Tel: 7676775624 | Mail: info@yellowandred.in

Language: EN KAN

    Follow us :


ಜಲಾವೃತಗೊಂಡಿದ್ದ ತಟ್ಟೆಕೆರೆ ಶಾಲೆಗೆ ಡಿಸಿ, ಸಿಇಓ ಭೇಟಿ

Posted date: 20 Sep, 2022

Powered by:     Yellow and Red

ಜಲಾವೃತಗೊಂಡಿದ್ದ ತಟ್ಟೆಕೆರೆ ಶಾಲೆಗೆ ಡಿಸಿ, ಸಿಇಓ ಭೇಟಿ

ಚನ್ನಪಟ್ಟಣ: ನಗರದ 20ನೇ ವಾರ್ಡ್ ನ ಸರ್ಕಾರಿ ಶಾಲೆಯ ಹೊರಾಂಗಣ ಮತ್ತು ಒಳಾಂಗಣ ತುಂಬಾ ತಗ್ಗು ಪ್ರದೇಶದಲ್ಲಿ ಇರುವುದರಿಂದ, ಚರಂಡಿಯು ಮೇಲಿದ್ದು, ಮಳೆ ನಿಂತರೂ ಸಹ ನೀರು ಜಿನುಗುತ್ತಿರುವುದರಿಂದ ಶಾಲೆಯಲ್ಲಿ ಪಾಠ ಮಾಡಲಾಗದೆ ದೇವಾಲಯದ ಆವರಣದಲ್ಲಿ ಮಕ್ಕಳನ್ನು ಕೂರಿಸಿ ಪಾಠಲಾಗುತ್ತಿತ್ತು. ನೀರು ತುಂಬಿಕೊಂಡು ಜಲಾವೃತಗೊಂಡಿದ್ದ ತಟ್ಟೆಕೆರೆ ಶಾಲೆಗೆ ಜಿಲ್ಲಾಧಿಕಾರಿ ಡಾ.ಅವಿನಾಶ್ ಮೆನನ್ ರಾಜೇಂದ್ರನ್ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿಗ್ವಿಜಯ್ ಬೋಡ್ಕೆ ಭೇಟಿ ನೀಡಿ ಸ್ಥಳ ಪರಿಶೀಲಿಸಿ ವಾಸ್ತವಾಂಶವನ್ನು ಅವಲೋಕಿಸಿದರು


ಕ್ಷೇತ್ರ ಶಿಕ್ಷಣಾಧಿಕಾರಿಗಳು, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳು, ನಗರಸಭೆ ಆಯುಕ್ತರು ಮತ್ತು ಲೋಕೋಪಯೋಗಿ ಇಲಾಖೆ ಅಭಿಯಂತರರನ್ನು ಸ್ಥಳಕ್ಕೆ ಕರೆಸಿಕೊಂಡ ಜಿಲ್ಲಾಧಿಕಾರಿಗಳು  ಶಾಲೆಯ ಆವರಣಕ್ಕೆ ಮಣ್ಣನ್ನು  ಭರ್ತಿ ಒಡೆದು ಸಮತಟ್ಟು ಮಾಡುವಂತೆ ಸೂಚಿಸಿದರು. ಶಾಲಾವರಣದಲ್ಲಿ ಗುಂಡಿ ತೋಡಿ ಮೇಲೆ ಮುಚ್ಚಳವನ್ನು ನಿರ್ಮಿಸಿ ಆ ಗುಂಡಿಯಲ್ಲಿ ತುಂಬಿದ ನೀರನ್ನು ಮೋಟರ್ ಮೂಲಕ ಮೂಲಕ ಹೊರ ಹಾಕುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು. ಶಾಲಾ ಕಾಂಪೌಂಡ್ ಪಕ್ಕದಲ್ಲಿ ಮುಚ್ಚಿದ್ದ ಚರಂಡಿಯ ಮಣ್ಣು  ಹೂಳು ತೆಗೆಯುವಂತೆ ಸೂಚಿಸಿದರು. ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ತಾತ್ಕಾಲಿಕವಾಗಿ ತರಗತಿಗಳನ್ನು ಪಕ್ಕದ ಹಳೇ ಡೈರಾ ಶಾಲೆಯಲ್ಲಿ  ನಡೆಸುವಂತೆ ಕ್ರಮ ವಹಿಸಲು ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದರು.


ತಟ್ಟೆಕೆರೆ ಶಾಲೆಗೆ 5ಕೊಠಡಿಗಳ ನಿರ್ಮಾಣಕ್ಕೆ ಸಂಬಂಧಿಸಿದ ಎಸ್ಟಿಮೆಶನ್ ಕಾಪಿಯನ್ನು ಲೋಕೋಪಯೋಗಿ ಇಲಾಖೆ ಅಭಿಯಂತರರು ತಯಾರಿಸಿದ್ದು ಈ ಕೂಡಲೇ ಎಲ್ಲಾ ಇಲಾಖೆ ಅಧಿಕಾರಿಗಳು ಶೀಘ್ರವಾಗಿ ಕೊಠಡಿಗಳ ಮಂಜೂರಾತಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಶಾಲೆಯ ಹೆಸರಿನಲ್ಲಿರುವ 1. 5ಎಕರೆ ಜಾಗದಲ್ಲಿ ನೂತನ ಕಟ್ಟಡ ನಿರ್ಮಿಸುವಂತೆ ಅಧಿಕಾರಿಗಳಿಗೆ ಇದೇ ಸಮಯದಲ್ಲಿ ಸೂಚಿಸಿದರು.


*ಎಚ್ಚೆತ್ತ ಅಧಿಕಾರಿಗಳು:*

ಜಿಲ್ಲಾಧಿಕಾರಿಗಳ ಆದೇಶದನ್ವಯ ಪೌರಾಯುಕ್ತ ಪುಟ್ಟಸ್ವಾಮಿ ಹಾಗೂ ಲೋಕೋಪಯೋಗಿ ಅಭಿಯಂತರ ಛತ್ರಪತಿ ಶೀಘ್ರವೇ ಕಾರ್ಯಾಚರಣೆ ಮಾಡಿ ಜೆಸಿಬಿ ಮೂಲಕ ಶಾಲಾ ಆವರಣದಲ್ಲಿ ಗುಂಡಿ ತೋಡಿ ,  ಸಂಗ್ರಹಗೊಂಡ ನೀರನ್ನು ಮೋಟಾರ್ ಮೂಲಕ ಹೊರಹಾಕಿದರು. ಕಾಂಪೌಂಡ್ ಪಕ್ಕದಲ್ಲಿದ್ದ ಮುಚ್ಚಿ ಹೋಗಿದ್ದ ಚರಂಡಿಯ ಹೂಳು ತೆಗಿಸಿದರು. ವಿದ್ಯಾರ್ಥಿಗಳನ್ನು ಪಕ್ಕದ ಆಲ್ಅಮೀನ್ ಅನುದಾನಿತ ಪ್ರೌಢ ಶಾಲೆಗೆ ಸ್ಥಳಾಂತರಿಸಿ ಸುಸಜ್ಜಿತವಾದ 2 ಕೊಠಡಿಗಳಲ್ಲಿ ಮತ್ತು ಶಾಲಾ ಆವರಣದಲ್ಲಿ  ತಾತ್ಕಾಲಿಕವಾಗಿ  ತರಗತಿ ಬೋಧನೆ ನಡೆಯುವಂತೆ ಕ್ಷೇತ್ರ ಸಮನ್ವಯಾಧಿಕಾರಿ  ಕುಸುಮಲತಾ ಕ್ರಮವಹಿಸಿದರು. ಈ ಸಂದರ್ಭದಲ್ಲಿ ಡಿಡಿಪಿಐ ಗಂಗಣ್ಣ ಸ್ವಾಮಿ, ಡಯೆಟ್ ಪ್ರಾಂಶುಪಾಲ ಸೂರ್ಯಪ್ರಕಾಶ್ ಮೂರ್ತಿ, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಣಾಧಿಕಾರಿ ಶಿವಕುಮಾರ್, ಪೌರಾಯುಕ್ತ ಪುಟ್ಟಸ್ವಾಮಿ, ಲೋಕೋಪಯೋಗಿ ಇಲಾಖೆ ಅಭಿಯಂತರ ಛತ್ರಪತಿ, ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ್, ಶಿಕ್ಷಣ ಇಲಾಖೆಯ ಶಿಕ್ಷಣ ಸಂಯೋಜಕರುಗಳಾದ  ಯೋಗೇಶ್ ಚಕ್ಕೆರೆ, ರಾಜಲಕ್ಷ್ಮಿ, ಸಿಆರ್ ಪಿ ರವಿಕುಮಾರ್, ಬಿಆರ್ ಪಿ ಜಯರಾಮಯ್ಯ, ಮುತ್ತಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಒಟ್ಟಿನಲ್ಲಿ ಜಿಲ್ಲಾಧಿಕಾರಿಗಳ ಖಡಕ್ ಸೂಚನೆಯ ಮೇರೆಗೆ ಎಚ್ಚೆತ್ತ ಅಧಿಕಾರಿಗಳು ಶಾಲಾ ಆವರಣದಲ್ಲಿ ತುಂಬಿಕೊಂಡಿದ್ದ ನೀರನ್ನು ಹೊರಹಾಕಿ     ಗ್ರಾಮದ ಮಧ್ಯಭಾಗದಲ್ಲಿ   ದೇವಸ್ಥಾನದ ಆವರಣದಲ್ಲಿ   ನಡೆಸುತ್ತಿದ್ದ ತರಗತಿಗಳನ್ನು ಸುವ್ಯವಸ್ಥಿತವಾದ ರೀತಿಯಲ್ಲಿ ಪಕ್ಕದ ಶಾಲೆಯಲ್ಲಿ   ನಡೆಯುವಂತೆ ಕ್ರಮ ವಹಿಸಿದ್ದಾರೆ.


ಗೋ ರಾ ಶ್ರೀನಿವಾಸ...

ಮೊ:9845856139.


ಸನ್ಮಿತ್ರ ಅವರಿಂದ ಸಂಬಂಧಿತ ವೀಡಿಯೊಗಳು


ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in channapatna »

ನಗರದ ವಿವಿಧ ದೇವಾಲಯಗಳಲ್ಲಿ ವಿಜೃಂಭಣೆಯಿಂದ ಜರುಗಿದ ಹನುಮ ಜಯಂತಿ
ನಗರದ ವಿವಿಧ ದೇವಾಲಯಗಳಲ್ಲಿ ವಿಜೃಂಭಣೆಯಿಂದ ಜರುಗಿದ ಹನುಮ ಜಯಂತಿ

ಚನ್ನಪಟ್ಟಣ: ನಗರ ಸೇರಿದಂತೆ ತಾಲೂಕಿನಾದ್ಯಂತ ಹಲವಾರು ಆಂಜನೇಯ ದೇವಾಲಯಗಳಲ್ಲಿ ಸೋಮವಾರ ವಿಜೃಂಭಣೆಯಿಂದ ಹನುಮ ಜಯಂತಿಯನ್ನು ಆಚರಿಸಲಾಯಿತು. ಪಟ್ಟಣ

ರಸ್ತೆ ಅಭಿವೃದ್ಧಿಗೆ ಅಡ್ಡಲಾಗಿದ್ದ ಖಬರಸ್ಥಾನ ಮತ್ತು ದೇವಸ್ಥಾನವನ್ನು ಮುಂಜಾನೆ ತೆರವುಗೊಳಿಸಿದ ಅಧಿಕಾರಿಗಳು
ರಸ್ತೆ ಅಭಿವೃದ್ಧಿಗೆ ಅಡ್ಡಲಾಗಿದ್ದ ಖಬರಸ್ಥಾನ ಮತ್ತು ದೇವಸ್ಥಾನವನ್ನು ಮುಂಜಾನೆ ತೆರವುಗೊಳಿಸಿದ ಅಧಿಕಾರಿಗಳು

ಚನ್ನಪಟ್ಟಣ: ಸಾತನೂರು ರಸ್ತೆ ಎಂದೆ ಪ್ರಸಿದ್ದಿಯಾದ ಚನ್ನಪಟ್ಟಣ-ಹಲಗೂರು ರಾಜ್ಯ ಹೆದ್ದಾರಿಯಲ್ಲಿದ್ದ ನಗರಕ್ಕೆ ಹೊಂದಿಕೊಂಡಿರುವ ರಸ್ತೆಯ ಪಕ್ಕದಲ್ಲಿದ್

ಶೋಕಿಗಾಗಿ ಅಧ್ಯಕ್ಷ, ಪೌರಾಯುಕ್ತರಾಗಿದ್ದೀರಿ ಮೊದಲು ಅಭಿವೃದ್ಧಿ ಮಾಡಿ ನಗರಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯರ ಆಕ್ರೋಶ
ಶೋಕಿಗಾಗಿ ಅಧ್ಯಕ್ಷ, ಪೌರಾಯುಕ್ತರಾಗಿದ್ದೀರಿ ಮೊದಲು ಅಭಿವೃದ್ಧಿ ಮಾಡಿ ನಗರಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯರ ಆಕ್ರೋಶ

ಚನ್ನಪಟ್ಟಣ: ನೀವು ಚನ್ನಪಟ್ಟಣ ನಗರವನ್ನು ಅಭಿವೃದ್ಧಿ ಮಾಡಲು ಬಂದವರಲ್ಲಾ, ಕೇವಲ ಶೋಕಿಗಾಗಿ ಅಧ್ಯಕ್ಷ ಮತ್ತು ಪೌರಾಯುಕ್ತರಾಗಿದ್ದೀರಿ, ನಿಮ್ಮ ಶೋ

ಎನ್ಎಸ್ ಗೌಡರಿಗೆ ಗಣ್ಯರಿಂದ ಶ್ರದ್ಧಾಂಜಲಿ
ಎನ್ಎಸ್ ಗೌಡರಿಗೆ ಗಣ್ಯರಿಂದ ಶ್ರದ್ಧಾಂಜಲಿ

ಚನ್ನಪಟ್ಟಣ.ನ.೩೦: ನಗರದ ಒಕ್ಕಲಿಗರ ಸಾರ್ವಜನಿಕ ವಿದ್ಯಾರ್ಥಿ ನಿಲಯದ ೩೨ವರ್ಷಗಳ ಕಾಲ ದೀರ್ಘಾ ವಧಿ ಅಧ್ಯಕ್ಷರಾಗಿದ್ದ  ಎನ್. ಎಸ್ ಗೌಡ ಅವರ

ಪುರಭವನ ನೆಲಸಮಗೊಳಿಸದಂತೆ ನಗರಸಭೆ ಅಧಿಕಾರಿಗಳಿಗೆ ಮನವಿ
ಪುರಭವನ ನೆಲಸಮಗೊಳಿಸದಂತೆ ನಗರಸಭೆ ಅಧಿಕಾರಿಗಳಿಗೆ ಮನವಿ

ಚನ್ನಪಟ್ಟಣ.ನ.೨೯: ನಗರದ ಪುರಭವನದ ಮುಂದೆ ಸಭೆ ಸೇರಿದ್ದ ನಾಗರಿಕ ಹೋರಾಟ ಸಮಿತಿಯ ಪ್ರಮುಖರು ಪುರಭವನ ಐತಿಹಾಸಿಕವಾದುದು. ಇದನ್ನು ಉಳಿಸಿ, ಕೆಡವಲು ಅವಕ

ನಗರದಲ್ಲಿನ ಪುರಭವನ ಕೆಡವದಂತೆ ಆಗ್ರಹಿಸಲು ಸಭೆ. ಸರ್ವರೂ ಭಾಗವಹಿಸಲು ಕರೆ
ನಗರದಲ್ಲಿನ ಪುರಭವನ ಕೆಡವದಂತೆ ಆಗ್ರಹಿಸಲು ಸಭೆ. ಸರ್ವರೂ ಭಾಗವಹಿಸಲು ಕರೆ

ಚನ್ನಪಟ್ಟಣ


ತಾಲ್ಲೂಕಿನ ಸನ್ಮಿತ್ರರೇ;

*ನಗರದ ಹೃದಯ ಭಾಗದ

ತಾಲ್ಲೂಕಿನಲ್ಲಿ ನಿಂತ ನೀರಾದ ಕಾಂಗ್ರೆಸ್ ಪಕ್ಷ ಬಲಪಡಿಸಲು ಡಿ ಕೆ ಬ್ರದರ್ಸ್ ಹರಸಾಹಸ ಸೋಮವಾರ ಇನ್ನಿಬ್ಬರಿಂದ ಅರ್ಜಿ
ತಾಲ್ಲೂಕಿನಲ್ಲಿ ನಿಂತ ನೀರಾದ ಕಾಂಗ್ರೆಸ್ ಪಕ್ಷ ಬಲಪಡಿಸಲು ಡಿ ಕೆ ಬ್ರದರ್ಸ್ ಹರಸಾಹಸ ಸೋಮವಾರ ಇನ್ನಿಬ್ಬರಿಂದ ಅರ್ಜಿ

ಚನ್ನಪಟ್ಟಣ: ೨೦೨೩ ರ ಚುನಾವಣೆಗೆ ಇನ್ನೂ ಆರು ತಿಂಗಳ ಸಮಯವಿದೆ. ರಾಜ್ಯಾದ್ಯಂತ ಇನ್ನು ಮುಂದೆ ಆರಂಭವಾಗುವ ಚುನಾವಣಾ ಕಾವು ಚನ್ನಪಟ್ಟಣ ಕ್ಷೇತ್ರದಲ್ಲಿ ಮಾತ್ರ ವರ್ಷದ ಹಿಂದೆಯೇ ಆರಂಭವಾಗಿದ್ದು ವಿಶ

ಚೋಳಮಾರನಹಳ್ಳಿ ಸರ್ವೆ ನಂ.90ರ ಕಡತ ತಾಲ್ಲೂಕು ಕಛೇರಿಯಿಂದ ಕಾಣೆ: ಇಬ್ಬರ ಮೇಲೆ ಎಫ್ಐಆರ್ ದಾಖಲು
ಚೋಳಮಾರನಹಳ್ಳಿ ಸರ್ವೆ ನಂ.90ರ ಕಡತ ತಾಲ್ಲೂಕು ಕಛೇರಿಯಿಂದ ಕಾಣೆ: ಇಬ್ಬರ ಮೇಲೆ ಎಫ್ಐಆರ್ ದಾಖಲು

ಚನ್ನಪಟ್ಟಣ: ಕಳೆದ ಎರಡು ವರ್ಷಗಳ ಹಿಂದಿನಿಂದಲೂ ತಾಲ್ಲೂಕು ಕಛೇರಿಯಲ್ಲಿ ಅಕ್ರಮ ವ್ಯವಹಾರ, ಅಕ್ರಮ ಖಾತೆ, ನಕಲಿ ಖಾತೆ ಸೃಷ್ಠಿ, ಕಡತಗಳು ಅಭಿಲೇಖಾ

ಒತ್ತಡದ ವೃತ್ತಿ ಜೀವನದಲ್ಲಿಯೂ ಸಂಭ್ರಮಿಸುವುದನ್ನು ಕಲಿಯಿರಿ ಐಜಿಪಿ ಕೆ ಚಂದ್ರಶೇಖರ
ಒತ್ತಡದ ವೃತ್ತಿ ಜೀವನದಲ್ಲಿಯೂ ಸಂಭ್ರಮಿಸುವುದನ್ನು ಕಲಿಯಿರಿ ಐಜಿಪಿ ಕೆ ಚಂದ್ರಶೇಖರ

ಚನ್ನಪಟ್ಟಣ: ಪೋಲೀಸ್ ವೃತ್ತಿಯೇ ಒತ್ತಡದ ವೃತ್ತಿಯಾಗಿದ್ದು, ಒತ್ತಡದ ಕೆಲಸದ ಜೊತೆಗೆ ತಮ್ಮ ಕುಟುಂಬಕ್ಕೂ ಸಮಯ ನೀಡಿ, ಕ್ರೀಡೆಯಲ್ಲಿ ಭಾಗವಹಿಸುವ ಮ

ಕನಕದಾಸರು ದಾಸ ಶ್ರೇಷ್ಠರಲ್ಲೇ ಶ್ರೇಷ್ಠರು ತಹಶಿಲ್ದಾರ್ ಸುದರ್ಶನ್
ಕನಕದಾಸರು ದಾಸ ಶ್ರೇಷ್ಠರಲ್ಲೇ ಶ್ರೇಷ್ಠರು ತಹಶಿಲ್ದಾರ್ ಸುದರ್ಶನ್

ಚನ್ನಪಟ್ಟಣ: ದಾಸಸಾಹಿತ್ಯದಲ್ಲೇ ಶ್ರೇಷ್ಠ ಸಾಹಿತ್ಯ ಕನಕದಾಸ ಸಾಹಿತ್ಯ. ಈ ಸಾಹಿತ್ಯವನ್ನು ಓದುವ ಮೂಲಕ ನಾವೆಲ್ಲರೂ ನಮ್ಮ ಬದುಕಿನಲ್ಲಿ ಸಾಹಿತ್ಯದ

Top Stories »  


Top ↑