Tel: 7676775624 | Mail: info@yellowandred.in

Language: EN KAN

    Follow us :

ಗವಿರಂಗಸ್ವಾಮಿ ಬೆಟ್ಟದಿಂದ ಜಿಗಿದು ಯುವಕ ಆತ್ಮಹತ್ಯೆ

Posted date: 10 Jan, 2024

Powered by:     Yellow and Red

ಗವಿರಂಗಸ್ವಾಮಿ ಬೆಟ್ಟದಿಂದ ಜಿಗಿದು ಯುವಕ ಆತ್ಮಹತ್ಯೆ

ಚನ್ನಪಟ್ಟಣ: ಜೀವನದಲ್ಲಿ ಜಿಗುಪ್ಸೆಗೊಂಡ ಬೆಂಗಳೂರಿನ ವಿವಾಹಿತನೋರ್ವ ಬೆಟ್ಟದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ, ತಾಲ್ಲೂಕಿನ ಅಕ್ಕೂರು ಪೊಲೀಸ್ ಠಾಣೆ ವ್ಯಾಪ್ತಿಯ, ಸಿಂಗರಾಜಿಪುರ ಗ್ರಾಮದ ಶ್ರೀ ಗವಿರಂಗಸ್ವಾಮಿ ಬೆಟ್ಟದಲ್ಲಿ ನಡೆದಿದೆ.

ಬೆಟ್ಟದಿಂದ ಜೀಗಿದು ಆತ್ಮಹತ್ಯೆ ಮಾಡಿಕೊಂಡಿರುವ ಅವಿವಾಹಿತ ಲೋಕೇಶ್(35) ಎಂದು ಹೇಳಲಾಗಿದ್ದು, ಕೆಲ ದಿನಗಳ ಹಿಂದೆ ಅಂದರೆ, 2024ರ ಹೊಸವರ್ಷದ ದಿನ ತನ್ನ ಡಿಯೋ ಬೈಕ್‍ನಲ್ಲಿ ಒಬ್ಬನೇ ಗವಿರಂಗಸ್ವಾಮಿ ಬೆಟ್ಟಕ್ಕೆ ಬಂದಿದ್ದ ಆತ, ಬೈಕ್ ಬೆಟ್ಟದ ಮೇಲೆ ನಿಲುಗಡೆ ಮಾಡಿ, ಬೆಟ್ಟದಿಂದ ಸುಮಾರು 500 ಅಡಿ ಕಂದಕಕ್ಕೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದನು.

ಸಾರ್ವಜನಿಕರ ದೂರಿನ ಮೇರೆಗೆ ಸ್ಥಳಕ್ಕೆ ತೆರಳಿದ ಅಕ್ಕೂರು ಪೊಲೀಸರು, ಬೆಟ್ಟದ ಮೇಲೆ ಇದ್ದ ಬೈಕ್ ಹಾಗೂ ಬೆಂಗಳೂರು ಗಿರಿನಗರದ ಪೊಲೀಸ್ ಠಾಣೆಯಲ್ಲಿ ಲೋಕೇಶ್ ಕಾಣೆಯಾಗಿರುವುದರ ಬಗ್ಗೆ ದೂರು ದಾಖಲಾಗಿರುವದನ್ನು ಖಚಿತ ಪಡಿಸಿಕೊಂಡು, ಬೆಟ್ಟದಿಂದ ಆಳವಾದ ಕಂದಕಕ್ಕೆ ಬಿದ್ದಿದ್ದರಿಂದ, ಮೃತದೇಹವನ್ನು ಹೊರತಗೆಯಲಾಗದೆ, ಬೆಂಗಳೂರಿನಿಂದ ಕೆಲ ಪರಿಣಿತರನ್ನು ಬರಮಾಡಿಕೊಂಡು ಮೃತದೇಹವನ್ನು ತಗೆಯುವ ಕಾರ್ಯಚರಣೆಯನ್ನು ಮಾಡಿದ್ದರು.

ಇಂದು ಹಲವಾರು ಪರಿಣಿತರು, ಅಕ್ಕೂರು ಪೋಲಿಸರು ಮತ್ತು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿನ ಒಳ ಮತ್ತು ಹೊರಗುತ್ತಿಗೆ ಆಧಾರದ ಮೇಲೆ ನಿಯೋಜಿತರಾಗಿರುವ ಆಂಬುಲೆನ್ಸ್ ಸಿಬ್ಬಂದಿಗಳೊಡಗೂಡಿ ಆಳವಾದ ಕಂದಕದಿಂದ ಶವವನ್ನು ಮೇಲೆತ್ತಲಾಯಿತು. ಸ್ಥಳದಲ್ಲಿ ಕುಟುಂಬದವರ ರೋದನ ಮುಗಿಲುಮುಟ್ಟಿತ್ತು.

ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in channapatna »

ಎಂ. ರಾಜು ರವರ ಭೂಶಾಂತಿ ಕಾರ್ಯಕ್ಕೆ ಆಗಮಿಸುವಂತೆ, ಕುಟುಂಬದವರ ಮನವಿ
ಎಂ. ರಾಜು ರವರ ಭೂಶಾಂತಿ ಕಾರ್ಯಕ್ಕೆ ಆಗಮಿಸುವಂತೆ, ಕುಟುಂಬದವರ ಮನವಿ

ಚನ್ನಪಟ್ಟಣ: ತಾಲ್ಲೂಕಿನ ಮತ್ತಿಕೆರೆ-ಶೆಟ್ಟಿಹಳ್ಳಿ ನಿವಾಸಿ, ರಾಮನಗರ ಜಿಲ್ಲಾ ಕನ್ನಡ ಸಂಸ್ಕೃತಿ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕರಾಗಿದ್ದ, ದಿವಂಗತ ಎಂ.

ಮತ್ತೀಕೆರೆ ಗ್ರಾಪಂಗೆ ನೂತನ ಅಧ್ಯಕ್ಷರಾದ ಯಶವಂತಗೌಡ
ಮತ್ತೀಕೆರೆ ಗ್ರಾಪಂಗೆ ನೂತನ ಅಧ್ಯಕ್ಷರಾದ ಯಶವಂತಗೌಡ

ಚನ್ನಪಟ್ಟಣ:ತಾಲೂಕಿನ ಮತ್ತೀಕೆರೆ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಎಂ.ಎಸ್.ಯಶವಂತಗೌಡ (ಯತೀಶ್) ಅವಿರೋಧ ಅಯ್ಕೆಯಾಗಿದ್ದಾರೆ. 

ನಗರ ಸಭೆಯಲ್ಲಿ ಪ್ರಥಮ ಪ್ರಜೆ ಮತ್ತು ಪೌರಾಯುಕ್ತರ ನಡುವೆ ತಾರಕಕ್ಕೇರಿದ ಮುಸುಕಿನ ಗುದ್ದಾಟ, ತನಿಖೆಗೆ ಆದೇಶಿಸಿದ ಡಿ.ಸಿ. ತನಿಖಾ ತಂಡ ಆಗಮನ
ನಗರ ಸಭೆಯಲ್ಲಿ ಪ್ರಥಮ ಪ್ರಜೆ ಮತ್ತು ಪೌರಾಯುಕ್ತರ ನಡುವೆ ತಾರಕಕ್ಕೇರಿದ ಮುಸುಕಿನ ಗುದ್ದಾಟ, ತನಿಖೆಗೆ ಆದೇಶಿಸಿದ ಡಿ.ಸಿ. ತನಿಖಾ ತಂಡ ಆಗಮನ

ರಾಮನಗರ : ಚನ್ನಪಟ್ಟಣ: ನಗರಸಭೆಯಲ್ಲಿ ಕಳೆದ ಆರು ತಿಂಗಳುಗಳಿಂದ ನಗರದ ಪ್ರಥಮ ಪ್ರಜೆಯಾದ ಪ್ರಶಾಂತ್ ಮತ್ತು ಪೌರಾಯುಕ್ತ ಸಿ. ಪುಟ್ಟಸ್ವಾಮಿ ನಡುವಿನ ಸಂಘರ್ಷದ

ಸರ್ವರ ಬಾಳಿಗೂ ಸಂವಿಧಾನವೇ ಮೂಲ, ನ್ಯಾಯಾಧೀಶೆ ಶುಭಾ
ಸರ್ವರ ಬಾಳಿಗೂ ಸಂವಿಧಾನವೇ ಮೂಲ, ನ್ಯಾಯಾಧೀಶೆ ಶುಭಾ

ಚನ್ನಪಟ್ಟಣ: ಭಾರತದ ಪ್ರತಿಯೊಬ್ಬ ಪ್ರಜೆಯ ಹಕ್ಕುಗಳ ಮೂಲ ಸಂವಿಧಾನವೇ ಆಗಿದೆ, ಪ್ರತಿಯೊಬ್ಬರಿಗೂ ಸಂವಿಧಾನವೇ ಉಸಿರಾಗಬೇಕು ಎಂದು ನಗರದ ನ್ಯಾಯಾಲಯದ ಆವರ

ನಗರ ಸಿಪಿಐ ವರ್ಗಾವಣೆ, ನೂತನ ಸಿಪಿಐ ರವಿಕಿರಣ್
ನಗರ ಸಿಪಿಐ ವರ್ಗಾವಣೆ, ನೂತನ ಸಿಪಿಐ ರವಿಕಿರಣ್

  ಚನ್ನಪಟ್ಟಣ,ಫೆ:೧-ಲೋಕಸಭಾ ಚುನಾವಣೆಯ ಹೊಸ್ತಿಲಲ್ಲೇ ಪೊಲೀಸ್ ಇಲಾಖೆಯಲ್ಲಿ ವರ್ಗಾವಣೆ  ಪರ್ವ ಪ್ರಾರಂಭವಾಗಿದ್ದು, ಅದಕ್ಕೆ ಪೂರಕ ವೆಂಬಂತ್ತೆ ನಗರ ವೃತ್ತ ನಿರೀಕ್ಷಕರ ಕಚೇರಿಯಲ್ಲಿ ಸಿ.ಪಿ.ಐ

ಯುವ ಪೀಳಿಗೆ ಹಕ್ಕು ಮತ್ತು ಕರ್ತವ್ಯ ಮರೆಯುತ್ತಿದೆ. ಮಂಜುನಾಥ್
ಯುವ ಪೀಳಿಗೆ ಹಕ್ಕು ಮತ್ತು ಕರ್ತವ್ಯ ಮರೆಯುತ್ತಿದೆ. ಮಂಜುನಾಥ್

ಚನ್ನಪಟ್ಟಣ: ಇಂದಿನ ವಿದ್ಯಾರ್ಥಿ ಸಮೂಹ ಹಾಗೂ ಯುವ ಪೀಳಿಗೆಯು ಹಕ್ಕು ಮತ್ತು ಕರ್ತವ್ಯಗಳನ್ನು ಮರೆಯುತ್ತಿದ್ದಾರೆ. ಸಂವಿಧಾನದ ಆಶಯಗಳಿಗೆ ಬದ್ದರಾಗುತ್ತಿಲ್ಲಾ

ಪ್ರಾಧಿಕಾರ ಅಧ್ಯಕ್ಷ ಸ್ಥಾನ ದಲಿತ ಸಮುದಾಯಕ್ಕೆ ನೀಡಿ ಮುಯ್ಯಿ ತೀರಿಸಿ, ಸರ್ಕಾರಕ್ಕೆ ಆಗ್ರಹ
ಪ್ರಾಧಿಕಾರ ಅಧ್ಯಕ್ಷ ಸ್ಥಾನ ದಲಿತ ಸಮುದಾಯಕ್ಕೆ ನೀಡಿ ಮುಯ್ಯಿ ತೀರಿಸಿ, ಸರ್ಕಾರಕ್ಕೆ ಆಗ್ರಹ

ಚನ್ನಪಟ್ಟಣ: ದಲಿತರು ದನಿಯಿಲ್ಲದ ಸಮುದಾಯ ಎಂಬಂತಾಗಿದೆ. ದಲಿತರಿಗೆ ಪ್ರತಿ ಹಂತದಲ್ಲೂ ಅನ್ಯಾಯವಾಗುತ್ತಿದೆ. ಅದು ತಾಲ್ಲೂಕಿನಲ್ಲಿಯೂ ಪ್ರತಿಬಿಂಬಿಸುತ್ತಿದೆ,

ಗವಿರಂಗಸ್ವಾಮಿ ಬೆಟ್ಟದಿಂದ ಜಿಗಿದು ಯುವಕ ಆತ್ಮಹತ್ಯೆ
ಗವಿರಂಗಸ್ವಾಮಿ ಬೆಟ್ಟದಿಂದ ಜಿಗಿದು ಯುವಕ ಆತ್ಮಹತ್ಯೆ

ಚನ್ನಪಟ್ಟಣ: ಜೀವನದಲ್ಲಿ ಜಿಗುಪ್ಸೆಗೊಂಡ ಬೆಂಗಳೂರಿನ ವಿವಾಹಿತನೋರ್ವ ಬೆಟ್ಟದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ, ತಾಲ್ಲೂಕಿನ ಅಕ್ಕೂರು ಪೊಲೀಸ್

ರಾಮಂದಿರ ಪ್ರತಿ ಗ್ರಾಮದಲ್ಲಿಯೂ ಆಗಬೇಕೆಂಬುದು ಭಾರತೀಯರ ಆಸೆ, ಡಿ ಕೆ ಸುರೇಶ್
ರಾಮಂದಿರ ಪ್ರತಿ ಗ್ರಾಮದಲ್ಲಿಯೂ ಆಗಬೇಕೆಂಬುದು ಭಾರತೀಯರ ಆಸೆ, ಡಿ ಕೆ ಸುರೇಶ್

ಚನ್ನಪಟ್ಟಣ: ಅಯೋಧ್ಯೆಯಲ್ಲಿನ ರಾಮಮಂದಿರ ನಿರ್ಮಾಣ ಸಮಸ್ತ ಭಾರತೀಯರ ಬಹು ದೊಡ್ಡ ಆಸೆಯಾಗಿದೆ.  ಒಬ್ಬರು ಒಂದು ಕಡೆ ಮಾತ್ರ ರಾಮಮಂದಿರ ನಿರ್ಮಾಣ ಮಾಡಬೇಕೆಂದು

ವಕೀಲ ಎಂ ಕೆ ನಿಂಗಪ್ಪ ರವರಿಂದ ಚಕ್ಕಲೂರು ಸರ್ಕಾರಿ ಶಾಲೆಗೆ ಪ್ರಿಂಟರ್ ಸ್ಕ್ಯಾನರ್ ಕೊಡುಗೆ
ವಕೀಲ ಎಂ ಕೆ ನಿಂಗಪ್ಪ ರವರಿಂದ ಚಕ್ಕಲೂರು ಸರ್ಕಾರಿ ಶಾಲೆಗೆ ಪ್ರಿಂಟರ್ ಸ್ಕ್ಯಾನರ್ ಕೊಡುಗೆ

ಚನ್ನಪಟ್ಟಣ : ೨೦೨೪ರ ನೂತನ ವರ್ಷದಾರಂಭ ಪ್ರಯುಕ್ತ ಸರ್ಕಾರಿ ಶಾಲಾ ಮಕ್ಕಳನ್ನು ಶೈಕ್ಷಣಿಕವಾಗಿ, ಕ್ರೀಡಾಶಕ್ತರಾಗಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಿ.ಕೆ.ಚಾ

Top Stories »  

Top ↑