ಬೆಂಮೈ ಹೆದ್ದಾರಿಯ ಕೋಲೂರು ಗೇಟ್ ಬಳಿ ಅಪಘಾತ ಇಬ್ಬರ ಸಾವು

ಚನ್ನಪಟ್ಟಣ: ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಭಾನುವಾರ ಮಧ್ಯಾಹ್ನ ವೇಗವಾಗಿ ಹೋಗುತ್ತಿದ್ದ ಇಂಡಿಕಾ ಕಾರು ಚಾಲಕನ ನಿಯಂತ್ರಣ ತಪ್ಪಿದ್ದು, ಡಿವೈಡರ್‌ಗೆ ಗುದ್ದಿ ಪಲ್ಟಿಯಾಗಿದ್ದು, ಈ ದುರ್ಘಟನೆಯಲ್ಲಿ ಕಾರಿನ ಚಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಕಾರಿನಲ್ಲಿದ್ದ ಮೂವರಲ್ಲಿ ಇಬ್ಬರಿಗೆ ಗಂಭೀರ ಗಾಯವಾಗಿದ್ದು, ಕೋಡಂಬಳ್ಳಿ ನಿವಾಸಿ ವಿನಯ್ (೨೪) ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದಾನೆ. ಉಳಿದ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮದ್ದೂರು ತಾಲೂಕಿನ ಬೆಸಗರಹಳ್ಳಿ ಗ್ರಾಮದಿಂದ ರಾಮನಗರದ ಕಡೆಗೆ ಇಂಡಿಕಾ ಕಾರಿನಲ್ಲಿ ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುತ್ತಿದ್ದ ನಾಲ್ವರಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಈ ಅವಘಡ ಸಂಭವಿಸಿದೆ.
*ಚಾಮುಂಡೇಶ್ವರಿ ಆಸ್ಪತ್ರೆಗೆ ಗಾಯಾಳುಗಳ ದಾಖಲು:* ಮೃತ ಕಾರು ಚಾಲಕನನ್ನು ರಾಮನಗರ ಮೂಲದ ಮಂಜೇಶ್ (28) ಎಂದು ಗುರುತಿಸಲಾಗಿದೆ. ಚನ್ನಪಟ್ಟಣ ತಾಲೂಕಿನ ಕೋಲೂರು ಗೇಟ್ ಬಳಿಯ ಚಾಮುಂಡೇಶ್ವರಿ ಆಸ್ಪತ್ರೆ ಮುಂಭಾಗ ಘಟನೆ ನಡೆದಿದೆ. ರಾಮನಗರದ ಕಡೆಗೆ ಬರುತ್ತಿದ್ದ ಕಾರು ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿ ಹೊಡೆದಿದೆ. ಈ ಡಿಕ್ಕಿ ರಭಸಕ್ಕೆ ಸ್ಥಳದಲ್ಲೇ ಚಾಲಕ ಮೃತನಾಗಿದ್ದು ರಸ್ತೆಯ ತುಂಬೆಲ್ಲಾ ರಕ್ತ ಚಲ್ಲಾಡಿತ್ತು. ಗಾಯಾಳುಗಳು ಚಾಮುಂಡೇಶ್ವರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಚನ್ನಪಟ್ಟಣ ಗ್ರಾಮಾಂತರ, ಪುರ ಹಾಗೂ ಸಂಚಾರಿ ಪೊಲೀಸರು ಭೇಟಿ ಮಾಡಿದ್ದು, ಸ್ಥಳ ಪರಿಶೀಲನೆ ಮಾಡಿದ್ದಾರೆ.
*ನಜ್ಜುಗುಜ್ಜಾಗಿ 50 ಮೀಟರ್ ಉರುಳಿ ಹೋದ ಕಾರು:*
ಇನ್ನು ಕಾರು ವೇಗವಾಗಿ ಚಾಲನೆಯಲ್ಲಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿದ ಕೂಡಲೇ ಡಿವೈಡರ್‌ಗೆ ಡಿಕ್ಕಿ ಹೊಡೆದು ಮುಂಭಾಗ ಸಂಪೂರ್ಣ ಜಖಂ ಆಗಿದೆ. ಆಗ ಕಾರಿನ ಮುಂಭಾಗದಲ್ಲಿದ್ದ ಚಾಲಕನಿಗೆ ಜೀವಹಾನಿಯಾಗಿದೆ. ಇನ್ನು ಡಿವೈಡರ್ ಡಿಕ್ಕಿ ಹೊಡೆದು ಪಲ್ಟಿ ಹೊಡೆದಿದ್ದರಿಂದ ಕಾರಿನ ಮೇಲ್ಭಾಗವೂ ಕೂಡ ನಜ್ಜುಗುಜ್ಜಾಗಿದೆ. ಇದರಿಂದ, ಕಾರಿನ ಹಿಂಬದಿ ಸೀಟಿನಲ್ಲಿದ್ದ ಇಬ್ಬರಿಗೂ ಗಂಭೀರ ಗಾಯಗಳಾಗಿವೆ ಎಂದು ಸ್ಥಳೀಯ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
*ಕೊನೇ ಕ್ಷಣದ ಮುನ್ನ ಜಾಲಿ ಮೂಡ್ ನಲ್ಲಿದ್ದ ಕುಚುಕುಗಳು;ವಿಡಿಯೋ ವೈರಲ್*
ಸಾಯುವ ಕೆಲ ನಿಮಿಷಗಳ ಮೊದಲು ನಾಲ್ಕು ಮಂದಿ ಸ್ನೇಹಿತರು ಕುಚುಕು, ಕುಚುಕು ಹಾಡು ಹಾಕಿಕೊಂಡು ಜಾಲಿ ಮೂಡ್ ನಲ್ಲಿ ಬರುತ್ತಿದ್ದ ದೃಶ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ರಾಮನಗರದ ವಿನಯ್, ವಿಜಯ್, ಮಂಜೇಶ್ ಮತ್ತು ನಿಖಿಲ್ ಕೆಲಸದ ನಿಮ್ಮಿತ್ತ ಮದ್ದೂರು ತಾಲೂಕಿನ ಬೆಸಗರಹಳ್ಳಿಗೆ ಹೋಗಿ ರಾಮನಗರಕ್ಕೆ ಹಿಂದಿರುಗುತ್ತಿದ್ದರು. ಹಿಂದಿರುಗುವಾಗ ಕುಚುಕ್ಕೂ ಹಾಡು ಹೇಳಿಕೊಂಡು ಬರುತ್ತಿದ್ದ ವಿಡಿಯೋ ಸಾಮಾಜಿ ಜಾಲತಾಣದಲ್ಲಿ ವೈರಲ್ ಆಗಿದೆ.
ಸಾವಿನಲ್ಲೂ ಜೊತೆಯಾದ ಕುಚುಕುಗಳು
ನಾಲ್ಕೂಮಂದಿ ಒಳ್ಳೆಯ ಸ್ನೇಹಿತರಾಗಿದ್ದು ಕುಚುಕು ಹಾಡು ಹಾಡು ಸಂದರ್ಭದಲ್ಲಿ ಚಾಲಕ ಮಂಜೇಶ್ ಭಾವನಾತ್ಮಕ ವಾಗಿದ್ದು ಈತನ ಪಕ್ಕ ಕುಳಿತಿದ್ದ ವಿನಯ್ ಸಮಾಧಾನ ಮಾಡಿದ ದೃಶ್ಯವಿದೆ. ಇನ್ನು ಇಬ್ಬರು ಕುಚುಕುಗಳು ಸಾವಿನಲ್ಲೂ ಜೊತೆಯಾಗಿರುವುದು ವಿಷಾದನೀಯ ವೆನಿದೆ.
ತೀವ್ರಗಾಯಗೊಂಡಿರುವ ವಿಜಯ್ ಮತ್ತು ನಿಖಿಲ್ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಕೊಡಿಸಲಾಗುತ್ತಿದೆ.
ಗೋ ರಾ ಶ್ರೀನಿವಾಸ...
ಮೊ:9845856139.
Recent news in karnataka »

ಸರ್ವಸಮ್ಮೇಳನಕ್ಕೂ ಮಾದರಿಯಾಗಿ ಯಶಸ್ವಿಯಾದ \'ಪರಿಸರಕ್ಕಾಗಿ ನಾವು\' ಸಮ್ಮೇಳನ
ಹಾಸನ: ಪ್ರಾಕೃತಿಕ ಸೌಂದರ್ಯವು ಇ-ತ್ಯಾಜ್ಯ, ಕೆಲ ತಂತ್ರಜ್ಞಾನ ಹಾಗೂ ಪ್ಲಾಸ್ಟಿಕ್ ನಿಂದ ಹಾಳಾಗುತ್ತಿದೆ. ಪರಿಸರ ನಾಶಕ್ಕೆ ಮುನ್ನುಡಿ ಬರೆದವನೇ

೫೨ ಲಕ್ಷಕ್ಕೂ ಹೆಚ್ಚು ಮೌಲ್ಯದ ಪಡಿತರ ಅಕ್ಕಿ ಗೋದಾಮಿನಲ್ಲೇ ಮಾಯ, ಅಧಿಕಾರಿಗಳಿಂದ ಪರಿಶೀಲನೆ, ವ್ಯವಸ್ಥಾಪಕನ ಬಂಧನ
ಚನ್ನಪಟ್ಟಣ: ತಾಲ್ಲೂಕಿನಾದ್ಯಂತ ಪಡಿತರ ನ್ಯಾಯಬೆಲೆ ಅಂಗಡಿಗಳಿಗೆ ವಿತರಿಸಲು ಪಡಿತರ ಅಕ್ಕಿಯ ಪೈಕಿ ಸುಮಾರು ೫೨ ಲಕ್ಷಕ್ಕೂ ಮೌಲ್ಯದ ೧,೫೪೩.೬೫ ಕ್ವಿಂಟಾಲ್ ಅ

ದಸರಾ ಎಂಬುದು ಮೈಸೂರಿಗಷ್ಟೇ ಸೀಮಿತವಾಗಬಾರದು, ಮನ-ಮನೆಯಲ್ಲೂ ದಸರಾ ಆಗಬೇಕು. ಡಾ ರೂಪಾ ಶ್ರೀಧರ್
ಚನ್ನಪಟ್ಟಣ: ದಸರಾ ಎಂದರೆ ಕೇವಲ ಮೈಸೂರು ಎಂಬಂತಾಗಿದೆ, ಇದು ನಾಡ ಹಬ್ಬ ಎಂಬುದು ಕೇವಲ ಉಲ್ಲೇಖಕ್ಕಷ್ಟೇ ಸೀಮಿತವಾಗಿದೆ. ಇದು ನಾಡಹಬ್ಬ ಎಂಬುದು ಸರ

ಒಕ್ಕಲಿಗರು ಸಂಸ್ಕೃತಿ ಹಿeನರಲ್ಲ ನೈಜ ಸಂಸ್ಕೃತಿಯ ಮಾಲೀಕರು, ಪ್ರೊ ಭಗವಾನ್ ಗೆ ತಿರುಗೇಟು ನೀಡಿದ ಹಿರಿಯ ರೈತ ಮುಖಂಡ ಸಿ ಪುಟ್ಟಸ್ವಾಮಿ
ರಾಮನಗರ: ಚನ್ನಪಟ್ಟಣ; ಪ್ರೊ ಭಗವಾನ್ ವಿಚಾರವಾದಿ, ಮೂಢನಂಬಿಕೆಗಳನ್ನು ಕಿತ್ತೊಗೆಯಲು, ಪುರಾಣ ಎಂಬುದು ಕಪೋಲ ಕಲ್ಪಿತ, ಇತಿಹಾಸ ಎಂಬುದು ಸಾರ್ವಕಾಲ

ಪ್ರತಿನಿತ್ಯ ನಗರ ಸ್ವಚ್ಚತೆ ಮಾಡುವ ಪೌರಕಾರ್ಮಿಕರು ಆರೋಗ್ಯದ ಕಡೆ ಗಮನ ನೀಡಬೇಕು, ರಮೇಶ್
ಚನ್ನಪಟ್ಟಣ: ಮನೆಮನೆಯ ಕಸ ಪಡೆದು, ವಿಂಗಡಿಸಿ ವಿಲೇವಾರಿ ಮಾಡುವ ಹಾಗೂ ಪ್ರತಿ ಮನೆಯ ಮುಂಭಾಗವು ಸ್ವಚ್ಚತೆ ಮಾಡಿ, ನಗರದ ಸ್ವಚ್ಛತೆ ಕಾಪಾಡುವ ನಿಟ್ಟಿನಲ

ಅಧಿಕಾರಕ್ಕಾಗಿ ಮೈತ್ರಿ ಅನಿವಾರ್ಯ ಸಿ ಪಿ ಯೋಗೇಶ್ವರ್
ರಾಮನಗರ:ಚನ್ನಪಟ್ಟಣ; ನನ್ನ ಕ್ಷೇತ್ರದ ಜನರಿಗಾಗಿ ನಾ

ಕಾವೇರಿ ಕಣಿವೆ ಬರಿದು, ತಮಿಳುನಾಡಿಗೆ ನೀರು ಬೇಡ, ರೈತ ಮಹಿಳೆಯರಿಂದ ಪ್ರತಿಭಟನೆ
ರಾಮನಗರ:ಚನ್ನಪಟ್ಟಣ; ಕರ್ನಾಟಕದ ಜನರಿಗೆ ಕುಡಿಯುವ ಹಾಗೂ ರೈತರ ಜಮೀನಿಗೆ ನೀರಿನ ಅಭಾವದ ನಡುವೆಯೂ ರಾಜ್ಯ ಸರ್ಕಾರ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರು

ಸಂಕ್ರಾಂತಿ ವೇಳೆಗೆ ಸರ್ಕಾರ ಪತನ: ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್.
ಚನ್ನಪಟ್ಟಣ:
ಈಗಿನ ಕಾಂಗ್ರೆಸ್ ಸರ್ಕಾರದಲ್ಲಿರುವ ಶಾಸಕರೇ ತಿರುಗಿ ಬೀಳಲಿದ್ದು, ಸಂಕ್ರಾಂತಿ ವೇಳೆಗೆ ಸೂರ್ಯ ತನ್ನ ಪಥ ಬದಲಿಸುವ ರೀತಿ, ರಾಜ್ಯ ರಾಜಕೀಯದ ಪಥವೂ ಬದಲಾವಣೆಯಾಗಲಿದೆ. ಶಾಸಕರೇ ಸರ್ಕಾರ ಹಾಗೂ ನಾಯಕರ ವಿರುದ್ಧ ತ

ಹೆಚ್.ಕೆ.ಮರಿಯಪ್ಪ ಬದುಕು, ಸಾಧನೆ ವಿದೇಶದಲ್ಲಿರುವ ಭಾರತೀಯರೆಲ್ಲರೂ ಅನುಸರಿಸಬೇಕು, ನಿ ನ್ಯಾ ಸಂತೋಷ್ ಹೆಗ್ಗಡೆ
ಚನ್ನಪಟ್ಟಣ: ಇತ್ತೀಚಿಗೆ ಬಹುತೇಕ ಮಂದಿ ತಾನುಂಟು ತಮ್ಮ ಪರಿವಾರ ಉಂಟು ಎಂಬ ಸ್ವಾರ್ಥವೇ ತುಂಬಿ ತುಳುಕುವ ಇವತ್ತಿನ ಸಮಾಜದಲ್ಲಿ ರಾಜಕೀಯ ಮುತ್ಸದ್ಧಿ ಹೆಚ್.ಕ

ಮನೆ ಕಳ್ಳತನವಾಗಿದೆ ಎಂದು ಪೊಲೀಸರಿಗೆ ಬಂದ ವಿಚಿತ್ರ ದೂರು.!
ಸಕ್ಕರೆನಾಡು ಮಂಡ್ಯದಲೊಂದು ವಿಚಿತ್ರ ದೂರು ಪ್ರಕರಣ.!!
ಬೆಲೆಬಾಳುವ ವಸ್ತುಗಳು ಕಳವು ಆಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡುವುದು ಸಹಜ.
ಆದರೆ ಇಲ್ಲೊಬ್ಬ ಮನೆ ಕಳವಾಗಿದ
ಪ್ರತಿಕ್ರಿಯೆಗಳು