ಫ್ಲೋರೋಸಿಸ್ ನಿಯಂತ್ರಿಸಿ ಉತ್ತಮ ಜೀವನ ನಡೆಸುವಂತೆ ಸಲಹೆ - ಡಾ.ಅನಿಲ್

ರಾಮನಗರ, ಜೂ. 15: ಫ್ಲೋರೈಡ್ ನಮ್ಮ ದೇಹಕ್ಕೆ ಬೇಕಾದ ಒಂದು ಖನಿಜಾಂಶ ನಾವು ಸೇವಿಸುವ ಆಹಾರ ಮತ್ತು ಕುಡಿಯುವ ನೀರಿನಲ್ಲಿ ಅವಶ್ಯಕತೆಗಿಂತ ಹೆಚ್ಚು ಫ್ಲೋರೈಡ್ ಅಂಶವಿದ್ದರೆ ಫ್ಲೋರೋಸಿಸ್ ಉಂಟಾಗುತ್ತದೆ. ಇದರಿಂದ ದೇಹದ ಅನೇಕ ಭಾಗಗಳಲ್ಲಿ ದುಷ್ಪರಿಣಾಮ ಬೀರುತ್ತದೆ. ಸಾಮಾನ್ಯವಾಗಿ ಕುಡಿಯುವ ನೀರು, ಆಹಾರ, ಕೆಲವು ಔಷಧಗಳ ಸೇವನೆ, ಕಾರ್ಖಾನೆಗಳಿಂದ ಹೊರ ಹೊಮ್ಮುವ ಧೂಳು, ಹೊಗೆ, ಮುಂತಾದವುಗಳಿಂದ ಫ್ಲೋರೈಡ್ ದೇಹದೊಳಗೆ ಸೇರುತ್ತದೆ. ಫ್ಲೋರೋಸಿಸ್ ವಯಸ್ಸಿನ ಅಂತರ, ಲಿಂಗಬೇದವಿಲ್ಲದೆ ಚಿಕ್ಕ ಮಕ್ಕಳು, ವಯಸ್ಕರು, ಮಹಿಳೆಯರು, ಪುರುಷರು, ಎಲ್ಲರಲ್ಲಿಯೂ ದಂತ, ಮೂಳೆ ಹಾಗೂ ದೇಹದ ಇತರೆ ಭಾಗಗಳಲ್ಲಿ ಕಂಡು ಬರುತ್ತದೆ. ಆದ್ದರಿಂದ ತಾವುಗಳು ಜಾಗೃತರಾಗಿ ಫ್ಲೋರೋಸಿಸ್ ನಿಯಂತ್ರಿಸಿ ಉತ್ತಮ ಜೀವನ ನಡೆಸುವಂತೆ ಮೂಳೆ ತಜ್ಞರಾದ ಡಾ. ಅನಿಲ್ ಅವರು ತಿಳಿಸಿದರು.
ಅವರು ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಮನಗರ ತಾಲ್ಲೂಕು, ಜಾಲಮಂಗಲ ಪ್ರಾಥಮಿಕ ಆರೋಗ್ಯ ಕೇಂದದ್ರ ವತಿಯಿಂದ ಆಸ್ಪತ್ರೆಯ ಸಭಾಂಗಣದಲ್ಲಿ ರಾಷ್ಟ್ರೀಯ ಫ್ಲೋರೋಸಿಸ್ ನಿಯಂತ್ರಣ ಹಾಗೂ ತಡೆಗಟ್ಟುವ ಕಾರ್ಯಕ್ರಮದಡಿಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಸರ್ಕಾರಿ ಪ್ರೌಢಶಾಲೆಯಲ್ಲಿ ಮಕ್ಕಳಲ್ಲಿ ದಂತ ಫ್ಲೋರೋಸಿಸ್ ಪತ್ತೆ ಮಾಡಲು ಆಯೋಜಿಸಲಾಗಿದ್ದ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ದಂತವೈದ್ಯರಾದ ಡಾ. ಪ್ರಕೃತಿ ಅವರು ಮಾತನಾಡಿ, ಮಕ್ಕಳು ದಂತ ಫ್ಲೋರೋಸಿಸ್‍ಗೆ ಸುಲಭವಾಗಿ ತುತ್ತಾಗುತ್ತಾರೆ. ಮಕ್ಕಳ ಹಲ್ಲುಗಳ ಬೆಳವಣಿಗೆಯ ಸಮಯದಲ್ಲಿ ಹೆಚ್ಚು ಫ್ಲೋರೈಡ್ ಅಂಶವಿರುವ ನೀರು, ಆಹಾರ ಪದಾರ್ಥಗಳು ಮತ್ತು ಟೂತ್ ಪೇಸ್ಟ್ ಗಳನ್ನು ಬಳಸುವುದರಿಂದ ದಂತ ಫ್ಲೋರೋಸಿಸ್ ಬರುತ್ತದೆ. ಅದರಲ್ಲೂ 8 ವರ್ಷದೊಳಗಿನ ಮಕ್ಕಳಲ್ಲಿ ಫ್ಲೋರೋಸಿಸ್ ಸಾಧಾರಣವಾಗಿ 5-7 ವರ್ಷದ ಮಕ್ಕಳಲ್ಲಿ ವಿಪರೀತವಾಗಿ ಕಂಡು ಬರುತ್ತದೆ. ಆದ್ದರಿಂದ ಹಲ್ಲಿನ ಮೇಲೆ ಹಳದಿ ಅಥವಾ ಕಂದು ಬಣ್ಣ, ಅಡ್ಡ ಗೆರೆಗಳು ಉಂಟಾಗುತ್ತವೆ. ಇದರಿಂದ ಹಲ್ಲಿನ ಒಳ ಹಾಗೂ ಹೊರ ಭಾಗಗಳಲ್ಲಿ ತೊಂದರೆಯಾಗುತ್ತದೆ. ಹಲ್ಲುಗಳ ಸ್ವಚ್ಛತೆ ಕಾಪಾಡಿಕೊಳ್ಳುವ ಜೊತೆಗೆ ಪ್ರತಿ 6 ತಿಂಗಳಿಗೊಮ್ಮೆ ದಂತ ವೈದ್ಯರಲ್ಲಿ ಪರೀಕ್ಷಿಸಿಕೊಳ್ಳಬೇಕೆಂದು ತಿಳಿಸಿದರು.
ಜಿಲ್ಲಾ ಫ್ಲೋರೋಸಿಸ್ ಸಂಯೋಜಕರಾದ ಬಾಬು ಅವರು ಮಾತನಾಡಿ ಆರೋಗ್ಯ ಇಲಾಖೆ ವತಿಯಿಂದ ಉಚಿತವಾಗಿ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಿದ್ದು ಈ ಶಿಬಿರದಲ್ಲಿ ಮೂಳೆ ಫ್ಲೋರೋಸಿಸ್‍ನಿಂದ ಬಳಲುತ್ತಿರುವ ರೋಗಿಗಳನ್ನು ಗುರುತಿಸಿ ಉಚಿತವಾಗಿ ಚಿಕಿತ್ಸೆ ನೀಡುವುದರ ಜೊತೆಗೆ ಅಗತ್ಯ ಉಪಕರಣಗಳನ್ನು ನೀಡಲಾಗುವುದು. ಹಾಗೂ ದಂತ ಫ್ಲೋರೋಸಿಸ್ ನಿಂದ ಬಳಲುತ್ತಿರುವವರಿಗೆ ಚಿಕಿತ್ಸೆ ಜೊತೆಗೆ ದಂತ ಭಾಗ್ಯ ಯೋಜನೆಯಡಿ ಉಚಿತ ಹಲ್ಲು ಜೋಡಣೆ ಮಾಡಲಾಗುವುದು. ಇದರ ಪ್ರಯೋಜನವನ್ನು ಪಡೆದುಕೊಳ್ಳುವಂತೆ ತಿಳಿಸಿದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಎಸ್. ಗಂಗಾಧರ್ ಅವರು ಮಾತನಾಡಿ ಫ್ಲೋರೋಸಿಸ್ ನಿಯಂತ್ರಿಸಲು ಫ್ಲೋರೈಡ್ ಅಂಶ ಕಡಿಮೆ ಇರುವ ಅಂದರೆ (ಒಂದು ಪಿ.ಪಿ.ಎಂ ಗಿಂತ ಕಡಿಮೆ) ಶುದ್ಧ ಕುಡಿಯುವ ನೀರು, ಹಾಲು, ಬೆಲ್ಲ, ಹಸಿರು ಸೊಪ್ಪು, ತರಕಾರಿ, ನುಗ್ಗೆಕಾಯಿ, ಕಾಳುಗಳು, ವಿಟಮಿನ್ -ಸಿ ಅಂಶವಿರುವ, ನೆಲ್ಲಿಕಾಯಿ, ನಿಂಬೆ, ಟೆಮೋಟೋ, ಕಿತ್ತಳೆ, ಮೂಸಂಬಿ ಹಣ್ಣುಗಳನ್ನು ಹೆಚ್ಚಾಗಿ ಬಳಸುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಡಾ. ಉಮಾ, ಡಾ. ಪ್ರಕೃತಿ, ಡಾ. ಖಟೀಬ್‍ಉಲ್ಲಾ, ಆರೋಗ್ಯ ನಿರೀಕ್ಷಣಾಧಿಕಾರಿ ಲಕ್ಷ್ಮೀಕಾಂತ್, ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿ ಜಯಮ್ಮ, ಚೈತನ್ಯ, ಪ್ರಯೋಗ ಶಾಲಾ ತಾಂತ್ರಿಕ ಅಧಿಕಾರಿ ಮೀನಾಕ್ಷಿ, ಪ್ರೌಢಶಾಲಾ ಮುಖ್ಯ ಶಿಕ್ಷಕ ಸುರೇಂದ್ರ, ಆಶಾ ಕಾರ್ಯಕರ್ತೆಯರು, ಗರ್ಭಿಣಿಯರು, ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಗೂ ಸಾರ್ವಜನಿಕರು ಹಾಜರಿದ್ದರು.
ಗೋ ರಾ ಶ್ರೀನಿವಾಸ...
ಮೊ:9845856139.
Recent news in health »

೪೬ ವರ್ಷದ ಮಹಿಳೆಯ ಹೊಟ್ಟೆಯಲ್ಲಿದ್ದ ೧೦ ಕಿಲೋ ಕ್ಯಾನ್ಸರ್ ಗಡ್ಡೆ ಹೊರತೆಗೆದ ಬಾಲು ಆಸ್ಪತ್ರೆಯ ವೈದ್ಯರು
ಚನ್ನಪಟ್ಟಣ: ತಾಲ್ಲೂಕಿನ ಗ್ರಾಮವೊಂದರ ೪೬ ವರ್ಷದ ಮಹಿಳೆಯೊಬ್ಬರ ಗರ್ಭ (ಅಂಡಾಶಯ) ದಲ್ಲಿದ್ದ ಬರೋಬ್ಬರಿ ೧೦ ಕಿಲೋ ೩೦೦ ಗ್ರಾಂ ತೂಕದ ಕ್ಯಾನ್ಸರ್ ಗಡ್ಡೆ ಯನ್ನ

ಹೊಂಗನೂರು, ಕೋಡಂಬಳ್ಳಿ ಗ್ರಾಮದಲ್ಲಿ ಪರವಾನಗಿ ಇಲ್ಲದ ಖಾಸಗಿ ಆಸ್ಪತ್ರೆಗಳಿಗೆ ಬೀಗ ಜಡಿದ ಟಿಹೆಚ್‌ಓ
ಚನ್ನಪಟ್ಟಣ: ತಾಲ್ಲೂಕಿನ ಹೊಂಗನೂರು ಗ್ರಾಮದಲ್ಲಿ ಗೋಪಿ ಕ್ಲಿನಿಕ್ ಎಂಬ ಖಾಸಗಿ ಆಸ್ಪತ್ರೆ ಇದ್ದು, ಗೋಪಿ ಎಂಬುವವರು ವೈದ್ಯರಾಗಿ ಸೇವೆ ನಿರ್ವಹಿಸುತ್ತಿದ್ದಾರ

ಉತ್ತಮ ಆರೋಗ್ಯಕ್ಕೆ ಆಯುರ್ವೇದವೇ ದಿವ್ಯ ಔಷಧ ಡಾ ಸಹನಾ ಕೃಷ್ಣ
ಚನ್ನಪಟ್ಟಣ: ಪುರಾಣೇತೀಹಾಸದಿಂದಲೂ ಪ್ರಖ್ಯಾತವಾಗಿರುವ ಔಷಧ ಎಂದರೆ ಅದು ಆಯುರ್ವೇದ ಔಷಧ, ಜಗತ್ತಿನ ಅತ್ಯಂತ ಪ್ರಾಚೀನ ಔಷಧವೂ ಹೌದು, ನಮ್ಮ ಪ್ರಕೃತಿ ಹೇಗೆ ಸಮ

ದೊಡ್ಡಮಳೂರು ಗ್ರಾಮದಲ್ಲಿ ದೀರ್ಘಾಯು ವೆಲ್ ನೆಸ್ ಆಯುರ್ವೇದ ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯ ಶಿಬಿರ
ಚನ್ನಪಟ್ಟಣ: ತಾಲ್ಲೂಕಿನ ದೊಡ್ಡಮಳೂರು ಗ್ರಾಮದ ದೇವಸ್ಥಾನದ ಬೀದಿಯಲ್ಲಿರುವ ದೀರ್ಘಾಯು ವೆಲ್ ನೆಸ್ ಸೆಂಟರ್ ಇವರ ವತಿಯಿಂದ ನಾಳೆ (ಭಾನುವಾರ) ಬೆಳಿ

ಕ್ರಿಯೇಟಿವ್ ಅಸೋಸಿಯೇಷನ್ ಹಾಗೂ ಸೊಸೈಟಿ ವತಿಯಿಂದ ಶನಿವಾರ ನಗರದಲ್ಲಿ ಬೃಹತ್ ಉಚಿತ ಆರೋಗ್ಯ ಶಿಬಿರ
ಚನ್ನಪಟ್ಟಣ : ತಾಲ್ಲೂಕಿನಿಂದ ಬೆಂಗಳೂರಿಗೆ ಹೋಗಿ, ಜೀವನ ಕಟ್ಟಿಕೊಂಡು ತಾಲ್ಲೂಕಿಗೆ ಏನಾದರೂ ಕೊಡುಗೆ ನೀಡಬೇಕೆಂಬ ಹಂಬಲದಿಂದ ಕ್ರಿಯೇಟಿವ್ ಅಸೋಸಿಯೇಷನ್ ಮತ್ತ

ದುಶ್ಚಟದಿಂದ ದೂರವಿರಿ, ಆರೋಗ್ಯ ಕಾಪಾಡಿಕೊಳ್ಳಿ : ಪ್ರತಿಮಾ ಕೆ.ವಿ
ರಾಮನಗರ, ಜೂ. 17: ಇತ್ತೀಚೆಗೆ ಅತಿ ಹೆಚ್ಚು ಹಲವಾರು ದುಶ್ಚಟಗಳು ಮನುಷ್ಯನನ್ನು ಆವರಸಿಕೊಂಡಿವೆ. ಇದರಿಂದಾಗಿ ನೂರಾರು ಖಾಯಿಲೆಗಳು ದೇಹ ಹೊಕ್ಕು ನಿತ್ಯ ಸಾ

ಫ್ಲೋರೋಸಿಸ್ ನಿಯಂತ್ರಿಸಿ ಉತ್ತಮ ಜೀವನ ನಡೆಸುವಂತೆ ಸಲಹೆ - ಡಾ.ಅನಿಲ್
ರಾಮನಗರ, ಜೂ. 15: ಫ್ಲೋರೈಡ್ ನಮ್ಮ ದೇಹಕ್ಕೆ ಬೇಕಾದ ಒಂದು ಖನಿಜಾಂಶ ನಾವು ಸೇವಿಸುವ ಆಹಾರ ಮತ್ತು ಕುಡಿಯುವ ನೀರಿನಲ್ಲಿ ಅವಶ್ಯಕತೆಗಿಂತ ಹೆಚ್ಚು ಫ್ಲೋರೈಡ

ಆರೋಗ್ಯ ಕೇಂದ್ರದಲ್ಲಿ ದೊರೆಯುವ ಸೇವೆಗಳನ್ನು ಪಡೆದುಕೊಳ್ಳುವಂತೆ ಸಲಹೆ ನೀಡಿದ ಬಿ.ಎಸ್.ಗಂಗಾಧರ್.
ರಾಮನಗರ: ಜಿಲ್ಲಾಡಳಿತ ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪ್ರಾಥಮಿಕ ಆರೋಗ್ಯ ಕೇಂದ್ರ ಕೆ.ಕರೇನಹಳ್ಳಿ ಇವರ ಸಂಯುಕ್ತ ಆಶ್ರ

ಶ್ರೀಗಿರಿಪುರ ಗ್ರಾಪಂ ಸಭಾಂಗಣದಲ್ಲಿ ಯಶಸ್ವಿಯಾಗಿ ನಡೆದ ಆರೋಗ್ಯ ತಪಾಸಣಾ ಶಿಬಿರ
ರಾಮನಗರ, ಜೂ. 07: ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಾತ್ಮಗಾಂಧಿ ನರೇಗಾ ಉದ್ಯೋಗ ಖಾತ್ರಿ ಯೋಜನೆ ಹಾಗೂ ಕುದೂರು ಪ್ರ

ಆರೋಗ್ಯ ತಪಾಸಣೆ ನಿಮ್ಮ ಗ್ರಾಮಗಳ ಕಡೆ: ಡಾ.ಚೈತ್ರಗೌಡ
ಚನ್ನಪಟ್ಟಣ: ಆಸ್ಪತ್ರೆಗಳಿಗೆ ಹೋಗಿ ಆರೋಗ್ಯ ತಪಾಸಣೆ ಮಾಡಿಕೊಳ್ಳುವ ಬದಲು ನೀವಿರುವ ಗ್ರಾಮಗಳಿಗೆ ಬಂದು ಆರೋಗ್ಯ ತಪಾಸಣೆಯನ್ನು ಮಾಡಲಾಗುತ್ತಿದೆ ಇದನ್ನು ಎಲ
ಪ್ರತಿಕ್ರಿಯೆಗಳು