Tel: 7676775624 | Mail: info@yellowandred.in

Language: EN KAN

    Follow us :


ಸಂಭ್ರಮದಿಂದ ಜರುಗಿದ ‘ಚರ್ತುವಿಧ ದಾನ’ ಸಮಾರಂಭ

Posted date: 04 Feb, 2018

Powered by:     Yellow and Red

ಸಂಭ್ರಮದಿಂದ ಜರುಗಿದ ‘ಚರ್ತುವಿಧ ದಾನ’ ಸಮಾರಂಭ

ಶ್ರವಣಬೆಳಗೊಳ : ಶ್ರೀ ಕ್ಷೇತ್ರದಲ್ಲಿ ಪಾರಂಪರಿಕವಾಗಿ ನಡೆದುಕೊಂಡು ಬರುತ್ತಿರುವ ಚರ್ತುವಿಧ ದಾನ ಪ್ರವರ್ತನೆ ಧಾರ್ಮಿಕ ಕೈಂಕರ್ಯಗಳು ಶನಿವಾರ ಸಂಭ್ರಮ, ಸಡಗರದಿಂದ ಜರುಗಿತು.
ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮಿಜಿ ಅವರು ಪೂರ್ವ ಪರಂಪರೆಯಂತೆ ಮಹಾಮಸ್ತಕಾಭಿಷೇಕದ ಹಿನ್ನೆಲೆಯಲ್ಲಿ ಜನಸಾಮಾನ್ಯರಿಗೆ ಹೊಸ ಉಡುಪು ಮತ್ತು ಧಾನ್ಯಗಳನ್ನು ವಿತರಿಸಿದರು.
ನಂತರ ಮಾತನಾಡಿದ ಅವರು, ಯಾವುದೇ ಶುಭ ಸಂದರ್ಭಕ್ಕೆ ಚಾಲನೆ ನೀಡುವ ಮೊದಲು ಜನಸಾಮಾನ್ಯರಿಗೆ ಹೊಸ ಬಟ್ಟೆ ಹಾಗೂ ಸಿಹಿ ಬೋಜನ ನೀಡುವುದು ನಮ್ಮ ಸಂಪ್ರದಾಯ ಎಂದು ಹೇಳಿದರು.
ಶ್ರೀ ಕ್ಷೇತ್ರದಲ್ಲಿ ಚರ್ತುವಿಧ ದಾನವಾದ ಆಹಾರ ದಾನ, ಜ್ಞಾನ ಧಾನ, ಅಭಯ ದಾನ ಹಾಗೂ ಔಷಧ ದಾನಕ್ಕೆ ಆದ್ಯತೆ ನೀಡುತ್ತಾ ಅನುಚಾನವಾಗಿ ಪಾಲಿಸಿಕೊಂಡು ಬರಲಾಗುತ್ತಿದೆ ಎಂದು ತಿಳಿಸಿದರು.
ಶ್ರವಣಬೆಳಗೊಳದಲ್ಲಿ ನಡೆಯುವ ಜಾತ್ರೆ ಇನ್ನಿತರೆ ಶುಭ ಸಂದರ್ಭಗಳಲ್ಲಿ ದಾನಗಳನ್ನು ನೀಡುತ್ತಾ ಬಂದಿದ್ದೇವೆ. ಮಹಮಸ್ತಕಾಭಿಷೇಕದ ಯಶಸ್ವಿಗೆ ಎಲ್ಲರೂ ಕೈಜೋಡಿಸಬೇಕು ಎಂದರು. 
ಶ್ರೀ ಕ್ಷೇತ್ರದಲ್ಲಿನ ಬಸದಿಗಳಲ್ಲಿ ಪೂಜೆ ಸಲ್ಲಿಸುವ ಪುರೋಹಿತರಿಗೆ, ಮಠದ ವಿವಿಧ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗಳಿಗೆ, ಶ್ರವಣಬೆಳಗೊಳದ ಸುತ್ತಮುತ್ತಲ ಗ್ರಾಮ ಪಂಚಾಯಿತಿ ನೌಕರರಿಗೆ ಅಕ್ಕಿ, ಬೆಲ್ಲ, ಗೋಧಿ, ಎಣ್ಣೆ, ಉಪ್ಪು, ಹುಣಸೇಹಣ್ಣು, ಸಾಂಬಾರ ಪದಾರ್ಥ, ಸೀರೆ, ಶಲ್ಯ ಹಾಗೂ ಪಂಚೆಗಳನ್ನು ದಾನವಾಗಿ ನೀಡಲಾಯಿತು.
ಮಹಾಮಸ್ತಕಾಭಿಷೇಕ ಮಹೋತ್ಸವ ರಾಷ್ಟ್ರೀಯ ಸಮಿತಿ ಅಧ್ಯಕ್ಷೆ ಎಂ.ಕೆ.ಸರಿತಾ ಜೈನ್, ಪ್ರಧಾನ ಕಾರ್ಯದರ್ಶಿ ಸತೀಶ್ ಜೈನ್, ಎಸ್‍ಡಿಜೆಎಂಐಎಂಸಿ ಸದಸ್ಯರಾದ ಎಸ್.ಪಿ,ಅಶೋಕ್‍ಕುಮಾರ್, ಎಸ್.ಪಿ.ಭಾನುಕುಮಾರ್ ಇತರರು ಉಪಸ್ಥಿತರಿದ್ದರು.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in karnataka »

ಕಳೆದ 30 ವರ್ಷಗಳಿಂದ ಶಿಕ್ಷಕರ ಸೇವೆ ಮಾಡಿದ್ದೇನೆ ಮತ್ತೊಮ್ಮೆ ಆಶೀರ್ವದಿಸಿ : ಪುಟ್ಟಣ್ಣ
ಕಳೆದ 30 ವರ್ಷಗಳಿಂದ ಶಿಕ್ಷಕರ ಸೇವೆ ಮಾಡಿದ್ದೇನೆ ಮತ್ತೊಮ್ಮೆ ಆಶೀರ್ವದಿಸಿ : ಪುಟ್ಟಣ್ಣ

ರಾಮನಗರ: ಶಿಕ್ಷಕರ ಕ್ಷೇತ್ರದ ಪ್ರತಿನಿಧಿಯಾಗಿ ಕಳೆದ 30 ವರ್ಷಗಳಿಂದಲೂ ನಿಮ್ಮ ಸೇವೆ ಮಾಡಿದ್ದೇನೆ. ಮುಂದೆಯೂ ನಿಮ್ಮ ಕಷ್ಟಗಳನ್ನರಿತು ನಿಮಗಾಗಿ ಮತ್ತಷ್ಟು ಕ

ಕೆರಗೋಡು ಧ್ವಜ ಪ್ರಕರಣ; ಪ್ರಚೋದನೆ ನೀಡುವವರ ವಿರುದ್ಧ ಕ್ರಮ: ಜಿಲ್ಲಾಧಿಕಾರಿ
ಕೆರಗೋಡು ಧ್ವಜ ಪ್ರಕರಣ; ಪ್ರಚೋದನೆ ನೀಡುವವರ ವಿರುದ್ಧ ಕ್ರಮ: ಜಿಲ್ಲಾಧಿಕಾರಿ

ರಾಮನಗರ, ಫೆ. 02  :  ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಇತ್ತೀಚೆಗೆ ನಡೆದ ಧ್ವಜ ಸ್ತಂಭದ ವಿಚಾರವು ತುಂಬಾ ಸೂಕ್ಷ್ಮ ವಿಚಾರವಾಗಿದ್ದು, ಈ ಸಂಬಂಧ ಯಾವು

ಸಂವಿಧಾನ ಜಾಗೃತಿ ಜಾಥಾ ಗೆ ಸ್ವಾಗತ
ಸಂವಿಧಾನ ಜಾಗೃತಿ ಜಾಥಾ ಗೆ ಸ್ವಾಗತ

ಚನ್ನಪಟ್ಟಣ: ಸಂವಿಧಾನ ಜಾಗೃತಿ ಜಾಥಾಕ್ಕೆ ತಾಲ್ಲೂಕು ಆಡಳಿತದಿಂದ ಅದ್ದೂರಿ ಸ್ವಾಗತ ಕೋರಲಾಯಿತು. ಇದೇ ಸಂದರ್ಭದಲ್ಲಿ

ಸಂವಿಧಾನ ಜಾಗೃತಿ ಜಾಥಾ

ಉಜ್ಜನಹಳ್ಳಿ ವೀರಾಂಜನೇಯಸ್ವಾಮಿ ಗೆ ಗ್ರಾಮಸ್ಥರಿಂದ ಅಭಿಷೇಕ
ಉಜ್ಜನಹಳ್ಳಿ ವೀರಾಂಜನೇಯಸ್ವಾಮಿ ಗೆ ಗ್ರಾಮಸ್ಥರಿಂದ ಅಭಿಷೇಕ

ಚನ್ನಪಟ್ಟಣ: ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಮಾಡಿದ ಹಿನ್ನೆಲೆಯಲ್ಲಿ ಚನ್ನಪಟ್ಟಣ ತಾಲ್ಲೂಕಿನ ಉಜ್ಜನಹಳ್ಳಿ ಗ್ರಾಮದ ಶ್ರೀ ವೀರಾಂನೇಯಸ್ವಾಮಿ ಗೆ ವಿಶೇಷ

ಇ-ಆಸ್ತಿ ತಂತ್ರಾಂಶದಲ್ಲಿ ಆಸ್ತಿ ದಾಖಲೀಕರಣ ಮತ್ತು ಗಣಕೀಕರಣಗೊಳಿಸಿ
ಇ-ಆಸ್ತಿ ತಂತ್ರಾಂಶದಲ್ಲಿ ಆಸ್ತಿ ದಾಖಲೀಕರಣ ಮತ್ತು ಗಣಕೀಕರಣಗೊಳಿಸಿ

ರಾಮನಗರ, ಜ. 17: ರಾಮನಗರ ಜಿಲ್ಲಾ ವ್ಯಾಪ್ತಿಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಖಾತೆ ಹೊಂದಿರುವ ಆಸ್ತಿಗಳನ್ನು ದಿನಾಂಕ: 02.05.2015 ರಿಂದ ಜಾರಿಗೆ ಬರುವಂತೆ,

ಬೋಧನಾ ಶುಲ್ಕ ಪಾವತಿಸಲು ಅವಧಿ ವಿಸ್ತರಣೆ
ಬೋಧನಾ ಶುಲ್ಕ ಪಾವತಿಸಲು ಅವಧಿ ವಿಸ್ತರಣೆ

ರಾಮನಗರ:  ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ 2019-20, 2020-21, 2021-22 ಮತ್ತು 2022-23ರ (ಜುಲೈ ಆವೃತ್ತಿ) ದ್ವಿತೀಯ/ತೃತೀಯ ವರ್ಷದ ಬಿ

ಸರ್ವಸಮ್ಮೇಳನಕ್ಕೂ ಮಾದರಿಯಾಗಿ ಯಶಸ್ವಿಯಾದ \'ಪರಿಸರಕ್ಕಾಗಿ ನಾವು\' ಸಮ್ಮೇಳನ
ಸರ್ವಸಮ್ಮೇಳನಕ್ಕೂ ಮಾದರಿಯಾಗಿ ಯಶಸ್ವಿಯಾದ \'ಪರಿಸರಕ್ಕಾಗಿ ನಾವು\' ಸಮ್ಮೇಳನ

ಹಾಸನ: ಪ್ರಾಕೃತಿಕ ಸೌಂದರ್ಯವು ಇ-ತ್ಯಾಜ್ಯ, ಕೆಲ ತಂತ್ರಜ್ಞಾನ ಹಾಗೂ ಪ್ಲಾಸ್ಟಿಕ್ ನಿಂದ  ಹಾಳಾಗುತ್ತಿದೆ. ಪರಿಸರ ನಾಶಕ್ಕೆ ಮುನ್ನುಡಿ ಬರೆದವನೇ

೫೨ ಲಕ್ಷಕ್ಕೂ ಹೆಚ್ಚು ಮೌಲ್ಯದ ಪಡಿತರ ಅಕ್ಕಿ ಗೋದಾಮಿನಲ್ಲೇ ಮಾಯ, ಅಧಿಕಾರಿಗಳಿಂದ ಪರಿಶೀಲನೆ, ವ್ಯವಸ್ಥಾಪಕನ ಬಂಧನ
೫೨ ಲಕ್ಷಕ್ಕೂ ಹೆಚ್ಚು ಮೌಲ್ಯದ ಪಡಿತರ ಅಕ್ಕಿ ಗೋದಾಮಿನಲ್ಲೇ ಮಾಯ, ಅಧಿಕಾರಿಗಳಿಂದ ಪರಿಶೀಲನೆ, ವ್ಯವಸ್ಥಾಪಕನ ಬಂಧನ

ಚನ್ನಪಟ್ಟಣ: ತಾಲ್ಲೂಕಿನಾದ್ಯಂತ ಪಡಿತರ ನ್ಯಾಯಬೆಲೆ ಅಂಗಡಿಗಳಿಗೆ ವಿತರಿಸಲು ಪಡಿತರ ಅಕ್ಕಿಯ ಪೈಕಿ ಸುಮಾರು ೫೨ ಲಕ್ಷಕ್ಕೂ  ಮೌಲ್ಯದ ೧,೫೪೩.೬೫ ಕ್ವಿಂಟಾಲ್ ಅ

ದಸರಾ ಎಂಬುದು ಮೈಸೂರಿಗಷ್ಟೇ ಸೀಮಿತವಾಗಬಾರದು, ಮನ-ಮನೆಯಲ್ಲೂ ದಸರಾ ಆಗಬೇಕು. ಡಾ ರೂಪಾ ಶ್ರೀಧರ್
ದಸರಾ ಎಂಬುದು ಮೈಸೂರಿಗಷ್ಟೇ ಸೀಮಿತವಾಗಬಾರದು, ಮನ-ಮನೆಯಲ್ಲೂ ದಸರಾ ಆಗಬೇಕು. ಡಾ ರೂಪಾ ಶ್ರೀಧರ್

ಚನ್ನಪಟ್ಟಣ: ದಸರಾ ಎಂದರೆ ಕೇವಲ ಮೈಸೂರು ಎಂಬಂತಾಗಿದೆ, ಇದು ನಾಡ ಹಬ್ಬ ಎಂಬುದು ಕೇವಲ ಉಲ್ಲೇಖಕ್ಕಷ್ಟೇ ಸೀಮಿತವಾಗಿದೆ. ಇದು ನಾಡಹಬ್ಬ ಎಂಬುದು ಸರ

ಒಕ್ಕಲಿಗರು ಸಂಸ್ಕೃತಿ ಹಿeನರಲ್ಲ ನೈಜ ಸಂಸ್ಕೃತಿಯ ಮಾಲೀಕರು, ಪ್ರೊ ಭಗವಾನ್ ಗೆ ತಿರುಗೇಟು ನೀಡಿದ ಹಿರಿಯ ರೈತ ಮುಖಂಡ ಸಿ ಪುಟ್ಟಸ್ವಾಮಿ
ಒಕ್ಕಲಿಗರು ಸಂಸ್ಕೃತಿ ಹಿeನರಲ್ಲ ನೈಜ ಸಂಸ್ಕೃತಿಯ ಮಾಲೀಕರು, ಪ್ರೊ ಭಗವಾನ್ ಗೆ ತಿರುಗೇಟು ನೀಡಿದ ಹಿರಿಯ ರೈತ ಮುಖಂಡ ಸಿ ಪುಟ್ಟಸ್ವಾಮಿ

ರಾಮನಗರ: ಚನ್ನಪಟ್ಟಣ; ಪ್ರೊ ಭಗವಾನ್ ವಿಚಾರವಾದಿ, ಮೂಢನಂಬಿಕೆಗಳನ್ನು ಕಿತ್ತೊಗೆಯಲು, ಪುರಾಣ ಎಂಬುದು ಕಪೋಲ ಕಲ್ಪಿತ, ಇತಿಹಾಸ ಎಂಬುದು ಸಾರ್ವಕಾಲ

Top Stories »  


Top ↑