Tel: 7676775624 | Mail: info@yellowandred.in

Language: EN KAN

    Follow us :


ಕಳೆದ 30 ವರ್ಷಗಳಿಂದ ಶಿಕ್ಷಕರ ಸೇವೆ ಮಾಡಿದ್ದೇನೆ ಮತ್ತೊಮ್ಮೆ ಆಶೀರ್ವದಿಸಿ : ಪುಟ್ಟಣ್ಣ

Posted date: 09 Feb, 2024

Powered by:     Yellow and Red

ಕಳೆದ 30 ವರ್ಷಗಳಿಂದ ಶಿಕ್ಷಕರ ಸೇವೆ ಮಾಡಿದ್ದೇನೆ ಮತ್ತೊಮ್ಮೆ ಆಶೀರ್ವದಿಸಿ : ಪುಟ್ಟಣ್ಣ

ರಾಮನಗರ: ಶಿಕ್ಷಕರ ಕ್ಷೇತ್ರದ ಪ್ರತಿನಿಧಿಯಾಗಿ ಕಳೆದ 30 ವರ್ಷಗಳಿಂದಲೂ ನಿಮ್ಮ ಸೇವೆ ಮಾಡಿದ್ದೇನೆ. ಮುಂದೆಯೂ ನಿಮ್ಮ ಕಷ್ಟಗಳನ್ನರಿತು ನಿಮಗಾಗಿ ಮತ್ತಷ್ಟು ಕೆಲಸಗಳನ್ನು ಮಾಡುತ್ತೇನೆ. ನಿಮ್ಮ ಸಮಸ್ಯೆಗಳು ಏನೆಂಬುದು ನನಗೆ ಗುರುತಿದೆ. ಯಾರದೋ ಮಾತಿಗೆ ಮರುಳಾಗದೇ ಈ ಬಾರಿಯೂ ತನಗೆ ಮತ ನೀಡುವ ಮೂಲಕ ನನ್ನನ್ನು ಆಶೀರ್ವದಿಸಬೇಕೆಂದು ಕೇಳಿಕೊಳ್ಳುತ್ತಿದ್ದೇನೆ. ಆದರೆ ಜೆಡಿಎಸ್ ಅಭ್ಯರ್ಥಿ ಎ.ಪಿ.ರಂಗನಾಥ್ ಅವರು ಸೋತಿದ್ದೇನೆ ಮತ ನೀಡಿ ಎಂದು ಕೇಳುವುದನ್ನು ಬಿಟ್ಟು ಇನ್ಯಾವ ಅಂಶದ ಮೇಲೆ ಮತ ಕೇಳಲು ಸಾಧ್ಯ ಅವರಿಗೆ ಸೋಲೆಂಬುದೇ ಅರ್ಹತೆಯಾಗಿದೆ ಎಂದು ವಿಧಾನಪರಿಷತ್ ಮಾಜಿ ಉಪಸಭಾಪತಿ ಪುಟ್ಟಣ್ಣ ಮತಯಯಾಚನೆ ಜೊತೆಗೆ ತಮ್ಮ ಎದುರಾಳಿಯ ವಿರುದ್ಧ ವಾಗ್ದಾಳಿ ನಡೆಸಿದರು.

ಅವರು ರಾಮನಗರದ ಜಾನಪದ ಲೋಕದ ಸಮೀಪ ಇರುವ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು.


ಈ ಹಿಂದೆ ಇದೇ ಅಭ್ಯರ್ಥಿ ಬಾರ್ ಕೌನ್ಸಿಲ್ ಚುನಾವಣೆಯಲ್ಲಿ ಎರಡು ಬಾರಿ ಸೋತು ಬಳಿಕ ನಾನು ಸೋತಿದ್ದೇನೆ ಮತನೀಡಿ ಎಂದು ಅನುಕಂಪದ ಆಧಾರದ ಮೇಲೆ ಮತಯಾಚಿಸಿ ಒಮ್ಮೆ ಗೆಲುವು ಸಾಧಿಸಿದರು. ಇದೇ ರೀತಿ ಮೂರು ಬಾರಿ ಮತಯಾಚನೇ ಮಾಡಿದ್ದಾರೆ. ಶಿಕ್ಷಕರ ಕ್ಷೇತ್ರದಲ್ಲೂ ಸಹ ಅವರು ಸೋಲನ್ನೆ ಮುಂದಿಟ್ಟುಕೊಂಡು ಅನುಕಂಪದ ಮತಯಾಚನೇ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.


ಅವರೊಬ್ಬ ಪ್ರ್ಯಾಕ್ಟಿಸ್ ಮಾಡದೇ ಅಪ್ರಬುದ್ಧವಾಗಿ ಹೇಳಿಕೆ ನೀಡುತ್ತಿದ್ದಾರೆ. ಶಿಕ್ಷಣ ಕ್ಷೇತ್ರದ ಗಂಧಗಾಳಿಯೇ ಗೊತ್ತಿಲ್ಲದ ಅವರು ಈ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ಅನರ್ಹರು ಎಂದರು.


*ಮೊದಲು ಬಾರ್‌ ಕೌನ್ಸೀಲ್ ಗೆಲ್ಲಲಿ:*

ಈಗಾಗಲೇ ನ್ಯಾಯವಾದಿಗಳು ಅವರನ್ನು ತಿರಸ್ಕರಿಸಿದ್ದಾರೆ. ಒಂದು ಬಾರಿ ಗೆಲುವು ಸಾಧಿಸಿದ ಅವರು ಮತ್ತೆ ಮತ್ತೆ ಹೀನಾಯವಾಗಿ ಸೋಲುವುದಕ್ಕೆ ಕಾರಣವೇನು? ಅವರು ಬಾರ್ ಕೌನ್ಸಿಲ್ ನಲ್ಲಿ ಸರಿಯಾದ ರೀತಿಯಲ್ಲಿ ಕೆಲಸ ಮಾಡಿದ್ದರೆ ಅವರ ಸಹವಕೀಲರು ಮರು ಆಯ್ಕೆ ಮಾಡುತ್ತಿರಲಿಲ್ಲವೇ. ಶಿಕ್ಷಕರ ಕ್ಷೇತ್ರದಿಂದ ನಾಲ್ಕು ಬಾರಿ ನಿರಂತರವಾಗಿ ನಾನು ಆಯ್ಕೆಯಾಗಿದ್ದೇನೆ ಎಂದರೆ ಅದಕ್ಕೆ ನಾನು ಶಿಕ್ಷಕರ ಪರವಾಗಿ ಮಾಡಿದ ಕೆಲಸವೇ ಕಾರಣವಾಗಿದೆ. ಈಬಾರಿಯೂ ಶಿಕ್ಷಕರು ನನ್ನನ್ನು ಬೆಂಬಲಿಸಲಿದ್ದಾರೆ ಎಂಬ ವಿಶ್ವಾಸವಿದೆ. ಅವರಿಗೆ ಸಾಧ್ಯವಾದರೆ ಶಿಕ್ಷಕರ ಕ್ಷೇತ್ರವನ್ನು ಬಿಟ್ಟು ಬಾರ್‌ ಕೌನ್ಸಿಲ್ ಚುನಾವಣೆಯಲ್ಲಿ ಮತ್ತೆ ಗೆದ್ದುಬಂದು ವಕೀಲರ ಸಮಸ್ಯೆಗಳಿಗೆ ಸ್ಪಂದಿಸಲಿ ಎಂದು ಸವಾಲು ಹಾಕಿದರು.


*ಹೌದು ನಾನು ಪಿಆರ್‍ಓ: ಅವರೇನು?*

ನನ್ನನ್ನು ಪಿಆರ್‍ಓ ಎಂದು ಕರೆದಿದ್ದಾರೆ. ಆದರೆ, ನಾನು ಶಿಕ್ಷಕರು, ಶಿಕ್ಷಣ ಸಂಸ್ಥೆ ಮತ್ತು ವಿದ್ಯಾರ್ಥಿಗಳ ಪಿಆರ್‍ಓ. ಆಗಿದ್ದೇನೆ. ಅವರು ಏನಾಗಿದ್ದಾರೆ ಎಂಬುದನ್ನು ಶಿಕ್ಷಕರಿಗೆ ತಿಳಿಸಲಿ ಆಂಧ್ರದ ವ್ಯಕ್ತಿ ಇಲ್ಲಿ ಬಂದು ಶಾಲೆ ತೆರೆದರೆ ಆ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳು ನಮ್ಮ ಕನ್ನಡಿಗರಲ್ಲವೇ, ಆ ವಿದ್ಯಾರ್ಥಿಗಳ ರಕ್ಷಣೆಗೆ ನಿಲ್ಲುತ್ತೇನೆ. ಅದರಲ್ಲಿ ತಪ್ಪೇನಿದೆ. ಇದಕ್ಕೆ ಅವರು ಪಿಆರ್‍ಓ ಎಂದು ಹೇಳಿದರೆ ನಾನು ಪಿಆರ್‍ಓನೆ. ಆದರೆ ನಾನು ಯಾರ ಬಳಿಯಾದರೂ ಹಣಪಡೆದು ಪಿಆರ್‍ಓ ಕೆಲಸ ಮಾಡಿದ್ದೇನೆ ಎಂದು ಸಾಬೀತು ಪಡಿಸಿದರೆ ಅದಕ್ಕೆ ದಾಖಲೆಗಳನ್ನು ಒದಗಿಸಿದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಜೆಡಿಎಸ್ ಅಭ್ಯರ್ಥಿ ರಂಗನಾಥ್ ಆರೋಪಕ್ಕೆ ತಿರುಗೇಟು ನೀಡಿದರು.


2006 ರಲ್ಲಿ ಕನ್ನಡ ಮಾಧ್ಯಮಕ್ಕೆ ಅನುಮತಿ ಪಡೆದು ಆಂಗ್ಲಮಾಧ್ಯಮದಲ್ಲಿ ತರಗತಿ ನಡೆಸುತ್ತಿರುವ ಕೆಲ ಖಾಸಗಿ ಶಾಲೆಗಳು ಮುಚ್ಚುವ ಸ್ಥಿತಿಗೆ ಬಂದಿದ್ದಾಗ ನಾನು ಶಾಲೆಗಳ ಪರ ಹೋರಾಟ ಮಾಡಿದ್ದೇನೆ. ಇದಕ್ಕೆ ಹಲವಾರು ಮಂದಿ ನನ್ನ ವಿರುದ್ಧ ಟೀಕೆ ಮಾಡಿದರು. ನಾನು ಯಾವುದಕ್ಕೂ ಅಂಜಲಿಲ್ಲ. ಮಾಧ್ಯಮದವರು ಸಹ ನನ್ನ ವಿರುದ್ಧ ಬರೆದರು. ಕರ್ನಾಟಕ ಪಬ್ಲಿಕ್ ಶಾಲೆ ಇಂದು ಪ್ರಾರಂಭವಾಗಿದ್ದು, ಈ ಹಿಂದೆಯೇ ನಾನು ಸರ್ಕಾರಿ ಶಾಲೆಯಲ್ಲಿ ಆಂಗ್ಲಮಾಧ್ಯಮ ಪ್ರಾರಂಭಿಸಿ ಎಂದಿದ್ದೇ ಕಾರಣವಾಗಿದೆ. ನನಗೆ ಶಿಕ್ಷಣ ಕ್ಷೇತ್ರದ ಹಿತ ಮುಖ್ಯ ಎಂದು ತಮ್ಮ ನಿಲುವನ್ನು ಸಮರ್ಥಿಸಿಕೊಂಡರು.


*ಹೋರಾಟವೇ ಪಕ್ಷಾಂತರಕ್ಕೆ ಕಾರಣ:*

ನಾನು ಪಕ್ಷಾಂತರ ಮಾಡಿದ್ದರ ಹಿಂದೆ ಶಿಕ್ಷಕರ ಹಿತಕಾರಣವಾಗಿದೆ. ಅಧಿಕಾರದ ಆಸೆಗಾಗಿ, ಹಣಕ್ಕಾಗಿ ನನನ್ನು ನಾನು ಮಾರಾಟ ಮಾಡಿಕೊಂಡಿಲ್ಲ. ಶಿಕ್ಷಕರಿಗೆ ದನಿಯಾಗಿ ಹೋರಾಟ ಮಾಡುವುದು ನನ್ನ ಜವಾಬ್ದಾರಿಯಾಗಿದೆ. ನಾನು ವಿದ್ಯಾರ್ಥಿ ದೆಸೆಯಿಂದಲೂ ಹೋರಾಟ ಮಾಡಿಕೊಂಡು ಬಂದಿದ್ದೇನೆ. ಎಂದೂ ಜಡವಾಗಿ ಕುಳಿತವನಲ್ಲ. ಶಿಕ್ಷಕರಿಗೆ ಅನ್ಯಾಯಾವಾದಾಗ ನೇರವಾಗಿ ನಾನು ಬೀದಿಗೆ ಇಳಿದಿದ್ದೇನೆ. ಮುಂದೆಯೂ ಇಳಿಯುತ್ತೇನೆ. ಎನ್‍ಪಿಎಸ್ ವಿಚಾರದಲ್ಲಿ ಮೂವರು ಶಿಕ್ಷಕರು ಆತ್ಮಹತ್ಯೆ ಮಾಡಿಕೊಂಡರು. ಶಿಕ್ಷಕರು ಆತ್ಮಹತ್ಯೆಮಾಡಿಕೊಂಡಾಗ ಸಂಧಾನ ನಡೆಸುವಂತೆ ಅಂದಿನ ಬಿಜೆಪಿ ಸರ್ಕಾರವನ್ನು ಕೇಳಿದೆ. ಸರ್ಕಾರ ಸಂಧಾನದ ಬಾಗಿಲು ಬಂದ್ ಮಾಡಿದಾಗ, ಶಿಕ್ಷಕರ ಜೀವಕ್ಕಿಂತ ನನಗೆ ಹುದ್ದೆ ಮತ್ತು ಅಧಿಕಾರ ಮುಖ್ಯವಲ್ಲ ಎಂದು ಹೊರ ಬರಲು ನಿರ್ಧರಿಸಿದೆ. ಆಗ ನನಗೆ ನೆರವಾದ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ರವರು. ಶಿಕ್ಷಕರ ಸಮಸ್ಯೆಗೆ ಸ್ಪಂದಿಸುವ ಭರವಸೆಯೊಂದಿಗೆ ಪಕ್ಷದ ಪ್ರಣಾಳಿಕೆಯಲ್ಲಿ ಓಪಿಎಸ್ ವ್ಯವಸ್ಥೆ ಜಾರಿಗೆ ತರುವುದಾಗಿ ಹೇಳಿದರು ಅದಕ್ಕಾಗಿ ಪಕ್ಷಾಂತರ ಮಾಡಬೇಕಾಯಿತು. ನಾನು ಪಕ್ಷಾಂತರ ಮಾಡಿದ್ದೇನೆ ನಿಜ ಆದರೆ ವ್ಯಾಪಾರವಾಗಿಲ್ಲ ಎಂದು ಎದುರಾಳಿಗಳಿಗೆ ಟಾಂಗ್ ನೀಡಿದರು.


*ಸುದ್ದಿ ಮತ್ತು ಜಾಹಿರಾತಿಗಾಗಿ  ಸಂಪರ್ಕಿಸಿ:ಮೊ. ನಂ: 9742424949*


*ಶಿಕ್ಷಕರೇ ನನ್ನ ಪಕ್ಷ:*

ಶಿಕ್ಷಕರೇ ನನ್ನ ಪಕ್ಷ, ನಾನು ಶಿಕ್ಷಕರ ಸೇವೆಗೆ ಬದ್ದವಾಗಿದ್ದೇನೆ. ಕೋವಿಡ್ ಸಮಯದಲ್ಲಿ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜೊತೆ ಚರ್ಚಿಸಿ ಅನುದಾನ ರಹಿತ ಶಾಲಾ ಶಿಕ್ಷಕರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿಸಿದೆ. ಅರೆಕಾಲಿಕ ಉಪನ್ಯಾಸಕರ ಹೋರಾಟಕ್ಕೆ ಬೆಂಬಲಿಸಿ ಸರ್ಕಾರದ ಮಟ್ಟದಲ್ಲಿ ಸಂಧಾನ ನಡೆಸಿ ಅವರ ಬೇಡಿಕೆ ಈಡೇರುವಂತೆ ಮಾಡಿದ್ದೇನೆ. ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಅವರ ಕಚೇರಿಗೆ ಬೀಗಹಾಕಿಸಿದ್ದೇ. ಶಿಕ್ಷಣ ಸಚಿವರಾಗಿದ್ದ ಕಾಗೇರಿ ವಿರುದ್ಧ ಹೋರಾಟ ಮಾಡಿದ್ದೇನೆ. ಶಿಕ್ಷಕರಿಗೆ ಸಮಸ್ಯೆಯಾದರೆ ನಾನು ಮುಲಾಜಿಲ್ಲದೆ ಹೋರಾಟ ಮಾಡುತ್ತೇನೆ. ನನಗೆ ಶಿಕ್ಷಕರು ಮುಖ್ಯ. ಅವರೇ ನನ್ನ ಪಕ್ಷ. ನಾನು ಯಾವ ಪಕ್ಷದ ಅಭ್ಯರ್ಥಿಯಾದರೂ ಶಿಕ್ಷಕರು ಪಕ್ಷಾತೀತವಾಗಿ ಮತ ನೀಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.


*ಯಾವ ನೈತಿಕತೆ ಮೇಲೆ ಮತ ಕೇಳುತ್ತಾರೆ:*

ಈ ಹಿಂದೆ ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಲ್ಲಿ ಅಂದಿನ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ್‍ನಾರಾಯಣ್ 600ಕ್ಕೂ ಹೆಚ್ಚು ಉಪನ್ಯಾಸಕರಿಂದ ಲಂಚ ಪಡೆದಿದ್ದರು ಎಂದು ಲೋಕಾಯುಕ್ತಕ್ಕೆ ದೂರು ನೀಡಿದ್ದವರು, ಪಿಎಸ್‍ಐ ಹಗರಣದಲ್ಲಿ ಡಾ.ಅಶ್ವತ್ಥ್‍ನಾರಾಯಣ್ ಮತ್ತು ಬಿಎಸ್‍ವೈ ಪುತ್ರ ವಿಜಯೇಂದ್ರ ಪಾತ್ರವಿದೆ ಎಂದು ದೂರು ನೀಡಿದ್ದವರು ಎ.ಪಿ.ರಂಗನಾಥ್. ಇದೀಗ ಅವರು ಯಾವ ನೈತಿಕತೆಯ ಮೇಲೆ ಅವರ ಜೊತೆ ಹೋಗಿ ಮತ ಕೇಳುತ್ತಾರೆ ಎಂದು ಪ್ರಶ್ನಿಸಿದರು.


 ಸುದ್ದಿಗೋಷ್ಟಿಯಲ್ಲಿ  ಜಿಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಾದ ಪಟೇಲ್ ಸಿ. ರಾಜು, ವೆಂಕಟಸುಬ್ಬಯ್ಯ ಚೆಟ್ಟಿ, ನಿವೃತ್ತ ಶಿಕ್ಷಕ ಆರ್.ಕೆ. ಬೈರಲಿಂಗಯ್ಯ, ಪ್ರದೀಪ್ ಎಸ್, ದೀಪಕ್ ಹಾರೋಹಳ್ಳಿ, ಸುನೀಲ್, ವಿಶ್ರಾಂತ ಪ್ರಾಂಶುಪಾಲ ನಿಂಗೇಗೌಡ ಚನ್ನಪಟ್ಟಣ, ಚನ್ನಪ್ಪ, ಚನ್ನಪಟ್ಟಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ  ಪ್ರಮೋದ್, ರಾಮನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ  ಎ.ಬಿ. ಚೇತನ್ ಕುಮಾರ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

 

ಗೊ. ರಾ. ಶ್ರೀನಿವಾಸ

ಮೊ. ನಂ - 9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in karnataka »

ಕಳೆದ 30 ವರ್ಷಗಳಿಂದ ಶಿಕ್ಷಕರ ಸೇವೆ ಮಾಡಿದ್ದೇನೆ ಮತ್ತೊಮ್ಮೆ ಆಶೀರ್ವದಿಸಿ : ಪುಟ್ಟಣ್ಣ
ಕಳೆದ 30 ವರ್ಷಗಳಿಂದ ಶಿಕ್ಷಕರ ಸೇವೆ ಮಾಡಿದ್ದೇನೆ ಮತ್ತೊಮ್ಮೆ ಆಶೀರ್ವದಿಸಿ : ಪುಟ್ಟಣ್ಣ

ರಾಮನಗರ: ಶಿಕ್ಷಕರ ಕ್ಷೇತ್ರದ ಪ್ರತಿನಿಧಿಯಾಗಿ ಕಳೆದ 30 ವರ್ಷಗಳಿಂದಲೂ ನಿಮ್ಮ ಸೇವೆ ಮಾಡಿದ್ದೇನೆ. ಮುಂದೆಯೂ ನಿಮ್ಮ ಕಷ್ಟಗಳನ್ನರಿತು ನಿಮಗಾಗಿ ಮತ್ತಷ್ಟು ಕ

ಕೆರಗೋಡು ಧ್ವಜ ಪ್ರಕರಣ; ಪ್ರಚೋದನೆ ನೀಡುವವರ ವಿರುದ್ಧ ಕ್ರಮ: ಜಿಲ್ಲಾಧಿಕಾರಿ
ಕೆರಗೋಡು ಧ್ವಜ ಪ್ರಕರಣ; ಪ್ರಚೋದನೆ ನೀಡುವವರ ವಿರುದ್ಧ ಕ್ರಮ: ಜಿಲ್ಲಾಧಿಕಾರಿ

ರಾಮನಗರ, ಫೆ. 02  :  ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಇತ್ತೀಚೆಗೆ ನಡೆದ ಧ್ವಜ ಸ್ತಂಭದ ವಿಚಾರವು ತುಂಬಾ ಸೂಕ್ಷ್ಮ ವಿಚಾರವಾಗಿದ್ದು, ಈ ಸಂಬಂಧ ಯಾವು

ಸಂವಿಧಾನ ಜಾಗೃತಿ ಜಾಥಾ ಗೆ ಸ್ವಾಗತ
ಸಂವಿಧಾನ ಜಾಗೃತಿ ಜಾಥಾ ಗೆ ಸ್ವಾಗತ

ಚನ್ನಪಟ್ಟಣ: ಸಂವಿಧಾನ ಜಾಗೃತಿ ಜಾಥಾಕ್ಕೆ ತಾಲ್ಲೂಕು ಆಡಳಿತದಿಂದ ಅದ್ದೂರಿ ಸ್ವಾಗತ ಕೋರಲಾಯಿತು. ಇದೇ ಸಂದರ್ಭದಲ್ಲಿ

ಸಂವಿಧಾನ ಜಾಗೃತಿ ಜಾಥಾ

ಉಜ್ಜನಹಳ್ಳಿ ವೀರಾಂಜನೇಯಸ್ವಾಮಿ ಗೆ ಗ್ರಾಮಸ್ಥರಿಂದ ಅಭಿಷೇಕ
ಉಜ್ಜನಹಳ್ಳಿ ವೀರಾಂಜನೇಯಸ್ವಾಮಿ ಗೆ ಗ್ರಾಮಸ್ಥರಿಂದ ಅಭಿಷೇಕ

ಚನ್ನಪಟ್ಟಣ: ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಮಾಡಿದ ಹಿನ್ನೆಲೆಯಲ್ಲಿ ಚನ್ನಪಟ್ಟಣ ತಾಲ್ಲೂಕಿನ ಉಜ್ಜನಹಳ್ಳಿ ಗ್ರಾಮದ ಶ್ರೀ ವೀರಾಂನೇಯಸ್ವಾಮಿ ಗೆ ವಿಶೇಷ

ಇ-ಆಸ್ತಿ ತಂತ್ರಾಂಶದಲ್ಲಿ ಆಸ್ತಿ ದಾಖಲೀಕರಣ ಮತ್ತು ಗಣಕೀಕರಣಗೊಳಿಸಿ
ಇ-ಆಸ್ತಿ ತಂತ್ರಾಂಶದಲ್ಲಿ ಆಸ್ತಿ ದಾಖಲೀಕರಣ ಮತ್ತು ಗಣಕೀಕರಣಗೊಳಿಸಿ

ರಾಮನಗರ, ಜ. 17: ರಾಮನಗರ ಜಿಲ್ಲಾ ವ್ಯಾಪ್ತಿಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಖಾತೆ ಹೊಂದಿರುವ ಆಸ್ತಿಗಳನ್ನು ದಿನಾಂಕ: 02.05.2015 ರಿಂದ ಜಾರಿಗೆ ಬರುವಂತೆ,

ಬೋಧನಾ ಶುಲ್ಕ ಪಾವತಿಸಲು ಅವಧಿ ವಿಸ್ತರಣೆ
ಬೋಧನಾ ಶುಲ್ಕ ಪಾವತಿಸಲು ಅವಧಿ ವಿಸ್ತರಣೆ

ರಾಮನಗರ:  ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ 2019-20, 2020-21, 2021-22 ಮತ್ತು 2022-23ರ (ಜುಲೈ ಆವೃತ್ತಿ) ದ್ವಿತೀಯ/ತೃತೀಯ ವರ್ಷದ ಬಿ

ಸರ್ವಸಮ್ಮೇಳನಕ್ಕೂ ಮಾದರಿಯಾಗಿ ಯಶಸ್ವಿಯಾದ \'ಪರಿಸರಕ್ಕಾಗಿ ನಾವು\' ಸಮ್ಮೇಳನ
ಸರ್ವಸಮ್ಮೇಳನಕ್ಕೂ ಮಾದರಿಯಾಗಿ ಯಶಸ್ವಿಯಾದ \'ಪರಿಸರಕ್ಕಾಗಿ ನಾವು\' ಸಮ್ಮೇಳನ

ಹಾಸನ: ಪ್ರಾಕೃತಿಕ ಸೌಂದರ್ಯವು ಇ-ತ್ಯಾಜ್ಯ, ಕೆಲ ತಂತ್ರಜ್ಞಾನ ಹಾಗೂ ಪ್ಲಾಸ್ಟಿಕ್ ನಿಂದ  ಹಾಳಾಗುತ್ತಿದೆ. ಪರಿಸರ ನಾಶಕ್ಕೆ ಮುನ್ನುಡಿ ಬರೆದವನೇ

೫೨ ಲಕ್ಷಕ್ಕೂ ಹೆಚ್ಚು ಮೌಲ್ಯದ ಪಡಿತರ ಅಕ್ಕಿ ಗೋದಾಮಿನಲ್ಲೇ ಮಾಯ, ಅಧಿಕಾರಿಗಳಿಂದ ಪರಿಶೀಲನೆ, ವ್ಯವಸ್ಥಾಪಕನ ಬಂಧನ
೫೨ ಲಕ್ಷಕ್ಕೂ ಹೆಚ್ಚು ಮೌಲ್ಯದ ಪಡಿತರ ಅಕ್ಕಿ ಗೋದಾಮಿನಲ್ಲೇ ಮಾಯ, ಅಧಿಕಾರಿಗಳಿಂದ ಪರಿಶೀಲನೆ, ವ್ಯವಸ್ಥಾಪಕನ ಬಂಧನ

ಚನ್ನಪಟ್ಟಣ: ತಾಲ್ಲೂಕಿನಾದ್ಯಂತ ಪಡಿತರ ನ್ಯಾಯಬೆಲೆ ಅಂಗಡಿಗಳಿಗೆ ವಿತರಿಸಲು ಪಡಿತರ ಅಕ್ಕಿಯ ಪೈಕಿ ಸುಮಾರು ೫೨ ಲಕ್ಷಕ್ಕೂ  ಮೌಲ್ಯದ ೧,೫೪೩.೬೫ ಕ್ವಿಂಟಾಲ್ ಅ

ದಸರಾ ಎಂಬುದು ಮೈಸೂರಿಗಷ್ಟೇ ಸೀಮಿತವಾಗಬಾರದು, ಮನ-ಮನೆಯಲ್ಲೂ ದಸರಾ ಆಗಬೇಕು. ಡಾ ರೂಪಾ ಶ್ರೀಧರ್
ದಸರಾ ಎಂಬುದು ಮೈಸೂರಿಗಷ್ಟೇ ಸೀಮಿತವಾಗಬಾರದು, ಮನ-ಮನೆಯಲ್ಲೂ ದಸರಾ ಆಗಬೇಕು. ಡಾ ರೂಪಾ ಶ್ರೀಧರ್

ಚನ್ನಪಟ್ಟಣ: ದಸರಾ ಎಂದರೆ ಕೇವಲ ಮೈಸೂರು ಎಂಬಂತಾಗಿದೆ, ಇದು ನಾಡ ಹಬ್ಬ ಎಂಬುದು ಕೇವಲ ಉಲ್ಲೇಖಕ್ಕಷ್ಟೇ ಸೀಮಿತವಾಗಿದೆ. ಇದು ನಾಡಹಬ್ಬ ಎಂಬುದು ಸರ

ಒಕ್ಕಲಿಗರು ಸಂಸ್ಕೃತಿ ಹಿeನರಲ್ಲ ನೈಜ ಸಂಸ್ಕೃತಿಯ ಮಾಲೀಕರು, ಪ್ರೊ ಭಗವಾನ್ ಗೆ ತಿರುಗೇಟು ನೀಡಿದ ಹಿರಿಯ ರೈತ ಮುಖಂಡ ಸಿ ಪುಟ್ಟಸ್ವಾಮಿ
ಒಕ್ಕಲಿಗರು ಸಂಸ್ಕೃತಿ ಹಿeನರಲ್ಲ ನೈಜ ಸಂಸ್ಕೃತಿಯ ಮಾಲೀಕರು, ಪ್ರೊ ಭಗವಾನ್ ಗೆ ತಿರುಗೇಟು ನೀಡಿದ ಹಿರಿಯ ರೈತ ಮುಖಂಡ ಸಿ ಪುಟ್ಟಸ್ವಾಮಿ

ರಾಮನಗರ: ಚನ್ನಪಟ್ಟಣ; ಪ್ರೊ ಭಗವಾನ್ ವಿಚಾರವಾದಿ, ಮೂಢನಂಬಿಕೆಗಳನ್ನು ಕಿತ್ತೊಗೆಯಲು, ಪುರಾಣ ಎಂಬುದು ಕಪೋಲ ಕಲ್ಪಿತ, ಇತಿಹಾಸ ಎಂಬುದು ಸಾರ್ವಕಾಲ

Top Stories »  


Top ↑