ರಾಮನಗರದಲ್ಲಿ ಟೆಲಿ ಐಸಿಯು ಸೇವೆ: ಡಾ. ಅಶ್ವತ್ಥನಾರಾಯಣ
ರಾಮನಗರ:ಮೇ/೧೧/೨೦/ಸೋಮವಾರ. ತುರ್ತು ನಿರ್ವಹಣಾ (ಐಸಿಯು) ಘಟಕ ನಿರ್ವಹಣೆಗೆ ಅಗತ್ಯ ಇರುವ ತಜ್ಞ ವೈದ್ಯರ ಕೊರತೆ ನೀಗಿಸಲು ಜಿಲ್ಲೆಯ ಕೊವಿಡ್-೧೯ ಆಸ್ಪತ್ರೆಯಲ್ಲಿ ಟೆಲಿ ಐಸಿಯು ಸೇವೆ ಆರಂಭಿಸಲಾಗಿದೆ ಎಂದು ಎಂದು ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಹೇಳಿದ್ದಾರೆ.
ಕೊವಿಡ್-೧೯ ನಿವರ್ಹಣೆಗೆ ನಿಗದಿಯಾಗಿರುವ ಆಸ್ಪತ್ರೆಗೆ ಸೋಮವಾರ ಭೇಟಿ ನೀಡಿ ಲಭ್ಯ ಇರುವ ಸೌಲಭ್ಯ ಪರಿಶೀಲಿಸಿ, ಟೆಲಿ ಐಸಿಯು ಘಟಕ ಉದ್ಘಾಟಿಸಿದ ನಂತರ ಸುದ್ದಿಗಾರರ ಜತೆ ಅವರು ಮಾತನಾಡಿದರು.
"ರಾಮನಗರದ ಕೊವಿಡ್-೧೯ ಆಸ್ಪತ್ರೆಯಲ್ಲಿ ೨೪ ತಾಸು ಕಾರ್ಯನಿರ್ವಹಿಸುವ ೧೬ ಹಾಸಿಗೆಯ ಟೆಲಿ ಐಸಿಯೂ ವ್ಯವಸ್ಥೆ ಆರಂಭಿಸಲಾಗಿದೆ. ಕಮ್ಯಾಂಡ್ ರೂಮ್ನಿಂದಲೇ ತಜ್ಞ ವೈದ್ಯರು ಈ ರಿಮೋಟ್ ಐಸಿಯು ಘಟಕವನ್ನು ನಿರ್ವಹಿಸಲು ಸಾಧ್ಯವಿದ್ದು, ಐಸಿಯುವಿನಲ್ಲಿರುವ ರೋಗಿಗಳ ಸ್ಥಿತಿಯನ್ನು ಪರಿಶೀಲಿಸಿ ಇಲ್ಲಿನ ವೈದ್ಯ ಸಿಬ್ಬಂದಿಗೆ ಅಗತ್ಯ ಸೂಚನೆ ನೀಡಬಹುದು," ಎಂದು ಅವರು ವಿವರಿಸಿದರು.
"'ಆ್ಯಕ್ಟ್' ಸಂಸ್ಥೆ ಈ ಟೆಲಿ ಐಸಿಯು ಸೇವೆಯನ್ನು ಉಚಿತವಾಗಿ ಒದಗಿಸಿದ್ದು, ಇನ್ನೂ ಹಲವು ಸಂಸ್ಥೆಗಳು ಕೊವಿಡ್-೧೯ ವಿರುದ್ಧದ ಹೋರಾಟದಲ್ಲಿ ಕೈ ಜೋಡಿಸಲು ಮುಂದೆ ಬಂದಿರುವುದು ಸಂತಸದ ವಿಷಯ. ಸ್ಯಾಂಪಲ್ ಕಿಟ್ ತಯಾರಿಕೆ ಸೇರಿದಂತೆ ತಂತ್ರಜ್ಞಾನವನ್ನು ಬಳಸಿಕೊಂಡು ಹಲವು ಸ್ಟಾರ್ಟ್ಅಪ್ಗಳು ಹೊಸ ಆವಿಷ್ಕಾರದಲ್ಲಿ ನಿರತವಾಗಿವೆ. ಸ್ಟಾರ್ಟ್ ಅಪ್ ವಿಷನ್ ಗ್ರೂಪ್ನ ಅಧ್ಯಕ್ಷ ಪ್ರಶಾಂತ್ ಪ್ರಕಾಶ್ ಕಳೆದ ಒಂದು ತಿಂಗಳಿಂದ ಇಂಥ ಹಲವಾರು ಪ್ರಯತ್ನಗಳಿಗೆ ಸಹಕರಿಸಿದ್ದಾರೆ,"ಎಂದು ತಿಳಿಸಿದರು.
*ಲ್ಯಾಬ್ ಆರಂಭ*
"ರಾಮನಗರದಲ್ಲಿ ಪ್ರಯೋಗಾಲಯ ಆರಂಭ ಮಾಡಲು ೧.೫ ಕೋಟಿ ರೂ. ಹಣ ಹಂಚಿಕೆ ಆಗಿದೆ. ಅಗತ್ಯ ಇರುವ ಹೆಚ್ಚುವರಿ ಹಣ ಒದಗಿಸಿ ಸುಸಜ್ಜಿತ ಲ್ಯಾಬ್ ಸ್ಥಾಪಿಸಲಾಗುವುದು,"ಎಂದು ಉಪ ಮುಖ್ಯ ಮಂತ್ರಿಗಳು ತಿಳಿಸಿದರು.
ಗೋ ರಾ ಶ್ರೀನಿವಾಸ...
ಮೊ:9845856139.
Recent news in health »
ವ್ಯವಹಾರಕ್ಕಾಗಿ ಆಸ್ಪತ್ರೆಯಲ್ಲಾ, ಸೇವೆಗಾಗಿ ನಮ್ಮ ಆಸ್ಪತ್ರೆ. ಕಾಂಗರೂ ಆಸ್ಪತ್ರೆಯ ಸಂಸ್ಥಾಪಕ ಡಾ ಶೇಖರ್ ಸುಬ್ಬಯ್ಯ
ರಾಮನಗರ: ನಾವು ಹಣಕ್ಕಾಗಿ ಆಸ್ಪತ್ರೆ ನಡೆಸುವುದಿಲ್ಲ, ಇದೊಂದು ಸೇವೆ ಎಂದು ಪರಿಗಣಿಸಿ ಆಸ್ಪತ್ರೆ ನಡೆಸುತ್ತಿದ್ದೇವೆ. ಬೆಂಗಳೂರು ಮೈಸೂರು ಸೇರಿದಂತೆ ನಾಲ್ಕು
೪೬ ವರ್ಷದ ಮಹಿಳೆಯ ಹೊಟ್ಟೆಯಲ್ಲಿದ್ದ ೧೦ ಕಿಲೋ ಕ್ಯಾನ್ಸರ್ ಗಡ್ಡೆ ಹೊರತೆಗೆದ ಬಾಲು ಆಸ್ಪತ್ರೆಯ ವೈದ್ಯರು
ಚನ್ನಪಟ್ಟಣ: ತಾಲ್ಲೂಕಿನ ಗ್ರಾಮವೊಂದರ ೪೬ ವರ್ಷದ ಮಹಿಳೆಯೊಬ್ಬರ ಗರ್ಭ (ಅಂಡಾಶಯ) ದಲ್ಲಿದ್ದ ಬರೋಬ್ಬರಿ ೧೦ ಕಿಲೋ ೩೦೦ ಗ್ರಾಂ ತೂಕದ ಕ್ಯಾನ್ಸರ್ ಗಡ್ಡೆ ಯನ್ನ
ಹೊಂಗನೂರು, ಕೋಡಂಬಳ್ಳಿ ಗ್ರಾಮದಲ್ಲಿ ಪರವಾನಗಿ ಇಲ್ಲದ ಖಾಸಗಿ ಆಸ್ಪತ್ರೆಗಳಿಗೆ ಬೀಗ ಜಡಿದ ಟಿಹೆಚ್ಓ
ಚನ್ನಪಟ್ಟಣ: ತಾಲ್ಲೂಕಿನ ಹೊಂಗನೂರು ಗ್ರಾಮದಲ್ಲಿ ಗೋಪಿ ಕ್ಲಿನಿಕ್ ಎಂಬ ಖಾಸಗಿ ಆಸ್ಪತ್ರೆ ಇದ್ದು, ಗೋಪಿ ಎಂಬುವವರು ವೈದ್ಯರಾಗಿ ಸೇವೆ ನಿರ್ವಹಿಸುತ್ತಿದ್ದಾರ
ಉತ್ತಮ ಆರೋಗ್ಯಕ್ಕೆ ಆಯುರ್ವೇದವೇ ದಿವ್ಯ ಔಷಧ ಡಾ ಸಹನಾ ಕೃಷ್ಣ
ಚನ್ನಪಟ್ಟಣ: ಪುರಾಣೇತೀಹಾಸದಿಂದಲೂ ಪ್ರಖ್ಯಾತವಾಗಿರುವ ಔಷಧ ಎಂದರೆ ಅದು ಆಯುರ್ವೇದ ಔಷಧ, ಜಗತ್ತಿನ ಅತ್ಯಂತ ಪ್ರಾಚೀನ ಔಷಧವೂ ಹೌದು, ನಮ್ಮ ಪ್ರಕೃತಿ ಹೇಗೆ ಸಮ
ದೊಡ್ಡಮಳೂರು ಗ್ರಾಮದಲ್ಲಿ ದೀರ್ಘಾಯು ವೆಲ್ ನೆಸ್ ಆಯುರ್ವೇದ ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯ ಶಿಬಿರ
ಚನ್ನಪಟ್ಟಣ: ತಾಲ್ಲೂಕಿನ ದೊಡ್ಡಮಳೂರು ಗ್ರಾಮದ ದೇವಸ್ಥಾನದ ಬೀದಿಯಲ್ಲಿರುವ ದೀರ್ಘಾಯು ವೆಲ್ ನೆಸ್ ಸೆಂಟರ್ ಇವರ ವತಿಯಿಂದ ನಾಳೆ (ಭಾನುವಾರ) ಬೆಳಿ
ಕ್ರಿಯೇಟಿವ್ ಅಸೋಸಿಯೇಷನ್ ಹಾಗೂ ಸೊಸೈಟಿ ವತಿಯಿಂದ ಶನಿವಾರ ನಗರದಲ್ಲಿ ಬೃಹತ್ ಉಚಿತ ಆರೋಗ್ಯ ಶಿಬಿರ
ಚನ್ನಪಟ್ಟಣ : ತಾಲ್ಲೂಕಿನಿಂದ ಬೆಂಗಳೂರಿಗೆ ಹೋಗಿ, ಜೀವನ ಕಟ್ಟಿಕೊಂಡು ತಾಲ್ಲೂಕಿಗೆ ಏನಾದರೂ ಕೊಡುಗೆ ನೀಡಬೇಕೆಂಬ ಹಂಬಲದಿಂದ ಕ್ರಿಯೇಟಿವ್ ಅಸೋಸಿಯೇಷನ್ ಮತ್ತ
ದುಶ್ಚಟದಿಂದ ದೂರವಿರಿ, ಆರೋಗ್ಯ ಕಾಪಾಡಿಕೊಳ್ಳಿ : ಪ್ರತಿಮಾ ಕೆ.ವಿ
ರಾಮನಗರ, ಜೂ. 17: ಇತ್ತೀಚೆಗೆ ಅತಿ ಹೆಚ್ಚು ಹಲವಾರು ದುಶ್ಚಟಗಳು ಮನುಷ್ಯನನ್ನು ಆವರಸಿಕೊಂಡಿವೆ. ಇದರಿಂದಾಗಿ ನೂರಾರು ಖಾಯಿಲೆಗಳು ದೇಹ ಹೊಕ್ಕು ನಿತ್ಯ ಸಾ
ಫ್ಲೋರೋಸಿಸ್ ನಿಯಂತ್ರಿಸಿ ಉತ್ತಮ ಜೀವನ ನಡೆಸುವಂತೆ ಸಲಹೆ - ಡಾ.ಅನಿಲ್
ರಾಮನಗರ, ಜೂ. 15: ಫ್ಲೋರೈಡ್ ನಮ್ಮ ದೇಹಕ್ಕೆ ಬೇಕಾದ ಒಂದು ಖನಿಜಾಂಶ ನಾವು ಸೇವಿಸುವ ಆಹಾರ ಮತ್ತು ಕುಡಿಯುವ ನೀರಿನಲ್ಲಿ ಅವಶ್ಯಕತೆಗಿಂತ ಹೆಚ್ಚು ಫ್ಲೋರೈಡ
ಆರೋಗ್ಯ ಕೇಂದ್ರದಲ್ಲಿ ದೊರೆಯುವ ಸೇವೆಗಳನ್ನು ಪಡೆದುಕೊಳ್ಳುವಂತೆ ಸಲಹೆ ನೀಡಿದ ಬಿ.ಎಸ್.ಗಂಗಾಧರ್.
ರಾಮನಗರ: ಜಿಲ್ಲಾಡಳಿತ ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪ್ರಾಥಮಿಕ ಆರೋಗ್ಯ ಕೇಂದ್ರ ಕೆ.ಕರೇನಹಳ್ಳಿ ಇವರ ಸಂಯುಕ್ತ ಆಶ್ರ
ಶ್ರೀಗಿರಿಪುರ ಗ್ರಾಪಂ ಸಭಾಂಗಣದಲ್ಲಿ ಯಶಸ್ವಿಯಾಗಿ ನಡೆದ ಆರೋಗ್ಯ ತಪಾಸಣಾ ಶಿಬಿರ
ರಾಮನಗರ, ಜೂ. 07: ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಾತ್ಮಗಾಂಧಿ ನರೇಗಾ ಉದ್ಯೋಗ ಖಾತ್ರಿ ಯೋಜನೆ ಹಾಗೂ ಕುದೂರು ಪ್ರ
ಪ್ರತಿಕ್ರಿಯೆಗಳು