Tel: 7676775624 | Mail: info@yellowandred.in

Language: EN KAN

    Follow us :


ಹೆಂಗಸರಲ್ಲೇ ವಿಶೇಷವಾಗಿ ಯುವತಿಯರಲ್ಲೇ ಸ್ಥೂಲಕಾಯ ಹೆಚ್ಚು ಡಾ ಪುನೀತ್

Posted date: 13 Jul, 2022

Powered by:     Yellow and Red

ಹೆಂಗಸರಲ್ಲೇ ವಿಶೇಷವಾಗಿ ಯುವತಿಯರಲ್ಲೇ ಸ್ಥೂಲಕಾಯ ಹೆಚ್ಚು ಡಾ ಪುನೀತ್

Health: Dr. Puneeth said obesity is more common among women, especially young women

ಚನ್ನಪಟ್ಟಣ: ದೇಶದಲ್ಲಿ ಪುರುಷರಿಗಿಂತ ಮಹಿಳೆಯರಲ್ಲೇ ಸ್ಥೂಲಕಾಯ ಹೆಚ್ಚಾಗಿದ್ದು, ವಿಶೇಷವಾಗಿ ಯುವತಿಯರಲ್ಲಿ ಹೆಚ್ಚಾಗುತ್ತಿದೆ ಎಂದು ನಗರದ ಸಾರ್ವಜನಿಕ ಆಸ್ಪತ್ರೆಯ ತಜ್ಞ ವೈದ್ಯ ಪುನೀತ್ ತಿಳಿಸಿದರು. ಅವರು ಇಂದು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಸ್ಥೂಲಕಾಯ ಮತ್ತು ಹೆಲ್ತ್ ಅಂಡ್ ವೆಲ್ ಬೀಯಿಂಗ್ ವಿಷಯ ಕುರಿತು ಮಾಹಿತಿ ನೀಡಿದರು.


ಹದಿನೆಂಟರಿಂದ ಇಪ್ಪತ್ತು ವಯಸ್ಸಿನ ಹೆಣ್ಣು ಮಕ್ಕಳಲ್ಲಿ ಹೆಚ್ಚು ಸ್ಥೂಲಕಾಯ ಕಂಡು ಬರುತ್ತದೆ. ಇದೇ ವಯಸ್ಸಿನ ಗಂಡುಮಕ್ಕಳಲ್ಲಿ ಕಡಿಮೆ ಇರುತ್ತದೆ. ಇದಕ್ಕೆ ದೈನಂದಿನ ಚಟುವಟಿಕೆಗಳು ಸಹ ಪರಿಣಾಮಕಾರಿಯಾಗುತ್ತದೆ. ಹೆಣ್ಣು ಮಕ್ಕಳು ಫಿಜ್ಜಾ ಬರ್ಗರ್ ಮತ್ತು ಪಾನಿಪೂರಿ ಯಂತಹ ಜಂಕ್ ಫುಡ್ ಗಳನ್ನು ತಿನ್ನುವುದರಿಂದ ಸ್ಥೂಲಕಾಯ ಹೆಚ್ಚಾಗುತ್ತದೆ. ಉದ್ಯೋಗ ಮತ್ತು ವಿವಾಹಿತ ಮಹಿಳೆಯರಲ್ಲಿ ಸ್ಥೂಲಕಾಯ ಕಡಿಮೆ ಇರುವುದು ಸಹ ಕಂಡುಬರುತ್ತದೆ. ಕೆಲ ಯುವಕರಲ್ಲಿ ಕೆಟ್ಟ ಅಭ್ಯಾಸಗಳನ್ನು ರೂಢಿಸಿಕೊಂಡಿರುವ ಕಾರಣದಿಂದಲೇ ನಲವತ್ತು ವರ್ಷಗಳ ನಂತರ ಅವರಿಗೆ ಸ್ಥೂಲಕಾಯ ಕಂಡುಬರುತ್ತದೆ.


ಇತ್ತೀಚೆಗೆ ಸಕ್ಕರೆ ಕಾಯಿಲೆ ಮತ್ತು ಹೃದ್ರೋಗ ಯುವಕರಲ್ಲೂ ಕಾಣಿಸಿಕೊಳ್ಳುತ್ತಿದೆ. ಸಕ್ಕರೆ ಕಾಯಿಲೆ ಒಂದು ಬಾರಿ ಬಂದರೆ ಜೀವನ ಪೂರ್ತಿ ಮಾತ್ರೆ ತೆಗೆದುಕೊಳ್ಳಬೇಕು. ಹೃದಯ ಕಾಯಿಲೆಗೆ ಅತಿಯಾದ ಮಾಂಸ ಸೇವನೆಯೂ ಕಾರಣವಾಗಿದೆ. ಭೂಮಿಯಲ್ಲಿ ಬೆಳೆದ ಬಹುತೇಕ ಎಲ್ಲಾ ತರಕಾರಿಗಳನ್ನು ತಿನ್ನುವುದರಿಂದ ನಿಮ್ಮ ಆರೋಗ್ಯ ಸುಧಾರಿಸುತ್ತದೆ. ಇದರಿಂದ ನಿಮ್ಮ ಆರೋಗ್ಯದ ಜೊತೆಗೆ ಆಯಸ್ಸು ಸಹ ವೃದ್ದಿಯಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.


ಹಿರಿಯ ಫಾರ್ಮಾಸಿಸ್ಟ್ ವೇದಮೂರ್ತಿ ಮಾತನಾಡಿ ನಿಮ್ಮ ಆರೋಗ್ಯ ನಿಮ್ಮ ಕೈಯ್ಯಲ್ಲೇ ಇದೆ. ನೀವು ಏನು ತಿನ್ನುತ್ತೀರಿ, ಎಷ್ಟು ತಿನ್ನುತ್ತೀರಿ, ಅದನ್ನು ಜೀರ್ಣಿಸಲು ಎಷ್ಟು ಮತ್ತು ಹೇಗೆ ಕಸರತ್ತು ಮಾಡಬೇಕು ಎಂಬುದನ್ನು ತಿಳಿದುಕೊಂಡು ನಾವು ಜೀವನ ರೂಪಿಸಿಕೊಳ್ಳಬೇಕು. ಪ್ರತಿನಿತ್ಯವೂ ಕನಿಷ್ಠ ನಾಲ್ಕು ಕಿಲೋಮೀಟರ್ ನಡೆದರೆ ನಿಮ್ಮ ಹೃದಯ ದುಪ್ಪಟ್ಟು ಕೆಲಸ ನಿರ್ವಹಿಸುತ್ತದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ಮುಂಜಾನೆ ನಡಿಗೆ, ವ್ಯಾಯಾಮ ದ ಜೊತೆಗೆ ಕ್ರಮಬದ್ಧ ಆಹಾರ ಮುಖ್ಯವಾಗುತ್ತದೆ ಎಂದು ತಿಳಿಸಿದರು.


ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ ವೆಂಕಟೇಶ್ ರವರು ಮಾತನಾಡಿ ನಾವು ಅಂಬೇಡ್ಕರ್ ರವರನ್ನು ಸದಾ ಸ್ಮರಿಸಿಕೊಳ್ಳಬೇಕು. ಸರ್ವರಿಗೂ ಸಮಾನತೆ ಸಾರಿದ ಆ ಮಹಾನ್ ವ್ಯಕ್ತಿ ಶಿಕ್ಷಣ, ಹೋರಾಟ ಮತ್ತು ಸಮಾನತೆಯ ಹರಿಕಾರರು. ಪಂಚ ಸೂತ್ರಗಳನ್ನು ಸಾರಿದವರು. ಅವರಿಂದಲೇ ನಾವುಗಳು ಇಂದು ಈ ಹಂತಕ್ಕೇರಲು ಸಾಧ್ಯವಾಗಿದೆ. ಶಿಕ್ಷಣದಿಂದ ಮಾತ್ರ ನಾವು ಉತ್ತಮ ಪ್ರಜೆಗಳಾಗಲು ಸಾಧ್ಯವಾಗುತ್ತದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ನಮ್ಮ ಕಾಲೇಜು ಎರಡನೇ ಸ್ಥಾನದಲ್ಲಿದೆ. ಮೂರುವರೆ ಸಾವಿರ ವಿದ್ಯಾರ್ಥಿಗಳು ಇಲ್ಲಿ ಕಲಿಯುತ್ತಿದ್ದಾರೆ. ನಮ್ಮ ಕಾಲೇಜಿನ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿದ್ಯಾರ್ಥಿಗಳು ಇಡೀ ಕಾಲೇಜನ್ನು ಸ್ವಚ್ಚವಾಗಿಡಲು ಸಹಕಾರಿಯಾಗಿದ್ದಾರೆ ಎಂದು ಶ್ಲಾಘಿಸಿದರು.


ಸಾಮಾಜಿಕ ಕಾರ್ಯಕರ್ತ ಗೋ ರಾ ಶ್ರೀನಿವಾಸ ಮಾತನಾಡಿ ಶಿಸ್ತಿನಿಂದ ಶಿಕ್ಷಣ ಕಲಿತರೆ ಮಾತ್ರ ಭವಿಷ್ಯದ ಪ್ರಜೆಯಾಗಲು ಸಾಧ್ಯವಾಗುತ್ತದೆ. ಮೂರನೆ ವ್ಯಕ್ತಿಯ ಅಂತೆ-ಕಂತೆ ಮಾತಿಗೆ ಬೆಲೆ ನೀಡದೆ ನೀವು ನೀವಾಗಿದ್ದಾಗ ಮಾತ್ರ ಉತ್ತಮ ಜೀವನ ರೂಪಿಸಿಕೊಳ್ಳಬಹುದು. ಬೇರೆ ಯಾರನ್ನೂ ದೂಷಿಸದೆ ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದು ಕಿವಿಮಾತು ಹೇಳಿದರು. ನಾವುಗಳು ಪ್ರಕೃತಿಯಿಂದ ಪ್ರಕೃತಿಯೆಡೆಗೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಪ್ರಕೃತಿ ನಮಗೆ ಒಳ್ಳೆಯದನ್ನೇ ನೀಡಿದೆ. ನಾವು ಅದಕ್ಕೆ ವಿಷವುಣಿಸುತ್ತಿದ್ದೇವೆ. ನಮ್ಮ ಆರೋಗ್ಯ, ಆಯಸ್ಸಿನ ಜೊತೆಗೆ ಮುಂದಿನ ಪೀಳಿಗೆಗೆ ಕೊಡುಗೆ ನೀಡುವುದಾದರೆ ಅದು ಪ್ರಕೃತಿಯ ಉಳಿವು ಮಾತ್ರ ಎಂದು ತಿಳಿಸಿದರು.


ಕಾರ್ಯಕ್ರಮದಲ್ಲಿ ಡಾ ಮಹೇಶ್, ಪ್ರೊ ಶ್ರೀಕಾಂತ್ ಎನ್, ದೈಹಿಕ ನಿರ್ದೇಶಕ ಹಾಗೂ ಎನ್ಎಸ್ಎಸ್ ಅಧಿಕಾರಿ ನಂಜುಂಡ ಆರ್, ಕಾಲೇಜಿನ ವಿದ್ಯಾರ್ಥಿಗಳು ಮತ್ತಿತರರು ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in health »

ಬಿಜಿಎಸ್ ಗ್ಲೆನಿಗಲ್ಸ್ ಗ್ಲೋಬಲ್ ಆಸ್ಪತ್ರೆಯಲ್ಲಿ ಯಶಸ್ವಿ ಸಂಕಿರ್ಣ ಮತ್ತು ಪರಿಣಾಮಕಾರಿ ``ಟ್ರೂ ನೈಫ್ ವಿಧಾನದ ಚಿಕಿತ್ಸೆ
ಬಿಜಿಎಸ್ ಗ್ಲೆನಿಗಲ್ಸ್ ಗ್ಲೋಬಲ್ ಆಸ್ಪತ್ರೆಯಲ್ಲಿ ಯಶಸ್ವಿ ಸಂಕಿರ್ಣ ಮತ್ತು ಪರಿಣಾಮಕಾರಿ ``ಟ್ರೂ ನೈಫ್ ವಿಧಾನದ ಚಿಕಿತ್ಸೆ

ರಾಮನಗರ: ಡಿ-17; ಬಿಜಿಎಸ್ ಗ್ಲೆನಿಗಲ್ಸ್ ಗ್ಲೋಬಲ್ ಆಸ್ಪತ್ರೆಯ ಕ್ಯಾನ್ಸರ್ ಶಸ್ತ್ರಚಿಕಿತ್ಸಕರು ಯುವ ರೋಗಿಯೊಬ್ಬನಿಗೆ ಉನ್ನತ ರೆಡಿಯೋ ಥೆರಪಿ ಟ್

ಗ್ಯಾಂಗ್ರೀನ್​ ಆಗಿದ್ದ ಪತಿಯ ಕಾಲನ್ನು ಕತ್ತರಿಸಿ ಪತ್ನಿ ಕೈ ಗಿಟ್ಟ ಮಿಮ್ಸ್ ಆಸ್ಪತ್ರೆ. ಸಾರ್ವಜನಿಕರ ಆಕ್ರೋಶ
ಗ್ಯಾಂಗ್ರೀನ್​ ಆಗಿದ್ದ ಪತಿಯ ಕಾಲನ್ನು ಕತ್ತರಿಸಿ ಪತ್ನಿ ಕೈ ಗಿಟ್ಟ ಮಿಮ್ಸ್ ಆಸ್ಪತ್ರೆ. ಸಾರ್ವಜನಿಕರ ಆಕ್ರೋಶ

ಮಂಡ್ಯ: ಮಂಡ್ಯ ನಗರದ ಮಿಮ್ಸ್ ಆಸ್ಪತ್ರೆಯಲ್ಲಿ ರೋಗಿಯೊಬ್ಬರಿಗೆ ಗ್ಯಾಂಗ್ರೀನ್​ ಆಗಿದ್ದ ಕಾಲನ್ನು ಶಸ್ತ್ರಚಿಕಿತ್ಸೆ ಮಾಡಿ ತೆಗೆದು, ಬಳಿಕ ಆಸ್ಪತ

ಬಾಲು ಆಸ್ಪತ್ರೆಯಲ್ಲಿನ ಸ್ಕ್ಯಾನಿಂಗ್ ಕೊಠಡಿಗೆ ಬೀಗ ಜಡಿದ ಭ್ರೂಣ ಹತ್ಯೆ ಜಾಗೃತ ದಳ
ಬಾಲು ಆಸ್ಪತ್ರೆಯಲ್ಲಿನ ಸ್ಕ್ಯಾನಿಂಗ್ ಕೊಠಡಿಗೆ ಬೀಗ ಜಡಿದ ಭ್ರೂಣ ಹತ್ಯೆ ಜಾಗೃತ ದಳ

ಚನ್ನಪಟ್ಟಣ: ನಗರದ ಪ್ರತಿಷ್ಠಿತ ಬಾಲು ಆಸ್ಪತ್ರೆಗೆ ಕರ್ನಾಟಕ ಸರ್ಕಾರದ ಭ್ರೂಣ ಹತ್ಯೆ ಮತ್ತು ಭ್ರೂಣ ಲಿಂಗ ಪತ್ತೆ ಜಾಗೃತ ದಳದ ಅಧಿಕಾರಿಗಳು ದಿಢೀ

ಸ್ತನ್ಯಪಾನ ತಾಯಿ-ಮಗುವಿನ ಭಾವನಾತ್ಮಕ ಸಂಬಂಧವನ್ನು ಗಟ್ಟಿಗೊಳಿಸುತ್ತದೆ: ಡಾ. ಚಂದ್ರಶೇಖರಯ್ಯ
ಸ್ತನ್ಯಪಾನ ತಾಯಿ-ಮಗುವಿನ ಭಾವನಾತ್ಮಕ ಸಂಬಂಧವನ್ನು ಗಟ್ಟಿಗೊಳಿಸುತ್ತದೆ: ಡಾ. ಚಂದ್ರಶೇಖರಯ್ಯ

ರಾಮನಗರ, ಆ.04: ಎದೆ ಹಾಲಿನ ಮಹತ್ವ, ಹಾಲುಣಿಸುವಿಕೆ ಮತ್ತು ಮಕ್ಕಳ ಆರೈಕೆ ಕುರಿತು ಜಾಗೃತಿಯನ್ನು ಮೂಡಿಸುತ್ತಿದ್ದು, ತಾವೆಲ್ಲರೂ ಮಾಹಿತಿಯನ್ನು

ಚಂದ್ರು ಡಯಾಗ್ನೋಷಟಿಕ್ ನಿಂದ ಜಿಲ್ಲೆಯಲ್ಲೇ ಪ್ರಪ್ರಥಮ ಬಾರಿಗೆ ನೂತನ ತಂತ್ರಜ್ಞಾನದ ಎಂಆರ್‌ಐ ಸ್ಯ್ಕಾನಿಂಗ್
ಚಂದ್ರು ಡಯಾಗ್ನೋಷಟಿಕ್ ನಿಂದ ಜಿಲ್ಲೆಯಲ್ಲೇ ಪ್ರಪ್ರಥಮ ಬಾರಿಗೆ ನೂತನ ತಂತ್ರಜ್ಞಾನದ ಎಂಆರ್‌ಐ ಸ್ಯ್ಕಾನಿಂಗ್

ಚನ್ನಪಟ್ಟಣ.ಆ.೦೨: ಜಿಲ್ಲೆಯಲ್ಲಿ ಕಳೆದ ೨೫ ವರ್ಷಗಳಿಂದ ಗುಣಮಟ್ಟದ ಪ್ರಯೋಗಲಾಯ ಸೇವೆ ನೀಡುತ್ತಿರುವ ಚಂದ್ರ ಡಯಾಗ್ನೋಷ್ಟಿಕ್ ಸೆಂಟರ್‌ ವತಿಯಿಂದ ಜ

ಹೆಂಗಸರಲ್ಲೇ ವಿಶೇಷವಾಗಿ ಯುವತಿಯರಲ್ಲೇ ಸ್ಥೂಲಕಾಯ ಹೆಚ್ಚು ಡಾ ಪುನೀತ್
ಹೆಂಗಸರಲ್ಲೇ ವಿಶೇಷವಾಗಿ ಯುವತಿಯರಲ್ಲೇ ಸ್ಥೂಲಕಾಯ ಹೆಚ್ಚು ಡಾ ಪುನೀತ್

ಚನ್ನಪಟ್ಟಣ: ದೇಶದಲ್ಲಿ ಪುರುಷರಿಗಿಂತ ಮಹಿಳೆಯರಲ್ಲೇ ಸ್ಥೂಲಕಾಯ ಹೆಚ್ಚಾಗಿದ್ದು, ವಿಶೇಷವಾಗಿ ಯುವತಿಯರಲ್ಲಿ ಹೆಚ್ಚಾಗುತ್ತಿದೆ ಎಂದು ನಗರದ ಸಾರ್ವ

ಜಿಲ್ಲೆಯಲ್ಲಿ ಕ್ಷಯ ರೋಗ ನಿರ್ಮೂಲನೆ ಮಾಡಲು ಸೂಕ್ತ  ಕ್ರಮ ವಹಿಸಿ: ಚಿಕ್ಕಸುಬ್ಬಯ್ಯ
ಜಿಲ್ಲೆಯಲ್ಲಿ ಕ್ಷಯ ರೋಗ ನಿರ್ಮೂಲನೆ ಮಾಡಲು ಸೂಕ್ತ ಕ್ರಮ ವಹಿಸಿ: ಚಿಕ್ಕಸುಬ್ಬಯ್ಯ

ರಾಮನಗರ, ಮೇ೨೧: ಕ್ಷಯರೋಗದಿಂದ ಆರೋಗ್ಯ, ಸಾಮಾಜಿಕ ಮತ್ತು ಆರ್ಥಿಕ ವಿನಾಶಕಾರಿ ಪರಿಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು  ಕ್ಷಯ ಸಾಂಕ್ರಾಮಿಕ ರೋಗವನ್ನು ಕೊನೆಗೊಳಿಸುವ ಪ್ರಯತ್ನಗಳು

ಮಾ.16 ರಂದು 12 ರಿಂದ 14 ವರ್ಷದೊಳಗಿನ ಮಕ್ಕಳಿಗೆ ಕೋವಿಡ್ ಲಸಿಕೆ
ಮಾ.16 ರಂದು 12 ರಿಂದ 14 ವರ್ಷದೊಳಗಿನ ಮಕ್ಕಳಿಗೆ ಕೋವಿಡ್ ಲಸಿಕೆ

ರಾಮನಗರ ಮಾ.15:  ರಾಮನಗರ ಜಿಲ್ಲಾ ಆಸ್ಪತ್ರೆಯಲ್ಲಿ 12 ರಿಂದ 14 ವರ್ಷದೊಳಗಿನ ಮಕ್ಕಳಿಗೆ ಕೋರ್ಬಿವ್ಯಾಕ್ಸ್ ಲಸಿಕಾ ಅಭಿಯಾನದಡಿಯಲ್ಲಿ ಕೋವಿ

ಸಮರ್ಥನಂ ಸಂಸ್ಥೆಯ ಸೇವೆ ಶ್ಲಾಘನೀಯ ಡಾ. ವೇಣುಗೋಪಾಲ್
ಸಮರ್ಥನಂ ಸಂಸ್ಥೆಯ ಸೇವೆ ಶ್ಲಾಘನೀಯ ಡಾ. ವೇಣುಗೋಪಾಲ್

ಚನ್ನಪಟ್ಟಣ ತಾಲ್ಲೂಕು, ಬಿ.ವಿ.ಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾ ಎಸ್.ಬಿ.ಸಿ.ಸಿ ಘಟಕ ಮತ್ತು ಸಮರ್ಥನಂ ಅಂಗವಿಕಲರ ಸಂಸ್ಥೆ ವತಿಯಿಂದ ಜಾಗೃತಿ ಕಾರ್ಯಕ್ರಮ ಮತ್ತು ಆರೋಗ್ಯ ಪರಿಕರ ವಿತರಣ

ಜನವರಿ 10 ರಿಂದ 60 ವರ್ಷ ಮೇಲ್ಪಟ್ಟವರಿಗೆ ಕೋವಿಡ್   ಬೂಸ್ಟರ್ ಡೋಸ್
ಜನವರಿ 10 ರಿಂದ 60 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಬೂಸ್ಟರ್ ಡೋಸ್

ಆರೋಗ್ಯ ಇಲಾಖೆ ವತಿಯಿಂದ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು ಹಾಗೂ 60 ವರ್ಷ ಮೇಲ್ಪಟ್ಟ ಸಹ ಅಸ್ವಸ್ಥತೆ ಹೊಂದಿರುವ ಫಲಾನುಭವಿಗಳಿಗೆ ಜನವರಿ 10 ರಿಂದ ಹಂತ ಹಂತವಾಗಿ ಕೋವಿಡ್-19 ಮುನ್ನೆಚ್ಚ

Top Stories »  


Top ↑