Tel: 7676775624 | Mail: info@yellowandred.in

Language: EN KAN

    Follow us :


ಲೋಕ ಕಲ್ಯಾಣಾರ್ಥವಾಗಿ ಗೌಡಗೆರೆ ಗ್ರಾಮದಲ್ಲಿ ಏಳು ದಿನಗಳ ಕಾಲ ಯಾಗ, ಮಲ್ಲೇಶ್ ಗುರೂಜಿ

Posted date: 11 Jul, 2023

Powered by:     Yellow and Red

ಲೋಕ ಕಲ್ಯಾಣಾರ್ಥವಾಗಿ ಗೌಡಗೆರೆ ಗ್ರಾಮದಲ್ಲಿ ಏಳು ದಿನಗಳ ಕಾಲ ಯಾಗ, ಮಲ್ಲೇಶ್ ಗುರೂಜಿ

ಚನ್ನಪಟ್ಟಣ :  ಲೋಕ ಕಲ್ಯಾಣಾರ್ಥ ಶ್ರೀ ಕ್ಷೇತ್ರದಲ್ಲಿ ಇಂದಿನಿಂದ ಏಳು ದಿನಗಳ ಕಾಲ ಶತ ಚಂಡಿಕಾ ಯಾಗವನ್ನು ಹಮ್ಮಿಕೊಳ್ಳಲಾಗಿದ್ದು ಭಕ್ತರು ಯಾಗದಲ್ಲಿ ಪಾಲ್ಗೂಂಡು ಇಷ್ಟಾರ್ಥ ಸಿದ್ದಿಗೆ ಪ್ರಾರ್ಥಿಸುವಂತೆ ಧರ್ಮಾಧಿಕಾರಿ ಮಲ್ಲೇಶ್ ಗುರೂಜಿ ತಿಳಿಸಿದರು.

ತಾಲೂಕಿನ ಗೌಡಗೆರೆ ಗ್ರಾಮದ ಚಾಮುಂಡೇಶ್ವರಿ ಬಸಪ್ಪನವರ ಪುಣ್ಯಕ್ಷೇತ್ರದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಅವರು ಜುಲೈ 11 ರಿಂದ 17 ರ ವರೆಗೆ ವಿಶ್ವಶಾಂತಿ ಹಾಗೂ ಭಕ್ತ ಸಂಕುಲದ ಸಂಕಷ್ಟ ನಿವಾರಣೆಗಾಗಿ ಶ್ರೀ ಕ್ಷೇತ್ರ ಗೌಡಗೆರೆಯಲ್ಲಿ ತಂತ್ರಭಾಗ ಶತ ಚಂಡಿಕಾ ಮಹಾಯಾಗವನ್ನು ಆಯೋಜಿಸಲಾಗಿದೆ. ಪುರಾಣ ಕತೆಗಳಲ್ಲೂ ಯಾಗಗಳಿಗೆ ತಪಃಶಕ್ತಿ ಇರುವುದಾಗಿ ಉಲ್ಲೇಖವಿದ್ದು, ಯಾಗದಲ್ಲಿ ಭಾಗಿಯಾದರೆ ನಿಮ್ಮ ಕಷ್ಟಗಳಿಗೆ ಪರಿಹಾರ ಸಿಗುವ ನಂಬಿಕೆ ಇದೆ, ದೇಶ-ವಿದೇಶಗಳಿಂದ ಬರುತ್ತಿರುವ ಭಕ್ತರ ಜೊತೆಗೆ ಜಿಲ್ಲೆಯ ಜನರು ಇದರಲ್ಲಿ ಭಾಗವಹಿಸಿ ಪುಣ್ಯಕಾರ್ಯದಲ್ಲಿ ಪಾಲುದಾರರಾಗುವಂತೆ ಮನವಿ ಮಾಡಿಕೊಂಡರು.


ಮಹಾಯಾಗದಲ್ಲಿ ಲಕ್ಷಾಂತರ ಮಂದಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಬಸ್ ಸಂಚಾರ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಲಾಗಿದ್ದು, ವಾಹನ ದಟ್ಟಣೆ ಹಾಗೂ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಕಲ್ಪಿಸುವಂತೆ ಪೊಲೀಸ್ ಇಲಾಖೆಗೂ ಮನವಿ ಮಾಡಿಕೊಂಡಿದ್ದು, ಇನ್ನೂ ಮಹಾಯಾಗದ ವೇಳೆ ಆರೋಗ್ಯ ಸಮಸ್ಯೆ ಉಂಟಾದರೆ ಅದನ್ನು ನೋಡಿಕೊಳ್ಳಲು ಆರೋಗ್ಯ ಇಲಾಖೆಯಿಂದ ತಾತ್ಕಾಲಿಕ ಆರೋಗ್ಯ ಶಿಬಿರ ಸಹ ತೆರೆಸಲಾಗುತ್ತಿದೆ.


*ಮಹಾಯಾಗದ ಉದ್ದೇಶ :*

ಲೋಕ ಕಲ್ಯಾಣಾರ್ಥ ಮಹಾಯಾಗ ನಡೆಸುತ್ತಿದ್ದು, ದುಷ್ಟರ ಸಂಹಾರ, ರೈತರ ಸಮಸ್ಯೆ ನಿವಾರಣೆ, ದೇಶಕ್ಕೆ ಯಾವುದೇ ಅಪಾಯ ಉಂಟಾಗದಿರಲಿ, ದೇಶದ ಸುಭೀಕ್ಷೆ, ಜನರನ್ನು ರೋಗ ರುಜಿನಗಳು ಭಾದಿಸದಂತೆ ಪ್ರಾರ್ಥಿಸಲು ಶತ ಚಂಡಿಕಾ ಮಹಾಯಾಗ ಆಯೋಜನೆ ಮಾಡಿದ್ದು ಕಡೂರಿನ ವಿನಯ್ ಶಾಸ್ತ್ರಿ ನೇತೃತ್ವದಲ್ಲಿ ಈ ಯಾಗ ನಡೆಯಲಿದೆ. ಪ್ರತಿನಿತ್ಯ ನೂರೆಂಟು ಚಂಡಿ ಹೋಮ, ಒಂದು ಲಕ್ಷ ಪಾರಾಯಣ, ಏಳು ಲಕ್ಷ ಬೀಜಾಕ್ಷರಗಳ ಪಠಣ ಮಹಾಯಾಗದಲ್ಲಿ ನಡೆಯಲಿದೆ.


*ಲಕ್ಷಾಂತರ ಮಂದಿ ನೀರಿಕ್ಷೆ :*

ಶತ ಚಂಡಿಕಾ ಯಾಗಕ್ಕೆ ಜಿಲ್ಲೆಯಿಂದ ಮಾತ್ರವಲ್ಲದೆ ರಾಜ್ಯ, ದೇಶ, ವಿದೇಶಗಳಿಂದಲೂ ಭಕ್ತರು ಆಗಮಿಸುತ್ತಿದ್ದು, ಏಳು ದಿನಗಳ ಕಾಲ ನಡೆಯುವ ಮಹಾಯಾಗದಲ್ಲಿ ಲಕ್ಷಾಂತರ ಮಂದಿ ಪಾಲ್ಗೊಳ್ಳಲಿದ್ದಾರೆ. ಯಾಗಕ್ಕೆ ಬರುವ ಭಕ್ತರಿಗಾಗಿ ಅನ್ನ ದಾಸೋಹ ಹಾಗೂ ವಸತಿ ವ್ಯವಸ್ಥೆ ಕಲ್ಪಿಸಲಾಗಿದ್ದು, ಯಾವುದೇ ರೀತಿಯ ಲೋಪದೋಷಗಳು ಬಾರದಂತೆ ಕ್ರಮ ಕೈಗೊಳ್ಳಲಾಗಿದೆ.


*ಆಗೋರಿಗಳಿಂದ ಪೂರ್ಣಾಹುತಿ :*

ಏಳು ದಿನಗಳ ಕಾಲ ನಡೆಯುವ ಮಹಾಯಾಗ ಭೀಮನ ಅಮವಾಸ್ಯೆ ದಿನ ಕೊನೆಗೊಳ್ಳಲಿದ್ದು, ಬದರೀನಾಥ, ಕೇದಾರನಾಥ ದಿಂದ ನಾಗಾ ಸಾಧುಗಳು, ಅಘೋರಿಗಳು, ಸಂತರು ಆಗಮಿಸಿ ಪೂರ್ಣಾಹುತಿ ನೀಡಲಿದ್ದಾರೆ. ಭೀಮನ ಅಮವಾಸ್ಯೆ ಬಹಳ ಶಕ್ತಿಶಾಲಿ ದಿನವೆಂಬ ನಂಬಿಕೆ ಹಿಂದೂ ಸಂಪ್ರದಾಯದಲ್ಲಿದ್ದು, ಅಂದು ನಡೆಯಲಿರುವ ಮಹಾಯಾಗದಲ್ಲಿ ಭಾಗಿಯಾದರೆ ಸಾಕು ಶುಭವೆಂಬ ಪ್ರತೀತಿ ಇದ್ದು, ಅಘೋರಿಗಳಿಂದಲೇ ಪೂರ್ಣಾಹುತಿ ನೀಡಬೇಕೆಂದು ದೇವಸ್ಥಾನದ ಆಡಳಿತ ಮಂಡಳಿ ನಿರ್ಧರಿಸಿದೆ.


*ಭಾಗವಹಿಸಲಿರುವ ಗಣ್ಯರು :*

ಏಳು ದಿನಗಳ ಕಾಲ ನಡೆಯುತ್ತಿರುವ ಮಹಾಯಾಗದಲ್ಲಿ ಚಲನಚಿತ್ರ ನಟ ನಟಿಯರು, ರಾಜರಾಣಿಗಳು, ಸರಕಾರದ ಉನ್ನತ ಅಧಿಕಾರಿಗಳು, ಚಲನಚಿತ್ರ ನಿರ್ದೇಶಕರುಗಳು ಆಗಮಿಸುತ್ತಿದ್ದು, 14ನೇ ತಾರೀಕು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, 15ನೇ ತಾರೀಕು, ಮಾಜಿ ಸಚಿವರುಗಳಾದ ಆಶ್ವಥ್ ನಾರಾಯಣ್ ಹಾಗೂ ಸಿ.ಪಿ.ಯೋಗೇಶ್ವರ್, 17ನೇ ತಾರೀಕು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿ ಸಾಕಷ್ಟು ಗಣ್ಯರ ದಂಡೆ ಆಗಮಿಸಲಿದೆ.


ರಾಷ್ಟಮಟ್ಟದಲ್ಲಿ ಮಾತ್ರವಲ್ಲದೆ ಅಂತರಾಷ್ಟ್ರೀಯ ಮಟ್ಟದಲ್ಲೂ ನಮ್ಮ ಗೌಡಗೆರೆ ಗ್ರಾಮ ಇಂದು ಪ್ರಸಿದ್ದಿ ಪಡೆದಿದ್ದು, ಇದಕ್ಕೆ ತಾಯಿ ಚಾಮುಂಡಿ ದೇವಿಯ ಅನುಗ್ರಹವೆ ಕಾರಣವಾಗಿದ್ದು, ಲೋಕ ಕಲ್ಯಾಣಾರ್ಥ ಗುರುಗಳಾದ ಮಲ್ಲೇಶ್ ಗುರೂಜಿ ತಮ್ಮ ಶಕ್ತಿ ಮೀರಿ ಕ್ಷೇತ್ರದಲ್ಲಿ ಶತ ಚಂಡಿಕಾಯಾಗವನ್ನು ನಡೆಸುತ್ತಿದ್ದಾರೆ. ಮನೆಗಳಲ್ಲಿ ಒಂದು ಸಣ್ಣ ಕಾರ್ಯಕ್ರಮ ಮಾಡಲು ಹಿಂದುಮುಂದು ಯೋಚಿಸುವ ಜನರ ನಡುವೆ ಶತ ಚಂಡಿಕಾ ಯಾಗದ ಜೊತೆಗೆ ಲಕ್ಷಾಂತರ ಮಂದಿಗೆ ಅನ್ನ ದಾಸೋಹ ಕೈಗೊಂಡಿರುವ ಗುರೂಜಿ ಕೆಲಸವನ್ನು ಎಷ್ಟು ಹೊಗಳಿದರೂ ಸಾಲದು ತಾಯಿ ಚಾಮುಂಡಿ ಅವರಿಗೆ ಇನ್ನಷ್ಟು ಶಕ್ತಿ ನೀಡಿ ತನ್ನ ಸೇವೆ ಮಾಡಿಸಿಕೊಳ್ಳಲಿ.

ದಯಾನಂದ್ ಗೌಡಗೆರೆ, 


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in channapatna »

ಎಂ. ರಾಜು ರವರ ಭೂಶಾಂತಿ ಕಾರ್ಯಕ್ಕೆ ಆಗಮಿಸುವಂತೆ, ಕುಟುಂಬದವರ ಮನವಿ
ಎಂ. ರಾಜು ರವರ ಭೂಶಾಂತಿ ಕಾರ್ಯಕ್ಕೆ ಆಗಮಿಸುವಂತೆ, ಕುಟುಂಬದವರ ಮನವಿ

ಚನ್ನಪಟ್ಟಣ: ತಾಲ್ಲೂಕಿನ ಮತ್ತಿಕೆರೆ-ಶೆಟ್ಟಿಹಳ್ಳಿ ನಿವಾಸಿ, ರಾಮನಗರ ಜಿಲ್ಲಾ ಕನ್ನಡ ಸಂಸ್ಕೃತಿ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕರಾಗಿದ್ದ, ದಿವಂಗತ ಎಂ.

ಮತ್ತೀಕೆರೆ ಗ್ರಾಪಂಗೆ ನೂತನ ಅಧ್ಯಕ್ಷರಾದ ಯಶವಂತಗೌಡ
ಮತ್ತೀಕೆರೆ ಗ್ರಾಪಂಗೆ ನೂತನ ಅಧ್ಯಕ್ಷರಾದ ಯಶವಂತಗೌಡ

ಚನ್ನಪಟ್ಟಣ:ತಾಲೂಕಿನ ಮತ್ತೀಕೆರೆ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಎಂ.ಎಸ್.ಯಶವಂತಗೌಡ (ಯತೀಶ್) ಅವಿರೋಧ ಅಯ್ಕೆಯಾಗಿದ್ದಾರೆ. 

ನಗರ ಸಭೆಯಲ್ಲಿ ಪ್ರಥಮ ಪ್ರಜೆ ಮತ್ತು ಪೌರಾಯುಕ್ತರ ನಡುವೆ ತಾರಕಕ್ಕೇರಿದ ಮುಸುಕಿನ ಗುದ್ದಾಟ, ತನಿಖೆಗೆ ಆದೇಶಿಸಿದ ಡಿ.ಸಿ. ತನಿಖಾ ತಂಡ ಆಗಮನ
ನಗರ ಸಭೆಯಲ್ಲಿ ಪ್ರಥಮ ಪ್ರಜೆ ಮತ್ತು ಪೌರಾಯುಕ್ತರ ನಡುವೆ ತಾರಕಕ್ಕೇರಿದ ಮುಸುಕಿನ ಗುದ್ದಾಟ, ತನಿಖೆಗೆ ಆದೇಶಿಸಿದ ಡಿ.ಸಿ. ತನಿಖಾ ತಂಡ ಆಗಮನ

ರಾಮನಗರ : ಚನ್ನಪಟ್ಟಣ: ನಗರಸಭೆಯಲ್ಲಿ ಕಳೆದ ಆರು ತಿಂಗಳುಗಳಿಂದ ನಗರದ ಪ್ರಥಮ ಪ್ರಜೆಯಾದ ಪ್ರಶಾಂತ್ ಮತ್ತು ಪೌರಾಯುಕ್ತ ಸಿ. ಪುಟ್ಟಸ್ವಾಮಿ ನಡುವಿನ ಸಂಘರ್ಷದ

ಸರ್ವರ ಬಾಳಿಗೂ ಸಂವಿಧಾನವೇ ಮೂಲ, ನ್ಯಾಯಾಧೀಶೆ ಶುಭಾ
ಸರ್ವರ ಬಾಳಿಗೂ ಸಂವಿಧಾನವೇ ಮೂಲ, ನ್ಯಾಯಾಧೀಶೆ ಶುಭಾ

ಚನ್ನಪಟ್ಟಣ: ಭಾರತದ ಪ್ರತಿಯೊಬ್ಬ ಪ್ರಜೆಯ ಹಕ್ಕುಗಳ ಮೂಲ ಸಂವಿಧಾನವೇ ಆಗಿದೆ, ಪ್ರತಿಯೊಬ್ಬರಿಗೂ ಸಂವಿಧಾನವೇ ಉಸಿರಾಗಬೇಕು ಎಂದು ನಗರದ ನ್ಯಾಯಾಲಯದ ಆವರ

ನಗರ ಸಿಪಿಐ ವರ್ಗಾವಣೆ, ನೂತನ ಸಿಪಿಐ ರವಿಕಿರಣ್
ನಗರ ಸಿಪಿಐ ವರ್ಗಾವಣೆ, ನೂತನ ಸಿಪಿಐ ರವಿಕಿರಣ್

  ಚನ್ನಪಟ್ಟಣ,ಫೆ:೧-ಲೋಕಸಭಾ ಚುನಾವಣೆಯ ಹೊಸ್ತಿಲಲ್ಲೇ ಪೊಲೀಸ್ ಇಲಾಖೆಯಲ್ಲಿ ವರ್ಗಾವಣೆ  ಪರ್ವ ಪ್ರಾರಂಭವಾಗಿದ್ದು, ಅದಕ್ಕೆ ಪೂರಕ ವೆಂಬಂತ್ತೆ ನಗರ ವೃತ್ತ ನಿರೀಕ್ಷಕರ ಕಚೇರಿಯಲ್ಲಿ ಸಿ.ಪಿ.ಐ

ಯುವ ಪೀಳಿಗೆ ಹಕ್ಕು ಮತ್ತು ಕರ್ತವ್ಯ ಮರೆಯುತ್ತಿದೆ. ಮಂಜುನಾಥ್
ಯುವ ಪೀಳಿಗೆ ಹಕ್ಕು ಮತ್ತು ಕರ್ತವ್ಯ ಮರೆಯುತ್ತಿದೆ. ಮಂಜುನಾಥ್

ಚನ್ನಪಟ್ಟಣ: ಇಂದಿನ ವಿದ್ಯಾರ್ಥಿ ಸಮೂಹ ಹಾಗೂ ಯುವ ಪೀಳಿಗೆಯು ಹಕ್ಕು ಮತ್ತು ಕರ್ತವ್ಯಗಳನ್ನು ಮರೆಯುತ್ತಿದ್ದಾರೆ. ಸಂವಿಧಾನದ ಆಶಯಗಳಿಗೆ ಬದ್ದರಾಗುತ್ತಿಲ್ಲಾ

ಪ್ರಾಧಿಕಾರ ಅಧ್ಯಕ್ಷ ಸ್ಥಾನ ದಲಿತ ಸಮುದಾಯಕ್ಕೆ ನೀಡಿ ಮುಯ್ಯಿ ತೀರಿಸಿ, ಸರ್ಕಾರಕ್ಕೆ ಆಗ್ರಹ
ಪ್ರಾಧಿಕಾರ ಅಧ್ಯಕ್ಷ ಸ್ಥಾನ ದಲಿತ ಸಮುದಾಯಕ್ಕೆ ನೀಡಿ ಮುಯ್ಯಿ ತೀರಿಸಿ, ಸರ್ಕಾರಕ್ಕೆ ಆಗ್ರಹ

ಚನ್ನಪಟ್ಟಣ: ದಲಿತರು ದನಿಯಿಲ್ಲದ ಸಮುದಾಯ ಎಂಬಂತಾಗಿದೆ. ದಲಿತರಿಗೆ ಪ್ರತಿ ಹಂತದಲ್ಲೂ ಅನ್ಯಾಯವಾಗುತ್ತಿದೆ. ಅದು ತಾಲ್ಲೂಕಿನಲ್ಲಿಯೂ ಪ್ರತಿಬಿಂಬಿಸುತ್ತಿದೆ,

ಗವಿರಂಗಸ್ವಾಮಿ ಬೆಟ್ಟದಿಂದ ಜಿಗಿದು ಯುವಕ ಆತ್ಮಹತ್ಯೆ
ಗವಿರಂಗಸ್ವಾಮಿ ಬೆಟ್ಟದಿಂದ ಜಿಗಿದು ಯುವಕ ಆತ್ಮಹತ್ಯೆ

ಚನ್ನಪಟ್ಟಣ: ಜೀವನದಲ್ಲಿ ಜಿಗುಪ್ಸೆಗೊಂಡ ಬೆಂಗಳೂರಿನ ವಿವಾಹಿತನೋರ್ವ ಬೆಟ್ಟದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ, ತಾಲ್ಲೂಕಿನ ಅಕ್ಕೂರು ಪೊಲೀಸ್

ರಾಮಂದಿರ ಪ್ರತಿ ಗ್ರಾಮದಲ್ಲಿಯೂ ಆಗಬೇಕೆಂಬುದು ಭಾರತೀಯರ ಆಸೆ, ಡಿ ಕೆ ಸುರೇಶ್
ರಾಮಂದಿರ ಪ್ರತಿ ಗ್ರಾಮದಲ್ಲಿಯೂ ಆಗಬೇಕೆಂಬುದು ಭಾರತೀಯರ ಆಸೆ, ಡಿ ಕೆ ಸುರೇಶ್

ಚನ್ನಪಟ್ಟಣ: ಅಯೋಧ್ಯೆಯಲ್ಲಿನ ರಾಮಮಂದಿರ ನಿರ್ಮಾಣ ಸಮಸ್ತ ಭಾರತೀಯರ ಬಹು ದೊಡ್ಡ ಆಸೆಯಾಗಿದೆ.  ಒಬ್ಬರು ಒಂದು ಕಡೆ ಮಾತ್ರ ರಾಮಮಂದಿರ ನಿರ್ಮಾಣ ಮಾಡಬೇಕೆಂದು

ವಕೀಲ ಎಂ ಕೆ ನಿಂಗಪ್ಪ ರವರಿಂದ ಚಕ್ಕಲೂರು ಸರ್ಕಾರಿ ಶಾಲೆಗೆ ಪ್ರಿಂಟರ್ ಸ್ಕ್ಯಾನರ್ ಕೊಡುಗೆ
ವಕೀಲ ಎಂ ಕೆ ನಿಂಗಪ್ಪ ರವರಿಂದ ಚಕ್ಕಲೂರು ಸರ್ಕಾರಿ ಶಾಲೆಗೆ ಪ್ರಿಂಟರ್ ಸ್ಕ್ಯಾನರ್ ಕೊಡುಗೆ

ಚನ್ನಪಟ್ಟಣ : ೨೦೨೪ರ ನೂತನ ವರ್ಷದಾರಂಭ ಪ್ರಯುಕ್ತ ಸರ್ಕಾರಿ ಶಾಲಾ ಮಕ್ಕಳನ್ನು ಶೈಕ್ಷಣಿಕವಾಗಿ, ಕ್ರೀಡಾಶಕ್ತರಾಗಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಿ.ಕೆ.ಚಾ

Top Stories »  


Top ↑