Tel: 7676775624 | Mail: info@yellowandred.in

Language: EN KAN

    Follow us :


ಮಗಳ ಹುಟ್ಟು ಹಬ್ಬದಲ್ಲಿ ಮತದಾನ ಮಹತ್ವ ಕುರಿತು ಜಾಗೃತಿ
ಮಗಳ ಹುಟ್ಟು ಹಬ್ಬದಲ್ಲಿ ಮತದಾನ ಮಹತ್ವ ಕುರಿತು ಜಾಗೃತಿ

ಹುಟ್ಟುಹಬ್ಬವನ್ನು ಪಾರ್ಟಿ ನೀಡುವ ಮೂಲಕ ಇಲ್ಲವೇ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸುವ ಮೂಲಕ ಆಚರಿಸುವುದು ವಾಡಿಕೆ. ಆದರೆ ರಾಮನಗರ ನಿವಾಸಿ ಎಸ್.ರುದ್ರೇಶ್ವರ ಹಾಗೂ ಡಿ.ಆರ್.ನೀಲಾಂಬಿಕಾ ದಂಪತಿ ತಮ್ಮ ಪುತ್ರಿ ಆರ್.ಯಶಿಕಾ 2ನೇ ಹುಟ್ಟುಹಬ್ಬವನ್ನು ಗುರುವಾರ ನೈತಿಕ ಮತದಾನ ಮಾಡುವಂತೆ ಕರಪತ್ರ ಹಂಚಿ ವಿನೂತನವಾಗಿ ಆಚರಿಸಿದರು.  ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಉಪಾಧ್ಯಕ್ಷೆ ಅನಸೂಯಮ್ಮ ಮಾತನಾಡಿ, ಸಾಹಿತಿ ರುದ್ರೇಶ್ ಮಗಳ ಹುಟ್ಟುಹಬ್ಬವನ್ನು

ಅಬಕಾರಿ ಅಧಿಕಾರಿಗಳೇ ಇಂದಿನ ಕಾನೂನು ಎಂದೆಂದೂ ಯಾಕಿಲ್ಲ ?
ಅಬಕಾರಿ ಅಧಿಕಾರಿಗಳೇ ಇಂದಿನ ಕಾನೂನು ಎಂದೆಂದೂ ಯಾಕಿಲ್ಲ ?

ಬೆಂಗಳೂರು ಮೈಸೂರು ಹೆದ್ದಾರಿ ನಡುವಿನ ಚನ್ನಪಟ್ಟಣ ಭಾಗವಾದ ಜಾನಪದ ಲೋಕದಿಂದ ಕೋಲೂರು ಗೇಟ್ ತನಕ ಅನೇಕ ತರಹೇವಾರಿ ಮಾಂಸದ ಹೋಟೆಲ್ ಗಳು ಢಾಭಾಗಳು ತೋಟದ ಹೋಟೆಲ್ ಗಳು ತಲೆ ಎತ್ತಿ ನಿಂತಿವೆ.   ಫ್ಯಾಮಿಲಿ ಹೋಟೆಲ್ ಎಂದು ಬೋಡ್೯ ನೇತು ಹಾಕಿಕೊಂಡಿದ್ದರೂ ಸಹ ಕುಟುಂಬ ಸಮೇತ ಹೋಗಿ ಊಟ ಮಾಡಲು ಆಗದಷ್ಟು ಮದ್ಯಪ್ರಿಯರು ಪ್ರತಿ ಟೇಬಲ್ ನಲ್ಲಿಯೂ ಎದುರಾಗುವುದರಿಂದ ಫ್ಯಾಮಿಲಿಗಳು ಹೆಚ್ಚು ಶುಲ್ಕದ ದೊಡ್ಡ ಹೋಟೆಲ್ ಗಳು ಅಥವಾ ಸಸ್ಯಹಾರಿ ಹೋಟೆಲ್ ಗಳಿಗೆ ಹೋಗುವಂತಾಗಿದೆ.

ಚನ್ನಪಟ್ಟಣದಲ್ಲಿ ತ್ರಿಕೋನ ಸ್ಪರ್ಧೆ, ಯಾರಿಗೆ ವಿಜಯದ ಮಾಲೆ ?
ಚನ್ನಪಟ್ಟಣದಲ್ಲಿ ತ್ರಿಕೋನ ಸ್ಪರ್ಧೆ, ಯಾರಿಗೆ ವಿಜಯದ ಮಾಲೆ ?

ಕಾಂಗ್ರೆಸ್ ಪಕ್ಷವು ಹಿರಿಯ ಮುಖಂಡ ಹೆಚ್ ಎಂ ರೇವಣ್ಣನವರನ್ನು ಕ್ಷೇತ್ರಕ್ಕೆ ವಲಸೆ ಕಳುಹಿಸುವ ಮೂಲಕ ಚನ್ನಪಟ್ಟಣದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡಲು ಕಾರಣವಾಗಿದೆ. ಬಿಜೆಪಿಯ ಯೋಗೇಶ್ವರ್ ನೀರಿನ ಅಭಿವೃದ್ಧಿ ಎಂದು ಮತ ಕೇಳುತಿದ್ದರೆ, ಹೆಚ್ ಡಿ ಕುಮಾರಸ್ವಾಮಿ ಇಪ್ಪತ್ತು ತಿಂಗಳ ನನ್ನ ಆಡಳಿತ ಹಾಗೂ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಕೇಳುತಿದ್ದಾರೆ, ಇವರಿಬ್ಬರ ನಡುವೆ ಇದ್ದಾ ಜಿದ್ದಾಜಿದ್ದಿಯ ಮತಗಳನ್ನು ಹಾಗೂ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮತಗಳನ್ನು ಗಟ್ಟಿ ಮಾಡಿಕೊಳ್ಳಲು ಹೆಚ್

" ಕನಸುಗಳಿಗೊಂದು ರೆಕ್ಕೆ" ಯಾ ೨ ನೇ ಆವೃತ್ತಿಯ ಬೇಸಿಗೆ ಕಲಿಕಾ ಶಿಬಿರದ ಉದ್ಘಾಟನಾ ಸಮಾರಂಭ

ಸಾರ್ವಜನಿಕ ಶಿಕ್ಷಣ ಇಲಾಖೆ, ರಾಮನಗರ ಮತ್ತು  ಬಾಷ್ ಲಿಮಿಟೆಡ್ ಇವರ ಸಹಯೋಗದೊಂದಿಗೆ ಬಾಷ್ ಇಂಡಿಯಾ ಪ್ರತಿಷ್ಠಾನ, ಯೆಲ್ಲೊ ಆಂಡ್ ರೆಡ್ ಫೌಂಡೇಷನ್ಸ್, ಅಗಸ್ತ್ಯ ಫೌಂಡೇಷನ್ ಶ್ಯಾನುಮಂಗಲ ಮತ್ತು ಜೋಡಿಕರೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಗಳ ಸಂಯುಕ್ತ ಆಶ್ರಯದಲ್ಲಿ  " ಕನಸುಗಳಿಗೊಂದು ರೆಕ್ಕೆ" ಯಾ ೨ ನೇ ಆವೃತ್ತಿಯ  ಬೇಸಿಗೆ ಕಲಿಕಾ ಶಿಬಿರವನ್ನು ಶ್ಯಾನುಮಂಗಲ ಹಾಗೂ ಜೋಡಿಕರೇನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಹಿರಿಯ ಸಂಗೀ

ಮಾದರಿ ಜೀವನ ನಡೆಸಿದ ಹುಣಸನಹಳ್ಳಿ ಸಹೋದರರು
ಮಾದರಿ ಜೀವನ ನಡೆಸಿದ ಹುಣಸನಹಳ್ಳಿ ಸಹೋದರರು

        ಅಂದಿನ ಬೆಂಗಳೂರು ಗ್ರಾಮಾಂತರ ಜಿಲ್ಲೆಯಾಗಿದ್ದ ಇಂದಿನ ರಾಮನಗರದಲ್ಲಿ ಜೆಡಿಎಸ್ ಪಕ್ಷ ಗಟ್ಟಿಯಾಗಿ ಬೆರೂರಲು ಕಾರಣರಾದವರು ಕೈಲಾಂಚ ಹೋಬಳಿ ಹುಣಸನಹಳ್ಳಿ ಗ್ರಾಮದ ಮಾರೇಗೌಡ ಕುಟುಂಬದವರು.      ಹುಣಸನಹಳ್ಳಿಯ ಮಾರೇಗೌಡರು ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವದ ಪೆರೇಡ್‌ಗೆ ರಾಮನಗರದಿಂದ ಪೂಜಾ ಕುಣಿತ ತಂಡವನ್ನು ಕರೆದುಕೊಂಡು ಹೋಗಿದ್ದರು. ಈ ಭಾಗದ ಸುತ್ತಮುತ್ತಲಿನ ಹಳ್ಳಿಗಳ ಜನರಿಗೆ ನ್ಯಾಯ, ಪಂಚಾಯಿತಿಯ ಮೂಲಕ ನ್ಯಾಯವ

ಐತಿಹಾಸಿಕ ರಾಮನಗರ ಕರಗಕ್ಕೆ ನೂರು ದಿನ ಬಾಕಿ
ಐತಿಹಾಸಿಕ ರಾಮನಗರ ಕರಗಕ್ಕೆ ನೂರು ದಿನ ಬಾಕಿ

ರಾಮನಗರದಲ್ಲಿ ನೆಡೆಯುವ ಹಬ್ಬಗಳಲ್ಲಿ ಕರಗದ ಹಬ್ಬವು ಅತ್ಯಂತ ಪ್ರಮುಖವಾದುದು. ಅಷಾಡ ಮಾಸದಲ್ಲಿ ನೆಡೆಯುವ ಈ ಕರಗ ಶಕ್ತ್ಯೋತ್ಸವಕ್ಕೆ ಇಂದಿನಿಂದ ನೂರು ದಿನಗಳಷ್ಟೇ ಬಾಕಿ ಉಳಿದಿದ್ದು, ಕರಗ ಶಕ್ತ್ಯೋತ್ಸವಕ್ಕೆ ಸಕಲ ಸಿದ್ದತೆಗಳು ಸದ್ದಿಲ್ಲದೇ ನೆಡೆಯುತ್ತಿವೆ.  ರಾಮನಗರ ಕರಗ ಎಂಬ ಪುಟದ ಮುಖಾಂತರ ಕರಗೋತ್ಸವದ ದಿನಾಂಕಗಳನ್ನು ಇಂದು ಬಿಡುಗಡೆ ಮಾಡಿದ್ದು. ಜುಲೈ ತಿಂಗಳ ಮಧ್ಯದಲ್ಲಿ ಕರಗದ ಸಂಭ್ರಮವು ಪ್ರಾರಂಭವಾಗಲಿದ್ದು ಜುಲೈ ತಿಂಗಳ ಹದಿನೇಳನೇ ತಾರೀಖಿನಂದು ನಗರ ದೇವತೆ

ಕಾವೇರಿ ನಿರ್ವಹಣಾ ಮಂಡಳಿ ರಚನೆಯಾದರೆ ಕರ್ನಾಟಕಕ್ಕೆ ಉಳಿಗಾಲವಿಲ್ಲ : ದೇವೇಗೌಡ ಎಚ್ಚರಿಕೆ
ಕಾವೇರಿ ನಿರ್ವಹಣಾ ಮಂಡಳಿ ರಚನೆಯಾದರೆ ಕರ್ನಾಟಕಕ್ಕೆ ಉಳಿಗಾಲವಿಲ್ಲ : ದೇವೇಗೌಡ ಎಚ್ಚರಿಕೆ

ರಾಮನಗರ: ಕಾವೇರಿ ನಿರ್ವಹಣಾ ಮಂಡಳಿ ರಚನೆಗಾಗಿ ಇಡೀ ತಮಿಳುನಾಡು ಒಂದಾಗಿದ್ದು, ಮಂಡಳಿ ರಚನೆಯಾದರೆ ರಾಜ್ಯಕ್ಕೆ ಉಳಿಗಾಲವಿಲ್ಲ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವರಿಕೆ ಮಾಡಿಕೊಡುವ ಕೆಲಸ ಆಗಬೇಕು ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ, ಮಾಜಿ ಪ್ರಧಾನಮಂತ್ರಿ ಎಚ್.ಡಿ.ದೇವೇಗೌಡ ಪ್ರತಿಪಾದಿಸಿದರು. ಜೂನಿಯರ್ ಕಾಲೇಜು ಮೈದಾನದಲ್ಲಿ ಗುರುವಾರ ಆಯೋಜಿಸಿದ್ದ ವಿವಿಧ ಮುಖಂಡರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾವೇರಿ ನೀರು ಹಂಚಿಕೆ ಕುರಿತ

ಗೌಡರ ಕುಟುಂಬಕ್ಕೆ ಕೈ ಇಟ್ಟ ಯೋಗೇಶ್ವರ್
ಗೌಡರ ಕುಟುಂಬಕ್ಕೆ ಕೈ ಇಟ್ಟ ಯೋಗೇಶ್ವರ್

ಗೌಡರ ಕುಟುಂಬಕ್ಕೆ ಕೈ ಇಟ್ಟ ಯೋಗೇಶ್ವರ್: ರೇವಣ್ಣಗೆ ಕರೆಮಾಡಿ ಅನಿತಾ ಕೆಂಗಣ್ಣಿಗೆ ಗುರಿಯಾದ ಪ್ರಭಾವಿ ಚನ್ನಪಟ್ಟಣದ ಮುಖಂಡ ಯಾರು? ರಾಜ್ಯದ ಏಕೈಕ ಪ್ರಾದೇಶಿಕ ಪಕ್ಷದೊಡ್ಡಗೌಡರ ಜೆಡಿಎಸ್ ಎನ್ನುವುದುಸಾರ್ವಜನಿಕ ಸತ್ಯ, ಈ ಪಕ್ಷದ ಕಿಂಗ್ ಪಿನ್ ಎನಿಸಿದ  ದೊಡ್ಡಗೌಡರ ಕುಟುಂಬದಲ್ಲಿ ಚನ್ನಪಟ್ಟಣ ರಾಜಕಾರಣ ಬೆಳವಣಿಗೆ ತಲ್ಲಣ ಮೂಡಿಸಿದೆಯಾ..? ಹೌದು ಎನ್ನುತ್ತಿದೆ ಉನ್ನತ ಮೂಲಗಳ ಮಾಹಿತಿ. ತನ್ನ ಮಗನನ್ನು ಶಾಸಕ ಮಾಡಬೇಕು ಎಂಬ ಹೆಬ್ಬಯಕೆಯೊಂದಿಗೆ ತಯಾ

ಹಾರೊಹಳ್ಳಿ ಮರಳವಾಡಿಯಲ್ಲಿ ಅನಿತಾಕುಮಾರಸ್ವಾಮಿ ಪ್ರಚಾರ
ಹಾರೊಹಳ್ಳಿ ಮರಳವಾಡಿಯಲ್ಲಿ ಅನಿತಾಕುಮಾರಸ್ವಾಮಿ ಪ್ರಚಾರ

ಕನಕಪುರ: ಕಾಂಗ್ರೆಸ್ ನೇತೃತ್ವದ ಸಿದ್ದರಾಮಯ್ಯನವರ ಸರಕಾರದಿಂದ ರಾಜ್ಯದ ಜನರ ಹಿತಕಾಯಲು ಸಾಧ್ಯವಿಲ್ಲದ ಕಾರಣ ಮುಂದೆ ರಾಜ್ಯದ ರೈತರ ಹಾಗು ಜನಪರ ಅಭಿವೃದ್ಧಿಗಾಗಿ ಜಾತ್ಯಾತೀತ ಜನತಾದಳವನ್ನು ಬೆಂಬಲಿಸಬೇಕೆಂದು ಅನಿತಾ ಕುಮಾರಸ್ವಾಮಿ ತಿಳಿಸಿದರು. ರಾಮನಗರ ವಿಧಾನಸಭಾ ಕ್ಷೇತ್ರದ ಹಾರೋಹಳ್ಳಿ-ಮರಳವಾಡಿ ಹೋಬಳಿಯಲ್ಲಿ ಜೆಡಿಎಸ್ ಪಕ್ಷದ ಕಾರ್ಯಕರ್ತ ಮುಖಂಡರ ಸಭೆಯ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ಕಾಂಗ್ರೆಸ್ ಸರಕಾರವು ರಾಜ್ಯಕ್ಕೆ ಹಿಂದಿನಿಂದಲೂ ಅನ್ಯಾಯ ಮಾಡಿಕೊಂಡು ಬಂದಿದೆ. ಇದ

ಆಧುನಿಕ ಕರ್ನಾಟಕವನ್ನು ರೂಪಿಸಿದ ಹಿರಿಯರಲ್ಲೊಬ್ಬರಾದ ಡಾ.ಎಚ್.ಎಸ್. ದೊರೆಸ್ವಾಮಿ ಅವರಿಗೆ 100 ವರ್ಷ
ಆಧುನಿಕ ಕರ್ನಾಟಕವನ್ನು ರೂಪಿಸಿದ ಹಿರಿಯರಲ್ಲೊಬ್ಬರಾದ ಡಾ.ಎಚ್.ಎಸ್. ದೊರೆಸ್ವಾಮಿ ಅವರಿಗೆ 100 ವರ್ಷ

ಮಹಾತ್ಮ ಗಾಂಧೀಜಿ ಅವರ ಕೊನೆಯ ಕೊಂಡಿಯಂತೆ ಜೀವನ ನಡೆಸುತ್ತಿರುವ ಹರೆಯದ ಡಾ.ಎಚ್.ಎಸ್. ದೊರೆಸ್ವಾಮಿ. ಹಿರಿಯ ಸ್ವಾತಂತ್ರ್ಯ ಹೋರಾಟಗಾರಾದ ಇವರು ರಾಮನಗರ ಜಿಲ್ಲೆಯವರು ಎಂದು ಹಲವರಿಗೆ ತಿಳಿದಿಲ್ಲ.     ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನ ಹಾರೋಹಳ್ಳಿಯಲ್ಲಿ 1918 ಏಪ್ರಿಲ್ 10ರಂದು ಇವರು ಜನಿಸಿದರು. ಐದನೆ ವಯಸ್ಸಿನಲ್ಲಿಯೆ ತಂದೆ ಶ್ರೀನಿವಾಸಯ್ಯ ಅಯ್ಯರ್ ಅವರನ್ನು ಕಳೆದುಕೊಂಡ ಇವರು, ಪ್ರಾಥಮಿಕ ವಿದ್ಯಾಭ್ಯಾಸವನ್ನು ಹಾರೋಹಳ್ಳಿಯಲ್ಲಿ ಮುಗಿಸಿ, ತದನಂತರ ಹೆಚ

Top Stories »  



Top ↑