Tel: 7676775624 | Mail: info@yellowandred.in

Language: EN KAN

    Follow us :


ಸರ್ವಸಮ್ಮೇಳನಕ್ಕೂ ಮಾದರಿಯಾಗಿ ಯಶಸ್ವಿಯಾದ \'ಪರಿಸರಕ್ಕಾಗಿ ನಾವು\' ಸಮ್ಮೇಳನ

Posted date: 04 Dec, 2023

Powered by:     Yellow and Red

ಸರ್ವಸಮ್ಮೇಳನಕ್ಕೂ ಮಾದರಿಯಾಗಿ ಯಶಸ್ವಿಯಾದ \'ಪರಿಸರಕ್ಕಾಗಿ ನಾವು\' ಸಮ್ಮೇಳನ

ಹಾಸನ: ಪ್ರಾಕೃತಿಕ ಸೌಂದರ್ಯವು ಇ-ತ್ಯಾಜ್ಯ, ಕೆಲ ತಂತ್ರಜ್ಞಾನ ಹಾಗೂ ಪ್ಲಾಸ್ಟಿಕ್ ನಿಂದ  ಹಾಳಾಗುತ್ತಿದೆ. ಪರಿಸರ ನಾಶಕ್ಕೆ ಮುನ್ನುಡಿ ಬರೆದವನೇ ಮಾನವ, ಜಗತ್ತಿನ ಎಲ್ಲಾ ಪ್ರಾಣಿಪಕ್ಷಿಗಳು, ಜಲಚರಗಳಿಂದ ರಕ್ಷಿಸಲ್ಪಡುವ ಪರಿಸರಕ್ಕೆ ಮಾನವ ಮಾರಕವಾಗುತ್ತಿದ್ದಾನೆ. ಈಗಲೂ ಪರಿಸರ ಉಳಿಸುವ ನಿಟ್ಟಿನಲ್ಲಿ ನಾವು ಮುಂದಡಿ ಇಡಲಿಲ್ಲವಾದರೆ ನಮ್ಮ ನಡುವೆ ಅಥವಾ ಮುಂದಿನ ಪೀಳಿಗೆಯ ಮಂದಿ ಭೂಮಿಯ ಮೇಲೆಯೇ ನರಕ ಅನುಭವಿಸಬೇಕಾಗುತ್ತದೆ ಎಂಬ ನಿಟ್ಟಿನಲ್ಲಿ  ಸಮಾನ ಮನಸ್ಕ ಸಂಘಟಕರ ಆಸಕ್ತಿಯಿಂದ  ರಾಜ್ಯಾದ್ಯಂತ ಇರುವ ಪರಿಸರ ಪರಿಚಾರಕರನ್ನು ಒಗ್ಗೂಡಿಸಿ ಹಾಸನ ದಲ್ಲಿ ಭಾನುವಾರ ಪರಿಸರ ಕಾರ್ಯಕರ್ತರ ರಾಜ್ಯಮಟ್ಟದ ದುಂಡು ಮೇಜಿನ ಸಭೆ ನಡೆಯಿತು.


ಸಮ್ಮೇಳನದಲ್ಲಿ ಹಲವಾರು ತಜ್ಞರು ಮಾತನಾಡಿ, ಪರಿಸರದ ಬಗ್ಗೆ ಮಕ್ಕಳಿಗೆ ಬಾಲ್ಯದಿಂದಲೇ ಅರಿವು ಮೂಡಿಸಬೇಕು. ಅದಕ್ಕಾಗಿ ಪ್ರತಿ ರಾಜ್ಯ ಸರ್ಕಾರವು ಎಲ್ಲಾ ತರಗತಿಗಳಲ್ಲಿ ವಯಸ್ಸಿನನುಗುಣವಾಗಿ ಪಠ್ಯರಚನೆ ಮಾಡಬೇಕು, ಯಾವುದೇ ವಸ್ತುಗಳನ್ನು ಭೂಮಿಯ ಮೇಲೆ ಸುಡುವ ಕೆಲಸ ನಿಲ್ಲಿಸಬೇಕು. ವೈಜ್ಞಾನಿಕವಾಗಿ ತ್ಯಾಜ್ಯ ನಿರ್ವಹಣೆ ಮಾಡಬೇಕು, ಪ್ಲಾಸ್ಟಿಕ್ ನ್ನು ಸಂಪೂರ್ಣವಾಗಿ ನಿಷೇಧ ಮಾಡಬೇಕು, ಸದುಪಯೋಗಿಯಾದ ಯಾವುದೇ ವಸ್ತುವನ್ನು ಪರಿಸರದಲ್ಲಿ ವಿಲೀನವಾಗುವಂತೆ ಉತ್ಪಾದಿಸಬೇಕು. ಕಾರ್ಖಾನೆಗಳು ಹೊರಸೂಸುವ ಹೊಗೆ, ಕೆಮಿಕಲ್ ಮಿಶ್ರಿತ ನೀರಿಗೆ ವೈಜ್ಞಾನಿಕ ಪರಿಹಾರ ಕಂಡುಕೊಳ್ಳಬೇಕು. ಪ್ರಾಕೃತಿಕ ಸೌಂದರ್ಯ ಕ್ಕೆ ಯಾವುದೇ ಧಕ್ಕೆ ತರದಂತೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಹೂತು ಹೋಗಿರುವ ಹಾಗೂ ಒತ್ತುವರಿಯಾಗಿರುವ ಕಲ್ಯಾಣಿಗಳು, ಕೆರೆಕಟ್ಟೆಗಳನ್ನು ಪುನಶ್ಚೇತನ ಮಾಡಬೇಕು. ಚರಂಡಿಗಳು, ಯುಜಿಡಿ ನಿರ್ವಹಣೆ ಇಲ್ಲದಿರುವುದರಿಂದ ನದಿಗೆ ನೇರವಾಗಿ ಕೊಳಚೆ ನೀರು ಬಿಡುವುದನ್ನು ನಿಲ್ಲಿಸಬೇಕು.


ಅಂತರ್ಜಲ ಉಪಯೋಗಕ್ಕೆ ಕಡಿವಾಣ ಹಾಕಬೇಕು, ರಾಸಾಯನಿಕ ಬಳಸದೇ ಸಾವಯವ ಗೊಬ್ಬರ ಬಳಕೆ ಮಾಡಬೇಕು, ಮರಗಿಡಗಳನ್ನು ಉಳಿಸುವ ಜೊತೆಗೆ ಕೆರೆ, ಕಟ್ಟೆ, ನದಿಗಳ ಸ್ವಚ್ಚತೆ ಮಾಡಬೇಕು, ಸಸ್ತನಿಗಳು, ಜಲಚರಗಳು, ಪ್ರಾಣಿ-ಪಕ್ಷಿಗಳನ್ನು ಉಳಿಸುವ ನಿಟ್ಟಿನಲ್ಲಿ ಹೋರಾಡಬೇಕು. ಈಗಾಗಲೇ ನಶಿಸಿ ಹೋಗುತ್ತಿರುವ ಜೀವ ಸಂಕುಲಗಳನ್ನು ಉಳಿಸಲು ಪಣ ತೊಡಬೇಕು. ಮೋಜು ಮಸ್ತಿಗಾಗಿ ಹೋಗುವವರು ಪ್ರಕೃತಿಗೆ ದ್ರೋಹ ಎಸಗುತ್ತಿದ್ದು, ಅವರಿಗೆ ಅರಿವು ಮೂಡಿಸಬೇಕು. ಶಿಕ್ಷಣ ಕೊಡುವ ಶಿಕ್ಷಕರು, ರಾಜಕಾರಣಿಗಳು ಮತ್ತು ಧರ್ಮಗುರುಗಳು ಅವರ ಕೆಲಸವನ್ನು ಮಾಡುತ್ತಲೇ ಇಲ್ಲ. ಅದಕ್ಕೆಲ್ಲಾ ನಾವೇ ಮುನ್ನುಗ್ಗುವ ಮೂಲಕ ಪರಿಸರ ರಕ್ಷಿಸುವ ಕೆಲಸ ಮಾಡಬೇಕು. ನಾವು ಮನುಷ್ಯತ್ವದ ಬಗ್ಗೆ ಮಾತನಾಡುವ ಬದಲು ಮಣ್ಣತ್ವದ ಬಗ್ಗೆ ಮಾತನಾಡುವುದನ್ನು ಕಲಿಯಬೇಕು. ಬರ ಪೀಡಿತದಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ತಡೆಯಲು ವೈಜ್ಞಾನಿಕ ಕಾರಣಗಳನ್ನು ಹುಡುಕಬೇಕು. ವಯಕ್ತಿಕ ತೊಂದರೆಯಾದರೆ ಪೋಲಿಸ್ ಠಾಣೆಗೆ ಹೋಗುತ್ತೇವೆ. ಅದೇ ಪ್ರಕೃತಿಗೆ ತೊಂದರೆಯಾದರೆ ಯಾರೂ ದೂರುವುದಿಲ್ಲ. ನದಿಗಳಿಂದ ಮರಳನ್ನೆತ್ತಿ ಒಡಲು ಬರಿದು ಮಾಡಿ, ಗಣಿಗಾರಿಕೆ ಮೂಲಕ ಎಂಸ್ಯಾಂಡ್ ರೂಪದಲ್ಲಿ ನೀಡುವ ಮೂಲಕ ಪ್ರಕೃತಿ ಮೇಲೆ ಅತ್ಯಾಚಾರ ಎಸಗಲಾಗುತ್ತಿದೆ. ಸಂಬಂಧಿಸಿದ ಇಲಾಖೆಗಳು ಕಣ್ಮುಚ್ಚಿಕೊಳ್ಳುತ್ತಿವೆ.


ಗಣಿಗಾರಿಕೆಯಿಂದ ನದಿಗಳು ಬತ್ತಿ ಹೋಗುತ್ತಿವೆ, ಯಾವುದೇ ಅಭಿವೃದ್ಧಿ ಮಾಡಲು ಯೋಜನೆ ರೂಪಿಸುವ ಸರ್ಕಾರಗಳೇ ಪರಿಸರ ವಿರೋಧಿಯಾಗಿದೆ, ಆ ಯೋಜನೆಗಳೆಲ್ಲಾ ಕೇವಲ ಕಮಿಷನ್ ಅರ್ಥಾತ್‌ ರಿಯಲ್ ಎಸ್ಟೇಟ್ ಯೋಜನೆಗಳಾಗಿವೆ. ಮಳೆಯ ನೀರನ್ನು ಬಳಸುವ ಸುಧೀರ್ಘ ಯೋಜನೆ ಜಾರಿಗೆ ಬರಬೇಕು. ಕೃಷಿಯನ್ನೇ ಅವಲಂಬಿಸಿರುವ ಕುಟುಂಬಗಳಿಂದ ಅಭಿವೃದ್ಧಿ ಹೆಸರಿನಲ್ಲಿ ಸರ್ಕಾರ ಭೂಮಿ ಕಿತ್ತುಕೊಳ್ಳುವುದನ್ನು ಬಿಡಬೇಕು. ಬೆಟ್ಟದಲ್ಲಿರುವ ದೇವಾಲಯಗಳಿಗೆ ಹೋಗುವ ಭಕ್ತರು ಪೂಜಾ ಸಾಮಾಗ್ರಿಗಳನ್ನು ಪ್ಲಾಸ್ಟಿಕ್ ಕವರುಗಳಲ್ಲಿ ತೆಗೆದುಕೊಂಡು ಹೋಗುವುದನ್ನು ನಿಷಿದ್ಧ ಮಾಡಬೇಕು. ದೊಡ್ಡ ಯೋಜನೆಗಳನ್ನು ಕೈಬಿಟ್ಟು ಸಣ್ಣಸಣ್ಣ ಯೋಜನೆಗಳಿಗೆ ಒತ್ತು ನೀಡಬೇಕು. ಹವಾಮಾನ ತಾಪಮಾನ ವೈಪರೀತ್ಯಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ತೋರ್ಪಡಿಕೆ ಮಾಡದೆ, ಸರಳ ಜೀವನ ಮಾಡಬೇಕು, ಗುಡಿಕೈಗಾರಿಕೆಗಳಿಗೆ ಆದ್ಯತೆ ನೀಡಬೇಕು. ಸರ್ಕಾರದ ಅವೈಜ್ಞಾನಿಕ ಯೋಜನೆಗಳ ಬಗ್ಗೆ ಪ್ರಶ್ನಿಸುವಂತಾಗಬೇಕು. ಕಾವೇರಿ ಸೇರಿದಂತೆ ಹಲವಾರು ನದಿಗಳು ಕುಡಿಯಲಿರಲಿ ವ್ಯವಸಾಯಕ್ಕೂ ಸೂಕ್ತವಲ್ಲಾ ಎನ್ನುವ ವರದಿ ನಮ್ಮ ಮುಂದಿದೆ ಎಂಬಂತಹ ಹಲವಾರು ಅಭಿಪ್ರಾಯಗಳನ್ನು ಹಂಚಿಕೊಳ್ಳಲಾಯಿತು.


ಸಮ್ಮೇಳನ ಎಂದರೆ ಮೊದಲಿಗೆ ಬರುವುದೇ ಸಾಹಿತ್ಯ ಸಮ್ಮೇಳನ, ಅಂತೆಯೇ ಸರ್ಕಾರ ಹಾಗೂ ಖಾಸಗಿಯಾಗಿಯೂ ಹಲವಾರು ಸಮ್ಮೇಳನಗಳು ನಡೆಯುತ್ತವೆ. ಶೇಕಡಾವಾರು ಯಾವುದೇ ಸಮ್ಮೇಳನಗಳು ಸರಿಯಾದ ಸಮಯಕ್ಕಾಗಲಿ, ಅಚ್ಚುಕಟ್ಟಿನಿಂದಾಗಲಿ, ಮಿತಿಯಾದ ಭಾಷಣದಲ್ಲಾಗಲಿ, ಸ್ಪಷ್ಟ ವಿಷಯಾಧಾರಿತವಾಗಲಿ, ಬಹಳ ಮುಖ್ಯವಾಗಿ ಗದ್ದಲವಿಲ್ಲದೆ ನಡೆದ ಸಮ್ಮೇಳನಗಳೇ ಇಲ್ಲಾ ಎನ್ನಬಹುದು. ಆದರೆ ಭಾನುವಾರ ನಡೆದ ಈ ದುಂಡು ಮೇಜಿನ 'ಪರಿಸರಕ್ಕಾಗಿ ನಾವು' ಎಂಬ ಸಮ್ಮೇಳನವು ಎಲ್ಲಾ ಸಮ್ಮೇಳನಕ್ಕೂ ಸಡ್ಡು ಹೊಡೆಯಿತು ಎನ್ನಲಡ್ಡಿಯಿಲ್ಲ.


ದೂರದ ಜಿಲ್ಲೆಗಳಿಂದ ಹಿಂದಿನ ದಿನವೇ ಬಂದ ಪರಿಚಾರಕರಿಗೆ ಸ್ಥಳೀಯರೇ ತಂತಮ್ಮ ಮನೆಯಲ್ಲಿ ಹಾಗೂ ಹೋಟೆಲ್ ಗಳಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದ್ದು ವಿಶೇಷವಾಗಿತ್ತು. ಬೆಳಿಗ್ಗೆ ೦೯:೩೦ ಕ್ಕೆ ಸರಿಯಾಗಿ ನೋಂದಣಿ ಮತ್ತು ಕುಶಲೋಪರಿ ಆರಂಭವಾಯಿತು. ೧೦:೩೦ ಕ್ಕೆ ಸಭೆ ಕಾರ್ಯರಾಂಭ, ಪರಿಸರ ಕುರಿತ ಗೀತೆ, ಚುಟುಕು ಸ್ವಾಗತ, ಸಭೆಗೆ ಸೇರಿದ್ದ ಎರಡು ನೂರಕ್ಕೂ ಹೆಚ್ಚು ಮಂದಿ ಎರಡೇ ಮಾತಿನಲ್ಲಿ ಪರಿಚಯ, ಬಹುತೇಕ ಜಿಲ್ಲೆಗೊಬ್ಬರಂತೆ ಕೇವಲ ಎರಡರಿಂದ ಮೂರು ನಿಮಿಷಗಳಲ್ಲಿ ಅವರವರ ಜಿಲ್ಲೆಗೆ ಸಂಬಂಧಿಸಿದ ಪರಿಸರ ಕುರಿತು ಭಾಷಣ, ಪ್ರತಿಜ್ಞಾವಿಧಿ ಸ್ವೀಕಾರ, ವಂದನಾರ್ಪಣೆ, ಮಧ್ಯಾಹ್ನ ೦೧:೩೦ ಕ್ಕೆ ಸಭೆ ಮುಕ್ತಾಯ.


ಪರಿಸರ ಪರಿಚಾರಕರೇ ಸ್ವಯಂ ಸೇವಕರಾಗಿ ಮಾಡಿದ ತಿಂಡಿ ಹಾಗೂ ಮಧ್ಯಾಹ್ನ ದ ಊಟ ಸವಿದ ನಂತರ ಪರಿಸರ ಉಳಿಸುವ ಕುರಿತು ಚರ್ಚಾರಂಭ, ತಜ್ಞರಿಂದ ವಿಷಯ ಮಂಡನೆ. ಸರ್ವರಿಗೂ ಸಮನವಕಾಶ, ಯಾರೂ ಮೇಲಲ್ಲಾ ಕೀಳಲ್ಲಾ, ವಿಶೇಷವಾಗಿ ಪರಿಸರ ಉಳಿಸುವ ನಿಟ್ಟಿನಲ್ಲಿ ಎಲ್ಲರ ಪಾಲು ಅಗ್ರಗಣ್ಯ ಎಂಬ ಸಂದೇಶ ನೀಡುವುದು ದುಂಡು ಮೇಜಿನ ಸಭೆಯ ಉದ್ದೇಶವಾಗಿತ್ತು. ತಂತಮ್ಮ ಮನೆಯ ಆವರಣ, ಗ್ರಾಮ, ರಸ್ತೆ, ಪಂಚಾಯುತಿ, ಹೋಬಳಿ, ತಾಲ್ಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಪರಿಸರ ಕುರಿತು ಜಾಗೃತಿ, ಸ್ವಯಂ ಸ್ವಚ್ಚತೆ, ಪ್ಲಾಸ್ಟಿಕ್ ಮತ್ತು ಇ-ತ್ಯಾಜ್ಯ ತಡೆಗಟ್ಟುವಿಕೆ ಬಗ್ಗೆ ವಿಸ್ತಾರವಾದ ಚರ್ಚೆ ನಡೆದವು. ಪ್ರತಿಯೊಬ್ಬರೂ ಪ್ಲಾಸ್ಟಿಕ್ ಬಳಕೆಯನ್ನು ಈ ಕ್ಷಣದಿಂದಲೇ ಬಳಸುವುದನ್ನು ಬಿಡಬೇಕು. ಪ್ರತಿಯೊಬ್ಬರೂ ವರ್ಷಕ್ಕೊಂದರಿಂದ ಹನ್ನೆರಡು ಗಿಡಗಳನ್ನು ನೆಟ್ಟು ಪೋಷಿಸುವ ಹೊಣೆ ಹೊರಬೇಕು ಎಂಬುದು ಧ್ಯೇಯ ವಾಕ್ಯವಾಯಿತು.


ಸಮ್ಮೇಳನದಲ್ಲಿ ರಾಜ್ಯದ ಹತ್ತಾರು ಜಿಲ್ಲೆಗಳಿಂದ ಆಗಮಿಸಿದ ಹಾಲಿ, ನಿವೃತ್ತ, ಪ್ರಾಧ್ಯಾಪಕರುಗಳು, ವೈದ್ಯರು, ಶಿಕ್ಷಕರು, ವಕೀಲರು, ಭೂಮಿ, ನೀರು ಸೇರಿದಂತೆ ಪಂಚಭೂತಗಳ ಬಗ್ಗೆ ಅರಿವು ಇರುವ ಜ್ಞಾನಿಗಳು, ಕೃಷಿಕರು, ಸಾವಯವ ಕೃಷಿಯಲ್ಲಿ ತೊಡಗಿಸಿಕೊಂಡಿರುವ ರೈತರು, ನಾಟಿ ವೈದ್ಯರು, ಆಯುರ್ವೇದ ತಜ್ಞರು ಸೇರಿದಂತೆ ವಿವಿಧ ಸ್ತರದ ಜ್ಞಾನಿಗಳು ಭಾಗವಹಿಸಿ ವಿಷಯ ಮಂಡಿಸಿದ್ದು ವಿಶೇಷವಾಗಿತ್ತು. ಕಾರ್ಯಕ್ರಮದ ಹೊಣೆಯನ್ನು ಹಾಸನ ದ ಹಸಿರು ಭೂಮಿ ಪ್ರತಿಷ್ಠಾನ ಹೊತ್ತುಕೊಂಡು  ನಿರ್ವಹಿಸಿದರು.


ರಾಜ್ಯಮಟ್ಟದ ತಾತ್ಕಾಲಿಕ ಸಂಚಾಲನ ಸಮಿತಿಯನ್ನು ರಚಿಸಲು ಪ್ರತಿ ಜಿಲ್ಲೆಯಲ್ಲಿ ಓರ್ವ ಪುರುಷ ಮತ್ತು ಮಹಿಳೆಯ ಹೆಸರನ್ನು ಸೂಚಿಸುವಂತೆ ತಿಳಿಸಲಾಗಿತ್ತು. ಸಮಯ ಕಡಿಮೆ ಇದ್ದ ಕಾರಣ ಸೂಚಿಸಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಆದಷ್ಟು ಶೀಘ್ರವಾಗಿ ಆಯಾಯ ಜಿಲ್ಲೆಯ ಸದಸ್ಯರು ಸಭೆ ನಡೆಸಿ ರಾಜ್ಯ ಮಟ್ಟದ ಸಮಿತಿಗೆ ಇಬ್ಬರ ಹೆಸರನ್ನು ಸೂಚಿಸುವಂತೆ ತಿಳಿಸಲಾಯಿತು.


ಇಂತಹ ಅಚ್ಚುಕಟ್ಟಾದ, ನಿಗದಿತ ಸಮಯ ಹಾಗೂ ವಿಷಯ ಕುರಿತ ಸಮ್ಮೇಳನ ರಾಜ್ಯವಷ್ಟೇ ಅಲ್ಲಾ, ದೇಶದಲ್ಲೇ ಮೊದಲು ಎಂಬುದರಲ್ಲಿ ಎರಡು ಮಾತಿಲ್ಲ. ಸರ್ವಸಮ್ಮೇಳನಕ್ಕೂ ಮಾದರಿಯಾದದ್ದು 'ಪರಿಸರಕ್ಕಾಗಿ ನಾವು' ಸಮ್ಮೇಳನ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in karnataka »

ಕಳೆದ 30 ವರ್ಷಗಳಿಂದ ಶಿಕ್ಷಕರ ಸೇವೆ ಮಾಡಿದ್ದೇನೆ ಮತ್ತೊಮ್ಮೆ ಆಶೀರ್ವದಿಸಿ : ಪುಟ್ಟಣ್ಣ
ಕಳೆದ 30 ವರ್ಷಗಳಿಂದ ಶಿಕ್ಷಕರ ಸೇವೆ ಮಾಡಿದ್ದೇನೆ ಮತ್ತೊಮ್ಮೆ ಆಶೀರ್ವದಿಸಿ : ಪುಟ್ಟಣ್ಣ

ರಾಮನಗರ: ಶಿಕ್ಷಕರ ಕ್ಷೇತ್ರದ ಪ್ರತಿನಿಧಿಯಾಗಿ ಕಳೆದ 30 ವರ್ಷಗಳಿಂದಲೂ ನಿಮ್ಮ ಸೇವೆ ಮಾಡಿದ್ದೇನೆ. ಮುಂದೆಯೂ ನಿಮ್ಮ ಕಷ್ಟಗಳನ್ನರಿತು ನಿಮಗಾಗಿ ಮತ್ತಷ್ಟು ಕ

ಕೆರಗೋಡು ಧ್ವಜ ಪ್ರಕರಣ; ಪ್ರಚೋದನೆ ನೀಡುವವರ ವಿರುದ್ಧ ಕ್ರಮ: ಜಿಲ್ಲಾಧಿಕಾರಿ
ಕೆರಗೋಡು ಧ್ವಜ ಪ್ರಕರಣ; ಪ್ರಚೋದನೆ ನೀಡುವವರ ವಿರುದ್ಧ ಕ್ರಮ: ಜಿಲ್ಲಾಧಿಕಾರಿ

ರಾಮನಗರ, ಫೆ. 02  :  ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಇತ್ತೀಚೆಗೆ ನಡೆದ ಧ್ವಜ ಸ್ತಂಭದ ವಿಚಾರವು ತುಂಬಾ ಸೂಕ್ಷ್ಮ ವಿಚಾರವಾಗಿದ್ದು, ಈ ಸಂಬಂಧ ಯಾವು

ಸಂವಿಧಾನ ಜಾಗೃತಿ ಜಾಥಾ ಗೆ ಸ್ವಾಗತ
ಸಂವಿಧಾನ ಜಾಗೃತಿ ಜಾಥಾ ಗೆ ಸ್ವಾಗತ

ಚನ್ನಪಟ್ಟಣ: ಸಂವಿಧಾನ ಜಾಗೃತಿ ಜಾಥಾಕ್ಕೆ ತಾಲ್ಲೂಕು ಆಡಳಿತದಿಂದ ಅದ್ದೂರಿ ಸ್ವಾಗತ ಕೋರಲಾಯಿತು. ಇದೇ ಸಂದರ್ಭದಲ್ಲಿ

ಸಂವಿಧಾನ ಜಾಗೃತಿ ಜಾಥಾ

ಉಜ್ಜನಹಳ್ಳಿ ವೀರಾಂಜನೇಯಸ್ವಾಮಿ ಗೆ ಗ್ರಾಮಸ್ಥರಿಂದ ಅಭಿಷೇಕ
ಉಜ್ಜನಹಳ್ಳಿ ವೀರಾಂಜನೇಯಸ್ವಾಮಿ ಗೆ ಗ್ರಾಮಸ್ಥರಿಂದ ಅಭಿಷೇಕ

ಚನ್ನಪಟ್ಟಣ: ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಮಾಡಿದ ಹಿನ್ನೆಲೆಯಲ್ಲಿ ಚನ್ನಪಟ್ಟಣ ತಾಲ್ಲೂಕಿನ ಉಜ್ಜನಹಳ್ಳಿ ಗ್ರಾಮದ ಶ್ರೀ ವೀರಾಂನೇಯಸ್ವಾಮಿ ಗೆ ವಿಶೇಷ

ಇ-ಆಸ್ತಿ ತಂತ್ರಾಂಶದಲ್ಲಿ ಆಸ್ತಿ ದಾಖಲೀಕರಣ ಮತ್ತು ಗಣಕೀಕರಣಗೊಳಿಸಿ
ಇ-ಆಸ್ತಿ ತಂತ್ರಾಂಶದಲ್ಲಿ ಆಸ್ತಿ ದಾಖಲೀಕರಣ ಮತ್ತು ಗಣಕೀಕರಣಗೊಳಿಸಿ

ರಾಮನಗರ, ಜ. 17: ರಾಮನಗರ ಜಿಲ್ಲಾ ವ್ಯಾಪ್ತಿಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಖಾತೆ ಹೊಂದಿರುವ ಆಸ್ತಿಗಳನ್ನು ದಿನಾಂಕ: 02.05.2015 ರಿಂದ ಜಾರಿಗೆ ಬರುವಂತೆ,

ಬೋಧನಾ ಶುಲ್ಕ ಪಾವತಿಸಲು ಅವಧಿ ವಿಸ್ತರಣೆ
ಬೋಧನಾ ಶುಲ್ಕ ಪಾವತಿಸಲು ಅವಧಿ ವಿಸ್ತರಣೆ

ರಾಮನಗರ:  ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ 2019-20, 2020-21, 2021-22 ಮತ್ತು 2022-23ರ (ಜುಲೈ ಆವೃತ್ತಿ) ದ್ವಿತೀಯ/ತೃತೀಯ ವರ್ಷದ ಬಿ

ಸರ್ವಸಮ್ಮೇಳನಕ್ಕೂ ಮಾದರಿಯಾಗಿ ಯಶಸ್ವಿಯಾದ \'ಪರಿಸರಕ್ಕಾಗಿ ನಾವು\' ಸಮ್ಮೇಳನ
ಸರ್ವಸಮ್ಮೇಳನಕ್ಕೂ ಮಾದರಿಯಾಗಿ ಯಶಸ್ವಿಯಾದ \'ಪರಿಸರಕ್ಕಾಗಿ ನಾವು\' ಸಮ್ಮೇಳನ

ಹಾಸನ: ಪ್ರಾಕೃತಿಕ ಸೌಂದರ್ಯವು ಇ-ತ್ಯಾಜ್ಯ, ಕೆಲ ತಂತ್ರಜ್ಞಾನ ಹಾಗೂ ಪ್ಲಾಸ್ಟಿಕ್ ನಿಂದ  ಹಾಳಾಗುತ್ತಿದೆ. ಪರಿಸರ ನಾಶಕ್ಕೆ ಮುನ್ನುಡಿ ಬರೆದವನೇ

೫೨ ಲಕ್ಷಕ್ಕೂ ಹೆಚ್ಚು ಮೌಲ್ಯದ ಪಡಿತರ ಅಕ್ಕಿ ಗೋದಾಮಿನಲ್ಲೇ ಮಾಯ, ಅಧಿಕಾರಿಗಳಿಂದ ಪರಿಶೀಲನೆ, ವ್ಯವಸ್ಥಾಪಕನ ಬಂಧನ
೫೨ ಲಕ್ಷಕ್ಕೂ ಹೆಚ್ಚು ಮೌಲ್ಯದ ಪಡಿತರ ಅಕ್ಕಿ ಗೋದಾಮಿನಲ್ಲೇ ಮಾಯ, ಅಧಿಕಾರಿಗಳಿಂದ ಪರಿಶೀಲನೆ, ವ್ಯವಸ್ಥಾಪಕನ ಬಂಧನ

ಚನ್ನಪಟ್ಟಣ: ತಾಲ್ಲೂಕಿನಾದ್ಯಂತ ಪಡಿತರ ನ್ಯಾಯಬೆಲೆ ಅಂಗಡಿಗಳಿಗೆ ವಿತರಿಸಲು ಪಡಿತರ ಅಕ್ಕಿಯ ಪೈಕಿ ಸುಮಾರು ೫೨ ಲಕ್ಷಕ್ಕೂ  ಮೌಲ್ಯದ ೧,೫೪೩.೬೫ ಕ್ವಿಂಟಾಲ್ ಅ

ದಸರಾ ಎಂಬುದು ಮೈಸೂರಿಗಷ್ಟೇ ಸೀಮಿತವಾಗಬಾರದು, ಮನ-ಮನೆಯಲ್ಲೂ ದಸರಾ ಆಗಬೇಕು. ಡಾ ರೂಪಾ ಶ್ರೀಧರ್
ದಸರಾ ಎಂಬುದು ಮೈಸೂರಿಗಷ್ಟೇ ಸೀಮಿತವಾಗಬಾರದು, ಮನ-ಮನೆಯಲ್ಲೂ ದಸರಾ ಆಗಬೇಕು. ಡಾ ರೂಪಾ ಶ್ರೀಧರ್

ಚನ್ನಪಟ್ಟಣ: ದಸರಾ ಎಂದರೆ ಕೇವಲ ಮೈಸೂರು ಎಂಬಂತಾಗಿದೆ, ಇದು ನಾಡ ಹಬ್ಬ ಎಂಬುದು ಕೇವಲ ಉಲ್ಲೇಖಕ್ಕಷ್ಟೇ ಸೀಮಿತವಾಗಿದೆ. ಇದು ನಾಡಹಬ್ಬ ಎಂಬುದು ಸರ

ಒಕ್ಕಲಿಗರು ಸಂಸ್ಕೃತಿ ಹಿeನರಲ್ಲ ನೈಜ ಸಂಸ್ಕೃತಿಯ ಮಾಲೀಕರು, ಪ್ರೊ ಭಗವಾನ್ ಗೆ ತಿರುಗೇಟು ನೀಡಿದ ಹಿರಿಯ ರೈತ ಮುಖಂಡ ಸಿ ಪುಟ್ಟಸ್ವಾಮಿ
ಒಕ್ಕಲಿಗರು ಸಂಸ್ಕೃತಿ ಹಿeನರಲ್ಲ ನೈಜ ಸಂಸ್ಕೃತಿಯ ಮಾಲೀಕರು, ಪ್ರೊ ಭಗವಾನ್ ಗೆ ತಿರುಗೇಟು ನೀಡಿದ ಹಿರಿಯ ರೈತ ಮುಖಂಡ ಸಿ ಪುಟ್ಟಸ್ವಾಮಿ

ರಾಮನಗರ: ಚನ್ನಪಟ್ಟಣ; ಪ್ರೊ ಭಗವಾನ್ ವಿಚಾರವಾದಿ, ಮೂಢನಂಬಿಕೆಗಳನ್ನು ಕಿತ್ತೊಗೆಯಲು, ಪುರಾಣ ಎಂಬುದು ಕಪೋಲ ಕಲ್ಪಿತ, ಇತಿಹಾಸ ಎಂಬುದು ಸಾರ್ವಕಾಲ

Top Stories »  


Top ↑