Tel: 7676775624 | Mail: info@yellowandred.in

Language: EN KAN

    Follow us :


ಕೋಮು ವೈಷಮ್ಯತೆಯಿಂದ ದೇಶದ ಅಭಿವೃದ್ಧಿಗೆ ಹಿನ್ನಡೆ: -ಕಾವ್ಯಂ ಶ್ರೀನಿವಾಸ ಮೂರ್ತಿ

Posted date: 05 Mar, 2018

Powered by:     Yellow and Red

ಕೋಮು ವೈಷಮ್ಯತೆಯಿಂದ ದೇಶದ ಅಭಿವೃದ್ಧಿಗೆ ಹಿನ್ನಡೆ: -ಕಾವ್ಯಂ ಶ್ರೀನಿವಾಸ ಮೂರ್ತಿ

ಕಲಬುರಗಿ : ದೇಶದಲ್ಲಿ ಇಂದು ಕೋಮು ಸೌಹಾರ್ದತೆ ಕದಡುವ ಶಕ್ತಿಗಳು ಹೆಚ್ಚುತ್ತಿದ್ದು, ಇದರಿಂದ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಕಾವ್ಯಂ ಶ್ರೀನಿವಾಸ ಮೂರ್ತಿ ಅವರು ವಿಷಾದ ವ್ಯಕ್ತಪಡಿಸಿದರು.
ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿ ಸೇಡಂ ತಾಲೂಕಿನ ಮಳಖೇಡದಲ್ಲಿ ನಡೆಯುತ್ತಿರುವ ರಾಟ್ಟ್ರಕೂಟ ಉತ್ಸವದ ಎರಡನೇ ದಿನದ ಮೊದಲನೇ ವಿಚಾರಗೋಷ್ಠಿಯಲ್ಲಿ “ರಾಷ್ಟ್ರಕೂಟ ಕಾಲದ ಸೌಹಾರ್ದ ಪರಂಪರೆ” ಎಂಬ ವಿಷಯ ಮಂಡಿಸಿ ಅವರು ಮಾತನಾಡುತ್ತಿದ್ದರು. 
ರಾಷ್ಟ್ರಕೂಟ ಕಾಲದಲ್ಲಿ ಶಿವ, ವಿಷ್ಣು, ಬೌದ್ಧ, ಜಿನ ಮುಂತಾದ ಪಂಥಗಳು ಇದ್ದವು. ಅವುಗಳ ನಡುವೆ ದೊಡ್ಡ ಪ್ರಮಾಣದಲ್ಲಿ ಸೌಹಾರ್ದತೆ ಇತ್ತು ಎಂದು ಅವರು ಹೇಳಿದರು.
ಜಾತ್ಯತೀತತೆ ಹಾಗೂ ಎಲ್ಲಾ ಧರ್ಮಗಳನ್ನು ಭಾರತ ಒಪ್ಪಿಕೊಂಡಿದ್ದರೂ, ಮತೀಯ ಮತ್ತು ಸಾಮಾಜಿಕ ಸೌಹಾರ್ದತೆಗೆ ಭಂಗ ಬಂದಿದೆ ಎಂದು ಅವರು ಹೇಳಿದರು.
ಕವಿ ಶ್ರೀವಿಜಯ “ಕವಿರಾಜ ಮಾರ್ಗ” ಗ್ರಂಥ ರಚನೆಗೆ ರಾಜ ಅಮೋಘವರ್ಷ ನೃಪತುಂಗ ಕೂಡ ಸಹಕಾರ ನೀಡಿದರು. ನೃಪತುಂಗ ವೈಷ್ಣವ ಮತಸ್ಥ, ಶ್ರೀ ವಿಜಯ ಜೈನ ಮತಸ್ಥರಾದರೂ ಆಗ ಸೌಹಾರ್ದತೆ ಇದ್ದುದ್ದರಿಂದ ಇಬ್ಬರು ಸೇರಿ ಗ್ರಂಥ ರಚಿಸಿದರಿಂದಲೆ ಇದಕ್ಕೆ “ಕವಿರಾಜ ಮಾರ್ಗ” ಹೆಸರು ಬಂದಿದೆ ಎಂದರÀು.
ಈ ಸಂದರ್ಭದಲ್ಲಿ ಆಶಯ ಭಾಷಣ ಮಾಡಿದ ಸಾಹಿತಿ ಮುಡಬಿ ಗುಂಡೇರಾವ್ ಅವರು, ಮಳಖೇಡದಲ್ಲಿರುವ ಕೋಟೆಯ ಬಗ್ಗೆ ಸಂಶೋಧನೆ ನಡೆಯಬೇಕು. ಮುಂದಿನ ದಿನಗಳಲ್ಲಿ ಇಲ್ಲಿ ಹಂಪಿ ಉತ್ಸವ ಮಾದರಿಯಲ್ಲಿ ಕಾರ್ಯಕ್ರಮ ನಡೆಸಬೇಕು ಎಂದು ಮನವಿ ಮಾಡಿದರು.
ಸೇಡಂ ಸರ್ಕಾರಿ ಪದವಿ ಕಾಲೇಜಿನ ಪ್ರಾಧ್ಯಾಪಕ ಶ್ರೀ ಶಶಿಶೇಖರ್ ರೆಡ್ಡಿ ಅವರು ಸ್ವಾಗತಿಸಿದರು. ಬಿ. ಹೆಚ್. ನಿರಗುಡಿ ಅವರು ನಿರೂಪಿಸಿದರು.

ಸರ್ವರೂ ಸಮನಾಗಿ ಬಾಳಬೇಕೆಂಬುದು ವಚನಕಾರರ ಸದಾಶಯ

- ಡಾ.ಮೀನಾಕ್ಷಿ ಬಾಳಿ

ಕಲಬುರಗಿ : - ಸರ್ವರೂ ಸಮಾನರಾಗಿ ಸ್ವಾಭಿಮಾನದಿಂದ ಬಾಳಬೇಕೆಂಬುದು ವಚನಕಾರರ ಸದಾಶಯವಾಗಿತ್ತು, ಈ ನಿಟ್ಟಿನಲ್ಲಿ ಶರಣರು ಸಾಹಿತ್ಯ ರಚಿಸಿದರು ಎಂದು ಕಲಬುರಗಿ ವ್ಹಿ.ಜಿ. ಮಹಿಳಾ ಮಹಾವಿದ್ಯಾಲಯದ ಪ್ರಾಧ್ಯಾಪಕಿ ಡಾ. ಮೀನಾಕ್ಷಿ ಬಾಳಿ ಅವರು ಹೇಳಿದರು.
ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿ ಸೇಡಂ ತಾಲೂಕಿನ ಮಳಖೇಡದಲ್ಲಿ ನಡೆದ ರಾಟ್ಟ್ರಕೂಟ ಉತ್ಸವದ ಎರಡನೇ ದಿನದ 2ನೇ ವಿಚಾರಗೋಷ್ಠಿಯಲ್ಲಿ “ ವಚನ ಸಾಹಿತ್ಯ ” ಕುರಿತು ವಿಷಯ ಮಂಡಿಸಿ ಅವರು ಮಾತನಾಡುತ್ತಿದ್ದರು. 
ದೇವರು-ಧರ್ಮದ ಹೆಸರಿನಲ್ಲಿ ಕೆಳವರ್ಗದವರನ್ನು ತುಳಿಯುತ್ತಿರುವುದನ್ನು ಬಸವಾದಿ ಶರಣರು ವಿರೋಧಿಸಿ ಕಾಯಕ ಜೀವಿ ಜನರಲ್ಲಿ ವೈಚಾರಿಕಾ ಪ್ರಜ್ಞೆ ಮೂಡಿಸಿದರು ಎಂದು ಅವರು ಹೇಳಿದರು.
12ನೇ ಶತಮಾನದ ವಚನಕಾರರ ತತ್ವ-ಸಿದ್ಧಾಂತಗಳನ್ನು 20ನೇ ಶತಮಾನದಲ್ಲಿ ಜಾತ್ಯತೀತ ಸಂವಿಧಾನ ಮೂಲಕ ಜಾರಿಗೆ ತಂದ ಕೀರ್ತಿ ಬಾಬಾ ಸಾಹೇಬ ಅಂಬೇಡ್ಕರ್‍ಗೆ ಸಲ್ಲುತ್ತದೆ ಎಂದು ಅವರು ಪ್ರಶಂಸೆ ವ್ಯಕ್ತಪಡಿಸಿದರು.
ಪುರೋಹಿತಶಾಹಿ ವರ್ಗ ಪೂಜೆ ಮಾಡುವುದನ್ನೇ ಬಂಡವಾಳ ಮಾಡಿಕೊಂಡು ಅದನ್ನೇ ಬದುಕು ಮಾಡಿಕೊಂಡಿತ್ತು. ಇದನ್ನು ಕೆಳವರ್ಗದ ಜನ ಕೂಡ ನಂಬಿದ್ದರು. ಆದರೆ, ಶರಣರು ತಾತ್ವಿಕ ಸಂಕೇತವಾಗಿ ಎಲ್ಲರೂ ಒಪ್ಪಿಕೊಳ್ಳುವಂತಹ ಲಿಂಗವನ್ನು ನೀಡಿ, ಕಾಯಕವೇ ದೇವರು ಎಂಬ ಸಂದೇಶ ಸಾರಿದರು ಎಂದು ಮೀನಾಕ್ಷಿ ಬಾಳಿ ತಿಳಿಸಿದರು.
ಹಿರಿಯ ಲೇಖಕ ಡಾ. ಸ್ವಾಮಿರಾವ್ ಕುಲಕರ್ಣಿ ಅವರು ದಾಸಸಾಹಿತ್ಯ ಕುರಿತು ವಿಷಯ ಮಂಡನೆ ಮಾಡಿ, ಕೆಲವರು ದೇವರ ಪೂಜೆಯನ್ನೇ ಕಾಯಕ ಎಂದು ತಮ್ಮನ್ನು ತೊಡಗಿಸಿಕೊಂಡಿದ್ದರು. ಆದರೆ, ದಾಸರೂ ಯಾವತ್ತೂ ಮೌಡ್ಯಕ್ಕೆ ಅಂಟಿಕೊಳ್ಳಲಿಲ್ಲ ಎಂದು ಅವರು ಹೇಳಿದರು.
ಎಲ್ಲಾ ಒಳ್ಳೆಯ ಕಾರ್ಯಗಳನ್ನು ಭಗವಂತನಿಗೆ ಅರ್ಪಿಸುವುದೇ ದಾಸ ಸಾಹಿತ್ಯದ ಮೂಲ ಆಶಯವಾಗಿತ್ತು ಎಂದು ಅವರು ವಿವರಿಸಿದರು.
ರಾಜ್ಯದ 300 ದಾಸ ಸಾಹಿತಿಗಳ ಪೈಕಿ ಹೈದ್ರಾಬಾದ್ ಕರ್ನಾಟಕದಲ್ಲಿ 120 ಮಂದಿ ದಾಸ ಸಾಹಿತಿಗಳಿದ್ದಾರೆ. ಈ ಮೂಲಕ ದಾಸ ಸಾಹಿತ್ಯಕ್ಕೆ ಈ ಭಾಗ, ಅನನ್ಯ ಕೊಡುಗೆ ನೀಡಿದೆ ಎಂದು ಕೊಂಡಾಡಿದರು.
ಕಮಲಾಪುರ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕಿ ಡಾ. ಅಮೃತಾ ಕಟಕೆ ಅವರು ತತ್ವಪದ ಸಾಹಿತ್ಯ ಕುರಿತು ವಿಷಯ ಮಂಡಿಸಿದರು. ಗುಲಬರ್ಗಾ ವಿಶ್ವವಿದ್ಯಾಲಯದ ಸಂದರ್ಶಕ ಪ್ರಾಧ್ಯಾಪಕ ಡಾ. ವಿ. ಜಿ. ಪೂಜಾರ್ ಅವರು ಆಶಯ ನುಡಿ ನುಡಿದರು. ಕಲಬುರಗಿಯ ಕರ್ನಾಟಕ ಕೇಂದ್ರಿಯ ವಿವಿಯ ಸಂಶೋಧನಾ ವಿದ್ಯಾರ್ಥಿ ಪ್ರವೀಣ್ ಕುಮಾರ್ ಪಾಟೀಲ್ ಅವರು ನಿರೂಪಿಸಿದರು.

ದೇಶದ ಒಕ್ಕೂಟ ವ್ಯವಸ್ಥೆಗೆ ರಾಷ್ಟ್ರಕೂಟರು ನಾಂದಿ

-ಪ್ರೊ. ಮಲ್ಲೇಪುರಂ ಜಿ.ವೆಂಕಟೇಶ

ಕಲಬುರಗಿ-ದೇಶದ ಒಕ್ಕೂಟ ವ್ಯವಸ್ಥೆಗೆ ನಾಂದಿ ಹಾಡಿದವರು ಮಾನ್ಯಖೇಟದ ರಾಷ್ಟ್ರಕೂಟರು ಎಂದು ಕರ್ನಾಟಕ ಸಂಸ್ಕøತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರಂ ಜಿ.ವೆಂಕಟೇಶ ಅವರು ಕೊಂಡಾಡಿದ್ದಾರೆ. 
ಅವರು ಸೋಮವಾರ ಜಿಲ್ಲಾಡಳಿತ ಮತ್ತು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಯೋಗದಲ್ಲಿ ಮಳಖೇಡದಲ್ಲಿ ನಡೆದ ರಾಷ್ಟರಕೂಟ ಉತ್ಸವದ ಸಮಾರೋಪ ಸಮಾರಂಭದಲ್ಲಿ ಭಾಷಣ ಮಾಡಿದರು.
ಕನ್ಯಾಕುಮಾರಿಯಿಂದ ಹಿಮಾಚಲವರೆಗೂ ಆಳಿದ ದೇಶದ ಯಾವುದಾದರು ಸಂಸ್ಥಾನವಿದ್ದರೆ ಅದು ರಾಷ್ಟ್ರಕೂಟರ ಸಂಸ್ಥಾನ ಎಂದು ಹಾಡಿ ಹೊಗಳಿದರು.
ನಾಡಿನ ಸಾಹಿತ್ಯ, ಕಲೆ, ಸಂಸ್ಕøತಿಗೆ ರಾಷ್ಟ್ರಕೂಟರು ನೀಡಿದ ಕೊಡುಗೆ ಅಪಾರವಾಗಿದ್ದು, ಗಂಗಾ, ಕದಂಬ ಮುಂತಾದವರಿಗಿಂತಲೂ ಹೆಚ್ಚು ಕೊಡುಗೆ ನೀಡಿದ್ದಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ರಾಷ್ಟ್ರಕೂಟ ಉತ್ಸವ ಕನ್ನಡಿಗರ ಮೊದಲ ಉತ್ಸವ. ಇನ್ನಷ್ಟು ಅದ್ಧೂರಿಯಾಗಿ ನಡೆಸಬೇಕು ಎಂದು ಅವರು ಮನವಿ ಮಾಡಿದರು. 
ಮುಖ್ಯ ಅತಿಥಿಗಳಾಗಿ ಮಾತನಾಡಿದ ಖ್ಯಾತ ಸಾಹಿತಿ ಕುಂ.ವೀರಭದ್ರಪ್ಪ, ಹಿಂದುಳಿದ ಈ ಭಾಗದ ಲೇಖಕರು ಹಾಗೂ ಸ್ಥಳೀಯ ಕಲಾವಿದರಿಗೆ ಅಕಾಡೆಮಿಗಳಲ್ಲಿ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕೆಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು.
ಈ ಭಾಗದ ಬಹುದಿನಗಳ ಕನಸಿನ ರಾಷ್ಟ್ರಕೂಟ ಉತ್ಸವ ಇಂದು ಅದ್ದೂರಿಯಾಗಿ ನಡೆಯುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಅವರು ಇದೇ ರೀತಿ ಬಹಮನಿ, ಖ್ವಾಜಾ ಬಂದೇ ನವಾಜ್ ಉತ್ಸವ ಸಹ ನಡೆಸಬೇಕು ಎಂದು ಹೇಳಿದರು.
ರಾಷ್ಟ್ರಕೂಟರು, ಬದಾಮಿಯ ಚಾಲುಕ್ಯರು ಮುಂತಾದವರ ಶಿಲಾ-ಶಾಸನಗಳನ್ನು ಸಂರಕ್ಷಿಸಲು ಸರ್ಕಾರ ಮುಂದಾಗಬೇಕೆಂದು ಅವರು ಸಲಹೆ ನೀಡಿದರು.
ರಾಷ್ಟ್ರಕೂಟರು ನಿರ್ಮಿಸಿದ ಪ್ರಸ್ತುತ ಮಹಾರಾಷ್ಟ್ರದ ಎಲ್ಲೋರದ ಕೈಲಾಸನಾಥ ದೇಗುಲ ಶಿಲ್ಪ ಕಲೆಗೆ ಬಹಳ ಪ್ರಸಿದ್ಧಿಯಾಗಿದ್ದು, ಇದನ್ನು ಕೆತ್ತಿದವರು ಕರುನಾಡಿನ ಶಿಲ್ಪಿಗಳು ಎಂದು ಉಲ್ಲೇಖಿಸಿ ಗುಣಗಾನ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವೈದ್ಯಕೀಯ ಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ,ಶರಣಪ್ರಕಾಶ ಪಾಟೀಲ ಅವರು ಮಾತನಾಡಿ, ಮಳಖೇಡದಲ್ಲಿ ಗ್ರಂಥಾಲಯ ಮತ್ತು ವಸ್ತು ಸಂಗ್ರಹಾಲಯ ಸ್ಥಾಪಿಸುವ ಮೂಲಕ ರಾಷ್ಟ್ರಕೂಟರ ಬಗೆಗಿನ ಗ್ರಂಥ ಮತ್ತು ಶಿಲಾಶಾಸನಗಳನ್ನು ಸಂರಕ್ಷಿಸಲಾಗುವುದು ಎಂದು ಅವರು ಭರವಸೆ ನೀಡಿದರು.
ಮಕ್ಕಳ ಇತಿಹಾಸ ಪ್ರಜ್ಞೆ ಹೆಚ್ಚಿಸುವ ನಿಟ್ಟಿನಲ್ಲಿ ರಾಷ್ಟ್ರಕೂಟ ಉತ್ಸವದಂತಹ ಕಾರ್ಯಕ್ರಮಗಳನ್ನು ಮಾಡುತ್ತಿದ್ದೇವೆ ಎಂದ ಅವರು, ನಮಗೆ ಇತಿಹಾಸ ಗೊತ್ತಿದ್ದರೆ, ಇತಿಹಾಸ ಸೃಷ್ಟಿಸಬಹುದು ಎಂದು ಅವರು ಹೇಳಿದರು. 
ಮಳಖೇಡನ ಉತ್ತರಾದಿ ಮಠದ ವ್ಯವಸ್ಥಾಪಕ ಪಂ.ವೆಂಕಣ್ಣಚಾರ್ಯರ ಸಾನಿಧ್ಯದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಕಾಡಾ ಅಧ್ಯಕ್ಷ ಮಹಾಂತಪ್ಪಾ ಸಂಗಾವಿ, ತಾಲೂಕ ಪಂಚಾಯತ ಅಧ್ಯಕ್ಷೆ ಸುರೇಖಾ ಪುರಾಣಿಕ, ಮಳಖೇಡ ಗ್ರಾಮ ಪಂಚಾಯತ್ ಅಧ್ಯಕ್ಷ ನಾಗರಾಜ ನಂದೂರ, ಡಾ.ಹೆಚ್.ಟಿ.ಪೋತೆ, ಶಂಕ್ರಯ್ಯ ಘಂಟಿ, ಹಿರೆಣ್ಣೆಪ್ಪ ದೇಶಮುಖ, ಕಲ್ಯಾಣಪ್ಪ ಪಾಟೀಲ ಸೇರಿದಂತೆ ಜನಪ್ರತಿನಿಧಿಗಳು, ಮುಖಂಡರು ಉಪಸ್ಥಿತರಿದ್ದರು. ಉತ್ಸವದ ಸಂಘಟನಾ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ದೊಡ್ಡಬಸವರಾಜ ಸ್ವಾಗತಿಸಿದರು. ಸಂಚಾಲಕ ಮಹಿಪಾಲರೆಡ್ಡಿ ಮುನ್ನೂರ ಅವರು ನಿರೂಪಿಸಿದರು.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in karnataka »

ಕಳೆದ 30 ವರ್ಷಗಳಿಂದ ಶಿಕ್ಷಕರ ಸೇವೆ ಮಾಡಿದ್ದೇನೆ ಮತ್ತೊಮ್ಮೆ ಆಶೀರ್ವದಿಸಿ : ಪುಟ್ಟಣ್ಣ
ಕಳೆದ 30 ವರ್ಷಗಳಿಂದ ಶಿಕ್ಷಕರ ಸೇವೆ ಮಾಡಿದ್ದೇನೆ ಮತ್ತೊಮ್ಮೆ ಆಶೀರ್ವದಿಸಿ : ಪುಟ್ಟಣ್ಣ

ರಾಮನಗರ: ಶಿಕ್ಷಕರ ಕ್ಷೇತ್ರದ ಪ್ರತಿನಿಧಿಯಾಗಿ ಕಳೆದ 30 ವರ್ಷಗಳಿಂದಲೂ ನಿಮ್ಮ ಸೇವೆ ಮಾಡಿದ್ದೇನೆ. ಮುಂದೆಯೂ ನಿಮ್ಮ ಕಷ್ಟಗಳನ್ನರಿತು ನಿಮಗಾಗಿ ಮತ್ತಷ್ಟು ಕ

ಕೆರಗೋಡು ಧ್ವಜ ಪ್ರಕರಣ; ಪ್ರಚೋದನೆ ನೀಡುವವರ ವಿರುದ್ಧ ಕ್ರಮ: ಜಿಲ್ಲಾಧಿಕಾರಿ
ಕೆರಗೋಡು ಧ್ವಜ ಪ್ರಕರಣ; ಪ್ರಚೋದನೆ ನೀಡುವವರ ವಿರುದ್ಧ ಕ್ರಮ: ಜಿಲ್ಲಾಧಿಕಾರಿ

ರಾಮನಗರ, ಫೆ. 02  :  ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಇತ್ತೀಚೆಗೆ ನಡೆದ ಧ್ವಜ ಸ್ತಂಭದ ವಿಚಾರವು ತುಂಬಾ ಸೂಕ್ಷ್ಮ ವಿಚಾರವಾಗಿದ್ದು, ಈ ಸಂಬಂಧ ಯಾವು

ಸಂವಿಧಾನ ಜಾಗೃತಿ ಜಾಥಾ ಗೆ ಸ್ವಾಗತ
ಸಂವಿಧಾನ ಜಾಗೃತಿ ಜಾಥಾ ಗೆ ಸ್ವಾಗತ

ಚನ್ನಪಟ್ಟಣ: ಸಂವಿಧಾನ ಜಾಗೃತಿ ಜಾಥಾಕ್ಕೆ ತಾಲ್ಲೂಕು ಆಡಳಿತದಿಂದ ಅದ್ದೂರಿ ಸ್ವಾಗತ ಕೋರಲಾಯಿತು. ಇದೇ ಸಂದರ್ಭದಲ್ಲಿ

ಸಂವಿಧಾನ ಜಾಗೃತಿ ಜಾಥಾ

ಉಜ್ಜನಹಳ್ಳಿ ವೀರಾಂಜನೇಯಸ್ವಾಮಿ ಗೆ ಗ್ರಾಮಸ್ಥರಿಂದ ಅಭಿಷೇಕ
ಉಜ್ಜನಹಳ್ಳಿ ವೀರಾಂಜನೇಯಸ್ವಾಮಿ ಗೆ ಗ್ರಾಮಸ್ಥರಿಂದ ಅಭಿಷೇಕ

ಚನ್ನಪಟ್ಟಣ: ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಮಾಡಿದ ಹಿನ್ನೆಲೆಯಲ್ಲಿ ಚನ್ನಪಟ್ಟಣ ತಾಲ್ಲೂಕಿನ ಉಜ್ಜನಹಳ್ಳಿ ಗ್ರಾಮದ ಶ್ರೀ ವೀರಾಂನೇಯಸ್ವಾಮಿ ಗೆ ವಿಶೇಷ

ಇ-ಆಸ್ತಿ ತಂತ್ರಾಂಶದಲ್ಲಿ ಆಸ್ತಿ ದಾಖಲೀಕರಣ ಮತ್ತು ಗಣಕೀಕರಣಗೊಳಿಸಿ
ಇ-ಆಸ್ತಿ ತಂತ್ರಾಂಶದಲ್ಲಿ ಆಸ್ತಿ ದಾಖಲೀಕರಣ ಮತ್ತು ಗಣಕೀಕರಣಗೊಳಿಸಿ

ರಾಮನಗರ, ಜ. 17: ರಾಮನಗರ ಜಿಲ್ಲಾ ವ್ಯಾಪ್ತಿಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಖಾತೆ ಹೊಂದಿರುವ ಆಸ್ತಿಗಳನ್ನು ದಿನಾಂಕ: 02.05.2015 ರಿಂದ ಜಾರಿಗೆ ಬರುವಂತೆ,

ಬೋಧನಾ ಶುಲ್ಕ ಪಾವತಿಸಲು ಅವಧಿ ವಿಸ್ತರಣೆ
ಬೋಧನಾ ಶುಲ್ಕ ಪಾವತಿಸಲು ಅವಧಿ ವಿಸ್ತರಣೆ

ರಾಮನಗರ:  ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ 2019-20, 2020-21, 2021-22 ಮತ್ತು 2022-23ರ (ಜುಲೈ ಆವೃತ್ತಿ) ದ್ವಿತೀಯ/ತೃತೀಯ ವರ್ಷದ ಬಿ

ಸರ್ವಸಮ್ಮೇಳನಕ್ಕೂ ಮಾದರಿಯಾಗಿ ಯಶಸ್ವಿಯಾದ \'ಪರಿಸರಕ್ಕಾಗಿ ನಾವು\' ಸಮ್ಮೇಳನ
ಸರ್ವಸಮ್ಮೇಳನಕ್ಕೂ ಮಾದರಿಯಾಗಿ ಯಶಸ್ವಿಯಾದ \'ಪರಿಸರಕ್ಕಾಗಿ ನಾವು\' ಸಮ್ಮೇಳನ

ಹಾಸನ: ಪ್ರಾಕೃತಿಕ ಸೌಂದರ್ಯವು ಇ-ತ್ಯಾಜ್ಯ, ಕೆಲ ತಂತ್ರಜ್ಞಾನ ಹಾಗೂ ಪ್ಲಾಸ್ಟಿಕ್ ನಿಂದ  ಹಾಳಾಗುತ್ತಿದೆ. ಪರಿಸರ ನಾಶಕ್ಕೆ ಮುನ್ನುಡಿ ಬರೆದವನೇ

೫೨ ಲಕ್ಷಕ್ಕೂ ಹೆಚ್ಚು ಮೌಲ್ಯದ ಪಡಿತರ ಅಕ್ಕಿ ಗೋದಾಮಿನಲ್ಲೇ ಮಾಯ, ಅಧಿಕಾರಿಗಳಿಂದ ಪರಿಶೀಲನೆ, ವ್ಯವಸ್ಥಾಪಕನ ಬಂಧನ
೫೨ ಲಕ್ಷಕ್ಕೂ ಹೆಚ್ಚು ಮೌಲ್ಯದ ಪಡಿತರ ಅಕ್ಕಿ ಗೋದಾಮಿನಲ್ಲೇ ಮಾಯ, ಅಧಿಕಾರಿಗಳಿಂದ ಪರಿಶೀಲನೆ, ವ್ಯವಸ್ಥಾಪಕನ ಬಂಧನ

ಚನ್ನಪಟ್ಟಣ: ತಾಲ್ಲೂಕಿನಾದ್ಯಂತ ಪಡಿತರ ನ್ಯಾಯಬೆಲೆ ಅಂಗಡಿಗಳಿಗೆ ವಿತರಿಸಲು ಪಡಿತರ ಅಕ್ಕಿಯ ಪೈಕಿ ಸುಮಾರು ೫೨ ಲಕ್ಷಕ್ಕೂ  ಮೌಲ್ಯದ ೧,೫೪೩.೬೫ ಕ್ವಿಂಟಾಲ್ ಅ

ದಸರಾ ಎಂಬುದು ಮೈಸೂರಿಗಷ್ಟೇ ಸೀಮಿತವಾಗಬಾರದು, ಮನ-ಮನೆಯಲ್ಲೂ ದಸರಾ ಆಗಬೇಕು. ಡಾ ರೂಪಾ ಶ್ರೀಧರ್
ದಸರಾ ಎಂಬುದು ಮೈಸೂರಿಗಷ್ಟೇ ಸೀಮಿತವಾಗಬಾರದು, ಮನ-ಮನೆಯಲ್ಲೂ ದಸರಾ ಆಗಬೇಕು. ಡಾ ರೂಪಾ ಶ್ರೀಧರ್

ಚನ್ನಪಟ್ಟಣ: ದಸರಾ ಎಂದರೆ ಕೇವಲ ಮೈಸೂರು ಎಂಬಂತಾಗಿದೆ, ಇದು ನಾಡ ಹಬ್ಬ ಎಂಬುದು ಕೇವಲ ಉಲ್ಲೇಖಕ್ಕಷ್ಟೇ ಸೀಮಿತವಾಗಿದೆ. ಇದು ನಾಡಹಬ್ಬ ಎಂಬುದು ಸರ

ಒಕ್ಕಲಿಗರು ಸಂಸ್ಕೃತಿ ಹಿeನರಲ್ಲ ನೈಜ ಸಂಸ್ಕೃತಿಯ ಮಾಲೀಕರು, ಪ್ರೊ ಭಗವಾನ್ ಗೆ ತಿರುಗೇಟು ನೀಡಿದ ಹಿರಿಯ ರೈತ ಮುಖಂಡ ಸಿ ಪುಟ್ಟಸ್ವಾಮಿ
ಒಕ್ಕಲಿಗರು ಸಂಸ್ಕೃತಿ ಹಿeನರಲ್ಲ ನೈಜ ಸಂಸ್ಕೃತಿಯ ಮಾಲೀಕರು, ಪ್ರೊ ಭಗವಾನ್ ಗೆ ತಿರುಗೇಟು ನೀಡಿದ ಹಿರಿಯ ರೈತ ಮುಖಂಡ ಸಿ ಪುಟ್ಟಸ್ವಾಮಿ

ರಾಮನಗರ: ಚನ್ನಪಟ್ಟಣ; ಪ್ರೊ ಭಗವಾನ್ ವಿಚಾರವಾದಿ, ಮೂಢನಂಬಿಕೆಗಳನ್ನು ಕಿತ್ತೊಗೆಯಲು, ಪುರಾಣ ಎಂಬುದು ಕಪೋಲ ಕಲ್ಪಿತ, ಇತಿಹಾಸ ಎಂಬುದು ಸಾರ್ವಕಾಲ

Top Stories »  


Top ↑