Tel: 7676775624 | Mail: info@yellowandred.in

Language: EN KAN

    Follow us :

೪೬ ವರ್ಷದ ಮಹಿಳೆಯ ಹೊಟ್ಟೆಯಲ್ಲಿದ್ದ ೧೦ ಕಿಲೋ ಕ್ಯಾನ್ಸರ್ ಗಡ್ಡೆ ಹೊರತೆಗೆದ ಬಾಲು ಆಸ್ಪತ್ರೆಯ ವೈದ್ಯರು

Posted date: 21 Oct, 2023

Powered by:     Yellow and Red

೪೬ ವರ್ಷದ ಮಹಿಳೆಯ ಹೊಟ್ಟೆಯಲ್ಲಿದ್ದ ೧೦ ಕಿಲೋ ಕ್ಯಾನ್ಸರ್ ಗಡ್ಡೆ ಹೊರತೆಗೆದ ಬಾಲು ಆಸ್ಪತ್ರೆಯ ವೈದ್ಯರು

ಚನ್ನಪಟ್ಟಣ: ತಾಲ್ಲೂಕಿನ ಗ್ರಾಮವೊಂದರ ೪೬ ವರ್ಷದ ಮಹಿಳೆಯೊಬ್ಬರ ಗರ್ಭ (ಅಂಡಾಶಯ) ದಲ್ಲಿದ್ದ ಬರೋಬ್ಬರಿ ೧೦ ಕಿಲೋ ೩೦೦ ಗ್ರಾಂ ತೂಕದ ಕ್ಯಾನ್ಸರ್ ಗಡ್ಡೆ ಯನ್ನು ಹೊರತೆಗೆಯುವಲ್ಲಿ ನಗರದ ಬಾಲು ಆಸ್ಪತ್ರೆಯ ತಜ್ಞ ವೈದ್ಯರ ತಂಡ ಯಶಸ್ವಿಯಾಗಿದೆ.

ತಾಲೂಕಿನ ಮಹಿಳೆಯೊಬ್ಬರ ಗರ್ಭದಲ್ಲಿ ಬೆಳೆದಿದ್ದ ಬಾರಿ ತೂಕದ ಕ್ಯಾನ್ಸರ್ ಗೆಡ್ಡೆಯನ್ನು ನಗರದ ಬಾಲು ಆಸ್ಪತ್ರೆಯ ಮುಖ್ಯಸ್ಥೆ ಡಾ.ಶೈಲಜಾ ವೆಂಕಟ ಸುಬ್ಬಯ್ಯ ಚಟ್ಟಿ ಮಾರ್ಗದರ್ಶನದಲ್ಲಿ ಅರವಳಿಕೆ ತಜ್ಞ ಡಾ. ಮನೋಜಂ ಮತ್ತು ಸರ್ಜನ್ ಗಳಾದ ಡಾ. ಪ್ರಕಾಶ್ , ಡಾ. ಜಯಶ್ರೀ ರವರ ತಂಡದ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಹೊರತೆಗೆದಿದೆ.

ತನ್ನ ಹೊಟ್ಟೆಯಲ್ಲಿ ಇಷ್ಟು ದೊಡ್ಡ ಗಾತ್ರದ ಗಡ್ಡೆ ಇದೆ ಎಂಬುದು ಆಕೆಯ ಗಮನದಲ್ಲಿರಲಿಲ್ಲ. ಆಕೆಯೇ ಹೇಳುವಂತೆ ಕಳೆದ ಮೂರು ತಿಂಗಳಿನಿಂದ ನೋವು ಬರುತ್ತಿದ್ದು, ಮೂರ್ನಾಲ್ಕು ದಿನದಿಂದ ವಾಂತಿ ಆಗುತ್ತಿದೆ. ನನಗೆ ಗ್ಯಾಸ್ಟ್ರಿಕ್‌ ಆಗಿದೆ ಡಾಕ್ಟ್ರೆ ಎಂದು ಬಂದಾಗ ಆಕೆಯನ್ನು ಸ್ಕ್ಯಾನಿಂಗ್ ಮಾಡಿಸಲಾಯಿತು. ಇದರಿಂದ ಗಡ್ಡೆ ಇರುವುದು ಖಾತ್ರಿಯಾಯಿತಾದರೂ, ಅದು ಯಾವ ಗಡ್ಡೆ ಎಂಬುದನ್ನು ತಜ್ಞರ ಮೂಲಕ ಖಾತ್ರಿ ಪಡಿಸಿಕೊಳ್ಳಲಾಯಿತು. ನಂತರ ಅವರ ಒಪ್ಪಿಗೆ ಪಡೆದು ಗಡ್ಡೆಯನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದು ಬೆಂಗಳೂರಿನ ಲ್ಯಾಬ್ ಗೆ ಕಳುಹಿಸಲಾಗಿದೆ ಎಂದು ವೈದ್ಯ ಮನೋಜಂ ಮಾಹಿತಿ ನೀಡಿದರು.

 ಸದ್ಯ ಮಹಿಳೆ ಆರೋಗ್ಯವಾಗಿದ್ದು, ಬಾರಿ ಗಾತ್ರದ ಗೆಡ್ಡೆಯನ್ನು ಶಸ್ತ್ರ ಚಿಕಿತ್ಸೆಯ ಮೂಲಕ ಯಶಸ್ವಿಯಾಗಿ ಹೊರತೆಗೆದಿರುವ ವೈದ್ಯರಿಗೆ ಮಹಿಳೆಯ ಕುಟುಂಬಸ್ಥರು ಧನ್ಯವಾದ ಸಲ್ಲಿಸಿದ್ದಾರೆ.

ಇದೇ ಸಂದರ್ಭದಲ್ಲಿ ಮಾತನಾಡಿದ ಬಾಲು ಆಸ್ಪತ್ರೆಯ ಸಂಸ್ಥಾಪಕ ಸುಬ್ಬಯ್ಯಚಟ್ಟಿ ಯವರು, ಕಳೆದ ವಾರ ನಾಲ್ಕು ಕಿಲೋ ತೂಕದ ಗಡ್ಡೆಯೊಂದನ್ನು ಹೊರತೆಗೆಯಲಾಗಿತ್ತು. ಇಂದು ತಾಲ್ಲೂಕಿನಲ್ಲಿ ಪ್ರಪ್ರಥಮವಾಗಿ ಇಷ್ಟು ದೊಡ್ಡ ಗಾತ್ರದ ಗಡ್ಡೆ ಹೊರತೆಗೆಯಲಾಗಿದೆ, ಬಹುತೇಕ ಮಹಿಳೆಯರು ನಾಚಿಕೆ ಸ್ವಭಾವದವರಿದ್ದಾರೆ. ಕೆಲವು ನೋವುಗಳನ್ನು ಯಾರ ಜೊತೆಯೂ ಅವರು ಹಂಚಿಕೊಳ್ಳುವುದಿಲ್ಲ. ಹಾಗಾಗಿ ಮುಂದಿನ ದಿನಗಳಲ್ಲಿ ತಾಲ್ಲೂಕಿನ ಪ್ರತಿ ಗ್ರಾಮಗಳಿಗೂ ತೆರಳಿ, ಮಹಿಳೆಯರಿಗೆ ಸಂಬಂಧಿಸಿದ ಖಾಯಿಲೆಗಳಿಗೆ ಸಂಬಂಧಿಸಿದಂತೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಆಸ್ಪತ್ರೆಯ ಆಡಳಿತ ಮಂಡಳಿ ತೀರ್ಮಾನಿಸಿದೆ ಎಂದು ತಿಳಿಸಿದರು.

ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in health »

ವ್ಯವಹಾರಕ್ಕಾಗಿ ಆಸ್ಪತ್ರೆಯಲ್ಲಾ, ಸೇವೆಗಾಗಿ ನಮ್ಮ ಆಸ್ಪತ್ರೆ. ಕಾಂಗರೂ ಆಸ್ಪತ್ರೆಯ ಸಂಸ್ಥಾಪಕ ಡಾ ಶೇಖರ್ ಸುಬ್ಬಯ್ಯ
ವ್ಯವಹಾರಕ್ಕಾಗಿ ಆಸ್ಪತ್ರೆಯಲ್ಲಾ, ಸೇವೆಗಾಗಿ ನಮ್ಮ ಆಸ್ಪತ್ರೆ. ಕಾಂಗರೂ ಆಸ್ಪತ್ರೆಯ ಸಂಸ್ಥಾಪಕ ಡಾ ಶೇಖರ್ ಸುಬ್ಬಯ್ಯ

ರಾಮನಗರ: ನಾವು ಹಣಕ್ಕಾಗಿ ಆಸ್ಪತ್ರೆ ನಡೆಸುವುದಿಲ್ಲ, ಇದೊಂದು ಸೇವೆ ಎಂದು ಪರಿಗಣಿಸಿ ಆಸ್ಪತ್ರೆ ನಡೆಸುತ್ತಿದ್ದೇವೆ. ಬೆಂಗಳೂರು ಮೈಸೂರು ಸೇರಿದಂತೆ ನಾಲ್ಕು

೪೬ ವರ್ಷದ ಮಹಿಳೆಯ ಹೊಟ್ಟೆಯಲ್ಲಿದ್ದ ೧೦ ಕಿಲೋ ಕ್ಯಾನ್ಸರ್ ಗಡ್ಡೆ ಹೊರತೆಗೆದ ಬಾಲು ಆಸ್ಪತ್ರೆಯ ವೈದ್ಯರು
೪೬ ವರ್ಷದ ಮಹಿಳೆಯ ಹೊಟ್ಟೆಯಲ್ಲಿದ್ದ ೧೦ ಕಿಲೋ ಕ್ಯಾನ್ಸರ್ ಗಡ್ಡೆ ಹೊರತೆಗೆದ ಬಾಲು ಆಸ್ಪತ್ರೆಯ ವೈದ್ಯರು

ಚನ್ನಪಟ್ಟಣ: ತಾಲ್ಲೂಕಿನ ಗ್ರಾಮವೊಂದರ ೪೬ ವರ್ಷದ ಮಹಿಳೆಯೊಬ್ಬರ ಗರ್ಭ (ಅಂಡಾಶಯ) ದಲ್ಲಿದ್ದ ಬರೋಬ್ಬರಿ ೧೦ ಕಿಲೋ ೩೦೦ ಗ್ರಾಂ ತೂಕದ ಕ್ಯಾನ್ಸರ್ ಗಡ್ಡೆ ಯನ್ನ

ಹೊಂಗನೂರು, ಕೋಡಂಬಳ್ಳಿ ಗ್ರಾಮದಲ್ಲಿ ಪರವಾನಗಿ ಇಲ್ಲದ ಖಾಸಗಿ ಆಸ್ಪತ್ರೆಗಳಿಗೆ ಬೀಗ ಜಡಿದ ಟಿಹೆಚ್‌ಓ
ಹೊಂಗನೂರು, ಕೋಡಂಬಳ್ಳಿ ಗ್ರಾಮದಲ್ಲಿ ಪರವಾನಗಿ ಇಲ್ಲದ ಖಾಸಗಿ ಆಸ್ಪತ್ರೆಗಳಿಗೆ ಬೀಗ ಜಡಿದ ಟಿಹೆಚ್‌ಓ

ಚನ್ನಪಟ್ಟಣ: ತಾಲ್ಲೂಕಿನ ಹೊಂಗನೂರು ಗ್ರಾಮದಲ್ಲಿ ಗೋಪಿ ಕ್ಲಿನಿಕ್ ಎಂಬ ಖಾಸಗಿ ಆಸ್ಪತ್ರೆ ಇದ್ದು, ಗೋಪಿ ಎಂಬುವವರು ವೈದ್ಯರಾಗಿ ಸೇವೆ ನಿರ್ವಹಿಸುತ್ತಿದ್ದಾರ

ಉತ್ತಮ ಆರೋಗ್ಯಕ್ಕೆ ಆಯುರ್ವೇದವೇ ದಿವ್ಯ ಔಷಧ ಡಾ ಸಹನಾ ಕೃಷ್ಣ
ಉತ್ತಮ ಆರೋಗ್ಯಕ್ಕೆ ಆಯುರ್ವೇದವೇ ದಿವ್ಯ ಔಷಧ ಡಾ ಸಹನಾ ಕೃಷ್ಣ

ಚನ್ನಪಟ್ಟಣ: ಪುರಾಣೇತೀಹಾಸದಿಂದಲೂ ಪ್ರಖ್ಯಾತವಾಗಿರುವ ಔಷಧ ಎಂದರೆ ಅದು ಆಯುರ್ವೇದ ಔಷಧ, ಜಗತ್ತಿನ ಅತ್ಯಂತ ಪ್ರಾಚೀನ ಔಷಧವೂ ಹೌದು, ನಮ್ಮ ಪ್ರಕೃತಿ ಹೇಗೆ ಸಮ

ದೊಡ್ಡಮಳೂರು ಗ್ರಾಮದಲ್ಲಿ ದೀರ್ಘಾಯು ವೆಲ್ ನೆಸ್ ಆಯುರ್ವೇದ ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯ ಶಿಬಿರ
ದೊಡ್ಡಮಳೂರು ಗ್ರಾಮದಲ್ಲಿ ದೀರ್ಘಾಯು ವೆಲ್ ನೆಸ್ ಆಯುರ್ವೇದ ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯ ಶಿಬಿರ

ಚನ್ನಪಟ್ಟಣ: ತಾಲ್ಲೂಕಿನ ದೊಡ್ಡಮಳೂರು ಗ್ರಾಮದ ದೇವಸ್ಥಾನದ ಬೀದಿಯಲ್ಲಿರುವ ದೀರ್ಘಾಯು ವೆಲ್ ನೆಸ್ ಸೆಂಟರ್ ಇವರ ವತಿಯಿಂದ ನಾಳೆ (ಭಾನುವಾರ) ಬೆಳಿ

ಕ್ರಿಯೇಟಿವ್ ಅಸೋಸಿಯೇಷನ್ ಹಾಗೂ ಸೊಸೈಟಿ ವತಿಯಿಂದ ಶನಿವಾರ ನಗರದಲ್ಲಿ ಬೃಹತ್ ಉಚಿತ ಆರೋಗ್ಯ ಶಿಬಿರ
ಕ್ರಿಯೇಟಿವ್ ಅಸೋಸಿಯೇಷನ್ ಹಾಗೂ ಸೊಸೈಟಿ ವತಿಯಿಂದ ಶನಿವಾರ ನಗರದಲ್ಲಿ ಬೃಹತ್ ಉಚಿತ ಆರೋಗ್ಯ ಶಿಬಿರ

ಚನ್ನಪಟ್ಟಣ : ತಾಲ್ಲೂಕಿನಿಂದ ಬೆಂಗಳೂರಿಗೆ ಹೋಗಿ, ಜೀವನ ಕಟ್ಟಿಕೊಂಡು ತಾಲ್ಲೂಕಿಗೆ ಏನಾದರೂ ಕೊಡುಗೆ ನೀಡಬೇಕೆಂಬ ಹಂಬಲದಿಂದ ಕ್ರಿಯೇಟಿವ್ ಅಸೋಸಿಯೇಷನ್ ಮತ್ತ

ದುಶ್ಚಟದಿಂದ ದೂರವಿರಿ, ಆರೋಗ್ಯ ಕಾಪಾಡಿಕೊಳ್ಳಿ : ಪ್ರತಿಮಾ ಕೆ.ವಿ
ದುಶ್ಚಟದಿಂದ ದೂರವಿರಿ, ಆರೋಗ್ಯ ಕಾಪಾಡಿಕೊಳ್ಳಿ : ಪ್ರತಿಮಾ ಕೆ.ವಿ

ರಾಮನಗರ, ಜೂ. 17:   ಇತ್ತೀಚೆಗೆ ಅತಿ ಹೆಚ್ಚು ಹಲವಾರು ದುಶ್ಚಟಗಳು ಮನುಷ್ಯನನ್ನು ಆವರಸಿಕೊಂಡಿವೆ. ಇದರಿಂದಾಗಿ ನೂರಾರು ಖಾಯಿಲೆಗಳು ದೇಹ ಹೊಕ್ಕು ನಿತ್ಯ ಸಾ

ಫ್ಲೋರೋಸಿಸ್ ನಿಯಂತ್ರಿಸಿ ಉತ್ತಮ ಜೀವನ ನಡೆಸುವಂತೆ ಸಲಹೆ - ಡಾ.ಅನಿಲ್
ಫ್ಲೋರೋಸಿಸ್ ನಿಯಂತ್ರಿಸಿ ಉತ್ತಮ ಜೀವನ ನಡೆಸುವಂತೆ ಸಲಹೆ - ಡಾ.ಅನಿಲ್

ರಾಮನಗರ, ಜೂ. 15:   ಫ್ಲೋರೈಡ್ ನಮ್ಮ ದೇಹಕ್ಕೆ ಬೇಕಾದ ಒಂದು ಖನಿಜಾಂಶ ನಾವು ಸೇವಿಸುವ ಆಹಾರ ಮತ್ತು ಕುಡಿಯುವ ನೀರಿನಲ್ಲಿ ಅವಶ್ಯಕತೆಗಿಂತ ಹೆಚ್ಚು ಫ್ಲೋರೈಡ

ಆರೋಗ್ಯ ಕೇಂದ್ರದಲ್ಲಿ ದೊರೆಯುವ ಸೇವೆಗಳನ್ನು ಪಡೆದುಕೊಳ್ಳುವಂತೆ ಸಲಹೆ ನೀಡಿದ ಬಿ.ಎಸ್.ಗಂಗಾಧರ್.
ಆರೋಗ್ಯ ಕೇಂದ್ರದಲ್ಲಿ ದೊರೆಯುವ ಸೇವೆಗಳನ್ನು ಪಡೆದುಕೊಳ್ಳುವಂತೆ ಸಲಹೆ ನೀಡಿದ ಬಿ.ಎಸ್.ಗಂಗಾಧರ್.

ರಾಮನಗರ: ಜಿಲ್ಲಾಡಳಿತ ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪ್ರಾಥಮಿಕ ಆರೋಗ್ಯ ಕೇಂದ್ರ ಕೆ.ಕರೇನಹಳ್ಳಿ ಇವರ ಸಂಯುಕ್ತ ಆಶ್ರ

ಶ್ರೀಗಿರಿಪುರ ಗ್ರಾಪಂ ಸಭಾಂಗಣದಲ್ಲಿ ಯಶಸ್ವಿಯಾಗಿ ನಡೆದ ಆರೋಗ್ಯ ತಪಾಸಣಾ ಶಿಬಿರ
ಶ್ರೀಗಿರಿಪುರ ಗ್ರಾಪಂ ಸಭಾಂಗಣದಲ್ಲಿ ಯಶಸ್ವಿಯಾಗಿ ನಡೆದ ಆರೋಗ್ಯ ತಪಾಸಣಾ ಶಿಬಿರ

ರಾಮನಗರ, ಜೂ. 07:   ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಾತ್ಮಗಾಂಧಿ ನರೇಗಾ ಉದ್ಯೋಗ ಖಾತ್ರಿ ಯೋಜನೆ ಹಾಗೂ ಕುದೂರು ಪ್ರ

Top Stories »  

Top ↑