Tel: 7676775624 | Mail: info@yellowandred.in

Language: EN KAN

    Follow us :


ಪಶ್ಚಿಮಬಂಗಾಳದಲ್ಲಿ ಪರಿಶಿಷ್ಟರಿಗೆ ಅವಮಾನ ಮಾಡಿದ ತೃಣಮೂಲ ಕಾಂಗ್ರೆಸ್. ತಹಶಿಲ್ದಾರ್ ಮುಖೇನ ರಾಷ್ಟ್ರಪತಿಗೆ ದೂರು ಸಲ್ಲಿಸಿದ ಬಿಜೆಪಿ ಎಸ್ಸಿ ಮೋರ್ಚಾ

Posted date: 19 Apr, 2021

Powered by:     Yellow and Red

ಪಶ್ಚಿಮಬಂಗಾಳದಲ್ಲಿ ಪರಿಶಿಷ್ಟರಿಗೆ ಅವಮಾನ ಮಾಡಿದ  ತೃಣಮೂಲ ಕಾಂಗ್ರೆಸ್. ತಹಶಿಲ್ದಾರ್ ಮುಖೇನ ರಾಷ್ಟ್ರಪತಿಗೆ ದೂರು ಸಲ್ಲಿಸಿದ ಬಿಜೆಪಿ ಎಸ್ಸಿ ಮೋರ್ಚಾ

ನಾವು ಹಿಂದುಳಿದವರ ಪರ, ಅಲ್ಪಸಂಖ್ಯಾತರ ಪರ ಎಂದು ಬೊಬ್ಬಿರಿಯುವ ಪಶ್ಚಿಮ ಬಂಗಾಳದ ನಾಯಕಿ ಮಮತಾ ಬ್ಯಾನರ್ಜಿಯವರು, ಅವರ ತೃಣಮೂಲ ಕಾಂಗ್ರೆಸ್ ಪಕ್ಷದ ಮತ್ತೋರ್ವ ನಾಯಕಿ ಸುಜಾತ ಮೊಂಡಲ್ ಖಾನ್ ರವರ ಬಾಯಲ್ಲಿ, ಪರಿಶಿಷ್ಟ ಜಾತಿ ಜನರನ್ನು ಕುರಿತು ಅವಹೇಳನಕಾರಿ ಹೇಳಿಕೆ ಕೊಡಿಸಿರುವುದು ಆಘತಕಾರಿ ಜೊತೆಗೆ ಅವರ ಬಾಯಿಮಾತಿನ ಚಪಲವನ್ನು ಹಾಗೂ ನಾವು ಪರಿಶಿಷ್ಟ ಸಮುದಾಯದ ವಿರುದ್ದ ಎಂಬುದನ್ನು ಸಾಬೀತುಪಡಿಸಿದೆ ಎಂದು ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ನೀಲಸಂದ್ರ ಸದಾನಂದ ಆಕ್ರೋಶ ವ್ಯಕ್ತಪಡಿಸಿದರು.

ಅವರು ಇಂದು ಭಾರತೀಯ ಜನತಾ ಪಾರ್ಟಿ ಚನ್ನಪಟ್ಟಣ ಗ್ರಾಮಾಂತರ ಮಂಡಲ ಎಸ್ ಸಿ ಮೋರ್ಚಾ ವತಿಯಿಂದ ಉಪ ತಹಶಿಲ್ದಾರ್ ಸೋಮೇಶ್ ರವರ ಮೂಲಕ ರಾಷ್ಟ್ರಪತಿ ಗಳಿಗೆ ಮನವಿ ಸಲ್ಲಿಸಿ ಮಾಧ್ಯಮದವರೊಂದಿಗೆ ಮಾತನಾಡಿದರು.


ಗ್ರಾಮಾಂತರ ಎಸ್ ಸಿ ಮೋರ್ಚಾ ದ ಅಧ್ಯಕ್ಷರಾದ ಹೆಚ್ ಸಿ ನಾಗರಾಜು ರವರು ಮಾತನಾಡಿ ಮಮತಾ ಬ್ಯಾನರ್ಜಿಯವರು ಬಡವರಾದ ಪರಿಶಿಷ್ಟ ಜಾತಿಯವರಿಗೆ ನೆರವಾಗಿದ್ದರೂ ಸಹ ಅವರ ಸಣ್ಣತನ ಬದಲಾಗಿಲ್ಲ. ಕೆಲವರು ತಮ್ಮ ಪ್ರವೃತ್ತಿಯಿಂದ ಭಿಕ್ಷುಕರಾಗಿದ್ದರೆ ಇನ್ನೂ ಕೆಲವರು ಸಂಧರ್ಭಗಳಿಗನುಸಾರವಾಗಿ ಭಿಕ್ಷುಕರಾಗಿದ್ದಾರೆ. ಅದನ್ನೇ ದೊಡ್ಡದು ಮಾಡಿ ಪರಿಶಿಷ್ಟ ಜಾತಿಯವರೆಲ್ಲರೂ ಭಿಕ್ಷುಕ ಪ್ರವೃತ್ತಿಯನ್ನೇ ಹೊಂದಿದ್ದಾರೆ ಎಂಬ ಹೇಳಿಕೆಯನ್ನು ಖಂಡಿಸುತ್ತೇವೆ ಎಂದರು.


ಚನ್ನಪಟ್ಟಣ ನಗರ ಪ್ರಾಧಿಕಾರದ ಸದಸ್ಯ ಚಕ್ಕಲೂರು ಚಿಕ್ಕಚೌಡಯ್ಯ ಮಾತನಾಡಿ ಪಶ್ಚಿಮ ಬಂಗಾಳದ ಪರಿಶಿಷ್ಟ ಜಾತಿಯವರನ್ನಷ್ಟೇ ಇವರು ಅವಮಾನಿಸಿಲ್ಲ, ಇಡೀ ರಾಷ್ಟ್ರದ ಪರಿಶಿಷ್ಟ ಜಾತಿಗಳ ಜನರನ್ನು ಭಿಕ್ಷುಕರು ಎಂದು ಜರಿದು ಅವಮಾನಿಸಿದ್ದಾರೆ. ಇವರ ವಿರುದ್ಧ ಶೀಘ್ರವಾಗಿ ಕಾನೂನು ಕ್ರಮ ಕೈಗೊಳ್ಳಬೇಕು. ಇಂತಹ ಹೇಳಿಕೆಗಳು ಸಂವಿಧಾನ ರಚನಾಕಾರ ಡಾ ಬಿ ಆರ್ ಅಂಬೇಡ್ಕರ್ ರವರ ಪ್ರಜಾಪ್ರಭುತ್ವದ ಚಿಂತನೆಗಳನ್ನು ಖಂಡಿಸುವಂತಿವೆ. ಇಂತಹ ಹೇಳಿಕೆ ನೀಡುವ ಯಾವುದೇ ವ್ಯಕ್ತಿಗೂ ಕಾನೂನು ಕ್ರಮ ಜರುಗಿಸಿಬೇಕೆಂದು ಒತ್ತಾಯಿಸಿದರು.


ಈ ಸಂದರ್ಭದಲ್ಲಿ ವಂದಾರಗುಪ್ಪೆ ರಾಜೇಶ್, ಜಯಬೋರಯ್ಯ, ವೆಂಕಟರಾಮು ಅವ್ವೇರಹಳ್ಳಿ, ಶಿವಲಿಂಗಯ್ಯ ಮಂಗಳವಾರಪೇಟೆ, ಶಿವಪ್ಪ ಗರಕಹಳ್ಳಿ ಮತ್ತು ಕಿರಣ್ ಭೈರಾಪಟ್ಟಣ ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in nation »

ಪಿಎಫ್ಐ ಸಂಃಟನೆ ನಿಷೇಧ ಸ್ವಾಗತಾರ್ಹ: ಅಶ್ವತ್ಥನಾರಾಯಣ
ಪಿಎಫ್ಐ ಸಂಃಟನೆ ನಿಷೇಧ ಸ್ವಾಗತಾರ್ಹ: ಅಶ್ವತ್ಥನಾರಾಯಣ

ರಾಮನಗರ: ಸಮಾಜ ಮತ್ತು ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ ಪಿಎಫ್ಐ ಮತ್ತು ಅದರ 8 ಅಂಗಸಂಸ್ಥೆಗಳನ್ನು 5 ವರ್ಷಗಳ ಮಟ್ಟಿಗೆ ನಿಷೇಧಿಸಿ

ಐದು ವರ್ಷ ಪಿಎಫ್ಐ ಸಂಘಟನೆ ನಿಷೇಧಿಸಿ ಮಹತ್ವದ ಆದೇಶ ಹೊರಡಿಸಿದ ಕೇಂದ್ರ ಸರ್ಕಾರ
ಐದು ವರ್ಷ ಪಿಎಫ್ಐ ಸಂಘಟನೆ ನಿಷೇಧಿಸಿ ಮಹತ್ವದ ಆದೇಶ ಹೊರಡಿಸಿದ ಕೇಂದ್ರ ಸರ್ಕಾರ

ನವದೆಹಲಿ: ತಕ್ಷಣದಿಂದಲೇ ಜಾರಿಗೆ ಬರುವಂತೆ ಕೇಂದ್ರ ಸರ್ಕಾರವು PFI (ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ) ಮತ್ತು ಅದರ ಸಹವರ್ತಿಗಳು ಅಥವಾ ಅಂಗಸಂಸ್

ಮಧ್ಯಪ್ರದೇಶದಲ್ಲಿ ಏಳು ರೈತರ ಗುಂಪೊಂದು ಲಾಲ್ಕಿಧೇರಿ ಪ್ರದೇಶದ ವಜ್ರದ ಗಣಿಯಲ್ಲಿ ಉತ್ಖನನ ನಡೆಸಿ 3.21 ಕ್ಯಾರೆಟ್ ವಜ್ರ ಪತ್ತೆ ಹಚ್ಚಿದ್ದಾರೆ.
ಮಧ್ಯಪ್ರದೇಶದಲ್ಲಿ ಏಳು ರೈತರ ಗುಂಪೊಂದು ಲಾಲ್ಕಿಧೇರಿ ಪ್ರದೇಶದ ವಜ್ರದ ಗಣಿಯಲ್ಲಿ ಉತ್ಖನನ ನಡೆಸಿ 3.21 ಕ್ಯಾರೆಟ್ ವಜ್ರ ಪತ್ತೆ ಹಚ್ಚಿದ್ದಾರೆ.

ಪನ್ನಾ: ಮಧ್ಯಪ್ರದೇಶದ ಪನ್ನಾ ಜಿಲ್ಲೆಯ ಬ್ರಿಜ್‌ಪುರ ಮೂಲದ ರೈತರಿಗೆ ಅದೃಷ್ಟ ಖುಲಾಯಿಸಿದೆ. ಸರ್ಕಾರದಿಂದ ಬಾಡಿಗೆ ಮೇಲೆ ಪಡೆದ ಲಾಲ್ಕಿಧೇರಿ ಪ್ರದೇಶದ ವಜ್ರದ ಗಣಿಯಲ್ಲಿ 3.21 ಕ್ಯಾರೆಟ್ ವಜ್ರ ದೊರೆತಿದ

ವಕೀಲರ (ರಕ್ಷಣಾ) ಮಸೂದೆ 2021: ನ್ಯಾಯಾಧೀಶರ ಪೂರ್ವಾನುಮತಿ ಇಲ್ಲದೆ ವಕೀಲರ ಬಂಧನ ಕಾನೂನುಬಾಹಿರ!
ವಕೀಲರ (ರಕ್ಷಣಾ) ಮಸೂದೆ 2021: ನ್ಯಾಯಾಧೀಶರ ಪೂರ್ವಾನುಮತಿ ಇಲ್ಲದೆ ವಕೀಲರ ಬಂಧನ ಕಾನೂನುಬಾಹಿರ!

ವಕೀಲರ ರಕ್ಷಣೆ ಮತ್ತು ವೃತ್ತಿ ನಿರ್ವಹಣೆಗೆ ಅನುಕೂಲವಾಗುವಂತೆ ಮಾಡಲು ದೇಶದಲ್ಲಿ ಪ್ರಬಲ ಕಾನೂನು ರೂಪಿಸುವ ಕಾರ್ಯ ನಡೆದಿದ್ದು, ವಕೀಲರ ರಕ್ಷಣೆ ಮಸೂದೆ 2021 ಬಿಡುಗಡೆಗೊಳಿಸಲಾಗಿದೆ.

ದೇಶಾದ್ಯಂತ ಮಧ್ಯರಾತ್ರಿಯಿಂದಲೇ ಪಿಎಫ್ಐ ಕಚೇರಿಗಳ ಮೇಲೆ ಎನ್​ಐಎ, ಇಡಿ ದಿಢೀರ್‌ ದಾಳಿ
ದೇಶಾದ್ಯಂತ ಮಧ್ಯರಾತ್ರಿಯಿಂದಲೇ ಪಿಎಫ್ಐ ಕಚೇರಿಗಳ ಮೇಲೆ ಎನ್​ಐಎ, ಇಡಿ ದಿಢೀರ್‌ ದಾಳಿ

ಹೈದರಾಬಾದ್​: ಕಳೆದ ಮಧ್ಯರಾತ್ರಿಯಿಂದ ದಿಢೀರ್ ಕಾರ್ಯಾಚರಣೆ ಕೈಗೊಂಡಿರುವ 200ಕ್ಕೂ ಹೆಚ್ಚು ರಾಷ್ಟ್ರೀಯ ತನಿಖಾ ದಳ (ಎನ್​​ಐಎ)ದ ಅಧಿಕಾರಿಗಳು ದೇ

ಅಣ್ಣ ಬ್ಲಡ್ ಕ್ಯಾನ್ಸರ್‌ಗೆ ಬಲಿ, ಅಮ್ಮನಿಗೆ ಬ್ರೆಸ್ಟ್‌ ಕ್ಯಾನ್ಸರ್‌: ಪವರ್‌ಲಿಫ್ಟಿಂಗ್‌ನಲ್ಲಿ ಬೆಳ್ಳಿ ಗೆದ್ದು ಬೂಸ್ಟರ್ ಡೋಸ್ ಕೊಟ್ಟ ಮಗಳು!
ಅಣ್ಣ ಬ್ಲಡ್ ಕ್ಯಾನ್ಸರ್‌ಗೆ ಬಲಿ, ಅಮ್ಮನಿಗೆ ಬ್ರೆಸ್ಟ್‌ ಕ್ಯಾನ್ಸರ್‌: ಪವರ್‌ಲಿಫ್ಟಿಂಗ್‌ನಲ್ಲಿ ಬೆಳ್ಳಿ ಗೆದ್ದು ಬೂಸ್ಟರ್ ಡೋಸ್ ಕೊಟ್ಟ ಮಗಳು!

ಹೈದರಾಬಾದ್: ಬದುಕು ಒಡ್ಡಿದ ಹತ್ತು ಹಲವು ಸಮಸ್ಯೆಗಳನ್ನು ಧೈರ್ಯದಿಂದ ಮೆಟ್ಟಿ ನಿಂತ ಇಲ್ಲೊಬ್ಬ ಹೈದರಾಬಾದ್‌ನ 22 ವರ್ಷದ ಯುವತಿ ಯುವ ಜನತೆಗೆ ಸ್ಫೂರ್ತಿಯ ಸ

ಅಬ್ಬಾ…!,ಎಂಬತ್ತೇಳರ ವೃದ್ದೆಗೆ ಎಂಭತ್ತೊಬ್ಬರ ಗಂಡನಿಂದ ಸೆಕ್ಸ್ ಗೆ ಒತ್ತಾಯ ದೂರು!
ಅಬ್ಬಾ…!,ಎಂಬತ್ತೇಳರ ವೃದ್ದೆಗೆ ಎಂಭತ್ತೊಬ್ಬರ ಗಂಡನಿಂದ ಸೆಕ್ಸ್ ಗೆ ಒತ್ತಾಯ ದೂರು!

ವಡೋದರಾದ 87 ವರ್ಷದ ವೃದ್ಧೆ ಮಹಿಳಾ ಸಹಾಯವಾಣಿಗೆ ಕರೆ ಮಾಡಿ ತನ್ನ ಪತಿಯ ವಿರುದ್ಧ ದೂರು ನೀಡಿದ್ದು, ಕರೆಯನ್ನು ಸ್ವೀಕರಿಸಿದ ಅಭಯಂ ತಂಡ ನಿಜಕ್ಕೂ ದಿಗ್ಭ್ರಮೆಗೊಂಡಿದೆ.

ಹೌದು… ಗುಜರಾತ್

ವಿವಾಹಿತ ಮಹಿಳೆ ಮೇಲೆ ಅತ್ಯಾಚಾರ ಆರೋಪ: ಇನ್ಸ್​ಪೆಕ್ಟರ್​ ಅಮಾನತು
ವಿವಾಹಿತ ಮಹಿಳೆ ಮೇಲೆ ಅತ್ಯಾಚಾರ ಆರೋಪ: ಇನ್ಸ್​ಪೆಕ್ಟರ್​ ಅಮಾನತು

ಹೈದರಾಬಾದ್​ (ತೆಲಂಗಾಣ): ಮಹಿಳೆಯೊಬ್ಬರ ಮೇಲಿನ ಅತ್ಯಾಚಾರ ಆರೋಪ ಪ್ರಕರಣದಲ್ಲಿ ಹೈದರಾಬಾದ್​ನ ಮರೇಡಪಲ್ಲಿ ಇನ್ಸ್​ಪೆಕ್ಟರ್​ ನಾಗೇಶ್ವರ್​​ ರಾವ್​ರನ್ನು ಪೊಲೀಸ್​ ಕಮಿಷನರ್ ಸಿ.ವಿ.ಆನಂದ್ ಅಮಾನತುಗೊಳಿ

₹25 ಲಕ್ಷಕ್ಕೆ 2 ಹುಲಿ ಮರಿಗಳು ಮಾರಾಟಕ್ಕಿವೆ. ವಾಟ್ಸ್​ಆ್ಯಪ್​ ಸ್ಟೇಟಸ್​​ ಹಾಕಿದ್ದವ ಅಂದರ್​
₹25 ಲಕ್ಷಕ್ಕೆ 2 ಹುಲಿ ಮರಿಗಳು ಮಾರಾಟಕ್ಕಿವೆ. ವಾಟ್ಸ್​ಆ್ಯಪ್​ ಸ್ಟೇಟಸ್​​ ಹಾಕಿದ್ದವ ಅಂದರ್​

ಚೆನ್ನೈ: ಪ್ರಾಣಿ, ಪಕ್ಷಿಗಳನ್ನು ನೋಂದಣಿ ಮಾಡಿಸದೇ ಸಾಕುವಂತಿಲ್ಲ. ಅಂತಹದರಲ್ಲಿ ಅವುಗಳನ್ನು ಮಾರಾಟಕ್ಕಿಟ್ಟರೆ ಬಿಟ್ಟಾರೆಯೇ?. ಮೂರು ತಿಂಗಳ ಎರಡ

5 ಸಾವಿರ ಕಾರು ಕದ್ದ ಕಳ್ಳನ ಹೆಡೆಮುರಿ ಕಟ್ಟಿದ ದೆಹಲಿ ಪೊಲೀಸರು
5 ಸಾವಿರ ಕಾರು ಕದ್ದ ಕಳ್ಳನ ಹೆಡೆಮುರಿ ಕಟ್ಟಿದ ದೆಹಲಿ ಪೊಲೀಸರು

ನ್ಯೂಡೆಲ್ಲಿ: ಭಾರತದ ಅತಿದೊಡ್ಡ ಕಾರು ಕಳ್ಳನೆಂಬ ಕುಖ್ಯಾತಿ ಪಡೆದ ವ್ಯಕ್ತಿ ಅಂದರೆ, ದೇಶಾದ್ಯಂತ 5 ಸಾವಿರ ಕಾರುಗಳನ್ನು ಕದ್ದ ಆರೋಪ ಹೊತ್ತಿರುವಾ

Top Stories »  


Top ↑