Tel: 7676775624 | Mail: info@yellowandred.in

Language: EN KAN

    Follow us :


ಕಾವೇರಿ ಕಿಚ್ಚು, ರಾಮನಗರ ಜಿಲ್ಲೆ ಬಂದ್, ಶಾಲಾ-ಕಾಲೇಜಿಗೆ ರಜೆ, ಸರ್ಕಾರಿ ಕಛೇರಿ ರಜೆಗಾಗಿ ಕಾಯುತ್ತಿರುವ ನೌಕರರು

Posted date: 29 Sep, 2023

Powered by:     Yellow and Red

ಕಾವೇರಿ ಕಿಚ್ಚು, ರಾಮನಗರ ಜಿಲ್ಲೆ ಬಂದ್, ಶಾಲಾ-ಕಾಲೇಜಿಗೆ ರಜೆ, ಸರ್ಕಾರಿ ಕಛೇರಿ ರಜೆಗಾಗಿ ಕಾಯುತ್ತಿರುವ ನೌಕರರು

ರಾಮನಗರ: ನಮ್ಮ ರಾಜ್ಯದ ಕೆಲ ಭಾಗಗಳಿಗೆ ಕುಡಿಯುವ ನೀರಿಗೆ ತತ್ವಾರವಾಗಿದೆ, ಮಂಡ್ಯ, ಮೈಸೂರು ಭಾಗದ ರೈತರಿಗೆ ಬೆಳೆ ಬೆಳೆಯಲು ನೀರಿಲ್ಲಾ, ಇಂತಹ ಸಂಕಷ್ಟದ ಸಮಯದಲ್ಲೂ ಕರ್ನಾಟಕ ಸರ್ಕಾರ ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುತ್ತಿದ್ದು, ನ್ಯಾಯವು ಸಹ ನಮ್ಮ ಪರವಾಗಿಲ್ಲಾ ಎಂದು ರಾಜ್ಯಾದ್ಯಂತ ಇರುವ ೧,೯೦೦ಕ್ಕೂ ಹೆಚ್ಚಿನ ವಿವಿಧ ರೀತಿಯ ಸಂಘಟನೆಗಳು ಒಗ್ಗೂಡಿ ೨೯ ನೇ ಶುಕ್ರವಾರ ಮುಂಜಾನೆಯಿಂದ ಮುಸ್ಸಂಜೆವರೆಗೂ ಸ್ವಯಂ ಪ್ರೇರಿತ ಕರ್ನಾಟಕ ಬಂದ್ ಗೆ ಕರೆ ನೀಡಿವೆ.


ಶಾಲಾ-ಕಾಲೇಜುಗಳಿಗೆ ಹಾಗೂ ಸರ್ಕಾರಿ ಕಛೇರಿಗಳಿಗೆ ಬೆಂಗಳೂರು ಸೇರಿದಂತೆ ಆಯ್ದ ಕೆಲ ಜಿಲ್ಲೆಗಳಿಗೆ ಮಾತ್ರ ರಜೆ ಘೋಷಣೆ ಮಾಡಿದ್ದು. ಪ್ರತಿ ಜಿಲ್ಲೆಗಳಲ್ಲೂ ರಜೆ ಘೋಷಣೆಗೆ ಸಂಬಂಧಿಸಿದಂತೆ ಆಯಾಯ ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ. ಅದೇ ರೀತಿ ರಾಮನಗರ ಸೇರಿದಂತೆ ಹಲವಾರು ಜಿಲ್ಲೆಗಳಲ್ಲಿ ಯಾವುದೇ ರಜೆ ಘೋಷಣೆ ರಾತ್ರಿ ೦೯:೩೦ ರವರೆಗೂ ಆಗಿರಲಿಲ್ಲಾ. ಯಾವುದೇ ಹಿಂಸೆಗೆ ಪ್ರಚೋದನೆ ನೀಡುವುದಿಲ್ಲಾ, ಸಾರ್ವಜನಿಕ ಆಸ್ತಿಪಾಸ್ತಿ ನಸ್ಟ ಉಂಟು ಮಾಡುವುದಿಲ್ಲಾ, ಹಾಗಾಗಿ ಸ್ವಯಂ ಪ್ರೇರಿತವಾಗಿ ಬಂದ್ ಗೆ ಬೆಂಬಲ ನೀಡಲು ಸಾರ್ವಜನಿಕರಿಗೆ ಸಂಘಟನೆಗಳು ಕರೆ ನೀಡಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಸಹ ಕಾದು ನೋಡುವ ತಂತ್ರ ಅನುಸರಿಸುತ್ತಿದ್ದಾರೆ.


ರಾಮನಗರ ಜಿಲ್ಲೆಯ ಅನುದಾನ ರಹಿತ ಶಾಲಾ ಶಿಕ್ಷಣ ಸಂಸ್ಥೆಗಳು ಮೊದಲಿಗೆ ರಜೆ ಘೋಷಣೆ ಮಾಡಿದ ನಂತರ ರಾಮನಗರ ಜಿಲ್ಲಾಧಿಕಾರಿಗಳಾದ ಡಾ ಅವಿನಾಶ್ ಮೆನನ್ ರಾಜೇಂದ್ರನ್ ರವರು ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿ ಆದೇಶ ಹೊರಡಿಸಿದ್ದಾರೆ. ಆದರೆ ಸರ್ಕಾರಿ ಕಛೇರಿಗಳಿಗೆ ಹಾಗೂ ಸಾರಿಗೆ ಸಂಸ್ಥೆಗೆ ರಜೆ ಇನ್ನೂ ಘೋಷಣೆ ಆಗಿಲ್ಲದಿರುವುದರಿಂದ ಸರ್ಕಾರಿ ನೌಕರರು ಮತ್ತು ಸಾರಿಗೆ ಸಂಸ್ಥೆಯ ಸಿಬ್ಬಂದಿಗಳು ಕಾಯುತ್ತಿದ್ದಾರೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑