Tel: 7676775624 | Mail: info@yellowandred.in

Language: EN KAN

    Follow us :


ಒಕ್ಕಲಿಗರ ಸಂಘದ ಚುನಾವಣೆಯಲ್ಲಿ ಹತ್ತು ಸ್ಥಾನಗಳನ್ನು ಗೆದ್ದ ಕೆಂಚಪ್ಪಗೌಡ ತಂಡ

Posted date: 16 Dec, 2021

Powered by:     Yellow and Red

ಒಕ್ಕಲಿಗರ ಸಂಘದ ಚುನಾವಣೆಯಲ್ಲಿ ಹತ್ತು ಸ್ಥಾನಗಳನ್ನು ಗೆದ್ದ ಕೆಂಚಪ್ಪಗೌಡ ತಂಡ

ರಾಜ್ಯ ಒಕ್ಕಲಿಗರ ಸಂಘದ ಚುನಾವಣೆಯು ಈ ಬಾರಿ ಬಹಳ ರಮಾರಮಿಯಾಗಿ

ಕಳೆದ 12ರಂದು ಚುನಾವಣೆ ಜರುಗಿತು. ವಿವಿಧ ಜಿಲ್ಲೆಗಳಿಂದ 20 ಸ್ಥಾನಗಳಿಗೆಹಾಗೂ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ,

ರಾಮನಗರ ಹಾಗೂ ಹೊಸೂರು ಸೇರಿದಂತೆ 1

ಕ್ಷೇತ್ರದಿಂದ 15 ಸ್ಥಾನಕ್ಕೆ 141 ಅಭ್ಯರ್ಥಿಗಳು ಕಣದಲ್ಲಿ ಇದ್ದರು. 141 ಅಭ್ಯರ್ಥಿಗಳಿಗೆ ಮತದಾರರು ಅದಾವರೀತಿಯಲ್ಲಿ ಮತ ಚಲಾಯಿಸಬಹುದು ಎಂಬ

ಆತಂಕವು ಅಭ್ಯರ್ಥಿಗಳಲ್ಲಿ ಮನೆಮಾಡಿತ್ತು.


ಇಷ್ಟರ ಮಧ್ಯೆಯೂ ಸಹ ಮತದಾರರು ಹೆಚ್ಚು 

ಮತಗಳು ಅಸಿಂಧುವಾಗದ ರೀತಿಯಲ್ಲಿ ಮತದಾನ ಮಾಡಿ, ತಮ್ಮ ಬುದ್ಧಿವಂತಿಕೆಯನ್ನು

ಮೆರೆದಿದ್ದಾರೆ. ನೆನ್ನೆ ನಡೆದ ಮತ ಎಣಿಕೆಯನ್ನು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಿಯೋಜಿಸ

ಲಾಗಿತ್ತು. ಸಕಲ ರೀತಿಯ ಮುನ್ನೆಚ್ಚರಿಕೆಯಿಂದ

ಎಣಿಕೆಯ ಸಂದರ್ಭದಲ್ಲಿ ಯಾವುದೇ ರೀತಿಯ ಸಮಸ್ಯೆ ಉಂಟಾಗದ ರೀತಿಯಲ್ಲಿ

ಚುನಾವಣಾಧಿಕಾರಿಗಳು ನಿಯೋಜನೆ ಮಾಡಿದ್ದರು.


ಈ ಸಂದರ್ಭದಲ್ಲಿ ಪ್ರತಿ ಎಣಿಕೆ ಕೇಂದ್ರದಲ್ಲಿಯೂ ಸಹ ಸಿ.ಸಿ ಕ್ಯಾಮರಾವನ್ನು ಅಳವಡಿಸಿ, ಕರಾರುವಕ್ಕಾಗಿ ಎಣಿಕೆ ಕಾರ್ಯ ಮಾಡಲಾಯಿತು.

ಯಾವುದೇ ಅಹಿತಕರ ಘಟನೆ ನಡೆಯಬಾರದು

ಎಂಬ ಉದ್ದೇಶದಿಂದ ಸುಮಾರು 3 ಸಾವಿರ ಜನ

ಸಿಬ್ಬಂದಿಯನ್ನು ಎಣಿಕೆ ಕಾರ್ಯಕ್ಕೆ ನಿಯೋಜನೆ

ಮಾಡಿದ್ದು ವಿಶೇಷವಾಗಿತ್ತು. ಕ್ಷಣ ಕ್ಷಣಕ್ಕೂ ಕುತೂಹಲ ಕೆರಳಿಸಿದ್ದ ಈ ಮತ ಎಣಿಕೆ

ಕಾರ್ಯದಲ್ಲಿ ಆರಂಭಕ್ಕೆ ಮುನ್ನಡೆ ಸಾಧಿಸಿದ್ದ ಹಲವು ಪ್ರತಿಷ್ಠಿತ ಅಭ್ಯರ್ಥಿಗಳು,

ಎಣಿಕೆ ಕಾರ್ಯ ಪ್ರಗತಿ ಹೊಂದುತ್ತಾ ಹೋದಂತೆ

ಅವರ ಹೆಸರುಗಳು ನೇಪಥ್ಯಕ್ಕೆ ಸರಿದಿದ್ದು ಒಂದು ರೀತಿಯಲ್ಲಿ ವಿಶೇಷ ಎನ್ನಬಹುದು.


ಅಂತಿಮವಾಗಿ ಕೆಂಚಪ್ಪಗೌಡ ತಂಡ 10 ಸ್ಥಾನಗಳನ್ನು ಗೆಲ್ಲುವ ಮೂಲಕ ವಿಕ್ರಮ ಸಾಧಿಸಿತು ಎಂಬುದು ಗಮನಾರ್ಹ ಸಂಗತಿ. ಕೆಂಚಪ್ಪಗೌಡ ತಂಡದಿಂದ ಹೆಚ್.ಎನ್ ಅಶೋಕ್, ಕೆಂಚಪ್ಪಗೌಡ,

ಆರ್ ಪ್ರಕಾಶ್, ದೇವರಾಜ್ (ಹಾಪ್‍ಕಾಮ್ಸ್), ಎಲ್

ಶ್ರೀನಿವಾಸ್, ಮಾರೇಗೌಡ, ರಾಜಶೇಖರಗೌಡ, ಸುರೇಶ್, ವೆಂಕಟರಾಮೇಗೌಡ, ನಾರಾಯಣಸ್ವಾಮಿ ಇವರುಗಳು ಆಯ್ಕೆಯಾದರು.


ಇನ್ನಿತರ ತಂಡಗಳಿಂದ ಡಾ.ಆಂಜನಪ್ಪ, ಜಯಮುತ್ತು, ಉಮಾಪತಿ, ಹನುಮಂತಯ್ಯ, ಪುಟ್ಟಸ್ವಾಮಿ ಆಯ್ಕೆಯಾದರು. ಇದರಲ್ಲಿ ಡಾ. ಆಂಜನಪ್ಪ 68,938 ಮತ ಪಡೆದು ದಾಖಲೆ ಮಾಡಿದರು. ಕೆಂಚಪ್ಪಗೌಡ ತಂಡದ ನಾಯಕ

ಕೆಂಚಪ್ಪಗೌಡ 58,066 ಮತಗಳನ್ನು ಪಡೆದರು,

ಅವರ ತಂಡದ ಅಶೋಕ್ ಹೆಚ್.ಎನ್ ಅವರು

61,892 ಮತ ಪಡೆದು ಎರಡನೇ ಸ್ಥಾನ ಪಡೆದರು.

ಜಿಲ್ಲಾ ಮಟ್ಟದಲ್ಲಿ 20 ಸ್ಥಾನಗಳಿಗೆ ಆಯ್ಕೆಯಾಗಬೇಕಾಗಿದ್ದು, ಮೈಸೂರು

ಜಿಲ್ಲೆಯ 3 ಸ್ಥಾನಗಳ ಪೈಕಿ ಕೆ.ಶ್ರೀಧರ್, ಡಾ.ಎಂ.ಬಿ

ಮಂಜೇಗೌಡ, ಗಂಗಾಧರ್ ಸಿ ಜೆ ಆಯ್ಕೆಗೊಂಡರು.


ಮಂಡ್ಯ ಜಿಲ್ಲೆಯ ನಾಲ್ಕು ರಾಜ್ಯ ಒಕ್ಕಲಿಗರ ಸಂಘದ ಚುನಾವಣೆಯಲ್ಲಿ, ಅಶೋಕ್ ಜಯರಾಮ್, ಮೂಡ್ಯ ಚಂದ್ರು, ರಾಘವೇಂದ್ರ, ನಲ್ಲಿಗೆರೆ ಬಾಬು ಇವರು ಆಯ್ಕೆಯಾದರು. ಹಾಸನ ಜಿಲ್ಲೆಯ 3 ಸ್ಥಾನಗಳ ಪೈಕಿ, ಸಿ.ಎನ್ ಬಾಲಕೃಷ್ಣ (ಶಾಸಕ),

ರಘುಗೌಡ, ಬಿ.ಪಿ ಮಂಜೇಗೌಡ ಆಯ್ಕೆಯಾದರು.

ತುಮಕೂರು ಜಿಲ್ಲೆಯ 2 ಸ್ಥಾನಗಳ ಪೈಕಿ ಹನುಮಂತರಾಯಪ್ಪ, ಲೋಕೇಶ್ ನಾಗರಾಜಯ್ಯ ಆಯ್ಕೆಯಾದರು. ಕೋಲಾರ ಜಿಲ್ಲೆಯ

3 ಸ್ಥಾನಗಳ ಪೈಕಿ ಡಾ.ರಮೇಶ್, ಕೋನಪ್ಪ ರೆಡ್ಡಿ,

ಎಲವಳ್ಳಿ ರಮೇಶ್ ಆಯ್ಕೆಯಾದರು. ಕೊಡಗು

ಜಿಲ್ಲೆಯಿಂದ ಚಿಕ್ಕಮಗಳೂರು ಜಿಲ್ಲೆಯಿಂದ ಪೂರ್ಣೇಶ್, ದ.ಕನ್ನಡ ಜಿಲ್ಲೆಯಿಂದ ಡಾ.ರೇಣುಕಾಪ್ರಸಾದ್,

ಶಿವಮೊಗ್ಗ ಜಿಲ್ಲೆಯಿಂದ ಸಿರಿಬಯಲು ಸರ್ವೇಶ್,

ಚಿತ್ರದುರ್ಗ ಜಿಲ್ಲೆಯಿಂದ ಜೆ. ರಾಜು ಬೇತೂರು ಪಾಳ್ಯ ಇವರುಗಳು ಆಯ್ಕೆಯಾಗಿದ್ದಾರೆ.


ಕೇಂದ್ರ ಸ್ಥಾನದಲ್ಲಿ ಅಷ್ಟೇ ಅಲ್ಲದೆ, ಉಳಿದ ಬೇರೆ ಬೇರೆ ಜಿಲ್ಲೆಗಳಲ್ಲಿಯೂ ಸಹ ಈ ಚುನಾವಣೆಯು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿತ್ತು.

ಕೆಲವು ಜಿಲ್ಲೆಗಳಲ್ಲಿ ರಾಜಕೀಯ ಪ್ರವೇಶವೂ ಸಹ

ಆಗಿದ್ದರಿಂದ ನೇರವಾಗಿ, ಪರೋಕ್ಷವಾಗಿ ಹಲವಾರು ರಾಜಕೀಯ ಧುರೀಣರು ಮತಯಾಚನೆ ಮಾಡಿದ್ದು ವಿಶೇಷವಾಗಿತ್ತು.


ಗೋ ರಾ ಶ್ರೀನಿವಾಸ...

ಮೊ:9845856139.

??????????????

  • ????? ???????? ??????????? ???? ??????????.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in karnataka »

ಸಮಯ ಮತ್ತು ಹಣದ ಸದುಪಯೋಗ ಸರ್ಕಾರದ ನೀತಿ: ಬಸವರಾಜ ಬೊಮ್ಮಾಯಿ
ಸಮಯ ಮತ್ತು ಹಣದ ಸದುಪಯೋಗ ಸರ್ಕಾರದ ನೀತಿ: ಬಸವರಾಜ ಬೊಮ್ಮಾಯಿ

ರಾಮನಗರ, ಜನವರಿ 3: ಸಮಯ ಮತ್ತು ಹಣದ ಸದುಪಯೋಗ ಸರ್ಕಾರದ ನೀತಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.


ಅವರು ಇಂದು ಮಾಗಡಿ ತಾಲ್ಲೂಕಿನ ಚಿಕ್ಕಕಲ್ಯಾ ಗ್ರಾ

ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿ ಪ್ರಕಟ
ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿ ಪ್ರಕಟ

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ.

ಇದು ರಾಜ್ಯದಾದ್ಯಂತ ಎಂಟು ಸಾವಿರಕ್ಕೂ ಹೆಚ್ಚು ಕಾರ್ಯನಿರತ ಪತ್ರಕರ್ತ ಸದಸ್ಯರನ್ನು ಹೊಂದಿರುವ ಪತ

ರಸ್ತೆ ಬದಿಯಲ್ಲಿ ನಡೆದು ಹೋಗುತ್ತುದ್ದ ಕಾಲೇಜು ವಿದ್ಯಾರ್ಥಿಗಳಿಗೆ ಢಿಕ್ಕಿ ಹೊಡೆದ ಕಾರು
ರಸ್ತೆ ಬದಿಯಲ್ಲಿ ನಡೆದು ಹೋಗುತ್ತುದ್ದ ಕಾಲೇಜು ವಿದ್ಯಾರ್ಥಿಗಳಿಗೆ ಢಿಕ್ಕಿ ಹೊಡೆದ ಕಾರು

ಮಳವಳ್ಳಿ: ಪಟ್ಟಣದ ಮೈಸೂರು ರಸ್ತೆಯಲ್ಲಿ ಗುರುವಾರ ನಡೆದು ಹೋಗುತ್ತಿದ್ದ ಕಾಲೇಜು ವಿದ್ಯಾರ್ಥಿಗಳಿಗೆ ಮಾರುತಿ ಸುಝುಕಿ ಬಲೆನೋ KA-01 MR 9616 ಸಂ

ಒಕ್ಕಲಿಗರ ಸಂಘದ ಚುನಾವಣೆಯಲ್ಲಿ ಹತ್ತು ಸ್ಥಾನಗಳನ್ನು ಗೆದ್ದ ಕೆಂಚಪ್ಪಗೌಡ ತಂಡ
ಒಕ್ಕಲಿಗರ ಸಂಘದ ಚುನಾವಣೆಯಲ್ಲಿ ಹತ್ತು ಸ್ಥಾನಗಳನ್ನು ಗೆದ್ದ ಕೆಂಚಪ್ಪಗೌಡ ತಂಡ

ರಾಜ್ಯ ಒಕ್ಕಲಿಗರ ಸಂಘದ ಚುನಾವಣೆಯು ಈ ಬಾರಿ ಬಹಳ ರಮಾರಮಿಯಾಗಿ

ಕಳೆದ 12ರಂದು ಚುನಾವಣೆ ಜರುಗಿತು. ವಿವಿಧ ಜಿಲ್ಲೆಗಳಿಂದ 20 ಸ್ಥಾನಗಳಿಗೆಹಾಗೂ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ,<

ರಾಷ್ಟ್ರೀಯ ಪಕ್ಷಗಳ ಹಣಬಲದ ಮುಂದೆ ಜನಬಲಕ್ಕೆ ಸೋಲಾಗಿದೆ. ಹೆಚ್ಡಿಕೆ
ರಾಷ್ಟ್ರೀಯ ಪಕ್ಷಗಳ ಹಣಬಲದ ಮುಂದೆ ಜನಬಲಕ್ಕೆ ಸೋಲಾಗಿದೆ. ಹೆಚ್ಡಿಕೆ

ವಿಧಾನ ಪರಿಷತ್ ಚುನಾವಣೆ ಫಲಿತಾಂಶದಲ್ಲಿ ಜೆಡಿಎಸ್ ಪಕ್ಷ ಕೇವಲ ಒಂದು ಕ್ಷೇತ್ರದಲ್ಲಿ ಮಾತ್ರಗೆಲುವು ಸಾಧಿಸಿದೆ. ಈ

ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳ ಹಣಬಲ ಕೆಲಸ ಮಾಡಿದೆ ಎಂದು ವಿಧಾನ

ಕೆ ಹೆಚ್ ರಾಮಯ್ಯ ತಂಡ ಗೆಲ್ಲಿಸಿ, ಭ್ರಷ್ಟಾಚಾರ ರಹಿತ ಆಡಳಿತ ನೀಡುತ್ತೇವೆ. ಜಯಮುತ್ತು, ಅ ದೇವೇಗೌಡ ತಂಡ ಮನವಿ
ಕೆ ಹೆಚ್ ರಾಮಯ್ಯ ತಂಡ ಗೆಲ್ಲಿಸಿ, ಭ್ರಷ್ಟಾಚಾರ ರಹಿತ ಆಡಳಿತ ನೀಡುತ್ತೇವೆ. ಜಯಮುತ್ತು, ಅ ದೇವೇಗೌಡ ತಂಡ ಮನವಿ

ನಾವು ಯಾವುದೇ ಕಾರಣಕ್ಕೂ ಭ್ರಷ್ಟಾಚಾರ ಸಹಿಸುವುದಿಲ್ಲ. ನಾವೂ ಸಹ ಈ ಹಿಂದಿನ ಅವಧಿಯಲ್ಲೂ ಸಹ ಭ್ರಷ್ಟಾಚಾರ ಮಾಡಿಲ್ಲ. ಮತದಾರರು ಆಶೀರ್ವದಿಸಿದರೆ ಮುಂದಿನ ದಿನಗಳಲ್ಲಿ ಸಂಘದ ಆಸ್ತಿ ಉಳಿಸುವುದರ ಜೊತೆಗೆ ಸ

ಇಳಿ ವಯಸ್ಸಿನಲ್ಲಿ ಒಂದಾದ ಅಮರ ಪ್ರೇಮಿಗಳು
ಇಳಿ ವಯಸ್ಸಿನಲ್ಲಿ ಒಂದಾದ ಅಮರ ಪ್ರೇಮಿಗಳು

ಮೈಸೂರು: ಮೇಲುಕೋಟೆ. ನಲವತ್ತೈದು ವರ್ಷಗಳ ಹಿಂದೆ ಮೈಸೂರಿನ ಹೆಬ್ಬಾಳ ಗ್ರಾಮದಲ್ಲಿ ಅಕ್ಕಪಕ್ಕದಲ್ಲಿ ನೆಲೆಸಿದ್ದ ಯುವಕ-ಯುವತಿ ಪ್ರೀತಿಸಿ ಮದುವೆಯಾ

ವಿಧಾನ ಪರಿಷತ್ ಚುನಾವಣೆ: ಗ್ರಾ.ಪಂ. ಸದ್ಯರಿಗೆ ಫುಲ್ ಡಿಮ್ಯಾಂಡ್!
ವಿಧಾನ ಪರಿಷತ್ ಚುನಾವಣೆ: ಗ್ರಾ.ಪಂ. ಸದ್ಯರಿಗೆ ಫುಲ್ ಡಿಮ್ಯಾಂಡ್!

ರಾಮನಗರ: ಬೆಂಗಳೂರು ಗ್ರಾಮಾಂತರ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನ ಪರಿಷತ್ ಗೆ ನಡೆಯುವ ಚುನಾವಣೆಯಲ್ಲಿ  ಸ್ಪರ್ಧಿಸಿರುವ ಪ್ರಮುಖ ಮೂರು ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಗೆಲ್ಲಲು ತಂತ್ರ ರೂ

ವಿಧಾನ ಪರಿಷತ್ ದ್ವೈವಾರ್ಷಿಕ ಚುನಾವಣೆ: ಕರಡು ಮತದಾರರ ಪಟ್ಟಿ ಪ್ರಕಟ
ವಿಧಾನ ಪರಿಷತ್ ದ್ವೈವಾರ್ಷಿಕ ಚುನಾವಣೆ: ಕರಡು ಮತದಾರರ ಪಟ್ಟಿ ಪ್ರಕಟ

ರಾಮನಗರ, ನ. 12/21 ಬೆಂಗಳೂರು ಗ್ರಾಮಾಂತರ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ರಾಜ್ಯ ವಿಧಾನ ಪರಿಷತ್ ಗೆ ದ್ವೈವಾರ್ಷಿಕ ಚುನಾವಣೆ-2022ರ ಸಂಬಂಧ ಗ್ರಾಮ ಪಂಚಾಯಿತಿವಾರು/ ನಗರ ಸ್ಥಳೀಯ ಸಂಸ್ಥೆವಾರು ಮತದಾ

ಇರುಳಿಗರಿಗೆ ಮನೆ ನಿರ್ಮಿಸಲು ಜಾಗ ಗೊತ್ತು ಮಾಡಿದ ಅಧಿಕಾರಿಗಳು
ಇರುಳಿಗರಿಗೆ ಮನೆ ನಿರ್ಮಿಸಲು ಜಾಗ ಗೊತ್ತು ಮಾಡಿದ ಅಧಿಕಾರಿಗಳು

ರಾಮನಗರ:ನ;12/21. ತಾಲೂಕಿನ ಕೂಟಗಲ್ ಬಳಿ ಇರುಳಿಗರಿಗೆ ಉಚಿತ ನಿವೇಶನ ನೀಡಲು ಮೀನಾ ಮೇಷ ಎಣಿಸುತ್ತಿದ್ದ ಅಧಿಕಾರಿಗಳು ಗುರುವಾರ ಬೆಳಿಗ್ಗೆ ಏಕಾಏಕಿ ಧಾವಿಸಿ ಬಂದು ಕೂಟಗಲ್ ಸರ್ವೆ ಸಂಖ್ಯೆ 94 ರಲ್ಲಿ 2

Top Stories »  


Top ↑