Tel: 7676775624 | Mail: info@yellowandred.in

Language: EN KAN

    Follow us :


ಮತದಾನ ಪ್ರಮಾಣ ಹೆಚ್ಚಳಕ್ಕೆ ವಿನೂತನ ತಂತ್ರ! ಮಾಡಲಗಿತ್ತು ಜಿಪಂ ಸಿಇಓ

Posted date: 12 May, 2023

Powered by:     Yellow and Red

ಮತದಾನ ಪ್ರಮಾಣ ಹೆಚ್ಚಳಕ್ಕೆ ವಿನೂತನ ತಂತ್ರ! ಮಾಡಲಗಿತ್ತು ಜಿಪಂ ಸಿಇಓ

ರಾಮನಗರ: ಪ್ರಜಾತಂತ್ರ ಹಬ್ಬದಲ್ಲಿ ಪ್ರತಿಯೊಬ್ಬರೂ ಭಾಗವಹಿಸುವಂತೆ ಮಾಡುವ ಉದ್ದೇಶದಿಂದ ವ್ಯವಸ್ಥಿತ ಮತದಾರರ ಶಿಕ್ಷಣ ಮತ್ತು ಚುನಾವಣಾ ಭಾಗವಹಿಸುವಿಕೆ (ಎಸ್ವಿಇಇಪಿ) ಸಮಿತಿ ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಂಡ ಫಲವಾಗಿ ರಾಮನಗರ ಜಿಲ್ಲೆಯಲ್ಲಿ ಮತದಾನ ಪ್ರಮಾಣ ಶೇ. 85.04 ದಾಟಿದೆ.

ಈ ನಡುವೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅತ್ಯಂತ ಕಡಿಮೆ ಮತದಾನ ದಾಖಲಾದ ಮತಗಟ್ಟೆಗಳ ಮಾಹಿತಿ ಪಡೆದ ಸಮಿತಿಯ ಅಧಿಕಾರಿಗಳು, ಅದೇ ಭಾಗದಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. 

ಅದರಂತೆ ಬೂತ್ ಹಂತದಲ್ಲಿ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಮತದಾನ ಮಹತ್ವವನ್ನು ಜನರಿಗೆ ತಿಳಿಸುವುದು ಹಾಗೂ ಆ ಮೂಲಕ ಮತದಾನ ಪ್ರಕ್ರಿಯೆಯಿಂದ ದೂರ ಉಳಿಯದಂತೆ ಅರಿವು ಮೂಡಿಸಲಾಯಿತು.


2013 ಹಾಗೂ 2018ರ ವಿಧಾನ ಸಭಾ ಚುನಾವಣೆಯಲ್ಲೂ ಶೇ.80 ಕ್ಕೂ ಅಧಿಕ ಮತದಾನ ದಾಖಲಾಗಿತ್ತು, ಈ ಬಾರಿಯ ಪ್ರಜಾ ಪ್ರಭುತ್ವ ಹಬ್ಬದಲ್ಲಿ ಹಿರಿಯ ಹಾಗೂ ಕಿರಿಯ ಮತದಾರರು ಉತ್ಸಾಹದಿಂದ ಭಾಗಿಯಾದರು. ನಡೆಯಲು ಸಾಧ್ಯವಾಗದ ವಯೋವೃದ್ಧರು, ಅಂಗವಿಕಲರು ತಮ್ಮ ಜವಾಬ್ದಾರಿ ಮರೆಯಲಿಲ್ಲ. ಇವರಿಗೆ ಮನೆಯಲ್ಲಿಯೇ ಮತದಾನ ಮಾಡುವ ಅವಕಾಶ ಇದ್ದರೂ ಹೆಚ್ಚಿನವರು ಮತಗಟ್ಟೆಗೆ ಬಂದು ತಮ್ಮ ಹಕ್ಕು ಚಲಾಯಿಸಿದ್ದಾರೆ. 

ಇದಕ್ಕೆ ಪ್ರೇರಣೆ ನೀಡುವಂತೆ ಜಿಲ್ಲೆಯ ವಿವಿದೆಡೆ  ಮತಗಟ್ಟೆಗಳನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಸಖಿ ಮತಗಟ್ಟೆಗಳು ಅಲ್ಲದೇ ವಿಕಲಚೇತನರ ಸ್ನೇಹಿ, ಯುವ ಮತದಾರ ಸ್ನೇಹಿ ಮತಗಟ್ಟೆ ಕೇಂದ್ರ ಸ್ಥಾಪಿಸಲಾಗಿತ್ತು. ಕಳೆದ ಚುನಾವಣೆಗಿಂತ ಈ ಬಾರಿ ಮತದಾರರ ಸಂಖ್ಯೆ ಹೆಚ್ಚಿತ್ತು. ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಪ್ರಯತ್ನದ ಜೊತೆಗೆ ಈ ಭಾಗದ ಮತದಾರರು ತಮ್ಮ ಜವಾಬ್ದಾರಿ ಮೆರೆದು ಹಕ್ಕು ಚಲಾಯಿಸಿದ್ದಾರೆ. ಅದಕ್ಕೆ ಮತದಾರರನ್ನು ಅಭಿನಂದಿಸುತ್ತೇನೆಂದು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ದಿಗ್ವಿಜಯ್ ಬೋಡ್ಕೆ ತಿಳಿಸಿದರು.


*ವಿನೂತನ ರೀತಿಯ ಜಾಗೃತಿ!*:

ಜಿಲ್ಲಾ, ತಾಲೂಕು, ಹೋಬಳಿ, ಗ್ರಾಮ ಪಂಚಾಯಿತಿ ಹಾಗೂ ಮತಗಟ್ಟೆ ಕೇಂದ್ರಗಳ ಹಂತಗಳಲ್ಲಿ ಸಾಕಷ್ಟು  ಸ್ವೀಪ್ ಕಾರ್ಯಕ್ರಮಗಳಾದ ರಂಗೋಲಿ ಸ್ಪರ್ಧೆಯನ್ನು ಸ್ವಸಹಾಯ ಸಂಘಗಳ, ಸ್ತ್ರೀ ಶಕ್ತಿ ಸಂಘಗಳ ಮಹಿಳೆಯರ ಮೂಲಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ವಿಶೇಷ ಚೇತನರ ಮತ್ತು ಹಿರಿಯ ನಾಗರೀಕರ  ಸಬಲೀಕರಣ ಇಲಾಖೆಯ ಸಹ ಭಾಗಿತ್ವದಲ್ಲಿ 100 ಕ್ಕೂ ಹೆಚ್ಚು ವಿಶೇಷಚೇತನರು ತಮ್ಮ ತ್ರಿಚಕ್ರ ವಾಹನದಲ್ಲಿ ನಗರಗಳ ಪ್ರತಿಷ್ಟಿತ ರಸ್ತೆಗಳಲ್ಲಿ ಜಾಥಾ ಮಾಡುವ ಮೂಲಕ ಮತದಾರರಲ್ಲಿ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಇವಿಎಂ ವಿವಿಪ್ಯಾಟ್ ಡೆಮೋ ನಡೆಸುವ ಮೂಲಕ,  ಸೆಲ್ಫಿ ಸ್ಟ್ಯಾಂಡ್,  ಪಂಜಿನ ಮೆರವಣಿಗೆ, ಕಾಲೇಜು ವಿದ್ಯಾರ್ಥಿಗಳ ಮೂಲಕ ಮೆರವಣಿಗೆ, ಸರ್ಕಾರಿ ಅಧಿಕಾರಿ ಸಿಬ್ಬಂದಿಗಳು ಹಾಗೂ ಸಾರ್ವಜನಿಕರಲ್ಲಿ ಮತದಾನದ ಪ್ರತಿಜ್ಞಾ ವಿಧಿ ಸ್ವೀಕಾರ, ಬೈಕ್ ಜಾಥಾ ಸೇರಿದಂತೆ ಇತರೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮತದಾರರಲ್ಲಿ ಮತದಾನದ ಕುರಿತು ಅರಿವು/ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.


*ನಮ್ಮ ನಡೆ ಮತಗಟ್ಟೆಯ ಕಡೆ ಅಭಿಯಾನ:*

ಮತದಾನದ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನಮ್ಮ ಮತ, ನಮ್ಮ ಭವಿಷ್ಯ ಘೋಷಣೆಯಿರುವಂತಹ ಸ್ಟಿಕ್ಕರ್ ಅಂಟಿಸಲು ಯೋಜನೆ ರೂಪಿಸಿದ್ದು, ಸ್ವಚ್ಛ ವಾಹಿನಿಗಳ ಮೂಲಕ ಜಾಗೃತಿ ಮೂಡಿಸುವುದು, ಬೂತ್ ಮಟ್ಟದಲ್ಲಿ ಜಾಥಾ, ಕ್ಯಾಂಡಲ್ ನಡಿಗೆ, ಬೀದಿ ನಾಟಕ ಸೇರಿದಂತೆ ಇತರೆ ಕಾರ್ಯಕ್ರಮಗಳನ್ನು ನಡೆಸಲಾಯಿತು.


*ಜಿಲ್ಲೆಯಾದ್ಯಂತ ಮೂರು ತಿಂಗಳಿನಿಂದ ವಿನೂತನ ಚಟುವಟಿಕೆಗಳ ಮೂಲಕ ಮತದಾನ ಜಾಗೃತಿ ಮೂಡಿಸಲಾಗಿದೆ, ಕಳೆದ ಚುನಾವಣೆಯಲ್ಲಿ ಕಡಿಮೆ ಮತದಾನವಾದ ಬೂತ್ ಗಳಲ್ಲಿ ವಿಭಿನ್ನ ಪ್ರಯೋಗ ನಡೆಸಿದ್ದೆವು, ವಿವಿಧ  ಜಾಗೃತಿ ಕಾರ್ಯಕ್ರಮಗಳಿಗೆ ಆದ್ಯತೆ ನೀಡಿ ಮತದಾನದ ಅರಿವು ಮೂಡಿಸಲಾಯಿತು. ಕಳೆದ ಚುನಾವಣೆಗಿಂತ ಈ ಬಾರಿ ಮತದಾರರ ಸಂಖ್ಯೆ ಹೆಚ್ಚಿತ್ತು. ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಪ್ರಯತ್ನದ ಜೊತೆಗೆ ಈ ಭಾಗದ ಮತದಾರರು ತಮ್ಮ ಜವಾಬ್ದಾರಿ ಮೆರೆದು ಹಕ್ಕು ಚಲಾಯಿಸಿದ್ದಾರೆ. ಅದಕ್ಕೆ ಮತದಾರರನ್ನು ಅಭಿನಂದಿಸುತ್ತೇನೆ.*

*- ದಿಗ್ವಿಜಯ್ ಬೋಡ್ಕೆ,* 

ಅಧ್ಯಕ್ಷರು ಜಿಲ್ಲಾ  ಸ್ವೀಪ್ ಸಮಿತಿ ಹಾಗೂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತ್, ರಾಮನಗರ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in karnataka »

ಶ್ರೇಯಸ್ ಪಬ್ಲಿಕ್ ಸ್ಕೂಲ್ ನೋಂದಣಿ ರದ್ದತಿಗೆ ಉಚ್ಛ ನ್ಯಾಯಾಲಯದಿಂದ ತಡೆಯಾಜ್ಞೆ
ಶ್ರೇಯಸ್ ಪಬ್ಲಿಕ್ ಸ್ಕೂಲ್ ನೋಂದಣಿ ರದ್ದತಿಗೆ ಉಚ್ಛ ನ್ಯಾಯಾಲಯದಿಂದ ತಡೆಯಾಜ್ಞೆ

ರಾಮನಗರ,:  ಶ್ರೀ ಸಿದ್ದೇಶ್ವರ ಎಜುಕೇಷನಲ್ ಟ್ರಸ್ಟ್ (ರಿ) ನಂ 18 ಶಿವಾನಂದನಗರ, ಜರಗನಹಳ್ಳಿ ಬಡಾವಣೆ ಜೆ.ಪಿ ನಗರ 6ನೇ ಹಂತ ಬೆಂಗಳೂರು 560078, ಆಡಳಿತ ಮಡಳ

ಮತದಾನ ಪ್ರಮಾಣ ಹೆಚ್ಚಳಕ್ಕೆ ವಿನೂತನ ತಂತ್ರ! ಮಾಡಲಗಿತ್ತು ಜಿಪಂ ಸಿಇಓ
ಮತದಾನ ಪ್ರಮಾಣ ಹೆಚ್ಚಳಕ್ಕೆ ವಿನೂತನ ತಂತ್ರ! ಮಾಡಲಗಿತ್ತು ಜಿಪಂ ಸಿಇಓ

ರಾಮನಗರ: ಪ್ರಜಾತಂತ್ರ ಹಬ್ಬದಲ್ಲಿ ಪ್ರತಿಯೊಬ್ಬರೂ ಭಾಗವಹಿಸುವಂತೆ ಮಾಡುವ ಉದ್ದೇಶದಿಂದ ವ್ಯವಸ್ಥಿತ ಮತದಾರರ ಶಿಕ್ಷಣ ಮತ್ತು ಚುನಾವಣಾ ಭಾಗವಹಿಸುವಿಕೆ (ಎಸ್ವ

ಬಡವರ, ರೈತರ ಕಣ್ಣೀರು ಒರೆಸುವ ಏಕೈಕ ನಾಯಕ ಕುಮಾರಸ್ವಾಮಿ. ಹೆಚ್ ಡಿ ದೇವೇಗೌಡ
ಬಡವರ, ರೈತರ ಕಣ್ಣೀರು ಒರೆಸುವ ಏಕೈಕ ನಾಯಕ ಕುಮಾರಸ್ವಾಮಿ. ಹೆಚ್ ಡಿ ದೇವೇಗೌಡ

ಚನ್ನಪಟ್ಟಣ: ಇಡೀ ಭಾರತ ದೇಶದಲ್ಲಿ, ಬಡವರ ಮತ್ತು ರೈತರ ಕಣ್ಣೀರು ಒರೆಸುವ ನಾಯಕನಿದ್ದರೆ ಅದು ಕುಮಾರಸ್ವಾಮಿ ಮಾತ್ರ. ನುಡಿದಂತೆ ನಡೆಯುವ ರಾಜಕಾರಣ

ಬೊಂಬೆನಾಡಿನಲ್ಲಿ ಗುಡುಗಿದ ನಮೋ
ಬೊಂಬೆನಾಡಿನಲ್ಲಿ ಗುಡುಗಿದ ನಮೋ

ಅಂದಿನ ಕಾಂಗ್ರೆಸ್, ಇಂದಿನ ಜೆಡಿಎಸ್ ಭದ್ರಕೋಟೆಯಾದ ಬೊಂಬೆನಾಡಿನಲ್ಲಿ ನರೇಂದ್ರ ಮೋದಿ ಅಬ್ಬರ. ಕಾಂಗ್ರೆಸ್ ಜೆಡಿಎಸ್ ಒಂದೇ ಮುಖದ ಎರಡು ನಾಣ್ಯಗಳು. ನೀವು ಜೆಡಿಎಸ್ ಗೆ ಮತ ನೀಡಿದರೆ ಕಾಂಗ್ರೆಸ್ ಗೆ ನೀಡಿದ

ಜೆಡಿಎಸ್, ಬಿಜೆಪಿ ಪಕ್ಷಗಳಂತೆ ಸಹಸ್ರಾರು ಕಾರ್ಯಕರ್ತರ ಜೊತೆಯಲ್ಲಿ ಬಂದು ನಾಮಪತ್ರ ಸಲ್ಲಿಸಿದ ಕಾಂಗ್ರೆಸ್ ಅಭ್ಯರ್ಥಿ
ಜೆಡಿಎಸ್, ಬಿಜೆಪಿ ಪಕ್ಷಗಳಂತೆ ಸಹಸ್ರಾರು ಕಾರ್ಯಕರ್ತರ ಜೊತೆಯಲ್ಲಿ ಬಂದು ನಾಮಪತ್ರ ಸಲ್ಲಿಸಿದ ಕಾಂಗ್ರೆಸ್ ಅಭ್ಯರ್ಥಿ

ಚನ್ನಪಟ್ಟಣ:ಏ:20- ಇತ್ತೀಚೆಗೆ ಜೆಡಿಎಸ್ ಪಕ್ಷದ ಅಭ್ಯರ್ಥಿ ಹೆಚ್ ಡಿ ಕುಮಾರಸ್ವಾಮಿ ಹಾಗೂ ಬಿಜೆಪಿ ಪಕ್ಷದ ಅಭ್ಯರ್ಥಿ ಸಿ ಪಿ ಯೋಗೇಶ್ವರ್ ರವರು ಸಹಸ್ರಾರು ಸಂ

ಶಾಂತಿಯುತ ಮತದಾನ ನಡೆಸಲು ಅಧಿಕಾರಿಗಳು ಕ್ರಮವಹಿಸಿ : ಚುನಾವಣಾ ವೀಕ್ಷಕರು
ಶಾಂತಿಯುತ ಮತದಾನ ನಡೆಸಲು ಅಧಿಕಾರಿಗಳು ಕ್ರಮವಹಿಸಿ : ಚುನಾವಣಾ ವೀಕ್ಷಕರು

ರಾಮನಗರ, ಏ. 20: ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023 ರ ಹಿನ್ನೆಲೆಯಲ್ಲಿ ರಾಮನಗರ ಜಿಲ್ಲೆಗೆ ನಿಯೋಜನೆಗೊಂಡಿರುವ ಚುನಾವಣಾ ವೆಚ್ಚ ಹಾಗೂ ಸಾಮಾನ್ಯ ವೀಕ್ಷ

ತೀರ್ಥ ಕ್ಷೇತ್ರಗಳಲ್ಲಿ ಭಕ್ತಿ ಹೆಸರಿನಲ್ಲಿ ಗಲೀಜು ಮಾಡಬೇಡಿ, ಕಿತ್ತೂರು ರಾಣಿ ಚೆನ್ನಮ್ಮ ಶೌರ್ಯ ಪ್ರಶಸ್ತಿ ವಿಜೇತೆ ಮನವಿ
ತೀರ್ಥ ಕ್ಷೇತ್ರಗಳಲ್ಲಿ ಭಕ್ತಿ ಹೆಸರಿನಲ್ಲಿ ಗಲೀಜು ಮಾಡಬೇಡಿ, ಕಿತ್ತೂರು ರಾಣಿ ಚೆನ್ನಮ್ಮ ಶೌರ್ಯ ಪ್ರಶಸ್ತಿ ವಿಜೇತೆ ಮನವಿ

ಮಂಡ್ಯ: ಮದ್ದೂರು; ತಮ್ಮ ಕಷ್ಟಗಳನ್ನು ಪರಿಹರಿಸು ದೇವರೇ ಎಂದು ಭಕ್ತರು ಹಲವಾರು ತೀರ್ಥ ಕ್ಷೇತ್ರಗಳಿಗೆ ಭೇಟಿ ನೀಡುತ್ತಾರೆ. ವಿಶೇಷವಾಗಿ ನದಿಗಳು,

ಜನ್ಮದಾತೆಯನ್ನೇ ಹೊರದಬ್ಬಿದ ಪುತ್ರಿ. ನ್ಯಾಯ ಕೊಡಿಸಿದ ರಜನಿರಾಜ್
ಜನ್ಮದಾತೆಯನ್ನೇ ಹೊರದಬ್ಬಿದ ಪುತ್ರಿ. ನ್ಯಾಯ ಕೊಡಿಸಿದ ರಜನಿರಾಜ್

ಮಂಡ್ಯ: ಮದುವೆಯ ನಂತರ ಪತಿಯನ್ನೂ ಕಳೆದುಕೊಂಡು, ಮಗಳು, ಅಳಿಯನ ಜೊತೆ ತನ್ನ ಮನೆಯಲ್ಲಿಯೇ ವಾಸ ಮಾಡುತ್ತಿದ್ದ ವೃದ್ದೆಗೆ ತನ್ನ ಮಗಳು ಮತ್ತು ಅಳಿಯ

ಬೆಂಗಳೂರಿನ ಗಾಯನ ಸಮಾಜದಲ್ಲಿ ಕುಮಾರಿ ಸೌರಭ ರವರ ರಂಗ ಪ್ರವೇಶ
ಬೆಂಗಳೂರಿನ ಗಾಯನ ಸಮಾಜದಲ್ಲಿ ಕುಮಾರಿ ಸೌರಭ ರವರ ರಂಗ ಪ್ರವೇಶ

ಬೆಂಗಳೂರು: ಸತತ ಹದಿಮೂರು ವರ್ಷಗಳ ಕಾಲ ವಿದುಷಿ ನಿವೇದಿತಾ ಶರ್ಮಾ ನಾಡಿಗ್ ರವರ ಬಳಿ ಭರತನಾಟ್ಯ ಕಲಿತು ಪರೀಕ್ಷೆಗಳನ್ನು ಬರೆದು ಉತ್ತೀರ್ಣರಾದ ಕುಮಾರಿ ಸೌರಭ

ನಿಡಘಟ್ಟ ಗ್ರಾಮದ ಅಣ್ಣೇಗೌಡ ರ ಗೂಡಿನಲ್ಲಿ ಮಧ್ಯತಿರುಮಲ ದೇವಾಲಯಕ್ಕೆ ಸಪ್ತ ದಿನಗಳ ಪೂಜೆ
ನಿಡಘಟ್ಟ ಗ್ರಾಮದ ಅಣ್ಣೇಗೌಡ ರ ಗೂಡಿನಲ್ಲಿ ಮಧ್ಯತಿರುಮಲ ದೇವಾಲಯಕ್ಕೆ ಸಪ್ತ ದಿನಗಳ ಪೂಜೆ

ಮದ್ದೂರು: ನಿಡಘಟ್ಟ; ತಿರುಮಲ ದೇವಾಲಯ ಎಂದರೆ ಅದು ದೂರದ ತಿರುಪತಿ, ಶ್ರೀ ಶ್ರೀನಿವಾಸ ದೇವರು ನೆಲೆಸಿರುವ ತಿರುಪತಿ ಎಂದಷ್ಟೇ ಭಕ್ತರು ತಿಳಿದುಕೊಂಡಿದ್ದಂತೂ

Top Stories »  


Top ↑