Tel: 7676775624 | Mail: info@yellowandred.in

Language: EN KAN

    Follow us :


ಸಾವು ಬದುಕಿನ ಹೋರಾಟದಲ್ಲಿರುವ ರೋಗಿಗಳಿಗೆ ರಕ್ತ ಸಂಜೀವಿನಿ‌ ಇದ್ದಂತೆ ಸಿ ಪುಟ್ಟಸ್ವಾಮಿ

Posted date: 24 Jun, 2019

Powered by:     Yellow and Red

ಸಾವು ಬದುಕಿನ ಹೋರಾಟದಲ್ಲಿರುವ ರೋಗಿಗಳಿಗೆ ರಕ್ತ ಸಂಜೀವಿನಿ‌ ಇದ್ದಂತೆ ಸಿ ಪುಟ್ಟಸ್ವಾಮಿ

ಚನ್ನಪಟ್ಟಣ: ದಾನ ದಾನಗಳಲ್ಲಿ ರಕ್ತದಾನ ಅತಿ ಶ್ರೇಷ್ಠ ದಾನವಾಗಿದೆ, ಬೇರೆ ರೀತಿಯ ಹಲವಾರು ದಾನಗಳು ತೋರ್ಪಡಿಕೆಗೆ ಅಥವಾ ಅಡಂಬರಕ್ಕೆ ಸೀಮೀತವಾದರೆ, ರಕ್ತದಾನ ಸಾವು ಬದುಕಿನ ಹೋರಾಟದಲ್ಲಿ ತೊಯ್ದಾಡುತ್ತಿರುವ ರೋಗಿಗೆ ಜೀವ ಉಳಿಸಲು ನೆರವಾಗುತ್ತದೆ, ಆ ರಕ್ತ ಪಡೆದ ರೋಗಿಯ ಜೀವದ ಜೊತೆಗೆ ಆತನ ಕುಟುಂಬವೂ ಸಹ ತಮ್ಮ ಕುಡಿಯನ್ನು ಉಳಿಸಿಕೊಂಡಂತಾಗುತ್ತದೆ ಎಂದು ಹಿರಿಯ ರೈತ ಮುಖಂಡ ಸಿ ಪುಟ್ಟಸ್ವಾಮಿ ಹೇಳಿದರು.

ಅವರು ನಗರದ *ಮಾತೃಶ್ರೀ ಆರ್ಥೋಪೆಡಿಕ್ ಮತ್ತು ಟ್ರಾಮಾ ಸೆಂಟರ್* ನಲ್ಲಿ ಏಳನೇ ವರ್ಷದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.


ನಮ್ಮ ತಾಲ್ಲೂಕಿನಲ್ಲಿ ತಮ್ಮ ಸಮಯ ಮತ್ತು ಗಳಿಕೆಯನ್ನು ತಾವೇ ಉಪಯೋಗಿಸಿಕೊಳ್ಳದೇ ಸಮಾಜಕ್ಕೆ ಅರ್ಪಿಸುವ ಮನೋಭಾವ ಇರುವ ವ್ಯಕ್ತಿಗಳಲ್ಲಿ ಡಾ ಮಲವೇಗೌಡ ರ ಹೆಸರು ಮುಂಚೂಣಿಯಲ್ಲಿದೆ, ಕೇವಲ ರಕ್ತದಾನ ಶಿಬಿರವಲ್ಲದೆ, ಗಿಡಗಳನ್ನು ನೆಟ್ಟು ಪೋಷಿಸುವುದು, ಪರಿಸರ ಮಾಲಿನ್ಯದ ಬಗ್ಗೆ ಕಾಳಜಿ ವಹಿಸಿವುದು, ಆರ್ಥಿಕವಾಗಿ ಹಿಂದುಳಿದ ಬಡ ರೋಗಿಗಳಿಗೆ ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡುವುದು, ಮತ್ತು ಸೈಕಲ್ ಜಾಥಾ ಹಮ್ಮಿಕೊಳ್ಳುವುದರ ಜೊತೆಗೆ ಸಂಪೂರ್ಣವಾಗಿ ಕನ್ನಡದಲ್ಲಿ ವ್ಯವಹರಿಸುವುದು ಇವರ ಉತ್ತಮ ವ್ಯಕ್ತಿತ್ವವನ್ನು ತೋರಿಸುತ್ತದೆ ಎಂದು ಶ್ಲಾಘಿಸಿದರು.


ಮಾತೃಶ್ರೀ ಆಸ್ಪತ್ರೆಯ ಮುಖ್ಯಸ್ಥ ಹಾಗೂ ರಕ್ತದಾನ ಶಿಬಿರದ ರೂವಾರಿ ಡಾ ಮಲವೇಗೌಡ ಮಾತನಾಡಿ

ವಿಶ್ವದಾದ್ಯಂತ ವಿಜ್ಞಾನ ಎಷ್ಟೇ ಬೆಳೆದು ನಿಂತರೂ ಪ್ರಕೃತಿಯ ಮುಂದೆ ಮನುಜರು ನಗಣ್ಯ.


ಮಾನವನ ದೇಹದ ಬಹುತೇಕ ಎಲ್ಲಾ ಅಂಗಗಳನ್ನು ಕೃತಕವಾಗಿ ಜೋಡಿಸಬಹುದಾದರು ದೇಹಕ್ಕೆ ಬೇಕಾದ ರಕ್ತವನ್ನು ಮಾತ್ರ ಕೃತಕವಾಗಿ ಉತ್ಪಾದಿಸಲು ಆಗುವುದಿಲ್ಲ, ಅದೆಷ್ಟೋ ವಿಜ್ಞಾನಿಗಳು ಕೃತಕ ರಕ್ತ ಸೃಷ್ಟಿಸುವಲ್ಲಿ ಅನುತ್ತೀರ್ಣರಾಗಿದ್ದರೂ ಸಹ ತಮ್ಮ ಪ್ರಯತ್ನವನ್ನು ಬಿಡದೆ ಛಲದಂಕ ಮಲ್ಲರಂತೆ ಪ್ರಯತ್ನ ಮುಂದುವರಿಸಿದ್ದಾರೆ.


ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಸಾಧ್ಯವಾದರೆ ಅಪಘಾತ ಮತ್ತು ಗರ್ಭಿಣಿ ಸ್ತ್ರೀಯರ ಸಾವಿನ ಸಂಖ್ಯೆ ಇಳಿಮುಖವಾಗುತ್ತದೆ, ಆದರೆ ಅದು ಅಸಾಧ್ಯ, ಹಾಗಾಗಿ ಆರೋಗ್ಯವಂತ ಯುವಕರು ರಕ್ತದಾನ ಮಾಡುವುದರ ಮೂಲಕ ರಕ್ತದ ಕೊರತೆಯಿಂದ ಬಳಲುತ್ತಿರುವ ರೋಗಿಗೆ ನೆರವಾಗಬೇಕು ಎಂದರು.

ರಕ್ತದಾನ ಮಾಡಿದ ವ್ಯಕ್ತಿ ಮತ್ತಷ್ಟು ಬಲಿಷ್ಠನಾಗುತ್ತಾನೆ, ರಕ್ತದಾನ ಮಾಡಿದ ಸಂದರ್ಭದಲ್ಲಿ ಯಾವುದೇ ರೀತಿಯ ಸಮಸ್ಯೆ ಬರುವುದಿಲ್ಲ ಎಂದು ಅವರು ತಿಳಿಸಿದರು.


ಶಿಬಿರದಲ್ಲಿ ರೆಡ್ ಕ್ರಾಸ್ ನ ವೈದ್ಯೆ ಡಾ ವರ್ಷಾ ಮತ್ತು ಸಿಬ್ಬಂದಿ, ಮಾತೃಶ್ರೀ ಆಸ್ಪತ್ರೆಯ ಸಿಬ್ಬಂದಿ ವರ್ಗ, ಕರ್ನಾಟಕ ಜಾನಪದ ಪರಿಷತ್ತು ತಾಲ್ಲೂಕು ಅಧ್ಯಕ್ಷ ಗೋ ರಾ ಶ್ರೀನಿವಾಸ, ಸಾಹಿತಿ ವಿಜಯ್ ರಾಂಪುರ ಮತ್ತು ಎಂ ಕುಮಾರ್ ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑