMS info systems ಸಂಸ್ಥೆಯ ATM ಹಣ ವರ್ಗಾವಣೆ ವಾಹನವು ಚುನಾವಣಾ ಆಯೋಗವು ಸೂಚಿಸಿದ ಮಾರ್ಗಸೂಚಿಗಳ ವಿರುದ್ದವಾಗಿ ಸೂಕ್ತ ದಾಖಲೆಯಿಲ್ಲದೆ ಹಣ ವರ್ಗಾಯಿಸುತ್ತಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.


ಆದ ಕಾರಣ ರೂ. 1.97 ಕೋಟಿ ಮೊತ್ತವನ್ನು ಮುಟ್ಟುಗೋಲು ಹಾಕಿಕೊಂಡು ಕನಕಪುರ ತಾಲ್ಲೂಕು ಖಜಾನೆಯಲ್ಲಿ ಭದ್ರತೆ ಇಡಲಾಗಿದ್ದು, ಜಿಲ್ಲಾ ಪಂಚಾಯಿತಿ ಸಿಇಓ ರವರ ಮುಂದಿನ ವಿಚಾರಣೆ ಹಾಗೂ ಆದೇಶದಂತೆ ಕ್ರಮ ವಹಿಸಲಾಗುವುದು ಎಂದು ತಂಡದ ಮುಖ್ಯಸ್ಥರು ಮಾಹಿತಿ ನೀಡಿದ್ದಾರೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑