ಸೇಂಟ್ ಆನ್ಸ್ ಬಾಲಕಿಯರ ಕಾಲೇಜಿಗೆ ಶೇ. 95 ರಷ್ಟು ಫಲಿತಾಂಶ

ಚನ್ನಪಟ್ಟಣ: ನಗರದ ಅಪ್ಪಗೆರೆ ಸೇಂಟ್ ಆನ್ಸ್ ಬಾಲಕಿಯರ ಪದವಿ ಪೂರ್ವ ಕಾಲೇಜು ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ. 95 ರಷ್ಟು ಫಲಿತಾಂಶ ದಾಖಲಿಸಿದೆ.
ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆ ತೆಗೆದುಕೊಂಡಿದ್ದ 54 ಮಂದಿಯಲ್ಲಿ 51 ಮಂದಿ ಉತ್ತೀರ್ಣರಾಗಿದ್ದು, ಇವರಲ್ಲಿ 18 ಮಂದಿ ಅತ್ಯುನ್ನತ ಶ್ರೇಣಿಯಲ್ಲಿ, 28 ಮಂದಿ ಪ್ರಥಮ ಶ್ರೇಣಿಯಲ್ಲಿ, 5 ಮಂದಿ ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಎಸ್.ಪಿ. ತೇಜಸ್ವಿನಿ 600ಕ್ಕೆ 567 ಅಂಕ ಪಡೆದು ಕಾಲೇಜಿಗೆ ಪ್ರಥಮಸ್ಥಾನ ಪಡೆದಿದ್ದಾಳೆ. ಉಳಿದಂತೆ ಸಮೀಕ್ಷಾ 557 ಅಂಕ ಪಡೆದು ದ್ವಿತೀಯ ಸ್ಥಾನ, ಪೂರ್ವಿಕಾ 551 ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಅಂಜುಶ್ರೀ 600 ಕ್ಕೆ 567 ಅಂಕ ಪಡೆದು ಕಾಲೇಜಿಗೆ ಪ್ರಥಮಸ್ಥಾನ ಪಡೆದಿರುತ್ತಾಳೆ. ಶ್ರೇಯಾ 555 ಅಂಕ ಪಡೆದು ದ್ವಿತೀಯ ಸ್ಥಾನ, ಸೋನು ಸ್ತುತಿ 548 ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ.
ಕಾಲೇಜಿಗೆ ಉತ್ತಮ ಫಲಿತಾಂಶ ತಂದುಕೊಟ್ಟ ವಿದ್ಯಾರ್ಥಿಗಳನ್ನು ವಿದ್ಯಾಸಂಸ್ಥೆ ವ್ಯವಸ್ಥಾಪಕಿ ಸಿಸ್ಟರ್ ಆಲ್ಫೋನ್ಸ್, ಪ್ರಾಂಶುಪಾಲೆ ಸಿಸ್ಟರ್ ಆನ್ನೇಟ್, ಉಪ ಪ್ರಾಂಶುಪಾಲ ಎಚ್.ಎಂ. ರಮೇಶ್, ಉಪನ್ಯಾಸಕರು, ಸಿಬ್ಬಂದಿ, ಪೋಷಕರು ಅಭಿನಂದಿಸಿದ್ದಾರೆ.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು