Tel: 7676775624 | Mail: info@yellowandred.in

Language: EN KAN

    Follow us :


ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪಟ್ಟಿ ಪ್ರಕಟ

Posted date: 15 Apr, 2018

Powered by:     Yellow and Red

ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪಟ್ಟಿ ಪ್ರಕಟ

ನವದೆಹಲಿ: ಕರ್ನಾಟಕ ವಿಧಾನಸಭೆಗೆ ಇದೇ ಬರುವ ಮೇ 12ರಂದು ನಡೆಯಲಿರುವ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ತನ್ನ ಪಕ್ಷದ ಹುರಿಯಾಳುಗಳ ಪಟ್ಟಿಯನ್ನು ಕಾಂಗ್ರೆಸ್‌ ವರಿಷ್ಠರು ಅಂತಿಮಗೊಳಿಸಿದ್ದು ಆ ಪಟ್ಟಿ ಇದೀಗ ಹೊರಬಿದ್ದಿದೆ. ಒಟ್ಟು 224 ಕ್ಷೇತ್ರಗಳಲ್ಲಿ 'ಕೈ' ಹೈಕಮಾಂಡ್‌ ಇದೀಗ 218 ಕ್ಷೇತ್ರಗಳ ಪಟ್ಟಿಯನ್ನು ಮಾತ್ರ ಬಿಡುಗಡೆ ಮಾಡಲಾಗಿದ್ದು 5 ಮತಕ್ಷೇತ್ರಗಳ ಅಭ್ಯರ್ಥಿ ಪಟ್ಟಿಯನ್ನು ಇನ್ನಷ್ಟೇ ಬಿಡುಗಡೆ ಮಾಡಬೇಕಾಗಿದೆ. ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ತನ್ನ ಅಭ್ಯರ್ಥಿಯನ್ನು ನಿಲ್ಲಿಸುವುದಿಲ್ಲ ಎಂದು ಕಾಂಗ್ರೆಸ್‌ ಹೇಳಿದ್ದು, ಇಲ್ಲಿ ಇತ್ತೀಚೆಗೆ ನಿಧನ ಹೊಂದಿದ್ದ ರೈತ ಮುಖಂಡ ಕೆ.ಸಿ. ಪುಟ್ಟಣ್ಣಯ್ಯ ಅವರ ಪುತ್ರನ ಎದುರು ಕಾಂಗ್ರೆಸ್‌ ಅಭ್ಯರ್ಥಿತನವಿರುವುದಿಲ್ಲ. ಹಾಗಾಗಿ ಇನ್ನು 5 ಮತಕ್ಷೇತ್ರಗಳ ಟಿಕೆಟ್‌ ಘೋಷಣೆ ಬಾಕಿಯಾದಂತಾಗಿದೆ.

ಈ ಹಿಂದೆ ಎರಡು ಕ್ಷೇತ್ರದಲ್ಲಿ ಸ್ಪರ್ಧಿಸುವ ಸುಳಿವನ್ನು ನೀಡಿದ್ದ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಹಿರಿಯ ನಾಯಕರ ವಿರೋಧಕ್ಕೆ ಮಣಿದಂತೆ ಕಂಡುಬಂದಿದ್ದು, ಕೇವಲ ಚಾಮುಂಡೇಶ್ವರಿ ಕ್ಷೇತ್ರದಿಂದ ಮಾತ್ರವೇ ಸ್ಪರ್ಧಿಸುವುದು ಖಚಿತವಾಗಿದೆ. ಇನ್ನು ಸಾಗರ ಕ್ಷೇತ್ರದಲ್ಲಿ ಕಾಗೋಡು ತಿಮ್ಮಪ್ಪ ಅವರಿಗೆ ಟಿಕೆಟ್‌ ನೀಡಲಾಗಿದೆ.
ಬಳ್ಳಾರಿ ಜಿಲ್ಲೆಯಿಂದ ಅನಿಲ್‌ ಲಾಡ್‌ ಅವರಿಗೆ ಟಿಕೆಟ್‌ ಸಿಕ್ಕಿದೆ. ಶಾಂತಿನಗರ ಕ್ಷೇತ್ರದ ಅಭ್ಯರ್ಥಿಯನ್ನು ಇನ್ನಷ್ಟೇ ಘೊಷಿಸಬೇಕಾಗಿದ್ದು, ಪುತ್ರ ನಲಪಾಡ್‌ ಪ್ರಕರಣದಿಂದ ಪಕ್ಷಕ್ಕೆ ತೀವ್ರ ಮುಜುಗರ ಉಂಟುಮಾಡಿದ್ದ ಹಾಲಿ ಶಾಸಕ ಹ್ಯಾರಿಸ್‌ ಅವರ ರಾಜಕೀಯ ಭವಿಷ್ಯ ಡೋಲಾಯಮಾನವಾಗಿದೆ.

ದಕ್ಷಿಣ ಕನ್ನಡ ಜಿಲ್ಲೆ: 
ಮಂಗಳೂರು ನಗರ ಉತ್ತರ : ಬಿ.ಎ. ಮೊಯಿದ್ದೀನ್‌ ಬಾವಾ
ಮಂಗಳೂರು ನಗರ ದಕ್ಷಿಣ : ಜಾನ್‌ ರಿಚರ್ಡ್‌ ಲೋಬೋ
ಮಂಗಳೂರು : ಯು.ಟಿ. ಅಬ್ದುಲ್‌ ಖಾದರ್‌
ಬೆಳ್ತಂಗಡಿ : ವಸಂತ ಬಂಗೇರ
ಬಂಟ್ವಾಳ : ರಮಾನಾಥ ರೈ
ಮೂಡಬಿದಿರೆ : ಕೆ. ಅಭಯಚಂದ್ರ ಜೈನ್‌
ಪುತ್ತೂರು : ಶಕುಂತಳಾ ಶೆಟ್ಟಿ
ಸುಳ್ಯಮೀಸಲು : ಡಾ. ಬಿ. ರಘು

ಉಡುಪಿ ಜಿಲ್ಲೆ:
ಉಡುಪಿ : ಪ್ರಮೋದ್‌ ಮಧ್ವರಾಜ್‌
ಕಾಪು : ವಿನಯ ಕುಮಾರ್‌ ಸೊರಕೆ
ಕಾರ್ಕಳ : ಗೋಪಾಲ ಭಂಡಾರಿ ಹೆಚ್‌.
ಕುಂದಾಪುರ : ರಾಕೇಶ್‌ ಮಲ್ಲಿ
ಬೈಂದೂರು : ಗೋಪಾಲ ಪೂಜಾರಿ ಕೆ.

ಹಳಿಯಾಳ : ಆರ್‌.ವಿ. ದೇಶಪಾಂಡೆ
ಕಾರವಾರ : ಸತೀಶ್‌ ಸೈಲ್‌
ಕುಮಟಾ : ಶಾರದಾ ಮೋಹನ್‌ ಶೆಟ್ಟಿ
ಭಟ್ಕಳ : ಮಂಕಾಳ ಎಸ್‌. ವೈದ್ಯ
ಶಿರಸಿ : ನಿವೇದಿತಾ ಆಳ್ವ

ಬೆಂಗಳೂರು ಕ್ಷೇತ್ರದಿಂದ ಸ್ಪರ್ಧಿಸಲಿರುವ ಪ್ರಮುಖರು:
ಸರ್ವಜ್ಞನಗರ : ಕೆ.ಜೆ. ಜಾರ್ಜ್‌
ಗಾಂಧಿನಗರ : ದಿನೇಶ್‌ ಗುಂಡೂರಾವ್‌
ಚಾಮರಾಜಪೇಟೆ : ಜಮೀರ್‌ ಅಹಮ್ಮದ್‌ ಖಾನ್‌
ಶಿವಾಜಿನಗರ : ರೋಷನ್‌ ಬೇಗ್‌ ಆರ್‌.
ಕೆ.ಆರ್‌.ಪುರ : ಭೈರತಿ ಬಸವರಾಜ್‌
ಬ್ಯಾಟರಾಯನಪುರ : ಕೃಷ್ಣ ಭೈರೇಗೌಡ
ಚಿಕ್ಕಪೇಟೆ : ದೇವರಾಜ್‌ ಆರ್‌.ವಿ.
ಯಶವಂತಪುರ : ಸೋಮಶೇಖರ ಎಸ್‌.ಟಿ.
ರಾಜರಾಜೇಶ್ವರಿನಗರ: ಮುನಿರತ್ನ ನಾಯ್ಡು
ಹೆಬ್ಟಾಳ : ಬಿ.ಎಸ್‌. ಸುರೇಶ್‌
ಪುಲಕೇಶಿನಗರ ಮೀಸಲು : ಅಖಂಡ ಶ್ರೀನಿವಾಸಮೂರ್ತಿ

ಚಾಮುಂಡೇಶ್ವರಿ : ಸಿದ್ಧರಾಮಯ್ಯ
ಕೊರಟಗೆರೆ ಮೀಸಲು : ಡಾ. ಪರಮೇಶ್ವರ ಜಿ.
ವರುಣಾ : ಡಾ. ಯತೀಂದ್ರ
ಕನಕಪುರ : ಡಿ.ಕೆ. ಶಿವಕುಮಾರ್‌ 
ಮಂಡ್ಯ : ಅಂಬರೀಶ್‌
ಮೂಡಿಗೆರೆ : ಮೋಟಮ್ಮ ಸಿ.
ಹೊಳಲ್ಕೆರೆ ಮೀಸಲು : ಹೆಚ್‌. ಆಂಜನೇಯ
ಗದಗ : ಹೆಚ್‌.ಕೆ.ಪಾಟೀಲ್‌
ಧಾರವಾಡ : ವಿನಯ ಕುಲಕರ್ಣಿ
ತೀರ್ಥಹಳ್ಳಿ : ಕಿಮ್ಮನೆ ರತ್ನಾಕರ್‌
ತೆರದಾಳ : ಉಮಾಶ್ರೀ
ಯಲಬುರ್ಗಾ : ಬಸವರಾಜ್‌ ರಾಯರೆಡ್ಡಿ


 

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in karnataka »

ಕಳೆದ 30 ವರ್ಷಗಳಿಂದ ಶಿಕ್ಷಕರ ಸೇವೆ ಮಾಡಿದ್ದೇನೆ ಮತ್ತೊಮ್ಮೆ ಆಶೀರ್ವದಿಸಿ : ಪುಟ್ಟಣ್ಣ
ಕಳೆದ 30 ವರ್ಷಗಳಿಂದ ಶಿಕ್ಷಕರ ಸೇವೆ ಮಾಡಿದ್ದೇನೆ ಮತ್ತೊಮ್ಮೆ ಆಶೀರ್ವದಿಸಿ : ಪುಟ್ಟಣ್ಣ

ರಾಮನಗರ: ಶಿಕ್ಷಕರ ಕ್ಷೇತ್ರದ ಪ್ರತಿನಿಧಿಯಾಗಿ ಕಳೆದ 30 ವರ್ಷಗಳಿಂದಲೂ ನಿಮ್ಮ ಸೇವೆ ಮಾಡಿದ್ದೇನೆ. ಮುಂದೆಯೂ ನಿಮ್ಮ ಕಷ್ಟಗಳನ್ನರಿತು ನಿಮಗಾಗಿ ಮತ್ತಷ್ಟು ಕ

ಕೆರಗೋಡು ಧ್ವಜ ಪ್ರಕರಣ; ಪ್ರಚೋದನೆ ನೀಡುವವರ ವಿರುದ್ಧ ಕ್ರಮ: ಜಿಲ್ಲಾಧಿಕಾರಿ
ಕೆರಗೋಡು ಧ್ವಜ ಪ್ರಕರಣ; ಪ್ರಚೋದನೆ ನೀಡುವವರ ವಿರುದ್ಧ ಕ್ರಮ: ಜಿಲ್ಲಾಧಿಕಾರಿ

ರಾಮನಗರ, ಫೆ. 02  :  ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಇತ್ತೀಚೆಗೆ ನಡೆದ ಧ್ವಜ ಸ್ತಂಭದ ವಿಚಾರವು ತುಂಬಾ ಸೂಕ್ಷ್ಮ ವಿಚಾರವಾಗಿದ್ದು, ಈ ಸಂಬಂಧ ಯಾವು

ಸಂವಿಧಾನ ಜಾಗೃತಿ ಜಾಥಾ ಗೆ ಸ್ವಾಗತ
ಸಂವಿಧಾನ ಜಾಗೃತಿ ಜಾಥಾ ಗೆ ಸ್ವಾಗತ

ಚನ್ನಪಟ್ಟಣ: ಸಂವಿಧಾನ ಜಾಗೃತಿ ಜಾಥಾಕ್ಕೆ ತಾಲ್ಲೂಕು ಆಡಳಿತದಿಂದ ಅದ್ದೂರಿ ಸ್ವಾಗತ ಕೋರಲಾಯಿತು. ಇದೇ ಸಂದರ್ಭದಲ್ಲಿ

ಸಂವಿಧಾನ ಜಾಗೃತಿ ಜಾಥಾ

ಉಜ್ಜನಹಳ್ಳಿ ವೀರಾಂಜನೇಯಸ್ವಾಮಿ ಗೆ ಗ್ರಾಮಸ್ಥರಿಂದ ಅಭಿಷೇಕ
ಉಜ್ಜನಹಳ್ಳಿ ವೀರಾಂಜನೇಯಸ್ವಾಮಿ ಗೆ ಗ್ರಾಮಸ್ಥರಿಂದ ಅಭಿಷೇಕ

ಚನ್ನಪಟ್ಟಣ: ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಮಾಡಿದ ಹಿನ್ನೆಲೆಯಲ್ಲಿ ಚನ್ನಪಟ್ಟಣ ತಾಲ್ಲೂಕಿನ ಉಜ್ಜನಹಳ್ಳಿ ಗ್ರಾಮದ ಶ್ರೀ ವೀರಾಂನೇಯಸ್ವಾಮಿ ಗೆ ವಿಶೇಷ

ಇ-ಆಸ್ತಿ ತಂತ್ರಾಂಶದಲ್ಲಿ ಆಸ್ತಿ ದಾಖಲೀಕರಣ ಮತ್ತು ಗಣಕೀಕರಣಗೊಳಿಸಿ
ಇ-ಆಸ್ತಿ ತಂತ್ರಾಂಶದಲ್ಲಿ ಆಸ್ತಿ ದಾಖಲೀಕರಣ ಮತ್ತು ಗಣಕೀಕರಣಗೊಳಿಸಿ

ರಾಮನಗರ, ಜ. 17: ರಾಮನಗರ ಜಿಲ್ಲಾ ವ್ಯಾಪ್ತಿಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಖಾತೆ ಹೊಂದಿರುವ ಆಸ್ತಿಗಳನ್ನು ದಿನಾಂಕ: 02.05.2015 ರಿಂದ ಜಾರಿಗೆ ಬರುವಂತೆ,

ಬೋಧನಾ ಶುಲ್ಕ ಪಾವತಿಸಲು ಅವಧಿ ವಿಸ್ತರಣೆ
ಬೋಧನಾ ಶುಲ್ಕ ಪಾವತಿಸಲು ಅವಧಿ ವಿಸ್ತರಣೆ

ರಾಮನಗರ:  ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ 2019-20, 2020-21, 2021-22 ಮತ್ತು 2022-23ರ (ಜುಲೈ ಆವೃತ್ತಿ) ದ್ವಿತೀಯ/ತೃತೀಯ ವರ್ಷದ ಬಿ

ಸರ್ವಸಮ್ಮೇಳನಕ್ಕೂ ಮಾದರಿಯಾಗಿ ಯಶಸ್ವಿಯಾದ \'ಪರಿಸರಕ್ಕಾಗಿ ನಾವು\' ಸಮ್ಮೇಳನ
ಸರ್ವಸಮ್ಮೇಳನಕ್ಕೂ ಮಾದರಿಯಾಗಿ ಯಶಸ್ವಿಯಾದ \'ಪರಿಸರಕ್ಕಾಗಿ ನಾವು\' ಸಮ್ಮೇಳನ

ಹಾಸನ: ಪ್ರಾಕೃತಿಕ ಸೌಂದರ್ಯವು ಇ-ತ್ಯಾಜ್ಯ, ಕೆಲ ತಂತ್ರಜ್ಞಾನ ಹಾಗೂ ಪ್ಲಾಸ್ಟಿಕ್ ನಿಂದ  ಹಾಳಾಗುತ್ತಿದೆ. ಪರಿಸರ ನಾಶಕ್ಕೆ ಮುನ್ನುಡಿ ಬರೆದವನೇ

೫೨ ಲಕ್ಷಕ್ಕೂ ಹೆಚ್ಚು ಮೌಲ್ಯದ ಪಡಿತರ ಅಕ್ಕಿ ಗೋದಾಮಿನಲ್ಲೇ ಮಾಯ, ಅಧಿಕಾರಿಗಳಿಂದ ಪರಿಶೀಲನೆ, ವ್ಯವಸ್ಥಾಪಕನ ಬಂಧನ
೫೨ ಲಕ್ಷಕ್ಕೂ ಹೆಚ್ಚು ಮೌಲ್ಯದ ಪಡಿತರ ಅಕ್ಕಿ ಗೋದಾಮಿನಲ್ಲೇ ಮಾಯ, ಅಧಿಕಾರಿಗಳಿಂದ ಪರಿಶೀಲನೆ, ವ್ಯವಸ್ಥಾಪಕನ ಬಂಧನ

ಚನ್ನಪಟ್ಟಣ: ತಾಲ್ಲೂಕಿನಾದ್ಯಂತ ಪಡಿತರ ನ್ಯಾಯಬೆಲೆ ಅಂಗಡಿಗಳಿಗೆ ವಿತರಿಸಲು ಪಡಿತರ ಅಕ್ಕಿಯ ಪೈಕಿ ಸುಮಾರು ೫೨ ಲಕ್ಷಕ್ಕೂ  ಮೌಲ್ಯದ ೧,೫೪೩.೬೫ ಕ್ವಿಂಟಾಲ್ ಅ

ದಸರಾ ಎಂಬುದು ಮೈಸೂರಿಗಷ್ಟೇ ಸೀಮಿತವಾಗಬಾರದು, ಮನ-ಮನೆಯಲ್ಲೂ ದಸರಾ ಆಗಬೇಕು. ಡಾ ರೂಪಾ ಶ್ರೀಧರ್
ದಸರಾ ಎಂಬುದು ಮೈಸೂರಿಗಷ್ಟೇ ಸೀಮಿತವಾಗಬಾರದು, ಮನ-ಮನೆಯಲ್ಲೂ ದಸರಾ ಆಗಬೇಕು. ಡಾ ರೂಪಾ ಶ್ರೀಧರ್

ಚನ್ನಪಟ್ಟಣ: ದಸರಾ ಎಂದರೆ ಕೇವಲ ಮೈಸೂರು ಎಂಬಂತಾಗಿದೆ, ಇದು ನಾಡ ಹಬ್ಬ ಎಂಬುದು ಕೇವಲ ಉಲ್ಲೇಖಕ್ಕಷ್ಟೇ ಸೀಮಿತವಾಗಿದೆ. ಇದು ನಾಡಹಬ್ಬ ಎಂಬುದು ಸರ

ಒಕ್ಕಲಿಗರು ಸಂಸ್ಕೃತಿ ಹಿeನರಲ್ಲ ನೈಜ ಸಂಸ್ಕೃತಿಯ ಮಾಲೀಕರು, ಪ್ರೊ ಭಗವಾನ್ ಗೆ ತಿರುಗೇಟು ನೀಡಿದ ಹಿರಿಯ ರೈತ ಮುಖಂಡ ಸಿ ಪುಟ್ಟಸ್ವಾಮಿ
ಒಕ್ಕಲಿಗರು ಸಂಸ್ಕೃತಿ ಹಿeನರಲ್ಲ ನೈಜ ಸಂಸ್ಕೃತಿಯ ಮಾಲೀಕರು, ಪ್ರೊ ಭಗವಾನ್ ಗೆ ತಿರುಗೇಟು ನೀಡಿದ ಹಿರಿಯ ರೈತ ಮುಖಂಡ ಸಿ ಪುಟ್ಟಸ್ವಾಮಿ

ರಾಮನಗರ: ಚನ್ನಪಟ್ಟಣ; ಪ್ರೊ ಭಗವಾನ್ ವಿಚಾರವಾದಿ, ಮೂಢನಂಬಿಕೆಗಳನ್ನು ಕಿತ್ತೊಗೆಯಲು, ಪುರಾಣ ಎಂಬುದು ಕಪೋಲ ಕಲ್ಪಿತ, ಇತಿಹಾಸ ಎಂಬುದು ಸಾರ್ವಕಾಲ

Top Stories »  


Top ↑