Tel: 7676775624 | Mail: info@yellowandred.in

Language: EN KAN

    Follow us :


ರೈತ ಯುವಕರಿಗೆ ಮಾದರಿಯಾದ ಮಾಗಡಿಯ ಜೈನ ಸಮುದಾಯದ ಯುವಕ ಭರತ್ ಜೈನ್

Posted date: 06 Oct, 2020

Powered by:     Yellow and Red

ರೈತ ಯುವಕರಿಗೆ ಮಾದರಿಯಾದ ಮಾಗಡಿಯ ಜೈನ ಸಮುದಾಯದ ಯುವಕ ಭರತ್ ಜೈನ್

ಮಾಗಡಿ:ಅ/05/20/ಸೋಮವಾರ. ಶೇಟು ಅಥವಾ ಮಾರ್ವಾಡಿ ಅಂದ್ರೆ ಅವರೊಬ್ಬ ಲಾಭ ಮಾಡುವ ವ್ಯಾಪಾರಸ್ಥ ಎಂದೇ ಎಲ್ಲರೂ ಬಣ್ಣಿಸುತ್ತಾರೆ. ಇದನ್ನೂ ಅಲ್ಲಗಳೆಯಲೂ ಆಗುವುದಿಲ್ಲ. ಆದರೆ ಅದೇ ವ್ಯವಹಾರ ಮತ್ತು ವ್ಯಾಪಾರ ದೃಷ್ಟಿಯಿಂದಲೇ ಹಣ ಬರುವ ಗಿಡಗಳನ್ನು (ಕಮರ್ಷಿಯಲ್ ಕಾರ್ಪ್) ಬೆಳೆಸುವ ಜೊತೆಗೆ ಸಾವಯವ ಕೃಷಿ ಮಾಡುವ ಮೂಲಕ ವಾತಾವರಣದ ಸಮತೋಲನವನ್ನು ದೃಷ್ಟಿಯಲ್ಲಿಟ್ಟುಕೊಂಡು ವ್ಯವಸಾಯ ಮಾಡುವ ಮೂಲಕ ಜಮೀನು ಹೊಂದಿದ್ದು ಪಾಳು ಬಿಟ್ಟಿರುವ ಇಂದಿನ ಕೆಲ ರೈತರಿಗೆ ಮಾದರಿ ವ್ಯವ(ಹಾರ)ಸಾಯಗಾರನಾಗಿ ಮಾದರಿಯಾಗಿದ್ದಾರೆ ಮಾಗಡಿ ನಗರದ ಭರತ್ ಜೈನ್.


ಕಳೆದ ಐವತ್ತು ವರ್ಷಗಳಿಂದ ಮಾಗಡಿಯಲ್ಲಿ ನೆಲೆಯೂರಿದ್ದು, ರಾಜಶ್ರೀ ಜ್ಯುವೆಲ್ಲರಿ ಅಂಗಡಿ ಹೊಂದಿರುವ ಇವರು ನಗರವಲ್ಲದೆ ತಾಲ್ಲೂಕು ಮತ್ತು ಜಿಲ್ಲಾದ್ಯಂತ ಚಿರಪರಿಚಿತರು. ಸ್ವವ್ಯವಹಾರಕ್ಕಷ್ಟೇ ಸೀಮಿತವಾಗದೆ ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡ ಭರತ್ ಗೆ ವ್ಯವಸಾಯ ಮಾಡಬೇಕೆಂಬ ಹಂಬಲ ಚಿಗುರೊಡೆದ ತಕ್ಷಣವೇ ಭೂಮಿಯನ್ನು ಕೊಂಡು ವ್ಯವಸಾಯವನ್ನು ಆರಂಭಿಸಿಯೇ ಬಿಟ್ಟರು.


ಹನ್ನೊಂದು ಎಕರೆ ಭೂಮಿಯನ್ನು ಹಂತಹಂತವಾಗಿ ಒಂದೇ ಕಡೆ ಖರೀದಿಸಿದ ಇವರು ಬೋರ್ ವೆಲ್ ಕೊರೆಸಿ, ತೊಟ್ಟಿ ನಿರ್ಮಿಸಿಕೊಂಡು ಮೊಲಿಗೆ 500 ಹೆಬ್ಬೇವು (ತುರುಕು ಬೇವು) ಗಿಡಗಳನ್ನು ನೆಟ್ಟು ಪೋಷಿಸಿದರು. ಕೇವಲ ಆರು ವರ್ಷಗಳ ಈ ಮರಗಳು ಹತ್ತು ವರ್ಷಗಳ ಕಾಲ‌ ಬೆಳೆದಿರುವ ಮರಗಳಂತೆ ಬೃಹದಾಕಾರವಾಗಿ ಬೆಳೆದು‌ ನಿಂತಿವೆ.

ಇನ್ನು ಐದರಿಂದ ಆರು ವರ್ಷಗಳೊಳಗೆ ಕಟಾವು ಮಾಡುವ ಮುನ್ನಾ ಎದೆ ಮಟ್ಟಕ್ಕೆ ಮತ್ತಷ್ಟು ಗಿಡಗಳು ಬೆಳೆಯಬೇಕೆಂಬ ವ್ಯವಹಾರದ ಬುದ್ದಿಯನ್ನು ಉಪಯೋಗಿಸಿದ ಭರತ್ ಹೆಬ್ಬೇವು ಮರದ ನಡುವೆ ಶ್ರೀಗಂಧ ಸೇರಿದಂತೆ ಅನೇಕ ಕಮರ್ಷಿಯಲ್ ಗಿಡಗಳನ್ನು ನೆಟ್ಟಿದ್ದಾರೆ.


*ಒಂದು ಎಕರೆ ಭೂಮಿಯಲ್ಲಿ 600 ಮಾವಿನ ಸಸಿ*

ಮೊದಲು ಒಂದು ಎಕರೆ ಭೂಮಿಗೆ 40 ರಿಂದ 50 ಮಾವಿನ ಸಸಿಗಳನ್ನು ಮಾತ್ರ ನೆಡುತ್ತಿದ್ದರು. ಅವು ದೊಡ್ಡ ಮರಗಳಾಗಿ ಬೆಳೆಯುವುದಲ್ಲದೆ ಔಷಧ ಸಿಂಪಡಣೆ ಮತ್ತು ಹಣ್ಣು ಕೊಯ್ಲಿನ ಸಮಯದಲ್ಲಿ ಮಾನವ ಶ್ರಮವನ್ನು ಹೆಚ್ಚು ಬೇಡುತ್ತವೆ. ಹಾಗಾಗಿ ಇಸ್ರೇಲ್ ದೇಶದ ಕ್ರಮದಲ್ಲಿ ಒತ್ತು ಸಸಿ ನೆಟ್ಟು ಪೋಷಿಸಿ ಈಗಾಗಲೇ ಒಂದು ಬೆಳೆಯನ್ನು ತೆಗೆದಿದ್ದಾರೆ. ಪ್ರತಿ ಕೊಯ್ಲಿನ ನಂತರ ತಲಾ ಮೂರರಂತೆ ಕಡ್ಡಿಗಳನ್ನು ಬಿಟ್ಟು ರೆಂಬೆಗಳನ್ನು (ಟ್ರಿಮ್) ಕತ್ತರಿಸುತ್ತಾರೆ. ಬಹುತೇಕ ಔಷಧ ಸಿಂಪಡಣೆ ಮಾಡಲೇ ಬಾರದು ಎಂಬ ದೃಷ್ಟಿಯಿಂದ ಹುಳುಗಳು ಮುತ್ತಿಕ್ಕದಂತೆ ಅನೇಕ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ. ಮಾವಿನ ಸಸಿಗಳ ನಡುವೆ ತರಕಾರಿ ಬೆಳೆಯುವ ಮೂಲಕ ದ್ವಿಬೆಳೆ ಪದ್ದತಿಯನ್ನು ಅನುಸರಿಸುತ್ತಿದ್ದಾರೆ.


*ದಾಳಿಂಬೆ, ನಾಟಿ ಶುಂಠಿ ಸಾಸಿವೆ ಮತ್ತು ವಿವಿಧ ಮಾವು*

ಒಂದು ಎಕರೆಯಲ್ಲಿ ದಾಳಿಂಬೆ ಬೆಳೆದಿದ್ದಾರೆ. ಈ ದಾಳಿಂಬೆಯ ನಡುವೆ ಸಾಸಿವೆ ಸೇರಿದಂತೆ ಅನೇಕ ರೀತಿಯ ಕಾಳಿನ ಗಿಡಗಳನ್ನು ನೆಟ್ಟು ತಮ್ಮ ಮನೆ ಬಳಕೆಗೆ ಬೇಕಾದ ತರಕಾರಿ ಮತ್ತು ಕಾಳುಗಳನ್ನು ಬೆಳೆದುಕೊಳ್ಳುತ್ತಿದ್ದಾರೆ. ರಾಮಫಲ, ಸೀತಾಫಲ, ಲಕ್ಷ್ಮಣಫಲ ಮತ್ತು ಹನುಮನಫಲ ದ ಗಿಡಗಳು, ಕೆಂಪುಮಾವು, ಕಪ್ಪು ಮಾವು ಸೇರಿದಂತೆ 30 ಕ್ಕೂ ಹೆಚ್ಚು ವಿವಿಧ ತಳಿಯ ಮಾವಿನ ಗಿಡಗಳು, ವಿದೇಶಿ ತಳಿಗಳ ಅನೇಕ ಹಣ್ಣಿನ ಗಿಡಗಳು. ಬಿಳಿ ನೇರಳೆ, ದಪ್ಪ ಶುಂಠಿ, ವಿವಿಧ ರೀತಿಯ ಹಲಸು ಸೇರಿದಂತೆ 100 ಕ್ಕೂ ಹೆಚ್ಚು ರೀತಿಯ ಗಿಡಗಳನ್ನು ನೆಟ್ಟು ಪೋಷಿಸುತ್ತಿದ್ದಾರೆ. ಅಲ್ಲದೆ ಅನೇಕ ಔಷಧೀಯ ಗುಣಗಳುಳ್ಳ ಗಿಡಮೂಲಿಕೆಯನ್ನು ಬೆಳೆಸಿದ್ದಾರೆ. ಸ್ವತಃ ಅನೇಕ ಕಾಯಿಲೆಗಳಿಗೆ ಆಯುರ್ವೇದ ಔಷಧಿಯನ್ನು ನೀಡಿ ಗುಣಪಡಿಸುತ್ತಾರೆ.


*ನೋವು ತಂದ ಬೆಂಕಿ*

ಹನ್ನೊಂದು ಎಕರೆ ಭೂಮಿಯಲ್ಲದೆ ಮೂರು ಎಕರೆ ಭೂಮಿಯಲ್ಲಿ ತೇಗ (ಟೀಕ್) ದ ಗಿಡಗಳನ್ನು ಬೆಳೆಸಿ, ಉದ್ಯಾನ ನಿರ್ಮಿಸಿ, ಆಟವಾಡಲು ಅನೇಕ ಮಾದರಿಯ ಸಾಮಾಗ್ರಿಗಳನ್ನು ಅಳವಡಿಸಿ ಪ್ರವಾಸಿ ತಾಣದಂತೆ ನಿರ್ಮಿಸಿದ್ದರು. ಆದರೆ ಯಾರೋ ‌ಕಿಡಿಗೇಡಿಗಳು ಇಡೀ ಪ್ಲಾಂಟ್ ಗೆ ಬೆಂಕಿ‌ ಹಚ್ಚಿಬಿಟ್ಟರು. ಇದರಿಂದ ಮನನೊಂದರೂ ಸಹ ಕುಗ್ಗದ ಛಲಬಿಡದ ಭರತ್ ಕೃಷಿಯನ್ನು ಮುಂದುವರೆಸಿರುವುದು ವ್ಯವಸಾಯದ ಮೇಲಿರುವ ಅವರ ಅಭಿಮಾನ ಮತ್ತು ಇಚ್ಛಾಶಕ್ತಿಯನ್ನು ತೋರಿಸುತ್ತದೆ.


ಇಂದಿಗೂ ಸಹ ಬೆಂಗಳೂರು ಸೇರಿದಂತೆ ಅವರ ಎಲ್ಲಾ ಬಂಧು ಬಳಗಗಳು ತೋಟವನ್ನು ಕಣ್ತುಂಬಿಕೊಳ್ಳಲೇ ಬಂದು ಹೋಗುತ್ತಿದ್ದಾರೆ. ಸದ್ಯ ಭರತ್ ಜೈನ್ ರವರು ತಮ್ಮ ಒಡವೆ ಅಂಗಡಿಯ ವ್ಯವಹಾರದ ಜೊತೆಗೆ ವ್ಯವಸಾಯ ಮಾಡುತ್ತಿದ್ದು ಜಮೀನು ಇದ್ದು ವ್ಯವಸಾಯ ಮಾಡದೆ ಪಾಳು ಬಿಟ್ಟಿರುವ ರೈತರಿಗೆ ಮಾದರಿಯಾಗಿದ್ದಾರೆ. ಅನೇಕ ಮಿತ್ರರು ಸಹ ಅವರನ್ನು ಅಭಿನಂದಿಸಿ ಹವ್ಯಾಸಿ ಮಾದರಿ ಯುವ ರೈತ ಎಂಬ ಬಿರುದನ್ನು ನೀಡಿ ಗೌರವಿಸಿದ್ದಾರೆ. ಇಂತಹ ಯುವ ಮಾದರಿ ರೈತರನ್ನು ಸ್ಥಳೀಯ ಆಡಳಿತ, ಸಂಘಸಂಸ್ಥೆಗಳು ಮತ್ತು ಸರ್ಕಾರ ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಮಾಡಬೇಕಾಗಿದೆ.


ಭರತ್ ಜೈನ್ ರವರ ಸಂಪರ್ಕಕ್ಕಾಗಿ ಅವರ ಮೊ:9880856664.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in agriculture »

ಮಹಾ ಮಳೆಗೆ ಮಕಾಡೆ ಮಲಗಿದ ರಾಗಿ ಬೆಳೆ
ಮಹಾ ಮಳೆಗೆ ಮಕಾಡೆ ಮಲಗಿದ ರಾಗಿ ಬೆಳೆ

ಚನ್ನಪಟ್ಟಣ:ಅ/23/20/ಶುಕ್ರವಾರ. ಕಳೆದ ಮೂರು ತಿಂಗಳಿನಿಂದ ಕಷ್ಟಪಟ್ಟು ಬೆಳೆದ ರಾಗಿ ಬೆಳೆಯು ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯ ರಭ

ಚನ್ನಪಟ್ಟಣ ತಾಲ್ಲೂಕಿನಲ್ಲಿ ಒಂಭತ್ತಕ್ಕೂ ಹೆಚ್ಚು ಕಾಡಾನೆಗಳಿಂದ ದಾಳಿ: ಬೆಳೆ ನಾಶ
ಚನ್ನಪಟ್ಟಣ ತಾಲ್ಲೂಕಿನಲ್ಲಿ ಒಂಭತ್ತಕ್ಕೂ ಹೆಚ್ಚು ಕಾಡಾನೆಗಳಿಂದ ದಾಳಿ: ಬೆಳೆ ನಾಶ

ಚನ್ನಪಟ್ಟಣ:ಅ/10/20/ಶನಿವಾರ. ತಾಲ್ಲೂಕಿನ ಬಿವಿ ಹಳ್ಳಿ, ಅರಳಾಳುಸಂದ್ರ, ವಿಠಲೇನಹಳ್ಳಿ ಮೆಣಸಿಗನಹಳ್ಳಿ, ಭೂಹಳ್ಳಿ ಮತ್ತು ಸಿಂಗರಾಜಪುರ ಸೇರಿದಂತ

ರೈತ ಯುವಕರಿಗೆ ಮಾದರಿಯಾದ ಮಾಗಡಿಯ ಜೈನ ಸಮುದಾಯದ ಯುವಕ ಭರತ್ ಜೈನ್
ರೈತ ಯುವಕರಿಗೆ ಮಾದರಿಯಾದ ಮಾಗಡಿಯ ಜೈನ ಸಮುದಾಯದ ಯುವಕ ಭರತ್ ಜೈನ್

ಮಾಗಡಿ:ಅ/05/20/ಸೋಮವಾರ. ಶೇಟು ಅಥವಾ ಮಾರ್ವಾಡಿ ಅಂದ್ರೆ ಅವರೊಬ್ಬ ಲಾಭ ಮಾಡುವ ವ್ಯಾಪಾರಸ್ಥ ಎಂದೇ ಎಲ್ಲರೂ ಬಣ್ಣಿಸುತ್ತಾರೆ. ಇದನ್ನೂ ಅಲ್ಲಗಳೆಯ

ಎಪಿಎಂಸಿ ಮತ್ತು ಭೂಸುಧಾರಣಾ ಕಾಯ್ದೆ ವಿರೋಧಿಸಿ ಪ್ರತಿಭಟನೆ. ರಾಮನಗರದಲ್ಲಿ ಬಂದ್ ಗೆ ಮಿಶ್ರ ಪ್ರತಿಕ್ರಿಯೆ
ಎಪಿಎಂಸಿ ಮತ್ತು ಭೂಸುಧಾರಣಾ ಕಾಯ್ದೆ ವಿರೋಧಿಸಿ ಪ್ರತಿಭಟನೆ. ರಾಮನಗರದಲ್ಲಿ ಬಂದ್ ಗೆ ಮಿಶ್ರ ಪ್ರತಿಕ್ರಿಯೆ

ರಾಮನಗರ:ಸೆ/28/20/ಸೋಮವಾರ. ಎಪಿಎಂಸಿ ಕಾಯ್ದೆ, ಭೂ ಸುಧಾರಣಾ ಕಾಯ್ದೆ ಮತ್ತು ಕಾರ್ಮಿಕ ಕಾಯ್ದೆಗಳಿಗೆ ಸರ್ಕಾರ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ

ಯಶಸ್ವಿಯಾದ ಬಂದ್: ಸಂಪೂರ್ಣ ಸ್ತಬ್ದವಾದ ನಗರ
ಯಶಸ್ವಿಯಾದ ಬಂದ್: ಸಂಪೂರ್ಣ ಸ್ತಬ್ದವಾದ ನಗರ

ಚನ್ನಪಟ್ಟಣ:ಸೆ/28/20/ಸೋಮವಾರ. ರೈತಸಂಘ ಸೇರಿದಂತೆ ಅನೇಕ ಸಂಘಟನೆಗಳು ಇಂದು ಬಂದ್ ಗೆ ಕರೆನೀಡಿದ್ದು ನಗರದಲ್ಲಿ ಯಶಸ್ವಿಗೊಂಡಿತು.

ಯೂರಿಯಾ, ಅಗತ್ಯಕ್ಕಿಂತಲೂ ಹೆಚ್ಚಿನ ಪೂರೈಕೆಯಾಗಿದ್ದರೂ ಸರತಿ ಸಾಲಿನಲ್ಲಿ ನಿಲ್ಲುತ್ತಿರುವ ರೈತ. ಕಾರಣವೇನು ?
ಯೂರಿಯಾ, ಅಗತ್ಯಕ್ಕಿಂತಲೂ ಹೆಚ್ಚಿನ ಪೂರೈಕೆಯಾಗಿದ್ದರೂ ಸರತಿ ಸಾಲಿನಲ್ಲಿ ನಿಲ್ಲುತ್ತಿರುವ ರೈತ. ಕಾರಣವೇನು ?

ಚನ್ನಪಟ್ಟಣ: ಸೆ/26/20/ಶನಿವಾರ. ತಾಲ್ಲೂಕಿನಲ್ಲಿ ಮಳೆಗಾಲದ ತಿಂಗಳು ಅಂದರೆ ಸೆಪ್ಟೆಂಬರ್ ತಿಂಗಳಿಗೆ, ಈಗಾಗಲೇ ಬಿತ್ತನೆ ಮಾಡಿರುವ ತೋಟಗಾರಿಕೆ ಮತ

ರೈತರ ಕೂಗಿಗೆ ಸರ್ಕಾರ ಸ್ಪಂದಿಸದಿದ್ದರೆ, ಪರ್ಯಾಯ ಅಧಿವೇಶನ ಮಾಡಿ. ವಿಧಾನಸೌಧ ಮುಚ್ಚುತ್ತೇವೆ. ಬಡಗಲಪುರ ನಾಗೇಂದ್ರ
ರೈತರ ಕೂಗಿಗೆ ಸರ್ಕಾರ ಸ್ಪಂದಿಸದಿದ್ದರೆ, ಪರ್ಯಾಯ ಅಧಿವೇಶನ ಮಾಡಿ. ವಿಧಾನಸೌಧ ಮುಚ್ಚುತ್ತೇವೆ. ಬಡಗಲಪುರ ನಾಗೇಂದ್ರ

ಚನ್ನಪಟ್ಟಣ:ಸೆ/15/20/ಮಂಗಳವಾರ. ರಾಜ್ಯ ಸರ್ಕಾರವು ರೈತ ವಿರೋಧಿ ಕಾನೂನುಗಳನ್ನು ಹಿಂದಕ್ಕೆ ಪಡೆಯದೇ ಹೋದರೆ, ರಾಜ್ಯ ರೈತ ಸಂಘಟನೆಗಳು ಸೇರಿದಂತ

ರಸಗೊಬ್ಬರಕ್ಕೆ ಹಾತೊರೆಯುತ್ತಿರುವ ರೈತರು. ಸಕಾಲದಲ್ಲಿ ಸ್ಪಂದಿಸದ‌ ಇಲಾಖೆ
ರಸಗೊಬ್ಬರಕ್ಕೆ ಹಾತೊರೆಯುತ್ತಿರುವ ರೈತರು. ಸಕಾಲದಲ್ಲಿ ಸ್ಪಂದಿಸದ‌ ಇಲಾಖೆ

ಚನ್ನಪಟ್ಟಣ:ಸೆ/14/20/ಸೋಮವಾರ. ಇತ್ತೀಚೆಗೆ ಒಳ್ಳೆಯ ಮಳೆಯಾಗುತ್ತಿದ್ದು, ತಾಲೂಕಿನಾದ್ಯಂತ ರಾಗಿ ಸೇರಿದಂತೆ ಇನ್ನಿತರ ಬೆಳೆಗಳನ್ನು ರೈತರು ಬಿತ್ತ

ರಸಗೊಬ್ಬರಕ್ಕೆ ಹಾತೊರೆಯುತ್ತಿರುವ ರೈತರು. ಸಕಾಲದಲ್ಲಿ ಸ್ಪಂದಿಸದ‌ ಇಲಾಖೆ
ರಸಗೊಬ್ಬರಕ್ಕೆ ಹಾತೊರೆಯುತ್ತಿರುವ ರೈತರು. ಸಕಾಲದಲ್ಲಿ ಸ್ಪಂದಿಸದ‌ ಇಲಾಖೆ

ಚನ್ನಪಟ್ಟಣ:ಸೆ/14/20/ಸೋಮವಾರ. ಇತ್ತೀಚೆಗೆ ಒಳ್ಳೆಯ ಮಳೆಯಾಗುತ್ತಿದ್ದು, ತಾಲೂಕಿನಾದ್ಯಂತ ರಾಗಿ ಸೇರಿದಂತೆ ಇನ್ನಿತರ ಬೆಳೆಗಳನ್ನು ರೈತರು ಬಿತ್ತ

ಹಾಲಿನ ಪೂರಕ ಉತ್ಪನ್ನಗಳಿಂದ ರೈತರಿಗೆ ಲಾಭ : ಎಸ್.ಟಿ. ಸೋಮಶೇಖರ್
ಹಾಲಿನ ಪೂರಕ ಉತ್ಪನ್ನಗಳಿಂದ ರೈತರಿಗೆ ಲಾಭ : ಎಸ್.ಟಿ. ಸೋಮಶೇಖರ್

ರಾಮನಗರ:ಸೆ/11/20/ಶುಕ್ರವಾರ. ಹಾಲಿನ ಜೊತೆಗೆ ಹಾಲಿನ ಪೂರಕ ಉತ್ಪನ್ನಗಳನ್ನು ಉತ್ಪಾದಿಸಲು ಹೆಚ್ಚಿನ ಒತ್ತು ನೀಡುವುದರಿಂದ ರೈತರಿಗೆ ಅಧಿಕ ಲಾಭ ದ

Top Stories »  


Top ↑