ಮನೆ ಕಳ್ಳತನವಾಗಿದೆ ಎಂದು ಪೊಲೀಸರಿಗೆ ಬಂದ ವಿಚಿತ್ರ ದೂರು.!

ಸಕ್ಕರೆನಾಡು ಮಂಡ್ಯದಲೊಂದು ವಿಚಿತ್ರ ದೂರು ಪ್ರಕರಣ.!!
ಬೆಲೆಬಾಳುವ ವಸ್ತುಗಳು ಕಳವು ಆಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡುವುದು ಸಹಜ.
ಆದರೆ ಇಲ್ಲೊಬ್ಬ ಮನೆ ಕಳವಾಗಿದೆ ಹುಡುಕಿಕೊಡಿ ಎಂದು ಪೊಲೀಸರಿಗೆ ದೂರು ಕೊಟ್ಟ ಆಸಾಮಿ.
ಹಳೆ ಬೂದನೂರು ಗ್ರಾಮದಲ್ಲಿ ನನ್ನ ಮಾವನ ಮನೆ ಕಳುವಾಗಿದೆ ಎಂದು ದೂರು ನೀಡಿ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು, ಗ್ರಾಪಂ ಅಧಿಕಾರಿಗಳ ಜೊತೆಗೆ ಇದೀಗ ಪೋಲಿಸರನ್ನು ಪೇಚಿಗೆ ಸಿಲುಕಿಸಿದ್ದಾನೆ.
*ಸ್ವಂತಮನೆ ನಮ್ಮಹಕ್ಕು ಹೋರಾಟ ಸಮಿತಿ ಸಂಚಾಲಕ ಬಿ.ಕೆ.ಸತೀಶ್ ಎಂಬ ವ್ಯಕ್ತಿಯಿಂದ ಈ ವಿಚಿತ್ರ ದೂರು ದಾಖಲಾಗಿದೆ.*
ಎಸ್ಪಿ ಕಚೇರಿಯಲ್ಲಿ ಎಎಸ್.ಪಿ ತಿಮ್ಮಯ್ಯ ಅವರಿಗೆ ದೂರು ನೀಡಿದ ವ್ಯಕ್ತಿಯಾಗಿದ್ದಾನೆ.
*ಬೂದನೂರು ಗ್ರಾ.ಪಂ. ಖಾತೆ ಸಂಖ್ಯೆ 291/288 ರಲ್ಲಿ ಬಿ.ಟಿ.ಸಿದ್ದರಾಮಯ್ಯ ಬಿನ್ ತಮ್ಮೇಗೌಡ ಅವರ ಮನೆ ಇತ್ತು.*
ಆ ಜಾಗಕ್ಕೆ ಹೋಗಿ ನೋಡಿದಾಗ ಅಲ್ಲಿ ಮನೆ ಇರಲಿಲ್ಲ. ಖಾಲಿ ನಿವೇಶನ ಮಾತ್ರ ಇತ್ತು.
*ಗ್ರಾಮ ಪಂಚಾಯತಿಗೆ ತೆರಳಿ ವಿಚಾರಿಸಿ ದಾಖಲೆ ಕೇಳಿದಾಗ ಅದರಲ್ಲಿ ಮನೆ ಇದೆ ಎಂದು ದಾಖಲೆ ನೀಡಿದ್ದಾರೆ.*
ಮನೆ ಇಲ್ಲದ ಬಗ್ಗೆ ವಾಸ್ತವವಾಗಿ ಮನೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ರಸ್ತೆ ಅಗಲೀಕರಣಕ್ಕಾಗಿ ಮನೆ ತೆರವುಗೊಳಿಸಿದ್ದಾರೆ ಎಂದು ತಿಳಿಸಿದ್ದಾರೆ.
*ಈ ಮನೆಯನ್ನು ಮಕ್ಕಳಿಲ್ಲದೆ ಮಾವ ನನಗೆ ಉಡುಗೊರೆ ನೀಡುತ್ತೇನೆ ಎಂದಿದ್ದರು.*
ಇದೀಗ ಮಾವ ಅಮೆರಿಕಾಕ್ಕೆ ಹೋಗಿ ನೆಲೆಸಿದ್ದಾರೆ ದೂರವಾಣಿ ಸಂಪರ್ಕ ಸಿಗುತ್ತಿಲ್ಲ.
*ಗ್ರಾಮ ಪಂಚಾಯತಿ ಮನೆ ತೆರವುಗೊಳಿಸಿದ್ದರೂ ದಾಖಲೆ ಇಟ್ಟಿದ್ದಾರೆ.*
ಈ ಕುರಿತು ಮಾಹಿತಿ ಕೇಳಿದಾಗ ಇಲ್ಲ ಎಂದು ಮೌಖಿಕ ಮಾಹಿತಿ ನೀಡಿದ್ದಾರೆ.
*ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಭೂಸ್ವಾಧೀನ ಅಧಿಕಾರಿ ಹಾಗೂ ಗ್ರಾ.ಪಂ. ಪಿಡಿಓ ಈ ಕೃತ್ಯಕ್ಕೆ ಕಾರಣವಾಗಿದೆ.*
ಮನೆ ಕಳವು ಮಾಡಿರುವ ಬಗ್ಗೆ ಏನು ಕ್ರಮ ವಹಿಸಿದ್ದಾರೆ ಎಂಬ ಮಾಹಿತಿಗಾಗಿ ದೂರು ನೀಡಲಾಗಿದೆ.
*ತನಿಖೆ ನಡೆಸಿ ನಮಗೆ ನ್ಯಾಯಕೊಡಿಸಿ ಎಂದು ಸತೀಶ್ ರವರು ಪೋಲಿಸರಿಗೆ ಮನವಿ ಮಾಡಿರುವ ವ್ಯಕ್ತಿಯಾಗಿದ್ದಾರೆ.*
ಗೋ ರಾ ಶ್ರೀನಿವಾಸ...
ಮೊ:9845856139.
Recent news in karnataka »

ಹೆಚ್.ಕೆ.ಮರಿಯಪ್ಪ ಬದುಕು, ಸಾಧನೆ ವಿದೇಶದಲ್ಲಿರುವ ಭಾರತೀಯರೆಲ್ಲರೂ ಅನುಸರಿಸಬೇಕು, ನಿ ನ್ಯಾ ಸಂತೋಷ್ ಹೆಗ್ಗಡೆ
ಚನ್ನಪಟ್ಟಣ: ಇತ್ತೀಚಿಗೆ ಬಹುತೇಕ ಮಂದಿ ತಾನುಂಟು ತಮ್ಮ ಪರಿವಾರ ಉಂಟು ಎಂಬ ಸ್ವಾರ್ಥವೇ ತುಂಬಿ ತುಳುಕುವ ಇವತ್ತಿನ ಸಮಾಜದಲ್ಲಿ ರಾಜಕೀಯ ಮುತ್ಸದ್ಧಿ ಹೆಚ್.ಕ

ಮನೆ ಕಳ್ಳತನವಾಗಿದೆ ಎಂದು ಪೊಲೀಸರಿಗೆ ಬಂದ ವಿಚಿತ್ರ ದೂರು.!
ಸಕ್ಕರೆನಾಡು ಮಂಡ್ಯದಲೊಂದು ವಿಚಿತ್ರ ದೂರು ಪ್ರಕರಣ.!!
ಬೆಲೆಬಾಳುವ ವಸ್ತುಗಳು ಕಳವು ಆಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡುವುದು ಸಹಜ.
ಆದರೆ ಇಲ್ಲೊಬ್ಬ ಮನೆ ಕಳವಾಗಿದ

ಡೆಂಗ್ಯೂ ರೋಗದ ಅರಿವು ಕಾರ್ಯಕ್ರಮ
ಚನ್ನಪಟ್ಟಣ : ಲಯನ್ ಸಂಸ್ಥೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಭಾರತ್ ವಿಕಾಸ ಪರಿಷತ್ತು, ಭಾರತ ಸೇವಾದಳ ಹಾಗೂ ಬಾಲು ಪಬ್ಲಿಕ್ ಸ್ಕೂಲ್ ಸಹಯ

ಬೆಂಮೈ ಹೆದ್ದಾರಿಯ ರಾಮನಗರ ಬಳಿ ಮತ್ತೊಂದು ಅಪಘಾತ: ಕೆಎಸ್ಆರ್ಟಿಸಿ ಬಸ್ ನಿರ್ವಾಹಕ ಸಾವು
ನೂತನವಾಗಿ ನಿರ್ಮಾಣವಾಗಿರುವ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಇಂದು ಸಂಜೆ ಮತ್ತೊಂದು ಅಪಘಾತ ಸಂಭವಿಸಿದ್ದು, ಕೆಎಸ್ಆರ್ಟಿಸಿ ಎಲೆಕ್ಟ್ರಿಕಲ್ ಬಸ್ ನಿರ್ವಾಹಕ ಸಾವನಪ್ಪಿರುವ ದುರ್ಘಟನೆ ಜರುಗಿದೆ.
ಜೂ. 23ರಂದು ಡಾಕ್ ಅದಾಲತ್
ರಾಮನಗರ, ಜೂ. 17: ಚನ್ನಪಟ್ಟಣದ ಅಂಚೆ ಇಲಾಖೆ ವತಿಯಿಂದ ಜೂ. 23ರಂದು ಬೆಳಿಗ್ಗೆ 11 ಗಂಟೆಗೆ ಚನ್ನಪಟ್ಟಣದ ಅಂಚೆ ವಿಭಾಗೀಯ ಕಚೇರಿಯಲ್ಲಿ ಡ

ಬೆಂಮೈ ಹೆದ್ದಾರಿಯ ಕೋಲೂರು ಗೇಟ್ ಬಳಿ ಅಪಘಾತ ಇಬ್ಬರ ಸಾವು
ಚನ್ನಪಟ್ಟಣ: ಬೆಂಗಳೂರು- ಮೈಸೂರು ಎಕ್ಸ್ಪ್ರೆಸ್ ವೇನಲ್ಲಿ ಭಾನುವಾರ ಮಧ್ಯಾಹ್ನ ವೇಗವಾಗಿ ಹೋಗುತ್ತಿದ್ದ ಇಂಡಿಕಾ ಕಾರು ಚಾಲಕನ ನಿಯಂತ್ರಣ ತಪ್ಪಿದ್ದು, ಡಿ

ಗ್ರಾ,ಮ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆಗಳ ಎರಡನೇ ಅವಧಿಗೆ ಮೀಸಲಾತಿ ನಿಗಧಿ
ರಾಮನಗರ, ಜೂ. 09: ರಾಮನಗರ ತಾಲ್ಲೂಕು ಗ್ರಾಮ ಪಂಚಾಯಿತಿಗಳ ಸಾರ್ವತ್ರಿಕ ಚುನಾವಣೆ-2020ರ ಸಂಬಂಧ ಚುನಾವಣೆಯಲ್ಲಿ ಆಯ್ಕೆಯಾದ ಸದಸ್ಯರುಗಳಲ್ಲಿ, ಗ್ರಾಮ ಪಂಚಾ

ಸಂರಕ್ಷಿಸಲು ಯುವಜನತೆಗೆ ಕರೆ: ಬಿ.ಎಸ್ ಹೇಮಲತಾ
ಚನ್ನಪಟ್ಟಣ: ಜಾಗತಿಕ ಪ್ರಪಂಚದಲ್ಲಿ ವಿಜ್ಞಾನ, ತಂತ್ರಜ್ಞಾನ ಬೆಳವಣಿಗೆಯ ಜೊತೆಗೆ ನಮ್ಮನ್ನೆಲ್ಲಾ ಹೊತ್ತು ನಿಂತಿರುವ ವಸುಂಧರೆಯನ್ನು ಸಂರಕ್ಷಣೆ ಮಾಡುವುದು ನ

ತಾಯಿ ಮಡಿಲಿಗೆ ಮಗು ಸೇರಿಸಿದ ಶ್ರೀಮತಿ ರಜಿನಿರಾಜ್
ಮಂಡ್ಯ: ಕ್ಷುಲ್ಲಕ ಕಾರಣಕ್ಕೆ ಹಸುಗೂಸೊಂದನ್ನು, ತಾಯಿಯಿಂದ ಬೇರ್ಪಡಿಸಿ, ತಂದೆಯ ಮನೆಯಲ್ಲಿ ಇರಿಸಿಕೊಂಡಿದ್ದಾರೆ ಎಂಬ ತಾಯಿಯ ಮನವಿ ಮೇರೆಗೆ ಧ್ವನಿ ಮಹಿಳಾ ಅಧ್ಯಕ್ಷೆ ರಜನಿರಾಜ್ ರವರು ಕೆ ಎಂ ದೊಡ್ಡಿ ಪೋಲೀ

ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ, ಪದವಿ ಕಾಲೇಜಿನ ಪ್ರಾಂಶುಪಾಲ ಡಾ ವೆಂಕಟೇಶ್
ಚನ್ನಪಟ್ಟಣ: ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂದರಿತು ಪ್ರತಿ ವ್ಯಕ್ತಿಯೂ ಕೆಲಸ ಮಾಡಬೇಕು. ಪ್ರಕೃತಿ ಮುನಿದರೆ ವಿಶ್ವವೇ ವಿನಾಶವಾಗುತ್ತದೆ ಎಂದು ನಗರದ
ಪ್ರತಿಕ್ರಿಯೆಗಳು