Tel: 7676775624 | Mail: info@yellowandred.in

Language: EN KAN

    Follow us :


ಮನುವಾದಿ ಕಾಂಗ್ರೆಸ್-ಬಿಜೆಪಿಗಳ ಅಪಪ್ರಚಾರಕ್ಕೆ ಕವಿಗೊಡದೆ ಗೆಲ್ಲುವ ಕಡೆ ಗಮನ ಹರಿಸೋಣ

Posted date: 09 Mar, 2018

Powered by:     Yellow and Red

ಮನುವಾದಿ ಕಾಂಗ್ರೆಸ್-ಬಿಜೆಪಿಗಳ ಅಪಪ್ರಚಾರಕ್ಕೆ ಕವಿಗೊಡದೆ ಗೆಲ್ಲುವ ಕಡೆ ಗಮನ ಹರಿಸೋಣ

BSP-JDS ಮೈತ್ರಿಯ ಬಗ್ಗೆ ಕಾಂಗ್ರೆಸ್ಸಿಗರು ಹಾಗು ಬಿಜೆಪಿಗಳು ಬಹಳ ತಲೆಕೆಡಿಸಿಕೊಂಡಿವೆ. ತಾವು ಮುಂದಿನ ಚುನಾವಣೆಯಲ್ಲಿ ಅಧಿಕಾರಕ್ಕೆ ಬರಲಾಗದ ಸುಳಿವು ಸಿಕ್ಕಿ ಅಪಪ್ರಚಾರದಲ್ಲಿ ನಿರತರವಾಗಿವೆ. ಅದರಲ್ಲಿ ಬಹಳ ಮುಖ್ಯವಾದವುಗಳೆಂದರೆ 1. ದೇವೇಗೌಡರು ಎಂತೆಂಥವರಿಗೆ ಮೋಸ ಮಾಡಿದರು? ಇನ್ನು ಬಿಎಸ್‍ಪಿಯವರಿಗೆ ಮೋಸ ಮಾಡುವುದಿಲ್ಲವೇ...? 2. ದೇವೇಗೌಡರು ತಮ್ಮ ಸ್ವಂತ ಜಿಲ್ಲೆ ಹಾಸನದಲ್ಲಿ ಬಿಎಸ್‍ಪಿಗೆ ಒಂದು ಕ್ಷೇತ್ರ ಬಿಟ್ಟುಕೊಡಬಹುದಿತ್ತಲ್ಲವೇ..? ಅಲ್ಲಿ ಬಿಎಸ್‍ಪಿ ಅಭ್ಯರ್ಥಿಯನ್ನು ಗೆಲ್ಲಿಸಬಹುದಿತ್ತಲ್ಲವೇ...? ಹೀಗೆ ಎಲ್ಲ ಕಡೆ ಹೇಳಿಕೊಂಡು ಬಹುಜನ ಸಮಾಜದ ಮತದಾರರನ್ನು ದಿಕ್ಕು ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ.

​  ಈ ಕಾಂಗ್ರೆಸ್ಸಿಗರಿಗೆ ಹಾಗು ಬಿಜೆಪಿಯವರಿಗೆ ನಮ್ಮ ಪ್ರಶ್ನೆಯೇನು ಎಂದರೆ - ಇದ್ದಕ್ಕಿದ್ದಂತೆ ನಿಮಗೇಕೆ ಬಿಎಸ್‍ಪಿಯ ಬಗ್ಗೆ ಅನುಕಂಪ ಬಂದಿದೆ ಎಂಬುದಾಗಿದೆ. ಇದು ನಿಜ ತಾನೇ...? ಬಿಎಸ್‍ಪಿ ಏಳಿಗೆಯನ್ನು ಒಂದು ಚೂರು ಸಹಿಸದ ಈ ಎರಡೂ ಮನುವಾದಿ ಪಕ್ಷಗಳು ಈಗೇಕೆ ಬಾಯಿಮಾತಿನ ಪ್ರೀತಿ ತೋರಿಸುತ್ತಿವೆ? ಇವರಿಗೆ ಅಷ್ಟೊಂದು ಪ್ರೀತಿಯಿದ್ದರೆ ಇವರೇ ಬಿಎಸ್‍ಪಿಯ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳಬಹುದಿತ್ತಲ್ಲವೇ...? ಶ್ರೀ ಸಿದ್ದರಾಮಯ್ಯನವರು 2006 ರ ಡಿಸೆಂಬರ್ ನಲ್ಲಿ ನಡೆದ ಚಾಮುಂಡೇಶ್ವರಿ ಕ್ಷೇತ್ರದ ಉಪ ಚುನಾವಣೆಯ ಸಂದರ್ಭದಲ್ಲಿ ನಿಮ್ಮ ಅಭ್ಯರ್ಥಿಯನ್ನು ಹಾಕಬೇಡಿ. ನಾನು ಸೋತು ಹೋಗುತ್ತೇನೆ. ನನ್ನನ್ನು ಗೆಲ್ಲಿಸಿ ಎಂದು ಬಿಎಸ್‍ಪಿ ನಾಯಕರನ್ನು ಕೇಳಿಕೊಂಡರು. ನೂರಾರು ಕವಿ-ಕಲಾವಿದರ ಮೂಲಕ ಬಿಎಸ್‍ಪಿ ನಾಯಕರಲ್ಲಿ ಅಭ್ಯರ್ಥಿಯನ್ನು ಹಾಕದಂತೆ ಒತ್ತಾಯಪೂರಿತವಾದ ಮನವಿ ಮಾಡಿಕೊಂಡಿದ್ದರು. ಆಗ ಬಿಎಸ್‍ಪಿಯ ನಾಯಕರು “ಒಬ್ಬ ಹಿಂದುಳಿದ ವರ್ಗದ ನಾಯಕನ ಭವಿಷ್ಯ ಹಾಳಾಗದಿರಲಿ” ಎಂಬ ಕಳಕಳಿಯಿಂದ ಅವರ ಮನವಿಗೆ ಸ್ಪಂದಿಸಿ ಶ್ರೀ ಸಿದ್ದರಾಮಯ್ಯನವರ ಗೆಲುವಿಗೆ ಸಹಕರಿಸಿದರು.
​ಆದರೀಗ ಇದೇ ಸಿದ್ದರಾಮಯ್ಯನವರು ಏನು ಮಾಡುತ್ತಿದ್ದಾರೆ...? ಬಿಎಸ್‍ಪಿ ತನಗೆ ನೀಡಿದ ಅಪತ್ಕಾಲದ ಸಹಾಯಕ್ಕೆ ಏನಾದರೂ ಪ್ರತ್ಯುಪಕಾರವನ್ನು ಇವರು ಮಾಡಿದ್ದಾರೆಯೇ...? ಬಿಎಸ್‍ಪಿಯನ್ನು ಒಂದೆರಡು ಕಡೆ ಗೆಲ್ಲಿಸಿ ಎಂದು ತಮ್ಮ ಕಾರ್ಯಕರ್ತರಿಗೆ ಹೇಳಿದ್ದಾರೆಯೇ...? ಅಥವ ಬಿಎಸ್‍ಪಿಯವರಿಗಾಗಿ ಕೆಲ ಕ್ಷೇತ್ರಗಳನ್ನು ಬಿಟ್ಟುಕೊಡೋಣ ಎಂದಿದ್ದಾರೆಯೇ...? ಖಂಡಿತ ಇಲ್ಲ. ಪಡೆದುಕೊಂಡ ಸಹಾಯಕ್ಕೆ ಒಂದೂ ಚೂರು ಕೃತಜ್ಞತೆಯಿಲ್ಲದ ಸಿದ್ದರಾಮಯ್ಯನವರು 2013 ರ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್‍ಪಿಯ ಅಭ್ಯರ್ಥಿಗಳು ಗೆಲ್ಲದಂತೆ ಪಿತೂರಿ ಮಾಡಿದರು. ವಿಶೇಷವಾಗಿ ಕೊಳ್ಳೇಗಾಲದಲ್ಲಿ ಬಿಎಸ್‍ಪಿ ಗೆಲುವಿನ ಸೂಚನೆಯನ್ನು ತಿಳಿದು ರಾತ್ರೋ ರಾತ್ರಿ ಅಪಾರವಾದ ಹಣವನ್ನು ಹಂಚಿ ಕೊಳ್ಳೇಗಾಲದಲ್ಲಿ ಇನ್ನೇನು ಗೆಲುವಿನ ಸನಿಹಕ್ಕೆ ಬಂದಿದ್ದ ಶ್ರೀ ಎನ್ ಮಹೇಶ್ ರವರನ್ನು ಸೋಲಿಸಿದರು. ತಾನೆಂತಹ ಮೋಸಗಾರ, ಕೃತಘ್ನ ಎಂಬುದನ್ನು ಸಿದ್ದರಾಮಯ್ಯನವರು ಜಗಜ್ಜಾಹೀರುಪಡಿಸಿಕೊಂಡರು. ಅದು ಸಾಲದೆಂಬಂತೆ ಈಗಲೂ ಬಿಎಸ್‍ಪಿ ಎಲ್ಲೂ ಗೆಲ್ಲಬಾರದಂತೆ.! ಹಾಗಂತ ಅವರು ಹುಕುಂ ಹೊರಡಿಸಿದ್ದಾರೆ.! ಉಂಡ ಮನೆಗೆ ದ್ರೋಹ ಮಾಡುವುದು ಎಂದರೆ ಇದೇ ಅಲ್ಲವೇ...? ಈ ಜನ ಈಗ ಶ್ರೀ ದೇವೇಗೌಡರನ್ನು ಮೋಸಗಾರನೆನ್ನುತ್ತಿದ್ದಾರೆ?! ಎಂಥಾ ಐರನಿ!

  ಕಾಂಗ್ರೆಸ್ಸಿಗರು-ಬಿಜೆಪಿಯವರು ಭಾರತದ ಬಹುಜನರಿಗೆ ಮಾಡಿರುವಷ್ಟು ಮೋಸವನ್ನು ಬೇರೆ ಯಾರು ಮಾಡಿದ್ದಾರೆ...? ಪೂನಾ ಒಪ್ಪಂದದ ಸಂದರ್ಭದಲ್ಲಿ ಡಾ. ಅಂಬೇಡ್ಕರ್‍ರರನ್ನು ಸೋಲಿಸಿದವರು ಯಾರು? ಬಾಬು ಜಗಜೀವನ್‍ರಾಮ್‍ರವರನ್ನು ಪ್ರಧಾನಿಯಾಗದಂತೆ ತಡೆದವರು ಯಾರು? ಶ್ರೀಯುತ ಮಲ್ಲಿಕಾರ್ಜುನ ಖರ್ಗೆ, ಶ್ರೀ ಕೆ.ಎಚ್ ರಂಗನಾಥ್, ಶ್ರೀ ಜಿ.ಪರಮೇಶ್ವರ, ಶ್ರೀ ಶ್ರೀನಿವಾಸ್‍ಪ್ರಸಾದ್ ಮುಂತಾದವರ ಮುಖ ತೋರಿಸಿ ದಲಿತರ ಸಂಪೂರ್ಣ ಓಟುಗಳನ್ನು ಕದ್ದು, ಕೊನೆಗೆ ಇದೇ ನಾಯಕರನ್ನು ಅಧಿಕಾರದಿಂದ ವಂಚಿಸಿದವರು ಯಾರು? ಕಾಂಗ್ರೆಸ್‍ನವರಲ್ಲವೇ..? “ಕಾಂಗ್ರೆಸ್ಸೆಂಬುದು ಒಂದು ಉರಿಯುವ ಮನೆ. ಅಲ್ಲಿ ಹೋದರೆ ನೀವು ಸುಟ್ಟು ಬೂದಿಯಾಗುವಿರಿ” ಎಂದು ಡಾ. ಅಂಬೇಡ್ಕರರು ಪ್ರವಾದಿಯ ಧ್ವನಿಯಲ್ಲಿ ಸುಮ್ಮನೆ ಹೇಳಿದರೇನು...?

  1951 ರಿಂದಲೂ ಕಾಂಗ್ರೆಸ್ಸಿಗೆ ಅತಿಹೆಚ್ಚು ಮತನೀಡುತ್ತಿರುವವರು ಇದೇ ಬಹುಜನರು(SC/ST/OBC ಜನರು).ಆದರೆ ಕಾಂಗ್ರೆಸ್ ಇವರಿಗೆ ಏನು ನೀಡಿದೆ? ಎಷ್ಟು ಭೂಮಿ ನೀಡಿದೆ? ಈ ಬಹುಜನರಲ್ಲಿ ಎಷ್ಟು ಜನರನ್ನು ಉದ್ಯಮಿಗಳನ್ನಾಗಿಸಿದೆ? ಬ್ರಾಹ್ಮಣ -ಬನಿಯಾಗಳ ಸರಿಸಮಕ್ಕೆ ಎಷ್ಟು ಜನರನ್ನು ಬೆಳೆಸಿದೆ? ಬಹಳ ಅನ್ಯಾಯವೆಂದರೆ ಕಾಂಗ್ರೆಸ್ ಬಿಜೆಪಿಗಳಿಗೆ ಕೇವಲ ಐದಾರು ಪರ್ಸೆಂಟ್ ಮತನೀಡುವ ಬ್ರಾಹ್ಮಣ-ಬನಿಯಾ ಮತ್ತಿತರ ಸವರ್ಣೀಯ ಸಮುದಾಯಗಳು ಶೇ.90ಕ್ಕಿಂತಲೂ ಹೆಚ್ಚು ಲಾಭಪಡೆದಿವೆ.ಆದರೆ ಶೇ.90ಕ್ಕಿಂತಲೂ ಅತಿಹೆಚ್ಚು ಮತವನ್ನು ಕಾಂಗ್ರೆಸ್ಸಿಗೆ ನೀಡುವ ಬಹುಜನರು ಕೇವಲ ಒಂದು ಆಶ್ರಯಮನೆ-ಒಂದು ಎಮ್ಮೆ ಲೋನು-50 ರೂಪಾಯಿ ಪಿಂಚಣಿ-ಈಗ ಶಾಲೆಗಳಲ್ಲಿ ಒಂದಿಡಿ ಅನ್ನ,ಒಂದು ಮೊಟ್ಟೆ,ಒಂದು ಗ್ಲಾಸ್ ಹಾಲು.....ಇಂತಹ ಭಿಕ್ಷೆಗಳನ್ನು ಪಡೆಯುತ್ತಿದ್ದಾರೆ!! ಇದಕ್ಕಿಂತ ದೊಡ್ಡ ಮೋಸ - ವಂಚನೆ ಇನ್ನೊಂದಿದೆಯೇ? ಇಂತಹ ಅನ್ಯಾಯಗಳನ್ನು ಬಹುಜನರಿಗೆ ನಿರಂತರವಾಗಿ ಮಾಡಿಕೊಂಡು ಬಂದಿರುವ ಕಾಂಗ್ರೆಸ್ ದೇವೇಗೌಡರನ್ನು ಮೋಸಗಾರನೆನ್ನುತ್ತಿದೆ!!ದಯಮಾಡಿ ಬಲ್ಲವರು ಹೇಳಿ ಯಾರು ಮೋಸಗಾರರು?

​  ಬಂಧುಗಳೇ... ಈ ಕಾಂಗ್ರೆಸ್-ಬಿಜೆಪಿಗಳ ಇಂತಹ ತಲೆಹರಟೆಗಳಿಗೆಲ್ಲ  ಕಿವಿಗೊಡಬೇಡಿ. ಸದಾ ಬಹುಜನರ ಏಳ್ಗೆಯನ್ನೇ ಬಯಸುವ , ಅದಕ್ಕಾಗಿಯೇ ಹಗಲಿರುಳು ಶ್ರಮಿಸುತ್ತಿರುವ ಅಕ್ಕ ಮಾಯಾವತಿಯವರು ಸರಿಯಾಗಿಯೇ ತೀರ್ಮಾನಿಸಿದ್ದಾರೆ. ಎರಡೂ ಪಕ್ಷಗಳ ಬಲಾಬಲಗಳನ್ನು ನೋಡಿಯೇ ಅವರು ಕ್ಷೇತ್ರಗಳನ್ನು ಹಂಚಿದ್ದಾರೆ. ಹಾಗಾಗಿ ಯಾವ ಅಪಪ್ರಚಾರಗಳಿಗೂ ಕಿವಿಗೊಡದೆ ಮುಂದಿನ ಚುನಾವಣೆಯಲ್ಲಿ ಜೆಡಿಎಸ್-ಬಿಎಸ್‍ಪಿ ಮೈತ್ರಿ ಸರ್ಕಾರವನ್ನು ಅಸ್ತಿತ್ವಕ್ಕೆ ತರೋಣ... ಈ ಕಾಂಗ್ರೆಸ್ - ಬಿಜೆಪಿ ಮನುವಾದಿಗಳಿಗೆ ಪರ್ಯಾಯವಾದ ಹೊಸ ರಾಜಕೀಯ ಶಕೆಯೊಂದನ್ನು ಪ್ರಾರಂಭಿಸೋಣ. ಸದೃಢ ಕರ್ನಾಟಕವನ್ನು ಕಟ್ಟೋಣ.

-ಡಾ. ಶಿವಕುಮಾರ್

ಪ್ರತಿಕ್ರಿಯೆಗಳು1 comments

  • mahesh wrote:
    09 Mar, 2018 03:23 pm

    Jai beem

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in karnataka »

ಕಳೆದ 30 ವರ್ಷಗಳಿಂದ ಶಿಕ್ಷಕರ ಸೇವೆ ಮಾಡಿದ್ದೇನೆ ಮತ್ತೊಮ್ಮೆ ಆಶೀರ್ವದಿಸಿ : ಪುಟ್ಟಣ್ಣ
ಕಳೆದ 30 ವರ್ಷಗಳಿಂದ ಶಿಕ್ಷಕರ ಸೇವೆ ಮಾಡಿದ್ದೇನೆ ಮತ್ತೊಮ್ಮೆ ಆಶೀರ್ವದಿಸಿ : ಪುಟ್ಟಣ್ಣ

ರಾಮನಗರ: ಶಿಕ್ಷಕರ ಕ್ಷೇತ್ರದ ಪ್ರತಿನಿಧಿಯಾಗಿ ಕಳೆದ 30 ವರ್ಷಗಳಿಂದಲೂ ನಿಮ್ಮ ಸೇವೆ ಮಾಡಿದ್ದೇನೆ. ಮುಂದೆಯೂ ನಿಮ್ಮ ಕಷ್ಟಗಳನ್ನರಿತು ನಿಮಗಾಗಿ ಮತ್ತಷ್ಟು ಕ

ಕೆರಗೋಡು ಧ್ವಜ ಪ್ರಕರಣ; ಪ್ರಚೋದನೆ ನೀಡುವವರ ವಿರುದ್ಧ ಕ್ರಮ: ಜಿಲ್ಲಾಧಿಕಾರಿ
ಕೆರಗೋಡು ಧ್ವಜ ಪ್ರಕರಣ; ಪ್ರಚೋದನೆ ನೀಡುವವರ ವಿರುದ್ಧ ಕ್ರಮ: ಜಿಲ್ಲಾಧಿಕಾರಿ

ರಾಮನಗರ, ಫೆ. 02  :  ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಇತ್ತೀಚೆಗೆ ನಡೆದ ಧ್ವಜ ಸ್ತಂಭದ ವಿಚಾರವು ತುಂಬಾ ಸೂಕ್ಷ್ಮ ವಿಚಾರವಾಗಿದ್ದು, ಈ ಸಂಬಂಧ ಯಾವು

ಸಂವಿಧಾನ ಜಾಗೃತಿ ಜಾಥಾ ಗೆ ಸ್ವಾಗತ
ಸಂವಿಧಾನ ಜಾಗೃತಿ ಜಾಥಾ ಗೆ ಸ್ವಾಗತ

ಚನ್ನಪಟ್ಟಣ: ಸಂವಿಧಾನ ಜಾಗೃತಿ ಜಾಥಾಕ್ಕೆ ತಾಲ್ಲೂಕು ಆಡಳಿತದಿಂದ ಅದ್ದೂರಿ ಸ್ವಾಗತ ಕೋರಲಾಯಿತು. ಇದೇ ಸಂದರ್ಭದಲ್ಲಿ

ಸಂವಿಧಾನ ಜಾಗೃತಿ ಜಾಥಾ

ಉಜ್ಜನಹಳ್ಳಿ ವೀರಾಂಜನೇಯಸ್ವಾಮಿ ಗೆ ಗ್ರಾಮಸ್ಥರಿಂದ ಅಭಿಷೇಕ
ಉಜ್ಜನಹಳ್ಳಿ ವೀರಾಂಜನೇಯಸ್ವಾಮಿ ಗೆ ಗ್ರಾಮಸ್ಥರಿಂದ ಅಭಿಷೇಕ

ಚನ್ನಪಟ್ಟಣ: ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಮಾಡಿದ ಹಿನ್ನೆಲೆಯಲ್ಲಿ ಚನ್ನಪಟ್ಟಣ ತಾಲ್ಲೂಕಿನ ಉಜ್ಜನಹಳ್ಳಿ ಗ್ರಾಮದ ಶ್ರೀ ವೀರಾಂನೇಯಸ್ವಾಮಿ ಗೆ ವಿಶೇಷ

ಇ-ಆಸ್ತಿ ತಂತ್ರಾಂಶದಲ್ಲಿ ಆಸ್ತಿ ದಾಖಲೀಕರಣ ಮತ್ತು ಗಣಕೀಕರಣಗೊಳಿಸಿ
ಇ-ಆಸ್ತಿ ತಂತ್ರಾಂಶದಲ್ಲಿ ಆಸ್ತಿ ದಾಖಲೀಕರಣ ಮತ್ತು ಗಣಕೀಕರಣಗೊಳಿಸಿ

ರಾಮನಗರ, ಜ. 17: ರಾಮನಗರ ಜಿಲ್ಲಾ ವ್ಯಾಪ್ತಿಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಖಾತೆ ಹೊಂದಿರುವ ಆಸ್ತಿಗಳನ್ನು ದಿನಾಂಕ: 02.05.2015 ರಿಂದ ಜಾರಿಗೆ ಬರುವಂತೆ,

ಬೋಧನಾ ಶುಲ್ಕ ಪಾವತಿಸಲು ಅವಧಿ ವಿಸ್ತರಣೆ
ಬೋಧನಾ ಶುಲ್ಕ ಪಾವತಿಸಲು ಅವಧಿ ವಿಸ್ತರಣೆ

ರಾಮನಗರ:  ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ 2019-20, 2020-21, 2021-22 ಮತ್ತು 2022-23ರ (ಜುಲೈ ಆವೃತ್ತಿ) ದ್ವಿತೀಯ/ತೃತೀಯ ವರ್ಷದ ಬಿ

ಸರ್ವಸಮ್ಮೇಳನಕ್ಕೂ ಮಾದರಿಯಾಗಿ ಯಶಸ್ವಿಯಾದ \'ಪರಿಸರಕ್ಕಾಗಿ ನಾವು\' ಸಮ್ಮೇಳನ
ಸರ್ವಸಮ್ಮೇಳನಕ್ಕೂ ಮಾದರಿಯಾಗಿ ಯಶಸ್ವಿಯಾದ \'ಪರಿಸರಕ್ಕಾಗಿ ನಾವು\' ಸಮ್ಮೇಳನ

ಹಾಸನ: ಪ್ರಾಕೃತಿಕ ಸೌಂದರ್ಯವು ಇ-ತ್ಯಾಜ್ಯ, ಕೆಲ ತಂತ್ರಜ್ಞಾನ ಹಾಗೂ ಪ್ಲಾಸ್ಟಿಕ್ ನಿಂದ  ಹಾಳಾಗುತ್ತಿದೆ. ಪರಿಸರ ನಾಶಕ್ಕೆ ಮುನ್ನುಡಿ ಬರೆದವನೇ

೫೨ ಲಕ್ಷಕ್ಕೂ ಹೆಚ್ಚು ಮೌಲ್ಯದ ಪಡಿತರ ಅಕ್ಕಿ ಗೋದಾಮಿನಲ್ಲೇ ಮಾಯ, ಅಧಿಕಾರಿಗಳಿಂದ ಪರಿಶೀಲನೆ, ವ್ಯವಸ್ಥಾಪಕನ ಬಂಧನ
೫೨ ಲಕ್ಷಕ್ಕೂ ಹೆಚ್ಚು ಮೌಲ್ಯದ ಪಡಿತರ ಅಕ್ಕಿ ಗೋದಾಮಿನಲ್ಲೇ ಮಾಯ, ಅಧಿಕಾರಿಗಳಿಂದ ಪರಿಶೀಲನೆ, ವ್ಯವಸ್ಥಾಪಕನ ಬಂಧನ

ಚನ್ನಪಟ್ಟಣ: ತಾಲ್ಲೂಕಿನಾದ್ಯಂತ ಪಡಿತರ ನ್ಯಾಯಬೆಲೆ ಅಂಗಡಿಗಳಿಗೆ ವಿತರಿಸಲು ಪಡಿತರ ಅಕ್ಕಿಯ ಪೈಕಿ ಸುಮಾರು ೫೨ ಲಕ್ಷಕ್ಕೂ  ಮೌಲ್ಯದ ೧,೫೪೩.೬೫ ಕ್ವಿಂಟಾಲ್ ಅ

ದಸರಾ ಎಂಬುದು ಮೈಸೂರಿಗಷ್ಟೇ ಸೀಮಿತವಾಗಬಾರದು, ಮನ-ಮನೆಯಲ್ಲೂ ದಸರಾ ಆಗಬೇಕು. ಡಾ ರೂಪಾ ಶ್ರೀಧರ್
ದಸರಾ ಎಂಬುದು ಮೈಸೂರಿಗಷ್ಟೇ ಸೀಮಿತವಾಗಬಾರದು, ಮನ-ಮನೆಯಲ್ಲೂ ದಸರಾ ಆಗಬೇಕು. ಡಾ ರೂಪಾ ಶ್ರೀಧರ್

ಚನ್ನಪಟ್ಟಣ: ದಸರಾ ಎಂದರೆ ಕೇವಲ ಮೈಸೂರು ಎಂಬಂತಾಗಿದೆ, ಇದು ನಾಡ ಹಬ್ಬ ಎಂಬುದು ಕೇವಲ ಉಲ್ಲೇಖಕ್ಕಷ್ಟೇ ಸೀಮಿತವಾಗಿದೆ. ಇದು ನಾಡಹಬ್ಬ ಎಂಬುದು ಸರ

ಒಕ್ಕಲಿಗರು ಸಂಸ್ಕೃತಿ ಹಿeನರಲ್ಲ ನೈಜ ಸಂಸ್ಕೃತಿಯ ಮಾಲೀಕರು, ಪ್ರೊ ಭಗವಾನ್ ಗೆ ತಿರುಗೇಟು ನೀಡಿದ ಹಿರಿಯ ರೈತ ಮುಖಂಡ ಸಿ ಪುಟ್ಟಸ್ವಾಮಿ
ಒಕ್ಕಲಿಗರು ಸಂಸ್ಕೃತಿ ಹಿeನರಲ್ಲ ನೈಜ ಸಂಸ್ಕೃತಿಯ ಮಾಲೀಕರು, ಪ್ರೊ ಭಗವಾನ್ ಗೆ ತಿರುಗೇಟು ನೀಡಿದ ಹಿರಿಯ ರೈತ ಮುಖಂಡ ಸಿ ಪುಟ್ಟಸ್ವಾಮಿ

ರಾಮನಗರ: ಚನ್ನಪಟ್ಟಣ; ಪ್ರೊ ಭಗವಾನ್ ವಿಚಾರವಾದಿ, ಮೂಢನಂಬಿಕೆಗಳನ್ನು ಕಿತ್ತೊಗೆಯಲು, ಪುರಾಣ ಎಂಬುದು ಕಪೋಲ ಕಲ್ಪಿತ, ಇತಿಹಾಸ ಎಂಬುದು ಸಾರ್ವಕಾಲ

Top Stories »  


Top ↑