ರಾಮಂದಿರ ಪ್ರತಿ ಗ್ರಾಮದಲ್ಲಿಯೂ ಆಗಬೇಕೆಂಬುದು ಭಾರತೀಯರ ಆಸೆ, ಡಿ ಕೆ ಸುರೇಶ್
ಚನ್ನಪಟ್ಟಣ: ಅಯೋಧ್ಯೆಯಲ್ಲಿನ ರಾಮಮಂದಿರ ನಿರ್ಮಾಣ ಸಮಸ್ತ ಭಾರತೀಯರ ಬಹು ದೊಡ್ಡ ಆಸೆಯಾಗಿದೆ. ಒಬ್ಬರು ಒಂದು ಕಡೆ ಮಾತ್ರ ರಾಮಮಂದಿರ ನಿರ್ಮಾಣ ಮಾಡಬೇಕೆಂದು ಮಾಡುತ್ತಿದ್ದಾರೆ. ಮತ್ತೊಬ್ಬರು ದೇಶದಲ್ಲೆಡೆ ರಾಮಮಂದಿರ ನಿರ್ಮಾಣ ಮಾಡಬೇಕು ಅಂತಾರೆ ಎಂದು ಸಂಸದ ಡಿ.ಕೆ.ಸುರೇಶ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆದರೆ ಕೆಲವರು ರಾಮಮಂದಿರವನ್ನು ಪ್ರಚಾರಕ್ಕೆ ಬಳಸಿಕೊಳ್ಳುತ್ತಾರೆ. ಅದರೆ, ಹಳ್ಳಿ ಹಳ್ಳಿಗಳಲ್ಲೂ ರಾಮಮಂದಿರ ಆಗಬೇಕು ಅನ್ನೋದು ನಮ್ಮ ಉದ್ದೇಶ. ರಾಮಮಂದಿರ ಉದ್ಘಾಟನೆಗೆ ನನಗೆ ಆಹ್ವಾನ ಬಂದಿಲ್ಲ. ಆಹ್ವಾನ ಬಂದ ನಂತರ ಹೋಗೋದಾ, ಬೇಡವಾ ನೋಡೊಣ ಎಂದರು.
ಪೊಲೀಸರು ಯಾರನ್ನು ಉದ್ದೇಶಪೂರ್ವಕವಾಗಿ ಬಂಧನ ಮಾಡಿಲ್ಲ. ಕೆಲ ದುರ್ಘಟನೆ ನಡೆಯಬಹುದು ಎಂಬ ಗುಮಾನಿ ಮೇಲೆ ಮುನ್ನೆಚ್ಚರಿಕೆಯಾಗಿ ಬಂಧನ ಮಾಡಲಾಗಿದೆ. ರಾಮಮಂದಿರಕ್ಕೂ ಭದ್ರತೆ ಒದಗಿಸಬೇಕು ಹಾಗೇಯೆ ಸಾರ್ವಜನಿಕರಿಗೂ ಭದ್ರತೆ ನೀಡಬೇಕು.ಹಾಗಾಗಿ ಇದು ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಮಾಡಿರುವ ಕ್ರಮ ಎಂದರು.
ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ, ಈ ಬಗ್ಗೆ ನಮಗೆ ಮಾಹಿತಿ ಇಲ್ಲ. ನಾನು ಊರಿನಲ್ಲಿ ಇರಲಿಲ್ಲ, ಮಾಹಿತಿ ತಿಳಿದುಕೊಳ್ತೀನಿ ಎಂದರು.
ಗೋದ್ರಾ ಮಾದರಿ ದುರಂತ ಎಂಬ ಬಿ.ಕೆ.ಹರಿಪ್ರಸಾದ್ ಹೇಳಿಕೆ ವಿಚಾರಕ್ಕೆ, ಇವತ್ತು ಅಯೋಧ್ಯೆ ವಿವಾದಾತ್ಮಕ ಕ್ಚೇತ್ರ. ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಆಗಿದೆ. ರಾಮಮಂದಿರಕ್ಕೂ ರಕ್ಷಣೆ ಬೇಕು, ಭಕ್ತರಿಗೂ ರಕ್ಷಣೆ ಕೊಡಬೇಕು. ಏನೇ ಇದ್ದರೂ ರಕ್ಷಣೆ ಕೊಡುವುದು ಸರ್ಕಾರದ ಕರ್ತವ್ಯ. ಆ ದೃಷ್ಟಿಯಿಂದ ಹರಿಪ್ರಸಾದ್ ಅವರು ಹೇಳಿದ್ದಾರೆ ಎಂದರು.
ಗೋ ರಾ ಶ್ರೀನಿವಾಸ...
ಮೊ:9845856139.
Recent news in channapatna »
ಎಂ. ರಾಜು ರವರ ಭೂಶಾಂತಿ ಕಾರ್ಯಕ್ಕೆ ಆಗಮಿಸುವಂತೆ, ಕುಟುಂಬದವರ ಮನವಿ
ಚನ್ನಪಟ್ಟಣ: ತಾಲ್ಲೂಕಿನ ಮತ್ತಿಕೆರೆ-ಶೆಟ್ಟಿಹಳ್ಳಿ ನಿವಾಸಿ, ರಾಮನಗರ ಜಿಲ್ಲಾ ಕನ್ನಡ ಸಂಸ್ಕೃತಿ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕರಾಗಿದ್ದ, ದಿವಂಗತ ಎಂ.
ಮತ್ತೀಕೆರೆ ಗ್ರಾಪಂಗೆ ನೂತನ ಅಧ್ಯಕ್ಷರಾದ ಯಶವಂತಗೌಡ
ಚನ್ನಪಟ್ಟಣ:ತಾಲೂಕಿನ ಮತ್ತೀಕೆರೆ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಎಂ.ಎಸ್.ಯಶವಂತಗೌಡ (ಯತೀಶ್) ಅವಿರೋಧ ಅಯ್ಕೆಯಾಗಿದ್ದಾರೆ.
ನಗರ ಸಭೆಯಲ್ಲಿ ಪ್ರಥಮ ಪ್ರಜೆ ಮತ್ತು ಪೌರಾಯುಕ್ತರ ನಡುವೆ ತಾರಕಕ್ಕೇರಿದ ಮುಸುಕಿನ ಗುದ್ದಾಟ, ತನಿಖೆಗೆ ಆದೇಶಿಸಿದ ಡಿ.ಸಿ. ತನಿಖಾ ತಂಡ ಆಗಮನ
ರಾಮನಗರ : ಚನ್ನಪಟ್ಟಣ: ನಗರಸಭೆಯಲ್ಲಿ ಕಳೆದ ಆರು ತಿಂಗಳುಗಳಿಂದ ನಗರದ ಪ್ರಥಮ ಪ್ರಜೆಯಾದ ಪ್ರಶಾಂತ್ ಮತ್ತು ಪೌರಾಯುಕ್ತ ಸಿ. ಪುಟ್ಟಸ್ವಾಮಿ ನಡುವಿನ ಸಂಘರ್ಷದ
ಸರ್ವರ ಬಾಳಿಗೂ ಸಂವಿಧಾನವೇ ಮೂಲ, ನ್ಯಾಯಾಧೀಶೆ ಶುಭಾ
ಚನ್ನಪಟ್ಟಣ: ಭಾರತದ ಪ್ರತಿಯೊಬ್ಬ ಪ್ರಜೆಯ ಹಕ್ಕುಗಳ ಮೂಲ ಸಂವಿಧಾನವೇ ಆಗಿದೆ, ಪ್ರತಿಯೊಬ್ಬರಿಗೂ ಸಂವಿಧಾನವೇ ಉಸಿರಾಗಬೇಕು ಎಂದು ನಗರದ ನ್ಯಾಯಾಲಯದ ಆವರ
ನಗರ ಸಿಪಿಐ ವರ್ಗಾವಣೆ, ನೂತನ ಸಿಪಿಐ ರವಿಕಿರಣ್
ಚನ್ನಪಟ್ಟಣ,ಫೆ:೧-ಲೋಕಸಭಾ ಚುನಾವಣೆಯ ಹೊಸ್ತಿಲಲ್ಲೇ ಪೊಲೀಸ್ ಇಲಾಖೆಯಲ್ಲಿ ವರ್ಗಾವಣೆ ಪರ್ವ ಪ್ರಾರಂಭವಾಗಿದ್ದು, ಅದಕ್ಕೆ ಪೂರಕ ವೆಂಬಂತ್ತೆ ನಗರ ವೃತ್ತ ನಿರೀಕ್ಷಕರ ಕಚೇರಿಯಲ್ಲಿ ಸಿ.ಪಿ.ಐ
ಯುವ ಪೀಳಿಗೆ ಹಕ್ಕು ಮತ್ತು ಕರ್ತವ್ಯ ಮರೆಯುತ್ತಿದೆ. ಮಂಜುನಾಥ್
ಚನ್ನಪಟ್ಟಣ: ಇಂದಿನ ವಿದ್ಯಾರ್ಥಿ ಸಮೂಹ ಹಾಗೂ ಯುವ ಪೀಳಿಗೆಯು ಹಕ್ಕು ಮತ್ತು ಕರ್ತವ್ಯಗಳನ್ನು ಮರೆಯುತ್ತಿದ್ದಾರೆ. ಸಂವಿಧಾನದ ಆಶಯಗಳಿಗೆ ಬದ್ದರಾಗುತ್ತಿಲ್ಲಾ
ಪ್ರಾಧಿಕಾರ ಅಧ್ಯಕ್ಷ ಸ್ಥಾನ ದಲಿತ ಸಮುದಾಯಕ್ಕೆ ನೀಡಿ ಮುಯ್ಯಿ ತೀರಿಸಿ, ಸರ್ಕಾರಕ್ಕೆ ಆಗ್ರಹ
ಚನ್ನಪಟ್ಟಣ: ದಲಿತರು ದನಿಯಿಲ್ಲದ ಸಮುದಾಯ ಎಂಬಂತಾಗಿದೆ. ದಲಿತರಿಗೆ ಪ್ರತಿ ಹಂತದಲ್ಲೂ ಅನ್ಯಾಯವಾಗುತ್ತಿದೆ. ಅದು ತಾಲ್ಲೂಕಿನಲ್ಲಿಯೂ ಪ್ರತಿಬಿಂಬಿಸುತ್ತಿದೆ,
ಗವಿರಂಗಸ್ವಾಮಿ ಬೆಟ್ಟದಿಂದ ಜಿಗಿದು ಯುವಕ ಆತ್ಮಹತ್ಯೆ
ಚನ್ನಪಟ್ಟಣ: ಜೀವನದಲ್ಲಿ ಜಿಗುಪ್ಸೆಗೊಂಡ ಬೆಂಗಳೂರಿನ ವಿವಾಹಿತನೋರ್ವ ಬೆಟ್ಟದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ, ತಾಲ್ಲೂಕಿನ ಅಕ್ಕೂರು ಪೊಲೀಸ್
ರಾಮಂದಿರ ಪ್ರತಿ ಗ್ರಾಮದಲ್ಲಿಯೂ ಆಗಬೇಕೆಂಬುದು ಭಾರತೀಯರ ಆಸೆ, ಡಿ ಕೆ ಸುರೇಶ್
ಚನ್ನಪಟ್ಟಣ: ಅಯೋಧ್ಯೆಯಲ್ಲಿನ ರಾಮಮಂದಿರ ನಿರ್ಮಾಣ ಸಮಸ್ತ ಭಾರತೀಯರ ಬಹು ದೊಡ್ಡ ಆಸೆಯಾಗಿದೆ. ಒಬ್ಬರು ಒಂದು ಕಡೆ ಮಾತ್ರ ರಾಮಮಂದಿರ ನಿರ್ಮಾಣ ಮಾಡಬೇಕೆಂದು
ವಕೀಲ ಎಂ ಕೆ ನಿಂಗಪ್ಪ ರವರಿಂದ ಚಕ್ಕಲೂರು ಸರ್ಕಾರಿ ಶಾಲೆಗೆ ಪ್ರಿಂಟರ್ ಸ್ಕ್ಯಾನರ್ ಕೊಡುಗೆ
ಚನ್ನಪಟ್ಟಣ : ೨೦೨೪ರ ನೂತನ ವರ್ಷದಾರಂಭ ಪ್ರಯುಕ್ತ ಸರ್ಕಾರಿ ಶಾಲಾ ಮಕ್ಕಳನ್ನು ಶೈಕ್ಷಣಿಕವಾಗಿ, ಕ್ರೀಡಾಶಕ್ತರಾಗಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಿ.ಕೆ.ಚಾ
ಪ್ರತಿಕ್ರಿಯೆಗಳು