ಬಡವರ, ರೈತರ ಕಣ್ಣೀರು ಒರೆಸುವ ಏಕೈಕ ನಾಯಕ ಕುಮಾರಸ್ವಾಮಿ. ಹೆಚ್ ಡಿ ದೇವೇಗೌಡ

ಚನ್ನಪಟ್ಟಣ: ಇಡೀ ಭಾರತ ದೇಶದಲ್ಲಿ, ಬಡವರ ಮತ್ತು ರೈತರ ಕಣ್ಣೀರು ಒರೆಸುವ ನಾಯಕನಿದ್ದರೆ ಅದು ಕುಮಾರಸ್ವಾಮಿ ಮಾತ್ರ. ನುಡಿದಂತೆ ನಡೆಯುವ ರಾಜಕಾರಣಿ ಅಂತ ದೇಶದಲ್ಲಿ ಇದ್ದರೆ ಅದು ಕುಮಾರಸ್ವಾಮಿ ಮಾತ್ರ. ಬಡಜನರ ಬಗ್ಗೆ ಅಪಾರವಾದ ಕಾಳಜಿ ಇರುವ ಅವರನ್ನು ತಾಲೂಕಿನ ಮಹಾಜನತೆ ಹೆಚ್ಚಿನ ಬಹುಮತ ನೀಡಿ ಆಶೀರ್ವಾದ ಮಾಡಬೇಕು ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಮನವಿ ಮಾಡಿದರು.
ತಾಲೂಕಿನ ಇಗ್ಗಲೂರು ಗ್ರಾಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ಚುನಾವಣೆ ಹಿನ್ನೆಲೆಯಲ್ಲಿ ಹಲವರು ಸಾಕಷ್ಟು ಭರವಸೆ ನೀಡಬಹುದು. ಆದರೆ, ಇಡೀ ದೇಶದಲ್ಲಿ ನುಡಿದಂತೆ ನಡೆಯುವ ಏಕೈಕ ರಾಜಕಾರಣಿ ಕುಮಾರಸ್ವಾಮಿ ಮಾತ್ರ. ಬಡವರ್ಗದ ಬಗ್ಗೆ ಚಿಂತನೆ ಮಾಡಿ ಅವರಿಗಾಗಿ ಯೋಜನೆಗಳನ್ನು ರೂಪಿಸುವ ಕುಮಾರಸ್ವಾಮಿಯಂತಹ ಶಕ್ತಿಯುತ ನಾಯಕನನ್ನು ನನ್ನ ರಾಜಕೀಯ ಜೀವನದಲ್ಲಿ ನೋಡಿಲ್ಲ ಎಂದು ತಮ್ಮ ಪುತ್ರ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿಯನ್ನು ಹಾಡಿ ಹೊಗಳಿದರು.
*ಕಾಪಾಡಿಕೊಳ್ಳಿ;
ಈ ನೆಲ ಕುಮಾರಸ್ವಾಮಿಯವರ ಕರ್ಮಭೂಮಿ. ಅವರು ನಮ್ಮ ಪಕ್ಷವನ್ನು ಸ್ವತಂತ್ರವಾಗಿ ಅಧಿಕಾರಕ್ಕೆ ತರಲೇಬೇಕು ಎಂಬ ಹಠತೊಟ್ಟು ಹಗಲು ರಾತ್ರಿ ಎನ್ನದೇ ಹೋರಾಟ ಮಾಡುತ್ತಿದ್ದಾರೆ. ಪಕ್ಷವನ್ನು ಅಧಿಕಾರಕ್ಕೆ ತಂದು ಬಡಜನರ ಬದುಕು ಹಸನು ಮಾಡಬೇಕು ಎಂಬುದು ಅವರ ಆಶಯ. ರಾಜ್ಯಾದ್ಯಂತ ಓಡಾಟ ನಡೆಸಬೇಕಾದ ಅನಿವಾರ್ಯತೆ ಇರುವುದರಿಂದ ಅವರು ಕ್ಷೇತ್ರದಲ್ಲಿ ಪ್ರಚಾರ ನಡೆಸಲು ಸಾಧ್ಯವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ನೀವೇ ಅವರ ಪರವಾಗಿ ಪ್ರಚಾರ ನಡೆಸಿ ಅವರನ್ನು ಗೆಲ್ಲಿಸಿಕೊಡಬೇಕು. ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಸಮಯವನ್ನು ಕಣ್ತುಂಬಿಕೊಳ್ಳಬೇಕು. ಅವರನ್ನು ಕಾಪಾಡಿಕೊಳ್ಳಿ ಎಂದು ಕರೆ ನೀಡಿದರು.
*ಪ್ರಾದೇಶಿಕ ಪಕ್ಷಗಳೇ ಹಿತ*
ರಾಜ್ಯದ ಜನರು ನೆರೆಯ ತಮಿಳುನಾಡಿನ ರೀತಿ ಪ್ರಾದೇಶಿಕ ಪಕ್ಷವನ್ನು ಬೆಂಬಲಿಸಿದರೆ ಸಾಕಷ್ಟು ಅನುಕೂಲವಾಗುತ್ತದೆ. ಹಲವು ದಶಕಗಳಿಂದಲೂ ಆ ನೆಲದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ತಲೆ ಎತ್ತಿ ನಿಲ್ಲಲು ಇದುವರೆಗೂ ಸಾಧ್ಯವಾಗಿಲ್ಲ. ನಮ್ಮ ರಾಜ್ಯದ ಸಂಸದರು ರಾಜ್ಯದ ಹಿತಕ್ಕಾಗಿ ಸಂಸತ್ ನಲ್ಲಿ ಎಂದಿಗೂ ಮಾತನಾಡುವುದಿಲ್ಲ. ಆದರೆ, ನಾನು ರಾಜ್ಯದ ಪರವಾಗಿ ಏಕಾಂಗಿಯಾಗಿ ಹೋರಾಟ ಮಾಡಿದ್ದೇನೆ. ಕಾವೇರಿ ವಿಚಾರದಲ್ಲಿ ಕಾಂಗ್ರೆಸ್, ಬಿಜೆಪಿ ನಾಯಕರು ಯಾರು ಸಹ ರಾಜ್ಯದ ಪರ ನಿಲ್ಲಲಿಲ್ಲ. ತಮಿಳು ಸಂಸದರು ಕೇಂದ್ರ ಸರ್ಕಾರವನ್ನು ಕಟ್ಟಿಹಾಕಿದ್ದರು. ಬಿಜೆಪಿಯ ದಿವಂಗತ ಅನಂತ್ ಕುಮಾರ್ ಸಹ ನನ್ನ ಜೊತೆ ನಿಲ್ಲಲಿಲ್ಲ. ಕಾವೇರಿ ಸೇರಿದಂತೆ ಇಗ್ಗಲೂರು ಜಲಾಶಯ ನಿರ್ಮಾಣಕ್ಕೂ ಸಹ ಯಾರು ಒಂದು ರುಪಾಯಿ ಕೊಟ್ಟಿಲ್ಲ. ಅದು ರೈತರು ಬೆವರು ಸುರಿಸಿ ಕೊಟ್ಟ ಹಣದಲ್ಲಿ ಡ್ಯಾಂ ಕಟ್ಟಿದ್ದೇನೆ. ಈ ಕಾರಣದಿಂದ ಪ್ರಾದೇಶಿಕ ಪಕ್ಷವನ್ನು ಕೈಹಿಡಿದು, ರಾಷ್ಟ್ರೀಯ ಪಕ್ಷಗಳನ್ನು ತಿರಸ್ಕರಿಸಿ ಎಂದು ಕರೆ ನೀಡಿದರು.
*ಅದ್ದೂರಿ ಸ್ವಾಗತ:*
ಹೆಲಿಕಾಪ್ಟರ್ ಮೂಲಕ ತಾಲೂಕಿನ ಗಡಿಭಾಗ ಇಗ್ಗಲೂರು ಗ್ರಾಮಕ್ಕೆ ಆಗಮಿಸಿದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ಪಕ್ಷದ ಕಾರ್ಯಕರ್ತರು ಅದ್ದೂರಿ ಸ್ವಾಗತ ಕೋರಿದರು. ಸಮಾವೇಶಕ್ಕೂ ಮುನ್ನ ತಮ್ಮದೇ ಕೊಡುಗೆಯಾದ ಎಚ್.ಡಿ.ದೇವೇಗೌಡ ಬ್ಯಾರೇಜ್ ನ್ನು ವೀಕ್ಷಿಸಿದರು. ವೇದಿಕೆ ಏರುತ್ತಿದಂತೆ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ತಾಲೂಕು ಅಧ್ಯಕ್ಷ ಎಚ್.ಸಿ.ಜಯಮುತ್ತು ಸೇರಿದಂತೆ ಹಲವು ಮುಖಂಡರು ಇಗ್ಗಲೂರು ಬ್ಯಾರೇಜ್ ನಿರ್ಮಾಣ ಸೇರಿದಂತೆ ಈ ಭಾಗಕ್ಕೆ ದೇವೇಗೌಡರ ಕೊಡುಗೆಯನ್ನು ನೆನಪು ಮಾಡಿಕೊಂಡರು.
ಈ ವೇಳೆ ಮಾಜಿ ಶಾಸಕ ಎಂ.ಸಿ. ಅಶ್ವಥ್, ತಾಲೂಕು ಜೆಡಿಎಸ್ ಅಧ್ಯಕ್ಷ ಎಂ.ಸಿ.ಕರಿಯಯ, ಮುಖಂಡರಾದ ಹಾಪ್ ಕಾಮ್ಸ್ ದೇವರಾಜು, ಕುಕ್ಕೂರುದೊಡ್ಡಿ ಜಯರಾಂ, ಗೋವಿಂದಹಳ್ಳಿ ನಾಗರಾಜು, ಗರಕಹಳ್ಳಿ ಕೃಷ್ಟೇಗೌಡ, ಇ.ತಿ.ಶ್ರೀನಿವಾಸ್, ಡಿಎಂಕೆ ಕುಮಾರ್, ಯಾಲಕ್ಕಿಗೌಡ, ರೇಖಾಉಮಾಶಂಕರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಗೋ ರಾ ಶ್ರೀನಿವಾಸ...
ಮೊ:9845856139.
Recent news in karnataka »

ಶ್ರೇಯಸ್ ಪಬ್ಲಿಕ್ ಸ್ಕೂಲ್ ನೋಂದಣಿ ರದ್ದತಿಗೆ ಉಚ್ಛ ನ್ಯಾಯಾಲಯದಿಂದ ತಡೆಯಾಜ್ಞೆ
ರಾಮನಗರ,: ಶ್ರೀ ಸಿದ್ದೇಶ್ವರ ಎಜುಕೇಷನಲ್ ಟ್ರಸ್ಟ್ (ರಿ) ನಂ 18 ಶಿವಾನಂದನಗರ, ಜರಗನಹಳ್ಳಿ ಬಡಾವಣೆ ಜೆ.ಪಿ ನಗರ 6ನೇ ಹಂತ ಬೆಂಗಳೂರು 560078, ಆಡಳಿತ ಮಡಳ

ಮತದಾನ ಪ್ರಮಾಣ ಹೆಚ್ಚಳಕ್ಕೆ ವಿನೂತನ ತಂತ್ರ! ಮಾಡಲಗಿತ್ತು ಜಿಪಂ ಸಿಇಓ
ರಾಮನಗರ: ಪ್ರಜಾತಂತ್ರ ಹಬ್ಬದಲ್ಲಿ ಪ್ರತಿಯೊಬ್ಬರೂ ಭಾಗವಹಿಸುವಂತೆ ಮಾಡುವ ಉದ್ದೇಶದಿಂದ ವ್ಯವಸ್ಥಿತ ಮತದಾರರ ಶಿಕ್ಷಣ ಮತ್ತು ಚುನಾವಣಾ ಭಾಗವಹಿಸುವಿಕೆ (ಎಸ್ವ

ಬಡವರ, ರೈತರ ಕಣ್ಣೀರು ಒರೆಸುವ ಏಕೈಕ ನಾಯಕ ಕುಮಾರಸ್ವಾಮಿ. ಹೆಚ್ ಡಿ ದೇವೇಗೌಡ
ಚನ್ನಪಟ್ಟಣ: ಇಡೀ ಭಾರತ ದೇಶದಲ್ಲಿ, ಬಡವರ ಮತ್ತು ರೈತರ ಕಣ್ಣೀರು ಒರೆಸುವ ನಾಯಕನಿದ್ದರೆ ಅದು ಕುಮಾರಸ್ವಾಮಿ ಮಾತ್ರ. ನುಡಿದಂತೆ ನಡೆಯುವ ರಾಜಕಾರಣ

ಬೊಂಬೆನಾಡಿನಲ್ಲಿ ಗುಡುಗಿದ ನಮೋ
ಅಂದಿನ ಕಾಂಗ್ರೆಸ್, ಇಂದಿನ ಜೆಡಿಎಸ್ ಭದ್ರಕೋಟೆಯಾದ ಬೊಂಬೆನಾಡಿನಲ್ಲಿ ನರೇಂದ್ರ ಮೋದಿ ಅಬ್ಬರ. ಕಾಂಗ್ರೆಸ್ ಜೆಡಿಎಸ್ ಒಂದೇ ಮುಖದ ಎರಡು ನಾಣ್ಯಗಳು. ನೀವು ಜೆಡಿಎಸ್ ಗೆ ಮತ ನೀಡಿದರೆ ಕಾಂಗ್ರೆಸ್ ಗೆ ನೀಡಿದ

ಜೆಡಿಎಸ್, ಬಿಜೆಪಿ ಪಕ್ಷಗಳಂತೆ ಸಹಸ್ರಾರು ಕಾರ್ಯಕರ್ತರ ಜೊತೆಯಲ್ಲಿ ಬಂದು ನಾಮಪತ್ರ ಸಲ್ಲಿಸಿದ ಕಾಂಗ್ರೆಸ್ ಅಭ್ಯರ್ಥಿ
ಚನ್ನಪಟ್ಟಣ:ಏ:20- ಇತ್ತೀಚೆಗೆ ಜೆಡಿಎಸ್ ಪಕ್ಷದ ಅಭ್ಯರ್ಥಿ ಹೆಚ್ ಡಿ ಕುಮಾರಸ್ವಾಮಿ ಹಾಗೂ ಬಿಜೆಪಿ ಪಕ್ಷದ ಅಭ್ಯರ್ಥಿ ಸಿ ಪಿ ಯೋಗೇಶ್ವರ್ ರವರು ಸಹಸ್ರಾರು ಸಂ

ಶಾಂತಿಯುತ ಮತದಾನ ನಡೆಸಲು ಅಧಿಕಾರಿಗಳು ಕ್ರಮವಹಿಸಿ : ಚುನಾವಣಾ ವೀಕ್ಷಕರು
ರಾಮನಗರ, ಏ. 20: ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023 ರ ಹಿನ್ನೆಲೆಯಲ್ಲಿ ರಾಮನಗರ ಜಿಲ್ಲೆಗೆ ನಿಯೋಜನೆಗೊಂಡಿರುವ ಚುನಾವಣಾ ವೆಚ್ಚ ಹಾಗೂ ಸಾಮಾನ್ಯ ವೀಕ್ಷ

ತೀರ್ಥ ಕ್ಷೇತ್ರಗಳಲ್ಲಿ ಭಕ್ತಿ ಹೆಸರಿನಲ್ಲಿ ಗಲೀಜು ಮಾಡಬೇಡಿ, ಕಿತ್ತೂರು ರಾಣಿ ಚೆನ್ನಮ್ಮ ಶೌರ್ಯ ಪ್ರಶಸ್ತಿ ವಿಜೇತೆ ಮನವಿ
ಮಂಡ್ಯ: ಮದ್ದೂರು; ತಮ್ಮ ಕಷ್ಟಗಳನ್ನು ಪರಿಹರಿಸು ದೇವರೇ ಎಂದು ಭಕ್ತರು ಹಲವಾರು ತೀರ್ಥ ಕ್ಷೇತ್ರಗಳಿಗೆ ಭೇಟಿ ನೀಡುತ್ತಾರೆ. ವಿಶೇಷವಾಗಿ ನದಿಗಳು,

ಜನ್ಮದಾತೆಯನ್ನೇ ಹೊರದಬ್ಬಿದ ಪುತ್ರಿ. ನ್ಯಾಯ ಕೊಡಿಸಿದ ರಜನಿರಾಜ್
ಮಂಡ್ಯ: ಮದುವೆಯ ನಂತರ ಪತಿಯನ್ನೂ ಕಳೆದುಕೊಂಡು, ಮಗಳು, ಅಳಿಯನ ಜೊತೆ ತನ್ನ ಮನೆಯಲ್ಲಿಯೇ ವಾಸ ಮಾಡುತ್ತಿದ್ದ ವೃದ್ದೆಗೆ ತನ್ನ ಮಗಳು ಮತ್ತು ಅಳಿಯ

ಬೆಂಗಳೂರಿನ ಗಾಯನ ಸಮಾಜದಲ್ಲಿ ಕುಮಾರಿ ಸೌರಭ ರವರ ರಂಗ ಪ್ರವೇಶ
ಬೆಂಗಳೂರು: ಸತತ ಹದಿಮೂರು ವರ್ಷಗಳ ಕಾಲ ವಿದುಷಿ ನಿವೇದಿತಾ ಶರ್ಮಾ ನಾಡಿಗ್ ರವರ ಬಳಿ ಭರತನಾಟ್ಯ ಕಲಿತು ಪರೀಕ್ಷೆಗಳನ್ನು ಬರೆದು ಉತ್ತೀರ್ಣರಾದ ಕುಮಾರಿ ಸೌರಭ

ನಿಡಘಟ್ಟ ಗ್ರಾಮದ ಅಣ್ಣೇಗೌಡ ರ ಗೂಡಿನಲ್ಲಿ ಮಧ್ಯತಿರುಮಲ ದೇವಾಲಯಕ್ಕೆ ಸಪ್ತ ದಿನಗಳ ಪೂಜೆ
ಮದ್ದೂರು: ನಿಡಘಟ್ಟ; ತಿರುಮಲ ದೇವಾಲಯ ಎಂದರೆ ಅದು ದೂರದ ತಿರುಪತಿ, ಶ್ರೀ ಶ್ರೀನಿವಾಸ ದೇವರು ನೆಲೆಸಿರುವ ತಿರುಪತಿ ಎಂದಷ್ಟೇ ಭಕ್ತರು ತಿಳಿದುಕೊಂಡಿದ್ದಂತೂ
ಪ್ರತಿಕ್ರಿಯೆಗಳು