Tel: 7676775624 | Mail: info@yellowandred.in

Language: EN KAN

    Follow us :


ಗೋಮಾಳದಲ್ಲಿ ಶೆಡ್ ನಿರ್ಮಿಸಿದ ವಸತಿ ರಹಿತರನ್ನು ಒಕ್ಕಲೆಬ್ಬಿಸಿದ ಬಲಾಢ್ಯರು, ರೈತಸಂಘ ಆರೋಪ

Posted date: 03 Nov, 2023

Powered by:     Yellow and Red

ಗೋಮಾಳದಲ್ಲಿ ಶೆಡ್ ನಿರ್ಮಿಸಿದ ವಸತಿ ರಹಿತರನ್ನು ಒಕ್ಕಲೆಬ್ಬಿಸಿದ ಬಲಾಢ್ಯರು, ರೈತಸಂಘ ಆರೋಪ

ಚನ್ನಪಟ್ಟಣ: ತಾಲ್ಲೂಕಿನ ಭೈರಾಪಟ್ಟಣ ಗ್ರಾಮದಲ್ಲಿರುವ ಸರ್ಕಾರಿ ಗೋಮಾಳದಲ್ಲಿ ಮನೆ ಇಲ್ಲದ ನಾಲ್ಕು ಮಂದಿ ಖಾಲಿ ಜಾಗದಲ್ಲಿ ಶೆಡ್ ನಿರ್ಮಿಸಿಕೊಂಡಿದ್ದು, ಅವುಗಳನ್ನು ಸ್ಥಳೀಯ ಬಲಾಢ್ಯರು ರಾತ್ರೋರಾತ್ರಿ ಕಿತ್ತೆಸೆದಿದ್ದಾರೆ. ಇದಕ್ಕೆ ತಹಶಿಲ್ದಾರ್ ರವರ ಪರೋಕ್ಷ ಬೆಂಬಲವಿದೆ ಎಂಬ ಗುಮಾನಿ ಇದೆ ಎಂದು ನಗರದಲ್ಲಿ ರೈತ ಸಂಘದ ಮುಖಂಡರು ಆರೋಪಿಸಿದ್ದಾರೆ.


ಭೈರಾಪಟ್ಟಣ ಗ್ರಾಮದಲ್ಲಿ ಸರ್ವೇ ನಂಬರ್ ೬೩೪ರಲ್ಲಿ ೩೦,೩೭ ಎಕರೆ ಸರ್ಕಾರಿ ಗೋಮಾಳವಿದೆ. ಕೆಲವರು ವ್ಯವಸಾಯ ಮಾಡುತ್ತಿದ್ದಾರೆ. ಇದುವರೆಗೂ ಯಾರಿಗೂ ಸಾಗುವಳಿ ಚೀಟಿ ನೀಡಿಲ್ಲಾ. ಅದೇ ಸರ್ವೇ ನಂಬರಿನಲ್ಲಿರುವ ಖಾಲಿ ಜಾಗದಲ್ಲಿ ನಾಲ್ಕು ಮಂದಿ ವಸತಿ ಹೀನರು ಮನೆ ನಿರ್ಮಿಸಿಕೊಳ್ಳಲು ಅವಕಾಶ ಮಾಡಿಕೊಡಬೇಕೆಂದು ಇತ್ತೀಚೆಗೆ ನಡೆಸಿದ ಪ್ರತಿಭಟನಾ ಸಂದರ್ಭದಲ್ಲಿ ತಹಶಿಲ್ದಾರ್ ಮಹೇಂದ್ರ ರವರಿಗೆ ಮನವಿ ಮಾಡಲಾಗಿತ್ತು. ಸ್ಪಂದಿಸಿದ ಅವರು ಶೆಡ್ ನಿರ್ಮಿಸಿಕೊಳ್ಳಲಿ, ಸರ್ಕಾರ ಮುಂದಿನ ದಿನಗಳಲ್ಲಿ ಸಕ್ರಮ ಮಾಡಿದರೆ ಹಕ್ಕುಪತ್ರ ನೀಡಲಾಗುವುದು ಎಂದು ಮಾಹಿತಿ ನೀಡಿದ್ದರು ಎನ್ನಲಾಗಿದೆ.


ತದನಂತರ ನಾಲ್ಕು ಮಂದಿ ವಸತಿ ಹೀನರು ಶೆಡ್ ನಿರ್ಮಿಸಿದ್ದಾರೆ. ಆದರೆ ಸ್ಥಳೀಯರು ಶೆಡ್ ಗಳನ್ನು ಕಿತ್ತೆಸೆದಿದ್ದಾರೆ. ಈ ವಿಚಾರವಾಗಿ ಪೋಲಿಸರಿಗೂ ದೂರು ನೀಡಲಾಗಿದ್ದು, ಕಿತ್ತು ಹಾಕಿದವರನ್ನು ದಾಖಲೆ ಸಮೇತ ಕರೆಸಿದ್ದರಾದರೂ, ಅವರು ದಾಖಲೆ ಇಲ್ಲದೆ ವಿಚಾರಣೆ ಎದುರಿಸಿದ್ದಾರೆ. ತಹಶಿಲ್ದಾರ್ ರವರನ್ನು ಭೇಟಿ ಮಾಡಲು ಹಲವಾರು ಬಾರಿ ಪ್ರಯತ್ನಿಸಿದರಾದರೂ ಅವರು ಸಮಯ ನೀಡಿಲ್ಲಾ. ೦೨/೧೦ನೆಯ ಗುರುವಾರ ರಾತ್ರಿ ಖುದ್ದು ತಹಶಿಲ್ದಾರ್ ರವರೇ ಹೋಗಿ ಶೆಡ್ ತೆರವುಗೊಳಿಸುವಂತೆ ಸೂಚಿಸಿರುವುದು ಅವರ ಮೇಲೆ ಅನುಮಾನ ಮೂಡುವಂತಾಗಿದೆ ಎಂದು ರೈತ ಸಂಘದ ಹಿರಿಯ ಮುಖಂಡ ಬೋರಾಪುರ ಗ್ರಾಮದ ಶಂಕರೇಗೌಡ ತಿಳಿಸಿದರು.


ರಾಮನಗರ ಜಿಲ್ಲೆಯ ಮಹಿಳಾ ಘಟಕದ ಅಧ್ಯಕ್ಷೆ ಶೋಭಾ ಮಾತನಾಡಿ ಭೈರಾಪಟ್ಟಣ ಗ್ರಾಮದಲ್ಲಿ ಗೋಮಾಳವಿದ್ದು, ಇದು ಸರ್ಕಾರದ ಆಸ್ತಿಯಾಗಿದೆ. ಇದರಲ್ಲಿ ಶೆಡ್ ನಿರ್ಮಾಣ ಮಾಡಿದವರಿಗೆ ಧಮಕಿ ಹಾಕಿ ಶೆಡ್ ಕಿತ್ತು ಬಿಸಾಕಿದ್ದಾರೆ. ಇದಕ್ಕೆ ತಹಶಿಲ್ದಾರ್ ರವರೇ ಖುದ್ದು ಬಂದಿದ್ದು ನಮಗೆ ಬೇಸರ ತರಿಸಿದೆ. ಅದನ್ನು ಕೇಳಲೆಂದು ಬಂದರೆ ತಹಶಿಲ್ದಾರ್ ರವರು ಸಿಗಲಿಲ್ಲ. ಮೊಬೈಲ್ ಕರೆಯ ಮೂಲಕವೂ ಸರಿಯಾದ ಉತ್ತರ ನೀಡಲಿಲ್ಲ. ಗ್ರೇಡ್೨ ತಹಶಿಲ್ದಾರ್ ಆಗಲಿ ಮತ್ತಿತರ ಕಂದಾಯ ಇಲಾಖೆಯ ಅಧಿಕಾರಿಗಳಾಗಲಿ ಸ್ಪಂದಿಸದೇ ಉದಾಸೀನ ಮಾಡಿದ್ದು, ಹೀಗೆ ಮುಂದುವರೆದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುತ್ತದೆ ಎಂದರು.


ಈ ಸಂದರ್ಭದಲ್ಲಿ ಕೋಡಿಹಳ್ಳಿ ಚಂದ್ರು, ಸಿಂಗರಾಜಿಪುರ ಗ್ರಾಮದ ಚಾಮರಾಜು, ತಾಲ್ಲೂಕು ಅಧ್ಯಕ್ಷರಾದ ಶ್ವೇತಾ ಭೈರಾಪಟ್ಟಣ, ಸುಧಾ, ಪುಟ್ಟಮ್ಮ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in channapatna »

ಎಂ. ರಾಜು ರವರ ಭೂಶಾಂತಿ ಕಾರ್ಯಕ್ಕೆ ಆಗಮಿಸುವಂತೆ, ಕುಟುಂಬದವರ ಮನವಿ
ಎಂ. ರಾಜು ರವರ ಭೂಶಾಂತಿ ಕಾರ್ಯಕ್ಕೆ ಆಗಮಿಸುವಂತೆ, ಕುಟುಂಬದವರ ಮನವಿ

ಚನ್ನಪಟ್ಟಣ: ತಾಲ್ಲೂಕಿನ ಮತ್ತಿಕೆರೆ-ಶೆಟ್ಟಿಹಳ್ಳಿ ನಿವಾಸಿ, ರಾಮನಗರ ಜಿಲ್ಲಾ ಕನ್ನಡ ಸಂಸ್ಕೃತಿ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕರಾಗಿದ್ದ, ದಿವಂಗತ ಎಂ.

ಮತ್ತೀಕೆರೆ ಗ್ರಾಪಂಗೆ ನೂತನ ಅಧ್ಯಕ್ಷರಾದ ಯಶವಂತಗೌಡ
ಮತ್ತೀಕೆರೆ ಗ್ರಾಪಂಗೆ ನೂತನ ಅಧ್ಯಕ್ಷರಾದ ಯಶವಂತಗೌಡ

ಚನ್ನಪಟ್ಟಣ:ತಾಲೂಕಿನ ಮತ್ತೀಕೆರೆ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಎಂ.ಎಸ್.ಯಶವಂತಗೌಡ (ಯತೀಶ್) ಅವಿರೋಧ ಅಯ್ಕೆಯಾಗಿದ್ದಾರೆ. 

ನಗರ ಸಭೆಯಲ್ಲಿ ಪ್ರಥಮ ಪ್ರಜೆ ಮತ್ತು ಪೌರಾಯುಕ್ತರ ನಡುವೆ ತಾರಕಕ್ಕೇರಿದ ಮುಸುಕಿನ ಗುದ್ದಾಟ, ತನಿಖೆಗೆ ಆದೇಶಿಸಿದ ಡಿ.ಸಿ. ತನಿಖಾ ತಂಡ ಆಗಮನ
ನಗರ ಸಭೆಯಲ್ಲಿ ಪ್ರಥಮ ಪ್ರಜೆ ಮತ್ತು ಪೌರಾಯುಕ್ತರ ನಡುವೆ ತಾರಕಕ್ಕೇರಿದ ಮುಸುಕಿನ ಗುದ್ದಾಟ, ತನಿಖೆಗೆ ಆದೇಶಿಸಿದ ಡಿ.ಸಿ. ತನಿಖಾ ತಂಡ ಆಗಮನ

ರಾಮನಗರ : ಚನ್ನಪಟ್ಟಣ: ನಗರಸಭೆಯಲ್ಲಿ ಕಳೆದ ಆರು ತಿಂಗಳುಗಳಿಂದ ನಗರದ ಪ್ರಥಮ ಪ್ರಜೆಯಾದ ಪ್ರಶಾಂತ್ ಮತ್ತು ಪೌರಾಯುಕ್ತ ಸಿ. ಪುಟ್ಟಸ್ವಾಮಿ ನಡುವಿನ ಸಂಘರ್ಷದ

ಸರ್ವರ ಬಾಳಿಗೂ ಸಂವಿಧಾನವೇ ಮೂಲ, ನ್ಯಾಯಾಧೀಶೆ ಶುಭಾ
ಸರ್ವರ ಬಾಳಿಗೂ ಸಂವಿಧಾನವೇ ಮೂಲ, ನ್ಯಾಯಾಧೀಶೆ ಶುಭಾ

ಚನ್ನಪಟ್ಟಣ: ಭಾರತದ ಪ್ರತಿಯೊಬ್ಬ ಪ್ರಜೆಯ ಹಕ್ಕುಗಳ ಮೂಲ ಸಂವಿಧಾನವೇ ಆಗಿದೆ, ಪ್ರತಿಯೊಬ್ಬರಿಗೂ ಸಂವಿಧಾನವೇ ಉಸಿರಾಗಬೇಕು ಎಂದು ನಗರದ ನ್ಯಾಯಾಲಯದ ಆವರ

ನಗರ ಸಿಪಿಐ ವರ್ಗಾವಣೆ, ನೂತನ ಸಿಪಿಐ ರವಿಕಿರಣ್
ನಗರ ಸಿಪಿಐ ವರ್ಗಾವಣೆ, ನೂತನ ಸಿಪಿಐ ರವಿಕಿರಣ್

  ಚನ್ನಪಟ್ಟಣ,ಫೆ:೧-ಲೋಕಸಭಾ ಚುನಾವಣೆಯ ಹೊಸ್ತಿಲಲ್ಲೇ ಪೊಲೀಸ್ ಇಲಾಖೆಯಲ್ಲಿ ವರ್ಗಾವಣೆ  ಪರ್ವ ಪ್ರಾರಂಭವಾಗಿದ್ದು, ಅದಕ್ಕೆ ಪೂರಕ ವೆಂಬಂತ್ತೆ ನಗರ ವೃತ್ತ ನಿರೀಕ್ಷಕರ ಕಚೇರಿಯಲ್ಲಿ ಸಿ.ಪಿ.ಐ

ಯುವ ಪೀಳಿಗೆ ಹಕ್ಕು ಮತ್ತು ಕರ್ತವ್ಯ ಮರೆಯುತ್ತಿದೆ. ಮಂಜುನಾಥ್
ಯುವ ಪೀಳಿಗೆ ಹಕ್ಕು ಮತ್ತು ಕರ್ತವ್ಯ ಮರೆಯುತ್ತಿದೆ. ಮಂಜುನಾಥ್

ಚನ್ನಪಟ್ಟಣ: ಇಂದಿನ ವಿದ್ಯಾರ್ಥಿ ಸಮೂಹ ಹಾಗೂ ಯುವ ಪೀಳಿಗೆಯು ಹಕ್ಕು ಮತ್ತು ಕರ್ತವ್ಯಗಳನ್ನು ಮರೆಯುತ್ತಿದ್ದಾರೆ. ಸಂವಿಧಾನದ ಆಶಯಗಳಿಗೆ ಬದ್ದರಾಗುತ್ತಿಲ್ಲಾ

ಪ್ರಾಧಿಕಾರ ಅಧ್ಯಕ್ಷ ಸ್ಥಾನ ದಲಿತ ಸಮುದಾಯಕ್ಕೆ ನೀಡಿ ಮುಯ್ಯಿ ತೀರಿಸಿ, ಸರ್ಕಾರಕ್ಕೆ ಆಗ್ರಹ
ಪ್ರಾಧಿಕಾರ ಅಧ್ಯಕ್ಷ ಸ್ಥಾನ ದಲಿತ ಸಮುದಾಯಕ್ಕೆ ನೀಡಿ ಮುಯ್ಯಿ ತೀರಿಸಿ, ಸರ್ಕಾರಕ್ಕೆ ಆಗ್ರಹ

ಚನ್ನಪಟ್ಟಣ: ದಲಿತರು ದನಿಯಿಲ್ಲದ ಸಮುದಾಯ ಎಂಬಂತಾಗಿದೆ. ದಲಿತರಿಗೆ ಪ್ರತಿ ಹಂತದಲ್ಲೂ ಅನ್ಯಾಯವಾಗುತ್ತಿದೆ. ಅದು ತಾಲ್ಲೂಕಿನಲ್ಲಿಯೂ ಪ್ರತಿಬಿಂಬಿಸುತ್ತಿದೆ,

ಗವಿರಂಗಸ್ವಾಮಿ ಬೆಟ್ಟದಿಂದ ಜಿಗಿದು ಯುವಕ ಆತ್ಮಹತ್ಯೆ
ಗವಿರಂಗಸ್ವಾಮಿ ಬೆಟ್ಟದಿಂದ ಜಿಗಿದು ಯುವಕ ಆತ್ಮಹತ್ಯೆ

ಚನ್ನಪಟ್ಟಣ: ಜೀವನದಲ್ಲಿ ಜಿಗುಪ್ಸೆಗೊಂಡ ಬೆಂಗಳೂರಿನ ವಿವಾಹಿತನೋರ್ವ ಬೆಟ್ಟದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ, ತಾಲ್ಲೂಕಿನ ಅಕ್ಕೂರು ಪೊಲೀಸ್

ರಾಮಂದಿರ ಪ್ರತಿ ಗ್ರಾಮದಲ್ಲಿಯೂ ಆಗಬೇಕೆಂಬುದು ಭಾರತೀಯರ ಆಸೆ, ಡಿ ಕೆ ಸುರೇಶ್
ರಾಮಂದಿರ ಪ್ರತಿ ಗ್ರಾಮದಲ್ಲಿಯೂ ಆಗಬೇಕೆಂಬುದು ಭಾರತೀಯರ ಆಸೆ, ಡಿ ಕೆ ಸುರೇಶ್

ಚನ್ನಪಟ್ಟಣ: ಅಯೋಧ್ಯೆಯಲ್ಲಿನ ರಾಮಮಂದಿರ ನಿರ್ಮಾಣ ಸಮಸ್ತ ಭಾರತೀಯರ ಬಹು ದೊಡ್ಡ ಆಸೆಯಾಗಿದೆ.  ಒಬ್ಬರು ಒಂದು ಕಡೆ ಮಾತ್ರ ರಾಮಮಂದಿರ ನಿರ್ಮಾಣ ಮಾಡಬೇಕೆಂದು

ವಕೀಲ ಎಂ ಕೆ ನಿಂಗಪ್ಪ ರವರಿಂದ ಚಕ್ಕಲೂರು ಸರ್ಕಾರಿ ಶಾಲೆಗೆ ಪ್ರಿಂಟರ್ ಸ್ಕ್ಯಾನರ್ ಕೊಡುಗೆ
ವಕೀಲ ಎಂ ಕೆ ನಿಂಗಪ್ಪ ರವರಿಂದ ಚಕ್ಕಲೂರು ಸರ್ಕಾರಿ ಶಾಲೆಗೆ ಪ್ರಿಂಟರ್ ಸ್ಕ್ಯಾನರ್ ಕೊಡುಗೆ

ಚನ್ನಪಟ್ಟಣ : ೨೦೨೪ರ ನೂತನ ವರ್ಷದಾರಂಭ ಪ್ರಯುಕ್ತ ಸರ್ಕಾರಿ ಶಾಲಾ ಮಕ್ಕಳನ್ನು ಶೈಕ್ಷಣಿಕವಾಗಿ, ಕ್ರೀಡಾಶಕ್ತರಾಗಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಿ.ಕೆ.ಚಾ

Top Stories »  


Top ↑