Tel: 7676775624 | Mail: info@yellowandred.in

Language: EN KAN

    Follow us :


ರಾಜ್ಯ ಮಟ್ಟದ ಬಂಜಾರ ಸಾಹಿತ್ಯ ಹಾಗೂ ಕಲಾ ಸೋಬಗು ಪ್ರದರ್ಶನ ದಿಬ್ಬಣ

Posted date: 01 Apr, 2018

Powered by:     Yellow and Red

ರಾಜ್ಯ ಮಟ್ಟದ ಬಂಜಾರ ಸಾಹಿತ್ಯ ಹಾಗೂ ಕಲಾ ಸೋಬಗು ಪ್ರದರ್ಶನ ದಿಬ್ಬಣ

ಬೆಂಗಳೂರಿನ ಕೋಣನ ಕುಂಟೆಯ ಸಿಲಿಕಾನ್ ಸಿಟಿ ಸಭಾಂಗಣದಲ್ಲಿ ನಡೆದ 2018 ರ ಬಂಜಾರ ಸಾಮಾಜಿಕ ಮತ್ತು ಸಾಂಸ್ಕøತಿಕ ಅಕಾಡೆಮಿಯ ರಾಜ್ಯ ಮಟ್ಟದ ಬಂಜಾರ ಸಾಹಿತ್ಯ ಹಾಗೂ ಕಲಾ ಸೋಬಗು ಪ್ರದರ್ಶನ  ದಿಬ್ಬಣ-2018 ಕಾರ್ಯಕ್ರಮದಲ್ಲಿ ಕಲಾ ತಂಡಗಳ ಪ್ರದರ್ಶನಕ್ಕೆ ಹೆಸರಾಂತ ಗಾಯಕ ಹಾಗೂ ಕಲಾವಿದ ಶಶಿಧರ ಕೋಟೆ ಹಾಗೂ ರಂಗತಜ್ಞ, ಹಾಗೂ ಕಲಾವಿದ ಡಾ.ಎ.ಆರ್.ಗೋವಿಂದಸ್ವಾಮಿ ನಗಾರಿ ಬಾರಿಸುವ ಮೂಲಕ ಚಾಲನೆಕೊಟ್ಟರು.

ವೇದಿಕೆ ಕಾರ್ಯಕ್ರಮದ ಉದ್ಘಾಟನೆಯನ್ನು ಸಾಹಿತಿ, ಚಿಂತಕ ಪ್ರೊ. ಚಂದ್ರಶೇಖರ ಪಾಟೀ¯ ರವರು ನೇರವೇರಿಸಿದರು. 


ರಂಗತಜ್ಞ ಹಾಗೂ ರಂಗ ಕಲಾವಿದ ಡಾ.ಎ.ಆರ್.ಗೋವಿಂದಸ್ವಾಮಿ ರಚಿಸಿರುವ ‘ರಂಗ ವಿಮರ್ಶೆ’ ಕೃತಿ  ಹಾಗೂ ‘ರಾಮನಗರ ಜಿಲ್ಲಾ ರಂಗ ಮಾಹಿತಿ ಕೈಪಿಡಿ’ಗಳ ಲೋಕಾರ್ಪಣೆ.

ಪ್ರೋ. ಚಂದ್ರಶೇಖರ ಪಾಟೀಲ್ ಅವರು ರಂಗತಜ್ಞ ಡಾ.ಎ.ಆರ್.ಗೋವಿಂದಸ್ವಾಮಿ ರವರು ರಚಿಸಿರುವ ‘ರಂಗ ವಿಮರ್ಶೆ’ ಗ್ರಂಥ ಹಾಗೂ ‘ರಾಮನಗರ ಜಿಲ್ಲಾ ರಂಗ ಮಾಹಿತಿ ಕೈಪಿಡಿ’ ಬಿಡುಗಡೆಗೋಳಿಸಿ ಮಾತನಾಡುತ್ತಾ, “ಅಲೆಮಾರಿ ಬುಡಕಟ್ಟು ಹಿನ್ನಲೆ ಹೊಂದಿರುವ ಲಂಬಾಣಿಗರ ಭಾಷೆಗೆ ‘ಲಿಪಿ’ ಯ ಗೊಂದಲ ಇದ್ದು, ಇದು ದೇವನಾಗರಿ ಅಥವಾ ಇತರೆ ಲಿಪಿ ಪಡೆಯುವ ಬಗ್ಗೆ ಚಿಂತಿಸಲಾಗುತ್ತಿದೆ. ಇಂತಹ ಸಮುದಾಯದಿಂದ ಬಂದ ರಂಗತಜ್ಞ, ಕಲಾವಿದ ಡಾ.ಎ.ಆರ್.ಗೋವಿಂದಸ್ವಾಮಿ ಅವರು ‘ರಂಗ ವಿಮರ್ಶೆ’ ಹಾಗೂ ಕರ್ನಾಟಕ ನಾಟಕ ಅಕಾಡೆಮಿಗಾಗಿ ರಚಿಸಿರುವ ‘ರಾಮನಗರ ಜಿಲ್ಲಾ ರಂಗ ಮಾಹಿತಿ ಕೈಪಿಡಿ ರಚಿಸಿರುವುದು ಶ್ಲಾಘನೀಯ. ಈ ಎರಡು ಕೃತಿಗಳು ಅತ್ಯಂತ ಉಪಯುಕ್ತ ಪುಸ್ತಕಗಳಾಗಿವೆ. ನಾನು ಒಬ್ಬ ನಾಟಕಕಾರಗಾಗಿ ಈ ಕೃತಿ ಬಿಡುಗಡೆ ಹೆಮ್ಮೆ ಎನಿಸಿದೆ.

ರಂಗಭೂಮಿಯಲ್ಲಿ ಶಾಸ್ತ್ರಿಯವಾಗಿ, ಶೈಕ್ಷಣಿಕವಾಗಿ ಗಂಭೀರ ಅಭ್ಯಾಸ ಮಾಡಿರುವ ಡಾ.ಎ.ಆರ್. ಗೋವಿಂದಸ್ವಾಮಿ ಅವರು ರಚಿಸಿರುವ ಈ ಕೃತಿಯ ಮುನ್ನುಡಿಯಲ್ಲಿ ನಾಡಿನ ಹೆಸರಾಂತ ಪತ್ರ ಕರ್ತರು ಹಾಗೂ ವಿಮರ್ಶಕರಾದ ರಂಗನಾಥರಾಯರು ಬರೆದಿರುವಂತೆ,  ಡಾ.ಎ.ಆರ್. ಗೋವಿಂದಸ್ವಾಮಿ ರಚಿಸಿರುವ ಈ  ‘ರಂಗ ವಿಮರ್ಶೆ’ ಕೃತಿಯನ್ನು ರಂಗ ಶಿಕ್ಷಣ ಕೇಂದ್ರಗಳಲ್ಲಿ ಹಾಗೂ ವಿಶ್ವವಿದ್ಯಾಲಯಗಳ ಪ್ರದರ್ಶನ ಕಲಾ ವಿಭಾಗಗಳಲ್ಲಿ ರಂಗಭೂಮಿಯನ್ನು ಶೈಕ್ಷಣಿಕವಾಗಿ ಅಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಕಲಿಕಾ ಪಠ್ಯವಾಗಿಯು ಬಳಸಬಹುದು. ನಾಟಕ ನೋಡುವುದರಲ್ಲಿ ಅನೇಕ ರೀತಿಗಳಿವೆ. ನಾಟಕವನ್ನು ಎಲ್ಲರೂ ಓದಲಾಗದು, ನೋಡಲಾಗದು. ರಂಗದ ಮೇಲೆ ಜನಪದ, ವೃತಿ, ಹವ್ಯಾಸಿ ಪ್ರಾಯೋಗಿಕವಾದ ನಾಟಕ ಪ್ರಯೋಗಗಳಾಗುತ್ತವೆ. ನಾಟಕವನ್ನು ಕಣ್ಣಾರೆ ಕಂಡ ಬಿಂಬ ಗ್ರಹಣ ಮಾಡಿ, ಆ ರಂಗಕೃತಿ ಬಗ್ಗೆ ಮತ್ತು ಆ ಕೃತಿ ಏನು ಹೇಳುತ್ತದೆ. ಅಲ್ಲಿನ ಅರ್ಥ, ವ್ಯಾಖ್ಯಾನ, ಕೃತಿಗೆ ಪೂರಕ ಪ್ರತಿ ಕೃತಿಯನ್ನು  ಕಟ್ಟಿ ಕೋಡುವ ನಿಟ್ಟಿನಲ್ಲಿ ಪ್ರದರ್ಶನ ಕಲೆಯಲ್ಲಿ ವಿಶೇಷ ಅಧ್ಯಯನ ಮಾಡಿರುವ ಡಾ. ಗೋವಿಂದಸ್ವಾಮಿ ಈ ಎಲ್ಲಾ ಸಂದೇಶವನ್ನು  ಗ್ರಹಣ ಮಾಡಿ ಉಪಯುಕ್ತ ಭಾಷೆ, ತಾಂತ್ರಿಕ ಭಾಷೆ ಬಳಸಿ. ಕೂತುಹಲ ಭರಿತವಾದ ವಿಮರ್ಶೆ ಕಟ್ಟಿಕೊಟ್ಟಿದ್ದಾರೆ. ಇವರು ಐದು ವರ್ಷಗಳ ಕಾಲ ಪ್ರಮುಖ ಪತ್ರಿಕೆಗಳಿಗೆ ಬರೆದ ವಿಮರ್ಶೆಗಳ ಸಂಗ್ರಹದ ಜೋತೆಗೆ ಒಂದು ಸಣ್ಣ ರಂಗ ವಿಮರ್ಶೆಯನ್ನು ಯಾವ ದೃಷ್ಟಿಕೋನದಲ್ಲಿ, ಹೇಗೆಲ್ಲ ಮಾಡಬೇಕು, ಯಾರು ಮಾಡಬೇಕೆಂಬ ಪಠ್ಯ ಇದೆ. ಅದೇ ರೀತಿ ರಂಗ ಕಲಾವಿದರ ಬಗ್ಗೆ ದಾಖಲಾತಿ ಮಾಡಿದಾರೆ ಎಂದರು.

 ಕೃತಿಗಳ ಕುರಿತು ಕವಿ, ಚಿಂತಕ ಡಾ. ವಡ್ಡಗೆರೆ ನಾಗರಾಜಯ್ಯ ಮಾತನಾಡಿ, ಡಾ.ಗೋವಿಂದಸ್ವಾಮಿ ಅವರು ಸಾಹಿತ್ಯಿಕವಾಗಿ, ಸಾಂಸ್ಕøತಿಕವಾಗಿ ಗಂಭೀರವಾಗಿ ತೋಡಗಿಕೊಂಡು ಬಂಜಾರರ ಬಗ್ಗೆ ಪ್ರಪಥಮ ಸಾಹಿತ್ಯ ಸಮ್ಮೇಳನ, ಚಿತ್ರಕಲಾ ಸಮ್ಮೇಳನ, ಬಂಜಾರರ ಭಾಷೆಯಲ್ಲಿ ಪ್ರಪ್ರಥಮ ನಾಟಕ ನಿರ್ದೇಶನ ಮಾಡಿ, ಈಗ ಪ್ರಪ್ರಥಮ ಬಾರಿಗೆ ಬಂಜಾರ ಭಾಷೆಯಲ್ಲಿ ‘ಕಾವ್ಯ ಕಮ್ಮಟ’ದ ಮೂಲಕ ಬಂಜಾರ ಭಾಷೆ ಹಾಗೂ ಸಾಹಿತ್ಯಿ ಹಾಗೂ ಸಂಸ್ಕøತಿ ಬೆಳವಣಿಗೆಗಾಗಿ ಶ್ರಮಿಸುತ್ತಿದ್ದು ಇವರು ಮುಖ್ಯ ವಾಹಿನಿಯಲ್ಲೂ ‘ರಂಗ ವಿಮರ್ಶೆ’ ಹಾಗೂ ‘ರಂಗ ಕಲಾವಿದರ ದಾಖಲೆ ಕೃತಿ’ಗಳನ್ನು ರಚಿಸಿರುವುದು ಇವರ ಬದ್ದತೆಗೆ ಕನ್ನಡಿ ಹಿಡಿಯುತ್ತದೆ. ಡಾ.ಗೋವಿಂದಸ್ವಾಮಿಯವರು ರಂಗ ವಿಮರ್ಶೆ ಕೃತಿಯಲ್ಲಿ ಬಹುಮುಖ್ಯವಾಗಿ ‘ಮಲೆಗಳಲ್ಲಿ ಮದುಮಗಳು’, ಕಾತಾಚಿ ಕಥಾ ರಂಗ, ಬುಡ್ಗನಾದ, ರಾಮಧಾನ್ಯ, ಏಕಲವ್ಯ, ಚೆರ್ರಿ ಆರ್ಚರ್ಡ್, ಕಾಟಮಲ್ಲ್ಲದಂತಹ ನೂರಾರು ರಂಗ ಕೃತಿ (ಪ್ರಯೋಗ) ಗಳ ವಿಮರ್ಶೆ ಬರೆದಿದ್ದು, ಇವರು ರಂಗಶೈಲಿ, ರಂಗಭಾಷೆ, ನಿರ್ದೇಶಕರ ಶೈಲಿ, ಪ್ರಯೋಗ ಹೊಸಮಾರ್ಗಕ್ಕೆ ಸಾಗುವ ದಿಕ್ಕು ಸೂಚಿಸಿರುವುದು, ಕಲಾವಿದರ ಜ್ಞಾನ ಹೆಚ್ಚಳಕ್ಕೆ ಹೊಸ ಹೊಳಪು ಕಾಣಿಸಿರುವುದು ಅನನ್ಯ.

ವಿಮರ್ಶೆಯಲ್ಲಿ ಅಂತರ್ ಬೋಧೆ, ಅರ್ಥ ಸೂಚಕಗಳು, ಪ್ರತಿಮೆಗಳು, ಮಾತು ಸಂಜ್ಞೆಗಳ ಬಗ್ಗೆ ಮಾಹಿತಿ ಒದಗಿಸಿದ್ದಾರೆ.

ಉದಾ: ಬುಡ್ಗನಾದ ಲಿಂಗಾಯುತ, ವೀರಶೈವರ ಸಂಘರ್ಷಾತ್ಮಕ ವಾತಾವರಣದಲ್ಲಿ ಜಂಗಮರು ಬುಡ್ಗ ಬಂಗಮರ ಮೀಸಲಾತಿ ಪಡೆಯುತ್ತಿರುವುದರ ಸಂಕೇತದಂತೆ ಈ ಕೃತಿ, ಇದ್ದು, ಇದರ ವಸ್ತು ನಿಷ್ಠ ವಿಮರ್ಶೆಯನ್ನು  ‘ಪ್ರಜಾವಾಣಿಗಾಗಿ’ ಬರೆದಿದ್ದಾರೆ. ಹಾಗೆ ‘ರಾಮಧಾನ್ಯ’ ಕನಕದಾಸರ ಕೃತಿ ರಾಗಿ ಮತ್ತು ಭತ್ತದ ನಡುವಿನ ಸಂಘರ್ಷ, ಸಾಂಸ್ಕøತಿಕ ಪ್ರಾಭಲ್ಯದ ಈ ಕೃತಿಯ ವಿಮರ್ಶೆ ಸಹ ಆಕರ್ಷಕ ಹಾಗೂ ಪ್ರಬುದ್ದವಾಗಿದೆ. ಹೀಗೆ ಒಂದೊಂದು ವಿಮರ್ಶೆಯು ಗಮನ ಸೆಳೆಯುತ್ತದೆ. ವಿಮರ್ಶೆಯಲ್ಲೂ ಸಂಶೋಧನಾ ನೆಲೆಗಳನ್ನು ಡಾ.ಗೋವಿಂದಸ್ವಾಮಿ ಕಾಣಿಸಿರುವುದು ವಿಶೇಷವಾಗಿದೆ, ಡಾ. ಗೋವಿಂದಸ್ವಾಮಿ ಅವರು ಉದಯವಾಣಿ,ವಿಜಯ ಕರ್ನಾಟಕ,ಲಂಕೇಶ್,ವಾರ್ತಾಭಾರತಿ,ಕ.ರ.ವೇ ನಲ್ನುಡಿ ಯvಂತಹ ಬುತೇಕ ಎಲ್ಲಾಪತ್ರಿಕೆಗಳು,ರಂಗ ಪತ್ರಿಕೆಗಳು,ನಿಯತಕಾಲಿಕೆಗಳಿಗೆಬರೆ ವಿಮರ್ಶೆಗಳು ಕೃತಿ ಇಳಗೊಂಡಿದೆ ಎಂದರು.

ಸಮಾರಂಭದಲ್ಲಿ ಭಾಗಹಿಸಿದ ಗಾಯಕ ಶಶಿಧರ ಕೋಟೆ ಅವರು ಹಾಡಿ ರಂಜಿಸುವ ಜೋತೆಗೆ ಮಾತನಾಡಿ, ಎಲ್ಲರನ್ನು ಪ್ರೀತಿಸುವ ಕನ್ನಡಿಗರು ಬಂಗಾರದ ಹೃದಯವಂತ ಬಂಜಾರರನ್ನೂ ಅತ್ಯಂತ ಆತ್ಮೀಯವಾಗಿ ಪ್ರೀತಿಸುತ್ತಾರೆ. ಅದರಲ್ಲಿ ನಾನು ಸಹ ಒಬ್ಬ. ಈ ಸಮಾಜದಲ್ಲಿ ನಾವೆಲ್ಲರೂ ಒಂದು ಎನ್ನುವ ವಾತಾವರಣ ನಿರ್ಮಿಸಬೇಕಾಗಿದೆ. ಆ ನಿಟ್ಟಿನಲ್ಲಿ ಕಲಾವಿದ ಡಾ. ಗೋವಿಂದಸ್ವಾಮಿ ಅವರ ಪ್ರಯತ್ನ ಶ್ಲಾಘನೀಯ. 

ಈ ಸಮಾರಂಭದಲ್ಲಿ ಅನೇಕ ಸಾಧಕರನ್ನು ಸೇರಿಸಿರುವುದನ್ನು ನೋಡಿ ಮನತುಂಬಿದೆ. ಕಾರ್ಯಕ್ರಮದಲ್ಲಿ ಬೇರೆ ಬೇರೆ ಕ್ಷೇತ್ರದ ಸಾಧಕರನ್ನು ಗುರುತಿಸಲಾಗಿದೆ. ಗುಣ ಮಟ್ಟದ ಕಾರ್ಯಕ್ರಮವೂ ನಿತ್ಯೋತ್ಸವದಂತಿದೆ ಕಲೆಗೂ, ಸಾಹಿತ್ಯಕ್ಕೂ ಅಡ್ಡಲಾಗಿ ಟಿವಿ ಮಾಧ್ಯಮ ಇದೆ. ಅದರೂ ಹೀಗೆ ಸಾಹಿತ್ಯಕವಾಗಿ ಸಾಂಸ್ಕøತಿಕವಾಗಿ ಸೇರುವುದು ಮನೋಲ್ಲಾಸ ತರುತ್ತದೆ. ಇಲ್ಲಿ ಬಂದವರಿಗೂ óಋಷಿ ಇದೆ. ವಿಶ್ವಾಸ ಇದೆ. ಇದು ನಿರಂತರ ಸಾಗಲಿ, ಡಾ.ಗೋವಿಂದಸ್ವಾಮಿ ಅವರ ಇಂತಹ ಪ್ರಯತ್ನಕ್ಕೆ ನಾವೇಲ್ಲರೂ ಕೈ ಜೋಡಿಸೋಣ ಎಂದರು.

ರಂಗ ಕಲಾವಿದ ಸಾಹಿತಿ, ಡಾ.ಎ.ಆರ್.ಗೋವಿಂದಸ್ವಾಮಿ ಯವರು ಮಾತನಾಡಿ, ರಂಗಭೂಮಿಯಲ್ಲಿ ಇದುವರೆವಿಗೂ ರಂಗವಿಮರ್ಶೆ ಬಗ್ಗೆ ಕೃತಿಗಳು ಬಂದಿರಲಿಲ್ಲ ಬಂದಿದ್ದರೂ ಗಂಭೀರವಾಗಿ ‘ರಂಗ ಕೃತಿ’ಗಗಳ ಪ್ರಯೋಗಕ್ಕೆ ಸೀಮಿತವಾದ ರಂಗ ವಿಮರ್ಶನ ಕೃತಿ ಬಂದಿರಲಿಲ್ಲ,ಈ ನಿಟ್ಟಿನಲ್ಲಿ ಇದೊಂದು ಸಣ್ಣದೊಂದು ಪ್ರಯತ್ತ ಎಂದರು.

ಬಂಜಾರ ಸಮುದಾಯದಲ್ಲಿ ಸಾಕಷ್ಟು ಪ್ರತಿಭಾವಂತ ಕಲಾವಿದರು. ಆಶುಕವಿಗಳು, ಜಾನಪದ ಹಾಡುಗಾರರು, ಬರಹಗಾರರು ಇದ್ದು ಅವರನ್ನೆಲ್ಲಾ ಒಂದು ವೇದಿಕೆಗೆ ತರುವ ಪ್ರಯತ್ನವನ್ನು ಬಂಜಾರ ಸಾಮಾಜಿಕ ಮತ್ತು ಸಾಂಸ್ಕøತಿಕ ಅಕಾಡೆಮಿ ಮೂಲಕ ಕಳೆದ 18 ವರ್ಷಗಳಿಂದ ಮಾಡಲಾಗುತ್ತಿದೆ. ಅಕಾಡೆಮಿ ಅನೇಕ ಪ್ರಪಥಮಗಳನ್ನು ಬಂಜಾರರಿಗೆ ಕೊಡುಗೆ ನೀಡಿದೆ ಎಂಬುದೇ ನಮಗೆ ಹೆಮ್ಮೆ. ಸಹಕಾರ ಇದ್ದರೆ ಇನ್ನು ಹೆಚ್ಚಿನ ಮಟ್ಟದಲ್ಲಿ ಸಾಹಿತ್ಯಿಕ, ಸಾಂಸ್ಕøತಿಕ ಹಾಗೂ ತರಬೇತಿ, ಪ್ರದರ್ಶನ ನಡೆಸಲಾಗುವುದು. ಸಾಂಸ್ಕøತಿಕವಾಗಿ ಸಮುದಾಯವನ್ನು ಸಂಘಟಿಸಿ ಮಂಚೂಣಿಗೆ ತರುವ ಸಣ್ಣ ಪ್ರಯತ್ನವಾಗಿದೆ. ನಮಗೆ ಸಹಕಾರ ನೀಡಿ ಪ್ರೋತ್ಸಾಹಿಸುತ್ತಿರುವ ಎಲ್ಲ ವಿದ್ವಾಂಸರಿಗೆ, ಪತ್ರಕರ್ತರಿಗೆ ಋಣಿ ಎಂದರು, ಅಲೆಮಾರಿ ಬುಡುಕಟ್ಟುಗಳನ್ನು ಸಹ ನಾವು ಸಂಘಟಿಸುತ್ತಿದ್ದು ಅವರ ನೆಲೆಗೂ  ಅಳಿಲು ಸೇವೆ ಸಲ್ಲಿಸಲಾಗುತ್ತಿದೆ ಎಂದು ಅಭಿಪ್ರಾಯ ಪಟ್ಟರು. 

ಸಮಾರಂಭದಲ್ಲಿ ಕೆ.ಬಿ.ಎಲ್ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಾದ ಕೆ.ಬಿ.ಲಕ್ಷ್ಮಣ್, ಬಂಜಾರ ಕಾವ್ಯ ಗೋಷ್ಠಿಯಲ್ಲಿ ಕವಿಗಳಾದ ಪಳನಿಸ್ವಾಮಿ. ಜಾಗೇರಿ, ಕೃಷ್ಣಾನಾಯಕ್, ಸದಾಶಿವಯ್ಯ ಜರಗನಹಳ್ಳಿ ಆರ್.ಬಿ.ನಾಯಕ್, ಸುಭಾಶ್ ಚಮಾಣ್, ಡಾ.ಗೋವಿಂದಸ್ವಾಮಿ ಮುಂತಾದವರು ಭಾಗವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಮುದಾಯದ ಮುಖಂಡರಾದ ಜನಾರ್ಧನ ನಾಯಕ್, ಮಹದೇವನಾಯಕ್.ಬಿ, ರಂಗ ವಿಮರ್ಶೆ ಕೃತಿಯ ಮುದ್ರಕರಾದ (ಶಶಿ ಪಬ್ಲಿಕೇಷನ್‍ನ ನಾಗಭೂಷಣ್ ಜಾಲಮಂಗಲ, ಕೆಪಿಟಿಸಿಎಲ್ ನೌಕರರ ಸಂಘದ ಹಿರಿಯ ಉಪಾಧ್ಯಕ್ಷರಾದ ಎಸ್.ಆರ್. ರಾಜನಾಯಕ್, ಆರಕ್ಷಕ ನೀರಿಕ್ಷಕರಾದ ಜಯರಾಮನಾಯಕ್, ಅಲೆಮಾರಿ ಮುಖಂಡರಾದ ಆರ್.ರಂಗಪ್ಪ ಮಂಜುನಾಥ ಮುಂತಾದವರು ಭಾಗವಹಿಸಿದ್ದರು. ಸಮಾರಂಭದಲ್ಲಿ ವಿವಿಧ ಪ್ರದೇಶಗಳಿಂದ ಬಂದ ಕಲಾವಿದರು ಪ್ರದರ್ಶಿಸಿದ ಬಂಜಾರ ಮೂಲಧಾಟಿಯ ಕಲೆಗಳ ಪ್ರದರ್ಶನ ಆಕರ್ಷಕವಾಗಿದ್ದವು. ದಲಿತ ಕಲೆಗಳ ಪ್ರದರ್ಶನವೂ ನಡೆಯಿತು.

ಪ್ರತಿಕ್ರಿಯೆಗಳು2 comments

  • Naveen wrote:
    11 Apr, 2018 05:11 pm

    Dgggddfhhhggfffffttyy

  • sunitha wrote:
    11 Apr, 2018 05:25 pm

    j nbjg hgcd jhjfghgfnb

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in karnataka »

ಕಳೆದ 30 ವರ್ಷಗಳಿಂದ ಶಿಕ್ಷಕರ ಸೇವೆ ಮಾಡಿದ್ದೇನೆ ಮತ್ತೊಮ್ಮೆ ಆಶೀರ್ವದಿಸಿ : ಪುಟ್ಟಣ್ಣ
ಕಳೆದ 30 ವರ್ಷಗಳಿಂದ ಶಿಕ್ಷಕರ ಸೇವೆ ಮಾಡಿದ್ದೇನೆ ಮತ್ತೊಮ್ಮೆ ಆಶೀರ್ವದಿಸಿ : ಪುಟ್ಟಣ್ಣ

ರಾಮನಗರ: ಶಿಕ್ಷಕರ ಕ್ಷೇತ್ರದ ಪ್ರತಿನಿಧಿಯಾಗಿ ಕಳೆದ 30 ವರ್ಷಗಳಿಂದಲೂ ನಿಮ್ಮ ಸೇವೆ ಮಾಡಿದ್ದೇನೆ. ಮುಂದೆಯೂ ನಿಮ್ಮ ಕಷ್ಟಗಳನ್ನರಿತು ನಿಮಗಾಗಿ ಮತ್ತಷ್ಟು ಕ

ಕೆರಗೋಡು ಧ್ವಜ ಪ್ರಕರಣ; ಪ್ರಚೋದನೆ ನೀಡುವವರ ವಿರುದ್ಧ ಕ್ರಮ: ಜಿಲ್ಲಾಧಿಕಾರಿ
ಕೆರಗೋಡು ಧ್ವಜ ಪ್ರಕರಣ; ಪ್ರಚೋದನೆ ನೀಡುವವರ ವಿರುದ್ಧ ಕ್ರಮ: ಜಿಲ್ಲಾಧಿಕಾರಿ

ರಾಮನಗರ, ಫೆ. 02  :  ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಇತ್ತೀಚೆಗೆ ನಡೆದ ಧ್ವಜ ಸ್ತಂಭದ ವಿಚಾರವು ತುಂಬಾ ಸೂಕ್ಷ್ಮ ವಿಚಾರವಾಗಿದ್ದು, ಈ ಸಂಬಂಧ ಯಾವು

ಸಂವಿಧಾನ ಜಾಗೃತಿ ಜಾಥಾ ಗೆ ಸ್ವಾಗತ
ಸಂವಿಧಾನ ಜಾಗೃತಿ ಜಾಥಾ ಗೆ ಸ್ವಾಗತ

ಚನ್ನಪಟ್ಟಣ: ಸಂವಿಧಾನ ಜಾಗೃತಿ ಜಾಥಾಕ್ಕೆ ತಾಲ್ಲೂಕು ಆಡಳಿತದಿಂದ ಅದ್ದೂರಿ ಸ್ವಾಗತ ಕೋರಲಾಯಿತು. ಇದೇ ಸಂದರ್ಭದಲ್ಲಿ

ಸಂವಿಧಾನ ಜಾಗೃತಿ ಜಾಥಾ

ಉಜ್ಜನಹಳ್ಳಿ ವೀರಾಂಜನೇಯಸ್ವಾಮಿ ಗೆ ಗ್ರಾಮಸ್ಥರಿಂದ ಅಭಿಷೇಕ
ಉಜ್ಜನಹಳ್ಳಿ ವೀರಾಂಜನೇಯಸ್ವಾಮಿ ಗೆ ಗ್ರಾಮಸ್ಥರಿಂದ ಅಭಿಷೇಕ

ಚನ್ನಪಟ್ಟಣ: ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಮಾಡಿದ ಹಿನ್ನೆಲೆಯಲ್ಲಿ ಚನ್ನಪಟ್ಟಣ ತಾಲ್ಲೂಕಿನ ಉಜ್ಜನಹಳ್ಳಿ ಗ್ರಾಮದ ಶ್ರೀ ವೀರಾಂನೇಯಸ್ವಾಮಿ ಗೆ ವಿಶೇಷ

ಇ-ಆಸ್ತಿ ತಂತ್ರಾಂಶದಲ್ಲಿ ಆಸ್ತಿ ದಾಖಲೀಕರಣ ಮತ್ತು ಗಣಕೀಕರಣಗೊಳಿಸಿ
ಇ-ಆಸ್ತಿ ತಂತ್ರಾಂಶದಲ್ಲಿ ಆಸ್ತಿ ದಾಖಲೀಕರಣ ಮತ್ತು ಗಣಕೀಕರಣಗೊಳಿಸಿ

ರಾಮನಗರ, ಜ. 17: ರಾಮನಗರ ಜಿಲ್ಲಾ ವ್ಯಾಪ್ತಿಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಖಾತೆ ಹೊಂದಿರುವ ಆಸ್ತಿಗಳನ್ನು ದಿನಾಂಕ: 02.05.2015 ರಿಂದ ಜಾರಿಗೆ ಬರುವಂತೆ,

ಬೋಧನಾ ಶುಲ್ಕ ಪಾವತಿಸಲು ಅವಧಿ ವಿಸ್ತರಣೆ
ಬೋಧನಾ ಶುಲ್ಕ ಪಾವತಿಸಲು ಅವಧಿ ವಿಸ್ತರಣೆ

ರಾಮನಗರ:  ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ 2019-20, 2020-21, 2021-22 ಮತ್ತು 2022-23ರ (ಜುಲೈ ಆವೃತ್ತಿ) ದ್ವಿತೀಯ/ತೃತೀಯ ವರ್ಷದ ಬಿ

ಸರ್ವಸಮ್ಮೇಳನಕ್ಕೂ ಮಾದರಿಯಾಗಿ ಯಶಸ್ವಿಯಾದ \'ಪರಿಸರಕ್ಕಾಗಿ ನಾವು\' ಸಮ್ಮೇಳನ
ಸರ್ವಸಮ್ಮೇಳನಕ್ಕೂ ಮಾದರಿಯಾಗಿ ಯಶಸ್ವಿಯಾದ \'ಪರಿಸರಕ್ಕಾಗಿ ನಾವು\' ಸಮ್ಮೇಳನ

ಹಾಸನ: ಪ್ರಾಕೃತಿಕ ಸೌಂದರ್ಯವು ಇ-ತ್ಯಾಜ್ಯ, ಕೆಲ ತಂತ್ರಜ್ಞಾನ ಹಾಗೂ ಪ್ಲಾಸ್ಟಿಕ್ ನಿಂದ  ಹಾಳಾಗುತ್ತಿದೆ. ಪರಿಸರ ನಾಶಕ್ಕೆ ಮುನ್ನುಡಿ ಬರೆದವನೇ

೫೨ ಲಕ್ಷಕ್ಕೂ ಹೆಚ್ಚು ಮೌಲ್ಯದ ಪಡಿತರ ಅಕ್ಕಿ ಗೋದಾಮಿನಲ್ಲೇ ಮಾಯ, ಅಧಿಕಾರಿಗಳಿಂದ ಪರಿಶೀಲನೆ, ವ್ಯವಸ್ಥಾಪಕನ ಬಂಧನ
೫೨ ಲಕ್ಷಕ್ಕೂ ಹೆಚ್ಚು ಮೌಲ್ಯದ ಪಡಿತರ ಅಕ್ಕಿ ಗೋದಾಮಿನಲ್ಲೇ ಮಾಯ, ಅಧಿಕಾರಿಗಳಿಂದ ಪರಿಶೀಲನೆ, ವ್ಯವಸ್ಥಾಪಕನ ಬಂಧನ

ಚನ್ನಪಟ್ಟಣ: ತಾಲ್ಲೂಕಿನಾದ್ಯಂತ ಪಡಿತರ ನ್ಯಾಯಬೆಲೆ ಅಂಗಡಿಗಳಿಗೆ ವಿತರಿಸಲು ಪಡಿತರ ಅಕ್ಕಿಯ ಪೈಕಿ ಸುಮಾರು ೫೨ ಲಕ್ಷಕ್ಕೂ  ಮೌಲ್ಯದ ೧,೫೪೩.೬೫ ಕ್ವಿಂಟಾಲ್ ಅ

ದಸರಾ ಎಂಬುದು ಮೈಸೂರಿಗಷ್ಟೇ ಸೀಮಿತವಾಗಬಾರದು, ಮನ-ಮನೆಯಲ್ಲೂ ದಸರಾ ಆಗಬೇಕು. ಡಾ ರೂಪಾ ಶ್ರೀಧರ್
ದಸರಾ ಎಂಬುದು ಮೈಸೂರಿಗಷ್ಟೇ ಸೀಮಿತವಾಗಬಾರದು, ಮನ-ಮನೆಯಲ್ಲೂ ದಸರಾ ಆಗಬೇಕು. ಡಾ ರೂಪಾ ಶ್ರೀಧರ್

ಚನ್ನಪಟ್ಟಣ: ದಸರಾ ಎಂದರೆ ಕೇವಲ ಮೈಸೂರು ಎಂಬಂತಾಗಿದೆ, ಇದು ನಾಡ ಹಬ್ಬ ಎಂಬುದು ಕೇವಲ ಉಲ್ಲೇಖಕ್ಕಷ್ಟೇ ಸೀಮಿತವಾಗಿದೆ. ಇದು ನಾಡಹಬ್ಬ ಎಂಬುದು ಸರ

ಒಕ್ಕಲಿಗರು ಸಂಸ್ಕೃತಿ ಹಿeನರಲ್ಲ ನೈಜ ಸಂಸ್ಕೃತಿಯ ಮಾಲೀಕರು, ಪ್ರೊ ಭಗವಾನ್ ಗೆ ತಿರುಗೇಟು ನೀಡಿದ ಹಿರಿಯ ರೈತ ಮುಖಂಡ ಸಿ ಪುಟ್ಟಸ್ವಾಮಿ
ಒಕ್ಕಲಿಗರು ಸಂಸ್ಕೃತಿ ಹಿeನರಲ್ಲ ನೈಜ ಸಂಸ್ಕೃತಿಯ ಮಾಲೀಕರು, ಪ್ರೊ ಭಗವಾನ್ ಗೆ ತಿರುಗೇಟು ನೀಡಿದ ಹಿರಿಯ ರೈತ ಮುಖಂಡ ಸಿ ಪುಟ್ಟಸ್ವಾಮಿ

ರಾಮನಗರ: ಚನ್ನಪಟ್ಟಣ; ಪ್ರೊ ಭಗವಾನ್ ವಿಚಾರವಾದಿ, ಮೂಢನಂಬಿಕೆಗಳನ್ನು ಕಿತ್ತೊಗೆಯಲು, ಪುರಾಣ ಎಂಬುದು ಕಪೋಲ ಕಲ್ಪಿತ, ಇತಿಹಾಸ ಎಂಬುದು ಸಾರ್ವಕಾಲ

Top Stories »  


Top ↑