Tel: 7676775624 | Mail: info@yellowandred.in

Language: EN KAN

    Follow us :


ಒಕ್ಕಲಿಗರು ಸಂಸ್ಕೃತಿ ಹಿeನರಲ್ಲ ನೈಜ ಸಂಸ್ಕೃತಿಯ ಮಾಲೀಕರು, ಪ್ರೊ ಭಗವಾನ್ ಗೆ ತಿರುಗೇಟು ನೀಡಿದ ಹಿರಿಯ ರೈತ ಮುಖಂಡ ಸಿ ಪುಟ್ಟಸ್ವಾಮಿ

Posted date: 14 Oct, 2023

Powered by:     Yellow and Red

ಒಕ್ಕಲಿಗರು ಸಂಸ್ಕೃತಿ ಹಿeನರಲ್ಲ ನೈಜ ಸಂಸ್ಕೃತಿಯ ಮಾಲೀಕರು, ಪ್ರೊ ಭಗವಾನ್ ಗೆ ತಿರುಗೇಟು ನೀಡಿದ ಹಿರಿಯ ರೈತ ಮುಖಂಡ ಸಿ ಪುಟ್ಟಸ್ವಾಮಿ

ರಾಮನಗರ: ಚನ್ನಪಟ್ಟಣ; ಪ್ರೊ ಭಗವಾನ್ ವಿಚಾರವಾದಿ, ಮೂಢನಂಬಿಕೆಗಳನ್ನು ಕಿತ್ತೊಗೆಯಲು, ಪುರಾಣ ಎಂಬುದು ಕಪೋಲ ಕಲ್ಪಿತ, ಇತಿಹಾಸ ಎಂಬುದು ಸಾರ್ವಕಾಲಿಕ ಸತ್ಯ ಹಾಗೂ ಶ್ರೇಷ್ಠ ಎಂಬುದನ್ನು ಸಾರುವ ರೀತಿ ಅಮೋಘ, ಆದರೆ ಅವರ ಕೆಲ ಹೇಳಿಕೆಗಳು ಆಚಾರವಂತರಿಗಿರಲಿ ಎಂತಹ ವಿಚಾರವಂತರೂ ಸಹಿಸಲಾಗದಂತಿರುತ್ತವೆ. ತೀರ ವೈಯುಕ್ತಿಕ ಹಾಗೂ ಸಮುದಾಯಗಳ ವಿರುದ್ಧದ ಹೇಳಿಕೆಗಳನ್ನು ಸಹಿಸಲಾಗುವುದಿಲ್ಲಾ, ಏಕೆಂದರೆ ಪ್ರತಿಯೊಂದು ಸಮುದಾಯಕ್ಕೂ ಅವರದ್ದೇ ಆದ

ಹಿನ್ನೆಲೆ ಇರುತ್ತದೆ. ಅದರಲ್ಲೂ ಒಕ್ಕಲಿಗ ಎಂದರೆ ಅದೊಂದು ಬಹುದೊಡ್ಡ ಇತಿಹಾಸ, "ಒಕ್ಕಲಿಗ ಒಕ್ಕದಿರೆ ಬಿಕ್ಕುವುದು ಜಗವೆಲ್ಲಾ" ಎಂಬ ಕವಿವಾಣಿಯೇ ಸಾಕ್ಷಿ. ಒಕ್ಕಲಿಗ ಒಂದು ಜಾತಿಯಲ್ಲಾ, ಅದೊಂದು ಶಕ್ತಿ. ಮಹಿಷಾ ದಸರಾ ಸಂದರ್ಭದಲ್ಲಿ ಪ್ರೊ ಭಗವಾನ್ ಒಕ್ಕಲಿಗರು ಸಂಸ್ಕೃತಿ ಹೀನರು ಎಂದು ಜರಿದಿರುವುದು ಅವರು ತಿನ್ನುವ ಅನ್ನಕ್ಕೆ ದ್ರೋಹ ಎಸಗಿದಂತೆ. ಇವರ ಹೇಳಿಕೆಯನ್ನು ಖಂಡಿಸಿ ಚನ್ನಪಟ್ಟಣ ತಾಲ್ಲೂಕಿನ ಅರಳಾಳುಸಂದ್ರ ಗ್ರಾಮದ ಹಿರಿಯ ರೈತ ಮುಖಂಡರಾದ ಸಿ ಪುಟ್ಟಸ್ವಾಮಿ ಯವರು ಒಕ್ಕಲಿಗ ಎಂದರೇನು ಎಂಬುದನ್ನು ಸವಿವರವಾಗಿ ಬರೆದಿದ್ದಾರೆ.


ಒಕ್ಕಲಿಗರು ಸಂಸ್ಕೃತಿ ಹೀನರು" ಎನ್ನುವ ಭಗವಾನ್ ಧೋರಣೆ ಅವಿವೇಕತನದ ಪರಮಾವಧಿ,  ಇಡೀ ಸಂಸ್ಕೃತಿಯನ್ನೇ ಹುಟ್ಟು ಹಾಕಿದ, ಹಾಕುತ್ತಿರುವ ಮತ್ತು ಪೋಷಿಸಿ ಬೆಳೆಸುತ್ತಿರುವ ಪರಂಪರೆ ಒಕ್ಕಲು  ಸಮುದಾಯದ್ದು, ಒಕ್ಕಲಿಗರು ಬೆಳೆದು ಕೊಟ್ಟ ಅನ್ನ ತಿನ್ನುವ ಈ ಭಗವಾನ್ ಎಂಬ ತಿಕ್ಕಲು ಮನುಷ್ಯನಿಗೆ ಮೂಲ ಒಕ್ಕಲುತನ ಹೇಗೆ, ಯಾವರೀತಿ ನಾಗರೀಕತೆ ಕಡೆಗೆ ಕೊಂಡೊಯ್ದಿತು ಎಂಬ ಅರಿವಿಲ್ಲಾ. ಮುಂದಿನ ಶತಮಾನಗಳಿಗೆ ಶೇ 70 ಭಾಗ ಕೊಡುಗೆಯನ್ನು ಭೂತ, ಭವಿಷ್ಯ, ವರ್ತಮಾನಗಳಲ್ಲಿ ಕೊಟ್ಟಿದೆ, ಕೊಡುತ್ತಲೇ ಇದೆ ಎಂಬುದನ್ನು ಸಣ್ಣ ಉದಾಹರಣೆ ಸಹಿತ ಈತನಿಗೆ ತಿಳಿಸಿ ಹೇಳಬೇಕಾಗಿದೆ.


 ಹೊಲದಲ್ಲಿ ಕಳೆಕ್ಕಿತ್ತು ಬೆಳೆ ಸಂರಕ್ಷಿಸಿ ನಾಡಿಗೆ ಕೊಡುತ್ತಿರವ ಭೂಮಿ ತಾಯಿಯ ಮಕ್ಕಳ ಶ್ರಮ ಮೌಲ್ಯ ಎಂಬುದನ್ನು ಅರಿತರೆ ಭಗವಾನ್ ಮತ್ತಂತವರ  ಪ್ರೊಫೆಸರ್ ಗಿರಿ ಸಾರ್ಥಕವಾಗಬಹುದಿತ್ತು!? ಸಾಹಿತಿಗಳು ಲೇಖಕರು ಇತಿಹಾಸಕಾರರು ಪ್ರಜ್ಞಾವಂತರು ಪ್ರಗತಿಗಾಮಿಗಳು ವಿವೇಕ ಉಳ್ಳವರು ಹೊಲದಲ್ಲಿನ ಬೆಳೆ ನಡುವೆ ಕಳೆಯಾಗಿ ಬೆಳೆಗೆ ತೊಡಕಾಗಿ ಉತ್ಪತ್ತಿಗೆ ಧಕ್ಕೆ ಮಾಡುವ ಮತ್ತು ಆ ಕೃಷಿಕರಿಗೆ ಆರ್ಥಿಕ ನಷ್ಟ ಸಾಧ್ಯವಾಗುವ ಅಂಶ ಮನಗಾಣದ್ದು ಬಹುದೊಡ್ಡ ಅವಿವೇಕ, ಕಾರಣ ಕಳೆಯನ್ನು ಬೇರು ಸಹಿತ ಕಿತ್ತು ಬೆಳೆಯನ್ನು ಕಾಪಾಡಿಕೊಳ್ಳುವ ನಿದರ್ಶನ, ಇಡೀ ಸಮಾಜದಲ್ಲಿ ಅವಿವೇಕಿಗಳನ್ನು ಲೂಟಿಕೋರರನ್ನು ಸಮ ಸಮಾಜದ ನಿರ್ಮಾಣಕ್ಕೆ ಅಡ್ಡಿಯಾಗಿರುವವರನ್ನು ಪ್ರಗತಿಗೆ ಅಡ್ಡಿಪಡಿಸುವವರನ್ನು ತಾರತಮ್ಯ ಹುಟ್ಟು ಹಾಕುತ್ತಲೇ ಬದುಕುತ್ತಿರುವವರನ್ನು ಈ ಸಮಾಜದ ಕಳೆ ಎಂಬುದು ,, ಬೌದ್ದಿಕ ಹಾಗೂ ಪಂಥೀಯ ಸಾಮ್ರಾಜ್ಯದ ವಾರಸುದಾರರು ಎಂಬುದು, ಜಗಜ್ಜಾಹಿರಾಗಿದೆ.


ಉದ್ರೇಕ, ಆವೇಶ ಹಾಗೂ ಒಕ್ಕಲಿಗರ ಇತಿಹಾಸ ಒಕ್ಕಲುತನದ ಮೂಲ ಅದರ ಪರಂಪರೆ ಒಕ್ಕಲುತನ ತನ್ನ ಒಡಲಲ್ಲಿ ತುಂಬಿಟ್ಟುಕೊಂಡಿರುವ ಸತ್ಯ ಸಂಗತಿಗಳನ್ನು ಕನಿಷ್ಠವಾದರೂ ಇರಬೇಕು. ಅದು ನಮ್ಮ ಸುಸಂಸ್ಕೃತಿ,, ನಮ್ಮ ದೈವಿ ಭಾವ, ನಮ್ಮ ಅಸ್ಮಿತೆ, ಒಕ್ಕಲುತನದಲ್ಲಿನ ಶ್ರಮ ಮೌಲ್ಯ ಅದು ಇಂದಿಗೂ ಲೆಕ್ಕ ಹಾಕಲಿಕ್ಕೆ ಆಗದಂತಹ ವಿಚಾರಗಳ ಬಗ್ಗೆ ಮಾತನಾಡಲಾಗದ ಈ ಭಗವಾನ್ ಓರ್ವ ಮತಿಗೇಡಿ, ಮತಿಹೀನನಾಗಿದ್ದಾನೆ, ಇಂತಹ ಮತಿಗೇಡಿ ಇಡೀ ಜಗತ್ತಿನ ಎಲ್ಲಾ ಜೀವರಾಶಿಗಳಿಗೂ ಅನ್ನದಾತನಾಗಿರುವ ಒಕ್ಕಲಿಗ ಸಮುದಾಯದ ವಿರುದ್ಧ ಮಾತನಾಡಿರುವುದು ಅವರ ಯೋಗ್ಯತೆಯನ್ನು ಸಾರುತ್ತದೆ.


 ತೆಂಗಿನ ಗಿಡ ನೆಟ್ಟು ಐದಾರು ವರ್ಷಗಳ ಕಾಲ ಕಾಪಿಟ್ಟು ಹೊಂಬಾಳೆ ಬಂದು ಗೊನೆ ತೂಗುವ ನಂತರದಲ್ಲಿ ಕುರುಹೊಂಬಾಳೆ, ಎಳೆನೀರು, ಕಾಯಿ ಹಣ್ಣುಗಾಯಿ ಹೀಗೆ ತೊಟ್ಟು ಕಳೆದುಕೊಳ್ಳುವ ನೈಸರ್ಗಿಕ ಕ್ರಿಯೆ ಏನಿದೆಯೋ ಅಲ್ಲೊಂದು ಜೀವ ಸಂಸ್ಕೃತಿ ಇದೆ. ಅಲ್ಲೊಂದು ಕೀಟಗಳ ಜಗತ್ತೇ ಇದೆ ಎನ್ನುವುದನ್ನು ಭಗವಾನ್ ಅಂತಹ ಮೈಕಾಸುರನ ಮುಂದಿನ ವಾಚಾಳಿಗೆ ಅರಿವಾಗುವುದಿಲ್ಲ. ಆ ತೆಂಗು ನಂತರ ಹಣ್ಣುಗಾಯಿಯಾಗಿ, ಒಣಗಿ ಕೊಬ್ಬರಿಯಾಗಿ, ಕೊಬ್ಬರಿಯಿಂದ ಎಣ್ಣೆ ತೆಗೆದು ಎಣ್ಣೆಯನ್ನು ಉಪಯೋಗಿಸುವ ಎಲ್ಲಾ ವಿಧಾನಗಳ ಹಿಂದೆ ಮತ್ತೊಂದು ಸಂಸ್ಕೃತಿಯನ್ನು ತೆಂಗಿನ ಮರದಿಂದ ಅರ್ಥೈಸಬೇಕಾಗಿದೆ. ಯಾವುದನ್ನು ಸತ್ವಪೂರ್ಣವಾಗಿ ಗಮನಿಸಿ ಅರಗಿಸಿಕೊಂಡು ಅಲ್ಲಿರುವ ಸುಸಂಸ್ಕೃತಿಯ ಕಾರ್ಯ 

ವಿಧಾನ ಈ ಎಲ್ಲವನ್ನು ಆ ರೈತ ಸಮುದಾಯವೇ ಸಾಧ್ಯ ಮಾಡಿದೆ ,ಇಲ್ಲಿ ಇಂತಹ ಅವಿವೇಕದ ಪರಮಾವಧಿಗೆ ತಲುಪಿದ ಸದಾಕಾಲ ಮಾಧ್ಯಮಗಳಲ್ಲಿ ತಮ್ಮ ಆಕಾರ ಮತ್ತು ಆಚಾರಗಳನ್ನು ಪುಕ್ಕಟ್ಟೆ ಉದುರಿಸುವ ಇಂತಹ ಕೃತ್ಯ ತಾತ್ಕಾಲಿಕವಾಗಿ ಖುಷಿ ನೀಡಬಹುದೇ ಹೊರತು ಶಾಸ್ವತವಲ್ಲಾ.


 ಇಡೀ ಜಗತ್ತಿಗೆ ಸಂಸ್ಕೃತಿಯನ್ನೇ ಧಾರೆ ಎರೆಯುತ್ತಿರುವ ಒಕ್ಕಲಿಗ ಅರ್ಥಾತ್  ರೈತ ಸಮುದಾಯ ಇಂತಹವರು ನೀಡುವ ಸರ್ಟಿಫಿಕೇಟ್ ಗಳಿಗೆ ತಲೆಬಾಗುವುದಿಲ್ಲ, ಭಗವಾನ್ ಎಂದಾದರೂ ನೇಗಿಲ ಕುಲದಲ್ಲಿ ಅಡಗಿರುವ ಧರ್ಮ ಮತ್ತು ಕರ್ಮವನ್ನು ಅರಿತಿದ್ದದ್ದೇ ಆದರೆ ಆತ ಮಾತನಾಡುತ್ತಿರಲಿಲ್ಲ. ರೈತರು ಬೆಳೆದು ಕೊಟ್ಟ ಅನ್ನ ಹಾಲು, ಹಣ್ಣು ತಿನ್ನುತ್ತಲೇ ಸಂಸ್ಕೃತಿ ಹೀನರು ಎಂದು ಚಪಲ ಚಿತ್ತ ಹೇಳಿಕೆ ಹರಿಬಿಟ್ಟ ಸದಾ ಸುದ್ದಿಯಲ್ಲಿ ಇರಬೇಕೆಂಬ ಹಪಾಹಪಿ, ಮತ್ತು ಒಕ್ಕಲು ಮಕ್ಕಳನ್ನು ಕೆಣಕುವ ನೀಚತನವೆಂದು ಪರಿಭಾವಿಸುತ್ತಾ ತೀಕ್ಷ್ಣವಾದ ಪ್ರತಿರೋಧವನ್ನು ಎದುರಿಸಬೇಕಾಗುತ್ತದೆ, ಎಂದು ಹೇಳಲು ಯಾವುದೇ ಸಂಕೋಚವಿಲ್ಲ, ನೀವು ನಿಜವಾಗಿಯೂ ಪಾಂಡಿತ್ಯ ಇದ್ದವರೇ ಆಗಿದ್ದರೆ ಒಕ್ಕಲಿಗರಿಗೆ ಸ್ವಾತಂತ್ರ್ಯ ಬಂದಂದಿನಿಂದಲೂ ಹಿಂದಿನವರೆಗೂ ಮುಂದುವರೆಯುತ್ತಿರುವ ಸಂಕಷ್ಟಗಳ ಸರಮಾಲೆಗೆ ನ್ಯಾಯ ಒದಗಿಸಲು ಮನಸ್ಸು ಮಾಡಿದ್ದೀರಾ ?, ಎಂದಾದರೂ ಮಳೆ ಆಧಾರಿತ ಬೆಳೆಗಳ ಬಗ್ಗೆ, ಅರೇ ನೀರಾವರಿ ಬೆಳೆಗಳ ಬಗ್ಗೆ, ಸಮಗ್ರ ನೀರಾವರಿ ವಾಣಿಜ್ಯ ಬೆಳೆಗಳ ಬಗ್ಗೆ ಅಧ್ಯಯನ ಮಾಡಿದ್ದೀರಾ?!, ಅಲ್ಲಿನ ಅಗೋಚರ ಸಂಸ್ಕೃತಿ ಇಡೀ ಜೀವ ಜಗತ್ತಿಗೆ ಹೇಗೆ ಪೂರಕವಾಗಿ ನಿಂತಿದೆ ಎಂಬುದರ ಬಗ್ಗೆ ಅರಿವಿದೆಯೇ.


 ಥಿಯರಿಗೂ ಪ್ರಾಕ್ಟಿಕಲ್ ಗೂ ಅಜಗಜಾಂತರ ವ್ಯತ್ಯಾಸವಿದೆ, ನಾಲ್ಕು ಗೋಡೆ ಮಧ್ಯೆ ಪಾಠ ಮಾಡಿ ಸಂಬಳ ಪಡೆದು ಸಾಯುವ ತನಕ ನಿವೃತ್ತಿ ವೇತನ ಪಿಂಚಣಿ ಪಡೆಯುವ ನೀವು ಹೇಳಿದಾಕ್ಷಣ ಒಕ್ಕಲಿಗರು ಸಂಸ್ಕೃತಿ ಹೀನರು ಆಗಲು ಸಾಧ್ಯವಿಲ್ಲ ಬೌದ್ಧಿಕ ದಾರಿದ್ರ್ಯಕ್ಕೂ ಮಿತಿ ಇರಲಿ, ಹೊಲ ಉಳುಮೆ ಮಾಡುವಾಗ ಬನ್ನಿ ಮೇಳಿ ಹಾಲು ಕುಡಿಸುತ್ತೇವೆ, ಆ ಸವಿರುಚಿ ಅನುಭವಿಸುವಿರಿ, ಸಂವಿಧಾನ ವಾಕ್ ಸ್ವಾತಂತ್ರ್ಯವನ್ನು ನೀಡಿದೆ ಎಂದು ಹೆಚ್ಚಾಗಿ ಬಿಡುವುದು ಇಚ್ಚಾನುಸಾರ ನಾಲಿಗೆ ಹರಿ ಬಿಡುವುದನ್ನು ನಿಲ್ಲಿಸಿ ನಮಗೂ ಕೂಡ ಸಂವಿಧಾನ ನಿಮ್ಮ ಅವಿವೇಕ ಅಜ್ಞಾನವನ್ನು ಪ್ರಶ್ನಿಸಲು ಪ್ರತಿರೋಧಿಸುವ ಹಕ್ಕನ್ನು ನೀಡಿದೆ. ಇಲ್ಲೊಂದು ಒಕ್ಕಲು ತನದ ಸಂವಿಧಾನವಿದೆ ಆ ಸಂವಿಧಾನವನ್ನು ಅರ್ಥೈಸಿಕೊಳ್ಳಬೇಕಾದರೆ ಶಿಸ್ತಿನಿಂದ ಕೃಷಿ ಕ್ಷೇತ್ರದಲ್ಲಿ ಕೆಲಸಗಾರನಾಗಿ ಭಾಗವಹಿಸಿ ಯಾವುದಾದರೂ ಒಂದು ಬೆಳೆಯನ್ನು ಬೆಳೆದು ತೋರಿಸಲು ಮುಂದಾಗಿ.


ಆಗ ಅಲ್ಲಿರುವ ನೈಜ ಸಂಸ್ಕೃತಿ ಜೀವ ಸಂಸ್ಕೃತಿ ಜೀವೋದ್ಯಮ ಹೀಗೆ ಹಲವಾರು ಆಯಾಮಗಳನ್ನು ಮನಗಂಡು ಸಂಸ್ಕೃತಿ ಎಂದರೆ ನಮ್ಮ ನಾಲಿಗೆಯ ಮೇಲಾಗಲಿ ಅಥವಾ ಅಕ್ಷರದಲ್ಲಿ ಮೂಡಿದ್ದಲ್ಲ ಅದು ಕೈಂಕರ್ಯ, ಅಲ್ಲಿ ಒಡ ಮೂಡುವ ಸಂಸ್ಕೃತಿಯ ಮಾಲೀಕ ಯಾರು ಎಂಬುದನ್ನು ಮನಗಾಣಲು ಅವಕಾಶವಿದೆ. ರೈತ ಸಮುದಾಯದ ಅರ್ಥಾತ್‌ ಒಕ್ಕಲಿಗ ಸಮುದಾಯದ ವಿರುದ್ಧ ಮಾತನಾಡಿರುವ ನೀವು ಪ್ರತಿ ಶ್ರಮಿಕನನ್ನು ಬಹಿರಂಗವಾಗಿ ಕ್ಷಮೆ ಯಾಚಿಸಿ, ಇಲ್ಲವಾದರೆ ಉಗ್ರ ಚಳವಳಿಯನ್ನು ಎದುರಿಸಬೇಕಾಗುತ್ತದೆ.

*ಸಿ. ಪುಟ್ಟಸ್ವಾಮಿ, ಹಿರಿಯ ರೈತ ಮುಖಂಡರು.*


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in karnataka »

ಕಳೆದ 30 ವರ್ಷಗಳಿಂದ ಶಿಕ್ಷಕರ ಸೇವೆ ಮಾಡಿದ್ದೇನೆ ಮತ್ತೊಮ್ಮೆ ಆಶೀರ್ವದಿಸಿ : ಪುಟ್ಟಣ್ಣ
ಕಳೆದ 30 ವರ್ಷಗಳಿಂದ ಶಿಕ್ಷಕರ ಸೇವೆ ಮಾಡಿದ್ದೇನೆ ಮತ್ತೊಮ್ಮೆ ಆಶೀರ್ವದಿಸಿ : ಪುಟ್ಟಣ್ಣ

ರಾಮನಗರ: ಶಿಕ್ಷಕರ ಕ್ಷೇತ್ರದ ಪ್ರತಿನಿಧಿಯಾಗಿ ಕಳೆದ 30 ವರ್ಷಗಳಿಂದಲೂ ನಿಮ್ಮ ಸೇವೆ ಮಾಡಿದ್ದೇನೆ. ಮುಂದೆಯೂ ನಿಮ್ಮ ಕಷ್ಟಗಳನ್ನರಿತು ನಿಮಗಾಗಿ ಮತ್ತಷ್ಟು ಕ

ಕೆರಗೋಡು ಧ್ವಜ ಪ್ರಕರಣ; ಪ್ರಚೋದನೆ ನೀಡುವವರ ವಿರುದ್ಧ ಕ್ರಮ: ಜಿಲ್ಲಾಧಿಕಾರಿ
ಕೆರಗೋಡು ಧ್ವಜ ಪ್ರಕರಣ; ಪ್ರಚೋದನೆ ನೀಡುವವರ ವಿರುದ್ಧ ಕ್ರಮ: ಜಿಲ್ಲಾಧಿಕಾರಿ

ರಾಮನಗರ, ಫೆ. 02  :  ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಇತ್ತೀಚೆಗೆ ನಡೆದ ಧ್ವಜ ಸ್ತಂಭದ ವಿಚಾರವು ತುಂಬಾ ಸೂಕ್ಷ್ಮ ವಿಚಾರವಾಗಿದ್ದು, ಈ ಸಂಬಂಧ ಯಾವು

ಸಂವಿಧಾನ ಜಾಗೃತಿ ಜಾಥಾ ಗೆ ಸ್ವಾಗತ
ಸಂವಿಧಾನ ಜಾಗೃತಿ ಜಾಥಾ ಗೆ ಸ್ವಾಗತ

ಚನ್ನಪಟ್ಟಣ: ಸಂವಿಧಾನ ಜಾಗೃತಿ ಜಾಥಾಕ್ಕೆ ತಾಲ್ಲೂಕು ಆಡಳಿತದಿಂದ ಅದ್ದೂರಿ ಸ್ವಾಗತ ಕೋರಲಾಯಿತು. ಇದೇ ಸಂದರ್ಭದಲ್ಲಿ

ಸಂವಿಧಾನ ಜಾಗೃತಿ ಜಾಥಾ

ಉಜ್ಜನಹಳ್ಳಿ ವೀರಾಂಜನೇಯಸ್ವಾಮಿ ಗೆ ಗ್ರಾಮಸ್ಥರಿಂದ ಅಭಿಷೇಕ
ಉಜ್ಜನಹಳ್ಳಿ ವೀರಾಂಜನೇಯಸ್ವಾಮಿ ಗೆ ಗ್ರಾಮಸ್ಥರಿಂದ ಅಭಿಷೇಕ

ಚನ್ನಪಟ್ಟಣ: ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಮಾಡಿದ ಹಿನ್ನೆಲೆಯಲ್ಲಿ ಚನ್ನಪಟ್ಟಣ ತಾಲ್ಲೂಕಿನ ಉಜ್ಜನಹಳ್ಳಿ ಗ್ರಾಮದ ಶ್ರೀ ವೀರಾಂನೇಯಸ್ವಾಮಿ ಗೆ ವಿಶೇಷ

ಇ-ಆಸ್ತಿ ತಂತ್ರಾಂಶದಲ್ಲಿ ಆಸ್ತಿ ದಾಖಲೀಕರಣ ಮತ್ತು ಗಣಕೀಕರಣಗೊಳಿಸಿ
ಇ-ಆಸ್ತಿ ತಂತ್ರಾಂಶದಲ್ಲಿ ಆಸ್ತಿ ದಾಖಲೀಕರಣ ಮತ್ತು ಗಣಕೀಕರಣಗೊಳಿಸಿ

ರಾಮನಗರ, ಜ. 17: ರಾಮನಗರ ಜಿಲ್ಲಾ ವ್ಯಾಪ್ತಿಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಖಾತೆ ಹೊಂದಿರುವ ಆಸ್ತಿಗಳನ್ನು ದಿನಾಂಕ: 02.05.2015 ರಿಂದ ಜಾರಿಗೆ ಬರುವಂತೆ,

ಬೋಧನಾ ಶುಲ್ಕ ಪಾವತಿಸಲು ಅವಧಿ ವಿಸ್ತರಣೆ
ಬೋಧನಾ ಶುಲ್ಕ ಪಾವತಿಸಲು ಅವಧಿ ವಿಸ್ತರಣೆ

ರಾಮನಗರ:  ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ 2019-20, 2020-21, 2021-22 ಮತ್ತು 2022-23ರ (ಜುಲೈ ಆವೃತ್ತಿ) ದ್ವಿತೀಯ/ತೃತೀಯ ವರ್ಷದ ಬಿ

ಸರ್ವಸಮ್ಮೇಳನಕ್ಕೂ ಮಾದರಿಯಾಗಿ ಯಶಸ್ವಿಯಾದ \'ಪರಿಸರಕ್ಕಾಗಿ ನಾವು\' ಸಮ್ಮೇಳನ
ಸರ್ವಸಮ್ಮೇಳನಕ್ಕೂ ಮಾದರಿಯಾಗಿ ಯಶಸ್ವಿಯಾದ \'ಪರಿಸರಕ್ಕಾಗಿ ನಾವು\' ಸಮ್ಮೇಳನ

ಹಾಸನ: ಪ್ರಾಕೃತಿಕ ಸೌಂದರ್ಯವು ಇ-ತ್ಯಾಜ್ಯ, ಕೆಲ ತಂತ್ರಜ್ಞಾನ ಹಾಗೂ ಪ್ಲಾಸ್ಟಿಕ್ ನಿಂದ  ಹಾಳಾಗುತ್ತಿದೆ. ಪರಿಸರ ನಾಶಕ್ಕೆ ಮುನ್ನುಡಿ ಬರೆದವನೇ

೫೨ ಲಕ್ಷಕ್ಕೂ ಹೆಚ್ಚು ಮೌಲ್ಯದ ಪಡಿತರ ಅಕ್ಕಿ ಗೋದಾಮಿನಲ್ಲೇ ಮಾಯ, ಅಧಿಕಾರಿಗಳಿಂದ ಪರಿಶೀಲನೆ, ವ್ಯವಸ್ಥಾಪಕನ ಬಂಧನ
೫೨ ಲಕ್ಷಕ್ಕೂ ಹೆಚ್ಚು ಮೌಲ್ಯದ ಪಡಿತರ ಅಕ್ಕಿ ಗೋದಾಮಿನಲ್ಲೇ ಮಾಯ, ಅಧಿಕಾರಿಗಳಿಂದ ಪರಿಶೀಲನೆ, ವ್ಯವಸ್ಥಾಪಕನ ಬಂಧನ

ಚನ್ನಪಟ್ಟಣ: ತಾಲ್ಲೂಕಿನಾದ್ಯಂತ ಪಡಿತರ ನ್ಯಾಯಬೆಲೆ ಅಂಗಡಿಗಳಿಗೆ ವಿತರಿಸಲು ಪಡಿತರ ಅಕ್ಕಿಯ ಪೈಕಿ ಸುಮಾರು ೫೨ ಲಕ್ಷಕ್ಕೂ  ಮೌಲ್ಯದ ೧,೫೪೩.೬೫ ಕ್ವಿಂಟಾಲ್ ಅ

ದಸರಾ ಎಂಬುದು ಮೈಸೂರಿಗಷ್ಟೇ ಸೀಮಿತವಾಗಬಾರದು, ಮನ-ಮನೆಯಲ್ಲೂ ದಸರಾ ಆಗಬೇಕು. ಡಾ ರೂಪಾ ಶ್ರೀಧರ್
ದಸರಾ ಎಂಬುದು ಮೈಸೂರಿಗಷ್ಟೇ ಸೀಮಿತವಾಗಬಾರದು, ಮನ-ಮನೆಯಲ್ಲೂ ದಸರಾ ಆಗಬೇಕು. ಡಾ ರೂಪಾ ಶ್ರೀಧರ್

ಚನ್ನಪಟ್ಟಣ: ದಸರಾ ಎಂದರೆ ಕೇವಲ ಮೈಸೂರು ಎಂಬಂತಾಗಿದೆ, ಇದು ನಾಡ ಹಬ್ಬ ಎಂಬುದು ಕೇವಲ ಉಲ್ಲೇಖಕ್ಕಷ್ಟೇ ಸೀಮಿತವಾಗಿದೆ. ಇದು ನಾಡಹಬ್ಬ ಎಂಬುದು ಸರ

ಒಕ್ಕಲಿಗರು ಸಂಸ್ಕೃತಿ ಹಿeನರಲ್ಲ ನೈಜ ಸಂಸ್ಕೃತಿಯ ಮಾಲೀಕರು, ಪ್ರೊ ಭಗವಾನ್ ಗೆ ತಿರುಗೇಟು ನೀಡಿದ ಹಿರಿಯ ರೈತ ಮುಖಂಡ ಸಿ ಪುಟ್ಟಸ್ವಾಮಿ
ಒಕ್ಕಲಿಗರು ಸಂಸ್ಕೃತಿ ಹಿeನರಲ್ಲ ನೈಜ ಸಂಸ್ಕೃತಿಯ ಮಾಲೀಕರು, ಪ್ರೊ ಭಗವಾನ್ ಗೆ ತಿರುಗೇಟು ನೀಡಿದ ಹಿರಿಯ ರೈತ ಮುಖಂಡ ಸಿ ಪುಟ್ಟಸ್ವಾಮಿ

ರಾಮನಗರ: ಚನ್ನಪಟ್ಟಣ; ಪ್ರೊ ಭಗವಾನ್ ವಿಚಾರವಾದಿ, ಮೂಢನಂಬಿಕೆಗಳನ್ನು ಕಿತ್ತೊಗೆಯಲು, ಪುರಾಣ ಎಂಬುದು ಕಪೋಲ ಕಲ್ಪಿತ, ಇತಿಹಾಸ ಎಂಬುದು ಸಾರ್ವಕಾಲ

Top Stories »  


Top ↑